Category Archives: Blog

Your blog category

ಫೆ.6ರಂದು ರಿಲೀಸ್ ಆಗಲಿದೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕರಿಕಾಡ’ – Kannada News | Karikaada Kannada Movie Ft Kaada Natraj Niriksha Shetty releasing on 6 Feb

ಕಾಡ ನಟರಾಜ್ (Kaada Natraj) ಅವರು ಹೀರೋ ಆಗಿ ನಟಿಸಿರುವ ‘ಕರಿಕಾಡ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಿರೀಕ್ಷಾ ಶೆಟ್ಟಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡು ನೋಡಿರುವ ಸಿನಿಪ್ರಿಯರಿಗೆ ಕುತೂಹಲ ಮತ್ತು ನಿರೀಕ್ಷೆ ಮೂಡಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಇವೆ. ಅದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ. ಫೆಬ್ರವರಿ 6ರಂದು ‘ಕರಿಕಾಡ’ (Karikaada) ಸಿನಿಮಾ ರಿಲೀಸ್ ಆಗಲಿದೆ. ಅದು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಂಬುದು ವಿಶೇಷ.

‘ಕರಿಕಾಡ’ ಸಿನಿಮಾಗೆ ಗಿಲ್ಲಿ ವೆಂಕಟೇಶ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ‘ರಿದ್ದಿ ಎಂಟರ್ಟೈನ್​ಮೆಂಟ್’ ಬ್ಯಾನರ್ ಮೂಲಕ ದೀಪ್ತಿ ದಾಮೋದರ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಕೂಡ ಡಿಫರೆಂಟ್ ಆಗಿದ್ದು, ಆ ಕಾರಣದಿಂದಲೂ ಕುತೂಹಲ ಮೂಡಿಸಿದೆ. ಶೀರ್ಷಿಕೆಯ ಅರ್ಥ ಏನು? ಚಿತ್ರದ ಥೀಮ್ ಏನು ಎಂಬುದು ಫೆಬ್ರವರಿ 6ರಂದು ತಿಳಿಯಲಿದೆ.

ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ಕನ್ನಡದ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಗಮನ ಸೆಳೆಯುತ್ತಿವೆ. ‘ಕರಿಕಾಡ’ ಸಿನಿಮಾ ಸಹ ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.

ಟೀಸರ್ ನೋಡಿದರೆ ಇದೊಂದು ಪಕ್ಕ ಹಳ್ಳಿಗಾಡಿನ ಕಥೆ ಇರುವ ಅಡ್ವೆಂಚರಸ್ ಸಿನಿಮಾ ಎಂಬ ಸುಳಿವು ಸಿಗುತ್ತದೆ. ಕಾಡಿನಲ್ಲಿ ನಡೆಯುವ ಕಥೆ ಇದು. ದ್ವೇಷ, ಪ್ರತಿಕಾರ, ಪ್ರೀತಿ ಮುಂತಾದ ಭಾವನೆಗಳ ಮಿಶ್ರಣ ಕೂಡ ಇರಲಿದೆ. ಹೊಸ ಪ್ರತಿಭೆಗಳಿಂದ ತುಂಬಿರುವ ಈ ಸಿನಿಮಾದ ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಯಶ್ ಶೆಟ್ಟಿ, ಬಲರಾಜ್ ವಾಡಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಗಮನ ಸೆಳೆಯುತ್ತಿದೆ ‘ಕರಿಕಾಡ’, ಆಸಕ್ತ ತಂಡದ ಸಾಹಸಮಯ ಪ್ರಯತ್ನ

‘ಕರಿಕಾಡ’ ಚಿತ್ರಕ್ಕೆ ಅತೀಶಯ ಜೈನ್ ಹಾಗೂ ಶಶಾಂಕ್ ಶೇಷಗಿರಿ ಅವರು ಸಂಗೀತ ಸಂಯೋಜಿಸಿದ್ದಾರೆ. ‘ರತುನಿ ರತುನಿ’ ಹಾಗೂ ‘ಕಬ್ಬಿನ್ ಜಲ್ಲೆ’ ಹಾಡುಗಳು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 3ನೇ ಹಾಡು ‘ನೀ ಯಾರೇ ನನಗೆ’ ಜ.28ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೀತಿ ಮಾಡಿದ್ರೆ ಈ ಪೆಂಗ್ವಿನ್‌ಗಳಂತೆ ಮಾಡಬೇಕು: ತನ್ನ ನಂಬಿದ ಹೆಣ್ಣು ಪೆಂಗ್ವಿನ್‌ನ ಎಂದಿಗೂ ಕೈ ಬಿಡುವುದಿಲ್ಲ – Kannada News | Antarctic Penguins: Life Long Mates, Incredible Adaptations and Parental Care

