Category Archives: Blog

Your blog category

ಕ್ಯಾಬಿನ್ ಕ್ರ್ಯೂ ಆಗಿದ್ದ ಧ್ರುವಂತ್; ವಿಮಾನದಲ್ಲಿ ನಿತ್ಯಾನಂದ ಭೇಟಿ ಆದಾಗ ಕೇಳಿದ್ದೇನು? – Kannada News | Bigg Boss Dhruvanth’s Viral Nithyananda Encounter: Ex Cabin Crew Past Revealed

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ (Dhruvanth) ಅವರು ಸಾಕಷ್ಟು ಗಮನ ಸೆಳೆದರು. ಅವರು ಫಿನಾಲೆ ತಲುಪುವುದಕ್ಕೂ ಮೊದಲು ಎಲಿಮಿನೇಟ್ ಆದರು. ಟಾಪ್ 7ರಲ್ಲಿ ಧ್ರುವಂತ್​​ಗೆ ಸ್ಥಾನ ಸಿಕ್ಕಿತ್ತು. ಧ್ರುವಂತ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಅವರು ನಿತ್ಯಾನಂದ ಜೊತೆ ಪ್ರಯಾಣ ಮಾಡಿದ್ದಾಗಿ ಹೇಳಿಕೊಂಡಿದ್ದರು. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ.

ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್​​ಗೆ ಧ್ರುವಂತ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಅವರು ತಾವು ಜೆಟ್ ಏರ್​ವೇಸ್ ಕ್ರ್ಯೂ ಆಗಿದ್ದಾಗಿನ ಅನುಭವ ಹಂಚಿಕೊಂಡಿದ್ದರು. ಹಲವು ದೇಶಗಳಿಗೆ ಪ್ರಯಾಣ ಮಾಡಿದ್ದರು ಧ್ರುವಂತ್. ಈ ವೇಳೆ ಧ್ರುವಂತ್​ ಅವರಿಗೆ ನಿತ್ಯಾನಂದ ಸಿಕ್ಕಿದ್ದರಂತೆ.

‘ನಾನು ಯಾವಾಗಲೂ ಫೇಸ್ ಆಫ್​ ದಿ ಕ್ಯಾಬಿನ್ ಆಗಿರುತ್ತಿದ್ದೆ. ನಾನು ಪ್ರಯಾಣ ಮಾಡುವಾಗ ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದ್ದೆ. ನಾನು ನಾಲ್ಕೂವರೆ ವರ್ಷ ಆ ಕ್ಷೇತ್ರದಲ್ಲಿ ಇದ್ದೆ. ಎಪಿಜೆ ಅಬ್ದುಲ್ ಕಲಾಂ, ರಾ ಏಜೆಂಟ್ಸ್ ಮೊದಲಾದವರು ಜೊತೆ ಪ್ರಯಾಣ ಮಾಡಿದ್ದೆ’ ಎಂದು ಧ್ರುವಂತ್ ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಸೀಸನ್ ಚಪ್ಪಾಳೆ ಬದಲಿಸಿದ ಬಗ್ಗೆ ಧ್ರುವಂತ್ ಮಾತು

‘ನಾನು ನಿತ್ಯಾನಂದ ಅವರ ಜೊತೆ ಪ್ರಯಾಣ ಮಾಡಿದ್ದೇನೆ. ದೆಹಲಿಯಿಂದ, ಕೊಚ್ಚಿಗೆ ಅವರು ಪ್ರಯಾಣ ಮಾಡುತ್ತಿದ್ದರು. ಬೆಳ್ಳುಳ್ಳಿ ಬೇಡ, ಈರುಳ್ಳಿ ಬೇಡ, ಅದು ಬೇಡ ಇದು ಬೇಡ ಎನ್ನುತ್ತಿದ್ದರು. ಬ್ರೆಡ್ ಇದೆ ಕೊಡಲ ಎಂದು ಕೇಳಿದೆ. ಅವರ ಸಹಾಯಕರು ಫುಡ್ ತಂದಿದ್ದರು. ಅದನ್ನೇ ಕೊಟ್ಟರು’ ಎಂದಿದ್ದಾರೆ ಧ್ರುವಂತ್.
ಧ್ರುವಂತ್ ಅವರು ನಾಲ್ಕೂವರೆ ವರ್ಷಗಳ ಕಾಲ ವಿಮಾನ ಕ್ಷೇತ್ರದಲ್ಲಿ ಇದ್ದರು. ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಬಿಗ್ ಬಾಸ್ ಮನೆಯಲ್ಲೂ ಈ ವಿಷಯ ಪ್ರಸ್ತಾಪ ಆಗಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು? – Kannada News | Arijit Singh Quits Playback Singing at 38: Discover His Income, Assets and Live Concert Fees

ಬಾಲಿವುಡ್‌ನ ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ (Arijith Singh) ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವರಿಗೆ ಈಗಿನ್ನೂ 38 ವರ್ಷ. ಇನ್ನುಮುಂದೆ ಅವರು ಯಾವುದೇ ಹೊಸ ಹಾಡುಗಳನ್ನು ಹಾಡೋದಿಲ್ಲ. ಬದಲಿಗೆ ಹಳೆಯ ಹಾಡುಗಳನ್ನು ವೇದಿಕೆ ಮೇಲೆ ಹಾಡುತ್ತಾರೆ. ಅವರ ಸಂಪತ್ತು ಎಷ್ಟು? ಪ್ರತಿ ಹಾಡಿಗೆ ಚಾರ್ಜ್ ಮಾಡೋದು ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ಅರಿಜಿತ್ ಸಿಂಗ್ ಅವರ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದು ಅವರ ಲಕ್ಷಾಂತರ ಅಭಿಮಾನಿಗಳ ದುಃಖ ತಂದಿದೆ. ಅವರು ಇಂಡಿಯನ್ ಐಡಲ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಹಿನ್ನೆಲೆ ಗಾಯಕರಾದರು. ಅವರಿಗೆ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.

15 ವರ್ಷಗಳ ವೃತ್ತಿಜೀವನದಲ್ಲಿ, ಅರಿಜಿತ್ ಸಿಂಗ್ ಪ್ರಪಂಚದಾದ್ಯಂತ ಕೋಟ್ಯಂತರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಹಿಂದಿ, ಕನ್ನಡ, ಬೆಂಗಾಲಿ, ಮರಾಠಿ ಮತ್ತು ತೆಲುಗು ಭಾಷೆಗಳಲ್ಲಿ 400 ಕ್ಕೂ ಹೆಚ್ಚು ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಅವರ ಆಸ್ತಿ 414 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಅರಿಜಿತ್ ಸಿಂಗ್ ಲೈವ್ ಕಾನ್ಸರ್ಟ್​​ಗಳಿಗೆ ಭಾರಿ ಶುಲ್ಕ ವಿಧಿಸುತ್ತಾರೆ. ಅವರ ವಾರ್ಷಿಕ ಆದಾಯ 70 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬ್ರಾಂಡ್ ಪ್ರಚಾರಗಳೂ ಸೇರಿವೆ. ಅರಿಜಿತ್ ಸಿಂಗ್ ಎರಡು ಗಂಟೆಗಳ ನೇರ ಪ್ರದರ್ಶನಕ್ಕೆ ಅಂದಾಜು 8 ಕೋಟಿ ಶುಲ್ಕ ವಿಧಿಸುತ್ತಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: 38ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್​ರ ಮುಂದಿನ ಯೋಜನೆ ಏನು?

ಮುಂಬೈನ ವರ್ಸೋವಾ ಪ್ರದೇಶದ ಕಟ್ಟಡವೊಂದರಲ್ಲಿ ಅರಿಜಿತ್ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಇದರ ಬೆಲೆ 9 ಕೋಟಿ ರೂಪಾಯಿ. ರಿಯಲ್ ಎಸ್ಟೇಟ್ ಹೂಡಿಕೆಗಳ ಹೊರತಾಗಿ, ಅವರು 1.8 ರಿಂದ 4 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ವೋಗ್, 57 ಲಕ್ಷ ರೂ. ನಿಂದ 1.5 ಕೋಟಿ ರೂ. ಮೌಲ್ಯದ ಹಮ್ಮರ್ H3 ಮತ್ತು ಮರ್ಸಿಡಿಸ್-ಬೆಂಜ್​ ಅನ್ನು ಸಹ ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಒಂದು ಚಿತ್ರಕ್ಕಾಗಿ ಹಾಡನ್ನು ಹಾಡಲು 8 ರಿಂದ 10 ಲಕ್ಷ ರೂ.ಗಳನ್ನು ಪಡೆಯುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮಗೆ ಆ ಕಾಯಿಲೆ ಇಲ್ಲ ಎನ್ನುತ್ತಾ ಆಲ್ಝೈಮರ್ ಹೆಸರನ್ನೇ ಮರೆತ ಟ್ರಂಪ್ – Kannada News | Health Denial Moment: Trump Stumbles While Rejecting Alzheimer’s Allegation

ಡೊನಾಲ್ಡ್​ ಟ್ರಂಪ್Image Credit source: Rising Kashmir

ವಾಷಿಂಗ್ಟನ್, ಜನವರಿ 28: ನನಗಂತೂ ಆ ಕಾಯಿಲೆ ಇಲ್ಲ ಎನ್ನುತ್ತಾ ‘ಆಲ್ಝೈಮರ್’ ಹೆಸರನ್ನೇ ಡೊನಾಲ್ಡ್​ ಟ್ರಂಪ್(Donald Trump) ಮರೆತ ಘಟನೆ ನಡೆದಿದೆ. ನ್ಯೂಯಾರ್ಕ್​ನ ಮ್ಯಾಗಜೀನ್​ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಟ್ರಂಪ್ ತಮ್ಮ ತಂದೆಗೆ ಇದ್ದ ರೋಗ ಆಲ್ಝೈಮರ್ ಬಗ್ಗೆ ಚರ್ಚಿಸುತ್ತಿದ್ದರು. ಆ ವೇಳೆ ತನಗೆ ಆ ಕಾಯಿಲೆ ಇಲ್ಲ ಎಂದು ಹೇಳಿಕೊಂಡರು. ಆದರೆ ಕೊನೆವರೆಗೂ ಅದ್ಯಾವ ಕಾಯಿಲೆ ಎಂದು ಹೇಳಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೂ ಸ್ವಲ್ಪ ಮುನ್ನ ಟ್ರಂಪ್ ದಾವೋಸ್‌ನಲ್ಲಿ ಮಾಡಿದ ಭಾಷಣದ ಸಮಯದಲ್ಲಿ ಗ್ರೀನ್‌ಲ್ಯಾಂಡ್ ಅನ್ನು ಐಲ್ಯಾಂಡ್​ನೊಂದಿಗೆ ಸೇರಿಸಿದ್ದ ಘಟನೆಯೂ ನಡೆದಿತ್ತು.

ಆಲ್ಝೈಮರ್ ಎಂಬ ಪದವನ್ನು ನೆನಪಿಸಿಕೊಳ್ಳಲು ಕಷ್ಟಪಡುತ್ತಿದ್ದರು, ಆದರೂ ಅವರು ಸ್ಮರಣಶಕ್ತಿ ಮತ್ತು ಚಿಂತನಾ ಕೌಶಲ್ಯವನ್ನು ನಾಶಪಡಿಸುವ ನರವೈಜ್ಞಾನಿಕ ಕಾಯಿಲೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದರು. ಟ್ರಂಪ್ ತಮ್ಮ ತಂದೆ ಫ್ರೆಡ್ ಟ್ರಂಪ್ ಅವರ ಅನಾರೋಗ್ಯದ ಬಗ್ಗೆ ಉಲ್ಲೇಖಿಸುತ್ತಾ ಆಲ್ಝೈಮರ್ ಎಂಬ ಪದವನ್ನು ನೆನಪಿಸಿಕೊಳ್ಳಲು ಹೆಣಗಾಡಿದರು.

ಅಷ್ಟೇ ಅಲ್ಲದೆ ತಾನು ಆ ಕಾಯಿಲೆಯನ್ನು ಹೊಂದಿಲ್ಲ ತಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ಒತ್ತಿ ಹೇಳಿದರು. ತನ್ನ ತಂದೆಗೂ ಆಲ್ಝೈಮರ್ ಬಿಟ್ಟು ಬೇರೆ ಯಾವ ಕಾಯಿಲೆಯೂ ಇರಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ಸುಮಾರು 86, 87 ವರ್ಷ ವಯಸ್ಸಿನಲ್ಲಿ ಅವರಿಗೊಂದು ಸಮಸ್ಯೆ ಕಾಣಿಸಿಕೊಂಡಿತ್ತು, ಅದಕ್ಕೇನೆಂದು ಕರೀತಾರೆ ಎಂದು ಟ್ರಂಪ್ ತಲೆ ಕೆಡಿಸಿಕೊಂಡು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಕಡೆಗೆ ನೋಡುತ್ತಾ ಕೇಳಿದ್ದಾರೆ ಅದಕ್ಕೆ ಲೀವಿಟ್ ಆಲ್ಝೈಮರ್ ಎಂದು ಉತ್ತರಿಸಿದರು.ಅದು ನನಗೆ ಇಲ್ಲ ಎಂದು ಟ್ರಂಪ್ ಉತ್ತರಿಸಿದ್ದಾರೆ.

ನ್ಯೂಯಾರ್ಕ್‌ನ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಫ್ರೆಡ್ ಟ್ರಂಪ್ ಅವರಿಗೆ 1990 ರ ದಶಕದ ಆರಂಭದಲ್ಲಿ ಆಲ್ಝೈಮರ್ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಹಲವಾರು ವರ್ಷಗಳ ಕಾಲ ಈ ಸ್ಥಿತಿಯೊಂದಿಗೆ ಬದುಕಿದ್ದರು ಮತ್ತು 1999 ರಲ್ಲಿ 93 ನೇ ವಯಸ್ಸಿನಲ್ಲಿ ನಿಧನರಾದರು.

ವಯಸ್ಸು ಹೆಚ್ಚುತ್ತಿದ್ದಂತೆ ಮರೆವು ಹೆಚ್ಚುತ್ತಲೇ ಹೋಗುತ್ತದೆ. ಅದು ಅತಿಯಾದರೆ ಜೀವನ ದುಸ್ತರವಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ಮರೆವಿನ ಕಾಯಿಲೆಯೇ ಅಲ್ಜೈಮರ್‌ . ಕೊನೆಗಾಲದಲ್ಲಿ ಕಾಡುವ ದೀರ್ಘಕಾಲೀನ ಸಮಸ್ಯೆ ಇದು. ಸ್ಮರಣಶಕ್ತಿ, ಬುದ್ಧಿಶಕ್ತಿ, ಕಲಿಕೆ, ಕ್ರಿಯಾಶೀಲತೆ,ಭಾಷಾ ಸಾಮರ್ಥ್ಯ‌,ಗ್ರಹಿಕೆ ಹಾಗೂ ಕ್ಷೀಣಿಸಿದ ನಿರ್ಧಾರ,ವಿವೇಚನ ಶಕ್ತಿ ಭಾವನೆ ಮತ್ತು ನಡವಳಿಕೆಯಲ್ಲಿ ಬದಲಾವಣೆ ಆಗುತ್ತದೆ.

ಅರೆಕ್ಷಣದಲ್ಲಿ ಈ ಹಿಂದೆ ಮಾಡಿದ್ದನ್ನು, ಮಾತಾಡಿದ್ದನ್ನು, ಹೇಳಿದ್ದನಿನು ಮರೆತು ಬಿಡುತ್ತಾರೆ. ವಸ್ತುವನ್ನು ಎಲ್ಲಿಯೋ ಇಟ್ಟು ಹುಡುಕಾಡುವುದು. ಹತ್ತಿರದವರ ಹೆಸರನ್ನು ಸಹ ಮರೆಯುವುದು. ಪದೇ ,ಪದೇಪದೆ ಕೇಳಿದ್ದನ್ನೆ ಕೇಳುವುದು. ದಾರಿ ತಪ್ಪಿ ಎಲ್ಲಿಯೋ ಹೋಗಿ ಬಿಡುವುದು.

ದಿನನಿತ್ಯದ ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದು, ಪದೇಪದೆ ಬದಲಾಗುವ ಮಾನಸಿಕ ಸ್ಥಿತಿ, ಶಬ್ದ ಮತ್ತು ದೃಶ್ಯಗಳನ್ನು ಗೃಹಿಸುವಿಕೆಯಲ್ಲಿ ತೊಂದರೆ, ಸರಿಯಾಗಿ ಮಾತನಾಡಲು ಆಗದೆ ಇರುವುದು, ನಿದ್ರೆ ಮತ್ತು ಹಸಿವೆಯಲ್ಲಿ ಬದಲಾವಣೆಗಳು ಆಗುತ್ತವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Maharashtra Plane Crash: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ – Kannada News | Maharashtra Plane Crash Aircraft Carrying Maha DCM Ajit Pawar crashes while landing in Baramati

ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಗಾಯಗಳು ಅಥವಾ ಸಾವುನೋವುಗಳ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಚರಣೆಗಳು ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ತುರ್ತು ಭೂಸ್ಪರ್ಶ ಆಗುವ ಸಂದರ್ಭದಲ್ಲಿ ವಿಮಾನ ಪತನವಾಗಿದೆ.

Published On – 9:39 am, Wed, 28 January 26

Source link

VIDEO: ಎರಡನೇ ಬಾರಿ 6 ಎಸೆತಗಳಲ್ಲಿ ಪಂದ್ಯ ಗೆಲ್ಲಿಸಿದ ಸೋಫಿ ಡಿವೈನ್ – Kannada News | Sophie Devine does it again for the Gujarat Giants

ವುಮೆನ್ಸ್ ಪ್ರೀಮಿಯರ್ ಲೀಗ್​ನ 17ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸೋಫಿ ಡಿವೈನ್. ವಡೋದರಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್​​ ಬಾರಿಸಿದ್ದರು.

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಓವರ್​ಗಳ ಮುಕ್ತಾಯದ ವೇಳೆಗೆ 146 ರನ್​ ಮಾತ್ರ ಕಲೆಹಾಕಿದ್ದರು. ಆದರೆ 19ನೇ ಓವರ್​ನಲ್ಲಿ ಸ್ನೇಹ್ ರಾಣಾ ಹಾಗೂ ನಿಕ್ಕಿ ಪ್ರಸಾದ್ ಜೊತೆಗೂಡಿ ಆ್ಯಶ್ಲಿ ಗಾರ್ಡ್ನರ್ ಓವರ್​ನಲ್ಲಿ ಬರೋಬ್ಬರಿ 20 ರನ್​ ಚಚ್ಚಿದರು.

ಪರಿಣಾಮ ಕೊನೆಯ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೇವಲ 9 ರನ್​ಗಳ ಅವಶ್ಯಕತೆ. ಈ ಹಂತದಲ್ಲಿ ನಾಯಕಿ ಗಾರ್ಡ್ನರ್ ಅನುಭವಿ ಆಲ್​ರೌಂಡರ್ ಸೋಫಿ ಡಿವೈನ್ ಕೈಗೆ ಚೆಂಡು ನೀಡಿದರು. ನಾಯಕಿನ ವಿಶ್ವಾಸವನ್ನು ಹುಸಿಗೊಳಿಸದ ಸೋಫಿ ಕೇವಲ 5 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಗುಜರಾತ್ ಜೈಂಟ್ಸ್ ತಂಡಕ್ಕೆ 3 ರನ್​ಗಳ ರೋಚಕ ಗೆಲುವು ತಂದುಕೊಟ್ಟರು.

ಕುತೂಹಲಕಾರಿ ವಿಷಯ ಎಂದರೆ ಸೋಫಿ ಡಿವೈನ್ ಹೀಗೆ ಕೊನೆಯ ಓವರ್​ನಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೋಫಿ ಡಿವೈನ್ ಕೊನೆಯ ಓವರ್​ನಲ್ಲಿ ಕೇವಲ 2 ರನ್ ನೀಡಿ 4 ರನ್​ಗಳ ಜಯ ತಂದುಕೊಟ್ಟಿದ್ದರು.

ಇದೀಗ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ತಂದು ಕೊಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಸೋಫಿ ಡಿವೈನ್ ಅವರನ್ನು ಹೊರತುಪಡಿಸಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಯಾವುದೇ ಬೌಲರ್ ಎರಡು ಬಾರಿ ಕೊನೆಯ ಓವರ್​ನಲ್ಲಿ 10 ಕ್ಕಿಂತ ಕಡಿಮೆ ರನ್ ನಿಯಂತ್ರಿಸಿ ಗೆಲುವು ತಂದು ಕೊಟ್ಟಿಲ್ಲ.

 

Source link

ಟ್ವಿಸ್ಟ್ ಟಿ20 ವಿಶ್ವಕಪ್​ನಲ್ಲಿ ಟ್ವಿಸ್ಟ್​: ಪಾಕಿಸ್ತಾನ್ ಬದಲಿಗೆ ಬಾಂಗ್ಲಾದೇಶ್​ಗೆ ಚಾನ್ಸ್​? – Kannada News | If Pakistan Pulls Out, Bangladesh will Return To T20 World Cup 2026

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡವು ಹೊರಗುಳಿದರೆ ಬಾಂಗ್ಲಾದೇಶ್ ತಂಡಕ್ಕೆ ಚಾನ್ಸ್ ಸಿಗಲಿದೆ. ಇಂತಹದೊಂದು ಟ್ವಿಸ್ಟ್ ನೀಡಲು ಐಸಿಸಿ ಮುಂದಾಗಿದೆ. ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಟ್ಟಿರುವುದನ್ನು ಖಂಡಿಸಿ ಪಾಕಿಸ್ತಾನ್ ತಂಡವು ಮುಂಬರುವ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ಬಾಂಗ್ಲಾದೇಶ್ ತಂಡಕ್ಕೆ ಮತ್ತೆ ಅವಕಾಶ ನೀಡಲು ಐಸಿಸಿ ಮುಂದಾಗಲಿದೆ. ಏಕೆಂದರೆ ಪಾಕಿಸ್ತಾನದ ಪಂದ್ಯಗಳು ನಡೆಯಬೇಕಿರುವುದು ಶ್ರೀಲಂಕಾದಲ್ಲಿ. ಅತ್ತ ಬಾಂಗ್ಲಾದೇಶ್ ತಂಡದ ಬೇಡಿಕೆ ಕೂಡ ಪಂದ್ಯಗಳ ಸ್ಥಳಾಂತರ. ಹೀಗಾಗಿ ಪಾಕ್ ತಂಡ ಹೊರಗುಳಿದರೆ ಐಸಿಸಿ ಬಾಂಗ್ಲಾದೇಶ್ ತಂಡಕ್ಕೆ ಮತ್ತೊಮ್ಮೆ ಅವಕಾಶ ನೀಡುವುದು ಖಚಿತ ಎನ್ನಲಾಗಿದೆ.

ಬಾಂಗ್ಲಾದೇಶ್ ಹೊರಬಿದ್ದಿದ್ದೇಕೆ?

ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡಲು ಬಾಂಗ್ಲಾದೇಶ್ ನಿರಾಕರಿಸಿದೆ. ಅಲ್ಲದೆ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಐಸಿಸಿಗೆ ಬೇಡಿಕೆಯಿಟ್ಟಿತ್ತು. ಆದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.

