Category Archives: Blog

Your blog category

ಟೀಮ್ ಇಂಡಿಯಾದ ಪ್ರಮುಖ ಆಟಗಾರನಿಗೆ ರೆಸ್ಟ್: ಯಾರಿಗೆ ಸಿಗಲಿದೆ ಚಾನ್ಸ್?

Source link

ಹಿಂದೂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಮುಸ್ಲಿಂ ಯುವಕ: ಕುಮಟಾದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ – Kannada News | Muslim Youth Sets Hindu Man’s House Ablaze in Kumta, Uttara Kannada

ಕಾರವಾರ, ಜನವರಿ 28: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರ ಹಕ್ಕಲದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕುಟುಂಬದವರು ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಯುವಕನೊಬ್ಬ ದಿನಕರ್ ಎಂಬುವರ ಮನೆಗೆ ಬೆಂಕಿ ಹಚ್ಚಿದ್ದಾನೆ. ಕುಮಟಾದ ವೆಂಕಟರಮಣ ಜಾತ್ರೆಗೆ ದಿನಕರ್ ಕುಟುಂಬದವರು ತೆರಳಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ 18 ವರ್ಷದ ಫೈಸಾನ್ ಜಾಫರ್ ಶೇಕ್ ಎಂಬ ಯುವಕ ಅವರ ಮನೆಗೆ ಬೆಂಕಿ ಹಚ್ಚಿ ದ್ವೇಷ ಸಾಧಿಸಲು ಯತ್ನಿಸಿದ್ದಾನೆ. ಇನ್ನು ಬೆಂಕಿ ಹಚ್ಚಿದ ತಕ್ಷಣವೇ ಆರೋಪಿಯನ್ನು ಸ್ಥಳೀಯರು ಹಿಡಿದಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆಯಾದರೂ, ಘಟನೆಯಿಂದಾಗಿ ದೇವರ ಹಕ್ಕಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅವಳು ನನ್ನ ಮಗಳಾಗಿದ್ದಕ್ಕೆ ಸಾರ್ಥಕವಾಯ್ತು’; ರಿತನ್ಯಾ ಬಗ್ಗೆ ದುನಿಯಾ ವಿಜಯ್ ಮಾತು – Kannada News | Duniya Vijay Happy Over Her Daughter Performance in Land lord Movie

ದುನಿಯಾ ವಿಜಯ್ ಅವರು ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಅವರ ಮಗಳು ರಿತನ್ಯಾ ವಿಜಯ್ ನಟಿಸಿದ್ದಾರೆ. ಅವರದ್ದು ಸಿನಿಮಾದಲ್ಲಿ ಮಗಳ ಪಾತ್ರವೇ ಎಂಬುದು ವಿಶೇಷ. ‘ನನ್ನ ಮಗಳು ಪದೇ ಪದೇ ಪಾತ್ರ ಹೇಗೆ ಬಂದಿದೆ ಎಂದು ಕೇಳುತ್ತಲೇ ಇದ್ದಳು. ನಾನು ಆಗ ಏನನ್ನೂ ಹೇಳೋಕೆ ಹೋಗಿರಲಿಲ್ಲ. ಇವತ್ತು ಹೆಮ್ಮೆಯಿಂದ ಹೇಳುತ್ತೇನೆ. ಅವಳು ನನ್ನ ಮಗಳಾಗಿದ್ದಕ್ಕೂ ಸಾರ್ಥಕವಾಯಿತು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ತುಂಡಾಗಿ ಬಿದ್ದ ವಿದ್ಯುತ್ ಕಂಬ, ಓಡಿ ಜೀವ ಉಳಿಸಿಕೊಂಡ ಬಾಲಕ – Kannada News | Schoolboy Survives After Electric Pole Crashes Near Him in Kurnool

