Video: ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಇಂದೋರ್, ಜೂನ್ 01: ಇದ್ದಕ್ಕಿದ್ದಂತೆ ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟಗೊಂಡಿದ್ದು, ನೀರು ಮುಗಿಲೆತ್ತರಕ್ಕೆ ಚಿಮ್ಮಿರುವ ವಿಡಿಯೋ ವೈರಲ್ ಆಗಿದೆ. ಇಂದೋರ್-ಖಂಡ್ವಾ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪೈಪ್​ಲೈನ್ ಒಡೆದ ಪರಿಣಾಮ ನೀರು ರಸ್ತೆಯ ಮೇಲೆ ಪ್ರವಾಹದಂತೆ ಹರಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡಿತ್ತು. ದೊಡ್ಡ ಪ್ರಮಾಣದ ನೀರು ಸುತ್ತಮುತ್ತಲಿನ ಪ್ರದೇಶದಾದ್ಯಂತ ಹರಡಿ ಹಲವಾರು ಮನೆಗಳಿಗೆ ನುಗ್ಗಿ, ಮನೆಯ ಸಾಮಾನುಗಳಿಗೆ ಹಾನಿಯಾಯಿತು.ಈ ಪೈಪ್‌ಲೈನ್ ಓಂಕಾರೇಶ್ವರದಿಂದ ಉಜ್ಜಯಿನಿಯವರೆಗೆ ಚಲಿಸುವ ನರ್ಮದಾ-ಕ್ಷಿಪ್ರಾ ಯೋಜನೆಯ ಭಾಗವಾಗಿದೆ ಎಂದು ಸ್ಥಳೀಯ ನಿವಾಸಿ ಹೇಳಿದ್ದಾರೆ. ಸುಮಾರು ಒಂದು ಗಂಟೆ ಕಾಲ ನೀರಿನ ಹರಿವು ಜೋರಾಗಿದ್ದು, ಬೆಳಗ್ಗೆ 8.30 ರ ಸುಮಾರಿಗೆ ನೀರು ಸರಬರಾಜು ಸ್ಥಗಿತಗೊಂಡಾಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *