ಕ್ರಿಕೆಟ್ ವಿಚಾರಕ್ಕೆ ಶುರುವಾದ ಗಲಾಟೆ ಸಾವಲ್ಲಿ ಅಂತ್ಯ: ನಡೆದಿದ್ದು ಅಪಘಾತವೋ? ಕೊಲೆಯೋ? – Kannada News | Anekal Youth Dies After Cricket Dispute Car Crash, Mother Alleges Murder
ಆನೇಕಲ್, ಜನವರಿ 26: ಕ್ರಿಕೆಟ್ ವಿಚಾರಕ್ಕೆ ಶುರುವಾದ ಗಲಾಟೆ ಯುವಕನೋರ್ವನ ಸಾವಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ಹೆಬ್ಬಗೋಡಿ ನಿವಾಸಿ ಪ್ರಶಾಂತ್(28) ಮೃತ ದುರ್ದೈವಿಯಾಗಿದ್ದಾನೆ. ಮದ್ಯದ ನಶೆಯಲ್ಲಿ ಇಬ್ಬರು ಯುವಕರ ನಡುವೆ ಕಿರಿಕ್ ಆಗಿದೆ ಎನ್ನಲಾಗಿದ್ದು, ಪ್ರಶಾಂತ್ ಮತ್ತು ರೋಷನ್ ಹೆಗ್ಡೆ ಎಂಬವರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ರೋಷನ್ ಕಾರು ಹತ್ತಿ ಹೊರಟರೂ ಪ್ರಶಾಂತ್ ಆತನ ಕಾರಿನ ಫೂಟ್ ಬೋರ್ಡ್ ಮೇಲೆ ಹತ್ತಿ ಕಿರಿಕ್ ಮುಂದುವರಿಸಿದ್ದ. ಅವಾಚ್ಯ ಶಬ್ದಗಳಿಂದ…