Category Archives: Blog

Your blog category

ಕ್ರಿಕೆಟ್​​ ವಿಚಾರಕ್ಕೆ ಶುರುವಾದ ಗಲಾಟೆ ಸಾವಲ್ಲಿ ಅಂತ್ಯ: ನಡೆದಿದ್ದು ಅಪಘಾತವೋ? ಕೊಲೆಯೋ? – Kannada News | Anekal Youth Dies After Cricket Dispute Car Crash, Mother Alleges Murder

ಆನೇಕಲ್​​, ಜನವರಿ 26: ಕ್ರಿಕೆಟ್​​ ವಿಚಾರಕ್ಕೆ ಶುರುವಾದ ಗಲಾಟೆ ಯುವಕನೋರ್ವನ ಸಾವಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ಹೆಬ್ಬಗೋಡಿ ನಿವಾಸಿ ಪ್ರಶಾಂತ್(28) ಮೃತ ದುರ್ದೈವಿಯಾಗಿದ್ದಾನೆ. ಮದ್ಯದ ನಶೆಯಲ್ಲಿ ಇಬ್ಬರು ಯುವಕರ ನಡುವೆ ಕಿರಿಕ್​​ ಆಗಿದೆ ಎನ್ನಲಾಗಿದ್ದು, ಪ್ರಶಾಂತ್​​ ಮತ್ತು ರೋಷನ್​​ ಹೆಗ್ಡೆ ಎಂಬವರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ರೋಷನ್​​ ಕಾರು ಹತ್ತಿ ಹೊರಟರೂ ಪ್ರಶಾಂತ್​​ ಆತನ ಕಾರಿನ ಫೂಟ್​​ ಬೋರ್ಡ್​​ ಮೇಲೆ ಹತ್ತಿ ಕಿರಿಕ್​​ ಮುಂದುವರಿಸಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ರೊಚ್ಚಿಗೆದ್ದ ರೋಷನ್​ ಅಡ್ಡಾದಿಟ್ಟಿ ಕಾರು ಚಾಲನೆ ಮಾಡಿದ್ದು, ನಿಯಂತ್ರಣ ತಪ್ಪಿದ ಕಾರು ಗೋಡೆಗೆ ಉಜ್ಜಿ ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಪ್ರಶಾಂತ್​​​​ ಮೃತಪಟ್ಟಿದ್ದರೆ, ರೋಷನ್​​ಗೆ ಗಾಯಗಳಾಗಿವೆ.

ಇನ್ನು ಅಪಘಾತದ ವೇಳೆ ಗಂಭೀರ ಗಾಯಗೊಂಡಿದ್ದ ಪ್ರಶಾಂತ್​​ ಸ್ಥಳದಲ್ಲೇ ಮೃತಪಟ್ಟಿದ್ದರೆ, ರೋಷನ್​​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಪಘಾತದ ಕೊನೆಯ ಕ್ಷಣಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾರು ನಿಲ್ಲಿಸುವಂತೆ ಪ್ರಶಾಂತ್​​ ಹೇಳಿದ್ದರೂ ರೋಷನ್​​ ವೇಗವಾಗಿ ಕಾರು ಚಾಲನೆ ಮಾಡಿದ್ದಾನೆ. ಅಪಘಾತ ನಡೆಯುವ ವೇಳೆ ಪ್ರಶಾಂತ್​​ ಕಾರಿನ ಎಡಭಾಗದ ಕಿಡಕಿ ಹಿಡಿದು ನೇತಾಡುತ್ತಿದ್ದ. ಹೀಗಾಗಿ ಮರ ಮತ್ತು ಕಾಂಪೌಂಡ್​ ಗೋಡೆಯ ನಡುವೆ ಸಿಲುಕಿದ್ದ ಪ್ರಶಾಂತ್​​ ತಲೆಗೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ? ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ

ಮಗ ಪ್ರಶಾಂತ್​​ ಸಾವಿನಿಂದಾಗಿ ತಾಯಿ ಕಂಗಾಲಾಗಿದ್ದು, ಇದು ಅಪಘಾತದ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಕ್ರಿಕೆಟ್ ಬಗ್ಗೆ ಮಗ ಪ್ರಶಾಂತ್ ಹುಚ್ಚು ಪ್ರೀತಿ ಹೊಂದಿದ್ದ. ಕಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್​​ನಲ್ಲಿ ಪ್ರಶಾಂತ್ ಆಟವಾಡಿದ್ದ ಕ್ರಿಕೆಟ್ ತಂಡ ಸೋತಿತ್ತು. ಈ ವೇಳೆ ಅಲ್ಲಿದ್ದ ರೋಷನ್ ಮತ್ತು ಪ್ರಶಾಂತ್ ನಡುವೆ ಕಿರಿಕ್ ಆಗಿತ್ತು. ಆದಾದ ಬಳಿಕ ಮನೆಗೆ ಬಂದಿದ್ದ ಪ್ರಶಾಂತ್, ಕ್ರಿಕೆಟ್ ಟೂರ್ನಮೆಂಟ್ ಸೋತಿರೋದಾಗಿ ಬೇಸರದಿಂದ ಹೇಳಿಕೊಂಡಿದ್ದ. ನಿನ್ನೆ ಕಮ್ಮಸಂದ್ರದ ಮೈದಾನಕ್ಕೆ ಹೋಗಿದ್ದ ವೇಳೆ ಮತ್ತೆ ಪ್ರಶಾಂತ್ ಮತ್ತು ರೋಷನ್ ನಡುವೆ ಗಲಾಟೆ ಆಗಿದೆ. ಗಲಾಟೆ ಬಳಿಕ ಕಾರಿನಲ್ಲಿ ತಪ್ಪಿಸಿಕೊಂಡು ಹೋಗಲು ರೋಷನ್ ಯತ್ನಿಸಿದ್ದು, ಕಾರು ನಿಲ್ಲಿಸಿದ್ದರೆ ಪ್ರಶಾಂತ್ ಬದುಕುಳಿಯುತ್ತಿದ್ದ. ಹೀಗಾಗಿ ಕೊಲ್ಲುವ ಉದ್ದೇಶದಿಂದಲೇ ಅಪಘಾತ ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಿದಾರೆ. ಮೃತ ಪ್ರಶಾಂತ್ ತಾಯಿ ನೀಡಿರುವ ದೂರಿನ ಅನ್ವಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ-ಅಮೆರಿಕದ್ದು ಐತಿಹಾಸಿಕ ಬಂಧ; 77ನೇ ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಟ್ರಂಪ್ – Kannada News | Donald Trump extends greetings on 77th Republic day says US and India Share Historic Bond

ನವದೆಹಲಿ, ಜನವರಿ 26: ಭಾರತದ 77ನೇ ಗಣರಾಜ್ಯೋತ್ಸವಕ್ಕೆ (Republic Day) ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತದಾದ್ಯಂತ ಗಣರಾಜ್ಯೋತ್ಸವದ ಆಚರಣೆಗಳು ನಡೆಯುತ್ತಿದ್ದಂತೆ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈ ಸಂದೇಶವನ್ನು ಹಂಚಿಕೊಂಡಿದೆ. ಎರಡೂ ದೇಶಗಳ ನಡುವಿನ ಸಾಮಾನ್ಯ ನೆಲೆಯನ್ನು ಎತ್ತಿ ತೋರಿಸುತ್ತಾ, ಭಾರತ ಮತ್ತು ಅಮೆರಿಕ ತಮ್ಮ ಪ್ರಜಾಪ್ರಭುತ್ವ ಸಂಪ್ರದಾಯಗಳಿಂದ ಒಂದಾಗಿವೆ ಮತ್ತು ಹಲವು ದಶಕಗಳಿಂದ ಬಂಧವನ್ನು ಹೊಂದಿವೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಜನರ ಪರವಾಗಿ ಭಾರತದ 77ನೇ ಗಣರಾಜ್ಯೋತ್ಸವಕ್ಕೆ ನಾನು ಭಾರತ ಸರ್ಕಾರ ಮತ್ತು ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವಗಳಾಗಿ ಅಮೆರಿಕ ಮತ್ತು ಭಾರತ ಐತಿಹಾಸಿಕ ಬಂಧವನ್ನು ಹಂಚಿಕೊಂಡಿವೆ” ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ, ಇರಾನ್​ಗೆ ಹೊಸ ಎಚ್ಚರಿಕೆ ಕೊಟ್ಟ ಡೊನಾಲ್ಡ್​ ಟ್ರಂಪ್

ಭಾರತದ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಅವರು ಕರ್ತವ್ಯ ಮಾರ್ಗದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದರು. ಈ ಅನುಭವವನ್ನು ದ್ವಿಪಕ್ಷೀಯ ಸಂಬಂಧಗಳ ಸಂಕೇತವೆಂದು ಬಣ್ಣಿಸಿದರು. ಭಾರತದ ಗಣರಾಜ್ಯೋತ್ಸವದ ಶುಭಾಶಯಗಳು! ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮನೋಭಾವದ ಆಚರಣೆಯಾದ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಭಾಗವಹಿಸುವ ಗೌರವ ಇಂದು ದಕ್ಕಿತು ಎಂದು ಗೋರ್ ಹೇಳಿದ್ದಾರೆ.

ಇದನ್ನೂ ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

“ಭಾರತದ ಆಕಾಶದಲ್ಲಿ ಅಮೆರಿಕ ನಿರ್ಮಿತ ವಿಮಾನ ಹಾರಾಡುವುದನ್ನು ನೋಡಿ ರೋಮಾಂಚನವಾಯಿತು. ಇದು ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆಯ ಬಲದ ಪ್ರಬಲ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ. ಗಣರಾಜ್ಯೋತ್ಸವದ ಪರೇಡ್ ಸಮಯದಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕ ಮೂಲದ ಸಾರಿಗೆ ವಿಮಾನ C-130J ಮತ್ತು ಅಪಾಚೆ ಹೆಲಿಕಾಪ್ಟರ್‌ಗಳು ಕಾಣಿಸಿಕೊಂಡವು.

ಟ್ರಂಪ್ ಸರ್ಕಾರವು ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ಎರಡೂ ದೇಶಗಳ ಸಂಬಂಧಗಳಲ್ಲಿ ಬಿರುಕು ಉಂಟಾಗಿತ್ತು. ಅದರ ಬೆನ್ನಲ್ಲೇ ಅಮೆರಿಕದಿಂದ ಭಾರತಕ್ಕೆ ಶುಭಾಶಯದ ಸಂದೇಶ ಬಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಹುಡುಗಿಯರನ್ನ ಡೇಟಿಂಗ್​​ಗೆ​​​​​ ಕರೆದುಕೊಂಡು ಹೋಗುವ ಮುನ್ನ ಎಚ್ಚರ, ಮೂರು ಪಂಗನಾಮ ಹಾಕಿಯೇ ಕಳಿಸೋದು – Kannada News | Beware of Dating App Bill Scam: 50,000 Bills in Bengaluru and Mumbai Cafes.

ಬೆಂಗಳೂರು, ಜ.26: ಬೆಂಗಳೂರು ಮತ್ತು ಮುಂಬೈನಂತಹ ಮಹಾ ನಗರಗಳಲ್ಲಿ ಇತ್ತೀಚೆಗೆ ‘ರೆಸ್ಟೋರೆಂಟ್ ಡೇಟಿಂಗ್ ಸ್ಕ್ಯಾಮ್’ (Restaurant Dating Scam) ಎಂಬ ವಂಚನೆ ಜಾಲ ಭಾರಿ ಸದ್ದು ಮಾಡುತ್ತಿದೆ. ಒಂದು ಸಾಮಾನ್ಯ ಡೇಟ್‌ನಲ್ಲಿ ನೀವು ಕೇವಲ 2,000 ರೂ. ಖರ್ಚು ಮಾಡಬೇಕಾದ ಜಾಗದಲ್ಲಿ 20,000 ರೂ. ರಿಂದ 50,000 ರೂ. ವರೆಗೆ ಬಿಲ್ ಪಾವತಿಸಬೇಕಾದ ಪರಿಸ್ಥಿತಿ ಬರಬಹುದು. ಈ ವಂಚನೆ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡರೆ ಖಂಡಿತ ಅಚ್ಚರಿಪಡುವುದು ನಿಜ. ವಂಚಕರು (ಸಾಮಾನ್ಯವಾಗಿ ಯುವತಿಯರು) ಟಿಂಡರ್, ಬಂಬಲ್ ಅಥವಾ ಹಿಂಜ್ ನಂತಹ ಆಪ್‌ಗಳಲ್ಲಿ ಆಕರ್ಷಕ ಪ್ರೊಫೈಲ್ ಸೃಷ್ಟಿಸಿ ಪುರುಷರನ್ನು ಸಂಪರ್ಕಿಸುತ್ತಾರೆ. ಮಾತುಕತೆ ಶುರುವಾದ ಸ್ವಲ್ಪ ಸಮಯದಲ್ಲೇ ಅವರು ಭೇಟಿಯಾಗಲು ಒತ್ತಾಯಿಸುತ್ತಾರೆ. ವಿಶೇಷವೆಂದರೆ, ಅವರು ತಮಗೆ ಮೊದಲೇ ಪರಿಚಯವಿರುವ ಅಥವಾ ನಗರದ ಯಾವುದೋ ಒಂದು ಮೂಲೆಯಲ್ಲಿರುವ ನಿರ್ದಿಷ್ಟ ಕೆಫೆ ಅಥವಾ ಬಾರ್‌ಗೆ ಬರುವಂತೆ ನಿಮ್ಮನ್ನು ಒಪ್ಪಿಸುತ್ತಾರೆ.

