Category Archives: Blog

Your blog category

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!: ಮೈ ರೋಮಾಂಚನಗೊಳಿಸುವ ವಿಡಿಯೋ

ಅಹಮದಾಬಾದ್, ಮೇ,31: ಐಪಿಎಲ್ 2026 ರ ಫೈನಲ್ ಮಹಾಸಮರದ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಬ್ಬರದ ನಡುವೆಯೇ, ಕ್ರೀಡಾಂಗಣದಲ್ಲಿದ್ದ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳನ್ನು ಆಧ್ಯಾತ್ಮಿಕ ಲೋಕಕ್ಕೆ ಕೊಂಡೊಯ್ಯುವ ಭವ್ಯ ದೃಶ್ಯವೊಂದು ಸಾಕ್ಷಿಯಾಗಿದೆ. ಪಂದ್ಯದ ಮಧ್ಯಂತರದ ಬಿಡುವಿನ ವೇಳೆಯಲ್ಲಿ ಇಡೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ‘ಶಿವ ತಾಂಡವ ಸ್ತೋತ್ರ’ ಭರ್ಜರಿಯಾಗಿ ಮೊಳಗಿದ್ದು, ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಲ್ಲಿ ಮೈರೋಮಾಂಚನ ಸೃಷ್ಟಿಸಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯದ ಮೊದಲ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಹೈ-ವೋಲ್ಟೇಜ್ ಧ್ವನಿವರ್ಧಕಗಳಲ್ಲಿ ಕಿವಿಗೆ ಇಂಪಾಗುವ ಹಾಗೂ ಜೋಶ್ ತುಂಬುವ ‘ಶಿವ ತಾಂಡವ’ ಪ್ಲೇ ಮಾಡಲಾಯಿತು. ಇದರ ಬೆನ್ನಲ್ಲೇ ಸ್ಟೇಡಿಯಂನಲ್ಲಿದ್ದ ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಕ್ರಿಕೆಟ್ ಅಭಿಮಾನಿಗಳು ಒಕ್ಕೊರಲಿನಿಂದ ‘ಹರ ಹರ ಮಹಾದೇವ’ ಎಂದು ಜಯಘೋಷಗಳನ್ನು ಕೂಗಲು ಆರಂಭಿಸಿದರು. ಕ್ರೀಡಾಂಗಣದ ಮೂಲೆ ಮೂಲೆಗಳಲ್ಲೂ ಭಗವಾನ್ ಶಿವನ ಆರಾಧನೆಯ ಮಂತ್ರಗಳು ಪ್ರತಿಧ್ವನಿಸುತ್ತಿದ್ದ ಈ ಅದ್ಭುತ ಕ್ಷಣದ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಸನ್ಸೇಷನ್ ಸೃಷ್ಟಿಸಿವೆ. ಕ್ರಿಕೆಟ್ ಮೈದಾನವೊಂದು ಕಣ್ಣುಮುಚ್ಚಿ ತೆರೆಯುವುದರೊಳಗೆ ಆಧ್ಯಾತ್ಮಿಕ ಸಾಗರದಂತೆ ಬದಲಾದ ದೃಶ್ಯವನ್ನು ಕಂಡು ನೆಟ್ಟಿಗರು “ಗೂಸ್‌ಬಂಪ್ಸ್ ಗ್ಯಾರಂಟಿ!” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲೇ ಇಂತಹದೊಂದು ಭಕ್ತಿ ಪ್ರಧಾನ ಜ್ವರ ಉತ್ತುಂಗಕ್ಕೆ ತಲುಪಿದ್ದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ. ಈ ವಿಡಿಯೋವನ್ನು ಎಕ್ಸ್​​ನಲ್ಲಿ ಭಾರತೀಯ ಕ್ರಿಕೆಟ್​​​​​ ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಂಡತಿ ಮಾಡುವ ಈ ತಪ್ಪುಗಳು ದಾಂಪತ್ಯ ಜೀವನವನ್ನೇ ಹಾಳು ಮಾಡಬಹುದು

