Category Archives: Blog

Your blog category

ಸಮುದ್ರದ ಮಧ್ಯೆ ಮುಳುಗಿದ ಬೋಟ್: ಮೃತ್ಯುವಿನ ದವಡೆಯಿಂದ ಪಾರಾದ 7 ಮೀನುಗಾರರು!

ಕಾರವಾರ, ಮೇ 31: ಉತ್ತರ ಕನ್ನಡ (uttara-kannada) ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟ್‌ವೊಂದು ಮುಳುಗಡೆಯಾಗಿದ್ದು (boat sinking), ಅದರಲ್ಲಿದ್ದ ಏಳು ಜನ ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ಎಂಬುವರಿಂದ 7 ಜನರ ರಕ್ಷಣೆ ಮಾಡಲಾಗಿದೆ. ಹೊನ್ನಾವರ ಸಿಎಸ್​ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಸಮುದ್ರದಲ್ಲಿ ಮೀನುಗಾರಿಕೆ ಬೋಟ್​ ಮುಳುಗಡೆ
  • ಸ್ಥಳೀಯ ಮೀನುಗಾರಿಕಾ ಬೋಟ್​ನಿಂದ 7 ಮೀನುಗಾರರ ರಕ್ಷಣೆ
  • ಹೊನ್ನಾವರ ಸಿಎಸ್​ಪಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ

ನಡೆದಿದ್ದೇನು?

ಅಂಕೋಲಾದ ಬೆಳಂಬಾರದಿಂದ ಮೀನುಗಾರಿಕೆಗೆ ತೆರಳಿದ್ದ ಮಂಜುನಾಥ್ ಖಾರ್ವಿ ಅವರಿಗೆ ಸೇರಿದ ‘ಶ್ರೀ ನವರತ್ನ’ ಹೆಸರಿನ ಬೋಟ್, ಚಲಿಸುತ್ತಿದ್ದಾಗ ಬೋಟ್‌ನ ಹೊರಭಾಗಕ್ಕೆ ಹಾನಿಯಾದ ಹಿನ್ನೆಲೆ ಸಮುದ್ರದಲ್ಲಿ ಮುಳುಗಲು ಆರಂಭಿಸಿದೆ. ಈ ವೇಳೆ ಬೋಟ್‌ನಲ್ಲಿದ್ದ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಎಂಬ ಏಳು ಜನ ಮೀನುಗಾರರು ನೀರುಪಾಲಾಗುವ ಭೀತಿಯಲ್ಲಿದ್ದರು.

ಇದನ್ನೂ ಓದಿ: ಧಾರವಾಡದಲ್ಲಿ ಘೋರ ದುರಂತ: ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿ

ಇನ್ನು ಈ ವೇಳೆ ಸ್ಥಳೀಯ ಮೀನುಗಾರರಾದ ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ತಮ್ಮ ಬೋಟ್ ಮೂಲಕ ತಕ್ಷಣವೇ ಸ್ಥಳಕ್ಕೆ ಧಾವಿಸಿ, ನೀರುಪಾಲಾಗುತ್ತಿದ್ದ ಏಳೂ ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಸಿ.ಎಸ್.ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷಿ ಹೊಂಡದಲ್ಲಿ ಬಿದ್ದು ಅಣ್ಣ ತಮ್ಮ ಸಾವು

ಕೃಷಿ ಹೊಂಡದಲ್ಲಿ ಬಿದ್ದು ಅಣ್ಣ ತಮ್ಮ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ದೇವಕಿರಣ್ (12) ಹಾಗೂ ವಿನುತ್ (9) ಮೃತ ಅಣ್ಣ ತಮ್ಮಂದಿರು. ಶಾಲೆಗೆ ಬೇಸಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ತಾತನ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು

ಕೃಷಿ ಹೊಂಡ ಮಾಡುವ ಉದ್ದೇಶದಿಂದ ಬೃಹತ್ ಹೊಂಡ ತೆಗೆಯಲಾಗಿತ್ತು. ವಸತಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಬೇಸಿಗೆ ರಜೆಗೆಂದು ಅಜ್ಜಿ ತಾತನ ಮನೆಗೆ ಬಂದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಟಾರ್ ನಟಿಯರ ಡಿಸೈನರ್ ಅಂಜಲಿ ಕೈಚಳಕಕ್ಕೆ ಆರ್‌ಸಿಬಿ ಫ್ಯಾನ್ಸ್ ಫಿದಾ! ಬ್ಲೌಸ್ ಹಿಂದೆ ಮೂಡಿತು ‘ಈ ಸಲ ಕಪ್ ನಮ್ದೇ’ ಡಿಸೈನ್