ಅಂಟಾರ್ಟಿಕಾದ ಶೀತಲ ಲೋಕದಲ್ಲಿ ಪೆಂಗ್ವಿನ್‌ಗಳ ಪ್ರೇಮ ಜೀವನ ನಿಜಕ್ಕೂ ಅದ್ಭುತ ಮತ್ತು ಮನುಷ್ಯರಿಗೂ ಮಾದರಿ. ಅವುಗಳ ಪ್ರೇಮದ ಕೆಲವು ಸುಂದರ, ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ನಡೆದ ಈ ಒಂಟಿ ಪೆಂಗ್ವಿನ್ ಸಮುದ್ರದ ಕಡೆಗೆ ಹಿಂಡಿನ ಹಿಂದೆ ಹೋಗದೆ ಒಂಟಿಯಾಗಿ ತೆರಳಿದೆ. ಹಿಂಡಿನಿಂದ ಬೇರ್ಪಟ್ಟ ಸ್ಥಳದಿಂದ 70 ಕಿಮೀದಿಂದ ದೂರದಲ್ಲಿರೋ ಪರ್ವತದ ಬಳಿ ಸಾಗಿದೆ. ಇದು ಡಾಕ್ಯುಮೆಂಟರಿಯೊಂದರ ದೃಶ್ಯ. ವೆನಾ ಹೆಜೋಗ್ ನಿರ್ದೇಶನದ ‘ಎನ್​​ಕೌಂಟರ್​​ ಎಟ್​ ದಿ ಎಂಡ್ ಆಫ್​ ದಿ ವರ್ಲ್ಡ್’ ಸಾಕ್ಷ್ಯ ಚಿತ್ರದ ದೃಶ್ಯದ ಭಾಗ ಇದು. ಬರೋಬ್ಬರಿ 19 ವರ್ಷಗಳ ಬಳಿಕ ಈ ವಿಡಿಯೋ ವೈರಲ್ ಆಗಿದೆ. ಆದರೆ ಈ ಪೆಂಗ್ವಿನ್​​ಗಳಿಗೆ ಒಂದು ಪ್ರೇಮಕಥೆ ಇದೆ. ಗಂಡು ಪೆಂಗ್ವಿನ್ ತನಗೆ ಇಷ್ಟವಾದ ಹೆಣ್ಣು ಪೆಂಗ್ವಿನ್‌ಗೆ ಪ್ರೀತಿಯನ್ನು ಹೇಳಲು ಅತ್ಯಂತ ಸುಂದರವಾದ, ನಯವಾದ ಕಲ್ಲನ್ನು (Pebble) ಹುಡುಕಿಕೊಂಡು ಬರುತ್ತದೆ. ಆ ಕಲ್ಲನ್ನು ಹೆಣ್ಣು ಪೆಂಗ್ವಿನ್‌ನ ಪಾದದ ಮುಂದೆ ಇಡುತ್ತದೆ. ಒಂದು ವೇಳೆ ಹೆಣ್ಣು ಪೆಂಗ್ವಿನ್ ಆ ಕಲ್ಲನ್ನು ಎತ್ತಿಕೊಂಡರೆ, ಅವಳು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ ಎಂದರ್ಥ! ನಂತರ ಅವರಿಬ್ಬರು ಸೇರಿ ಅದೇ ಕಲ್ಲುಗಳಿಂದ ತಮ್ಮ ಪುಟ್ಟ ಗೂಡನ್ನು ಕಟ್ಟುತ್ತಾರೆ.

ಹೆಚ್ಚಿನ ಪೆಂಗ್ವಿನ್ ಪ್ರಭೇದಗಳು (ವಿಶೇಷವಾಗಿ ಮೆಜೆಲಾನಿಕ್ ಪೆಂಗ್ವಿನ್‌ಗಳು) ಜೀವನಪರ್ಯಂತ ಒಬ್ಬನೇ ಸಂಗಾತಿಯ ಜೊತೆಗಿರುತ್ತವೆ. ಪ್ರತಿ ವರ್ಷ ಸಾವಿರಾರು ಮೈಲಿ ದೂರ ಪ್ರಯಾಣ ಬೆಳೆಸಿದರೂ, ಸಂತಾನೋತ್ಪತ್ತಿಯ ಸಮಯದಲ್ಲಿ ಸರಿಯಾಗಿ ತಮ್ಮ ಹಳೆಯ ಸಂಗಾತಿಯನ್ನೇ ಹುಡುಕಿಕೊಂಡು ಒಂದೇ ಜಾಗಕ್ಕೆ ಬರುತ್ತವೆ. ಸಾವಿರಾರು ಪೆಂಗ್ವಿನ್‌ಗಳ ಗುಂಪಿನಲ್ಲಿ ತನ್ನ ಸಂಗಾತಿಯನ್ನು ಗುರುತಿಸುವುದು ಸುಲಭವಲ್ಲ. ಅದಕ್ಕಾಗಿ ಪ್ರತಿಯೊಂದು ಜೋಡಿಯು ಒಂದು ವಿಶಿಷ್ಟವಾದ ‘ಧ್ವನಿ’ಯನ್ನು ಮಾಡುತ್ತದೆ. ಆ ಪ್ರೀತಿಯ ಕರೆಯನ್ನು ಕೇಳಿದ ತಕ್ಷಣ ಸಂಗಾತಿಗಳು ಒಬ್ಬರನ್ನೊಬ್ಬರು ಗುರುತಿಸಿ ಒಂದಾಗುತ್ತಾರೆ.

