WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿ ಇತಿಹಾಸ ಬರೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇದೀಗ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ಗಳಿಂದ ಪರಾಜಯಗೊಂಡಿದ್ದ ಆರ್ಸಿಬಿ ತಂಡವು ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ 15 ರನ್ಗಳಿಂದ ಮುಗ್ಗರಿಸಿದೆ.
ಈ ಎರಡು ಸೋಲುಗಳೊಂದಿಗೆ ಆರ್ಸಿಬಿ ತಂಡದ ಡೈರೆಕ್ಟ್ ಫೈನಲ್ ಎಂಟ್ರಿಗೆ ತೊಡಕುಂಟಾಗಿದೆ. ಅಂದರೆ ಆರ್ಸಿಬಿ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸಿದ್ದರೆ ನೇರವಾಗಿ ಫೈನಲ್ಗೆ ಪ್ರವೇಶಿಸುತ್ತಿತ್ತು. ಈ ಮೂಲಕ ಎಲಿಮಿನೇಟರ್ ಪಂದ್ಯವಾಡುವ ರಿಸ್ಕ್ನಿಂದ ಪರಾಗಬಹುದಿತ್ತು.
ಇದೀಗ ಎರಡು ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಂದರೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್ಸಿಬಿ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.
ಆರ್ಸಿಬಿ ತಂಡವು ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಜನವರಿ 29 ರಂದು ನಡೆಯಲಿರುವ ಈ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದರೆ ಫೈನಲ್ಗೆ ಪ್ರವೇಶಿಸುವುದು ಖಚಿತ. ಒಂದು ವೇಳೆ ಯುಪಿ ವಾರಿಯರ್ಸ್ ವಿರುದ್ಧ ಕೂಡ ಸೋತರೆ ನೆಟ್ ರನ್ ರೇಟ್ ಲೆಕ್ಕಾಚಾರ ಪರಿಗಣನೆಗೆ ಬರಲಿದೆ.
ಏಕೆಂದರೆ ಮುಂದಿನ ಪಂದ್ಯಗಳ ಮೂಲಕ ಉಳಿದ ನಾಲ್ಕು ತಂಡಗಳಿಗೂ 10 ಅಂಕಗಳನ್ನು ಗಳಿಸಲು ಉತ್ತಮ ಅವಕಾಶವಿದೆ. ಹೀಗೆ ಟಾಪ್-3 ತಂಡಗಳು 10 ಅಂಕಗಳನ್ನು ಪಡೆದುಕೊಂಡರೆ, ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಅಂದರೆ ಲೀಗ್ ಹಂತದ ಪಂದ್ಯದ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ಫೈನಲ್ಗೇರಲಿದೆ.
ಇದೀಗ 10 ಅಂಕಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯದಲ್ಲಿ ಗೆದ್ದರೆ 12 ಅಂಕಗಳನ್ನು ಪಡೆಯಬಹುದು. ಈ ಮೂಲಕ ಎಲ್ಲಾ ತಂಡಗಳನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು. ಅಂದರೆ ಆರ್ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಮಾತ್ರ ನೇರವಾಗಿ ಫೈನಲ್ಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 27 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಮಂಗಳವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ನವಮಿ ಜೊತೆಗೆ ರೇವತಿ ನಕ್ಷತ್ರ ಮತ್ತು ಬಾಲವ ಕರಣ ಹೊಂದಿದ್ದು, ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಸಂಬಂಧಗಳು ಮತ್ತು ಇತರೆ ಪ್ರಮುಖ ವಿಷಯಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಪ್ರತಿ ರಾಶಿಯವರು ಎದುರಿಸಬಹುದಾದ ಸವಾಲುಗಳು ಮತ್ತು ಪಡೆಯಬಹುದಾದ ಅವಕಾಶಗಳನ್ನು ವಿವರಿಸಲಾಗಿದೆ.
ಬೆಂಗಳೂರು, ಜನವರಿ 27: ಮಾನವನ ಜೀವನದಲ್ಲಿ ಯಾವ ರೀತಿ ಸಮಸ್ಯೆ ಬಂದರೆ ಯಾವ ರೀತಿ ದೇವರನ್ನು ಪೂಜಿಸಬೇಕೆಂದು ಡಾ.ಬಸವರಾಜ್ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಸೂರ್ಯ, ಚಂದ್ರ ಸೇರಿದಂತೆ ಎಲ್ಲಾ ಗ್ರಹಗಳ ದೋಷವಿದ್ದಲ್ಲಿ, ಆ ಗ್ರಹಕ್ಕೆ ಸಂಬಂಧಿಸಿದ ದಿನದಂದು ಭಕ್ತಿಪೂರ್ವಕವಾಗಿ ನಿರ್ದಿಷ್ಟ ನಿಯಮವನ್ನು ಅನುಸರಿಸಿ ಸ್ನಾನ ಮಾಡುವುದರಿಂದಲೇ ದೋಷ ಪರಿಹಾರವಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹೋಗುವುದು, ದಾನ-ಧರ್ಮ ಮಾದುವುದು, ವೃತಗಳನ್ನು ಮಾಡುವುದರ ಜೊತೆಗೆ ಕೆಲವೊಂದು ಹೋಮ ಹವನ, ಉಪಾಯಗಳ ಮೂಲಕವೂ ಸಂಕಷ್ಟಗಳು ಬಗೆರಿಯುತ್ತವೆ ಎಂದು ಗುರೂಜಿ ಹೇಳಿದ್ದಾರೆ.
ಬೆಳಗಾವಿ, ಜನವರಿ 27: ಗೋವಾದಿಂದ ಬೆಳಗಾವಿ (Belagavi) ಚೋರ್ಲಾ ಮಾರ್ಗವಾಗಿ ಎರಡು ಕಂಟೇನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ 400 ಕೋಟಿ ರೂ. ಹಣವನ್ನು ಕಳೆದ ಅಕ್ಟೋಬರ್ನಲ್ಲಿ ಹೈಜಾಕ್ (400 crore robbery case) ಮಾಡಲಾಗಿತ್ತು ಎಂಬ ಪ್ರಕರಣ ಸಂಬಂಧ ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದೆ. 2 ಸಾವಿರ ರೂಪಾಯಿ ಮೌಲ್ಯದ ಸುಮಾರು 400 ಕೋಟಿ ರೂಪಾಯಿ ಹಳೇ ನೋಟುಗಳನ್ನು ತುಂಬಿದ್ದ ಟ್ರಕ್ ದರೋಡೆ ಮಾಡಲಾಗಿತ್ತು ಎಂಬ ಆರೋಪವಿದೆ. ಇದೀಗ ಈ ಹಣದ ಹಿಂದೆ ಗುಜರಾತ್ ರಾಜಕಾರಣಿ ಹೆಸರು ಕೇಳಬಂದಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ದರೋಡೆಯಾದ ಹಣ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ ಬಳಕೆ ಆಗಿದೆ. ನೋಟು ಬದಲಾವಣೆ ದಂಧೆ ನಡೆದಿದೆ, ಹಣ ಇವರದ್ದೇ ಇರಬೇಕು, ಅವರದ್ದೇ ಇರಬೇಕು ಎಂದು ಪರಸ್ಪರ ಕೆಸರೆರಚಾಟ ತಾರಕಕ್ಕೇರಿದೆ.
ಕಾಂಗ್ರೆಸ್ನವರೇ ಹಣ ಕಳುಹಿಸಿದ್ದಾರೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದು, ಅವರ ಮಾತಿಗೆ ಮಾತಿಗೆ ಮಾಜಿ ಸಿಎಂ ಸದಾನಂದಗೌಡ ಧ್ವನಿಗೂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಣ ಸಂಗ್ರಹ ಮಾಡುತ್ತದೆ, ಬೇರೆ ಬೇರೆ ಕಡೆ ಕಳಿಸಿಕೊಡುತ್ತದೆ ಎಂದಿದ್ದಾರೆ. ಈ ಮಾತಿಗೆ ಗರಂ ಆದ, ಸಚಿವ ಭೈರತಿ ಸುರೇಶ್, ನೋಟ್ ಮೇಲೆ ಕಾಂಗ್ರೆಸ್ ಎಂದು ಬರೆದಿದೆಯಾ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ, ಹಣ ಸಾಗಾಟಕ್ಕೆ ಸಂಬಂಧಿಸಿದ ಮೂರೂ ರಾಜ್ಯಗಳಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪ್ರಧಾನಿ ಮೋದಿಗೆ ಕಲಬುರಗಿಯಲ್ಲಿ ರೊಟ್ಟಿ ಮಾಡುವವರ ಬಗ್ಗೆ ಗೊತ್ತಾಗುತ್ತದೆ. ದರೋಡೆ ಬಗ್ಗೆ ಯಾಕೆ ಗೊತ್ತಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯ ಗಡಿಭಾಗದಲ್ಲೇ ನಾಪತ್ತೆಯಾದ 400 ಕೋಟಿ ರೂ. ಬಗ್ಗೆ ಜಿಲ್ಲೆಯ ಸಚಿವರು ಪ್ರಶ್ನೆ ಎತ್ತಿದ್ದಾರೆ. ಮಹಾರಾಷ್ಟ್ರ ಪೊಲೀಸರೇ ನಮ್ಮ ಪೊಲೀಸರಿಗೆ ಸಹಕಾರ ಕೊಡುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
400 ಕೋಟಿ ರೂ. ಹಣ ಗುಜರಾತ್ ರಾಜಕಾಣಿಗೆ ಸೇರಿದ್ದಾ?
ದರೋಡೆಯಾಗಿತ್ತು ಎನ್ನಲಾದ 400 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಜಯೇಶ್ ಎಂಬಾತನ ಜೊತೆ ಮಹಾರಾಷ್ಟ್ರದ ಉದ್ಯಮಿ ಕಿಶೋರ್ ಮಾತನಾಡಿದ್ದಾನೆ ಎನ್ನಲಾದ ಆಡಿಯೋವೊಂದು ಸೋಮವಾರ ಬಹಿರಂಗವಾಗಿದೆ. ಅದರಲ್ಲ, ನನ್ನ ಮತ್ತು ವಿರಾಟ್‌ಗೆ ಪರಿಚಯವಿದ್ದ ವ್ಯಕ್ತಿ ಮಧ್ಯಸ್ಥಿಕೆ ವಹಿಸಿದ್ದಾರೆ. ಈ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿ ಗುಜರಾತ್‌ನ ದೊಡ್ಡ ರಾಜಕಾರಣ ಎಂದು ಹೇಳಲಾಗಿದೆ. ಹೀಗಾಗಿ ದರೋಡೆಯಾಗಿರುವ ಹಣ ಗುಜರಾತ್ ರಾಜಕಾಣಿಗೆ ಸೇರಿದ್ದಾ ಎಂಬ ಪ್ರಶ್ನೆ ಮೂಡಿದೆ. ಇದುವೇ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.
