Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 27ರ ದಿನಭವಿಷ್ಯ – Kannada News | Numerology Forecast Jan 27: Birth Numbers 1, 2, 3 What Your Day Holds
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಈ ದಿನ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಸ್ಥಾನ ಪಡೆದುಕೊಳ್ಳುತ್ತವೆ. ಮನೆ ಖರ್ಚು, ಅಲಂಕಾರ ಅಥವಾ ದುರಸ್ತಿ ಬಗ್ಗೆ ಚರ್ಚೆ ನಡೆಯಬಹುದು. ದಿನಸಿ ಪದಾರ್ಥಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಲಿದೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೋ…