Headlines

ಪ್ರತಿದಿನ ಎಷ್ಟು ಹಾಲು ಕುಡೀತಿಯಾ? ವೈಭವ್ ಸೂರ್ಯವಂಶಿ ಉತ್ತರ ಹೀಗಿತ್ತು!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಸಂಚಲನ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ ಈ ಬಾರಿ ಬರೋಬ್ಬರಿ 5 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್​ನ ರನ್ ಸರದಾರನಾಗಿ ಹೊರಹೊಮ್ಮಿದ ವೈಭವ್ 15ನೇ ವಯಸ್ಸಿನಲ್ಲೇ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಐಪಿಎಲ್ ಸೀಸನ್-19ರ ಅತ್ಯಂತ ಮೌಲ್ಯಯುತ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ರವಿಶಾಸ್ತ್ರಿ ನಡೆಸಿದ ಚಿಟ್ ಚಾಟ್​ನಲ್ಲಿ ಮಾತನಾಡಿದ ವೈಭವ್ ಸೂರ್ಯವಂಶಿ, “ಇಷ್ಟೊಂದು ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಹೆಮ್ಮೆ ಅನಿಸುತ್ತಿದೆ….

Read More

ಡ್ಯಾನ್ಸ್ ಕೊಹ್ಲಿ ಡ್ಯಾನ್ಸ್​: RCB ಪಾರ್ಟಿ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುತ್ತಿದ್ದಂತೆ, ಇಡೀ ದೇಶಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ಅಹಮದಾಬಾದ್‌ನಲ್ಲಿ ನಡೆದ ಆರ್‌ಸಿಬಿ ತಂಡದ ಪಾರ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ಹಂಚಿಕೊಂಡಿರುವ ವಿಶೇಷ ವಿಡಿಯೋದಲ್ಲಿ, ವಿರಾಟ್ ಕೊಹ್ಲಿ ತಮ್ಮ ಎಂದಿನ ಎನರ್ಜಿಟಿಕ್ ಶೈಲಿಯಲ್ಲಿ ಬಾಲಿವುಡ್ ಮತ್ತು ಪಾಪ್ ಹಾಡುಗಳಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಕೊಹ್ಲಿ ಅವರ…

Read More

Gold Rate: ಚಿನ್ನದ ಬೆಲೆ ಇವತ್ತೂ ಇಳಿಕೆ; ಗ್ರಾಮ್​ಗೆ 75 ರೂ ಅಗ್ಗ

ನವದೆಹಲಿ, ಜೂನ್ 1: ವಾರಾಂತ್ಯದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಸೋಮವಾರವೂ ಮುಂದುವರಿದಿದೆ. ಇಂದು ಬಂಗಾರದ ದರ ಗ್ರಾಮ್​ಗೆ 75 ರೂಗಳಷ್ಟು ತಗ್ಗಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆ ಏರಿದರೆ, ಇನ್ನೂ ಕೆಲವೆಡೆ ಕಡಿಮೆ ಆಗಿದೆ. ಆದರೆ, ಬೆಳ್ಳಿ ಬೆಲೆ ಕಳೆದ ಎರಡು ವಾರಗಳಿಂದ ಬಹಳ ಸ್ಥಿರವಾಗಿದೆ. ಇವತ್ತು ಅದರ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ…

Read More

ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಊಟ-ತಿಂಡಿ ದರವೂ ಹೆಚ್ಚಾಗುತ್ತಾ? ಹೋಟೆಲ್ ಮಾಲೀಕರು ಏನಂತಾರೆ ನೋಡಿ

ಬೆಂಗಳೂರು, ಜೂನ್ 1: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಸರಣಿಯಾಗಿ ಏರಿಕೆಯಾಗುತ್ತಿರುವುದು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂದು ಕೂಡ ಕಮರ್ಷಿಯಲ್ ಸಿಲಿಂಡರ್ ದರದಲ್ಲಿ ಬೆಂಗಳೂರಿನಲ್ಲಿ 46 ರೂ. ಹೆಚ್ಚಳವಾಗಿದ್ದು, ಮುಂಬರುವ ದಿನಗಳಲ್ಲಿ ಇದರ ಬೆಲೆ ಬರೋಬ್ಬರಿ 4 ಸಾವಿರ ರೂಪಾಯಿ ತಲುಪುವ ಸಾಧ್ಯತೆಯಿದೆ ಎಂದು ಗ್ಯಾಸ್ ಏಜೆನ್ಸಿಗಳು ಈಗಾಗಲೇ ಮುನ್ಸೂಚನೆ ನೀಡಿವೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರಿಗೆ ತೊಂದರೆಯಾಗುತ್ತಿದ್ದು, ದರ ಏರಿಕೆ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲದ ಕಾರಣ…

