Category Archives: Blog

Your blog category

Kolar: ಬಂಗಾರದ ನಗರಿಯ ಫಲಪುಷ್ಪ ಪ್ರದರ್ಶನಕ್ಕೆ ಮಾರುಹೋದ ಜನ: ಇಲ್ಲಿವೆ ಸುಂದರ ಚಿತ್ರಗಳು – Kannada News | Kolar Flower Show: Various Artworks Steal the Spotlight

ಕೋಲಾರ ತೋಟಗಾರಿಕೆ ಮತ್ತು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮತ್ತು ಸಾವಯವ ಮೇಳ ನೋಡುಗರನ್ನು ಪುಳಕಗೊಳಿಸಿದೆ. ಹೂವು ಮತ್ತು ಹಣ್ಣುಗಳಲ್ಲಿ ಅರಳಿದ ಸುಂದರ ಕಲಾಕೃತಿಗಳು ಮನಸೂರೆಗೊಂಡಿದ್ದು, ಕಲ್ಲಂಗಡಿಯಲ್ಲಿ ಮೂಡಿದ ವಿವಿಧ ಸೆಲೆಬ್ರಿಟಿಗಳ ಚಿತ್ರಗಳು ನೋಡುಗರನ್ನು ವಿಶೇಷವಾಗಿ ಆಕರ್ಷಿಸಿವೆ.

ಹೂವಿನಲ್ಲಿ ನಿರ್ಮಾಣ ಮಾಡಿರುವ ಹಸು-ಕರು ಶಿಲ್ಪ, ಸಾಲುಮರದ ತಿಮ್ಮಕ್ಕ ಅವರ ಮರಳು ಶಿಲ್ಪ, ರಂಗೋಲಿಯಲ್ಲಿ ಅರಳಿರುವ ಗಣ್ಯರ ಚಿತ್ರಗಳು ನೋಡುಗರ ಕಣ್ಮನ ಸೆಳೆದಿವೆ. ಇತ್ತೀಚೆಗೆ ಬಿಗ್ ಬಾಸ್​​ನಲ್ಲಿ ಗೆಲುವು ಸಾಧಿಸಿದ ಗಿಲ್ಲಿನಟ, ಕ್ರಿಕೆಟ್ ತಾರೆಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಕಲಾಕೃತಿಗಳಿಗೆ ಸಾರ್ವಜನಿಕರು ಫಿದಾ ಆಗಿದ್ದಾರೆ.

ಮೂರು ದಿನ ನಡೆಯುತ್ತಿರುವ ಈ ಫಲಪುಷ್ಪ ಪ್ರದರ್ಶನವನ್ನು ಎಲ್ಲ ವಯೋಮಾನದವರ ಅಭಿರುಚಿಗೆ ಅನುಗುಣವಾಗಿ ಆಯೋಜಿಸಲಾಗಿದೆ. ರೈತರಿಗೆ ರೇಷ್ಮೆ ಕೃಷಿ, ಸಾವಯವ ಕೃಷಿ, ಮೀನು ಕೃಷಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುವ ಮಾಹಿತಿಯನ್ನೂ ಇಲ್ಲಿ ನೀಡಲಾಗ್ತಿದೆ. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ವಿವಿಧ ಫೋಟೋಗಳನ್ನು ಒಂದೇ ಸೂರಿನಡಿ ಇಡಲಾಗಿದೆ.

ಇನ್ನು ಮಹಿಳೆಯರು ಮತ್ತು ಯುವತಿಯರಿಗೆ ಹೆಚ್ಚು ಇಷ್ಟವಾಗುವ ಹೂವು ಹಾಗೂ ತೆಂಗಿನ ಗರಿಗಳಿಂದ ಮಾಡಲಾದ ವಿವಿಧ ಕಲಾಕೃತಿಗಳನ್ನು ಇಲ್ಲಿ ನೋಡಬಹುದಾಗಿದೆ. ವಿಶೇಷವಾಗಿ ಬಗೆ ಬಗೆಯ ಬಣ್ಣದ ಹೂಗಳು ನೋಡುಗರನ್ನು ಆಕರ್ಷಿಸುತ್ತಿದ್ದು, ಅಪರೂಪದ ಹಣ್ಣುಗಳು ಕೂಡ ಸಾರ್ವಜನಿಕರ ಕುತೂಹಲ ಹೆಚ್ಚಿಸಲಿವೆ.

ತೋಟಗಾರಿಕಾ ಇಲಾಖೆಯ ಈ ಅದ್ಬುತವಾದ ಫಲಪುಷ್ಟ ಪ್ರದರ್ಶನ ನಿಜಕ್ಕೂ ಜಿಲ್ಲೆಯ ಜನರಿಗೆ ಮೂರು ದಿನಗಳ ಕಾಲ ಭರಪೂರ ಮನೋರಂಜನೆ ಜೊತೆಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದೆ. ಅಪರೂಪದ ಹೂ, ಹಣ್ಣುಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಒದಗಿಸಿರುವ ಇಲಾಖೆಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆಯೂ ಕೇಳಿಬಂದಿದೆ.