ಆಡಿಯೋದಿಂದ ಹುಟ್ಟಿವೆ ಹಲವು ಪ್ರಶ್ನೆ
ಆಡಿಯೋ ಪ್ರಕಾರ ಕಿಶೋರ್ ಹಣ ಕಳುಹಿಸುತ್ತಿದ್ದ ಎನ್ನಬಹುದು. ಆದರೆ, ಗೋವಾದಲ್ಲಿ ಹಣ ಕೊಟ್ಟಿದ್ಯಾರು? ಆ ದುಡ್ಡು ಕಿಶೋರ್‌ನದ್ದೇನಾ? ಗುಜರಾತ್ ರಾಜಕಾರಣಿಗೆ ಹೋಗಿತ್ತಾ? ಅಥವಾ ಗುಜರಾತ್ ರಾಜಕಾರಣಿಯೇ ನೋಟು ಬದಲಾವಣೆಗೆ ಕೊಟ್ಟಿದ್ದರಾ ಎಂಬುದು ನಿಗೂಢವಾಗಿದೆ. ಗುಜರಾತ್ ರಾಜಕಾರಣಿ ಕೂಡಾ ಬೇರೆ ಹಣದ ವ್ಯವಸ್ಥೆ ಮಾಡಿ, ಈ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂಬುದೂ ಆಡಿಯೋದಲ್ಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಪ್ರಕರಣಲ್ಲಿ ಗೊಂದಲವಿದೆ. ನಮ್ಮ ಪೊಲೀಸರು ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಮೊದಲಿಗೆ ಕಿಡ್ನಾಪ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು 400 ಕೋಟಿ ರೂ. ಮೂಲ ಬೆನ್ನತ್ತಿದ್ದಾರೆ.
ಒಟ್ಟಿನಲ್ಲಿ, 400 ಕೋಟಿ ರೂ. ದರೋಡೆ ಪ್ರಕರಣದ ಬಗ್ಗೆ ಕರ್ನಾಟಕದಲ್ಲಿ ಎಫ್ಐಆರ್ ದಾಖಲಾಗಿಲ್ಲ. ಆದರೂ ಮಹಾರಾಷ್ಟ್ರ, ಗೋವಾ ಪೊಲೀಸರ ಜೊತೆಗೆ ತನಿಖೆಗೆ ಇಳಿದಿದ್ದಾರೆ. ಈ ನಡುವೆ ರಾಜಕೀಯ ನಾಯಕರ ನಡುವೆ ವಾಕ್ಸಮರವೂ ಮುಂದುವರಿದಿದೆ. ಗುಜರಾತಿನ ರಾಜಕಾರಣಿ ಯಾರು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (Bigg Boss) ಮೂರನೇ ವಾರವೇ ಹೊರ ಬಂದ ಸತೀಶ್ ಸದಾ ಸುದ್ದಿಯಲ್ಲಿರೋ ಪ್ರಯತ್ನ ಮಾಡುತ್ತಿದ್ದಾರೆ. ಬಡಾಯಿಕೊಚ್ಚಿಕೊಳ್ಳುವುದರಲ್ಲಿ ಅವರು ಮುಂದು. ಇದು ಸುದೀಪ್ ಕಿವಿಗೂ ಬಿದ್ದಿದೆ. ಹೀಗಾಗಿ, ಬಿಗ್ ಬಾಸ್ ಫಿನಾಲೆಯಲ್ಲಿ ಸುದೀಪ್ ಅವರು ಈ ವಿಷಯವನ್ನು ವ್ಯಂಗ್ಯವಾಗಿ ಹೇಳಿದ್ದರು. ಆದರೆ, ಸತೀಶ್ ಗಂಭೀರವಾಗಿ ಸ್ವಿಕರಿಸಿಬಿಟ್ಟಿದ್ದಾರೆ. ಟಿವಿ9 ಕನ್ನಡದ ಜೊತೆ ಮಾತನಾಡುವಾಗ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಸುದೀಪ್ ಅವರು ವ್ಯಂಗ್ಯವಾಗಿ ಮಾತನಾಡಿದ್ದರು. ಸತೀಶ್ ಧರಿಸೋ ಗ್ಲಾಸ್ ಹಾಗೂ ಬಟ್ಟೆಗಳ ಬೆಲೆ ಲಕ್ಷಾಂತರ ರೂಪಾಯಿ ಇರುತ್ತದೆ. ಅವರಿಗೆ ನಾನು ಶೇಕ್ಹ್ಯಾಂಡ್ ಮಾಡಿದರೆ ಲಕ್ಷ ಲಕ್ಷ ವೀವ್ಸ್ ಬರುತ್ತದೆ. ಕಲರ್ಸ್ಗೆ ಮಿಲಿಯನ್ ವೀವ್ಸ್ ಹೆಚ್ಚು ಬರೋಕೆ ಅವರೇ ಕಾರಣ ಎಂದೆಲ್ಲ ಹೇಳಿ ಕಾಲು ಎಳೆದಿದ್ದರು. ಇದು ವ್ಯಂಗ್ಯವಾಗಿ ಹೇಳಿದ್ದು ಎಂದು ವೀಕ್ಷಕರಿಗೆ ಗೊತ್ತಾಗಿದೆ. ಆದರೆ, ಸತೀಶ್ಗೆ ಮಾತ್ರ ಇದು ಅರ್ಥವಾಗಿಯೇ ಇಲ್ಲ.