ನೀವು ಅಲ್ಲಿಗೆ ಬಂದ ಕೂಡಲೇ, ಅವರು ಮೆನುವಿನಲ್ಲಿರುವ ಅತ್ಯಂತ ದುಬಾರಿ ವೈನ್, ಹುಕ್ಕಾ ಅಥವಾ ಆಹಾರ ಪದಾರ್ಥಗಳನ್ನು ಸಾರಾಸಗಟಾಗಿ ಆರ್ಡರ್ ಮಾಡುತ್ತಾರೆ. ಕೆಲವೊಮ್ಮೆ ಮೆನುವಿನಲ್ಲಿ ಬೆಲೆಗಳೇ ಇರುವುದಿಲ್ಲ. ಆಹಾರ ಸೇವಿಸಿದ ತಕ್ಷಣ ಅಥವಾ ಬಿಲ್ ಬರುವ ಮುನ್ನವೇ ಅವರಿಗೆ “ತುರ್ತು ಕರೆ ಬಂದಿದೆ” ಅಥವಾ “ಮನೆಯಲ್ಲಿ ಏನೋ ಸಮಸ್ಯೆಯಾಗಿದೆ” ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ನಂತರ ನಿಮ್ಮ ಕೈ ಸೇರುವ ಬಿಲ್ ನೋಡಿ ನೀವು ಬೆಚ್ಚಿಬೀಳುತ್ತೀರಿ. ಸಾಮಾನ್ಯ ಕೆಫೆಯಲ್ಲಿ 20,000 ರೂ. ಬಿಲ್ ಬಂದಿರುತ್ತದೆ. ಒಂದು ವೇಳೆ ಇದನ್ನು ನೀವು ಇದನ್ನು ಪ್ರಶ್ನಿಸಿದರೆ, ರೆಸ್ಟೋರೆಂಟ್‌ನ ಬೌನ್ಸರ್‌ಗಳು ಅಥವಾ ಮ್ಯಾನೇಜರ್ ನಿಮ್ಮನ್ನು ಸುತ್ತುವರಿದು ಹಣ ಪಾವತಿಸುವಂತೆ ಬೆದರಿಕೆ ಹಾಕುತ್ತಾರೆ.

ಇದನ್ನೂ ಓದಿ: “ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್”: ಈ ಒಪ್ಪಂದದಿಂದ ಅಗ್ಗವಾಗಲಿದೆ ಈ ವಸ್ತುಗಳ ಬೆಲೆ

ಎಂ.ಜಿ. ರಸ್ತೆ ಮತ್ತು ಕೋರಮಂಗಲದ ಕೆಲವು ಕೆಫೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಒಬ್ಬ ವ್ಯಕ್ತಿಗೆ ಕೇವಲ ಒಂದು ಗಂಟೆಯ ಡೇಟ್‌ನಲ್ಲಿ 40,000 ರೂ. ಬಿಲ್ ನೀಡಲಾಗಿತ್ತು. ಅಂಧೇರಿ ಮತ್ತು ಬಾಂದ್ರಾ ಭಾಗದ ಕೆಲವು ಸಣ್ಣ ಕ್ಲಬ್‌ಗಳಲ್ಲಿ ಈ ದಂಧೆ ಹೆಚ್ಚಾಗಿದೆ. ಇನ್ನು ಈ ದಂಧೆಗಾಗಿ ರೆಸ್ಟೋರೆಂಟ್ ಮಾಲೀಕರು ಮತ್ತು ವಂಚಕ ಯುವತಿಯರು ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಾರೆ. ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಎಂ.ಜಿ. ರೋಡ್​​ನಲ್ಲಿ ಇಂತಹ ದಂಧೆ ಹೆಚ್ಚಾಗಿದೆ. ಬೆಂಗಳೂರು ಪೊಲೀಸರು ಇತ್ತೀಚೆಗೆ ಇಂತಹ ಹತ್ತಾರು ಜಾಲಗಳನ್ನು ಪತ್ತೆಹಚ್ಚಿ ರೆಸ್ಟೋರೆಂಟ್ ಮ್ಯಾನೇಜರ್‌ಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಸಿಹಿತಿಂಡಿ ತಿನ್ನಬೇಕು ಅನಿಸುತ್ತಾ? ಹಾಗಿದ್ರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು! – Kannada News | Why We Crave Sweets: Science Behind Sugar Addiction

