Headlines

ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ – Kannada News | Landlord movie actor Vijay Kumar aka Duniya Vijay marched with Bangalore University students

ದುನಿಯಾ ವಿಜಯ್ (Duniya Vijay), ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ, ಶಿಶಿರ್ ಬೈಕಾಡಿ ಮುಂತಾದವರು ನಟಿಸಿರುವ ‘ಲ್ಯಾಂಡ್​ಲಾರ್ಡ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿದೆ. ಈ ಸಿನಿಮಾಗೆ ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡಿದ್ದಾರೆ.ಈ ಸಿನಿಮಾದಲ್ಲಿನ ಕಲಾವಿದರ ನಟನೆ, ಕಥೆ, ಚಿತ್ರದ ಆಶಯವನ್ನು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಈ ಪ್ರಯುಕ್ತ ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾ ತಂಡದವರು ಇಂದು (ಜನವರಿ 28) ಮಧ್ಯಾಹ್ನ 1.45ಕ್ಕೆ ವಿದ್ಯಾರ್ಥಿಗಳ ಜೊತೆ ಜಾಥಾ ನಡೆಸಿದರು. ‘ಲ್ಯಾಂಡ್​ಲಾರ್ಡ್’ ಸಿನಿಮಾ…

Read More

ಫೆಬ್ರವರಿಯಲ್ಲಿ ನಡೆಯಲಿದೆ ಅಪರೂಪದ ಗ್ರಹ ಯೋಗ: ಈ ರಾಶಿಗೆ ಅದೃಷ್ಟವೋ ಅದೃಷ್ಟ – Kannada News | February 2026 Astrology: Pancha Graha Yoga and Guru’s Influence on Your Rashi

ಫೆಬ್ರವರಿ- 2026 ರಲ್ಲಿ ಪಂಚ ಗ್ರಹರ ಯೋಗವಾಗಲಿದೆ. ಅಪರೂಪದ ಈ ವಿಸ್ಮಯಕ್ಕೆ ಫೆಬ್ರವರಿ ತಿಂಗಳ ಸಾಕ್ಷಿಯಗಲಿದೆ. ಅನೇಕ ಬದಲಾವಣೆಗೂ ಇದು ಕಾರಣವಾಗಲಿದೆ. ವಿಶೇಷವೆಂದರೆ ಈ ಐದೂ ಗ್ರಹಗಳ ಮೇಲೆ ಗುರುವಿನ ಪ್ರಭಾವ ಇಲಿದ್ದು, ಸಂಕಟ ಎದುರಾದರೆ ಮಹಾವಿಷ್ಣುವನ್ನೂ ಗುರುವನ್ನು ದರ್ಶಿಸುವುದು, ಅನುಗ್ರಹ ಪಡೆಯುವುದು ಅಥವಾ ಗುರುಚರಿತೆಯನ್ನು ಪಠಿಸುವುದು ಅಥವಾ ಆಲಿಸಿ. ಮೇಷ ರಾಶಿ : ಆರ್ಥಿಕವಾಗಿ ಈ ತಿಂಗಳು ನಿಮಗೆ ಅತ್ಯಂತ ಲಾಭದಾಯಕವಾಗಿದೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಬರಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ಆದರೆ,…

Read More

ಇಶಾ ಫೌಂಡೇಶನ್​ ಸ್ಮಶಾನ ನಿರ್ಮಿಸುವುದರ ವಿರುದ್ಧ ಹೈಕೋರ್ಟ್​​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ – Kannada News | Madras High Court Dismisses Plea Against Construction Of Gasifier Crematorium By Isha Foundation

ಚೆನ್ನೈ, ಜನವರಿ 28: ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ (Isha Foundation) ನಿರ್ಮಿಸುತ್ತಿರುವ ಗ್ಯಾಸ್ ಆಧಾರಿತ ಸ್ಮಶಾನದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಆ ಸ್ಮಶಾನವು ಸಾಮಾಜಿಕ ಕಲ್ಯಾಣಕ್ಕೆ ಸೇವೆ ಸಲ್ಲಿಸುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇಶಾ ಫೌಂಡೇಶನ್ ಸ್ಮಶಾನ ನಿರ್ಮಾಣ ಮಾಡುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇಶಾ ಫೌಂಡೇಶನ್​ನಿಂದ ಕಾಲಭೈರವ ಧಗನ ಮಂಟಪದ ನಿರ್ಮಾಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್…

Read More

ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್​ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ – Kannada News | Union Budget 2026, labour intensive sector to get boost