ಅಷ್ಟೇ ಅಲ್ಲದೆ ಭಾರತದಲ್ಲೇ ಟೂರ್ನಿ ಆಡುವಂತೆ ಸೂಚಿಸಿದೆ. ಈ ಸೂಚನೆಯ ಹೊರತಾಗಿಯೂ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ್ ಹಿಂದೇಟು ಹಾಕಿದೆ. ಹೀಗಾಗಿ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಕೈ ಬಿಟ್ಟು ಅವರ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ.

ಪಾಕಿಸ್ತಾನ್ ನಡೆಯೇನು?

ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಟ್ಟಿರುವುದನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಖಂಡಿಸಿದೆ. ಅಷ್ಟೇ ಅಲ್ಲದೆ ಬಾಂಗ್ಲಾಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಬೆದರಿಕೆಯೊಡ್ಡಿದೆ. ಈ ಬೆದರಿಕೆ ಬೆನ್ನಲ್ಲೇ ಐಸಿಸಿ, ಪಾಕ್ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ರವಾನಿಸಿದೆ.

ಟಿ20 ವಿಶ್ವಕಪ್​ನಿಂದ ಹಿಂದೆ ಸರಿದರೆ ಪಾಕ್ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್​​ನ ಮಾನ್ಯತೆ ರದ್ದು ಮಾಡುವುದಾಗಿ ಐಸಿಸಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಎಚ್ಚರಿಕೆ ನೀಡಿದೆ. ಇದಾಗ್ಯೂ ಪಿಸಿಬಿ ಭಂಡ ದೈರ್ಯ ಪ್ರದರ್ಶಿಸಲು ಮುಂದಾಗುತ್ತಿದೆ.

ಅಂದರೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವುದರ ಬಗ್ಗೆ ಇನ್ನೂ ಸಹ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಹೀಗಾಗಿಯೇ ಪಾಕ್​ಗೆ ಬಿಸಿ ಮುಟ್ಟಿಸಲು ಐಸಿಸಿ ಮತ್ತೊಂದು ಪ್ಲ್ಯಾನ್ ರೂಪಿಸಿದೆ.

ಪಾಕ್​ ಬದಲಿಗೆ ಬಾಂಗ್ಲಾ:

ಒಂದು ವೇಳೆ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಪಾಕ್ ತಂಡದ ಸ್ಥಾನದಲ್ಲಿ ಬಾಂಗ್ಲಾದೇಶ್ ತಂಡವನ್ನು ಕಣಕ್ಕಿಳಿಸಲು ಐಸಿಸಿ ಯೋಜನೆ ರೂಪಿಸಿದೆ. ಅಂದರೆ ಇಲ್ಲಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಬೇಡಿಕೆ ಇರುವುದು ತನ್ನ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರ ಮಾಡಬೇಕೆಂಬುದು.

ಅತ್ತ ಪಾಕಿಸ್ತಾನದ ಎಲ್ಲಾ ಪಂದ್ಯಗಳು ನಡೆಯಲಿರುವುದು ಶ್ರೀಲಂಕಾದಲ್ಲಿ. ಹೀಗಾಗಿ ಪಾಕ್ ತಂಡ ಹೊರಗುಳಿದರೆ ಬಾಂಗ್ಲಾದೇಶ್ ತಂಡವನ್ನು ಗ್ರೂಪ್-ಎ ಗೆ ಆಯ್ಕೆ ಮಾಡುವ ಮೂಲಕ ಶ್ರೀಲಂಕಾದಲ್ಲಿ ಕಣಕ್ಕಿಳಿಯಲು ಅನುವು ಮಾಡಿಕೊಡಲು ಐಸಿಸಿ ನಿರ್ಧರಿಸಿದೆ.

ಐಸಿಸಿಯ ಈ ಮಾಸ್ಟರ್ ಸ್ಟ್ರೋಕ್​ನಿಂದ ಕಂಗೆಟ್ಟಿರುವುದು ಪಾಕಿಸ್ತಾನ್. ಏಕೆಂದರೆ ಪಾಕಿಸ್ತಾನ್ ಟಿ20 ವಿಶ್ವಕಪ್​ನಿಂದ ಹೊರಗುಳಿಯಲು ನಿರ್ಧರಿಸಿರುವುದು ಬಾಂಗ್ಲಾದೇಶ್​ಗೆ ಬೆಂಬಲವಾಗಿ. ಈ ಬೆಂಬಲದೊಂದಿಗೆ ಪಾಕಿಸ್ತಾನ್ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಅದೇ ಸ್ಥಾನದಲ್ಲಿ ಬಾಂಗ್ಲಾದೇಶ್ ತಂಡವನ್ನು ಕಣಕ್ಕಿಳಿಸಲು ಐಸಿಸಿ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: 6,6,6,6,6,6,6,6,6: ಶರವೇಗದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್

ಹೀಗಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಪಾಕಿಸ್ತಾನ್ ಟಿ20 ವಿಶ್ವಕಪ್​ನಿಂದ ಹೊರಗುಳಿದರೂ, ಆ ಸ್ಥಾನದಲ್ಲಿ ಬಾಂಗ್ಲಾದೇಶ್ ಕಣಕ್ಕಿಳಿಯುವುದಿಲ್ಲ ಎನ್ನಲು ಸಾಧ್ಯವಿಲ್ಲ. ಇಲ್ಲಿ ಪಾಕ್ ನೀಡಿದ ಬೆಂಬಲಕ್ಕಿಂತ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ಗೊಡ್ಡು ಬೆದರಿಕೆಯನ್ನು ಬದಲಿಸುವ ಸಾಧ್ಯತೆಯಿದೆ.

Source link

ಚೋರ್ಲಾ ಘಾಟ್ ಬಳಿ 400 ಕೋಟಿ ದರೋಡೆಗಿಲ್ಲ ಪ್ರತ್ಯಕ್ಷದರ್ಶಿಗಳು: ಎಸ್​​ಐಟಿಗೆ ಸವಾಲಾದ ತನಿಖೆ!

ಬೆಳಗಾವಿ, ಜನವರಿ 28: ಚೋರ್ಲಾ ಘಾಟ್ ಬಳಿ 400 ಕೋಟಿ ದರೋಡೆ ಪ್ರಕರಣ ಸಂಬಂಧ ಪ್ರತ್ಯಕ್ಷದರ್ಶಿಗಾಗಿ ಮೂರು ರಾಜ್ಯಗಳ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಹೋಗ್ತಿದ್ದ ಅಮಾನ್ಯಗೊಂಡ 2000 ಮುಖ ಬೆಲೆಯ 400 ಕೋಟಿ ಹಣ ತುಂಬಿದ್ದ ಕಂಟೇನರ್​​ ಹೈಜಾಕ್​​ ಮಾಡಲಾಗಿದೆ ಎನ್ನಲಾಗಿದ್ದರೂ ಆ ಬಗ್ಗೆ ಸಾಕ್ಷಿಗಳೇ ಪೊಲೀಸರಿಗೆ ಸಿಗುತ್ತಿಲ್ಲ. ಸಾಲು ಸಾಲು ಪ್ರಶ್ನೆಗಳು ತನಿಖೆ ವೇಳೆ ಎದುರಾಗ್ತಿದ್ದು, ಇವುಗಳಿಗೆ ಉತ್ತರ ಹುಡುಕೋದೇ ಈಗ ಖಾಕಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.

ಪ್ರಕರಣ ಸಂಬಂಧ ಉದ್ಭವಿಸಿರೋ ಪ್ರಶ್ನೆಗಳೇನು?

  • ಗೋವಾ ರಾಜ್ಯದ ಯಾವ ಸ್ಥಳದಲ್ಲಿ ಕಂಟೇನರ್​​ಗಳಿಗೆ ಹಣ ತುಂಬಲಾಯ್ತು?
  • ಕಂಟೇನರ್​​ಗೆ ಹಣ ತುಂಬಿದ್ದನ್ನು ಕಣ್ಣಾರೆ ನೋಡಿರುವವರು ಯಾರು?
  • ಯಾವ ಮಾರ್ಗವಾಗಿ ಆ ಕಂಟೇನರ್​​ಗಳು ಚೋರ್ಲಾ ಘಾಟ್ ಪ್ರವೇಶಿಸಿದ್ದವು?
  • ಚೋರ್ಲಾ ಘಾಟ್​​ನ ಯಾವ ಸ್ಥಳದಲ್ಲಿ ಹಣ ತುಂಬಿದ್ದ ಕಂಟೇನರ್ ಹೈಜಾಕ್ ಆಗಿವೆ?
  • ಆ ಕಂಟೇನರ್ ವಾಹನದ ನಂಬರ್ ಏನು? ಅವುಗಳ ಮಾಲೀಕ ಯಾರು?

ಇದನ್ನೂ ಓದಿ: 400 ಕೋಟಿ ಮಾಲೀಕ ಗುಜರಾತ್ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!

ಇನ್ನು ಪ್ರಕರಣ ಸಂಬಂಧ ಕಿಡ್ನಾಪ್ ಆಗಿದ್ದ ಸಂದೀಪ್ ಪಾಟೀಲ್ ಕೂಡ ದರೋಡೆಯನ್ನು ಕಣ್ಣಾರೆ ನೋಡಿಲ್ಲ.ಕಿಡ್ನಾಪ್ ಮಾಡಿದವರು ಹೇಳಿದ್ದನ್ನೇ ದೂರಿನಲ್ಲಿ ದಾಖಲು ಮಾಡಲಾಗಿದೆ. ಈ ನಡುವೆ ಕಿಂಗ್​​ಪಿನ್ ಕಿಶೋರ್ ಸಾಳ್ವೆ ಬಗ್ಗೆ ಸಾಕ್ಷಿ ಎಸ್ಐಟಿ ಸಂಗ್ರಹಿಸುತ್ತಿದ್ದು, ಮತ್ತೊಂದೆಡೆ ಅರೆಸ್ಟ್ ಆಗಿರೋ ಏಳು ಜನ ಆರೋಪಿಗಳ ತೀವ್ರ ವಿಚಾರಣೆಯೂ ನಡೆಯುತ್ತಿದೆ. ಹೀಗಿದ್ದರೂ ಮಹಾರಾಷ್ಟ್ರ ಎಸ್ಐಟಿಗೆ ಸಂಬಂಧ ಐ ವಿಟ್ನೆಸ್​​ ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ.

ದರೋಡೆ ಪ್ರಕರಣದಲ್ಲಿ ರಾಜಕೀಯ ನಾಯಕನೋರ್ವನ ಹೆಸರೂ ತಳಕು ಹಾಕಿಕೊಂಡಿದ್ದು, ವೈರಲ್ ಆಗಿರೋ ಸಂಭಾಷಣೆ ಜಾಡು ಹಿಡಿದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಎಸ್ಐಟಿ ಮುಖ್ಯಸ್ಥ ಆದಿತ್ಯ ಮೀರಖೇಲಕರ್ ನೇತೃತ್ವದಲ್ಲಿ ನಡೆಯುತ್ತಿರುವ ತ‌ನಿಖೆಯಲ್ಲಿ ಗುಜರಾತನ ದೊಡ್ಡ ರಾಜಕಾರಣಿ ಯಾರು? ಗುಜರಾತ್​​ನ ಅಹಮದಾಬಾದ್ ಮೂಲದ ಆಶ್ರಮ ಯಾವುದು? ಹಣ ಎಲ್ಲಿದೆ? ಆಶ್ರಮದಲ್ಲಿಯೇ ಬ್ಲಾಕ್ ಆ್ಯಂಡ್ ವೈಟ್ ದಂಧೆ ಮಾಡುತ್ತಿದ್ದಾರಾ? ಎಂಬ ಹಲವು ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೆಹಲಿ: ಮೂವರು ಅಪ್ರಾಪ್ತರಿಂದ 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – Kannada News | Delhi Police Detain Three Youths Over Assault on Six Year Old Girl

ನವದೆಹಲಿ, ಜನವರಿ 28: ಆರು ವರ್ಷದ ಬಾಲಕಿ(Girl) ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ದೆಹಲಿಯ ಭಜನ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 10, 13 ಮತ್ತು 14 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕರು ಈ ಅತ್ಯಾಚಾರವೆಸಗಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಮೂರನೆಯವನು ಪರಾರಿಯಾಗಿದ್ದಾನೆ. ಮೂರನೇ ಆರೋಪಿಯ ಕುಟುಂಬ ಕೂಡ ನಾಪತ್ತೆಯಾಗಿದೆ.