ಕೆಲವರಿಗೆ ಸಿಹಿತಿನಿಸುಗಳನ್ನು (Sweets) ಸೇವನೆ ಮಾಡುವುದು ಎಂದರೆ ತುಂಬಾ ಇಷ್ಟ. ಪ್ರತಿದಿನ ಊಟ, ತಿಂಡಿ ಮಾಡುವುದಕ್ಕಿಂತಲೂ ಮುಖ್ಯವಾಗಿ ಸಿಹಿಯಾದ ಆಹಾರಗಳ ಸೇವನೆ ಮಾಡಲು ಹಂಬಲಿಸುತ್ತಾರೆ. ಈ ರೀತಿ ಸಿಹಿ ತಿನ್ನುವ ಬಯಕೆ (Sugar Cravings) ಕ್ರಮೇಣ ದೈನಂದಿನ ಅವಶ್ಯಕತೆಯಂತೆ ಆಗಿಬಿಡುತ್ತದೆ. ಕೆಲವೊಮ್ಮೆ, ಊಟದ ನಂತರ ಅಥವಾ ತಿಂಡಿ ತಿನ್ನುವ ಮೊದಲು ಹೀಗೆ, ಸಮಯದ ಪರಿವಿಲ್ಲದೆ ಸ್ವೀಟ್ ತಿನ್ನಬೇಕು ಎಂದು ಅನಿಸುತ್ತದೆ. ಆರಂಭದಲ್ಲಿ, ಇದು ಸಾಮಾನ್ಯವೆಂದು ತೋರುತ್ತದೆಯಾದರೂ, ಪದೇ ಪದೇ ಈ ರೀತಿ ಆಸೆಯಾಗಲು ಪ್ರಾರಂಭಿಸಿದಾಗ, ಅದು ಕಳವಳಕಾರಿ ವಿಷಯವಾಗುತ್ತದೆ. ಹೌದು, ಸಿಹಿತಿಂಡಿಗಳನ್ನು ತಿನ್ನುವುದು ದೇಹಕ್ಕೆ ತಾತ್ಕಾಲಿಕವಾಗಿ ಮನಸ್ಸಿಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ, ಅದಕ್ಕಾಗಿಯೇ ಕೆಲವರು ಹೆಚ್ಚು ದಣಿವಾದಾಗ ಅಥವಾ ಒತ್ತಡದಲ್ಲಿದ್ದಾಗ ಸಿಹಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಅತಿಯಾದ ಸೇವನೆ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಹಾಗಾದರೆ ಈ ರೀತಿಯ ಅಭ್ಯಾಸದಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಈ ರೀತಿಯ ಬಯಕೆಯನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆಚ್ಚೆಚ್ಚು ಸಿಹಿತಿಂಡಿ ತಿನ್ನಬೇಕೆಂಬ ಬಯಕೆಯಾಗುವುದಕ್ಕೆ ಕಾರಣವೇನು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಡಾ. ಎಲ್.ಎಚ್. ​​ಘೋಟೇಕರ್ ಅವರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿಗೆ ಪದೇ ಪದೇ ಸಿಹಿತಿಂಡಿ ತಿನ್ನಲು ಬಯಕೆಯಾಗುವುದು ಕೇವಲ ರುಚಿಗೆ ಮಾತ್ರವಲ್ಲ. ಹಲವರಿಗೆ, ಈ ಅಭ್ಯಾಸವು ಅವರ ದೈನಂದಿನ ದಿನಚರಿ ಮತ್ತು ಜೀವನಶೈಲಿಗೆ ಸಂಬಂಧಿಸಿರುತ್ತದೆ. ಅನಿಯಮಿತ ಆಹಾರ ಪದ್ಧತಿ, ದೀರ್ಘಕಾಲದವರೆಗೆ ಹಸಿವಿನಿಂದ ಇರುವುದು ಅಥವಾ ಹೆಚ್ಚು ಜಂಕ್ ಫುಡ್ ಸೇವಿಸುವುದು ಸಹ ಇದಕ್ಕೆ ಕಾರಣಗಳಾಗಿರಬಹುದು. ಅಷ್ಟೇ ಅಲ್ಲ, ಒತ್ತಡ, ನಿದ್ರೆಯ ಕೊರತೆ ಮತ್ತು ಮಾನಸಿಕ ಆಯಾಸ ಕೂಡ ಸಿಹಿ ತಿನ್ನಬೇಕೆಂಬ ಹಂಬಲವನ್ನು ಹೆಚ್ಚಿಸುತ್ತದೆ. ಕೆಲವರು, ದಣಿವಾದಾಗ ಕೂಡ ಸಿಹಿತಿಂಡಿಗಳ ಸೇವನೆ ಮಾಡುತ್ತಾರೆ. ಕಾಲಾನಂತರದಲ್ಲಿ, ಇದು ಅಭ್ಯಾಸವಾಗುತ್ತದೆ ಮತ್ತು ಸಿಹಿತಿಂಡಿಗಳಿಲ್ಲದೆ, ಆಗುವುದೇ ಎಲ್ಲ ಎಂಬ ಹಂತಕ್ಕೆ ಬರುತ್ತಾರೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ತಿನ್ನುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ

ಪದೇ ಪದೇ ಸಿಹಿತಿಂಡಿ ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ?

ಸಿಹಿತಿಂಡಿಗಳನ್ನು ಪದೇ ಪದೇ ತಿನ್ನುವುದರಿಂದ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಇದು ತ್ವರಿತ ತೂಕ ಹೆಚ್ಚಾಗಲು ಮತ್ತು ಬೊಜ್ಜುತನಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ, ಹೆಚ್ಚು ಸಕ್ಕರೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಮತೋಲನಗೊಳ್ಳುತ್ತದೆ, ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ಹಲ್ಲಿನಲ್ಲಿ ಹುಳುಕು, ದೌರ್ಬಲ್ಯ ಮತ್ತು ಆಯಾಸದಂತಹ ಸಮಸ್ಯೆಗಳು ಸಹ ಕಂಡುಬರಬಹುದು. ಕೆಲವರಲ್ಲಿ, ಇದು ಜೀರ್ಣಕಾರಿ ಸಮಸ್ಯೆ ಮತ್ತು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ತಡೆಯುವುದು ಹೇಗೆ?

ಸಿಹಿತಿಂಡಿಗಳ ಆಗಾಗ ಸೇವನೆ ಮಾಡುವುದನ್ನು ತಡೆಯಲು ಅಥವಾ ಆ ಹಂಬಲವನ್ನು ತಪ್ಪಿಸಲು ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡಿ ತಿನ್ನಿರಿ, ಹೆಚ್ಚು ಹೊತ್ತು ಹಸಿವಿನಿಂದ ಇರಬೇಡಿ. ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ ಮತ್ತು ಒಳ್ಳೆಯ ನಿದ್ರೆ ಮಾಡಿ. ಒತ್ತಡ ಕಡಿಮೆ ಮಾಡಲು, ಯೋಗ ಅಥವಾ ಲಘು ವ್ಯಾಯಾಮವನ್ನು ಅಭ್ಯಾಸ ಮಾಡಿ. ಸಿಹಿತಿಂಡಿಗಳ ಬದಲಿಗೆ ಹಣ್ಣು, ಒಣ ಹಣ್ಣು ಅಥವಾ ಆರೋಗ್ಯಕರ ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳಿ. ಇದೆಲ್ಲದರ ಜೊತೆಗೆ ಸಿಹಿತಿಂಡಿಗಳ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುವುದರಿಂದ ಈ ಅಭ್ಯಾಸವನ್ನು ನಿಯಂತ್ರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನರನೋವು ಶಮನ ಮಾಡಬಲ್ಲ ‘ಪೀಡಾನಿಲ್ ಗೋಲ್ಡ್’; ಇದು ಪತಂಜಲಿ ಆಯುರ್ವೇದದ ಕೊಡುಗೆ – Kannada News | Research shows Patanjali’s Peedanil Gold effective for chronic nerve pain

ಇತ್ತೀಚಿನ ದಿನಗಳಲ್ಲಿ ದೀರ್ಘಕಾಲದ, ನೋವುರಹಿತ ಕಾಯಿಲೆಗಳು ಸಾಮಾನ್ಯವಾಗಿದ್ದು, ಅನೇಕ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಸಾಂಪ್ರದಾಯಿಕ ಔಷಧದಲ್ಲಿ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ಕಷ್ಟವಾದರೂ, ಆಯುರ್ವೇದವು ಉತ್ತಮ ಆರೋಗ್ಯಕ್ಕಾಗಿ ಶಾಶ್ವತವಾದ, ನೈಸರ್ಗಿಕ ಪರಿಹಾರವನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ, ಪತಂಜಲಿಯು ದೀರ್ಘಕಾಲದ ನರ ನೋವಿಗೆ ಪರಿಣಾಮಕಾರಿ ಪರಿಹಾರವಾದ ಪೀಡನಿಲ್ ಗೋಲ್ಡ್ (Peedanil Gold) ಎಂಬ ಔಷಧವನ್ನು ಅಭಿವೃದ್ಧಿಪಡಿಸಲು ಆಯುರ್ವೇದ ವಿಧಾನಗಳನ್ನು ಬಳಸಿಕೊಂಡಿದೆ. ಈ ಸಂಶೋಧನಾ ಪ್ರಬಂಧವನ್ನು ಪ್ರತಿಷ್ಠಿತ ವೈಲಿ ಪಬ್ಲಿಕೇಷನ್ಸ್ ಇಂಟರ್ನ್ಯಾಷನಲ್​ನ ಪೀರ್-ರಿವ್ಯೂಡ್ ಜರ್ನಲ್ ಆದ ಪೆನ್ ರಿಸರ್ಚ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಕಟಿಸಲಾಗಿದೆ. ಪತಂಜಲಿಯು (Patanjali) ವಿಶ್ವಾದ್ಯಂತ ಜನರನ್ನು ಆರೋಗ್ಯವಾಗಿಡಲು ಸುರಕ್ಷಿತ, ಪುರಾವೆ ಆಧಾರಿತ ಆಯುರ್ವೇದ ಔಷಧಿಗಳನ್ನು ಒದಗಿಸುತ್ತದೆ.

ಜನರಿಗೆ ಪರಿಣಾಮಕಾರಿ ನೋವು ನಿವಾರಕಗಳು

ಪತಂಜಲಿ ಆಯುರ್ವೇದದ ಸಹ-ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಅವರ ಪ್ರಕಾರ, ದೀರ್ಘಕಾಲದ ನರ ನೋವಿನಿಂದ ಬಳಲುತ್ತಿರುವವರಿಗೆ ಮತ್ತು ಯಾವುದೇ ಪ್ರಯೋಜನವಿಲ್ಲದೆ ವರ್ಷಗಳಿಂದ ದುಬಾರಿ ಸಾಂಪ್ರದಾಯಿಕ ಔಷಧಿಗಳನ್ನು ಬಳಸುತ್ತಿರುವವರಿಗೆ ಪೀಡಾನಿಲ್ ಗೋಲ್ಡ್ ಕುರಿತಾದ ಸಂಶೋಧನೆಯು ಹೊಸ ಮತ್ತು ನೈಸರ್ಗಿಕ ಭರವಸೆಯನ್ನು ತರುತ್ತದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ನರ ನೋವಿನಿಂದ ಬಳಲುತ್ತಿದ್ದು, ಜೀವನದ ಮೇಲೆ ಆ ನೋವು ಅದೆಷ್ಟು ಆಳವಾದ ಪರಿಣಾಮ ಬೀರುತ್ತದೆ ಎಂಬುದನ್ನು ಪತಂಜಲಿ ಸಂಸ್ಥಾಪಕರು ಬಲ್ಲರು.

ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಕುಸಿತದ ನಡುವೆ ಪತಂಜಲಿ ಷೇರುಗಳಿಗೆ 3 ದಿನ ಹೆಚ್ಚಿದ ಬೇಡಿಕೆ; ಹೂಡಿಕೆದಾರರಿಗೆ ಸಾವಿರ ಕೋಟಿ ರೂ ಲಾಭ

ನ್ಯೂರೋಪಥಿಕ್ ನೋವು ಸಾಮಾನ್ಯವಾಗಿ ಮಧುಮೇಹ, ನರ ಹಾನಿ, ಶಸ್ತ್ರಚಿಕಿತ್ಸೆಯ ನಂತರದ ತೊಡಕುಗಳು, ಕಿಮೊಥೆರಪಿಯ ಅಡ್ಡಪರಿಣಾಮಗಳು ಅಥವಾ ಬೆನ್ನುಹುರಿಯ ಗಾಯಗಳಿಂದ ಉಂಟಾಗುತ್ತದೆ. ನಿದ್ರಾಹೀನತೆ, ಕಿರಿಕಿರಿ ಮತ್ತು ನಿರುತ್ಸಾಹದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಸಾಂಪ್ರದಾಯಿಕ ಔಷಧಿಗಳು ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆಯಾದರೂ, ಅವು ಶಾಶ್ವತ ಪರಿಹಾರವನ್ನು ನೀಡುವುದಿಲ್ಲ.

ಪೀಡಾನಿಲ್ ಗೋಲ್ಡ್ ನೋವು ನಿವಾರಕ ಯಾವುದರಿಂದ ಮಾಡಲ್ಪಟ್ಟಿದೆ?

ಈ ಅನಾರೋಗ್ಯ ಸಮಸ್ಯೆಯನ್ನು ಪರಿಹರಿಸಲು, ಪತಂಜಲಿ ಒಂದು ವಿಶಿಷ್ಟವಾದ ಹರ್ಬಲ್-ಮಿನರಲ್ ಪ್ರಾಡಕ್ಟ್ ಅಭಿವೃದ್ಧಿಪಡಿಸಿದೆ. ಈ ಔಷಧವೇ ಪೀಡನಿಲ್ ಗೋಲ್ಡ್. ಆಯುರ್ವೇದ ತತ್ವಗಳನ್ನು ಆಧುನಿಕ ವೈಜ್ಞಾನಿಕ ಕ್ರಮಗಳೊಂದಿಗೆ ಸಂಯೋಜಿಸಿರುವ ಈ ಔಷಧವು ರೋಗಿಗಳಿಗೆ ಹೊಸ ಭರವಸೆ ನೀಡುತ್ತದೆ. ಪೀಡನಿಲ್ ಗೋಲ್ಡ್ ಅನ್ನು ಬೃಹತ್ವತ್ ಚಿಂತಾಮಣಿ ರಸ, ಪುನರ್ನವದಿ ಮಂಡೂರ್, ಶುದ್ಧ ಗುಗ್ಗುಲು, ಮುಕ್ತ ಶುಕ್ತಿ ಭಸ್ಮ, ಮಹಾವತ್ ವಿದ್ವಾಮಕ ರಸ ಮತ್ತು ಅಮಾವತಾರಿ ರಸಗಳೊಂದಿಗೆ ರೂಪಿಸಲಾಗಿದೆ. ಪತಂಜಲಿ ಸಂಶೋಧನಾ ಪ್ರತಿಷ್ಠಾನದ ಉಪಾಧ್ಯಕ್ಷ ಮತ್ತು ಔಷಧ ಆವಿಷ್ಕಾರ ಅಭಿವೃದ್ಧಿ ವಿಭಾಗ ಮತ್ತು ಕ್ಲಿನಿಕಲ್ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಅನುರಾಗ್ ವರ್ಷ್ಣಿ, ಅಸ್ಥಿಸಂಧಿವಾತ ಮತ್ತು ಇತರ ಕೀಲು ಉರಿಯೂತದ ಸ್ಥಿತಿಗಳಲ್ಲಿ ಪೀಡನಿಲ್ ಗೋಲ್ಡ್‌ನ ಪರಿಣಾಮಕಾರಿತ್ವವನ್ನು ವಿವರಿಸಿದ್ದಾರೆ.

ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ

ಶೀತ ಮತ್ತು ಉಷ್ಣದಿಂದ ಉಂಟಾಗುವ ನೋವನ್ನು ಪೀಡಾನಿಲ್ ಗೋಲ್ಡ್ ಔಷಧ ಕಡಿಮೆ ಮಾಡುತ್ತದೆ. ಇಲಿಗಳಲ್ಲಿ ಕ್ರಾನಿಕ್ ಕಾನ್ಸ್​ಟ್ರಿಕ್ಷನ್ ಇಂಜುರಿ (CCI) ಮಾಡಲ್ ಅನ್ನು ಬಳಸಿ ನಡೆಸಿದ ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ. ನರರೋಗ ನೋವಿಗೆ ನಿಯಮಿತವಾಗಿ ಬಳಸಲಾಗುವ ಔಷಧಿಯಾದ ಗ್ಯಾಬಪೆಂಟಿನ್‌ಗೆ ಹೋಲಿಸಿದರೆ ಇದರ ಪರಿಣಾಮಕಾರಿತ್ವವು ಇನ್ನೂ ಹೆಚ್ಚಿದೆ. ನೋವು ಗ್ರಹಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೇನ್ ರಿಸೆಪ್ಟರ್​ಗಳಾದ TRPV1, TRPV4, TRPA1 ಮತ್ತು TRPM8 ಗಳ ಚಟುವಟಿಕೆಯನ್ನು ಟ್ಯಾಬ್ಲೆಟ್ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಟೈಪ್-1 ಡಯಾಬಿಟಿಸ್ ಏನು? ಇದನ್ನು ನಿಯಂತ್ರಿಸುವ ಆಹಾರಕ್ರಮ ಮತ್ತು ಯೋಗಕ್ರಮಗಳೇನು? ಇಲ್ಲಿದೆ ಬಾಬಾ ರಾಮದೇವ್ ಸಲಹೆ

ಇದು p38 MAP kinase ಮತ್ತು IL-6R ನಂತಹ ಪ್ರಮುಖ ಇನ್​ಫ್ಲೆಮೇಶನ್ ಮಾರ್ಕರ್​ಗಳನ್ನು ಸಹ ಕಡಿಮೆ ಮಾಡುತ್ತದೆ. ಆದ್ದರಿಂದ, ರೋಗಲಕ್ಷಣಗಳಿಂದ ಅಲ್ಪಾವಧಿಯ ಪರಿಹಾರವನ್ನು ಒದಗಿಸುವ ಸಾಂಪ್ರದಾಯಿಕ ಔಷಧಿಗಳಿಗಿಂತ ಭಿನ್ನವಾಗಿ, ಪೀಡಾನಿಲ್ ಗೋಲ್ಡ್ ನರ ನೋವಿನ ಮೂಲ ಕಾರಣಗಳನ್ನು ಪರಿಹರಿಸಲು ಹೆಚ್ಚು ಸಮಗ್ರ ವಿಧಾನವನ್ನು ನೀಡುತ್ತದೆ. ಪೀಡಾನಿಲ್ ಗೋಲ್ಡ್ ತಯಾರಿಕೆಗೆ ಸಂಬಂಧಿಸಿದ ಸಂಶೋಧನೆಯೊಂದಿಗೆ, ಪತಂಜಲಿ ಆಯುರ್ವೇದವು ನಿಮ್ಮ ಎಲ್ಲಾ ನರ ನೋವಿನ ಸಮಸ್ಯೆಗಳಿಗೆ ಸಮಂಜಸವಾದ ಮತ್ತು ದೀರ್ಘಕಾಲೀನದ್ದಾದ ಪರಿಹಾರವನ್ನು ನೀಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ – Kannada News | Fans rush onto stage to see Bigg Boss Kannada Winner Gilli Nata

ಕನಕಪುರದಲ್ಲಿ ಕನಕೋತ್ಸವ ಕಾರ್ಯಕ್ರಮ ನಡೆದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ರಿಯಾಲಿಟಿ ಶೋ ವಿನ್ನರ್ ಗಿಲ್ಲಿ ನಟ ಅವರು ಇದರಲ್ಲಿ ಭಾಗಿ ಆಗಿದ್ದಾರೆ. ಗಿಲ್ಲಿ ಅವರು ಹೋದಲ್ಲೆಲ್ಲ ಅಭಿಮಾನಿಗಳು ಸೇರುತ್ತಿದ್ದಾರೆ. ಗಿಲ್ಲಿ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂಬುದು ಫ್ಯಾನ್ಸ್ ಆಸೆ. ಕನಕೋತ್ಸವ ಕಾರ್ಯಕ್ರಮದ ವೇದಿಕೆಗೆ ಗಿಲ್ಲಿ ಬಂದಾಗ ಕೆಲವು ಅಭಿಮಾನಿಗಳು ನುಗ್ಗಿದ್ದಾರೆ. ಕೂಡಲೇ ಅವರನ್ನು ನಿಯಂತ್ರಿಸಲಾಯಿತು. ಗಿಲ್ಲಿ ನಟ (Gilli Nata) ಮೇಲೆ ಜನರಿಗೆ ಇರುವ ಕ್ರೇಜ್ ಎಷ್ಟು ಎಂಬುದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಇದೇ ಕಾರ್ಯಕ್ರಮದಲ್ಲಿ ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಕೂಡ ಭಾಗಿ ಆಗಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಮೆಹಂದಿ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

T20 World Cup 2026: ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ – Kannada News | India Pakistan T20 World Cup 2026 Clash At Risk: Boycott Looms

2026ರ ಟಿ20 ವಿಶ್ವಕಪ್ (T20 World Cup 2026) ಇದೇ ಫೆಬ್ರವರಿ 9 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಹೈವೋಲ್ಟೇಜ್ ಕದನ ಫೆಬ್ರವರಿ 15 ರಂದು ಭಾರತ ಹಾಗೂ ಪಾಕಿಸ್ತಾನದ (India vs Pakistan) ನಡುವೆ ನಡೆಯಲಿದೆ. ಆದಾಗ್ಯೂ ಈ ಪಂದ್ಯ ನಡೆಯುವುದು ಅನುಮಾನ ಎಂದು ವರದಿಯಾಗಿದೆ. ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿರುವಂತೆ, ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡವನ್ನು ಕಣಕ್ಕಿಳಿಸದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಿಂತಿಸುತ್ತಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಪ್ರಧಾನಿ ಶಹಬಾಜ್ ಷರೀಫ್ ನಡುವೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಭೆ ನಡೆಯಲಿದೆ. ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನಗೊಂಡಿದ್ದು, ಟೀಂ ಇಂಡಿಯಾ ವಿರುದ್ಧ ತನ್ನ ಪಂದ್ಯವನ್ನು ಬಹಿಷ್ಕರಿಸಲು ಪಿಸಿಬಿ ಯೋಚಿಸುತ್ತಿದೆ.