Published On – 4:19 pm, Mon, 26 January 26

Source link

ಇರಾನ್ ಮೇಲೆ ಅಮೆರಿಕದ ದಾಳಿಯ ಭೀತಿ; ಭೂಗತ ಸ್ಥಳಕ್ಕೆ ಖಮೇನಿ ಶಿಫ್ಟ್ – Kannada News | Iran’s Supreme Leader Khamenei moves to underground bunker Amid Fears Of Potential US Attack threat

ಟೆಹ್ರಾನ್, ಜನವರಿ 26: ಟೆಹ್ರಾನ್‌ನಲ್ಲಿ ಕೆಲವು ವಾರಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗಿವೆ. ಇದರಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಇಸ್ಲಾಮಿಕ್ ಆಡಳಿತದ ಹಿಂಸಾತ್ಮಕ ಕ್ರಮಗಳ ನಡುವೆ ಇರಾನ್ ಹಾಗೂ ಅಮೆರಿಕದ ನಡುವೆ ಯುದ್ಧ ಉಂಟಾಗುವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei) ಟೆಹ್ರಾನ್‌ನ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಅಪಾಯವಿದೆ ಎಂಬ ಸೂಚನೆ ಲಭ್ಯವಾಗುತ್ತಿದ್ದಂತೆ ಖಮೇನಿ ರಹಸ್ಯವಾದ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. ಈ ರಹಸ್ಯವಾದ ಸ್ಥಳ ಕೋಟೆಯನ್ನು ಒಳಗೊಂಡಿದ್ದು, ಸುರಂಗ ಮಾರ್ಗಗಳೂ ಇವೆ ಎನ್ನಲಾಗಿದೆ.

ದಿ ಟೈಮ್ಸ್ ಆಫ್ ಇಸ್ರೇಲ್, ಇರಾನ್ ಇಂಟರ್ನ್ಯಾಷನಲ್ ಪ್ರಕಟಿಸಿದ ವರದಿಯ ಪ್ರಕಾರ, ಟೆಹ್ರಾನ್ ಮೇಲೆ ಅಮೆರಿಕದ ದಾಳಿಯ ಅಪಾಯ ಹೆಚ್ಚಾಗಿದೆ ಎಂದು ಇರಾನ್ ಹಿರಿಯ ಅಧಿಕಾರಿಗಳು ನಿರ್ಣಯಿಸಿದ ನಂತರ ಖಮೇನಿ ಭೂಗತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ. ಖಮೇನಿ ಇರುವ ಬಂಕರ್ ಇರಾನ್​ನ ಸರ್ವೋಚ್ಚ ನಾಯಕನ ಭದ್ರತೆಗಾಗಿ ವಿನ್ಯಾಸಗೊಳಿಸಲಾದ ಸುರಂಗ ಮಾರ್ಗಗಳ ವ್ಯವಸ್ಥೆಯನ್ನು ಹೊಂದಿದೆ ಎಂದು ವರದಿಯಾಗಿದೆ. ಆದರೆ, ಇರಾನ್​ನ ಅಧಿಕಾರಿಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ಇರಾನ್ ಹಿಂದೆ ಸರಿಯುವುದಿಲ್ಲ, ಟ್ರಂಪ್ ಪದಚ್ಯುತಿ ಖಚಿತ; ಸುಪ್ರೀಂ ನಾಯಕ ಖಮೇನಿ ಪ್ರತಿಜ್ಞೆ

ಖಮೇನಿ ತಲೆಮರೆಸಿಕೊಂಡಿದ್ದರೂ ಅವರ ಮೂರನೇ ಮಗ ಮಸೌದ್ ಖಮೇನಿ ತನ್ನ ತಂದೆಯ ಕಚೇರಿಯಲ್ಲಿ ದೈನಂದಿನ ಕಾರ್ಯಾಚರಣೆಗಳನ್ನು ವಹಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರತಿಭಟನಾಕಾರರ ಮೇಲಿನ ಹಿಂಸಾತ್ಮಕ ದಮನದ ಬಗ್ಗೆ ಇರಾನ್‌ನ ಹಿರಿಯ ನಾಯಕತ್ವದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇರಾನ್​​ನಲ್ಲಿ ಯುದ್ಧದ ಭೀತಿ ಎದುರಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

400 ಕೋಟಿ ರೂ. ಕಳ್ಳತನ ಪ್ರಕರಣದ ಬಿಗ್ ಅಪ್​ಡೇಟ್: ಅಸಲಿಗೆ ದರೋಡೆ ಹೇಗಾಯ್ತು? ಯಾರಿಗೆ ಯಾವ ಜವಾಬ್ದಾರಿ? – Kannada News | Gujarat politician Link to Belagavi Rs 400 crore Robbery: here Is How to theft money

ಬೆಳಗಾವಿ, ಜನವರಿ 26): ಒಂದಲ್ಲ ಎರಡಲ್ಲ ಬೆಳಗಾವಿಯಲ್ಲಿ (Belagavi) ದರೋಡೆಯಾಗಿದ್ದು ಬರೋಬ್ಬರಿ 400 ಕೋಟಿ ರೂಪಾಯಿ ( Rs 400 Crore Robbery Case). ಈ ದರೋಡೆಯ ರಹಸ್ಯ ಬಟಾಬಯಲಾಗಿದ್ದು,  ಇದು ಸಿನಿಮಾ ಕಥೆಯನ್ನೂ ಮೀರಿಸುವಂತಿದೆ. ದರೋಡೆ ಆಗಿದೆ ಎಂದು ಯಾರು ಬಂದು ದೂರು ಕೊಡಲಿಲ್ಲ. ಅಯ್ಯಯ್ಯೋ ನನ್ನ ಕೋಟ್ಯಾಂತರ ರೂಪಾಯಿ ಹೋಯ್ತು ಎಂದು ಯಾರು ಬಾಯಿ ಬಡೆದುಕೊಳ್ಳಲಿಲ್ಲ.  ಪ್ರಕರಣವನ್ನ ಬಯಲು ಮಾಡಿದ್ದ ಸಂದೀಪ್, ಹಣ ಕಿಶೋರ್ ಸೇಠ್​ಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ ಇದೆ ಎಂದಿದ್ದ. ಆದ್ರೆ, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಇಬ್ಬರ ಹೆಸರಿನ ಜೊತೆಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ

ಅಕ್ಟೋಬರ್ 22ರಂದು ಮಹಾರಾಷ್ಟ್ರದ ಸಂದೀಪ್ ಪಾಟೀಲ್ ಎಂಬಾತನನ್ನ ಉದ್ಯಮಿ ಕಿಶೋರ್ ಸೇಠ್ ಮತ್ತವನ ಕಡೆಯವರು ಅಪಹರಿಸಿರುತ್ತಾರೆ. ಹೀಗೆ ಹೊತ್ತೊಯ್ದವನಿಗೆ ಚಿತ್ರಹಿಂಸೆ ಕೊಟ್ಟವರೇ ದರೋಡೆ ಬಗ್ಗೆ ಪ್ರಶ್ನೆ ಕೇಳೋದಕ್ಕೆ ಶುರುಮಾಡ್ತಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ 2 ಕಂಟೇನರ್​ನಲ್ಲಿ ಹಣ ಹೋಗ್ತಿತ್ತು. ಈ 400 ಕೋಟಿ ಹಣವನ್ನ ಬೆಳಗಾವಿಯ ಚೋರ್ಲಾ ಘಾಟ್ ಬಳಿ ದರೋಡೆ ಮಾಡಲಾಗಿದೆ. ಇದರಲ್ಲಿ ನೀನು ಕೂಡ ಇದಿಯಾ. ಹಣ ಎಲ್ಲೊಯ್ತು ಎಂದು ಒಂದೇ ಸಮನೇ ಕೇಳೋದಕ್ಕೆ ಶುರುಮಾಡ್ತಾರೆ. ಆಗ್ಲೇ ನೋಡಿ ದರೋಡೆಯಾದ ವಿಚಾರ, ದರೋಡೆ ಮಾಡಿದವರಿಗೆ, ಹಣ ಕೊಟ್ಟವರಿಗೆ ಬಿಟ್ಟು ಮೂರನೇ ವ್ಯಕ್ತಿ ಕಿವಿಗೆ ಬಿದ್ದಿದ್ದು.

ಇದನ್ನೋ ನೋಡಿ: ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ? ಸ್ಫೋಟಕ ಮಾಹಿತಿ ಬಯಲಿಗೆ

ಗುಜರಾತ್​ನ ದೊಡ್ಡ ರಾಜಕಾರಣಿ ಕೈವಾಡ

ಪ್ರಕರಣವನ್ನ ಬಯಲು ಮಾಡಿದ್ದ ಸಂದೀಪ್, ಹಣ ಕಿಶೋರ್ ಸೇಠ್​ಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ ಇದೆ ಎಂದಿದ್ದ. ಆದ್ರೆ, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಇಬ್ಬರ ಹೆಸರಿನ ಜೊತೆಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಉದ್ಯಮಿ ಕಿಶೋರ್ ಹಾಗೂ ಮತ್ತಿವನ ಸ್ನೇಹಿತ ಜಯೇಶ್ ನಡುವಿನ ಸಂಭಾಷಣೆಯೊಂದು ವೈರಲ್ ಆಗಿದೆ. ಈ ಆಡಿಯೋದ ಪ್ರಕಾರ, ಬರೋಬ್ಬರಿ 400 ಕೋಟಿ ಹಣ ಗುಜರಾತ್​​ನ ರಾಜಕಾರಣಿಗೆ ಸೇರಿದ್ದು ಎನ್ನಲಾಗಿದೆ. ಆಡಿಯೋದಲ್ಲಿ ಹೇಳೋ ರೀತಿ ನೋಡಿದ್ರೆ, ದರೋಡೆಯಾದ ಹಣದಲ್ಲಿ ಗುಜರಾತ್​ನ ರಾಜಕಾರಣಿಯದ್ದು ಬಹುಪಾಲಿದೆ. ಹಾಗಂತ ಕಿಶೋರ್​ನ ಹಣ ಇಲ್ಲ ಅಂತಲ್ಲ. ಇವರ ಪಾಲು ಕೂಡ ಇದೆ. ಹೀಗಾಗಿ ತಿರುಪತಿಯಲ್ಲಿ ದರೋಡೆಯಾದ 2 ಸಾವಿರ ಮುಖಬೆಲೆಯ ಹಳೇ ನೋಟುಗಳನ್ನ ಎಕ್ಸ್​ಚೇಂಜ್ ಆಗಿತ್ತು. ಇದರ ಮಧ್ಯಸ್ಥಿಕೆಯನ್ನ ಕಿಶೋರ್ ವಹಿಸಿಕೊಂಡಿದ್ದ.

400 ಕೋಟಿ ದರೋಡೆ ಆಗಿದ್ಹೇಗೆ?

ಇನ್ನು ಅಸಲಿಗೆ ದರೋಡೆ ಹೇಗಾಯ್ತು? ಯಾರಿಗೆ ಯಾವ ಜವಾಬ್ದಾರಿಯನ್ನ ಕೊಡಲಾಗಿತ್ತು ಅನ್ನೋದನ್ನ ನೋಡೋದಾದ್ರೆ, ಮಧ್ಯವರ್ತಿಯಾಗಿ ಕೆಲಸ ಮಾಡ್ತಿದ್ದ ಕಿಶೋರ್, ಗುಜರಾತ್​​ ರಾಜಕಾರಣಿಯ ಹಣ ಬದಲಾಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ. ಹೀಗಾಗಿ 400 ಕೋಟಿ ಸಾಗಾಟ ಮಾಡೋ ಕೆಲಸವನ್ನ ಸ್ನೇಹಿತ ವಿರಾಟ್​ಗೆ ಕೊಟ್ಟಿದ್ದ. ವಿರಾಟ್ ತನ್ನ ಹುಡುಗರಿಗೆ ಹಣ ಸಾಗಾಟ ಜವಾಬ್ದಾರಿ ನೀಡಿದ್ದ. ಹೀಗಾಗಿ ಈ ಹುಡುಗರು ಎರಡು ಕಂಟೇನರ್​ಗಳಲ್ಲಿ ಹಣ ತೆಗೆದುಕೊಂಡು ಹೋಗಿದ್ರು. ನೋಟು ಎಕ್ಸ್​ಚೇಂಜ್ ಮಾಡೋಕೆ ಗೋವಾದಿಂದ ಸಾಗಾಟ ಮಾಡ್ತಿದ್ರು. ನೆಟ್​ವರ್ಕ್ ಸಿಗದ ಚೋರ್ಲಾ ಘಾಟ್​​ನಲ್ಲಿ ಕಂಟೇನರ್ ಮಿಸ್ ಆಗಿತ್ತು. ಬರೀ ಕಂಟೇನರ್ ಅಷ್ಟೇ ಅಲ್ಲ. ವಿರಾಟ್ ಹುಡುಗರು ಕೂಡ ನಾಪತ್ತೆ ಆಗಿದ್ದಾರೆ. ಸದ್ಯ ಮಹಾರಾಷ್ಟ್ರ ಪೊಲೀಸರು ವಿರಾಟ್​ನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಎಸ್​ಐಟಿ ಅಧಿಕಾರಿಗಳು ಪ್ರಕರಣವನ್ನ ಕೆದಕುತ್ತಿದ್ದಾರೆ. ಈ ತನಿಖೆಯ ಗುಜರಾತ್​ನ ರಾಜಕಾರಣಿ ಯಾರು? ಇಷ್ಟು ಹಣವನ್ನ ಯಾಕೆ ಎಕ್ಸ್​​ಚೇಂಜ್ ಮಾಡುತ್ತಿದ್ದರು? ತಿರುಪತಿಯಲ್ಲಿ ಹಳೇ ನೋಟುಗಳಿಗೆ ಬದಲಾಗಿ ಯಾರು ನೋಟು ಕೊಡುತ್ತಾರೆ?ಇದು ಬರೀ 4 ಜನರ ನಡುವಿನ ವ್ಯವಹಾರನಾ? ಅಥವಾ ಇದರ ಹಿಂದೆ ದೊಡ್ಡ ಜಾಲವೇ ಇದ್ಯಾ ಎನ್ನುವುದು ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು – Kannada News | Train Hits BMTC Bus In Sadaramangala Railway Parallel Road at Bengaluru

ಬೆಂಗಳೂರು, (ಜನವರಿ 26): ಬಿಎಂಟಿಸಿ ಬಸ್​​​ಗೆ  (BMTC Bus)ರೈಲು ನಡುವೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಸಾದರಮಂಗಲ ಬಳಿ ನಡೆದಿದೆ. ರೈಲ್ವೆ ಪ್ಯಾರ್ಲಲ್ ರೋಡ್​ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್​ನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಇಂದು (ಜನವರಿ 26) ಬೆಳಗ್ಗೆ ಸಾದರಮಂಗಲ ಡಿಪೋ 51ರ KA57 F6000 ನಂಬರ್​ನ ಬಸ್​ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರ್ಲಲ್ ರೋಡ್ ನುಗ್ಗಿಸಿದ್ದಾನೆ. ಪರಿಣಾಮ ಏಕಾಏಕಿ ರೈಲು ಬಂದು ಗುದ್ದಿದ್ದು, ಬಸ್​ ಹಿಂಭಾಗ ಜಖಂ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ – Kannada News | Bengaluru Woman Found Dead: Parents Allege Dowry Harassment by Husband

ಬೆಂಗಳೂರು, ಜನವರಿ 26: 2 ವರ್ಷಗಳ ಹಿಂದೆ ಮದುವೆ ಆಗಿದ್ದ ಮಹಿಳೆಯೋರ್ವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕೀರ್ತಿ ಮೃತ ಮಹಿಳೆಯಾಗಿದ್ದು, ವರದಕ್ಷಿಣೆ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ. ಕಳೆದ 2 ತಿಂಗಳಿಂದ ಕಿರುಕುಳದ ಬಗ್ಗೆ ತಾಯಿ ಬಳಿ ಕೀರ್ತಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತಲೆ ತಿರುಗಿ ಬಿದ್ದಿದ್ದಳು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಪತ್ನಿ ಪೋಷಕರಿಗೆ ಪತಿ ಗುರುಪ್ರಸಾದ್​​ ಮಾಹಿತಿ ನೀಡಿದ್ದ ಎನ್ನಲಾಗಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್​ಐಆರ್​ ದಾಖಲಾಗಿದೆ.  2023ರ ನವೆಂಬರ್​ನಲ್ಲಿ ಕೀರ್ತಿ, ಗುರುಪ್ರಸಾದ್​ ಮದುವೆ ಆಗಿತ್ತು. ಸುಮಾರು 30-35 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದರೂ, 2025ರ ಡಿಸೆಂಬರ್​ನಲ್ಲಿ ಮತ್ತೆ 10 ಲಕ್ಷ ಹಣವನ್ನು ಗುರುಪ್ರಸಾದ್ ಕೇಳಿದ್ದ. ಮನೆ ಕಟ್ಟಿಸುವುದಕ್ಕೆ ಹಣ ಕೊಡಿ ಎಂದಿದ್ದರಿಂದ ಕೀರ್ತಿ ಪೋಷಕರು 8 ಲಕ್ಷ ನೀಡಿದ್ದರು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

“ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್”: ಈ ಒಪ್ಪಂದದಿಂದ ಅಗ್ಗವಾಗಲಿದೆ ಈ ವಸ್ತುಗಳ ಬೆಲೆ – Kannada News | India EU FTA: Cheaper Luxury Cars, Exports Boost and Global Stability in Fractured World.

EU ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್

ದೆಹಲಿ, ಜ.26: 77ನೇ ಗಣರಾಜ್ಯೋತ್ಸವದ (2026) ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಯಲ್ಲಿದೆ. ಯಶಸ್ವಿ ಭಾರತವು ಜಗತ್ತನ್ನು ಹೆಚ್ಚು ಸ್ಥಿರ, ಸಮೃದ್ಧ ಮತ್ತು ಸುರಕ್ಷಿತವಾಗಿಸುತ್ತದೆ. ಪ್ರಸ್ತುತ ಜಗತ್ತು ಸಂಘರ್ಷಗಳಿಂದ ಹರಿದುಹಂಚಿಹೋಗಿರುವಾಗ (Fractured World), ಭಾರತ ಮತ್ತು ಯುರೋಪ್‌ ದೇಶಗಳು ‘ಸಂವಾದ ಮತ್ತು ಮುಕ್ತತೆ’ಯ ಮೂಲಕ ಹೊಸ ಹಾದಿಯನ್ನು ತೋರಿಸುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ. 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿರುವುದು “ಜೀವಮಾನದ ಗೌರವ” ಎಂದು ಹೇಳಿದರು. ಮಂಗಳವಾರ ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ನಡುವೆ ಸುಮಾರು 18 ವರ್ಷಗಳಿಂದ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ “ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್” ಎಂಬ ಹೆಸರನ್ನು ಇಡಲಾಗಿದೆ.

ಜಗತ್ತು ಪ್ರಸ್ತುತ ಭೌಗೋಳಿಕ ರಾಜಕೀಯ ಉದ್ವಿಗ್ನತೆ (Geopolitical tensions) ಮತ್ತು ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿರುವಾಗ, ಭಾರತವು ಒಂದು “ಭದ್ರವಾದ ನಕ್ಷತ್ರ”ದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತದ ಆರ್ಥಿಕ ಯಶಸ್ಸು ಕೇವಲ ದೇಶಕ್ಕಷ್ಟೇ ಅಲ್ಲ, ಇಡೀ ಜಗತ್ತಿನ ಪೂರೈಕೆ ಸರಪಳಿಯನ್ನು (Supply Chain) ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಒಪ್ಪಂದದ ಭಾಗವಾಗಿ, ಯುರೋಪ್‌ನಿಂದ ಬರುವ ಐಷಾರಾಮಿ ಕಾರುಗಳು (ಉದಾಹರಣೆಗೆ ಮೆರ್ಸಿಡಿಸ್, ಬಿಎಂಡಬ್ಲ್ಯೂ), ವೈನ್ ಮತ್ತು ಎಲೆಕ್ಟ್ರಾನಿಕ್ಸ್ ಮೇಲಿನ ಆಮದು ಸುಂಕವನ್ನು ಭಾರತವು ಗಣನೀಯವಾಗಿ ಇಳಿಸಲು ಒಪ್ಪಿದೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ, ಭಾರತದ ಜವಳಿ (Textile), ಚರ್ಮದ ವಸ್ತುಗಳು, ಆಭರಣ ಮತ್ತು ಐಟಿ ಸೇವೆಗಳಿಗೆ ಯುರೋಪ್‌ನ 27 ದೇಶಗಳಲ್ಲಿ ತೆರಿಗೆ ರಹಿತ ಅಥವಾ ಕಡಿಮೆ ತೆರಿಗೆಯ ಪ್ರವೇಶ ಸಿಗಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅಮೆರಿಕ ಫಸ್ಟ್’ ನೀತಿ ಮತ್ತು ಭಾರತದ ಮೇಲೆ ವಿಧಿಸಿರುವ ಸುಂಕಗಳ ನಡುವೆ, ಯುರೋಪ್‌ನೊಂದಿಗೆ ಈ ಒಪ್ಪಂದ ಮಾಡಿಕೊಳ್ಳುವುದು ಭಾರತಕ್ಕೆ ಆರ್ಥಿಕವಾಗಿ ದೊಡ್ಡ ಬಲ ನೀಡಲಿದೆ.ಕೇವಲ ವ್ಯಾಪಾರ ಮಾತ್ರವಲ್ಲದೆ, ಯುರೋಪ್‌ನ ಹಸಿರು ಇಂಧನ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸುವ ಬಗ್ಗೆಯೂ ಈ ಒಪ್ಪಂದದಲ್ಲಿ ಪ್ರಮುಖ ಒತ್ತು ನೀಡಲಾಗಿದೆ. ಭಾರತವು ಯುರೋಪಿಯನ್ ಕಾರುಗಳ ಮೇಲಿನ ಆಮದು ಸುಂಕವನ್ನು ಪ್ರಸ್ತುತ ಇರುವ ಶೇ. 110 ರಿಂದ ಶೇ. 40ಕ್ಕೆ ಇಳಿಸಲು ಯೋಜಿಸಿದೆ. ಇದರಿಂದ ಮರ್ಸಿಡಿಸ್-ಬೆನ್ಜ್, BMW, ಆಡಿ, ವೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ 10 ರಿಂದ 50 ಲಕ್ಷ ರೂ. ವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮೋದಿ ಜತೆಗಿನ ಒಂದೇ ಒಂದು ಮಾತು: ಪಾಕ್​​ನ ಮಹತ್ವ ಯೋಜನೆ ಭಾರತಕ್ಕೆ ತಂದ ಯುಎಇ