ಬೆಂಗಳೂರು, ಮೇ.31: ರಾಜಧಾನಿ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ಕ್ರೇಜ್ ದಿನದಿಂದ ದಿನಕ್ಕೆ ಹೊಸ ಹೊಸ ಕಲೆಗೆ ಕಾರಣವಾಗಿದೆ. ಕೇವಲ ಮೈದಾನ ಅಥವಾ ಜರ್ಸಿಗಳಿಗಷ್ಟೇ ಸೀಮಿತವಾಗಿದ್ದ ಆರ್‌ಸಿಬಿ ಕ್ರೇಜ್, ಇದೀಗ ಮಹಿಳೆಯರ ಸಾಂಪ್ರದಾಯಿಕ ಉಡುಪುಗಳ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟಿದೆ. ಹೌದು, ನಗರದ ಪ್ರಸಿದ್ಧ ಸೀರೆ ಮತ್ತು ಬಟ್ಟೆಗಳ ಮಾರುಕಟ್ಟೆ ಕೇಂದ್ರವಾದ ಚಿಕ್ಕಪೇಟೆಯ ಖ್ಯಾತ ಮಹಿಳಾ ಮಾಡಲ್ ಡಿಸೈನರ್ ಅಂಜಲಿ ಅವರು ಆರ್‌ಸಿಬಿ ಥೀಮ್ ಆಧಾರಿತ ಅತ್ಯಂತ ಆಕರ್ಷಕ ಹಾಗೂ ಸ್ಟೈಲಿಶ್ ಬ್ಲೌಸ್ ವಿನ್ಯಾಸಗೊಳಿಸಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಖ್ಯಾತ ಸಿನಿ ತಾರೆಯರಿಗೂ ಬಟ್ಟೆಗಳನ್ನು ವಿನ್ಯಾಸಗೊಳಿಸುವ ಸೆಲೆಬ್ರಿಟಿ ಡಿಸೈನರ್ ಅಂಜಲಿ, ಆರ್‌ಸಿಬಿ ಮೇಲಿನ ತಮ್ಮ ಅಪ್ಪಟ ಅಭಿಮಾನಕ್ಕಾಗಿ ಈ ನೂತನ ಪ್ರಯೋಗ ಮಾಡಿದ್ದಾರೆ. ಆರ್‌ಸಿಬಿ ತಂಡದ ಅಧಿಕೃತ ಬಣ್ಣಗಳಾದ ಬ್ಲೂ, ರೆಡ್ ಹಾಗೂ ಗೋಲ್ಡ್ (ನೀಲಿ, ಕೆಂಪು ಮತ್ತು ಚಿನ್ನದ ಬಣ್ಣ) ಕಾಂಬಿನೇಷನ್‌ನಲ್ಲಿ ಅತ್ಯಾಧುನಿಕ ಮಾದರಿಯ ಬ್ಲೌಸ್ ಸಿದ್ಧಪಡಿಸಲಾಗಿದೆ. ಈ ಬ್ಲೌಸ್‌ನ ಅತ್ಯಂತ ಆಕರ್ಷಕ ಭಾಗವೆಂದರೆ, ಇದರ ಬೆನ್ನಿನ ಹಿಂಭಾಗದಲ್ಲಿ (Back Design) ಆರ್‌ಸಿಬಿಯ ಸಾರ್ವಕಾಲಿಕ ಜನಪ್ರಿಯ ಸ್ಲೋಗನ್ ಆಗಿರುವ ‘Ee Sala Cupp Namde’ (ಈ ಸಲ ಕಪ್ ನಮ್ದೇ) ಎಂದು ಅತ್ಯಂತ ಕಲಾತ್ಮಕವಾಗಿ ಸ್ಟೈಲಿಶ್ ಡಿಸೈನ್ ಮಾಡಲಾಗಿದೆ.

ಈ ಆರ್‌ಸಿಬಿ ಸ್ಟೈಲಿಶ್ ಬ್ಲೌಸ್‌ನ ಫೋಟೋಗಳು ಮತ್ತು ವೀಡಿಯೊಗಳು ವೈರಲ್​ ಆಗುತ್ತಿದ್ದಂತೆ ಬೆಂಗಳೂರಿನ ಮಹಿಳಾ ಅಭಿಮಾನಿಗಳು ಮಾರುಹೋಗಿದ್ದಾರೆ. ಸದ್ಯ ಡಿಸೈನರ್ ಅಂಜಲಿ ಅವರು ಸಿದ್ಧಪಡಿಸಿದ್ದ ಎಲ್ಲಾ ಬ್ಲೌಸ್‌ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದ್ದು (Out of Stock), ಹೊಸ ಆರ್ಡರ್‌ಗಳಿಗಾಗಿ ಆರ್‌ಸಿಬಿ ಮಹಿಳಾ ಮಣಿಗಳಿಂದ ಭಾರಿ ಡಿಮ್ಯಾಂಡ್ ಕೇಳಿಬರುತ್ತಿದೆ. ಐಪಿಎಲ್ ಕ್ರೇಜ್ ನಡುವೆ ಈ ವಿಭಿನ್ನ ಫ್ಯಾಷನ್ ಟ್ರೆಂಡ್ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

TET Mandatory: ಶಿಕ್ಷಕರ ಉದ್ಯೋಗ ಮತ್ತು ಬಡ್ತಿಗೆ TET ಕಡ್ಡಾಯ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುImage Credit source: Pinterest

ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪು ದೇಶಾದ್ಯಂತ ಲಕ್ಷಾಂತರ ಶಿಕ್ಷಕರಲ್ಲಿ ತೀವ್ರ ಕಳವಳ ಮತ್ತು ಆತಂಕವನ್ನು ಹುಟ್ಟುಹಾಕಿದೆ. ಶಾಲಾ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಶಿಕ್ಷಕರ ಸೇವೆಯನ್ನು ಮುಂದುವರಿಸಲು ಮತ್ತು ಅವರಿಗೆ ಬಡ್ತಿ (Promotion) ನೀಡಲು ಟಿಇಟಿ (TET) ಪರೀಕ್ಷೆಯು ಕಡ್ಡಾಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೆ, ಈಗಾಗಲೇ ಸೇವೆಯಲ್ಲಿರುವ ಟಿಇಟಿ ಅಲ್ಲದ ಶಿಕ್ಷಕರಿಗೆ ಸಮಾಧಾನಕರ ಸುದ್ದಿಯೊಂದನ್ನು ನೀಡಿರುವ ಕೋರ್ಟ್, ಪರೀಕ್ಷೆ ಪಾಸ್ ಮಾಡಲು ನೀಡಲಾಗಿದ್ದ ಗಡುವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ.

ದೇಶದ 20 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಭವಿಷ್ಯಕ್ಕೆ ಕಂಟಕ?

ನ್ಯಾಯಾಲಯವು ಈ ಹಿಂದೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿರುವುದರಿಂದ, ಟಿಇಟಿ ಉತ್ತೀರ್ಣರಾಗದ ಶಿಕ್ಷಕರಲ್ಲಿ ಗೊಂದಲ ಮತ್ತು ಅಸಮಾಧಾನ ಮೂಡಿದೆ. ಈ ನಿರ್ಧಾರದಿಂದಾಗಿ ದೇಶಾದ್ಯಂತ ಸುಮಾರು 20 ಲಕ್ಷಕ್ಕೂ ಹೆಚ್ಚು (2 ಮಿಲಿಯನ್) ಶಿಕ್ಷಕರ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಶಿಕ್ಷಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ನಿಯಮ ಪಾಲಿಸದಿದ್ದರೆ ಉದ್ಯೋಗ ನಷ್ಟದ ಭೀತಿ:

ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ 2028ರ ಗಡುವಿನೊಳಗೆ ಟಿಇಟಿ ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗಲು ವಿಫಲರಾಗುವ ಶಿಕ್ಷಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅಂತಹ ಶಿಕ್ಷಕರು ಕಡ್ಡಾಯವಾಗಿ ಕೆಲಸ ಬಿಡಬೇಕಾಗಬಹುದು ಅಥವಾ ಸ್ವಯಂ ನಿವೃತ್ತಿ (VRS) ಪಡೆಯಬೇಕಾಗಬಹುದು. ಆದರೆ, ನಿವೃತ್ತಿಗೆ ಅತ್ಯಂತ ಕಡಿಮೆ ಸೇವೆ ಬಾಕಿ ಇರುವ ಹಿರಿಯ ಉದ್ಯೋಗಿಗಳಿಗೆ ಕೋರ್ಟ್‌ನಿಂದ ಸ್ವಲ್ಪ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಆದಾಗ್ಯೂ, ಯಾವುದೇ ಶಿಕ್ಷಕರು ಮುಂದಿನ ಹಂತಕ್ಕೆ ಬಡ್ತಿ ಪಡೆಯಬೇಕಾದರೆ ಟಿಇಟಿ ಪರೀಕ್ಷೆ ಪಾಸ್ ಮಾಡುವುದು ಇನ್ಮುಂದೆ ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಸರ್ಕಾರದ ಹಸ್ತಕ್ಷೇಪಕ್ಕೆ ಶಿಕ್ಷಕ ಸಂಘಟನೆಗಳ ಆಗ್ರಹ:

ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಹಿತಾಸಕ್ತಿಯನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಶಿಕ್ಷಕರ ಸಂಘಟನೆಗಳು ಒತ್ತಾಯಿಸಿವೆ. ಹಿರಿಯ ಶಿಕ್ಷಕರಿಗೆ ಟಿಇಟಿ ನಿಯಮಾವಳಿಗಳಿಂದ ವಿನಾಯಿತಿ ನೀಡಲು ಸರ್ಕಾರವು ವಿಶೇಷ ‘ಸುಗ್ರೀವಾಜ್ಞೆ’ (Ordinance) ಹೊರಡಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ನಿರ್ದೇಶನ:

ಶಿಕ್ಷಕರಿಗೆ ಪರೀಕ್ಷೆ ಬರೆಯಲು ಮತ್ತು ಅರ್ಹತೆ ಪಡೆಯಲು ಸೂಕ್ತ ಹಾಗೂ ಸಾಕಷ್ಟು ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಮಹತ್ವದ ಆದೇಶ ನೀಡಿದೆ. ಪ್ರತಿ ವರ್ಷ ಕನಿಷ್ಠ ಎರಡು ಬಾರಿ ಟಿಇಟಿ (TET) ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಇದು 2028ರ ಗಡುವಿನೊಳಗೆ ಶಿಕ್ಷಕರು ಪರೀಕ್ಷೆಯನ್ನು ಎದುರಿಸಿ, ತಮ್ಮ ಉದ್ಯೋಗವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ

ಹಲ್ಲೆ ಘಟನೆಯ ನಂತರ ಅಭಿಷೇಕ್ ಬ್ಯಾನರ್ಜಿ ಸುರಕ್ಷತೆಗೆ ಹೆಲ್ಮೆಟ್ ಧರಿಸಿರುವುದು.Image Credit source: PTI

ಕೋಲ್ಕತಾ, ಮೇ 31: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ದಾಳಿ ಪ್ರಕರಣಕ್ಕೆ (Abhishek Banerjee assault case) ಸಂಬಂಧಿಸಿದಂತೆ ಈಗ ಒಂದು ಹೊಸ ತಿರುವು ಲಭಿಸಿದೆ. ದಕ್ಷಿಣ 24 ಪರಗಣ (South 24 Pargana) ಜಿಲ್ಲೆಯ ಸೋನಾರ್‌ಪುರದಲ್ಲಿ ನಡೆದ ಈ ದಾಳಿಯ ಪ್ರಕರಣದಲ್ಲಿ ಬಂಧಿತರಾಗಿರುವ ಹಲವು ಆರೋಪಿಗಳು ಟಿಎಂಸಿ ಪಕ್ಷದ ಮಾಜಿ ಶಾಸಕಿ ಲವ್ಲಿ ಮೈತ್ರಾ (Lovely Maitra) ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಬಹಿರಂಗವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಕ್ತಾಯದ ನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಪಕ್ಷದ ಕಾರ್ಯಕರ್ತರ ಕುಟುಂಬಗಳನ್ನು ಭೇಟಿಯಾಗಲು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸೋನಾರ್‌ಪುರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉದ್ರಿಕ್ತ ಸ್ಥಳೀಯರು ಮತ್ತು ಪ್ರತಿಭಟನಾಕಾರರ ಗುಂಪು ಅವರ ಮೇಲೆ ಕಲ್ಲು, ಮೊಟ್ಟೆ ಹಾಗೂ ಶೂಗಳನ್ನು ಎಸೆದು ತೀವ್ರವಾಗಿ ದಾಳಿ ನಡೆಸಿತ್ತು.

ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಅದರಲ್ಲಿರುವ ಕೆಲ ಆರೋಪಿಗಳು ಮಾಜಿ ಟಿಎಂಸಿ ಶಾಸಕಿ ಲವ್ಲಿ ಮೈತ್ರಾ ಅವರಿಗೆ ಅತ್ಯಂತ ಆಪ್ತನಾಗಿದ್ದಾರೆ ಎಂದು ನ್ಯೂಸ್18 ನಲ್ಲಿ ವರದಿಯಾಗಿದೆ. ಬಂಧಿತ ಐವರಲ್ಲಿ ತಪನ್ ಮೈತಿ, ನಿರ್ಮಲ್ಯ ಸೇನ್​ಗುಪ್ತ, ಕಾಜಲ್ ದಾಸ್ ಮತ್ತು ದೇವಶಿಷ್ ದತ್ತ ಅವರು ಮಾಜಿ ಶಾಸಕಿಗೆ ಆಪ್ತರೆನ್ನಲಾಗಿದೆ. ಹಾಗೆಯೇ, ಮತ್ತೊಬ್ಬ ಬಂಧಿತ ಆರೋಪಿ ಅಶೋಕ್ ಗಯಾನ್ ಕೂಡ ಟಿಎಂಸಿ ಕಾರ್ಯಕರ್ತ ಎನ್ನಲಾಗಿದೆ.

ಇದನ್ನೂ ಓದಿ: ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಬೃಹತ್ ವಂಚನೆ; 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ ಸಿಎಂ ಸುವೇಂದು ಘೋಷಣೆ

ದಾಳಿ ನಡೆಸಿದ ವ್ಯಕ್ತಿಗಳು ಪ್ರತಿಪಕ್ಷವಾದ ಬಿಜೆಪಿಗೆ ಸೇರಿದವರೆಂದು ಈ ಹಿಂದೆ ಟಿಎಂಸಿ ಆರೋಪಿಸಿತ್ತು. ಆದರೆ ಈಗ ಬಂಧಿತ ಆರೋಪಿಗಳು ಸ್ವಪಕ್ಷದ ಮಾಜಿ ಶಾಸಕಿಯ ಜೊತೆಗೇ ಸಂಪರ್ಕದಲ್ಲಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ದಾಳಿಯ ಸಮಯದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಬಟ್ಟೆಗಳನ್ನು ಹರಿದು ಹಾಕಲಾಗಿತ್ತು ಹಾಗೂ ಅವರ ಕನ್ನಡಕವೂ ಮುರಿದಿತ್ತು. ಭದ್ರತಾ ಸಿಬ್ಬಂದಿ ಅವರಿಗೆ ಹೆಲ್ಮೆಟ್ ಧರಿಸಿ ರಕ್ಷಣೆ ನೀಡಬೇಕಾಗಿ ಬಂದಿತ್ತು. ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಭಿಷೇಕ್ ಬ್ಯಾನರ್ಜಿ, “ಅವರು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು, ಈ ಇಡೀ ಘಟನೆಯ ವೀಡಿಯೊ ಸಾಕ್ಷ್ಯಗಳು ನಮ್ಮ ಬಳಿಯಿದ್ದು ನಾವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ” ಎಂದು ಹೇಳಿದ್ದರು.

ಆರಂಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ನೇರವಾಗಿ ದೂರಿದ್ದರು. ಆದರೆ, ಬಂಧಿತ ಆರೋಪಿಯ ಟಿಎಂಸಿ ನಂಟಿನ ವಿವರಗಳು ಹೊರಬರುತ್ತಿದ್ದಂತೆ, ಇದು ಟಿಎಂಸಿ ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯದ (Internal Feud) ಪರಿಣಾಮ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಪ್ರಸ್ತುತ ಪಶ್ಚಿಮ ಬಂಗಾಳ ಪೊಲೀಸರು ಈ ಆಂತರಿಕ ನಂಟಿನ ಕುರಿತು ಹಾಗೂ ದಾಳಿಯ ಹಿಂದಿನ ನೈಜ ಪಿತೂರಿಯ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್​​ ಠಾಣೆ ಸಮೀಪವೇ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ?

ಕಲ್ಯಾಣ್ ಬ್ಯಾನರ್ಜಿ ಮೇಲೂ ಹಲ್ಲೆ

ಇದೇ ವೇಳೆ, ಹೂಗ್ಲಿಯಲ್ಲಿ ಮತ್ತೊಬ್ಬ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆಯೂ ಹಲ್ಲೆಯಾಗಿರುವ ಘಟನೆ ವರದಿಯಾಗಿದೆ. ಚಂದಿತಾಲ ಪೊಲೀಸ್ ಠಾಣೆಗೆ ಹೋಗುತ್ತಿರುವ ವೇಳೆ ಈ ಹಲ್ಲೆ ನಡೆದಿದೆ. ಭದ್ರತಾ ಸಿಬ್ಬಂದಿ ಇದ್ದಾಗ್ಯೂ ಈ ಘಟನೆಯಾಗಿತ್ತು. ಇದು ಬಿಜೆಪಿಯವರು ಮಾಡಿರುವ ಕೆಲಸ ಎಂದು ಕಲ್ಯಾಣ್ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

DK Shivakumar Oath-Taking: ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಕುಮಾರಕೃಪಾ ಅತಿಥಿ ಗೃಹವೇ ಸರ್ಕಾರಿ ನಿವಾಸ?