ಗಂಡ ಹೆಂಡತಿಯ ಸಂಬಂಧ (relationship) ಸುಂದರ ಮಾತ್ರವಲ್ಲ ಪವಿತ್ರವಾದುದು ಕೂಡ. ಈ ಸಂಬಂಧ ಜೀವನಪರ್ಯಂತ ಸುಂದರವಾಗಿರಲು ಗಂಡ-ಹೆಂಡತಿ ಒಬ್ಬರನ್ನೊಬ್ಬರು ಪ್ರೀತಿಸುವುದರ ಜೊತೆಗೆ ಸಂಗಾತಿಯನ್ನು ಅರ್ಥಮಾಡಿಕೊಂಡು ಅವರ ಆದ್ಯತೆಗಳಿಗೂ ಬೆಲೆ ಕೊಡುವುದು ಮುಖ್ಯವಾಗುತ್ತದೆ. ಅದೇ ಕೆಲವೊಂದು ತಪ್ಪು ತಿಳುವಳಿಕೆಗಳು, ಮನಸ್ತಾಪಗಳು ಸುಂದರ ಸಂಬಂಧವನ್ನು ಹಾಳು ಮಾಡುತ್ತದೆ. ಅದರಲ್ಲೂ ಹೆಂಡತಿಯ ಈ ನಡವಳಿಕೆಗಳು ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತದೆ. ಆದ್ದರಿಂದ ವಿವಾಹಿತ ಸ್ತ್ರೀಯರು ತಮ್ಮ  ಈ ಕೆಲವೊಂದು ನಡವಳಿಕೆಗಳ ಬಗ್ಗೆ ಆದಷ್ಟು ಜಾಗೂರಕರಾಗಿರಬೇಕು.

ಹೆಂಡತಿಯ ಈ ನಡವಳಿಕೆಗಳು ದಾಂಪತ್ಯ ಜೀವನವನ್ನು ಹಾಳುಮಾಡಬಹುದು:

ಪ್ರತಿಯೊಂದು ಸಣ್ಣ ವಿಷಯಕ್ಕೂ ಅನುಮಾನ ವ್ಯಕ್ತಪಡಿಸುವುದು: ಪ್ರತಿಯೊಂದು ವಿಚಾರದಲ್ಲೂ ಗಂಡನ ಮೇಲೆ ಅನುಮಾನ ವ್ಯಕ್ತಪಡಿಸಬಹುದು. ಈ ಅನುಮಾನ ಎಂಬ ಸಣ್ಣ ಹುಳ ಸುಂದರ ಸಂಸಾರವನ್ನೇ ಹಾಳು ಮಾಡುತ್ತದೆ. ಹಾಗಾಗಿ ಸುಮ್ಮಸುಮ್ಮನೆ ಅನುಮಾನ ಪಟ್ಟು ಗಂಡನ ಜೊತೆ ಜಗಳವಾಡಬಾರದು. ಅನುಮಾನ ಪಟ್ಟರೆ ಸಂಬಂಧದಲ್ಲಿ ಅಂತರ ಇನ್ನಷ್ಟು ಹೆಚ್ಚಾಗುತ್ತದೆ. ಅದೇ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಸಂಸಾರವೂ ತುಂಬಾನೇ ಚೆನ್ನಾಗಿರುತ್ತದೆ.

ಗಂಡನನ್ನು ಇತರರೊಂದಿಗೆ ಹೋಲಿಸುವುದು:  ಕೆಲವು  ಮಹಿಳೆಯರು ತಮ್ಮ ಗಂಡನನ್ನು ಇತರರೊಂದಿಗೆ ಹೋಲಿಸುತ್ತಾರೆ. ಹೌದು ಅವನು ತನ್ನ ಹೆಂಡತಿಗೆ ಗಿಫ್ಟ್‌ ತಂದುಕೊಟ್ಟ, ಹೆಂಡತಿಯನ್ನು ಟ್ರಿಪ್‌ ಕರೆದುಕೊಂಡು ಹೋದ, ಆದ್ರೆ ನೀವು ನನಗಾಗಿ ಏನು ಮಾಡಿಲ್ಲ ಅಂತೆಲ್ಲಾ ಇತರ ಪುರುಷರೊಂದಿಗೆ ಗಂಡನನ್ನು ಹೋಲಿಸುತ್ತಾರೆ.  ಹೆಂಡತಿಯರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಈ ಅಭ್ಯಾಸವನ್ನು ಗಂಡಂದಿರು ಇಷ್ಟಪಡುವುದಿಲ್ಲ, ಇದು ಪ್ರೀತಿಯ ಸಂಬಂಧವನ್ನು ಹಾಳುಮಾಡುತ್ತದೆ. ಅಲ್ಲದೆ ಯಾವುದೇ ಪುರುಷನು ಸಹ ತನ್ನ ಹೆಂಡತಿ ತನ್ನ ಮುಂದೆ ಇನ್ನೊಬ್ಬ ಪುರುಷನನ್ನು ಹೊಗಳುವುದನ್ನು ಸಹಿಸುವುದಿಲ್ಲ. ಇದು ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತದೆ.