ಯುರೋಪಿನ ಪ್ರಸಿದ್ಧ ವೈನ್ ಮತ್ತು ಆಲ್ಕೋಹಾಲ್ ಉತ್ಪನ್ನಗಳ ಮೇಲಿನ ಸುಂಕವು ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ಫ್ರಾನ್ಸ್, ಇಟಲಿ ಮತ್ತು ಸ್ಪೇನ್‌ನಿಂದ ಬರುವ ಉತ್ತಮ ಗುಣಮಟ್ಟದ ವೈನ್‌ಗಳು ಮತ್ತು ಸ್ಕಾಚ್‌ಗಳ ಬೆಲೆ ಇಳಿಯಲಿದೆ.ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಸುಧಾರಿತ ತಂತ್ರಜ್ಞಾನದ ಉಪಕರಣಗಳು ಅಗ್ಗವಾಗಲಿವೆ. ಬೆಲ್ಜಿಯಂ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳಿಂದ ಬರುವ ಪ್ರೀಮಿಯಂ ಚಾಕೊಲೇಟ್‌ಗಳು, ಚೀಸ್ ಮತ್ತು ಇತರ ಸಂಸ್ಕರಿಸಿದ ಆಹಾರ ಪದಾರ್ಥಗಳ ಬೆಲೆಯೂ ತಗ್ಗಲಿದೆ. ಈ ಒಪ್ಪಂದದಿಂದ ಕೇವಲ ವಿದೇಶಿ ವಸ್ತುಗಳು ಅಗ್ಗವಾಗುವುದು ಮಾತ್ರವಲ್ಲ, ಭಾರತದ ಜವಳಿ (Textile) ಮತ್ತು ಆಭರಣಗಳು ಯುರೋಪ್‌ಗೆ ಸುಲಭವಾಗಿ ರಫ್ತಾಗುವುದರಿಂದ ಭಾರತದಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Mon, 26 January 26

Source link

ದುಬಾರಿ ಸಂಭಾವನೆ, ‘ಕೈದಿ 2’ಗೆ ಫುಲ್ ಸ್ಟಾಪ್? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ನಿರ್ದೇಶಕ – Kannada News | Lokesh Kanagaraj Clears Kaithi 2 Rumors, Confirms LCU Future and Allu Arjun Film Plans

ನಿರ್ದೇಶಕ ಲೋಕೇಶ್ ಕನಗರಾಜ್ ಅವರು ದಕ್ಷಿಣದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಬಂದ ಅವರ ನಿರ್ದೇಶನದ ‘ಕೂಲಿ’ ಸೋಲು ಕಂಡಿತು. ಈಗ ಲೋಕೇಶ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಬಗ್ಗೆ ಕೇಳಿ ಬಂದ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಲೋಕೇಶ್ ಕನಗರಾಜ್ ಅವರು ‘ಕೈದಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ರಿಲೀಸ್ ಆಗಿದ್ದು 2019ರಲ್ಲಿ. ಈ ಚಿತ್ರಕ್ಕೆ ಸೀಕ್ವೆಲ್ ತರೋದಾಗಿ ಘೋಷಣೆ ಮಾಡಿದ್ದರು. ಆದರೆ, ಸೀಕ್ವೆಲ್ ಬಗ್ಗೆ ಅವರ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಅವರು 75 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿರುವುದೇ ಸಿನಿಮಾ ನಿಲ್ಲಲು ಕಾರಣ ಎಂದೆಲ್ಲ ವದಂತಿಗಳು ಹಬ್ಬಿದ್ದವು. ಇದಕ್ಕೆ ಅವರು ಖಡಕ್ ಉತ್ತರ ನೀಡಿದ್ದಾರೆ. ಟೀಕಿಸಿದವರಿಗೆ ಅವರು ತಿರುಗೇಟು ಕೊಟ್ಟಿದ್ದಾರೆ.

‘ನಾನು ದೊಡ್ಡ ಸಂಭಾವನೆ ಕೇಳಿದ್ದಕ್ಕೆ ಕೈದಿ ಸೀಕ್ವೆಲ್ ನಿಂತಿದೆ ಎಂದೆಲ್ಲ ವದಂತಿ ಹಬ್ಬಿಸಲಾಗುತ್ತಿದೆ. ಲೋಕೇಶ್ ಕನಗರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ನಿಂತಿದೆ ಎಂದು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಸ್ಪಷ್ಟನೆ ನೀಡಲು ಬಯಸುತ್ತೇನೆ’ ಎಂದಿದ್ದಾರೆ ಲೋಕೇಶ್.