ಪೆಂಗ್ವಿನ್‌ಗಳ ಪ್ರೇಮದಲ್ಲಿ ಸಮಾನತೆ ಇದೆ. ಹೆಣ್ಣು ಪೆಂಗ್ವಿನ್ ಮೊಟ್ಟೆ ಇಟ್ಟ ಮೇಲೆ ಆಹಾರಕ್ಕಾಗಿ ಸಮುದ್ರಕ್ಕೆ ಹೋದಾಗ, ಗಂಡು ಪೆಂಗ್ವಿನ್ ಆ ಮೊಟ್ಟೆಯನ್ನು ತನ್ನ ಪಾದಗಳ ಮೇಲೆ ಇಟ್ಟುಕೊಂಡು, ಚಳಿಯಿಂದ ರಕ್ಷಿಸಿ ಕಾಪಾಡುತ್ತದೆ. ಈ ಸಮಯದಲ್ಲಿ ಗಂಡು ಪೆಂಗ್ವಿನ್ ತಿಂಗಳುಗಟ್ಟಲೆ ಏನನ್ನೂ ತಿನ್ನದೆ ತನ್ನ ಮರಿಗಾಗಿ ಕಾಯುತ್ತದೆ.ಪೆಂಗ್ವಿನ್‌ಗಳು ಪರಸ್ಪರ ಪ್ರೀತಿಯನ್ನು ತೋರಿಸಲು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂತೆ ಕಾಣುತ್ತವೆ ಮತ್ತು ಕೊಕ್ಕಿನಿಂದ ಪರಸ್ಪರರ ರೆಕ್ಕೆಗಳನ್ನು ಸ್ವಚ್ಛಗೊಳಿಸುತ್ತವೆ . ಇದು ಅವುಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಪೆಂಗ್ವಿನ್‌ಗಳು ಪಕ್ಷಿಗಳ ಗುಂಪಿಗೆ ಸೇರಿದರೂ ಇವುಗಳಿಗೆ ಆಕಾಶದಲ್ಲಿ ಹಾರಲು ಬರುವುದಿಲ್ಲ. ಆದರೆ, ಇವುಗಳ ರೆಕ್ಕೆಗಳು ಸಮುದ್ರದಲ್ಲಿ ‘ಈಜುರೆಕ್ಕೆ’ (Flippers) ಗಳಂತೆ ಕೆಲಸ ಮಾಡುತ್ತವೆ. ಇವು ನೀರಿನ ಅಡಿಯಲ್ಲಿ ಹಾರುತ್ತಿರುವಂತೆ ವೇಗವಾಗಿ ಈಜಬಲ್ಲವು!

ಇದನ್ನೂ ಓದಿ: ವಿಧವೆಯರಿಗೆ ಗುಡ್​​​ ನ್ಯೂಸ್ ನೀಡಿದ ರಾಜ್ಯ ಸರ್ಕಾರ​​​: ಈಗಲೇ ಅರ್ಜಿ ಸಲ್ಲಿಸಿ, 3 ಲಕ್ಷ ರೂ. ವರೆಗೆ ಹಣ ಪಡೆಯಿರಿ

ನೈಸರ್ಗಿಕ ‘ಟುಕ್ಸೆಡೊ’ ಉಡುಪು

ಪೆಂಗ್ವಿನ್‌ಗಳ ಮೈಬಣ್ಣ ಕಪ್ಪು ಮತ್ತು ಬಿಳಿಯಿರುತ್ತದೆ. ಇದು ಕೇವಲ ಸ್ಟೈಲ್ ಒಂದೇ ಅಲ್ಲ, ಇದು ಅವುಗಳ ರಕ್ಷಾಕವಚ, ಮೇಲೆ ಕಪ್ಪು ಇರುವುದರಿಂದ, ಸಮುದ್ರದ ಮೇಲಿನಿಂದ ನೋಡುವ ಶತ್ರುಗಳಿಗೆ ಅವು ನೀರಿನ ಆಳದ ಕತ್ತಲೆಯಂತೆ ಕಾಣುತ್ತವೆ. ಕೆಳಗೆ ಬಿಳಿ ಇರುವುದರಿಂದ, ನೀರಿನ ಒಳಗಿನಿಂದ ನೋಡುವ ಶತ್ರುಗಳಿಗೆ ಅವು ಮೇಲಿನ ಆಕಾಶದ ಬೆಳಕಿನಂತೆ ಕಾಣುತ್ತವೆ.

ಉಪ್ಪುನೀರು ಕುಡಿಯಬಲ್ಲವು!

ಪೆಂಗ್ವಿನ್‌ಗಳು ಸಮುದ್ರದ ಉಪ್ಪುನೀರನ್ನು ಕುಡಿಯುತ್ತವೆ. ಇವುಗಳ ಕಣ್ಣಿನ ಹತ್ತಿರ ಒಂದು ವಿಶೇಷವಾದ ಗ್ರಂಥಿ (Supraorbital gland) ಇರುತ್ತದೆ. ಇದು ರಕ್ತದಲ್ಲಿರುವ ಹೆಚ್ಚುವರಿ ಉಪ್ಪನ್ನು ಸೋಸಿ, ಅದನ್ನು ಮೂಗಿನ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.ಪೆಂಗ್ವಿನ್‌ಗಳಿಗೆ ಹಲ್ಲುಗಳಿರುವುದಿಲ್ಲ. ಆದರೆ ಇವುಗಳ ಬಾಯಿ ಮತ್ತು ನಾಲಿಗೆಯ ಮೇಲೆ ಮುಳ್ಳಿನಂತಹ ರಚನೆಗಳಿರುತ್ತವೆ. ಇವು ಜಾರುವ ಮೀನುಗಳನ್ನು ಗಟ್ಟಿಯಾಗಿ ಹಿಡಿದು ನೇರವಾಗಿ ನುಂಗಲು ಸಹಾಯ ಮಾಡುತ್ತವೆ.

ಪೆಂಗ್ವಿನ್‌ಗಳು ನಡೆಯುವಾಗ ತುಂಬಾ ನಿಧಾನ. ಹಾಗಾಗಿ ಇವುಗಳು ಮಂಜಿನ ಮೇಲೆ ವೇಗವಾಗಿ ಚಲಿಸಲು ತಮ್ಮ ಹೊಟ್ಟೆಯ ಮೇಲೆ ಮಲಗಿ ಜಾರುತ್ತವೆ. ಇದನ್ನು ‘ಟೊಬೊಗ್ಯಾನಿಂಗ್’ ಎಂದು ಕರೆಯಲಾಗುತ್ತದೆ. ಇದು ನೋಡಲು ತುಂಬಾ ಮುದ್ದಾಗಿರುತ್ತದೆ. ಹೆಚ್ಚಿನ ವನ್ಯಜೀವಿಗಳು ಮನುಷ್ಯರನ್ನು ಕಂಡು ಓಡಿಹೋಗುತ್ತವೆ. ಆದರೆ ಪೆಂಗ್ವಿನ್‌ಗಳು ಭೂಮಿಯ ಮೇಲೆ ತಮಗಿಂತ ದೊಡ್ಡ ಶತ್ರುಗಳನ್ನು ನೋಡಿಲ್ಲದ ಕಾರಣ, ಮನುಷ್ಯರನ್ನು ಕಂಡರೆ ಹೆದರುವುದಿಲ್ಲ. ಕೆಲವೊಮ್ಮೆ ತಾವಾಗಿಯೇ ಮನುಷ್ಯರ ಹತ್ತಿರ ಬರುತ್ತವೆ!

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today: ಬೆಳ್ಳಿ ಬೆಲೆ ಕಿಲೋಗೆ 3.70 ಲಕ್ಷ ರೂ; ಇಲ್ಲಿದೆ ದರಪಟ್ಟಿ – Kannada News | Gold Price Today on 27th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 27: ಚಿನ್ನಕ್ಕಿಂತ ಬಹಳ ವೇಗವಾಗಿ ಹೆಚ್ಚುತ್ತಿರುವ ಬೆಳ್ಳಿಯ ಬೆಲೆ (Silver Rates) ಇಂದು ಮಂಗಳವಾರ ಹೊಸ ದಾಖಲೆ ಸ್ಥಾಪಿಸಿದೆ. ಗ್ರಾಮ್​ಗೆ ಬರೋಬ್ಬರಿ 10 ರೂ ಹೆಚ್ಚಿದೆ. ಬೆಂಗಳೂರಿನಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 3.70 ಲಕ್ಷ ರೂಗೆ ಏರಿದೆ. ಚೆನ್ನೈ ಮೊದಲಾದ ಮಾರುಕಟ್ಟೆಯಲ್ಲಿ ಇದರ ಬೆಲೆ 3.87 ಲಕ್ಷ ರೂಗೆ ಹೋಗಿದೆ. ಚಿನ್ನದ ಬೆಲೆ ವಿದೇಶಗಳಲ್ಲಿ ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 37,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 37,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 38,700 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 27ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,195 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,845 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,146 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 370 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,195 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,845 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 370 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,845 ರೂ
  • ಚೆನ್ನೈ: 14,960 ರೂ
  • ಮುಂಬೈ: 14,845 ರೂ
  • ದೆಹಲಿ: 14,860 ರೂ
  • ಕೋಲ್ಕತಾ: 14,845 ರೂ
  • ಕೇರಳ: 14,845 ರೂ
  • ಅಹ್ಮದಾಬಾದ್: 14,850 ರೂ
  • ಜೈಪುರ್: 14,860 ರೂ
  • ಲಕ್ನೋ: 14,860 ರೂ
  • ಭುವನೇಶ್ವರ್: 14,845 ರೂ

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ ಇನ್ನೂ 5 ವರ್ಷ ವಿಸ್ತರಣೆ; ಈ ಸ್ಕೀಮ್​ನಲ್ಲಿ ಪಿಂಚಣಿ ಪಡೆಯುವುದು ಹೇಗೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 630 ರಿಂಗಿಟ್ (14,620 ರುಪಾಯಿ)
  • ದುಬೈ: 565.50 ಡಿರಾಮ್ (14,126 ರುಪಾಯಿ)
  • ಅಮೆರಿಕ: 158.50 ಡಾಲರ್ (14,538 ರುಪಾಯಿ)
  • ಸಿಂಗಾಪುರ: 199.90 ಸಿಂಗಾಪುರ್ ಡಾಲರ್ (14,460 ರುಪಾಯಿ)
  • ಕತಾರ್: 564 ಕತಾರಿ ರಿಯಾಲ್ (14,193 ರೂ)
  • ಸೌದಿ ಅರೇಬಿಯಾ: 575 ಸೌದಿ ರಿಯಾಲ್ (14,064 ರುಪಾಯಿ)
  • ಓಮನ್: 60.25 ಒಮಾನಿ ರಿಯಾಲ್ (14,353 ರುಪಾಯಿ)
  • ಕುವೇತ್: 46.34 ಕುವೇತಿ ದಿನಾರ್ (13,393 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 370 ರೂ
  • ಚೆನ್ನೈ: 387 ರೂ
  • ಮುಂಬೈ: 370 ರೂ
  • ದೆಹಲಿ: 370 ರೂ
  • ಕೋಲ್ಕತಾ: 370 ರೂ
  • ಕೇರಳ: 387 ರೂ
  • ಅಹ್ಮದಾಬಾದ್: 370 ರೂ
  • ಜೈಪುರ್: 370 ರೂ
  • ಲಕ್ನೋ: 370 ರೂ
  • ಭುವನೇಶ್ವರ್: 387 ರೂ
  • ಪುಣೆ: 370

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ – Kannada News | Death Threat allegation on Kavya Gowda husband by family member

‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ (Kavya Gowda) ಅವರ ಕುಟುಂಬದ ಗಲಾಟೆ ಬೀದಿಗೆ ಬಂದಿದೆ. ಕಾವ್ಯಾ ಗೌಡ ಹಾಗೂ ಅವರ ಸಂಬಂಧಿಕರು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಕಿರಿಕ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾವ್ಯಾ ಮೇಲೆ ಸಂಬಂಧಿ ಪ್ರೇಮಾ ಅವರು ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ. ‘ಕಾವ್ಯಾ ಪತಿ ಸೋಮಶೇಖರ್ ಅವರು ನನ್ನ ತಂಗಿ ಮೇಲೆ ಹಲ್ಲೆ ಮಾಡಿದ್ದಾರೆ. ಕೊಲೆ ಬೆದರಿಕೆ (Death Threat) ಮತ್ತು ರೇಪ್ ಬೆದರಿಕೆ ಹಾಕಿದ್ದಾರೆ. ಈಗ ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾವ್ಯಾ ಗೌಡ ಅವರು ನಮ್ಮನ್ನು ಮನೆಯಿಂದ ಹೊರಗೆ ಹಾಕಬೇಕು ಎಂಬ ಕಾರಣಕ್ಕೆ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ’ ಎಂದು ಪ್ರೇಮಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!: ವಿಜಯಪುರ ರಾಬರಿ ಕೇಸ್​​ಗೆ ಹೊಸ ಟ್ವಿಸ್ಟ್​​ – Kannada News | Vijayapura Robbery Case Takes New Turn: Accused Targeted Another Shop but Robbed Bhumika Jewellers

ವಿಜಯಪುರ, ಜನವರಿ 27: ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿನ ಭೂಮಿಕಾ ಜ್ಯುವೆಲರಿ ಶಾಪ್ ದರೋಡೆ ಪ್ರಕರಣ ಸಂಬಂಧ ಅಚ್ಚರಿಯ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ದರೋಡೆಕೋರರು ರಾಬರಿ ಮಾಡಲು ಪ್ಲ್ಯಾನ್​​ ಮಾಡಿಕೊಂಡು ಬಂದಿದ್ದ ಬಂಗಾರದ ಅಂಗಡಿಯೇ ಬೇರೆಯಾಗಿತ್ತು. ಆದರೆ ಅಲ್ಲಿ ಹೆಚ್ಚು ಜನರಿದ್ದ ಕಾರಣ ಯೂಟರ್ನ್ ಮಾಡಿಕೊಂಡು ಬಂದು ಈ ಶಾಪ್​​ಗೆ ನುಗ್ಗಿದ್ದಾರೆ ಎಂಬುದು ಗೊತ್ತಾಗಿದೆ. ವಿಜಯಪುರದಿಂದ ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಹಲಸಂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು, ಗ್ರಾಮ ಪಂಚಾಯಿತಿ ಬಳಿಯ ರಸ್ತೆಯಿಂದ ಗ್ರಾಮದ ಮಧ್ಯ ಭಾಗದಲ್ಲಿರುವ ಜ್ಯುವೆಲರಿ ಶಾಪ್​​ಗಳತ್ತ ಚಿತ್ತನೆಟ್ಟಿದ್ದರು. ಭೂಮಿಕಾ ಜ್ಯುವೆಲರಿ ಶಾಪ್ ದಾಟಿ ಬೇರೆ ಬಂಗಾರದ ಅಂಗಡಿಗಳತ್ತ ಮೊದಲು ಹೋಗಿದ್ದರು. ಬಳಿಕ ಹಿಂದಿರುಗಿ ಬಂದು ಗನ್​​ ತೋರಿಸಿ ಭೂಮಿಕಾ ಜ್ಯುವೆಲರಿ ಶಾಪ್​​ನಲ್ಲಿ ದರೋಡೆ ನಡೆಸಿದ್ದಾರೆ ಎನ್ನಲಾಗಿದೆ. ಬಂದ ಮಾರ್ಗದ ಮೂಲಕವೇ ಆರೋಪಿಗಳು ಎಸ್ಕೇಪ್​​ ಆಗಿದ್ದು, ದರೋಡೆಕೋರರ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

10ನೇ ದಿನ ಉತ್ಖನನ ವೇಳೆ ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ! – Kannada News | Lakkundi Gold treasure: one More artefact found during excavations

ಗದಗ, (ಜನವರಿ 27): ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್‌ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10 ಅಡಿ ಆಳ ತೆಗೆದಿರುವುದರಿಂದ A-1 ಬಾಕ್ಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಆತಂಕ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು B-1 ಬ್ಲಾಕ್‌ನಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದ್ದು, ಕಲ್ಲು ಬೀಳುವ ಭೀತಿ ಉಂಟಾಗಿದೆ. A-ಬ್ಲಾಕ್‌ನಲ್ಲಿ ಬಂಡೆಗಳ ಸಮೂಹ ಇರುವುದರಿಂದ ಉತ್ಖನನ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಪರಿಸ್ಥಿತಿಗಳ ನಡುವೆ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 10ನೇ ದಿನವಾದ ಇಂದು (ಜನವರಿ 27) ಉತ್ಖನನ ವೇಳೆ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಹೌದು..ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆಯಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ ಉತ್ಖನನ ಕಾರ್ಯ ಅಪಾಯದ ಹಂತಕ್ಕೆ: ಅಧಿಕಾರಿ, ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ – Kannada News | Lakkundi Excavation Site in Danger: Fears Grow Over Possible stones and Soil Collapse

ಗದಗ, ಜನವರಿ 27: ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ (excavation) ಕಾರ್ಯ ಇದೀಗ 10ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಕೆಲ ಪ್ರಾಚ್ಯಾವಶೇಷಗಳು ಪತ್ತೆ ಆಗಿವೆ. ಈ ಮಧ್ಯೆ ಉತ್ಖನನ ಕಾರ್ಯ ಅಪಾಯದ ಹಂತ ತಲುಪಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಜೀವದ ಹಂಗು ತೊರೆದು ಸಿಬ್ಬಂದಿಗಳು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಾಕ್ಸ್‌ನಲ್ಲಿ ಬಿರುಕು: ಮಣ್ಣು ಕುಸಿಯುವ ಆತಂಕ 

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್‌ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10 ಅಡಿ ಆಳ ತೆಗೆದಿರುವುದರಿಂದ A-1 ಬಾಕ್ಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಆತಂಕ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು B-1 ಬ್ಲಾಕ್‌ನಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದ್ದು, ಕಲ್ಲು ಬೀಳುವ ಭೀತಿ ಉಂಟಾಗಿದೆ. A-ಬ್ಲಾಕ್‌ನಲ್ಲಿ ಬಂಡೆಗಳ ಸಮೂಹ ಇರುವುದರಿಂದ ಉತ್ಖನನ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಪರಿಸ್ಥಿತಿಗಳ ನಡುವೆ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಏಳು ಹೆಡೆ ಸರ್ಪದ ಕಾವಲು?

ಸ್ಥಳದಲ್ಲಿನ ಬಿರುಕುಗಳು, ದೊಡ್ಡ ಕಲ್ಲುಗಳಿಂದ ಉತ್ಖನನ ಕಾರ್ಯಕ್ಕೆ ಸವಾಲಾಗಿದೆ. ಸಿಬ್ಬಂದಿಗಳ ಸುರಕ್ಷತೆಗೆ ತಕ್ಷಣ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ. ಈ ಕುರಿತು ಟಿವಿ9 ವರದಿ ಮಾಡಿದ್ದು, ಲಕ್ಕುಂಡಿ ಪ್ರಾಧಿಕಾರದ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ಮಾಡಿದ್ದಾರೆ.

ಉತ್ಖನನ ಸ್ಥಳದಲ್ಲಿ ನಾಲ್ಕು ಬಾಕ್ಸ್ ಮಾಡಿ ಶೋಧ ಕಾರ್ಯ ನಡೆಯುತ್ತಿದ್ದು, ಇದೀಗ ನಾಲ್ಕು ಬಾಕ್ಸ್ ಮದ್ಯದ ಮಣ್ಣು ಪೂರ್ಣವಾಗಿ ತೆಗೆದು, ಒಂದು ಬಾಕ್ಸ್ ಮಾಡಲಾಗುತ್ತಿದೆ. ಹೀಗಾಗಿ ಬಾಕ್ಸ್ ಗಳ ಮದ್ಯದ ಮಣ್ಣು ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎರಡು ದಿನದಲ್ಲಿ ಮಣ್ಣು ತೆರವು ಮಾಡಲಾಗುವುದು.

ಉತ್ಖನ ಬಗ್ಗೆ ಮಾಜಿ ಸಚಿವ ಎಸ್ ಎಸ್ ಪಾಟೀಲ್ ಅಪಸ್ವರ 

ಇಂದು ಲಕ್ಕುಂಡಿ‌ ಉತ್ಖನ ಸ್ಥಳಕ್ಕೆ ಮಾಜಿ ಸಚಿವ ಎಸ್ ಎಸ್ ಪಾಟೀಲ್​​ ಭೇಟಿ ನೀಡಿದ್ದು, ಉತ್ಖನ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮಣ್ಣು ಅಗೆಯುವುದು ಬಿಟ್ಟು ಯಂತ್ರಗಳಿಂದ ಮಣ್ಣು ತೆಗೆಯಬೇಕು. ಭೂಮಿಯಲ್ಲಿನ‌ ಸಂಪತ್ತು ಪತ್ತೆ ಮಾಡುವ‌ ಯಂತ್ರದಿಂದ ಶೋಧ ಮಾಡಬೇಕು ಎಂದಿದ್ದಾರೆ. ಲಕ್ಕುಂಡಿ ಉತ್ಸವ ಮಾಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಲಕ್ಕುಂಡಿ ಉತ್ಸವ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

ಉತ್ಖನನ ವೇಳೆ ಪತ್ತೆಯಾಗಿದ್ದೇನು?

ಬೆಟಗೇರಿಯಲ್ಲಿ ರಾಷ್ಟ್ರಕೂಟರ ಕಾಲದ ವೀರಗಲ್ಲುಗಳು ಪತ್ತೆ ಆಗಿದ್ದು, ಯುದ್ಧದ ಭೀಕರತೆಯನ್ನ ಸಾರಿ ಸಾರಿ ಹೇಳುತ್ತಿವೆ. ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಅಪರೂಪದ ಬೃಹತ್ ಆಕಾರದ ವೀರಗಲ್ಲುಗಳು. ಭೂಲೋಕ, ಮಧ್ಯಲೋಕ, ದೇವಲೋಕದ ಕಥೆ ಹೇಳುತ್ತಿವೆ.

9, 10 ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಯುದ್ದಗಳು ಆಗಿರುವ ಕುರುಹುಗಳು ಪತ್ತೆಯಾಗಿವೆ. ಇನ್ನು ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಉತ್ಖನನ ಮಾಡುವ ವೇಳೆ ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆ ಆಗಿದೆ.

ಇದನ್ನೂ ಓದಿ: ಗದಗ: ಚಿನ್ನದ ನಿಧಿ ಒಪ್ಪಿಸಿದ ಲಕ್ಕುಂಡಿಯ ಕುಟುಂಬಕ್ಕೆ ಗಣರಾಜ್ಯೋತ್ಸವ ದಿನ ಭರ್ಜರಿ ಉಡುಗೊರೆ ನೀಡಿದ ಸರ್ಕಾರ

ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಸದ್ಯ ಉತ್ಖನನ ಜಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಲ್ಕು ಬಾಕ್ಸ್​ಗಳ ಮದ್ಯದ ಮಣ್ಣು ತೆರವು ಮಾಡಿ, ಒಂದೇ ಬಾಕ್ಸ್ ಮಾಡಿ, ಉತ್ಖನನ ಮುಂದುವರಿಸಲು ಅಧಿಕಾರಿಗಳು ಪ್ಲ್ಯಾನ್​ ಮಾಡಿದ್ದಾರೆ. ಉತ್ಖನನ ವೇಳೆ ಏನೆಲ್ಲಾ ಸಂಪತ್ತು ಸಿಗಲಿದೆ ಎನ್ನುವದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

30 ರಿಂದ 35 ನೇ ವಯಸ್ಸಿನಲ್ಲಿ ಬಿಪಿ ಬರುವುದನ್ನು ತಡೆಯಲು ಈ ಟ್ರಿಕ್ಸ್ ಪಾಲಿಸಿ ನೋಡಿ! – Kannada News | Causes of Hypertension in Youth & How to Manage

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಾಣಬಹುದು. ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡದ ಸಮಸ್ಯೆ (Hypertension) ಕಂಡುಬರುತ್ತಿರುವುದು ಬಹಳ ಕಳವಳಕಾರಿ ವಿಷಯ. ಅದರಲ್ಲಿಯೂ 30 ರಿಂದ 35 ವರ್ಷ ವಯಸ್ಸಿನವರಲ್ಲಿ ರಕ್ತದೊತ್ತಡ ಅಂದರೆ ಬಿಪಿ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರಾದರೂ ಕೂಡ, ನಾವು ದಿನನಿತ್ಯ ಸೇವನೆ ಮಾಡುವ ಆಹಾರ, ಹದಗೆಟ್ಟ ಜೀವನಶೈಲಿ, ಮತ್ತು ಮಾನಸಿಕ ಒತ್ತಡ ಈ ಸಮಸ್ಯೆಯ ಹೆಚ್ಚಳಕ್ಕೆ ಗಮನಾರ್ಹ ಅಂಶವಾಗಿದೆ. ಅದರಲ್ಲಿಯೂ ಅಧಿಕ ರಕ್ತದೊತ್ತಡ ಬಹಳ ಅಪಾಯಕಾರಿಯಾಗಿದ್ದು ಇದನ್ನು ನಿಯಂತ್ರಿಸದಿದ್ದರೆ, ಅದು ಹೃದಯಾಘಾತದಿಂದ ಮಿದುಳಿನ ಪಾರ್ಶ್ವವಾಯುವಿನವರೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ರಕ್ತದೊತ್ತಡ ಹೆಚ್ಚಾಗುವುದಕ್ಕೆ ಕಾರಣವೇನು, ಇದನ್ನು ಸುಲಭವಾಗಿ ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ಜಿಟಿಬಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಅಜಿತ್ ಕುಮಾರ್ ಹೇಳುವ ಪ್ರಕಾರ, ಬಿಪಿ ಅಥವಾ ಅಧಿಕ ರಕ್ತದೊತ್ತಡ ಮೌನವಾಗಿ ದೇಹದ ಮೇಲೆ ದಾಳಿ ಮಾಡುವಂತಹ ಕಾಯಿಲೆ. ಏಕೆಂದರೆ ಇದರ ಆರಂಭಿಕ ಲಕ್ಷಣಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಲಕ್ಷಣಗಳು ಕಂಡುಬಂದರೂ ಸಹ ಜನರಿಗೆ ಅವುಗಳ ಬಗ್ಗೆ ತಿಳಿದಿರುವುದಿಲ್ಲ. ಪರಿಣಾಮವಾಗಿ, ಈ ರೋಗವು ಕ್ರಮೇಣ ದೇಹದ ಮೇಲೆ ದಾಳಿ ಮಾಡುತ್ತದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯಿಂದ ದೂರವಿರಲು ಪ್ರತಿಯೊಬ್ಬರೂ ಕೂಡ ಮೊದಲು ಅಧಿಕ ರಕ್ತದೊತ್ತಡದ ಲಕ್ಷಣಗಳ ಬಗ್ಗೆ ತಿಳಿಯುವುದು ಮತ್ತು ಅವು ಕಂಡುಬಂದಾಗ ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಅಧಿಕ ರಕ್ತದೊತ್ತಡ ಕಂಡು ಬರುವ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು:

  • ತಲೆನೋವು
  • ತಲೆಯಲ್ಲಿ ಭಾರ
  • ತಲೆತಿರುಗುವಿಕೆ
  • ಆತಂಕ
  • ಕಣ್ಣುಗಳು ಆಗಾಗ ಮಸುಕಾಗುವುದು
  • ಆಯಾಸ

ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಲಹೆಗಳು:

  • ಮೊದಲನೆಯದಾಗಿ ನೀವು ಸೇವನೆ ಮಾಡುವ ಆಹಾರದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.
  • ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬೇಡಿ.
  • ಜಂಕ್ ಫುಡ್ ಮತ್ತು ಪ್ಯಾಕ್ ಮಾಡಿದ ಆಹಾರಗಳನ್ನು ಸೇವನೆ ಮಾಡಬೇಡಿ.
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
  • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.
  • ಪ್ರತಿದಿನ ವ್ಯಾಯಾಮ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು? – Kannada News | Actress Kavya Gowda says her relative threatens her

‘ರಾಧಾ ರಮಣ’ ಧಾರಾವಾಹಿ ನಟಿ ಕಾವ್ಯಾ ಗೌಡ (Kavya Gowda) ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದ್ದು, ನಟಿ ಕಾವ್ಯಾಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾತನಾಡಿರುವ ನಟಿ ಕಾವ್ಯಾ, ‘ಇದು ಮೊದಲ ಬಾರಿ ಅಲ್ಲ ಎರಡನೇ ಬಾರಿ ಹೀಗೆ ಹಲ್ಲೆ ಆಗುತ್ತಿದೆ. ನನ್ನ ಪತಿಗೆ ಹಿಂದೆಯಿಂದ ಚಾಕು ಹಾಕಲಾಯ್ತು, ನನ್ನ ಮಗಳಿಗೂ ಹಲ್ಲೆ ಮಾಡಲಾಯ್ತು. ನನಗೆ ಅತ್ಯಾಚಾರ ಮಾಡುವುದಾಗಿ ನೇರವಾಗಿ ಬೆದರಿಕೆ ಹಾಕಲಾಗಿದೆ. ಹೀಗಿರುವಾಗ ನಾನು ಕಾನೂನಿನ ಮೊರೆ ಹೋಗಲೇ ಬೇಕಾಯ್ತು. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ’ ಎಂದಿದ್ದಾರೆ ಕಾವ್ಯಾ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ! – Kannada News | Owner Dies In Himachal Pradesh Snowfall Loyal Pet Dog Pitbull Guard Bodies For 3 Days

