ಬೆಂಗಳೂರಲ್ಲಿ ಮನೆಗೆಲಸದವರಿಂದಲೇ ಬಿಲ್ಡರ್ ಮನೆಗೆ ಕನ್ನ: ದೋಚಿದ್ದು 18 ಕೋಟಿ ಮೌಲ್ಯದ ಸಂಪತ್ತು! – Kannada News | Bengaluru House Help Duo Robs Builder’s Home; 18 Crore Jewellery Stolen
ಬೆಂಗಳೂರು, ಜನವರಿ 28: ಮನೆಗೆಲಸ ಮಾಡುತ್ತಿದ್ದಿದ್ದ ದಂಪತಿ ಅದೇ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ಬೆಲೆ ಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಯಮಲೂರಿನ ಬಿಲ್ಡರ್ ಶಿವಕುಮಾರ್ ಮನೆಯಲ್ಲಿ ಕಳ್ಳತನ ನಡೆದಿದ್ದು, 20 ದಿನದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ದಂಪತಿ ದಿನೇಶ್ ಮತ್ತು ಕಮಲಾ ಎಂಬವರೇ ಆರೋಪಿಗಳು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದ್ದು, ಜನವರಿ 25ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ…