Headlines

ಜ.29ರಂದು ಬೆಂಗಳೂರು ಚಲೋ ಕೈಗೊಂಡ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ KSRTC – Kannada News | Employees Don’t participate In Bengaluru Chalo protest on january 29 Ordered By KSRTC MD

ಬೆಂಗಳೂರು, (ಜನವರಿ 27): ಕೆಎಸ್‌ಆರ್‌ಟಿಸಿ  (KSRTC) ಸೇರಿದಂತೆ ಕರ್ನಾಟಕದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು (employees) ಸಮರ ಸಾರಿದ್ದಾರೆ. ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಾಡಿದ್ದು ಅಂದರೆ ಜನವರಿ 29ರಂದು ಬೆಂಗಳೂರು ಚಲೋಗೆ (Bengaluru Chalo) ಕರೆ ನೀಡಿದ್ದಾರೆ. ಆದ್ರೆ, ಇದಕ್ಕೆ ಕೆಎಸ್​​ಆರ್​​​ಟಿಸಿ ಶಾಕ್ ಕೊಟ್ಟಿದ್ದು, ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ. ಗುರುವಾರ ಡ್ಯೂಟಿಗೆ…

Read More

Hubli: ಪದ್ಮಶ್ರೀ ಪುರಸ್ಕೃತ ಪ್ರಭಾಕರ್ ಕೋರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನ – Kannada News | Union Minister Pralhad Joshi Honors Padma Shri Prabhakar Kore in Hubli

ಪ್ರಭಾಕರ್ ಕೋರೆ ಅವರಿಗೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಂದ ಸನ್ಮಾನ ಹುಬ್ಬಳ್ಳಿ, ಜನವರಿ 27: 2026ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಕೆಎಲ್ಇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರಭಾಕರ್ ಕೋರೆ ಅವರನ್ನು ಕುಟುಂಬದ ಸದಸ್ಯರೊಡಗೂಡಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ  ಸನ್ಮಾನಿಸಿ, ಅಭಿನಂದಿಸಿದ್ದಾರೆ. ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿನ ಕೋರೆ ಅವರ ಅಭೂತಪೂರ್ವ ಸೇವೆ ಗುರುತಿಸಿ ಅತ್ಯುನ್ನತ ಪ್ರಶಸ್ತಿಗೆ ಕೆಂದ್ರ ಸರ್ಕಾರ ಅವರನ್ನು ಆಯ್ಕೆ ಮಾಡಿದ್ದು, ಗಣರಾಜ್ಯೋತ್ಸವದ ಹಿಂದಿನ ದಿನ ಈ ಬಗ್ಗೆ ಅಧಿಕೃತವಾಗಿ ಘೋಷಿಸಿತ್ತು. ಇನ್ನು ಸನ್ಮಾನ…

Read More

ಇಬ್ಬರೂ ಸಾಯೋಣ ಎಂದು ಯುವತಿಯನ್ನು ನಂಬಿಸಿ ಕೊಂದ ಹಂತಕ! – Kannada News | Kerala Man murders relative after faking suicide pact

ಕೋಝಿಕೋಡ್, ಜನವರಿ 27: ಕೇರಳದಲ್ಲಿ ಆರಂಭದಲ್ಲಿ ಆತ್ಮಹತ್ಯೆ ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಂದು ಪೊಲೀಸರು 36 ವರ್ಷದ ವ್ಯಕ್ತಿಯನ್ನು ತನ್ನ ಸಂಬಂಧಿಯ ಕೊಲೆಗೆ (Murder) ಸಂಬಂಧಿಸಿದಂತೆ ಬಂಧಿಸಿದ್ದಾರೆ. ಜನವರಿ 24ರಂದು ಯುವತಿಯ ಸಾವು ಸಂಭವಿಸಿದಾಗ ಅದನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ, ತನ್ನ ಅಕ್ರಮ ಸಂಬಂಧವನ್ನು ಮರೆಮಾಡಲು ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಶನಿವಾರ ಎಲತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಆರೋಪಿಯ…

Read More

ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಂದ ರಕ್ಕಸ ಮಗ: ಕಾರಣ ಕೇಳಿದ್ರೆ ಎಂತವರಿಗೂ ಪಿತ್ತ ನೆತ್ತಿಗೇರುತ್ತೆ! – Kannada News | For Money, Son Murders Mother in Lingasugur, Raichur

ಹತ್ಯೆಯಾದ ಚಂದವ್ವ ಮತ್ತು ಆರೋಪಿ ಕುಮಾರ್​​. ರಾಯಚೂರು, ಜನವರಿ 27: ರಕ್ಕಸ ಮಗನೋರ್ವ ಹೆತ್ತ ತಾಯಿಯನ್ನೇ ಅಟ್ಟಾಡಿಸಿ, ಆಕೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಜಕ್ಕೇರು ತಾಂಡಾದಲ್ಲಿ ನಡೆದಿದೆ. ಚಂದವ್ವ (45) ಮೃತ ಮಹಿಳೆಯಾಗಿದ್ದು, ಆಕೆಯ ಮೊದಲ ಪುತ್ರ ಕುಮಾರನೇ ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಮಗನಿಂದಲೇ ಕೊಲೆಯಾದ ಚಂದವ್ವಗೆ ಒಟ್ಟು 6 ಜನ ಮಕ್ಕಳು. ಆ ಪೈಕಿ 4 ಜನ…

Read More

ಗಂಡನ ಅನುಮಾನದ ಭೂತಕ್ಕೆ ಬಲಿಯಾದ ಹೆಂಡ್ತಿ: ಪೊಲೀಸ್​​ ಮುಂದೆ ಪತ್ನಿಯ ಲವ್ವಿಡವ್ವಿ ಬಿಚ್ಚಿಟ್ಟ ಪತಿ – Kannada News | Chitradurga: Husband kills wife over Illicit Affair Suspected

ಚಿತ್ರದುರ್ಗ, ಜನವರಿ 27: ಆ ಕುಟುಂಬಕ್ಕೆ ಪತ್ನಿಯೇ ಆಧಾರ ಸ್ತಂಭವಾಗಿದ್ದರು. ಕ್ಯಾನ್ಸರ್ ಪೀಡಿತ ಪತಿಯ ಆರೈಕೆ ಜತೆಗೆ ಮನೆಯ ಜವಾಬ್ದಾರಿ ಕೂಡ ಹೊತ್ತಿದ್ದರು. ಆದರೆ ಪತಿಯ ತಲೆಗೆ ಹೊಕ್ಕ ಅನುಮಾನದ ಶಂಕೆಯೊಂದು ಪತ್ನಿಯ ಕೊಲೆ (murder) ಮಾಡಿಸಿದೆ. ಕೋಲಿನಿಂದ ತಲೆಗೆ ಹೊಡೆದು ಪತಿ (Husband)  ರವಿಕುಮಾರ್​​ ಪತ್ನಿ ಮಮತಾ(45)ರನ್ನು ಹತ್ಯೆಗೈದಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಡೆದದ್ದೇನು?  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇ ಎಮ್ಮಿಗನೂರು ಗ್ರಾಮ ಇಂದು ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿತ್ತು. ಬೆಳಗ್ಗೆ…

Read More

ISRO SAC Recruitment 2026: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ – Kannada News | ISRO SAC Recruitment 2026: 49 Scientist/Engineer Vacancies Apply Now!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಅಹಮದಾಬಾದ್‌ನ ಬಾಹ್ಯಾಕಾಶ ಕೇಂದ್ರ (Space Applications Centre – SAC) ನಲ್ಲಿ ಖಾಲಿ ಇರುವ ವಿಜ್ಞಾನಿ/ಇಂಜಿನಿಯರ್ (SD/SC) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ವಿವಿಧ ವಿಭಾಗಗಳಲ್ಲಿ ಒಟ್ಟು 49 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದ ಪ್ರಮುಖ ವಿವರಗಳು ಹೀಗಿವೆ. ಶೈಕ್ಷಣಿಕ…

Read More

ವಿಧವೆಯರಿಗೆ ಗುಡ್​​​ ನ್ಯೂಸ್ ನೀಡಿದ ರಾಜ್ಯ ಸರ್ಕಾರ​​​: ಈಗಲೇ ಅರ್ಜಿ ಸಲ್ಲಿಸಿ, 3 ಲಕ್ಷ ರೂ. ವರೆಗೆ ಹಣ ಪಡೆಯಿರಿ – Kannada News | Karnataka Government Boosts SC Widow Remarriage for Empowerment

ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಹೆಣ್ಣಿಗೆ ಒಂದು ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಇದು ಈ ಪ್ರಕೃತಿಯ ನಿಯಮ ಹಾಗೂ ಕಾನೂನು ಕೂಡ ಅದನ್ನೇ ಹೇಳುವುದು. ಅದೂ ಕೂಡ ಕಾನೂನಿನ ಪ್ರಕಾರ ಮದುವೆಯಾದರೆ ಮಾತ್ರ ಈ ಸಮಾಜದಲ್ಲಿ ಅವರಿಗೆ ಗಂಡ – ಹೆಂಡತಿ ಸ್ಥಾನ ನೀಡುತ್ತಾರೆ. ಈ ಸಮಾಜ ಕೂಡ ಆ ಸಂಬಂಧವನ್ನೇ ಒಪ್ಪಿಕೊಳ್ಳುವುದು. ಅದರಲ್ಲೂ ಈ ಸಮಾಜದಲ್ಲಿ ಮಹಿಳೆ ಒಬ್ಬಂಟಿಯಾಗಿದ್ದರೆ ಬೇರೆ ಸಂಬಂಧ ಕಟ್ಟಿಕೊಡುತ್ತಾರೆ. ಅದರಲ್ಲೂ ಮಹಿಳೆ ಮದುವೆಯಾಗಿ ಗಂಡನನ್ನು ಕಳೆದುಕೊಂಡರೆ, ಅದಕ್ಕೆ…

Read More

Chanakya Niti: ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಲು ಈ ತತ್ವಗಳನ್ನು ಅನುಸರಿಸಿ – Kannada News | Chanakya Niti: If you follow these tips from Chanakya, you can easily overcome difficulties

ಪ್ರತಿಯೊಬ್ಬರ ಜೀವನದಲ್ಲೂ ಸುಖ-ದುಃಖ, ನೋವು ನಲಿವು ಎಲ್ಲವೂ ಇದ್ದೇ ಇರುತ್ತದೆ. ಈ ಎಲ್ಲಾ ಕಷ್ಟಗಳನ್ನು (difficulties) ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ. ಹೆಚ್ಚಿನವರು ಕಷ್ಟ ಎದುರಾಯಿತೆಂದು ಭಯಪಟ್ಟು, ಬರೀ ಕಷ್ಟವೇ ಎಂದು ತಾಳ್ಮೆಯನ್ನು ಕಳೆದುಕೊಂಡು ಎಲ್ಲವನ್ನೂ ಕಳೆದುಕೊಂಡು ಬಿಡುತ್ತಾರೆ. ಆದ್ರೆ ಚಾಣಕ್ಯರು ಹೇಳಿರುವ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಎದುರಾಗವು ಯಾವುದೇ ಕಷ್ಟವನ್ನೂ ಸುಲಭವಾಗಿ ಎದುರಿಸಬಹುದು, ಜೊತೆಗೆ ಇದು ಕಠಿಣ ಸಂದರ್ಭಗಳನ್ನು ಎದುರಿಸಿಕೊಂಡು ಮುಂದಕ್ಕೆ ಸಾಗುವ ಧೈರ್ಯವನ್ನು ನೀಡುತ್ತದೆ. ಆ ಸಲಹೆಗಳು…

Read More

ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ – Kannada News | Rashmika Mandanna and Vijay Deverakonda announce new movie Ranabaali ahead of marriage

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ. ಪರಸ್ಪರ ಪ್ರೀತಿಸುತ್ತಿರುವ ಅವರು ಈ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಅವರ ಮದುವೆಗೆ ಸಕಲ ಸಿದ್ಧತೆ ನಡೆದಿದೆ. ಅದರ ನಡುವೆಯೇ ಅವರಿಬ್ಬರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಮತ್ತೊಮ್ಮೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ಜೊತೆಯಾಗಿ ನಟಿಸಲಿದ್ದಾರೆ. ಈಗಾಗಲೇ ‘ಡಿಯರ್ ಕಾಮ್ರೇಡ್’, ‘ಗೀತ ಗೋವಿಂದಂ’ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ಅವರು ಈಗ ಹೊಸ…

Read More

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಸಿಡಿದೆದ್ದ ಹಿಂದೂ ಸಂಘಟನೆಗಳು – Kannada News | Chikkamagaluru: Hindu organizations Erupt Over Alleged Insult to Religious Sentiments by Tourists

ಪ್ರವಾಸಿಗರು, ಹಿಂದೂ ಸಂಘಟನೆಗಳಿಂದ ಡಿಸಿಗೆ ಮನವಿ ಚಿಕ್ಕಮಗಳೂರು, ಜನವರಿ 27: ಕಾಫಿನಾಡು ಚಿಕ್ಕಮಗಳೂರು (Chikkamagaluru) ಪ್ರವಾಸಿಗರ ಪ್ರಮುಖ ತಾಣಗಳಲ್ಲಿ ಒಂದು. ಅಚ್ಚ ಹಸಿರಿನಿಂದ ಕಂಗೊಳಿಸುವ ಪಶ್ಚಿಮ ಘಟ್ಟವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಹರಿದುಬರುತ್ತಾರೆ. ಸದ್ಯ ಇದೇ ಪ್ರವಾಸಿಗರಿಂದ (Tourists) ಪವಿತ್ರ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಪ್ರವಾಸಿಗರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾಗರಾಜ್​ಗೆ  ಮನವಿ ಮಾಡಿದ್ದಾರೆ….

Read More