ನವದೆಹಲಿ, ಜನವರಿ 28: ಈ ಬಾರಿಯ ಬಜೆಟ್​ನಲ್ಲಿ (Union Budget) ಮ್ಯಾನುಫ್ಯಾಕ್ಚರಿಂಗ್ ಎಕನಾಮಿ ಸುದೃಢಗೊಳಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ. ಉದ್ಯೋಗ ಸೃಷ್ಟಿ ಹೆಚ್ಚು ಆಗುವಂತೆ ಕ್ರಮಗಳನ್ನು ಕೈಗೊಳ್ಳಬಹುದು. ಕಾರ್ಮಿಕರ ಕೆಲಸ ಬೇಕಿರುವ ಉದ್ಯಮಗಳಿಗೆ ಉತ್ತೇಜನ ನೀಡಲು ಬಜೆಟ್​ನಲ್ಲಿ ಒತ್ತು ನೀಡುವ ನಿರೀಕ್ಷೆ ಇದೆ. ಜವಳಿ, ಲೆದರ್, ಆಭರಣ, ಕರಕುಶಲ ಸೆಕ್ಟರ್​ಗಳಿಗೆ ನೆರವು ಸಿಗಬಹುದು. ಈ ವಲಯದ ಮಧ್ಯಮ ಗಾತ್ರದ ಉದ್ದಿಮೆಗಳ ಪ್ರಬಲ ಸಮೂಹವನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ. ಆ ನಿಟ್ಟಿನಲ್ಲಿ ಬಜೆಟ್​ನಲ್ಲಿ ಕ್ರಮ ಕೈಗೊಳ್ಳಬಹುದು. ಎಂಎಸ್​ಎಂಇಗಳಿಗೆ ಇನ್ನಷ್ಟು…

Read More

ಅಜಿತ್ ಪವಾರ್​​​ ಸಾವಿಗೆ ಈ ಯೋಗ ಕಾರಣ?: ಯಾವ ಕಾರಣಕ್ಕೂ ಈ ಸಮಯದಲ್ಲಿ ವಿಮಾನ ಪ್ರಯಾಣ ಮಾಡಬೇಡಿ – Kannada News | Baramati Air Accident: Ajit Pawar, Viral Prophecy, and Scientific Findings

ಬಾರಾಮತಿಯಲ್ಲಿ ಅಜಿತ್ ಪವಾರ್ ಅವರ ವಿಮಾನ ಪತನಗೊಂಡಿರುವುದು ಕಾಕತಾಳೀಯವೋ ಅಥವಾ ಭವಿಷ್ಯವಾಣಿಯೋ ಎಂಬ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದೀಗ ಜ್ಯೋತಿಷ್ಯರೊಬ್ಬರು ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮೊದಲು ನಾವು ಸುದ್ದಿಯ ನಿಖರತೆಯನ್ನು ಗಮನಿಸೋಣ, ನಂತರ ಜ್ಯೋತಿಷ್ಯದ ಹಿಂದಿನ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳೋಣ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿರುವುದು ಸತ್ಯವಾದ ಮತ್ತು ಅತ್ಯಂತ ದುರದೃಷ್ಟಕರ ಸಂಗತಿ. ಈ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ….

Read More

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ – Kannada News | Bangladesh Women Qualify for 2026 T20 World Cup

ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು (Bangladesh Women’s Cricket) 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ (T20 World Cup 2026) ಅರ್ಹತೆ ಪಡೆದಿದೆ. ನೇಪಾಳದ ಮುಲ್ಪಾನಿ ​​ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್-ಸಿಕ್ಸ್ ಹಂತದ ಪಂದ್ಯದಲ್ಲಿ ಥೈಲ್ಯಾಂಡ್ ಮಹಿಳಾ ತಂಡವನ್ನು 39 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾದೇಶ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಂದೇ ಒಂದು ಪಂದ್ಯವನ್ನು ಸೋಲದೆ 2026 ರ ಟಿ20 ವಿಶ್ವಕಪ್‌ಗೆ…

Read More

‘ಬಾರ್ಡರ್ 2’ ಸಿನಿಮಾ ಯಶಸ್ಸು: ‘ಬಾರ್ಡರ್ 3’ ಬರೋದು ಖಚಿತ – Kannada News | Border 2 makers ready to do another sequel after box office success

‘ಬಾರ್ಡರ್’ ಸಿನಿಮಾ 1997ರಲ್ಲಿ ಬಿಡುಗಡೆ ಆಗಿತ್ತು. ಸುಮಾರು 3 ದಶಕದ ಬಳಿಕ ಆ ಸಿನಿಮಾಗೆ ಸೀಕ್ವೆಲ್ ಬಂತು. ‘ಬಾರ್ಡರ್ 2’ (Border 2) ಸಿನಿಮಾ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಯಶಸ್ಸಿನಿಂದ ನಿರ್ಮಾಪಕರಿಗೆ ಖುಷಿ ಆಗಿದೆ. ಹಾಗಾಗಿ ‘ಬಾರ್ಡರ್ 3’ ಮಾಡಲು ನಿರ್ಧರಿಸಲಾಗಿದೆ. ಈ ಸುದ್ದಿ ಕೇಳಿ ಪ್ರೇಕ್ಷಕರಿಗೆ ಖುಷಿ ಆಗಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ‘ಬಾರ್ಡರ್…