ಇದನ್ನೂ ಓದಿ: ಮಹಿಳೆಯರೇ… ಗಾಜಿನ ಧರಿಸೋದು ಎಷ್ಟು ಪ್ರಯೋಜನಕಾರಿ ಗೊತ್ತೇ?

ಅತಿಯಾದ ಬೇಡಿ: ಕೆಲವು ಮಹಿಳೆಯರು ದೊಡ್ಡ ಮನೆ ಬೇಕು, ಚಿನ್ನ ಬೇಕು, ಶಾಪಿಂಗ್‌ ಮಾಡಲು ಸಾಕಷ್ಟು ಹಣ ಬೇಕು ಎಂದೆಲ್ಲಾ ಗಂಡನ ಮುಂದೆ ಬೇಡಿಕೆ ಇಡುತ್ತಾರೆ. ಈ ಅತಿಯಾದ ಬೇಡಿಕೆ ಅತಿಯಾಸೆ ಗಂಡನ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುವುದಲ್ಲದೆ, ಹಣದ ವಿಚಾರವಾಗಿ ಜಗಳಗಳು ನಡೆಯಲು ಕಾರಣವಾಗುತ್ತದೆ. ಇದು ಸಂಬಂಧದ ಮಧುರತೆಯನ್ನು ಹಾಳು ಮಾಡುತ್ತದೆ.

ಇದಲ್ಲದೆ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡೋದು, ಕೆಲಸದಿಂದ ಬಂದ ತಕ್ಷಣ ಪ್ರೀತಿಯ ಮಾತುಗಳನ್ನಾಡದೆ ಕಿರಿಕಿರಿ ಮಾಡೋದು ಇವೆಲ್ಲವೂ ದಾಂಪತ್ಯ ಜೀವನದ ಅಂತರವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ

ಬೆಂಗಳೂರು, ಮೇ 31: ಇಡೀ ಕರುನಾಡು ಆರ್‌ಸಿಬಿ ಗೆಲುವಿಗಾಗಿ ಪ್ರಾರ್ಥಿಸುತ್ತಿದೆ. ಗೆಲುವು ಸಂಭ್ರಮಾಚರಣೆಗೆ ಬೆಂಗಳೂರಿಗರು ಸಜ್ಜಾಗಿದ್ದಾರೆಯಾದರೂ ರೂಲ್ಸ್‌ಗಳು ಅಡ್ಡಿ ಆಗಿವೆ. ಈ ಮಹತ್ವದ ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸಂಭ್ರಮಾಚರಣೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆರ್ಸಿಬಿ ಅಭಿಮಾನಿಗಳ ಹೆಚ್ಚಿನ ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮತ್ತು ನಿಯಮಬಾಹಿರ ಸಂಭ್ರಮಾಚರಣೆಗಳನ್ನು ನಿಯಂತ್ರಿಸಲು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದಾದ್ಯಂತ ಪೊಲೀಸರಿಂದ ತೀವ್ರ ನಿಗಾ ವಹಿಸಲಾಗಿದ್ದು, ವಿಶೇಷವಾಗಿ ಎಂ.ಜಿ. ರೋಡ್, ಚರ್ಚ್‌ಸ್ಟ್ರೀಟ್ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳಲ್ಲಿ ನಿರಂತರ ಗಸ್ತು ತಿರುಗಲಾಗುತ್ತಿದೆ. ಐಪಿಎಲ್ ಫೈನಲ್ ಪಂದ್ಯದ ನಂತರ ಅಭಿಮಾನಿಗಳು ನಿಯಮ ಮೀರಿ ಸಂಭ್ರಮಾಚರಣೆಯಲ್ಲಿ ತೊಡಗಿದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಪಬ್ ಮತ್ತು ಬಾರ್‌ಗಳಿರುವ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕದಲ್ಲೂ ಲಾಂಚ್ ಆಯ್ತು ರಣ್ವೀರ್ ಸಿಂಗ್ ಒಡೆತನದ ವೋಡ್ಕಾ: ಬೆಲೆ ಎಷ್ಟು?

ರಣ್ವೀರ್ ಸಿಂಗ್, ಬಾಲಿವುಡ್​​ನ (Bollywood) ಸ್ಟಾರ್ ನಟ. ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್ ಅವರಿಗೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಮರು ಜೀವವನ್ನೇ ನೀಡಿವೆ. ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಭರ್ಜರಿ ಯಶಸ್ಸು ರಣ್ವೀರ್ ಅವರನ್ನು ಮತ್ತೊಮ್ಮೆ ಬೇಡಿಕೆಯ ನಟರನ್ನಾಗಿ ಮಾಡಿದೆ. ರಣ್ವೀರ್ ಸಿಂಗ್ ಸ್ಟಾರ್ ನಟ ಆಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ ಹೌದು. ಅವರು ಹಲವಾರು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಅವರು ಹೊಸ ಮದ್ಯದ ಉದ್ಯಮವನ್ನು ಸಹ ಪ್ರಾರಂಭಿಸಿದ್ದು, ಕೆಲ ತಿಂಗಳ ಹಿಂದೆಯಷ್ಟೆ ಕರ್ನಾಟಕದಲ್ಲೂ ತಮ್ಮ ಉದ್ಯಮ ಲಾಂಚ್ ಮಾಡಿದ್ದಾರೆ.

ರಣ್ವೀರ್ ಸಿಂಗ್ ಈಗಾಗಲೇ ‘ಬೋಲ್ಡ್ ಕೇರ್’ ಮತ್ತು ‘ಸೂಪರ್ ಯೂ’ ಉದ್ಯಮಗಳನ್ನು ಹೊಂದಿದ್ದು, ಎರಡೂ ಸಹ ಲಾಭದಾಯಕವಾಗಿವೆ. ‘ಬೋಲ್ಡ್ ಕೇರ್’ ಮೂಲಕ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ರಣ್ವೀರ್ ಸಿಂಗ್ ಮಾರಾಟ ಮಾಡುತ್ತಿದ್ದಾರೆ. ಸೂಪರ್ ಯೂ ಮೂಲಕ ದೇಹಾರೋಗ್ಯಕ್ಕೆ ಸಂಬಂಧಿಸಿದ ಪ್ರೋಟೀನ್, ಕ್ರಿಯೇಟೀನ್, ಪ್ರೋಟೀನ್ ಬಾರ್ ಇನ್ನೂ ಕೆಲವು ಸಪ್ಲಿಮೆಂಟ್​​ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದೀಗ ರಣ್ವೀರ್ ಸಿಂಗ್ ಅವರು ಮದ್ಯದ ಉದ್ಯಮಕ್ಕೆ ಕಾಲಿರಿಸಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಣ್ವೀರ್ ಸಿಂಗ್ ಅವರು ‘ರಂಗೀಲಾ’ ಹೆಸರಿನ ವೋಡ್ಕಾ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದಾರೆ. ಎಬಿಡಿ ಪ್ರೈವೇಟ್ ಲಿಮಿಟೆಡ್ ಜೊತೆ ಕೈಜೋಡಿಸಿದ ‘ರಂಗೀಲಾ’ ವೋಡ್ಕಾ ಲಾಂಚ್ ಮಾಡಿದ್ದಾರೆ. ಈ ವೋಡ್ಕಾವನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಕರ್ನಾಟಕದಲ್ಲೂ ಲಾಂಚ್ ಮಾಡಲಾಗಿದ್ದು, ರಂಗೀಲಾ ವೋಡ್ಕಾ ಪ್ರಸ್ತುತ ಭಾರತದಾದ್ಯಂತ ಚೆನ್ನಾಗಿ ಮಾರಾಟ ಆಗುತ್ತಿದೆ. ಕರ್ನಾಟಕದಲ್ಲಿ ಈ ರಂಗೀಲಾ ವೋಡ್ಕಾದ 750 ಎಂಎಲ್ ಬಾಟಲಿ ಬೆಲೆ 2400 ರೂಪಾಯಿಗಳು ಇವೆಯಂತೆ.

ಇದನ್ನೂ ಓದಿ:ರಾಜ್ ಬಿ. ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾ ಮಹಿಳಾ ವಿರೋಧಿ ಚಿತ್ರ ಅಲ್ಲ; ಸಿಕ್ತು ಸ್ಪಷ್ಟನೆ

ಇನ್ನುಳಿದಂತೆ ರಣ್ವೀರ್ ಸಿಂಗ್ ಮೇಲೆ, ಬಾಲಿವುಡ್​ನ ನೌಕರರ ಸಂಘ ನಿಷೇಧ ಹೇರಿದೆ. ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದು, ನಷ್ಟ ಪರಿಹಾರ ತುಂಬಿಕೊಡಲು ನಿರಾಕರಿಸಿರುವ ಕಾರಣಕ್ಕೆ ನಿರ್ಮಾಪಕ ಫರ್ಹಾನ್ ಅಖ್ತರ್, ರಣ್ವೀರ್ ವಿರುದ್ಧ ದೂರು ನೀಡಿದ್ದರು. ಇದೇ ಕಾರಣಕ್ಕೆ ಇದೀಗ ಹಿಂದಿ ಸಿನಿಮಾ ನೌಕರರ ಸಂಘ ರಣ್ವೀರ್ ವಿರುದ್ಧ ಅನಧಿಕೃತ ನಿಷೇಧ ಹೇರಿದೆ. ಪ್ರಸ್ತುತ ರಣ್ವೀರ್ ಸಿಂಗ್ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ ಆದರೆ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಅವರ ಮುಂದಿನ ಸಿನಿಮಾನಲ್ಲಿ ರಣ್ವೀರ್ ಅವರೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB vs GT Final: ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಕ್ರಿಕೆಟ್ ದೇವರೂ ಫಿದಾ..! ಏನಂದ್ರು ನೋಡಿ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಫೈನಲ್ (IPL 2026 Final) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ, ಆರ್​ಸಿಬಿಯ (GT vs RCB) ಸಾಂಘಿಕ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ಈ ಪಂದ್ಯದಲ್ಲಿ ಆರ್​ಸಿಬಿಯ ಪ್ರತಿಯೊಬ್ಬ ಬೌಲರ್​ಗಳು ಕರಾರುವಕ್ಕಾದ ದಾಳಿ ನಡೆಸಿದರು. ಹೀಗಾಗಿ ತವರಿನ ಲಾಭ ಪಡೆಯುವಲ್ಲಿ ವಿಫಲವಾದ ಗುಜರಾತ್ 156 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಗುಜರಾತ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಆರ್​ಸಿಬಿ ಬೌಲಿಂಗ್ ವಿಭಾಗಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ತಮ್ಮ ಮ್ಯಾಜಿಕಲ್ ಸ್ಪಿನ್ ಮೂಲಕ ಗುಜರಾತ್ ತಂಡದ ಅನುಭವಿ ಬ್ಯಾಟರ್ ಜೋಸ್ ಬಟ್ಲರ್ (Jos Buttler) ಅವರನ್ನು ಔಟ್ ಮಾಡಿದ ಕೃನಾಲ್ ಪಾಂಡ್ಯ (Krunal Pandya) ಅವರ ಬೌಲಿಂಗ್​ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಟ್ಲರ್ ಬಲಿ ಪಡೆದ ಕೃನಾಲ್

ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಕೃನಾಲ್ ಪಾಂಡ್ಯ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಅವರ ವಿಕೆಟ್ ಪಡೆದರು. ಗುಜರಾತ್ ಇನ್ನಿಂಗ್ಸ್‌ನ 13 ನೇ ಓವರ್ ಅನ್ನು ಕೃನಾಲ್ ಪಾಂಡ್ಯ ಬೌಲಿಂಗ್ ಮಾಡಿದರು. ಇತ್ತ ಸ್ಟ್ರೈಕ್​ನಲ್ಲಿದ್ದ ಜೋಸ್ ಬಟ್ಲರ್ ಈಗಾಗಲೇ ಕ್ರೀಸ್‌ನಲ್ಲಿ ನೆಲೆಸಿದ್ದರು. ಓವರ್‌ನ ಮೊದಲ ಎಸೆತದಲ್ಲೇ ಬಟ್ಲರ್ ದೊಡ್ಡ ಶಾಟ್ ಹೊಡೆಯಲು ಮುಂದಾಗಿ ಕ್ರೀಸ್​ನಿಂದ ಹೊರಬಂದರು.

ಈ ಹಂತದಲ್ಲಿ ಜಾಣತನ ತೊರಿದ ಕೃನಾಲ್, ಚೆಂಡನ್ನು ಸ್ವಲ್ಪ ವೇಗವಾಗಿ ಯಾರ್ಕರ್ ಬೌಲ್ ಮಾಡಿದರು. ಹೀಗಾಗಿ ಬಟ್ಲರ್​ಗೆ ಆ ಚೆಂಡನ್ನು ಆಡಲು ಸಾಧ್ಯವಾಗಲಿಲ್ಲ. ಇತ್ತ ಸ್ಟಂಪ್ಸ್ ಹಿಂದೆ ಇದ್ದ ಜಿತೇಶ್ ಶರ್ಮಾ ಯಾವುದೇ ತಪ್ಪು ಮಾಡದೆ ಬಟ್ಲರ್ ಅವರನ್ನು ಸ್ಟಂಪ್ ಮಾಡಿದರು. ಹೀಗಾಗಿ ಬಟ್ಲರ್ 23 ಎಸೆತಗಳಲ್ಲಿ ಕೇವಲ 18 ರನ್ ಬಾರಿಸಲಷ್ಟೇ ಶಕ್ತವಾದರು. ಬಟ್ಲರ್ ಅವರ ಈ ವಿಕೆಟ್ ಗುಜರಾತ್ ತಂಡದ ಸ್ಕೋರ್ ಬೋರ್ಡ್​ಗೆ ದೊಡ್ಡ ಬ್ರೇಕ್ ಹಾಕಿತು.

ಕೃನಾಲ್ ಬೌಲಿಂಗ್​ಗೆ ಸಚಿನ್ ಮೆಚ್ಚುಗೆ

ಇದೀಗ ಕೃನಾಲ್ ಅವರ ಈ ಜಾಣ್ಮೆಯ ಬೌಲಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ, ‘ಕೃನಾಲ್ ಪಾಂಡ್ಯ ಅವರಿಂದ ಎಂತಹ ಅದ್ಭುತ ಎಸೆತ! ಕೊನೆಯವರೆಗೂ ಬ್ಯಾಟ್ಸ್‌ಮನ್‌ನ ಪಾದಚಲನೆಯನ್ನು ಗಮನಿಸಿ ಚೆಂಡನ್ನು ಬೌಲ್ ಮಾಡಿದರು. ಇದರೊಂದಿಗೆ ಜೋಸ್ ಬಟ್ಲರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ತನಿಖೆ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಚಿಕ್ಕಬಳ್ಳಾಪುರ ಎಸ್​​ಪಿ

ಬೆಂಗಳೂರು, ಮೇ.31: ಬಾಗೇಪಲ್ಲಿ ತಾಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಗೆ ಈ ದುರ್ಘಟನೆ ನಡೆದಿದೆ. ಗಾರೆ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಹತ್ತು ಜನರನ್ನು (ಒಬ್ಬ ಚಾಲಕ ಮತ್ತು ಒಂಬತ್ತು ಮಹಿಳೆಯರು) ಕರೆದೊಯ್ಯುತ್ತಿದ್ದ ಆಟೋಗೆ, ಅತಿ ವೇಗವಾಗಿ ಬಂದ ಥಾರ್ ವಾಹನವು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮದಿಂದ, ಆಟೋ ವಾಹನವು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿ ಮತ್ತು ಥಾರ್ ವಾಹನಗಳ ನಡುವೆ ಸಿಲುಕಿ ಸ್ಯಾಂಡ್‌ವಿಚ್‌ನಂತೆ ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ ಐದು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ಉಳಿದ ಐದು ಜನರನ್ನು ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪುವುದರೊಂದಿಗೆ, ಒಟ್ಟು ಸಾವಿನ ಸಂಖ್ಯೆ ಆರುಕ್ಕೆ ಏರಿದೆ. ಲಾರಿ ಚಾಲಕ ಮತ್ತು ಥಾರ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಈ ಘಟನೆ ಬಗ್ಗೆ ಪೊಲೀಸ್​​ ಅಧಿಕಾರಿ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ಸುದ್ದಿಗಳನ್ನು ಓದಲಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಮಳೆಯಿಂದ ಕಾಂಪೌಂಡ್​ ಕುಸಿದು ಇಬ್ಬರು ಕಾರ್ಮಿಕರ ಸಾವು

