ವಿಶ್ವ ತಂಬಾಕು ರಹಿತ ದಿನ: ಧೂಮಪಾನಕ್ಕಿಂತಲೂ ಧೂಮರಹಿತ ತಂಬಾಕು ಹೆಚ್ಚು ಅಪಾಯಕಾರಿ ಏಕೆ?
ವಿಶ್ವ ತಂಬಾಕು ರಹಿತ ದಿನImage Credit source: Pinterest ವಿಶ್ವದಾದ್ಯಂತ ತಡೆಗಟ್ಟಬಹುದಾದ ಸಾವುಗಳಿಗೆ ತಂಬಾಕು ಅತ್ಯಂತ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ತಂಬಾಕಿನ ಹಾನಿಯ ಬಗ್ಗೆ ಮಾತನಾಡುವಾಗ ಸಿಗರೇಟ್ ಮತ್ತು ಬೀಡಿ ಧೂಮಪಾನಕ್ಕೆ ಮಾತ್ರ ಹೆಚ್ಚಿನ ಗಮನ ನೀಡಲಾಗುತ್ತದೆ. ಆದರೆ ವಾಸ್ತವದಲ್ಲಿ, ಭಾರತದಲ್ಲಿ ಗುಟ್ಕಾ, ಖೈನಿ, ಪಾನ್, ಜರ್ದಾ ಮತ್ತು ಇತರೆ ಧೂಮರಹಿತ ತಂಬಾಕು ಉತ್ಪನ್ನಗಳು ಧೂಮಪಾನಕ್ಕಿಂತಲೂ ಮೌನವಾಗಿ, ತೀವ್ರವಾಗಿ ಸಮಾಜದ ಆರೋಗ್ಯವನ್ನು ನುಂಗಿ ನೀರು ಕುಡಿಯುತ್ತಿವೆ. ಬಾಯಿಯ ಕೋಶಗಳ ಮೇಲೆ ನೇರ ಮತ್ತು ನಿರಂತರ ದಾಳಿ: ಧೂಮಪಾನದಲ್ಲಿ…