ಪಂದ್ಯ ರದ್ದಾದರೆ ಏನಾಗುತ್ತದೆ?

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕೊ್ ಪಂದ್ಯ ರದ್ದಾದರೆ, ಅದು ಐಸಿಸಿಗೆ ಸಾಕಷ್ಟು ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಟಿ20 ವಿಶ್ವಕಪ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳ ಜೊತೆಗೆ, ಭಾರತ-ಪಾಕಿಸ್ತಾನ ಪಂದ್ಯವು ವಿಶ್ವದಲ್ಲೇ ಅತಿ ಹೆಚ್ಚು ರೇಟಿಂಗ್ ಪಡೆದ ಪಂದ್ಯವಾಗಿದೆ. ಹೀಗಾಗಿ ಒಂದು ವೇಳೆ ಪಾಕಿಸ್ತಾನ ಈ ಪಂದ್ಯದಿಂದ ಹಿಂದೆ ಸರಿದರೆ ಐಸಿಸಿ ಮತ್ತು ಪ್ರಸಾರಕರಿಗೆ ಗಮನಾರ್ಹ ನಷ್ಟಕ್ಕೆ ಕಾರಣವಾಗಬಹುದು. ಆದಾಗ್ಯೂ, ಇದು ಪಾಕಿಸ್ತಾನದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ, ಏಕೆಂದರೆ ಐಸಿಸಿ ಪಾಕ್ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು.

T20 World Cup 2026: ಪಾಕ್ ವಿಶ್ವಕಪ್‌ ತಂಡದಿಂದ 7 ಆಟಗಾರರು ಔಟ್

ಬಹಿಷ್ಕಾರಕ್ಕೆ ಮಾಜಿ ಆಟಗಾರರ ಒತ್ತಾಯ

ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ನಂತರ, ಪಾಕಿಸ್ತಾನದ ಮಾಜಿ ಆಟಗಾರರು ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಾಜಿ ನಾಯಕ ರಶೀದ್ ಖಾನ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸಬೇಕೆಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಡದಿರುವುದು ಭಾರತ ಮತ್ತು ಐಸಿಸಿಗೆ ಗಮನಾರ್ಹ ಹೊಡೆತವಾಗಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಪ್ರಸ್ತುತ ಭಾರತದ ವಿರುದ್ಧದ ಪಂದ್ಯವನ್ನು ಪಾಕ್ ತಂಡ ಬಹಿಷ್ಕರಿಸುವ ವರದಿಗಳು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಆದಾಗ್ಯೂ ಶಹಬಾಜ್ ಷರೀಫ್ ಮತ್ತು ಮೊಹ್ಸಿನ್ ನಖ್ವಿ ನಡುವಿನ ಸಭೆಯ ನಂತರ ಈ ಸುದ್ದಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:54 pm, Mon, 26 January 26

Source link

CUSMA ನಿಯಮಗಳಿಗೆ ಬದ್ಧ; ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ಕೆನಡಾ ಹೇಳಿಕೆ – Kannada News | Canada clarifies that it is binded by CUSMA rules, says no trade deal with China

ನವದೆಹಲಿ, ಜನವರಿ 26: ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂದು ಕೆನಡಾ ಹೇಳಿದೆ. ಚೀನಾದೊಂದಿಗೆ ಕೆನಡಾ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಲ್ಲಿ, ಆ ದೇಶದ ಮೇಲೆ ಶೇ. 100 ಟ್ಯಾರಿಫ್ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೆನಡಾದಿಂದ ಈ ಸ್ಪಷ್ಟನೆ ಬಂದಿದೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನೀ (Mark Carney) ಅವರು ಈ ಸ್ಪಷ್ಟನೆ ನೀಡಿದ್ದಾರೆ.

‘ಮುಂಚಿತವಾಗಿ ಸೂಚನೆ ಇಲ್ಲದೆ, ಮುಕ್ತ ಮಾರುಕಟ್ಟೆಯಲ್ಲದ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎನ್ನುವ CUSMA (Canada US Mexico Agreement) ನಿಯಮಗಳಿಗೆ ಬದ್ಧರಾಗಿದ್ದೇವೆ. ಚೀನಾ ಆಗಲೀ ಬೇರೆ ಇತರ ನಾನ್ ಮಾರ್ಕೆಟ್ ಎಕನಾಮಿಯ (Non-market economy) ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವ ಉದ್ದೇಶವೂ ಇಲ್ಲ’ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೀ ಹೇಳಿದ್ದಾರೆ.

ಇದನ್ನೂ ಓದಿ: ಯೂರೋಪ್​ನ ಕಾರುಗಳ ಮೇಲಿನ ಟ್ಯಾರಿಫ್ ಶೇ. 110ರಿಂದ ಶೇ. 40ಕ್ಕೆ ಇಳಿಸಲಿದೆಯಾ ಭಾರತ?

ಏನಿದು CUSMA ಒಪ್ಪಂದ?

ಇದು ಕೆನಡಾ, ಅಮೆರಿಕ ಮತ್ತು ಮೆಕ್ಸಿಕೋ ದೇಶಗಳ ಮಧ್ಯೆ ಇರುವ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಮಾರುಕಟ್ಟೆ ನಿರ್ದೇಶಿತ ಆರ್ಥಿಕತೆ ಅಲ್ಲದ ಇತರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮುನ್ನ ತಮಗೆ ಮುಂಚಿತವಾಗಿ ತಿಳಿಸಬೇಕು ಈ ಮೂರೂ ದೇಶಗಳು ಪರಸ್ಪರ ನಿರ್ಬಂಧಗಳನ್ನು ಹಾಕಿಕೊಂಡಿವೆ. ಅಂದರೆ, ಚೀನಾ, ಉತ್ತರ ಕೊರಿಯಾ, ಇರಾನ್ ಇತ್ಯಾದಿ ಮುಕ್ತವಲ್ಲದ ಮಾರುಕಟ್ಟೆ ಇರುವ ದೇಶಗಳೊಂದಿಗೆ ಟ್ರೇಡ್ ಡೀಲ್ ಮಾಡಿಕೊಳ್ಳಲು ನಿರ್ಬಂಧಗಳಿವೆ.