ಚಂಬಾ, ಜನವರಿ 27: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿ ತನಗೆ ಕೊಂಚ ಪ್ರೀತಿ ತೋರಿದರೂ, ಒಂದು ತುತ್ತು ಅನ್ನ ಹಾಕಿದರೂ ಅವರನ್ನು ಸಾಯೋವರೆಗೂ ಮರೆಯುವುದಿಲ್ಲ. ಹಿಮಾಚಲ ಪ್ರದೇಶದಲ್ಲಿ ಒಂದು ವಿಚಿತ್ರವಾದ ಮನ ಕಲಕುವ ಘಟನೆ ನಡೆದಿದೆ. ಹಿಮಾಚಲ ಪ್ರದೇಶಕ್ಕೆ ಹೋಗಿದ್ದ ಅಣ್ಣ-ತಮ್ಮಂದಿರಿಬ್ಬರು ತಮ್ಮ ಜೊತೆಗೆ ಸಾಕುನಾಯಿಯಾದ ಪಿಟ್ ಬುಲ್ ಅನ್ನು ಕೂಡ ಕರೆದುಕೊಂಡು ಹೋಗಿದ್ದರು. ಅಲ್ಲಿ ರೀಲ್ಸ್ ಮಾಡುತ್ತಿದ್ದಾಗ ಹಿಮಪಾತವಾಗಿತ್ತು. ಇದರಿಂದ ಆ ಇಬ್ಬರು ಹಿಮದಡಿ (Snowfall) ಸಿಲುಕಿ ಮೃತಪಟ್ಟಿದ್ದರು.

ಹಿಮಪಾತದ ನಂತರ ನಾಪತ್ತೆಯಾಗಿದ್ದ ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಕಸಿನ್​ಗಳಿಗಾಗಿ ಹುಡುಕಾಟ ನಡೆದಿತ್ತು. ಈ ಘಟನೆ ನಡೆದು 3 ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ. ವಿಚಿತ್ರವೆಂದರೆ ಆ ಮೃತದೇಹಗಳ ಪಕ್ಕದಲ್ಲಿ ಅವರ ಮುದ್ದಿನ ಸಾಕುನಾಯಿ ಪಿಟ್​ಬುಲ್ 72 ಗಂಟೆಗಳಿಂದ ಕಾಯುತ್ತಾ ನಿಂತಿತ್ತು. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಇದನ್ನೂ ಓದಿ: Video: ಊಟ, ನಿದ್ರೆ ಬಿಟ್ಟು ಮಾಲೀಕರ ಶವದ ಬಳಿ ಕುಳಿತ ಶ್ವಾನ, ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ

ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಇಬ್ಬರು ಯುವಕರು ಭರ್ಮೋರ್‌ನ ಭರ್ಮಣಿ ದೇವಾಲಯದ ಬಳಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ನಾಪತ್ತೆಯಾಗಿದ್ದರು. ಕೆಟ್ಟ ಹವಾಮಾನ ಪರಿಸ್ಥಿತಿಗಳ ನಡುವೆ ಹಿಮದಲ್ಲಿ ಸಿಲುಕಿ ಅವರು ನಂತರ ಸಾವನ್ನಪ್ಪಿದ್ದಾರೆ ಎಂದು ಕಂಡುಬಂದಿದೆ. ರಕ್ಷಣಾ ತಂಡಗಳು ಮತ್ತು ಸ್ಥಳೀಯ ಗ್ರಾಮಸ್ಥರು 4 ದಿನಗಳ ನಂತರ ಆ ಸ್ಥಳಕ್ಕೆ ತಲುಪಿದಾಗ, ಅವರು ಕಂಡ ದೃಶ್ಯವು ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು. ಪಿಯೂಷ್‌ನ ದೇಹವು ಹಿಮದ ಪದರಗಳ ಅಡಿಯಲ್ಲಿ ಹೂತುಹೋಗಿತ್ತು, ಆದರೆ ಅವರ ಪಕ್ಕದಲ್ಲಿಯೇ ಅವನ ಸಾಕು ನಾಯಿ ಕಾವಲಾಗಿ ಕುಳಿತಿತ್ತು.

ರಕ್ಷಣಾ ತಂಡವು ಆ ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸಿದಾಗ, ಆ ನಾಯಿ ಆರಂಭದಲ್ಲಿ ಆಕ್ರಮಣಕಾರಿಯಾಯಿತು. ಅಪರಿಚಿತರು ಅದರ ಮಾಲೀಕರಿಗೆ ಹಾನಿ ಮಾಡಲು ಬಂದಿದ್ದಾರೆ ಎಂದು ಅದು ಭಾವಿಸಿತು. ಆದರೆ, ಕೊನೆಗೂ ಆ ನಾಯಿಯ ಮನವೊಲಿಸಿ ಆ ಮೃತದೇಹಗಳನ್ನು ಹೊರಗೆ ತೆಗೆಯಲಾಯಿತು. ಈ ಹೃದಯಸ್ಪರ್ಶಿ ಘಟನೆ ಅಲ್ಲಿ ಸೇರಿದ್ದವರ ಕಣ್ಣಲ್ಲಿ ನೀರು ತುಂಬಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link