‘ಅಲ್ಲು ಅರ್ಜುನ್ ಸಿನಿಮಾ ಬಳಿಕ ನಾನು ಕೈದಿ 2 ಮಾಡುತ್ತೇನೆ. ಆ ಬಳಿಕ ವಿಕ್ರಮ್ 2 ಮಾಡುತ್ತೇನೆ. ನಂತರ ರೊಲೆಕ್ಸ್ ಬರಲಿದೆ. ಇದು ನನ್ನ ಕಮಿಟ್​​ಮೆಂಟ್. ಇದನ್ನು ಮಾಡದೇ ಚಿತ್ರರಂಗ ತೊರೆಯಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಿರ್ದೇಶಕನ ಅತಿಆಸೆಗೆ ನಿಂತೋಯ್ತು ‘ಕೈದಿ 2’? ಬೇಸರದ ಉತ್ತರ ಕೊಟ್ಟ ಕಾರ್ತಿ

2027ರ ವೇಳೆಗೆ ‘ಕೈದಿ 2’ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ. ಈ ಚಿತ್ರಕ್ಕೆ ಕಾರ್ತಿ ಹೀರೋ. ಅವರಿಗೆ ಇತ್ತೀಚೆಗೆ ‘ಕೈದಿ 2’ ಬಗ್ಗೆ ಕೇಳಲಾಯಿತು. ಈ ವೇಳೆ ‘ನಿರ್ದೇಶಕರನ್ನು ಕೇಳಿ’ ಎಂದಿದ್ದರು. ಅವರಿಗೆ ನಿರ್ದೇಶಕರ ಬಗ್ಗೆ ಅಸಮಾಧಾನ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಈಗ ಲೋಕೇಶ್ ಅವರ ಸ್ಪಷ್ಟನೆಯಿಂದ ಒಂದಷ್ಟು ಮಂದಿಗೆ ಖುಷಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಪೇಂದ್ರ, ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಜನವರಿ 30ಕ್ಕೆ ರಿಲೀಸ್ – Kannada News | Upendra Ramya starrer Raktha Kashmira releasing on 30 January

ಒಂದಷ್ಟು ವರ್ಷಗಳ ಹಿಂದೆಯೇ ‘ರಕ್ತ ಕಾಶ್ಮೀರ’ ಸಿನಿಮಾದ ಶೂಟಿಂಗ್ ನಡೆದಿತ್ತು. ಉಪೇಂದ್ರ (Upendra) ಹಾಗೂ ರಮ್ಯಾ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದು ತಡವಾಗಿತ್ತು. ಜನವರಿ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು (SV Rajendra Singh Babu) ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಎಂಡಿಎಂ ಪ್ರೊಡಕ್ಷನ್ಸ್’ ಮೂಲಕ ‘ರಕ್ತ ಕಾಶ್ಮೀರ’ (Raktha Kashmira) ಸಿನಿಮಾ ನಿರ್ಮಾಣ ಆಗಿದೆ. ಮುಖೇಶ್ ರಿಶಿ, ದೊಡ್ಡಣ್ಣ, ಓಂ ಪ್ರಕಾಶ್ ರಾವ್, ತೆಲುಗು ನಟಿ ಅನಿಲ, ಕುರಿ ಪ್ರತಾಪ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಮಾರ್ಸ್ ಸುರೇಶ್ ಅವರು ‘ರಕ್ತ ಕಾಶ್ಮೀರ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಗಣರಾಜ್ಯೋತ್ಸವದ ವಾರದಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ‌‌‌.

ಪಾಕ್ ಉಗ್ರಗಾಮಿಗಳು ಕಾಶ್ಮೀರದಲ್ಲಷ್ಟೇ ಅಲ್ಲದೇ, ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲೂ ದಾಳಿ ನಡೆಸಿ ಸಾವಿರಾರು ಜನರನ್ನು ಹತ್ಯೆ ಮಾಡಿರುತ್ತಾರೆ. ಇದರಿಂದ ನೊಂದ ಚಿತ್ರದ ನಾಯಕ ಮತ್ತು ನಾಯಕಿ ಬೆಂಗಳೂರಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಉಗ್ರರನ್ನು ಮಟ್ಟಹಾಕುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ.

‘ರಕ್ತ ಕಾಶ್ಮೀರ’ ಚಿತ್ರಕ್ಕೆ ಕಾಶ್ಮೀರದಲ್ಲೇ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಸಾಕಷ್ಟು ಮಕ್ಕಳು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೇಶಪ್ರೇಮ ಸಾರುವ ಈ ಚಿತ್ರವು ಕುಟುಂಬ ಸಮೇತ ನೋಡುವಂತಿದೆ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ಹದಿನೆಂಟು ನಿಮಿಷಗಳ ಒಂದು ಹಾಡು ಇದರಲ್ಲಿದೆ!