ಬೆಂಗಳೂರು, ಮೇ 31: ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಕುಮಾರಕೃಪ ಅತಿಥಿ ಗೃಹವನ್ನು ತಮ್ಮ ತಾತ್ಕಾಲಿಕ ಸರ್ಕಾರಿ ನಿವಾಸವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿರುವ ಕೆಕೆ ಗೆಸ್ಟ್‌ಹೌಸ್‌ನಲ್ಲಿರುವ ಬೃಹತ್ ಕಲ್ಲಿನ ಕಟ್ಟಡದಲ್ಲಿ ಅವರು ವಾಸಿಸಲಿದ್ದಾರೆ. ಇದೇ ವೇಳೆ, ಹಾಲಿ ಕಾವೇರಿ ನಿವಾಸದಲ್ಲಿ ವಾಸಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಅದನ್ನು ಬಿಟ್ಟುಕೊಡುವಂತೆ ತಕ್ಷಣ ಕೇಳದಿರಲು ಡಿ.ಕೆ. ಶಿವಕುಮಾರ್ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಕುಮಾರಕೃಪ ಗೆಸ್ಟ್‌ಹೌಸ್‌ಗೆ ಈಗಾಗಲೇ ಪೊಲೀಸರಿಂದ ಭದ್ರತೆ ಒದಗಿಸಲಾಗಿದ್ದು, ಹಿರಿಯ ಪೊಲೀಸ್ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಭೆಗಳು ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಆಲಿಸಲು ಚಿಂತನೆ ನಡೆಸಿದ್ದಾರೆ.

 

 

Source link

ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ

ಮಗು ಹುಟ್ಟಿದರೆ ನೆಲಭೋಜನ ಮಾಡುವುದಾಗಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಗಂಡು ಮಗು ಜನಿಸಿತು. ಈಗ ಮಗನೊಂದಿಗೆ ಬಂದು ಶ್ರೀಕೃಷ್ಣನ ದರ್ಶನ ಪಡೆದ ಅವರು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನೆಲಭೋಜ‌ನ (Nela Bhojana) ಪ್ರಸಾದ ಸ್ವೀಕರಿಸಿದ್ದಾರೆ. ಜನಸಾಮಾನ್ಯರೊಂದಿಗೆ ಕುಳಿತು ನೆಲಭೋಜ‌ನ ಸ್ವೀಕರಿಸಿದ ಸ್ಟಾರ್ ದಂಪತಿಯ ವಿಡಿಯೋ ಲಭ್ಯವಾಗಿದೆ. ಮಗನೊಂದಿಗೆ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದವನ್ನು ಕೂಡ ಅವರು ಪಡೆದರು. ‘ಬಹಳ ಗ್ಯಾಪ್ ಬಳಿಕ ನಾವು ಉಡುಪಿ ಮಠಕ್ಕೆ ಬಂದು ಶ್ರೀಕೃಷ್ಣನ ದರ್ಶನ ಮಾಡಿದೆವು. ಒಂದೂವರೆ ವರ್ಷದ ಹಿಂದೆ ಬಂದು ನಾವು ನೆಲಭೋಜನದ ಹರಿಕೆ ಮಾಡಿಕೊಂಡಿದ್ದೆವು. ದೇವರ ಅನುಗ್ರಹ ನಮಗೆ ಧಕ್ಕಿದೆ ಎಂಬುದು ನಮ್ಮ ನಂಬಿಕೆ. ಎಲ್ಲ ಪದ್ಧತಿಯು ಗಟ್ಟಿ ಹಿನ್ನೆಲೆಯಲ್ಲಿ ಹುಟ್ಟಿರುತ್ತದೆ. ಅದನ್ನು ನಾವು ಪಾಲಿಸಿದ್ದೇವೆ’ ಎಂದು ವಸಿಷ್ಠ ಸಿಂಹ (Vasishta Simha) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ರೋಡ್ ರೇಜ್: ಕಾಲೇಜು ವಿದ್ಯಾರ್ಥಿ ಮೇಲೆ ನಡುರಸ್ತೆಯಲ್ಲೇ ಚಾಕು ಇರಿತ!

ಬೆಂಗಳೂರು, ಮೇ 31: ನಗರದಲ್ಲಿ ವಾಹನ ಸವಾರರ ಅತಿರೇಕದ ವರ್ತನೆ ಮತ್ತು ಆಕ್ರೋಶ ಮತ್ತೊಂದು ಭೀಕರ ಘಟನೆಗೆ ಕಾರಣವಾಗಿದೆ. ರಸ್ತೆ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಸಂಚಾರ ವಿವಾದವೊಂದು (Road Rage) ವಿಕೋಪಕ್ಕೆ ತಿರುಗಿ, ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಮುಖ್ಯಾಂಶಗಳು

  • ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದ ಪಿಯುಸಿ ವಿದ್ಯಾರ್ಥಿಗೆ ಚಾಕುವಿನಿಂದ ಭೀಕರವಾಗಿ ಇರಿಯಲಾಗಿದೆ.
  • ಸೈಡ್ ಕೊಡುವ ಕ್ಷುಲ್ಲಕ ವಿಚಾರಕ್ಕೆ ಮೂವರು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
  • ಐಸಿಯುನಲ್ಲಿ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳಿಗಾಗಿ ಪೊಲೀಸರ ಜಾಲ ಬೀಸಿದ್ದಾರೆ.

ಯುವಕನ ವಾಹನವನ್ನ ಅಡ್ಡಗಟ್ಟಿದ ದುಷ್ಕರ್ಮಿಗಳು

ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದ ಯುವಕನ ಮೇಲೆ ದುಷ್ಕರ್ಮಿಗಳು ನಡುರಸ್ತೆಯಲ್ಲೇ ದಾಳಿ ಮಾಡಿದ್ದಾರೆ. ಪಾರ್ಟ್​ ಟೈಮ್ ಬೈಕ್ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿರುವ ಆತ ತನ್ನ ಸ್ನೇಹಿತರೊಂದಿಗೆ ಮಾಮೂಲಿಯಾಗಿ ತೆರಳುವ ಜ್ಯೂಸ್ ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ಸವಾರನೊಬ್ಬ ಸೈಡ್ ಕೊಡುವಂತೆ ಹಲವು ಬಾರಿ ಹಾರ್ನ್​ ಮಾಡಿದ್ದಾನೆ. ವಿದ್ಯಾರ್ಥಿಯೂ ಜಾಸ್ತಿ ತಲೆ ಕೆಡಿಸಿಕೊಳ್ಳದೆ ದಾರಿ ಬಿಟ್ಟು ಕೊಟ್ಟಿದ್ದಾನೆ.