ಸುದೀಪ್ ಅವರು ಸತೀಶ್ ಅವರ ಗ್ಲಾಸ್ ಕೇಳಿದರಂತೆ. ‘ಬಿಗ್ ಬಾಸ್ ಫಿನಾಲೆ ಮುಗಿದ ಬಳಿಕ ನಡೆದ ಪಾರ್ಟಿಯಲ್ಲಿ ನಾನೂ ಇದ್ದೆ. ಅಲ್ಲಿ ನನ್ನ ಗ್ಲಾಸ್ ಬಗ್ಗೆಯೇ ಮಾತುಕತೆ ನಡೆಯಿತು. ಸುದೀಪ್ ಅವರು ಗ್ಲಾಸ್ ಕೊಡಿ ಎಂದು ನನಗೆ ಹೇಳಿದರು. ಆದರೆ, ನಾನು ಕೊಡಲ್ಲ ಎಂದೆ. ನನ್ನ ತೋರಿಸಿದ್ರೆ ಮಿಲಿಯನ್ ವೀವ್ಸ್ ಬರುತ್ತದೆ ಎಂದು ಸುದೀಪ್ ಅವರೇ ಹೇಳಿದ್ದಾರೆ’ ಎಂಬುದಾಗಿ ಸತೀಶ್ ಬಡಾಯಿ ಕೊಚ್ಚಿಕೊಂಡಿದ್ದಾರೆ.
‘ತುಕಾಲಿ ಸಂತೋಷ್ ನನ್ನ ಪಾತ್ರ ಮಾಡಿದ್ದರು. ಮೂರು ದಿನ ಬಿಟ್ಟು ಕರೆ ಮಾಡಿದ್ದರು. ಬಿಗ್ ಬಾಸ್ ಶೋ ಮಾಡಿದ್ದೇನೆ, ಸಾಕಷ್ಟು ಶೋ ಮಾಡಿದ್ದೇನೆ. ಆದರೆ, ಯಾವಾಗಲೂ ಇಷ್ಟು ರೆಕಗ್ನೈಸೇಷನ್ ಸಿಕ್ಕಿರಲಿಲ್ಲ ಎಂದರು. ನನ್ನ ಪಾತ್ರ ಮಾಡಿದ ಬಳಿಕವೇ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತಂತೆ’ ಎಂದು ಸತೀಶ್ ವಿವರಿಸಿದರು.
ಬೆಂಗಳೂರು, ಜನವರಿ 27: ಕೇಂದ್ರ ಸರ್ಕಾರ ಮನ್ರೇಗಾ (NREGA) ಯೋಜನೆಯ ಹೆಸರನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಭಾಗವಹಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ದಿಢೀರ್ ಆಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಸುರ್ಜೇವಾಲ, ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ನಡೆಯಲಿರುವ ಪ್ರತಿಭಟನೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ವಹಿಸಲಿದ್ದು, ಬೆಳಗ್ಗೆ 10.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಆರಂಭವಾಗಲಿದೆ. ಬಳಿಕ ಕಾಂಗ್ರೆಸ್ ನಾಯಕರು ಲೋಕಭವನದತ್ತ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಲಿದ್ದಾರೆ.
ಈ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನರೇಗಾ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಜೊತೆಗೆ, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 5 ಕಿಲೋಮೀಟರ್ ಪಾದಯಾತ್ರೆ ನಡೆಸುವಂತೆ ಸೂಚಿಸಲಾಗಿದೆ.
ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಮೂಲ ಆತ್ಮವನ್ನು ಉಳಿಸಿಕೊಳ್ಳುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದು ಡಿಕೆ ಶಿವಕುಮಾರ್ ಸೋಮವಾರ ಸ್ಪಷ್ಟಪಡಿಸಿದ್ದರು.
ಇನ್ನು, ಈ ಪ್ರತಿಭಟನೆಗೆ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷವೇ ಮುತ್ತಿಗೆ ಹಾಗೂ ಮೆರವಣಿಗೆ ನಡೆಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮೆರವಣಿಗೆ ಹಾಗೂ ಮುತ್ತಿಗೆಗಳಿಗೆ ನಿಷೇಧ ಇದ್ದು, ಈ ಬಗ್ಗೆ ಹೈಕೋರ್ಟ್ ನಿರ್ದೇಶನವಿದೆ. ಕಾನೂನು ಉಲ್ಲಂಘನೆಗೆ ಆಡಳಿತ ಪಕ್ಷವೇ ಮುಂದಾಗಿರುವುದು ಸರಿಯೇ? ಆಡಳಿತ ಪಕ್ಷಕ್ಕೆ ಅವಕಾಶ ನೀಡಿದರೆ, ಇತರ ಪಕ್ಷಗಳಿಗೂ ಇದೇ ಅವಕಾಶ ನೀಡಲಾಗುತ್ತದೆಯೇ ಎಂದು ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಎತ್ತಿದ್ದಾರೆ.
ಈ ದಿನ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿ ಇರುತ್ತೀರಿ ಹಾಗೂ ಅವುಗಳು ಫಲದಾಯಕವಾಗಿಯೂ ಇರುತ್ತವೆ. ಏನಾದರೊಂದು ಕಾರಣಕ್ಕೆ ಬಾಕಿ ಉಳಿದು ಹೋದ ಕೆಲಸಗಳನ್ನು ಮುಗಿಸಲು ಅವಕಾಶ ಸಿಗುತ್ತದೆ. ನೀವು ಈಗಾಗಲೇ ಸಾಲ ನೀಡಿದ್ದಲ್ಲಿ ಅದರ ಹಣ ವಸೂಲಿ ಮಾಡುವುದಕ್ಕೆ ಅಥವಾ ಮುಖ್ಯವಾದ ವ್ಯವಹಾರ ಒಪ್ಪಂದ ಪೂರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಗುರುತಿಸಲಾಗುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ಸಹ ವಹಿಸಬಹುದು. ರಕ್ತದೊತ್ತಡ ಅಥವಾ ಉರಿಮೂತ್ರದ ಸಮಸ್ಯೆ ಕಂಡುಬರಬಹುದು.