ಈ ಘಟನೆ ಜನವರಿ 18 ರ ಮಂಗಳವಾರ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಹುಡುಗಿಯ ಕುಟುಂಬವು ಪೊಲೀಸರಿಗೆ ದೂರು ನೀಡಿತ್ತು. ಮೂವರು ಹುಡುಗರು ಹುಡುಗಿಯನ್ನು ಆಮಿಷವೊಡ್ಡಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪೊಲೀಸರ ಪ್ರಕಾರ, ಆರೋಪಿಗಳನ್ನು ಗುರುತಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಒಬ್ಬ ಪರಾರಿಯಾಗಿದ್ದಾನೆ. ಇಬ್ಬರು ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಅಗತ್ಯ ಆರೈಕೆ ಮತ್ತು ಸಮಾಲೋಚನೆ ಒದಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ಮೂರನೇ ಆರೋಪಿಯನ್ನು ಪತ್ತೆ ಹಚ್ಚಲು ಶೋಧ ತಂಡವನ್ನು ರಚಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಮೂರನೇ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ದೇಶದಲ್ಲಿ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ವಿರುದ್ಧ ಕಠಿಣ ಕಾನೂನುಗಳಿವೆ, ಆದರೂ ಈ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ ಎಂಬುದು ಗಮನಿಸಬೇಕಾದ ಸಂಗತಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಜನ ನಾಯಗನ್’ ವಿಳಂಬಂದಿಂದ ‘ಟಾಕ್ಸಿಕ್’,‘ಕೆಡಿ’ಗೆ ದೊಡ್ಡ ಹೊಡೆತ? – Kannada News | Jana Nayagan Delay: How KVN Productions Toxic and KD Releases Face Major Setbacks

‘ಜನ ನಾಯಗನ್’ ಚಿತ್ರಕ್ಕೆ (Jana Nayagan) ಕೋರ್ಟ್​ನಲ್ಲಿ ಸಾಕಷ್ಟು ಹಿನ್ನಡೆ ಆಗುತ್ತಲೇ ಇದೆ. ಜನವರಿ 9ರಂದೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ವಿಷಯದಲ್ಲಿ ಆದ ತೊಂದರೆಯಿಂದ ಸಿನಿಮಾ ರಿಲೀಸ್ ವಿಳಂಬ ಆಗುತ್ತಿದೆ. ಈ ಪ್ರಕರಣ ಇನ್ನೂ ಕೋರ್ಟ್​​ನಲ್ಲೇ ಇದೆ. ‘ಜನ ನಾಯಗನ್’ ಚಿತ್ರದ ವಿಳಂಬವು ‘ಟಾಕ್ಸಿಕ್’ ಹಾಗೂ ‘ಕೆಡಿ’ ಸಿನಿಮಾ ಪ್ರಚಾರದ ಮೇಲೆ ನೇರ ಪರಿಣಾಮ ಬೀರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ‘ಕೆಡಿ’ ರಿಲೀಸ್​​ಗೂ ತೊಂದರೆ ತಂದೊಡ್ಡಬಹುದು ಎಂಬ ಆತಂಕ ಮೂಡಿದೆ.

ವಿಜಯ್ ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ ‘ಜನ ನಾಯಗನ್’ ರಿಲೀಸ್ ಆಗುತ್ತಿದೆ. ಇದು ಬಾಲಯ್ಯ ಅವರ ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್. ಇದರಲ್ಲಿ ರಾಜಕೀಯ ವಿಷಯ ಕೂಡ ಇದೆ. ವಿಜಯ್ ಕೂಡ ರಾಜಕೀಯಕ್ಕೆ ಬರುತ್ತಿರುವುದರಿಂದ ರಾಜಕೀಯ ಶಕ್ತಿಗಳು ಸಿನಿಮಾ ರಿಲೀಸ್ ಆಗದಂತೆ ತಡೆಯುತ್ತಿವೆಯೇ ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ‘ಟಾಕ್ಸಿಕ್’ ಚಿತ್ರಕ್ಕೂ ತೊಂದರೆ ಎದುರಾಗುವ ಸೂಚನೆ ಸಿಕ್ಕಿದೆ.

‘ಜನ ನಾಯಗನ್’ ಸಿನಿಮಾ ನಿರ್ಮಾಣ ಮಾಡಿದ್ದು ಕನ್ನಡದ ಕೆವಿಎನ್​ ಸಂಸ್ಥೆ. ಯಶ್ ನಟನೆಯ ‘ಟಾಕ್ಸಿಕ್’ ಹಾಗೂ ಧ್ರುವ ಸರ್ಜಾ ವರ ‘ಕೆಡಿ’ ಚಿತ್ರವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿದೆ. ಜನವರಿ 9ಕ್ಕೆ ‘ಜನ ನಾಯಗನ್’, ‘ಮಾರ್ಚ್ 19’ಕ್ಕೆ ‘ಟಾಕ್ಸಿಕ್’ ಹಾಗೂ ಏಪ್ರಿಲ್ ಅಂತ್ಯಕ್ಕೆ ‘ಕೆಡಿ’ ರಿಲೀಸ್ ಮಾಡುವ ಪ್ಲ್ಯಾನ್ ಸಂಸ್ಥೆಯದ್ದಾಗಿತ್ತು.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ: ನೂರಾರು ಕೋಟಿ ನಷ್ಟದ ಭೀತಿ