ಆದರೂ ಸುಮ್ಮನಿರದ ಸವಾರ, ಕಿರುಚಾಡಿ ಜಗಳಕ್ಕಿಳಿದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಅಲ್ಲಿಂದ ಕಾಲ್ಕಿತ್ತ ಸವಾರ ಇನ್ನೋರ್ವ ಬೈಕ್ ಸವಾರನಿಂದಿಗೆ ಬಂದು ವಿದ್ಯಾರ್ಥಿಯ ವಾಹನವನ್ನು ಅಡ್ಡಗಟ್ಟಿದ್ದಾನೆ. ಆತನ ಬೈಕ್ ಕೀಲಿಯನ್ನು ಕಸಿದುಕೊಂಡ ಇಬ್ಬರೂ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಸಮೀಪದ ಬಾರ್ ಒಂದರ ಬಳಿ ಕರೆದುಕೊಂಡು ಹೋಗಿದ್ದಾರೆ. ಯಾರಿಲ್ಲದ ಸಮಯ ಸಾಧಿಸಿ ವಿದ್ಯಾರ್ಥಿಗೆ ದೊಣ್ಣೆಯಿಂದ ಥಳಿಸಲು ಮುಂದಾಗಿದ್ದಾರೆ. ಈ ವೇಳೆ ವಿದ್ಯಾರ್ಥಿಯ ಸಂಬಂಧಿಕರೊಬ್ಬರು ಮಧ್ಯ ಪ್ರವೇಶಿಸಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಚಾಕುವಿನಿಂದ ಇರಿತ

ಬದುಕಿತು ಬಡ ಜೀವ ಎಂದು ವಿದ್ಯಾರ್ಥಿ ಸ್ವಲ್ಪ ದೂರ ಕ್ರಮಿಸಿದಾಗ ಮತ್ತೆ ಅದೇ ಇಬ್ಬರು ಬೈಕ್ ಸವಾರರು ಇನ್ನೋರ್ವನೊಂದಿಗೆ ನಿಂತಿದ್ದರು. ಈತ ಬಂದ ಕೂಡಲೆ ಅವನನ್ನು ರಸ್ತೆ ಬದಿಗೆ ಎಳೆದುಕೊಂಡು ಬಂದು ಚಾಕುವಿನಿಂದ ಎದೆ, ಕುತ್ತಿಗೆ, ಬೆನ್ನು ಎಲ್ಲೆಂದರಲ್ಲಿ ಇರಿದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಸ್ಥಳೀಯರು ಮತ್ತು ಹಾದಿಹೋಕರು ರಕ್ಷಿಸಿ, ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ವಿದ್ಯಾರ್ಥಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ರಸ್ತೆ ವಿವಾದಗಳಿಗೂ ಸವಾರರು ಮಾರಕಾಸ್ತ್ರಗಳನ್ನು ಬಳಸಿ ರೌಡಿಸಂ ಪ್ರದರ್ಶಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನು ಹುಟ್ಟಿಸಿದೆ. ಈ ಜಂಟಿ ದಾಳಿಗೆ ಸಂಬಂಧಿಸಿದಂತೆ ಗಾಯಾಳು ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

PSG ಚಾಂಪಿಯನ್ಸ್​… ಈ ಸಲ ಕಪ್ RCBಗೆ?

ಯುಇಎಫ್‌ಎ ಚಾಂಪಿಯನ್ಸ್ ಲೀಗ್​ನಲ್ಲಿ ಫ್ರಾನ್ಸ್ ಕ್ಲಬ್ ಪ್ಯಾರಿಸ್ ಸೈಂಟ್-ಜರ್ಮೈನ್ (PSG) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಈ ಬಾರಿ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಇಂತಹದೊಂದು ಲೆಕ್ಕಾಚಾರಕ್ಕೆ ಮುಖ್ಯ ಕಾರಣ ಉಭಯ ತಂಡಗಳ ನಡುವಣ ಸಾಮ್ಯತೆ.

ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು ಯುರೋಪ್​ನ ಬಲಿಷ್ಠ ಫುಟ್​ಬಾಲ್ ತಂಡ ಎನಿಸಿಕೊಂಡರೂ ಮೊದಲ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲಲು ತೆಗೆದುಕೊಂಡಿದ್ದು ಬರೋಬ್ಬರಿ 55 ವರ್ಷಗಳು. ಅದರಂತೆ 2025 ರ ಚಾಂಪಿಯನ್ಸ್ ಲೀಗ್​ ಫೈನಲ್​ನಲ್ಲಿ ಇಂಟರ್ ಮಿಲಾನ್ ತಂಡವನ್ನು 5-0 ಅಂತರದಿಂದ ಮಣಿಸಿ ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನ ಬಲಿಷ್ಠ ತಂಡ ಎನಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು 18 ವರ್ಷಗಳನ್ನು ತೆಗೆದುಕೊಂಡಿತ್ತು. ಅದರಂತೆ ಐಪಿಎಲ್ 2025ರ ಫೈನಲ್​ನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಮೊದಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು.

ಉಭಯ ತಂಡಗಳು ಸುದೀರ್ಘ ಕಾಯುವಿಕೆಯ ಬಳಿಕ 2025 ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಆದರೆ ಮೊದಲ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಪ್ಯಾರಿಸ್ ಸೈಂಟ್-ಜರ್ಮೈನ್ (PSG) ತನ್ನ ಕಿರೀಟ ಮುಡಿಗೇರಿಸಿಕೊಂಡಿದೆ.