ಕುಟುಂಬದ ಕಡೆಯಿಂದಲೂ ಉದ್ಯೋಗ ಸ್ಥಳದಲ್ಲಿಯೂ ಈ ದಿನ ಜವಾಬ್ದಾರಿಗಳ ಒತ್ತಡ ಹೆಚ್ಚಾಗುತ್ತದೆ. ಕೆಲಸದ ಕಾರಣದಿಂದ ಬೇಸರ ಆಗಬಹುದು. ಹಣಕಾಸಿನಲ್ಲಿ ಸಾಲ, ಕಂತು, ತೆರಿಗೆ ಪಾವತಿ ವಿಚಾರಗಳಿಗೆ ವಿಶೇಷವಾದ ಗಮನ ಕೊಡಿ. ವ್ಯಾಪಾರ- ವ್ಯವಹಾರದಲ್ಲಿ ಪ್ರಗತಿ ನಿಧಾನವಾಗಿರುತ್ತದೆ. ಕುಟುಂಬದ ಬೆಂಬಲ ಇದ್ದರೂ ನಿಮ್ಮ ಆಪ್ತರಿಗೆ ಅಂತ ಸಮಯ ಕೊಡಲು ಸಾಧ್ಯವಾಗದೇ ಅಸಮಾಧಾನಕ್ಕೆ ಕಾರಣ ಆಗಬಹುದು. ಕೆಲವು ಮುಖ್ಯ ವಿಚಾರಗಳನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಸರ್ಕಾರಿ ಕೆಲಸ- ಕಾರ್ಯಗಳಲ್ಲಿ ಅತಿಯಾದ ಒತ್ತಡ ಹಾಕಬೇಡಿ.
ಹೆಚ್ಚು ಮಾತನಾಡದೆ, ಇತರರ ಜತೆಗೆ ಸೇರಿಕೊಳ್ಳದೆ ಏಕಾಂಗಿಯಾಗಿ ಇರುವುದಕ್ಕೆ ಬಯಸುತ್ತೀರಿ. ಈ ದಿನ ಮನಸ್ಸು ಹೆಚ್ಚು ಅಂತರ್ಮುಖಿ ಆಗಿರುತ್ತದೆ. ಒಂಟಿಯಾಗಿಯೇ ಕೆಲಸ- ಕಾರ್ಯಗಳನ್ನು ಮಾಡುವ ಆಸಕ್ತಿ ಹೆಚ್ಚಾಗುತ್ತದೆ. ಸಂಬಂಧಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ಇವತ್ತಿನ ಮಟ್ಟಿಗೆ ಮುಂದೂಡುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಷೇರು- ಮ್ಯೂಚುವಲ್ ಫಂಡ್ ಈ ರೀತಿ ಹೊಸ ಹೂಡಿಕೆ ಬೇಡ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಕಡಿಮೆ ಆಗಬಹುದು.
ಈ ದಿನ ಖರ್ಚಿನ ವಿಚಾರವೇ ಹೆಚ್ಚು ಯೋಚನೆಗೆ ಕಾರಣ ಆಗುತ್ತದೆ. ಕೆಲವು ಅನಿವಾರ್ಯ ವೆಚ್ಚಗಳನ್ನು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮ್ಮ ಸಲಹೆಗೆ ಮೌಲ್ಯ ಸಿಗುತ್ತದೆ, ಆದರೆ ತಕ್ಷಣ ಫಲವನ್ನು ನಿರೀಕ್ಷಿಸಬೇಡಿ. ಹಳೆಯ ಸಂಪರ್ಕಗಳು ನಿಮಗೆ ಸಹಾಯ ಮಾಡಬಹುದು. ಈ ಹಿಂದೆ ನಿಮ್ಮ ಜೊತೆಗೆ ಕೆಲಸ ಮಾಡಿದ್ದಂಥ ವ್ಯಕ್ತಿಗಳೇ ಕೆಲವು ಆಕರ್ಷಕ ಆಫರ್ ಗಳನ್ನು ತರಲಿದ್ದಾರೆ.
ಈ ದಿನ ನಿಮ್ಮ ಮನಸ್ಥಿತಿ ಹೇಗಿರುತ್ತದೋ ಅದು ನೀವು ಮಾಡುವ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ಬೇಡ ಎನಿಸಿ, ನಿಮ್ಮ ಮನಸ್ಸು ಒಪ್ಪದ ಕೆಲಸಗಳನ್ನೂ ಮಾಡಬೇಕಾದ ಅನಿವಾರ್ಯ ಎದುರಾಗಲಿದೆ. ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದಂತೆ ಬರಬೇಕಾದ ಹಣಕಾಸಿನ ವಿಷಯದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಬಹುದು. ಒಂದು ವೇಳೆ ಬಾಕಿ ಹಣ ವಸೂಲಿಗೆ ಪ್ರಯತ್ನವನ್ನು ಪಟ್ಟರೆ ಫಲ ಸಿಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಲಹೆ ಹಾಗೂ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಉಪಯುಕ್ತವಾಗುತ್ತದೆ.
ಈ ದಿನ ಕೆಲಸದ ವಿಚಾರದಲ್ಲಿ ನೀವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂಬ ಬೇಸಂದರ್ಭ ಬರುತ್ತದೆ. ಮುಂದೂಡುತ್ತಾ ಬಂದಿದ್ದ ಕೆಲವು ಜವಾಬ್ದಾರಿಗಳನ್ನು ಇಂದೇ ಮುಗಿಸಬೇಕಾಗುತ್ತದೆ. ಗಡುವಿನೊಳಗೆ ಉತ್ತರ ಹೇಳಬೇಕಾದ ಸಂಗತಿಗಳನ್ನು ಆದ್ಯತೆ ಮೇಲೆ ಮಾಡುತ್ತಾ ಬನ್ನಿ. ಇನ್ನು ವ್ಯವಹಾರದ ವಿಷಯಕ್ಕೆ ಬಂದಲ್ಲಿ ಲಾಭಕ್ಕಿಂತ ಸ್ಥಿರತೆ ಮುಖ್ಯವಾಗುತ್ತದೆ. ಹೊಸ ಸಾಲ ಅಥವಾ ಹೂಡಿಕೆ ನಿರ್ಧಾರವನ್ನು ಈ ದಿನದ ಮಟ್ಟಿಗೆ ಕೈ ಬಿಡುವುದು ಒಳಿತು.