ನೆಲಮಂಗಲ, ಮೇ 31: ಕಳೆದ ಎರಡು ದಿನಗಳಿಂದ ನಿರಂತರ ಮಳೆಗೆ (Rain) ಅವಘಡವೊಂದು ಸಂಭವಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಬೊಮ್ಮಶಟ್ಟಿಹಳ್ಳಿ ಗ್ರಾಮದಲ್ಲಿ ಮಳೆಯಿಂದ ಕಾಂಪೌಂಡ್​ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ಬೊಮ್ಮಶಟ್ಟಿಹಳ್ಳಿಯಲ್ಲಿ ದ್ಯಾಮಪ್ಪ ಮತ್ತು ಬಾಬುಲಾಲ್ ಮೃತರು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಳೆಗೆ ಮತ್ತೊಂದು ದುರಂತ
  • ಕೆಲಸ ಮಾಡುತ್ತಿದ್ದಾಗ ಗೋಡೆ ಕುಸಿದು ಕಾರ್ಮಿಕರ ಸಾವು
  • ಕಳೆದ 2 ದಿನಗಳಿಂದ ನಿರಂತರ ಮಳೆಗೆ ಕುಸಿದ ಗೋಡೆ

ನಡೆದಿದ್ದೇನು?

ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿದಿದೆ. ಇತ್ತ ಕಾರ್ಮಿಕರು ಪಟೇಲ್ ಎಂಬುವರಿಗೆ ಸೇರಿದ ಸೈಟ್‌ನಲ್ಲಿ ಗೋಡೆ ನಿರ್ಮಾಣದ ಕೆಲಸ ಮಾಡುತ್ತಿದ್ದರು. ಮಳೆಯಿಂದಾಗಿ ಕೆಲಸ ಮಾಡುತ್ತಿರುವಾಗಲೇ ಗೋಡೆ ಕುಸಿದು ಕಾರ್ಮಿಕರು ಇಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಮಳೆಗೆ ಆಟೋ ಚಾಲಕ ಬಲಿ

ದುರಂತ ನಂತರ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Published On – 9:47 pm, Sun, 31 May 26

Source link

ಬೆಂಗಳೂರಿನಲ್ಲಿ ರಾಜ್ಯಪಾಲರ ಸಂಚಾರಕ್ಕೆ 30 ನಿಮಿಷ ರಸ್ತೆ ಬ್ಲಾಕ್; ಟ್ರಾಫಿಕ್‌ನಲ್ಲಿ ಸಿಲುಕಿದ ಗರ್ಭಿಣಿ; ಸಾರ್ವಜನಿಕರ ಆಕ್ರೋಶ!

ವಿಐಪಿ ಸಂಸ್ಕೃತಿ , ರಾಜ್ಯಪಾಲರ ಸಂಚಾರ

ಬೆಂಗಳೂರು, ಮೇ.31: ರಾಜಧಾನಿ ಬೆಂಗಳೂರಿನಲ್ಲಿ ವಿಐಪಿ ಸಂಸ್ಕೃತಿ ಮತ್ತು ಅಧಿಕಾರಿಗಳ ಭದ್ರತೆಯ ಹೆಸರಿನಲ್ಲಿ ಸಾಮಾನ್ಯ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಘಟನೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಅಂಡರ್‌ಪಾಸ್ ನಿರ್ಮಾಣ ಕಾರ್ಯದಿಂದಾಗಿ ಉಸಿರುಗಟ್ಟುತ್ತಿರುವ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road), ಇಂದು ರಾಜ್ಯಪಾಲರ (Governor) ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ನರಕಸದೃಶ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಚಾರ ದಟ್ಟಣೆಯ ನಡುವೆ ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಸಾರ್ವಜನಿಕರ ಕಣ್ಣು ತೇವವಾಗುವಂತೆ ಮಾಡಿದೆ. ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ತಲುಪಿಸಲಾಗದೆ ಆ ವ್ಯಕ್ತಿ ನಡುರಸ್ತೆಯಲ್ಲೇ ತೀವ್ರ ಕಂಗಾಲಾಗಿದ್ದರು.

ಇದನ್ನೂ ಓದಿ: ಬೆಂಗಳೂರು ಜಂಗಲ್ ರಾಜ್‌ ಆಗಿ ಬದಲಾಗುತ್ತಿದೆ?: ಶಾಲೆಯ ಮುಂದೆಯೇ ಲಾಂಗ್ ಬೀಸಿದ ಪುಂಡರು!; ವಿಡಿಯೋ ವೈರಲ್!