ಕರ್ನೂಲ್, ಜನವರಿ 28: ತಂತಿ ಸಮೇತ ವಿದ್ಯುತ್ ಕಂಬ ಏಕಾಏಕಿ ರಸ್ತೆಗೆ ಬಿದ್ದ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ. ಅದೇ ಸಮಯದಲ್ಲಿ ಬಾಲಕನೊಬ್ಬ ಅದೇ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ, ಕಂಬ ಬೀಳುತ್ತಿರುವುದನ್ನು ಕಂಡು ಕೂಡಲೇ ತನ್ನೆಲ್ಲಾ ಶಕ್ತಿಗಳನ್ನು ಒಟ್ಟು ಸೇರಿಸಿ ಅಲ್ಲಿಂದ ವೇಗವಾಗಿ ಓಡಿ ಜೀವ ಉಳಿಸಿಕೊಂಡಿದ್ದಾನೆ. ಕರ್ನೂಲ್ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಇತ್ತೀಚೆಗೆ ಈ ಪ್ರದೇಶದಲ್ಲಿ ಒಳಚರಂಡಿ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದು, ಈ ಸಂದರ್ಭದಲ್ಲಿ ರಸ್ತೆಯನ್ನು ಅಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗೆತವು ವಿದ್ಯುತ್ ಕಂಬದ ಅಡಿಪಾಯವನ್ನು ದುರ್ಬಲಗೊಳಿಸಿದೆ.

Source link

6,6,6,6,6,6,6,6,6: ಶರವೇಗದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್ – Kannada News | Harry Brook Creates History in Sri Lanka

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ (Harry Brook) ಶರವೇಗದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ 111 ರನ್​ಗಳ ಇನಿಂಗ್ಸ್ ಆಡಿದರು. ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹ್ಯಾರಿ ಬ್ರೂಕ್ ಲಂಕಾ ಬೌಲರ್​ಗಳನ್ನು ಚೆಂಡಾಡಿದರು.

ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಹ್ಯಾರಿ ಬ್ರೂಕ್ ಸಿಕ್ಸ್-ಫೋರ್​ಗಳ ಸುರಿಮಳೆಗೈದರು. ಈ ಮೂಲಕ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಶ್ರೀಲಂಕಾ ಪಿಚ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ (54 ಎಸೆತಗಳು) ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಶತಕದ ಬಳಿಕ ಕೂಡ ಆರ್ಭಟ ಮುಂದುವರೆಸಿದ ಹ್ಯಾರಿ ಬ್ರೂಕ್ 66 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ 136 ರನ್​ ಬಾರಿಸಿದರು. ಈ 9 ಸಿಕ್ಸರ್​ಗಳೊಂದಿಗೆ ಶ್ರೀಲಂಕಾದಲ್ಲಿ ಏಕದಿನ ಇನಿಂಗ್ಸ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಬ್ರೂಕ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ಬ್ಯಾಟರ್ ಪಾತುಮ್ ನಿಸ್ಸಂಕಾ ಹೆಸರಿನಲ್ಲಿತ್ತು. 2024 ರಲ್ಲಿ ಅಫ್ಘಾನಿಸ್ತಾನ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾತುಮ್ ನಿಸ್ಸಂಕಾ ಬರೋಬ್ಬರಿ 8 ಸಿಕ್ಸ್ ಸಿಡಿಸಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಬ್ರೂಕ್ ಮುರಿದಿದ್ದಾರೆ.

ಶ್ರೀಲಂಕಾ ವಿರುದ್ಧವೇ ಅವರ ನೆಲದಲ್ಲಿ ಅಬ್ಬರಿಸುವ ಮೂಲಕ ಹ್ಯಾರಿ ಬ್ರೂಕ್ ಬರೋಬ್ಬರಿ 8 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಲಂಕಾ ಪಿಚ್​ನಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Published On – 7:57 am, Wed, 28 January 26

Source link

ನಾದಿನಿಗೆ ಚಾಕುವಿನಿಂದ ಇರಿದು ಬಳಿಕ 16ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಟೆಕ್ಕಿ – Kannada News | High Rise Tragedy in Noida: Engineer Attacks Sister in Law, Dies After Fatal Jump

ಗ್ರೇಟರ್​ ನೋಯ್ಡಾ, ಜನವರಿ 28: ಟೆಕ್ಕಿಯೊಬ್ಬ ನಾದಿನಿಗೆ ಚಾಕುವಿನಿಂದ ಇರಿದು, ಬಳಿಕ ತಾನು 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಬಿಸ್ರಾಖ್ ಪ್ರದೇಶದ ಪ್ಯಾರಾಮೌಂಟ್ ಎಮೋಷನ್ಸ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬಿಹಾರದ ಪಾಟ್ನಾ ಮೂಲದ ಶತ್ರುಘ್ನ ಸಿನ್ಹಾ (38) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸಿನ್ಹಾ ತನ್ನ ಪತ್ನಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದ, ನಂತರ ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದ.