ಈ ದಿನ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಸ್ಥಾನ ಪಡೆದುಕೊಳ್ಳುತ್ತವೆ. ಮನೆ ಖರ್ಚು, ಅಲಂಕಾರ ಅಥವಾ ದುರಸ್ತಿ ಬಗ್ಗೆ ಚರ್ಚೆ ನಡೆಯಬಹುದು. ದಿನಸಿ ಪದಾರ್ಥಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಲಿದೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೋ ಅಥವಾ ಒಣಹಣ್ಣುಗಳ ಖರೀದಿಗೋ ಹೆಚ್ಚು ಖರ್ಚು ಬರಲಿದೆ. ಇನ್ನು ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಭಾವುಕತೆಗೆ ಒಳಗಾಗಿ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಸಂಬಂಧಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ.
ಇಡೀ ದಿನ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳಲ್ಲಿ ತೊಡಗಿರುತ್ತೀರಿ. ಫೋನ್ ಕರೆಗಳು, ಸಂದೇಶಗಳು, ಭೇಟಿಗಳು ಜಾಸ್ತಿ ಆಗುತ್ತವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶದ ಮಾತು ಬರಬಹುದು, ಆದರೆ ತಕ್ಷಣ ಒಪ್ಪಿಕೊಳ್ಳಬೇಡಿ. ಪ್ರಭಾವಿಗಳ ಸಂಪರ್ಕದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನು ಒಂದು ಕಡೆ ಹಣ ಬರುತ್ತದೆ, ಆದರೆ ಖರ್ಚು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣ ಮಾಡುವಾಗ ಸಮಯ ಮತ್ತು ಹಣ ಎರಡಕ್ಕೂ ಲೆಕ್ಕವಿರಲಿ.
ಪ್ರಯಾಣದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಏಕಾಏಕಿ ಸಿಟ್ಟು ಹೊರ ಹಾಕುವುದಕ್ಕೆ ಹೋಗಬೇಡಿ. ಈ ದಿನ ತಾಳ್ಮೆ ಬಹಳ ಅಗತ್ಯ. ಸರ್ಕಾರಿ ಕೆಲಸ, ದಾಖಲೆ ಅಥವಾ ಬ್ಯಾಂಕ್ ಸಂಬಂಧಿಸಿದ ವಿಚಾರಗಳಲ್ಲಿ ವಿಳಂಬ ಆಗಬಹುದು. ಹಣಕಾಸಿನ ವಿಷಯದಲ್ಲಿ ಸಣ್ಣ ಲಾಭದ ಸೂಚನೆ ಇದ್ದರೂ ಅದನ್ನು ಎಲ್ಲರಿಗೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ಚಿನ್ನ- ಬೆಳ್ಳಿ ಇತರ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ.
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ನವಮೀ ತಿಥಿ ಮಂಗಳವಾರ ಪಶ್ಚಾತ್ತಾಪ, ಆಲಸ್ಯ, ದೂರಪ್ರಯಾಣ, ಸ್ವಾರ್ಥ, ಸ್ವಾತ್ಮಾವಲೋಕನ, ನಾಸ್ತಿಕತೆ, ಅನಾರೋಗ್ಯ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶುಭ, ಕರಣ : ಕೌಲವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:29 – 16:55, ಯಮಗಂಡ ಕಾಲ 09:46 – 11:11, ಗುಳಿಕ ಕಾಲ 12:37 – 14:03
ಮೇಷ ರಾಶಿ :
ಇಂದು ಭಾವನಾತ್ಮಕ ಸಂಪರ್ಕಗಳು ಬಲವಾಗಿರುತ್ತವೆ. ನಿಮ್ಮ ಹಣಕಾಸುಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ ಮತ್ತು ಸೃಜನಶೀಲತೆಯನ್ನು ಹುಡುಕಿಕೊಳ್ಳಲು ತೊಡಗಿಸಿಕೊಳ್ಳಿ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಕುಂದುಕೊರೆತಗಳ ಜೊತೆ ಜೀವಿಸುವುದನ್ನು ಕಲಿಯುವ ಆವಶ್ಯಕತೆ ಇದೆ ಎಂದು ಇಂದು ಗೊತ್ತಾಗುವುದು. ಇಂದು ನಿಮ್ಮ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ಒಂದೇ ವಿಚಾರವನ್ನು ನಿಮಗೆ ಮತ್ತೆ ಮತ್ತೆ ನೆನಪಿಸಬೇಕಾದೀತು.