‘ಅಮೆರಿಕ ಮತ್ತು ಮೆಕ್ಸಿಕೋ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿರುವ ನಿಯಮಗಳಿಗೆ ಕೆನಡಾ ಬದ್ಧವಾಗಿಯೇ ಇದೆ. ಕಳೆದ ಒಂದೆರಡು ವರ್ಷದಲ್ಲಿ ಚೀನಾದೊಂದಿಗೆ ಉದ್ಭವಿಸಿದ ಕೆಲ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಿದ್ದೇವಷ್ಟೇ’ ಎಂದು ಕೆನಡಾ ಪ್ರಧಾನಿಗಳು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಆ್ಯಪಲ್​ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್​ನಲ್ಲಿ ಸುಳಿವು ಕೊಟ್ಟ ಸಚಿವರು

ಕೆನಡಾವನ್ನು ಚೀನಾ ನುಂಗಿ ನೀರು ಕುಡಿಯುತ್ತೆ ಎಂದ ಟ್ರಂಪ್

ಚೀನಾದೊಂದಿಗೆ ಕೆನಡಾ ನಡೆಸುತ್ತಿದೆ ಎನ್ನಲಾದ ಮಾತುಕತೆಗಳ ವಿಚಾರದಲ್ಲಿ ಅಮೆರಿಕ ಕೆಂಗಣ್ಣು ಬೀರಿದೆ. ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡರೆ ಕೆನಡಾ ಕಥೆ ಮುಗಿಯುತ್ತದೆ. ಅದು ವ್ಯವಸ್ಥಿತವಾಗಿ ಸ್ವನಾಶ ಮಾಡಿಕೊಳ್ಳುತ್ತಿದೆ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್​ಟ್​ಗಲ್ಲಿ ತಿಳಿಸಿದ್ದಾರೆ.

‘ಕೆನಡಾವನ್ನು ಚೀನಾ ಜೀವಂತವಾಗಿ ತಿಂದು ಪೂರ್ಣ ನುಂಗಿ ಹಾಕುತ್ತದೆ. ಅದರ ವ್ಯವಹಾರಗಳು, ಸಾಮಾಜಿಕ ವ್ಯವಸ್ಥೆ, ಜನಜೀವನ ಎಲ್ಲವನ್ನೂ ನಾಶ ಮಾಡುತ್ತದೆ. ಒಂದು ಕಾಲದಲ್ಲಿ ಶ್ರೇಷ್ಠ ದೇಶವೆನಿಸಿದ್ದ ಕೆನಡಾವನ್ನು ಚೀನಾ ಪೂರ್ಣವಾಗಿ ಸ್ವಾಹ ಮಾಡುತ್ತಿರುವುದನ್ನು ನೋಡಲು ಕಷ್ಟವೆನಿಸುತ್ತಿದೆ’ ಎಂದು ಅಮೆರಿಕ ಅಧ್ಯಕ್ಷರು ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಉಳಿದೆರಡು ಪಂದ್ಯಗಳಿಂದಲೂ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಔಟ್

Source link

Video: ಜೀವನವನ್ನು ಆನಂದಿಸಲು ಬೆಂಗಳೂರನ್ನು ಹೀಗೆ ಬಳಸಿಕೊಳ್ಳಿ ಎಂದ ಮಹಿಳೆ – Kannada News | Bengaluru: Lucknow woman says Bengaluru not just for work, but to get what you wants

ಬೆಂಗಳೂರು, ಜನವರಿ 26: ಬೆಂಗಳೂರು (Bengaluru) ಅಂದರೆ ಯುವಕ ಯುವತಿಯರಿಗೆ ಅದೇನೋ ಸೆಳೆತ, ಹೀಗಾಗಿ ಅದೆಷ್ಟೋ ಯುವ ಮನಸ್ಸುಗಳನ್ನು ಕೈ ಬೀಸಿ ತನ್ನತ್ತ ಕರೆಯುವ ತಾಕತ್ತು ಈ ನಗರಕ್ಕಿದೆ. ಆದರೆ ಪ್ರಾರಂಭದಲ್ಲಿ ಈ ನಗರದ ವಾತಾವರಣಕ್ಕೆ, ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳುವುದು ಎಷ್ಟೋ ಜನರಿಗೆ ಕಷ್ಟವಾಗುವುದಿದೆ. ಲಕ್ನೋದ ಮಹಿಳೆಯೊಬ್ಬರು (Lucknow woman) ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಲ್ಲಿನ ಜೀವನದ ಬಗ್ಗೆ ಚಿಂತನಶೀಲ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.  ಕೆಲಸದ ಜತೆ ಜತೆಗೆ ಈ ನಗರದಲ್ಲಿ ಈ ರೀತಿ ಬದುಕಿ ಎಂದು ಸಲಹೆ ನೀಡಿದ್ದಾರೆ.

ಜ್ಯೋತ್ಸ್ನಾ ಗುಪ್ತಾ (Jyotsna Gupta) ಬೆಂಗಳೂರು ವೃತ್ತಿಪರ ಅವಕಾಶಗಳಿಗಿಂತ ಹೆಚ್ಚಿನದನ್ನು ಹೇಗೆ ನೀಡುತ್ತದೆ ಎಂಬುವುದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಿಮಗೆ ನೀಡಲು ತುಂಬಾ ಇದೆ. ಈ ನಗರವನ್ನು ಸರಿಯಾಗಿ ಬಳಸಿಕೊಳ್ಳದ ಅನೇಕ ಜನರನ್ನು ನಾನು ನೋಡುತ್ತೇನೆ. ಜನರ ಸಂಪರ್ಕಗಳು, ಭೇಟಿಗಳು, ತಂತ್ರಜ್ಞಾನದಿಂದ ಹವ್ಯಾಸಗಳವರೆಗೆ, ಕ್ರೀಡೆ, ನೃತ್ಯ, ಬೈಕಿಂಗ್, ಓಟ ಎಲ್ಲವೂ ಇದೆ. ಬೆಂಗಳೂರು ಕೇವಲ ಹಠಮಾರಿ ಸ್ಥಳವಲ್ಲ. ನೀವು ಬಯಸಿದ್ದನ್ನು ಪಡೆಯಲು ಹೆದರುತ್ತಿದ್ದರೆ ಈ ಸ್ಥಳವು ಅಂತಹ ಜೀವನವನ್ನು ನಡೆಸಲು ಉತ್ತಮ ಸ್ಥಳವಾಗಿದೆ. ಈ ನಗರವನ್ನು ಕೆಲಸಕ್ಕಾಗಿ ಮಾತ್ರವಲ್ಲ, ಜೀವನವನ್ನು ನಿಜವಾಗಿಯೂ ಆನಂದಿಸಲು ಬಳಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್

ಜನವರಿ 25 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಒಮ್ಮೆ ನೀವು ನಗರದಿಂದ ಹೊರಬಂದರೆ ನೀವು ಇದೆಲ್ಲವನ್ನೂ ಕಳೆದುಕೊಳ್ಳುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಡೀ ದೇಶದ ಬೇರೆ ಯಾವುದೇ ನಗರವು ಬೆಂಗಳೂರು ನೀಡುವ ಕಾಸ್ಮೋಪಾಲಿಟನ್ ವೈಬ್‌ಗಳಿಗೆ ಹತ್ತಿರ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:26 pm, Mon, 26 January 26

Source link