ಪೆಟ್ರೋಲ್, ಡೀಸಲ್ ಮೇಲಿನ ರಫ್ತು ಸುಂಕ ತಗ್ಗಿಸಿದ ಸರ್ಕಾರ; ಇಂಧನ ಬೆಲೆ ಕಡಿಮೆಗೊಳ್ಳುತ್ತಾ?
ನವದೆಹಲಿ, ಮೇ 31: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತಗಳನ್ನು ಆಧರಿಸಿ, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನಗಳ (ATF) ರಫ್ತಿನ ಮೇಲಿನ ವಿಶೇಷ ತೆರಿಗೆಯನ್ನು (Export Tax) ಕಡಿತಗೊಳಿಸಿದೆ. ನಾಳೆ, ಜೂನ್ 1 ರಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಲೀಟರ್ಗೆ 3 ರೂನಿಂದ 1.50 ರೂಗೆ ಇಳಿಸಲಾಗಿದೆ. ಲೀಟರ್ಗೆ ಡೀಸಲ್ಗೆ 16.5 ರೂ ಇದ್ದ ರಫ್ತು ಸುಂಕವನ್ನು 13.5…