ವೃಷಭ ರಾಶಿ :
ನಿಮ್ಮ ದಾರಿಯಲ್ಲಿ ಬರುವ ಹೊಸ ಆರ್ಥಿಕ ಅವಕಾಶಗಳಿಗೆ ತೆರೆದುಕೊಳ್ಳಿ. ನಿಮಗೆ ನೀವೇ ಸಾಂತ್ವನ ತಂದುಕೊಳ್ಳಬೇಕು. ಮನಸ್ಸಿಗೆ ನೆಮ್ಮದಿ ಸಿಗುವ ಸ್ಥಳಗಳಿಗೆ ಹೋಗಿ ಸ್ವಲ್ಪ ಕಾಲ ಇದ್ದು ಬರುವಿರಿ. ಹೊಸ ಚೈತನ್ಯ ನಿಮ್ಮದಾಗವುದು. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ದಿನದ ಆರಂಭವು ಬಹಳ ಪ್ರಶಾಂತವಾಗಿ ಇರಲಿದೆ. ಆತ್ಮಗೌರವವನ್ನು ಬಿಟ್ಟು ನೀವು ಬದಲಾಗುವುದಿಲ್ಲ. ಗಂಭೀರವಾದ ಚರ್ಚೆಯನ್ನು ನೀವು ಹಾಸ್ಯ ಮಾಡಿ ಮುಗಿಸುವಿರಿ. ಒಳ್ಳೆಯ ಕಾರ್ಯಕ್ಕೆ ಅವಕಾಶ ಸಿಕ್ಕಾಗ ಅದನ್ನು ಮಾಡಿ.
ಮಿಥುನ ರಾಶಿ :
ನಿಮ್ಮ ಸಂಬಂಧಗಳಲ್ಲಿ ಸ್ಥಿರತೆಯನ್ನು ಹುಡುಕುವುದು ಮತ್ತು ಭವಿಷ್ಯಕ್ಕಾಗಿ ಉಳಿತಾಯದತ್ತ ಗಮನ ಹರಿಸಿ. ಕೆಲವು ವಿಚಾರದಲ್ಲಿ ಮೋಸವಾಗುವ ಸಂಭವವಿದೆ. ಬೇಸರ ಪಡದೇ ಮುನ್ನಡೆಯುವುದು ಸುಖ. ಮನಸ್ಸನ್ನು ಸಡಿಲಮಾಡಿಕೊಳ್ಳುವುದು ಬೇಡ. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದನೆ ಸಿಗುವುದು. ಅನಾರೋಗ್ಯದ ಭೀತಿಯು ಇರಲಿದೆ. ಮನಸ್ಸು ನಕಾರಾತ್ಮಕವಾಗಿ ಹರಡಬಹುದು. ನಿಮ್ಮ ಕ್ರಿಯಾಶೀಲ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ.
ಕರ್ಕಾಟಕ ರಾಶಿ :
ಅನಿರೀಕ್ಷಿತ ಯಶಸ್ಸು ನಿಮ್ಮನ್ನು ದಾರಿತಪ್ಪುಸಬಹುದು. ನಿಮ್ಮ ಆದಾಯದಲ್ಲಿ ವೈವಿಧ್ಯಗೊಳಿಸಲು ಅವಕಾಶಗಳನ್ನು ಅನ್ವೇಷಿಸಿ. ರಾಜಕೀಯ ವ್ಯಕ್ತಿಗಳು ಜನಮನ್ನಣೆಯನ್ನು ಅಧಿಕ ಗಳಿಸುವರು. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಪ್ರಯಾಣ ಮಾಡುವವನಿಗೆ ದಾರಿ ಹೇಗಿದೆಯೋ ಹಾಗೆ ಹೋಗುವುದು ಮುಖ್ಯ. ಹಿರಿಯರಿಂದ ಸಮಾಧಾನ ಸಿಗಲಿದೆ. ಬೇಡದ ವ್ಯಕ್ತಿಗಳ ಮಾತುಗಳನ್ನು ಕೇಳಲು ನಿಮಗೆ ಇಷ್ಟವಾಗದು. ಸಾವಧಾನದ ಚಿಂತನೆಗಳು ಪ್ರಯೋಜನಕ್ಕೆ ಬಾರದು.
ಸಿಂಹ ರಾಶಿ :
ಆತ್ಮಾವಲೋಕನದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಪಷ್ಟತೆಯನ್ನು ನೀಡಬಹುದು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಹೇಗಾದರೂ ಮಾಡಿ ಜೀವನದಲ್ಲಿ ಸುಖವಾಗಿ ಇರಬೇಕು ಎನ್ನುವ ಆಸೆ ಬರುವುದು. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಯಾರದೋ ಮಾತನ್ನು ಕೇಳಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಕಾಲಹರಣಕ್ಕೆ ಇನ್ನೊಬ್ಬರ ವಿಚಾರವನ್ನು ಚರ್ಚಿಸುವಿರಿ. ಮನೋಹರವಾದ ತಾಣಗಳಿಗೆ ಹೋಗುವ ಬಯಕೆಯಾಗುವುದು.
ಕನ್ಯಾ ರಾಶಿ :
ಸ್ಪಷ್ಟ ಮತ್ತು ಸಹಾನುಭೂತಿಯ ಸಂವಹನದ ಮೂಲಕ ನಿಮ್ಮ ಸಂಬಂಧಗಳಲ್ಲಿ ಬಲವಿರುವುದು. ಹಣಕಾಸಿನ ಹೊಂದಾಣಿಕೆಗೆ ಬಹಳ ಯೋಚನೆ ಮಾಡುವಿರಿ. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಸ್ವಂತ ಉದ್ಯೋಗವು ಸಣ್ಣ ಪ್ರಮಾಣದ ಹಿನ್ನಡೆಯನ್ನು ಕಾಣಬಹುದು. ಔಷಧ ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸುವರು. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು, ಅದಕ್ಕೆ ಹೆಚ್ಚಿನ ಮೌಲ್ಯವು ಸಿಗದು.