ಒಂದು ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮತ್ತೊಂದು ಚಿತ್ರದ ಪ್ರಚಾರ ಕಾರ್ಯ ಆರಂಭಿಸುವ ಪ್ಲ್ಯಾನ್​ ಅಲ್ಲಿ ಕೆವಿಎನ್ ಇತ್ತು. ಆದರೆ, ‘ಜನ ನಾಯಗನ್’ ಸಿನಿಮಾ ರಿಲೀಸ್ ಡೋಲಾಯಮಾನ ಸ್ಥಿತಿಯಲ್ಲಿ ಇದೆ. ಹೀಗಾಗಿ, ‘ಟಾಕ್ಸಿಕ್’ ಚಿತ್ರದ ಪ್ರಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಗಬಹುದು ಎಂದು ಹೇಳಲಾಗುತ್ತಾ ಇದೆ. ಆ ಬಳಿಕ ‘ಕೆಡಿ’ ಸಿನಿಮಾದ ಮೇಲೂ ಇದು ಪರಿಣಾಮ ಬೀರಲಿದೆ. ‘ಜನ ನಾಯಗನ್’ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬುದು ಸದ್ಯದ ಪ್ರಶ್ನೆ. ಅದರ ಆಧಾರದ ಮೇಲೆ ಮುಂದಿನ ಪ್ಲ್ಯಾನ್​​ಗಳು ನಿರ್ಧಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಪ್ಪನ ಅಗ್ರಹಾರದಲ್ಲಿ ಕಳ್ಳಾಟಕ್ಕೆ ಬಿದ್ದಿಲ್ಲ ಬ್ರೇಕ್! 200 ಮೊಬೈಲ್ ಫೋನ್​ಗಳ​ ಜೊತೆ ಇನ್ನೂ ಏನೇನು ಸಿಕ್ತು ಗೊತ್ತಾ? – Kannada News | Parappana Agrahara Crackdown:Raids Seize 200+ Mobiles, Expose Illegal Activities

200 ಮೊಬೈಲ್ ಫೋನ್​ಗಳ​ ಜೊತೆ ಇನ್ನೂ ಏನೇನು ಸಿಕ್ತು ಗೊತ್ತಾ?

ಬೆಂಗಳೂರು, ಜನವರಿ 28: ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಬೀಳದಂತಾಗಿದ್ದು, ಜೈಲಾಧಿಕಾರಿಗಳು ಎರಡು ತಿಂಗಳಿಂದ ನಿರಂತರ ದಾಳಿ ನಡೆಸುತ್ತಿದ್ದಾರೆ. ಈ ವೇಳೆ ಕೈದಿಗಳು ಬಚ್ಚಿಟ್ಟುಕೊಂಡಿದ್ದ ಹಲವು ಮೊಬೈಲ್​ಗಳು, ಇಯರ್ ಫೋನ್​ಗಳು ಸಿಕ್ಕಿದ್ದು, ಈ ನಿಷೇಧಿತ ವಸ್ತುಗಳನ್ನು ಇಟ್ಟುಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕೈದಿ ನೋಡಲು ಬಂದಾಕೆಯಿಂದ ಹಣ ನೀಡಲು ಯತ್ನ

ಜೈಲಿನಲ್ಲಿ ಟವರ್–1ರ 6ನೇ ಬ್ಯಾರಕ್‌ನ 4ನೇ ಕೊಠಡಿಯಲ್ಲಿ ನಡೆಸಿದ ರೇಡ್ ವೇಳೆ ಕೈದಿಗಳು ಅಡಗಿಸಿಕೊಂಡಿದ್ದ 8 ಮೊಬೈಲ್ ಫೋನ್‌ಗಳು, 1 ಸಿಮ್ ಕಾರ್ಡ್, 2 ಚಾರ್ಜರ್‌ಗಳು ಹಾಗೂ 3 ಇಯರ್‌ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಜೈಲಾಧಿಕಾರಿಗಳು ಸೀಜ್ ಮಾಡಲಾಗಿದೆ. ಇನ್ನೊಂದೆಡೆ, ಮಹಿಳೆಯೊಬ್ಬರು ಕೈದಿಗೆ ಅಕ್ರಮವಾಗಿ ಹಣ ನೀಡಲು ಯತ್ನಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ಜನವರಿ 23ರಂದು ಕೈದಿ ಸೋಮಶೇಖರ್‌ನನ್ನು ಭೇಟಿಯಾಗಲು ಬಂದ ಅನುಷಾ ಎಂಬ ಮಹಿಳೆ ಮಾತುಕತೆ ವೇಳೆ ಗಾಜಿನ ಕೆಳಭಾಗದ ರಂಧ್ರದ ಮೂಲಕ ಹಣ ನೀಡಲು ಮುಂದಾದಾಗ 22,000 ರೂ. ನಗದು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬಂದಿಯ ಮೇಲೇ ಹಲ್ಲೆ

ಹೊಸ ಡಿಜಿಪಿಯ ನಂತರವೂ ಸುಧಾರಿದ ಜೈಲಿನ ಪರಿಸ್ಥಿತಿ

ಕೆಲ ತಿಂಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಡ್ಯಾನ್ಸ್ ಜೊತೆಗೆ ಜೈಲಿನಲ್ಲಿದ್ದ ಕೈದಿಗಳು ಕೈಯಲ್ಲಿ ಮೊಬೈಲ್ ಹಿಡಿದು, ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಿಸಿದ ವೀಡಿಯೋಗಳೂ ಎಲ್ಲೆಡೆ ಹರಿದಾಡಿದ್ದವು.ಈ ಹಿನ್ನೆಲೆ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.ನಂತರ ಡಿಜಿಪಿಯಾಗಿ ಬಂದಿದ್ದ ಅಲೋಕ್ ಕುಮಾರ್, ಜೈಲಿನೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.ಇದರ ಬೆನ್ನಲ್ಲೇ ಜೈಲಾಧಿಕಾರಿಗಳು ಬ್ಯಾರಕ್‌ಗಳ ಮೇಲೆ ದಾಳಿ ತೀವ್ರಗೊಳಿಸಿದ್ದು, ನಿಷೇಧಿತ ವಸ್ತುಗಳ ಬೇಟೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link