ಆತನ ನಾದಿನಿ ಮಧ್ಯಪ್ರವೇಶಿಸಿದಾಗ, ತರಕಾರಿ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿ, ಆಕೆಯ ಕೈಗೆ ಗಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಸಮಾಜದ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ.

ದಾಳಿ ನಡೆದ ಕೂಡಲೇ ಪತ್ನಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನ ಮತ್ತು ಸಾರ್ವಜನಿಕ ಅವಮಾನಕ್ಕೆ ಹೆದರಿ, ಸಿನ್ಹಾ ಫ್ಲಾಟ್ ಗೆ ಬೀಗ ಹಾಕಿ ಬಾಲ್ಕನಿಯಲ್ಲಿ ಹೆಜ್ಜೆ ಹಾಕಿದ್ದಾರೆ ಮತ್ತು ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ 16 ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ತಾಯಿ, ಮಗ ಆತ್ಮಹತ್ಯೆ: ಪೊಲೀಸರು ಬಿಚ್ಚಿಟ್ರು ಮೊದಲ ಸೊಸೆ ಸಾವಿನ ರಹಸ್ಯ

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಯಥಾರ್ಥ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಗೊಂಡಿರುವ ನಾದಿನಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಬಿಸ್ರಖ್ ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇಲ್ಲಿಯವರೆಗೆ ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಸಿನ್ಹಾ ಕಳೆದ ಆರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದು, ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ಘಟನೆಗೂ ಮುನ್ನ ಅವರು ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ನಡುವೆ ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ.

ಸಿನ್ಹಾ ಅವರ ವಿವಾಹವಾಗಿ ಸುಮಾರು 11 ವರ್ಷಗಳು ಕಳೆದಿವೆ, ಎಂಟು ವರ್ಷದ ಮಗನಿದ್ದಾನೆ ಅವರ ಪತ್ನಿ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಕೌಟುಂಬಿಕ ಕಲಹ, ದೀರ್ಘಕಾಲದ ನಿರುದ್ಯೋಗ ಮತ್ತು ಮದ್ಯಪಾನಕ್ಕೆ ಕಾರಣವಾಗುವ ಅಂಶಗಳಾಗಿವೆ ಎಂದು ಸಹಾಯಕ ಪೊಲೀಸ್ ಆಯುಕ್ತ ಪವನ್ ಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲಡೆ ಶುಷ್ಕ ವಾತಾವರಣ – Kannada News | Bengaluru temperature: Dry weather all over the karnataka

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲಡೆ ಶುಷ್ಕ ವಾತಾವರಣ

ಬೆಂಗಳೂರು, ಜನವರಿ 28: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಎರಡು ದಿನಗಳ ಹಿಂದೆ ಮೋಡ ಕವಿದು, ಸಾಧಾರಣ ಪ್ರಮಾಣದ ಮಳೆಯಾಗಿತ್ತು. ಆದರೆ ಇಂದು ರಾಜ್ಯದ ಹವಾಮಾನ (Weather Forecast) ಯಥಾಸ್ಥಿತಿ ತಲುಪಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮೋಡ ಕವಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕುಡಿದ ನಶೆಯಲ್ಲಿ ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ ಎಂದಿದ್ದೆ ಅಷ್ಟೇ; ಸ್ಪಷ್ಟನೆ ಕೊಟ್ಟ ಸತೀಶ್ – Kannada News | Satish Kadambam on Gilli: Said Under Alcohol Influence, Not Prediction

ಡಾಗ್ ಬ್ರೀಡರ್ ಸತೀಶ್ (Satish) ಕ್ಯಾಡಬಾಮ್ ಅವರು ಹೋದಲ್ಲಿ ಬಂದಲ್ಲಿ ಮಾಧ್ಯಮಗಳ ಎದುರು ಮಾತನಾಡುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಇರಲಿ, ಟಿವಿ ಮಾಧ್ಯಮ ಇರಲಿ ಅವರು ಸಂದರ್ಶನ ನೀಡುತ್ತಿದ್ದಾರೆ. ಈಗ ಅವರು ಒಂದು ವಿಷಯಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ‘ಗಿಲ್ಲಿ ಗೆಲ್ಲಲ್ಲ ಎಂದು ಕುಡಿದ ನಶೆಯಲ್ಲಿ ಹೇಳಿದ್ದು ಅಷ್ಟೇ’ ಎಂದು ಸತೀಶ್ ಅವರು ಹೇಳಿಕೆ ನೀಡಿದ್ದಾರೆ.