ಅಂದರೆ ಶನಿವಾರ ಬುಡಾಪೆಸ್ಟ್‌ನ ಪುಸ್ಕಾಸ್ ಅರೆನಾದಲ್ಲಿ ನಡೆದ 2026ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್​ ಫೈನಲ್ ಪಂದ್ಯದಲ್ಲಿ PSG ತಂಡವು ಆರ್ಸೆನಲ್ ಕ್ಲಬ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4–3 ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿದೆ.

ಅಂದರೆ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು 2025, 2026 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಕಳೆದ ಬಾರಿ ಪಿಎಸ್​ಜಿ ಚಾಂಪಿಯನ್ ಆದ ಬಳಿಕ ಆರ್​ಸಿಬಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಪಿಎಸ್​ಜಿ ಮತ್ತೊಮ್ಮೆ ಯುರೋಪ್ ಲೀಗ್​ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಕಾರಣ, ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ.

 

Source link

‘ಹಸಿಬಿಸಿ ಸೀನ್ ಬಗ್ಗೆ ಪತ್ನಿಗೆ ಆಮೇಲೆ ಗೊತ್ತಾಗಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದೆ’: ಬಾಬಿ ಡಿಯೋಲ್

ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ‘ಅನಿಮಲ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಅವರ ಸ್ಟಾರ್ಡಮ್ ಮತ್ತಷ್ಟು ಹೆಚ್ಚಾಗಿದೆ. ಆದರೆ, ಅದಕ್ಕೂ ಮುನ್ನ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದು ಪ್ರಕಾಶ್ ಝಾ ನಿರ್ದೇಶನದ ‘ಆಶ್ರಮ್’ (Aashram) ವೆಬ್ ಸೀರೀಸ್. ಇದೀಗ ಬಾಬಿ ಡಿಯೋಲ್ ಈ ಸೀರೀಸ್‌ನಲ್ಲಿದ್ದ ಹಸಿಬಿಸಿ ದೃಶ್ಯಗಳ ಬಗ್ಗೆ ಮತ್ತು ಅದನ್ನು ತಮ್ಮ ಪತ್ನಿ ತನ್ಯಾ ಡಿಯೋಲ್ ಬಳಿ ಮೊದಲು ಒಪ್ಪಿಕೊಂಡಿದ್ದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

‘ನಾನು ಆಶ್ರಮ್ ವೆಬ್ ಸೀರೀಸ್‌ನ ಕಥೆ ಕೇಳಿದಾಗ, ಆ ಬಗ್ಗೆ ನನ್ನ ತಂದೆ ಧರ್ಮೇಂದ್ರ ಅವರಿಗಾಗಲಿ, ತಾಯಿಗಾಗಲಿ ಅಥವಾ ಸಹೋದರ ಸನ್ನಿ ಡಿಯೋಲ್‌ಗಾಗಲಿ ವಿಷಯ ತಿಳಿಸಿರಲಿಲ್ಲ. ನಾನು ಕೇವಲ ಒಬ್ಬರೇ ಒಬ್ಬ ವ್ಯಕ್ತಿಗೆ ಈ ವಿಷಯ ಹೇಳಿದ್ದೆ, ಅದು ನನ್ನ ಪತ್ನಿ ತನ್ಯಾಳಿಗೆ ಮಾತ್ರ. ಏಕೆಂದರೆ ಚಿತ್ರದಲ್ಲಿದ್ದ ಇಂಟಿಮೇಟ್ ಮತ್ತು ಬೋಲ್ಡ್ ದೃಶ್ಯಗಳ ಬಗ್ಗೆ ನಾನು ಅವಳಿಗೆ ಮೊದಲೇ ಹೇಳಬೇಕಾಗಿತ್ತು. ಒಂದು ವೇಳೆ ಆಕೆಗೆ ಆಮೇಲೆ ಈ ವಿಷಯ ಗೊತ್ತಾಗಿದ್ದರೆ ನಾನು ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತಿದ್ದೆ’ ಎಂದು ಬಾಬಿ ಡಿಯೋಲ್ ನಗುತ್ತಾ ಹೇಳಿದ್ದಾರೆ.

ತಮ್ಮ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತ ಪತ್ನಿ ತನ್ಯಾ ಡಿಯೋಲ್ ಅವರನ್ನು ಬಾಬಿ ಡಿಯೋಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ನಾನು ಇಂದು ಏನಾಗಿದ್ದೇನೋ ಅದಕ್ಕೆ ನನ್ನ ಪತ್ನಿಯೇ ಕಾರಣ. ನನ್ನ ವೃತ್ತಿಜೀವನದ ಕೆಟ್ಟ ದಿನಗಳಲ್ಲಿ ಆಕೆ ಇಡೀ ಮನೆಯನ್ನು ನಿಭಾಯಿಸಿದಳು. ಆಕೆಯೇ ನನ್ನ ಬೆನ್ನೆಲುಬು. ನಾನು ವಿಭಿನ್ನ ಪಾತ್ರಗಳನ್ನು ಮಾಡಲು ಆಕೆ ಸದಾ ಪ್ರೋತ್ಸಾಹಿಸುತ್ತಾಳೆ ಮತ್ತು ನನ್ನಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಲು ಸಹಾಯ ಮಾಡಿದ್ದಾಳೆ’ ಎಂದು ಭಾವುಕರಾಗಿದ್ದಾರೆ.