ತುಲಾ ರಾಶಿ :
ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳ ಜೊತೆ ಬಾಕಿ ಉಳಿದಿರುವ ಕಾರ್ಯಗಳನ್ನು ನಿಭಾಯಿಸಿ ಮತ್ತು ಒತ್ತಡವನ್ನು ನಿವಾರಿಸಲು ಸಾವಧಾನತೆ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ಸಂಕಷ್ಟಕ್ಕೆ ಈಡಾಗುವಿರಿ. ಆರ್ಥಿಕ ವೆಚ್ಚಕ್ಕೆ ನೀವು ಕಡಿವಾಣ ಹಾಕಿಕೊಳ್ಳಬೇಕಾದೀತು.
ವೃಶ್ಚಿಕ ರಾಶಿ :
ನಿಮ್ಮ ವರ್ಚಸ್ಸು ಇಂದು ಉತ್ತುಂಗಕ್ಕೇರಿದೆ, ಇದು ಸಾಮಾಜಿಕ ಸಂವಹನಗಳಿಗೆ ಉತ್ತಮ ಸಹಕಾರಿಯಾಗುವುದು. ನಿಮ್ಮ ಶಕ್ತಿಯನ್ನು ಸೃಜನಾತ್ಮಕ ಅನ್ವೇಷಣೆಗಳಲ್ಲಿ ತೊಡಗಿಸಿ ಮತ್ತು ಪ್ರೀತಿಪಾತ್ರರ ಜೊತೆ ವಿಶೇಷ ಚಟುವಟಿಕೆಯಿಂದ ದಿನವನ್ನು ಕಳೆಯುವಿರಿ. ವ್ಯಾವಹಾರಿಕ ಮನಃಸ್ಥಿತಿಯಿಂದ ಎಲ್ಲವನ್ನೂ ಅಳೆಯುವುದು ಬೇಡ. ನಿಮ್ಮ ಅಸಹಜ ನಡೆಯನ್ನು ನಿಮ್ಮವರು ಒಪ್ಪಿಕೊಳ್ಳಲಾರರು. ಗುಂಪುಗಾರಿಕೆಯಿಂದ ವೈಯಕ್ತಿಕ ಕಾರ್ಯ ಅಸಾಧ್ಯ.
ಧನು ರಾಶಿ :
ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಜೀವನದಲ್ಲಿ ಸಮತೋಲನವನ್ನು ಸಾಧಿಸುವ ಬಗ್ಗೆ ಹುಡುಕಾಟ ಇರುವುದು. ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಿಮ್ಮ ಭಾವನೆಗಳಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದ್ದು ಲಾಭವನ್ನು ಹೆಚ್ಚುಪಡೆಯುವಿರಿ.
ಮಕರ ರಾಶಿ :
ಇಂದು ನಿಮ್ಮ ಆರೋಗ್ಯಕ್ಕೆ ಗಮನ ಕೊಡಿ. ವಿಶ್ರಾಂತಿ ಮತ್ತು ನವ ಉತ್ಸಾಹ ಪಡೆಯುವುದು ಅವಶ್ಯಕ. ತಮ್ಮನ್ನು ತಾವು ಪ್ರಸ್ತುತಪಡಿಸಬಹುದಾದ ಹೊಸ ಹಣಕಾಸಿನ ಅವಕಾಶಗಳಿಗಾಗಿ ಎಚ್ಚರವಾಗಿರಿ. ನಿಮ್ಮವರ ಅನಾರೋಗ್ಯದ ಕಾರಣ ಓಡಾಟ ಮಾಡಬೇಕಾದೀತು. ಒಂಟಿಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ಅಶಿಸ್ತಿನಿಂದ ವರ್ತಿನೆಯ ಕಾರಣ ನಿಮಗೆ ಎಲ್ಲರಿಂದ ಅಪಮಾನವಾಗಬಹುದು. ಕೆಲವು ಕೆಲಸಗಳನ್ನು ಕೈಬಿಡುವಿರಿ.
ಕುಂಭ ರಾಶಿ :
ಇಂದು ಸಂಬಂಧಗಳು ನಿಮ್ಮ ಸಹಾಯಕ್ಕೆ ಬರಲಿವೆ. ಯಾವುದೇ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಮುಕ್ತ ಸಂವಹನವನ್ನು ಅಳವಡಿಸಿಕೊಳ್ಳುವಿರಿ. ಆರೋಗ್ಯಕರ ಅಭ್ಯಾಸಗಳನ್ನು ಇಟ್ಟುಕೊಳ್ಳುವುದು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಆರ್ಥಿಕವಾಗಿ, ವಿವೇಕಯುತ ಯೋಜನೆ ಭವಿಷ್ಯದ ಭದ್ರತೆಗೆ ಕಾರಣವಾಗುತ್ತದೆ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಾದೀತು.
ಮೀನ ರಾಶಿ :
ಇಂದು ನಿಮ್ಮ ಸಂಬಂಧಗಳಲ್ಲಿ ಪ್ರಾಮಾಣಿಕತೆ ಅತ್ಯಗತ್ಯ. ಮುಕ್ತ ಸಂವಹನವು ಪ್ರೀತಿಪಾತ್ರರೊಂದಿಗಿನ ಬಂಧಗಳನ್ನು ಬಲಪಡಿಸುತ್ತದೆ. ಆರ್ಥಿಕವಾಗಿ, ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಮತ್ತು ಉಳಿತಾಯದತ್ತ ಗಮನ ಹರಿಸುವುದು ಜಾಣತನ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿಸಿಕೊಳ್ಳಿ. ಆಪ್ತರ ಜೊತೆ ಮಾತನಾಡಿ ನಿಮ್ಮ ಮನಸ್ಸಿನ ಭಾರವನ್ನೆಲ್ಲ ದೂರ ಮಾಡಿಕೊಳ್ಳುವಿರಿ. ನಿಮ್ಮ ನಿಯಮಗಳು ನಿಮಗೆ ತೊಂದರೆಯಾಗಬಹುದು.