ಗಿಲ್ಲಿ ಗೆಲ್ಲಲ್ಲ ಎಂದು ಸತೀಶ್ ಅವರು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದರು. ‘ಗಿಲ್ಲಿ ಕೊಳಕ, ಬಿಗ್ ಬಾಸ್ ಮನೆಯಲ್ಲಿ ನನಗೆ ತುಂಬಾನೇ ಚಿತ್ರ ಹಿಂಸೆ ಕೊಟ್ಟಿದ್ದ’ ಎಂದೆಲ್ಲ ಸತೀಶ್ ಹೇಳಿಕೊಂಡಿದ್ದರು. ಪಾರ್ಟಿ ಒಂದರಲ್ಲಿ ಮಾತನಾಡಿದ್ದ ಸತೀಶ್, ‘ಗಿಲ್ಲಿ ಹೊರಗೆ ಬಂದಾಯ್ತು. ನಾನೇ ಹೊರಕ್ಕೆ ತಂದಿದ್ದು’ ಎಂದೆಲ್ಲ ಏನೇನೋ ಹೇಳಿಕೆ ಕೊಟ್ಟಿದ್ದರು. ಈಗ ಹೋದಲ್ಲಿ ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

‘ಗಿಲ್ಲಿ ಗೆಲ್ಲಲ್ಲ ಎಂದು ನಾನು ಹೇಳಿದ್ದೆ ನಿಜ. ಆದರೆ, ಅದು ಸತ್ಯವಾಗಿಲ್ಲ. ನಾನೇನು ಭವಿಷ್ಯ ಹೇಳುವ ಜ್ಯೋತಿಷಿನಾ? ನಾನು ಸಾಮಾನ್ಯ ಮನುಷ್ಯ. ಜ್ಯೋತಿಷಿಗಳು ಹೇಳಿದ ಮಾತೇ ಸುಳ್ಳಾಗಿದೆ. ಹೀಗಿರುವಾಗ ನನ್ನದು ಯಾವ ಲೆಕ್ಕ? ನಾನು ಕುಡಿದ ನಶೆಯಲ್ಲಿ ಹಾಗೆ ಹೇಳಿದ್ದೇನೆ ಅಷ್ಟೇ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್

ಸತೀಶ್​​ಗೆ ಹೋದಲ್ಲಿ ಬಂದಲ್ಲಿ ಇದೇ ವಿಷಯ ಕೇಳುತ್ತಿರುವುದಕ್ಕೆ ಅವರಿಗೆ ಇರಿಟೇಷನ್ ಆಗುತ್ತಿದೆ. ಅವರು ಈ ವಿಷಯದಲ್ಲಿ ಸ್ಪಷ್ಟನೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇನ್ನು, ಗಿಲ್ಲಿ ಅಭಿಮಾನಿಗಳು ಅವರಿಗೆ ಹಾಗೂ ಅವರ ತಾಯಿ ಮೊಬೈಲ್​​ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರಂತೆ. ಈ ಪ್ರಕರಣದಲ್ಲಿ ಕೇಸ್ ಮಾಡಿ ಕೆಲವರನ್ನು ಅರೆಸ್ಟ್ ಮಾಡಿಸಿರೋದಾಗಿ ಸತೀಶ್ ಹೇಳಿಕೊಂಡಿದ್ದಾರೆ. ಸತೀಶ್ ಅವರು ಹೇಳುವ ಬಹುತೇಕ ವಿಷಯಗಳು ಸುಳ್ಳು ಎಂದೇ ಎಲ್ಲರಿಗೂ ಅನಿಸುತ್ತಿದೆ. ಅವರ ಹೇಳಿಕೆಗಳು ಸಾಕಷ್ಟು ಟ್ರೋಲ್ ಆಗುತ್ತವೆ. ಅವರು ನಿಜ ಹೇಳಿದರೂ ಯಾರೂ ನಂಬೋದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಲ್ಲಿ ಮನೆಗೆಲಸದವರಿಂದಲೇ ಬಿಲ್ಡರ್​​ ಮನೆಗೆ ಕನ್ನ: ದೋಚಿದ್ದು 18 ಕೋಟಿ ಮೌಲ್ಯದ ಸಂಪತ್ತು! – Kannada News | Bengaluru House Help Duo Robs Builder’s Home; 18 Crore Jewellery Stolen

