IPL 2026: ಕನ್ನಡಿಗನ ಪಾಲಾದ ‘ಬೆಸ್ಟ್ ಕ್ಯಾಚ್’ ಪ್ರಶಸ್ತಿ
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಕನ್ನಡಿಗ ಮನೀಶ್ ಪಾಂಡೆ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ನ 57ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು. ಆರ್ಸಿಬಿ ಇನಿಂಗ್ಸ್ನ 18ನೇ ಓವರ್ನಲ್ಲಿ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಎಸೆತವನ್ನು ಟಿಮ್ ಡೇವಿಡ್ ಆಫ್-ಸ್ಟಂಪ್ನಿಂದ ಹೊರಗೆ ಬಲವಾಗಿ ಕಟ್ ಮಾಡಿದರು. ಬ್ಯಾಟ್ನಿಂದ ಸಿಡಿದ ಚೆಂಡು ಅತಿ ವೇಗವಾಗಿ ಬ್ಯಾಕ್ವರ್ಡ್ ಪಾಯಿಂಟ್ ಕಡೆಗೆ ರಾಕೆಟ್ನಂತೆ ನುಗ್ಗಿತು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ 36 ವರ್ಷದ ಮನೀಶ್…