Read More

ರಾಜ್ಯಪಾಲರ ಫೋನ್ ಕದ್ದಾಲಿಕೆ: ಬಿಜೆಪಿ ಸದಸ್ಯರಿಂದ ಗಂಭೀರ ಆರೋಪ, ಸದನದಲ್ಲಿ ಚರ್ಚೆ ಜೋರು – Kannada News | Karnataka Assembly Session Discussion on phone tapping: BJP MLAs sprks out on hk patil statement

ಬೆಂಗಳೂರು, ಜನವರಿ 28: ರಾಜ್ಯಪಾಲರಿಗೆ ಕೇಶವ ಕೃಪಾದಿಂದ ಫೋನ್ ಬರುತ್ತೆ ಎಂಬ ಕಾನೂನು ಸಚಿವ ಹೆಚ್​.ಕೆ ಪಾಟೀಲ್​​​ ಹೇಳಿಕೆ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿಂದು (Assembly Session) ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆರ್​ಎಸ್​ಎಸ್ ಕಚೇರಿಯ ಫೋನ್ ಟ್ಯಾಪಿಂಗ್ (phone tapping) ಮಾಡ್ತಿದ್ದೀರಿ. ರಾಜ್ಯಪಾಲರ ಕಚೇರಿಯ ಫೋನ್ ಟ್ಯಾಪಿಂಗ್ ಪ್ರೂವ್ ಮಾಡಿದ್ದಾರೆ. ಹಾಗಾದರೆ ಇದು ಫೋನ್ ಟ್ಯಾಪಿಂಗ್ ಸರ್ಕಾರನಾ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ ವಾಗ್ದಾಳಿ ನಡೆಸಿದರು. ಅಲ್ಲದೇ ಹೆಚ್​​ಕೆ…

Read More

‘ಲೂಸಿಯ’ದಲ್ಲಿ ನಾಯಕನಾಗಿ ನಟಿಸಬೇಕಿತ್ತು ‘ಕುಲಶೇಖರ’ ಕೈತಪ್ಪಿದ್ದು ಹೇಗೆ? – Kannada News | Gulshan Devaiah said he was supposed to act in Lucia Kannada movie

‘ಲೂಸಿಯ’ (Lucia) ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾ. ಹಲವು ಹೊಸಬರಿಗೆ ತಮ್ಮದೇ ಸಿನಿಮಾ ಮಾಡಲು ಪ್ರೇರಣೆ ನೀಡಿದ ಸಿನಿಮಾ ಇದು. ಕನ್ನಡ ಪ್ರೇಕ್ಷಕರು ಹೊಸ ಮಾದರಿಯ ಸಿನಿಮಾಗಳನ್ನು ನೋಡುತ್ತಾರೆ, ನೋಡಿ ಮೆಚ್ಚುತ್ತಾರೆ ಎಂಬುದನ್ನು ತೋರಿಸಿದ ಸಿನಿಮಾ ಅದು. ನೀನಾಸಂ ಸತೀಶ್ ಸೇರಿದಂತೆ ಹಲವು ಪ್ರತಿಭಾವಂತ ನಟ, ನಟಿ ಹಾಗೂ ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಅದು. ಹಲವರಿಗೆ ಜೀವನ ಕೊಟ್ಟ ಸಿನಿಮಾ ಅದು. ಆದರೆ ಆ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಬೇಕಿದ್ದಿದ್ದು ನೀನಾಸಂ ಸತೀಶ್ ಅಲ್ಲ, ಬದಲಿಗೆ…

Read More

Important Days in February 2026: ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ – Kannada News | Important Days in February 2026: Here is the list of national and international days celebrated in the month of February

ವರ್ಷದ ಎರಡನೇ ತಿಂಗಳಾದ ಫೆಬ್ರವರಿಗೆ (February) ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿದೆ. ಅಧಿಕ ವರ್ಷದಲ್ಲಿ 29 ದಿನಗಳು ಹಾಗೂ ಸಾಮಾನ್ಯ ವರ್ಷಗಳಲ್ಲಿ 28 ದಿನಗಳನ್ನು ಹೊಂದಿರುವ ಈ ವಿಶೇಷ ತಿಂಗಳಿನಲ್ಲಿಯೂ ಒಂದಷ್ಟು ಪ್ರಮುಖ ಘಟನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್‌ ದಿನದಿಂದ ಹಿಡಿದು ಪ್ರೇಮಿಗಳ ದಿನದ ವರೆಗೆ ಫೆಬ್ರವರಿ ತಿಂಗಳಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದ ಸಂಪೂರ್ಣ ಮಾಹಿತಿ ಇಲ್ಲಿದೆ.  ಫೆಬ್ರವರಿ…

Read More