ಬೆಂಗಳೂರು, ಜನವರಿ 28: ಮನೆಗೆಲಸ ಮಾಡುತ್ತಿದ್ದಿದ್ದ ದಂಪತಿ ಅದೇ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ಬೆಲೆ ಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್​​ ಆಗಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಯಮಲೂರಿನ ಬಿಲ್ಡರ್ ಶಿವಕುಮಾರ್ ಮನೆಯಲ್ಲಿ ಕಳ್ಳತನ ನಡೆದಿದ್ದು, 20 ದಿನದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ದಂಪತಿ ದಿನೇಶ್ ಮತ್ತು ಕಮಲಾ ಎಂಬವರೇ ಆರೋಪಿಗಳು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆಸಿ ಎಸ್ಕೇಪ್​​ ಆಗಿದ್ದಾರೆ ಎನ್ನಲಾಗಿದ್ದು, ಜನವರಿ 25ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಕಾಶ, ಮಯಾ ವಿಷ್ಣು ಎಂಬುವವರ ಮೂಲಕ ಶಿವಕುಮಾರ್ ಮನೆಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ದಂಪತಿ ಸೇರಿದ್ದರು. ಜನವರಿ 25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿಗಳು ನೆಲಮಹಡಿ, ಮೊದಲ ಮಹಡಿಯ ಬೆಡ್ ರೂಂಗಳ ಲಾಕರ್ ಮುರಿದು ಕಳ್ಳತನ ನಡೆಸಿದ್ದಾರೆ. 11.5 ಕೆ.ಜಿ ಚಿನ್ನ ಮತ್ತು ವಜ್ರ, 5 ಕೆಜಿ ಬೆಳ್ಳಿ, 11.5 ಲಕ್ಷ ನಗದು ಎಗರಿಸಿ ಎಸ್ಕೇಪ್​​ ಆಗಿದ್ದು, ಮನೆಯ ಇತರ ಕೆಲಸಗಾರರು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಅವರು ದೂರವಾಣಿ ಕರೆ ಮಾಡಿ ಮನೆಯವರಿಗೆ ವಿಷಯ ತಿಳಿಸಿದ್ದು, ಅವರು ಬಂದು ಪರೀಕ್ಷಿಸಿದಾಗ ಲಾಕರ್​​ಗಳನ್ನು ಕಬ್ಬಿಣದ ಸಲಾಕೆಯಿಂದ ಮುರಿದು ಕಳವು ಮಾಡಿರೋದು ಗೊತ್ತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ತಹಳ್ಳಿ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ದರೋಡೆ ಪ್ರಕರಣಗಳು; ಬೆಂಗಳೂರಿನಲ್ಲಿ ಗನ್​ ತೋರಿಸಿ ಬಂಗಾರದ ಅಂಗಡಿ ಲೂಟಿ

ಮನೆಗಳ್ಳರನ್ನು ಹಿಡಿದ ಗ್ರಾಮಸ್ಥರು

ಮನೆ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಗ್ರಾಮಸ್ಥರೇ ಹಿಡಿದಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ನಿನ್ನೆ ನಡೆದಿದೆ. ಆಂಧ್ರದಿಂದ ಬಂದಿದ್ದ ಕಳ್ಳಲರು ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದರು. ಮಾಹಿತಿ ತಿಳಿದಿದ್ದೇ ತಡ ಮನೆ ಸುತ್ತುವರಿದ ಗ್ರಾಮಸ್ಥರು, ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಆಂಧ್ರ ಪ್ರದೇಶದ ಚಿತ್ತೂರು ಮೂಲದವರು ಎನ್ನಲಾಗಿದೆ. ಕಳ್ಳರಿಂದ ಒಡವೆ, ಹಣ ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, tಉರುವೇಕೆರೆ ಪೊಲೀಸ್​​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ

Source link