ಬಾಲಸುಬ್ರಹ್ಮಣ್ಯಂ ನಟನೆಯ ಸುಂದರ ತೆಲುಗು ಸಿನಿಮಾ ಕನ್ನಡದಲ್ಲೂ ಬಿಡುಗಡೆ
ಭಾರತೀಯ ಸಿನಿಮಾ ಸಂಗೀತ ಲೋಕದ ಅತ್ಯುತ್ತಮ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ (sp balasubrahmanyam) ಅತ್ಯದ್ಭುತ ಗಾಯಕರಾಗಿದ್ದ ಜೊತೆಗೆ ಅದ್ಭುತ ನಟರೂ ಆಗಿದ್ದರು. ಅವರು ಕನ್ನಡದಲ್ಲಿ ‘ಮುದ್ದಿನ ಮಾವ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಪರಭಾಷೆಯ ಕೆಲ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಬಾಲಸುಬ್ರಹ್ಮಣ್ಯಂ ಸಾಮಾನ್ಯವಾಗಿ ಅಮಾಯಕ, ಮುಗ್ಧ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದರು. ಅವರು ನಟಿಸಿದ ಹಲವು ಸಿನಿಮಾಗಳು ಹಿಟ್ ಆಗಿರುವುದು ಮಾತ್ರವಲ್ಲ ಅವರ ಪಾತ್ರವೂ ಜನಪ್ರಿಯತೆ ಗಳಿಸಿವೆ. ಆದರೆ ಎಸ್ಪಿಬಿ ಅವರು ನಿಧನ ಹೊಂದುವುದಕ್ಕೆ ಮುಂಚೆ…