Read More

Video: ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಇಂದೋರ್, ಜೂನ್ 01: ಇದ್ದಕ್ಕಿದ್ದಂತೆ ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟಗೊಂಡಿದ್ದು, ನೀರು ಮುಗಿಲೆತ್ತರಕ್ಕೆ ಚಿಮ್ಮಿರುವ ವಿಡಿಯೋ ವೈರಲ್ ಆಗಿದೆ. ಇಂದೋರ್-ಖಂಡ್ವಾ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪೈಪ್​ಲೈನ್ ಒಡೆದ ಪರಿಣಾಮ ನೀರು ರಸ್ತೆಯ ಮೇಲೆ ಪ್ರವಾಹದಂತೆ ಹರಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡಿತ್ತು. ದೊಡ್ಡ ಪ್ರಮಾಣದ ನೀರು ಸುತ್ತಮುತ್ತಲಿನ ಪ್ರದೇಶದಾದ್ಯಂತ ಹರಡಿ ಹಲವಾರು ಮನೆಗಳಿಗೆ ನುಗ್ಗಿ, ಮನೆಯ ಸಾಮಾನುಗಳಿಗೆ ಹಾನಿಯಾಯಿತು.ಈ ಪೈಪ್‌ಲೈನ್ ಓಂಕಾರೇಶ್ವರದಿಂದ ಉಜ್ಜಯಿನಿಯವರೆಗೆ ಚಲಿಸುವ ನರ್ಮದಾ-ಕ್ಷಿಪ್ರಾ ಯೋಜನೆಯ ಭಾಗವಾಗಿದೆ ಎಂದು ಸ್ಥಳೀಯ ನಿವಾಸಿ ಹೇಳಿದ್ದಾರೆ….

Read More

ಬೆಂಗಳೂರು ಪಿಜಿಗೆ ನುಗ್ಗಿ ರಾತ್ರೋರಾತ್ರಿ 8 ಮೊಬೈಲ್ ಫೋನ್‌ಗಳನ್ನು ಕದ್ದ ಖದೀಮರು!

ಸಾಂದರ್ಭಿಕ ಚಿತ್ರImage Credit source: nl.techbriefly.com ಬೆಂಗಳೂರು, ಜೂನ್ 01: ನಗರದ ಬಾಯ್ಸ್ ಪಿಜಿ (PG) ಒಂದಕ್ಕೆ ತಡರಾತ್ರಿ ನುಗ್ಗಿದ ಕಳ್ಳರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಚಾರ್ಜಿಂಗ್‌ಗೆ ಇಟ್ಟಿದ್ದ 8 ದುಬಾರಿ ಮೊಬೈಲ್ ಫೋನ್‌ಗಳನ್ನು (Mobile) ಕದ್ದು ಪರಾರಿಯಾಗಿರುವ ಘಟನೆ ಹೊಸಪಾಳ್ಯದಲ್ಲಿ ನಡೆದಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಮುಖ್ಯಾಂಶಗಳು ಬೆಂಗಳೂರಿನ ಹೊಸಪಾಳ್ಯದ ಸಾಯಿ ಆರಾಧ್ಯ ಬಾಯ್ಸ್ ಪಿಜಿಯಲ್ಲಿ ಭರ್ಜರಿ ಕಳ್ಳತನ. ರಾತ್ರಿ ಚಾರ್ಜಿಂಗ್‌ಗೆ ಇಟ್ಟಿದ್ದ ಒಟ್ಟು 8 ಮೊಬೈಲ್…