“ಸಾಮಾನ್ಯ ಸಾರ್ವಜನಿಕರ ಹಾಗೂ ರೋಗಿಗಳ ಅನುಕೂಲ ಮತ್ತು ಜೀವವು ವಿಐಪಿಗಳ ಸೌಕರ್ಯದಷ್ಟೇ ಮುಖ್ಯವಾಗುವುದು ಯಾವಾಗ?” ಎಂದು ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಕಟುವಾಗಿ ಪ್ರಶ್ನಿಸಿದ್ದಾರೆ. ಅಂಡರ್‌ಪಾಸ್ ನಿರ್ಮಾಣ ಹಂತದಲ್ಲಿರುವ ಇಂತಹ ಸೂಕ್ಷ್ಮ ರಸ್ತೆಗಳಲ್ಲಿ ಗಣ್ಯರ ಸಂಚಾರಕ್ಕೆ ಗಂಟೆಗಟ್ಟಲೆ ಸಾರ್ವಜನಿಕರನ್ನು ತಡೆಯುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆಗಿ ಪ್ರಮಾಣವಚನ ದಿನವೇ ಕಾಂಗ್ರೆಸ್ ನೂತನ ಭವನ ಶಂಕುಸ್ಥಾಪನೆಗೆ ಡಿಕೆ ಶಿವಕುಮಾರ್ ಪ್ಲ್ಯಾನ್​

ಬೆಂಗಳೂರು, ಮೇ 31: ಜೂನ್​ 3ರಂದು ರಾಜ್ಯದ 25ನೇ ಸಿಎಂ ಆಗಿ ಡಿಕೆ ಶಿವಕುಮಾರ್​​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಟ್ಟಾಭಿಷೇಕಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಇದೇ ದಿನದಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲು ಡಿಕೆ ಶಿವಕುಮಾರ್​​ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಭವನದ ಶಂಕುಸ್ಥಾಪನೆಯನ್ನು ಆಯೋಜಿಸಲು ಸಿದ್ಧತೆಗಳು ನಡೆದಿವೆ. ಇನ್ನು ಪ್ರಮಾಣ ವಚನ ಸಮಾರಂಭಕ್ಕೆ ಎಲ್ಲ ನಾಯಕರಿಗೂ ಲೋಕಭವನದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪದಾಧಿಕಾರಿಗಳಿಗಾಗಿ ಕಾಂಗ್ರೆಸ್ ಭವನದ ಆವರಣದಲ್ಲಿ ವಿಶೇಷ ವೇದಿಕೆ ಮತ್ತು ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಅವರು ಪ್ರಮಾಣ ವಚನ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ರಾಹುಲ್ ಗಾಂಧಿ ಅವರ ಅನುಮೋದನೆ ದೊರೆತರೆ, ಈ ಕಾರ್ಯಕ್ರಮಗಳು ಜೂನ್ 3ರಂದು ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs GT Final: ಫೈನಲ್ ಪಂದ್ಯದಲ್ಲೂ ಆರ್​ಸಿಬಿಗೆ ಮೋಸ; 3ನೇ ಅಂಪೈರ್ ವಿರುದ್ಧ ಫ್ಯಾನ್ಸ್ ಆಕ್ರೋಶ

ಪ್ರತಿ ಐಪಿಎಲ್​ನಂತೆ ಈ ಬಾರಿಯ ಐಪಿಎಲ್ ಕೂಡ ವಿವಾದಗಳಿಂದ ಹೊರತಾಗಿರಲಿಲ್ಲ. ಈ ಆವೃತ್ತಿಯಲ್ಲೂ ಸಾಕಷ್ಟು ವಿವಾದಗಳು ಸೃಷ್ಟಿಯಾದವು. ಅದರಲ್ಲೂ ಮೂರನೇ ಅಂಪೈರ್​ ನೀಡಿದ ಕೆಲವೊಂದು ತೀರ್ಪುಗಳು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದವು. ಅದರಲ್ಲಿ ಪ್ರಮುಖವಾದದ್ದು, ಲೀಗ್ ಹಂತದಲ್ಲಿ ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದರ್ ನೀಡಿದ ಕ್ಯಾಚ್ ಅನ್ನು ಜೇಸನ್ ಹೊಲ್ಡರ್ ಹಿಡಿದ ರೀತಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಚೆಂಡು ಸ್ಪಷ್ಟವಾಗಿ ನೆಲಕ್ಕೆ ತಾಗಿದರೂ ಮೂರನೇ ಅಂಪೈರ್ ಅದನ್ನು ಔಟೆಂದು ತೀರ್ಪು ನೀಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಅದೇ ರೀತಿಯ ಕ್ಯಾಚ್ ಅನ್ನು ಆರ್​ಸಿಬಿ ಹಿಡಿದಿತ್ತು. ಆದರೆ ಅದನ್ನು ಮಾತ್ರ ನಾಟೌಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

Source link