ಕಳೆದ ವರ್ಷ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಬಿ, ‘ಇನ್ಮುಂದೆ ನನಗೆ ಹೀರೋ ಪಾತ್ರಗಳು ಸಿಗುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಅದಕ್ಕಾಗಿಯೇ ವಿಭಿನ್ನ ಶೇಡ್ ಇರುವ ಬಾಬಾ ನಿರಾಲಾ ಪಾತ್ರವನ್ನು ಒಪ್ಪಿಕೊಂಡೆ. ಸೀರೀಸ್ ಬಿಡುಗಡೆಯಾದ ಮೇಲೆ ಜನರ ರಿಯಾಕ್ಷನ್ ಹೇಗಿರುತ್ತೆ ಎಂದು ಕಾಯುತ್ತಿದ್ದೆ’ ಎಂದು ಹೇಳಿದ್ದರು. ‘ಆಶ್ರಮ್’ ಸೀರೀಸ್ ಸೂಪರ್ ಹಿಟ್ ಆಗುವ ಮೂಲಕ ಬಾಬಿ ಕೆರಿಯರ್‌ಗೆ ಹೊಸ ಜನ್ಮ ನೀಡಿತು.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾ ಮಹಿಳಾ ವಿರೋಧಿ ಚಿತ್ರ ಅಲ್ಲ; ಸಿಕ್ತು ಸ್ಪಷ್ಟನೆ

‘ಆಶ್ರಮ್’ ಸೀರೀಸ್‌ನಲ್ಲಿ ಬಾಬಾ ನಿರಾಲಾ ಎಂಬ ವಿಲನ್ ರೂಪದ ಸ್ವಾಮೀಜಿ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸಿದ್ದರು. ಆಶ್ರಮದ ಹೆಸರಿನಲ್ಲಿ ಡ್ರಗ್ಸ್ ಮಾಫಿಯಾ, ವಂಚನೆ ಮತ್ತು ಯುವತಿಯರ ಶೋಷಣೆ ಮಾಡುವ ಈ ಪಾತ್ರದಲ್ಲಿ ಅವರ ನಟನೆಯು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಸದ್ಯ ಬಾಬಿ ಡಿಯೋಲ್ ಅವರು ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಬಂದರ್’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಜೂನ್ 5ರಂದು ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೊಲೀಸ್​​ ಠಾಣೆ ಸಮೀಪವೇ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ?

ಕಲ್ಯಾಣ್ ಬ್ಯಾನರ್ಜಿ ಮೇಲೆ ಬಿಜೆಪಿಗರಿಂದ ಹಲ್ಲೆ ಆರೋಪImage Credit source: PTI

ಕೋಲ್ಕತ್ತಾ, ಮೇ 31: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದಿತಾಲಾ ಪೊಲೀಸ್ ಠಾಣೆ ಸಮೀಪ ತೃಣಮೂಲ ಕಾಂಗ್ರೆಸ್ (Trinamool Congress) ಸಂಸದ ಹಾಗೂ ನಾಯಕ ಕಲ್ಯಾಣ್ ಬ್ಯಾನರ್ಜಿ (Kalyan Banerjee)​​ ಮೇಲೆ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. ಚುನಾವಣೆ ನಂತರ ನಡೆದ ಹಿಂಸಾಚಾರದ ಕುರಿತು ಮನವಿ ಸಲ್ಲಿಸಲು ಅವರು ಪೊಲೀಸ್ ಠಾಣೆಗೆ ತೆರಳಿದ್ದ ವೇಳೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ ಆರೋಪ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಕಲ್ಯಾಣ್ ಬ್ಯಾನರ್ಜಿ ನೆಲದ ಮೇಲೆ ಮಲಗಿರುವುದು ಹಾಗೂ ಸುತ್ತಮುತ್ತ ಹಲವರು ಜಮಾಯಿಸಿರುವುದನ್ನು ಆ ವಿಡಿಯೋದಲ್ಲಿ ಗಮನಿಸಬಹುದಾಗಿದೆ. ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಟಿಎಂಸಿ ಕಾರ್ಯಕರ್ತರು ಹಾಗೂ ಕಲ್ಯಾಣ್ ಬ್ಯಾನರ್ಜಿ ಪೊಲೀಸ್ ಠಾಣೆ ಸಮೀಪ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಬೃಹತ್ ವಂಚನೆ; 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ ಸಿಎಂ ಸುವೇಂದು ಘೋಷಣೆ

ಘಟನೆ ಸಂಬಂಧಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ತಮ್ಮ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಒಬ್ಬನೇ ಬರುತ್ತಿದ್ದೆ, ನನ್ನ ಜೊತೆಗೆ ಯಾರೂ ಇರಲಿಲ್ಲ. ಈ ವೇಳೆ ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಡ್ಯೂಸ್ ಬಾಲ್‌ನಿಂದ ನನ್ನ ತಲೆಗೆ ಹೊಡೆದಿದ್ದಾರೆ. ಸಂಸದರನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿರುವುದು ಬಗ್ಗೆ ಜನರೇ ತೀರ್ಮಾನಿಸಬೇಕು ಎಂದಿದ್ದಾರೆ

ನಿನ್ನೆಯಷ್ಟೇ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್​ ಬ್ಯಾನರ್ಜಿ ಮೇಲೂ ದಾಳಿ ನಡೆದಿತ್ತು. ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರಕ್ಕೆ ಭೇಟಿ ನೀಡಿದ್ದ ವೇಳೆ ಪ್ರತಿಭಟನಾಕಾರರು ಅವರ ಮೇಲೆ ಕಲ್ಲು, ಮೊಟ್ಟೆ ಹಾಗೂ ಚಪ್ಪಲಿಗಳನ್ನು ಎಸೆದಿದ್ದರು ಎಂದು ಆರೋಪಿಸಲಾಗಿತ್ತು. ಚುನಾವಣೆ ನಂತರದ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ಅಭಿಷೇಕ್ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಈ ದಾಳಿಯ ಬಳಿಕ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಹಿಂಸಾಚಾರದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಅಭಿಷೇಕ್ ಬ್ಯಾನರ್ಜಿ ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಗಳು ಹಾಗೂ ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:50 pm, Sun, 31 May 26

Source link