Read More

ಆ ಒಂದು ವಿಷಯಕ್ಕೆ ದಿಯಾಳನ್ನು ಕೊಂದೇ ಬಿಟ್ಟ ಜೆಡಿ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಒಂದು ಕಡೆಯಾದರೆ, ಈ ಧಾರಾವಾಹಿ ಪ್ರಮುಖ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ ಎಂಬುದು ಮತ್ತೊಂದು ಕಡೆ. ಜೆಡಿ ದ್ವೇಷ ತೀರಿಸಿಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರು ಹೋಗಲು ರೆಡಿ ಇದ್ದ. ಈಗ ಎರಡನೇ ಪತ್ನಿ ದಿಯಾನ್ನೇ ಕೊಂದು ಬಿಟ್ಟಿದ್ದಾನೆ ಎಂಬುದು ಶಾಕಿಂಗ್ ಬೆಳವಣಿಗೆ. ಗೌತಮ್ ಹಾಗೂ ಭೂಮಿಕಾ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ, ಜೆಡಿ ಮಾಡಿದ ಕೆಟ್ಟ ಕೆಲಸದಿಂದ ಒಂದು ಮಗು ಕಳೆದು ಹೋಯಿತು….

Read More

ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ನವದೆಹಲಿ, ಜೂನ್ 01: ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ವಿಕಾಸ್ ಮಾರ್ಗದಲ್ಲಿರುವ ಸಚಿವಾಲಯದ ಕಟ್ಟಡದ ಎರಡನೇ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕನಿಷ್ಠ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದ್ದು, ಬೆಂಕಿಯ ಕಾರಣ ಮತ್ತು ಯಾವುದೇ ಸಂಭಾವ್ಯ ಹಾನಿಯ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ…

Read More

ಸಿಎಂ ಪತ್ನಿಯಂತೆ ತ್ರಿಷಾಗೆ ರಾಜ ಮರ್ಯಾದೆ; ಶುವಾಯ್ತು ಚರ್ಚೆ

ತಮಿಳುನಾಡಿನ ರಾಜಕೀಯಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟು, ಮುಖ್ಯಮಂತ್ರಿಯಾಗಿರುವ ದಳಪತಿ ವಿಜಯ್ ಅವರ ಕೆಲವು ವೈಯಕ್ತಿಕ ನಡೆಗಳು ಈಗ ಭಾರಿ ಚರ್ಚೆಗೆ ಕಾರಣವಾಗಿವೆ. ಆರಂಭದಲ್ಲಿ ಅವರು ತಮ್ಮ ಜ್ಯೋತಿಷಿಯನ್ನು ಸಲಹೆಗಾರರನ್ನಾಗಿ ನೇಮಿಸಿ ಟೀಕೆಗೆ ಒಳಗಾಗಿದ್ದರು. ಆದರೆ ಆ ತಪ್ಪು ತಿದ್ದಿಕೊಂಡು ಆದೇಶ ಹಿಂಪಡೆದಿದ್ದರು. ಮತ್ತೊಮ್ಮೆ ವಿಜಯ್ (Vijay) ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ತಾಯಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅಜಿತ್ ಅವರಿಗೆ ಸಾಂತ್ವನ ಹೇಳಲು ವಿಜಯ್ ಅವರು ಅಜಿತ್…

Read More

Global day of parents 2026: ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್‌ ಹೀರೋ

ಪೋಷಕಾರಗುವುದು (Parents) ಅಷ್ಟು ಸುಲಭದ ಮಾತಲ್ಲ, ಮಕ್ಕಳನ್ನು ಸಂಸ್ಕಾರಯುತರನ್ನಾಗಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ, ಉತ್ತಮ ಪ್ರಜೆಯಾಗಿ ರೂಪಿಸುವುದು ಸವಾಲಿನ ಕೆಲಸವೇ ಸರಿ. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ಕೈ ಮೀರಿದ ಪ್ರಯತ್ನಗಳನ್ನು ಮಾಡುತ್ತಾರೆ, ಮಕ್ಕಳ ಲಾಲನೆ ಪಾಲನೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಹೀಗೆ ಪ್ರತಿ ಮಕ್ಕಳ ಜೀವನವನ್ನೂ ಉತ್ತಮವಾಗಿ ರೂಪಿಸುವಲ್ಲಿ ಪೋಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಒಂದು ಲೆಕ್ಕದಲ್ಲಿ ಪೋಷಕರು ಮಕ್ಕಳ ಪಾಲಿನ ನಿಜವಾದ ದೇವರು ಎಂದರೆ ತಪ್ಪಾಗಲಾರದು….

Read More