ಇದನ್ನೂ ಓದಿ:  35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ

18 ನಿಮಿಷಗಳ ವಿಶೇಷ ಹಾಡಿನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್​ಕುಮಾರ್, ಶ್ರೀನಾಥ್, ದರ್ಶನ್, ಪುನೀತ್ ರಾಜ್​ಕುಮಾರ್, ಜಗ್ಗೇಶ್, ರಮೇಶ್ ಅರವಿಂದ್, ಉಪೇಂದ್ರ, ಜೈ ಜಗದೀಶ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದು ಈವರೆಗೂ ಯಾರೂ ಮಾಡಿರದ ದಾಖಲೆ‌ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಗುರುಕಿರಣ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ – Kannada News | Leopard Enters At A House At Naduru Village In Udupi, Panic Grips Residents

ಉಡುಪಿ,ಜನವರಿ 26: ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದಲ್ಲಿ ಚಿರತೆ ಓಡಾಟ ಜನರಲ್ಲಿ ಆತಂಕ ಹುಟ್ಟಿಸಿದೆ. ನಡೂರು ಹೈಸ್ಕೂಲ್ ಸಮೀಪದ ಪುಟ್ಟಯ್ಯ ಶೆಟ್ಟಿಯವರ ಮನೆಯ ಆವರಣದಲ್ಲಿ ಚಿರತೆ ಸಂಚರಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಮನೆ ಆವರಣದಲ್ಲಿ ಚಿರತೆ ಓಡಾಟ ಕಂಡುಬಂದಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ನಡೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಸಂಚಾರ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಹೊರಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚಿರತೆಗಳನ್ನು ಶೀಘ್ರವಾಗಿ ಸೆರೆಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಗ್ಯಾಸ್‌ನಲ್ಲಿಟ್ಟ ಹಾಲು ಉಕ್ಕಿ ಚೆಲ್ಲಬಾರದಂದರೆ ಈ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು – Kannada News | Follow this tip to prevent milk from spilling on the stove

ಗ್ಯಾಸ್‌ನಲ್ಲಿ ಹಾಲಿಟ್ಟು ಎಷ್ಟೇ ಹೊತ್ತು ನಿಂತಿದ್ದರೂ ಹಾಲು (milk) ಕುದಿಯೋದೇ ಇಲ್ಲ. ಅದೇ ಒಂದು ಕ್ಷಣಕ್ಕೆ ಅತ್ತಿಂದ ಇತ್ತ ಹೋಗಿ ಬಂದರೆ ಸಾಕು ಹಾಲು ಉಕ್ಕಿ ಚೆಲ್ಲಿರುತ್ತದೆ. ಈ ಒಂದು ಸಣ್ಣ ತಪ್ಪಿನಿಂದಾಗಿ ಹಾಲು ವ್ಯರ್ಥವಾಗುವುದಲ್ಲದೆ ಗ್ಯಾಸ್‌ ಸ್ಟೌವ್‌ ಕೊಳಕಾಗುತ್ತದೆ, ಇನ್ನೂ ಉಕ್ಕಿ ಬಂದ ಹಾಲನ್ನು ಹಾಗೆಯೇ ಬಿಟ್ಟರೆ, ಒಣಗಿ ಹೋಗುತ್ತದೆ, ನಂತರ ಇದನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ಆದ್ದರಿಂದ ಹಲವು ಮಂದಿ ಹಾಲು ಬಿಸಿ ಮಾಡುವಾಗ ಸ್ಟೌವ್‌ ಬಿಟ್ಟು ಕದಲುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸರಳ ತಂತ್ರಗಳನ್ನು ಅಳವಡಿಸಿಕೊಂಡರೆ ಹಾಲು ಕುದಿಯಲು ಬಿಟ್ಟು ಸ್ವಲ್ಪ ಹೊತ್ತು ಅತ್ತ ಕಡೆ ಹೋಗಿ ಬಂದರೂ ಹಾಲು ಉಕ್ಕಿ ಚೆಲ್ಲುವುದಿಲ್ಲ. ಆ ಸರಳ ಸಲಹೆಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ಯಾಸ್‌ನಲ್ಲಿಟ್ಟ ಹಾಲು ಉಕ್ಕಿ ಚೆಲ್ಲದಿರಲು ಈ ಸಲಹೆಯನ್ನು ಪಾಲಿಸಿ:

  • ಹಾಲು ಕುದಿಯಲು ಪ್ರಾರಂಭಿಸಿದ ನಂತರ, ಹಾಲಿನ ಪಾತ್ರೆಯ ಮೇಲೆ ಅಡ್ಡಲಾಗಿ ಒಂದು ಚಮಚವನ್ನು ಇರಿಸಿ. ಹಾಲು ಕುದಿಯಲು ಪ್ರಾರಂಭಿಸಿ ನೊರೆ ಏರಿದಾಗ, ಅದು ಚಮಚದ ಸ್ಪರ್ಶಿಸುತ್ತದೆ. ಇದರಿಂದ ಹಾಲು ಉಕ್ಕಿ ಹೋಗುವುದನ್ನು ತಡೆಯಬಹುದು. ಇದು ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ.
  • ಗ್ಯಾಸ್‌ನಲ್ಲಿಟ್ಟ ಹಾಲು ಚೆಲ್ಲುವುದನ್ನು ತಡೆಯಲು ಹಾಲು ಕುದಿಸುವ ಮೊದಲು, ಪಾತ್ರೆಯ ಮೇಲಿನ ಭಾಗದ ಒಳ ಅಂಚುಗಳಿಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ. ಹೀಗೆ ಮಾಡಿದಾಗ ಹಾಲಿನ ನೊರೆ ಆ ಪ್ರದೇಶವನ್ನು ಮೀರಿ ಉಕ್ಕಿ ಹೋಗುವುದಿಲ್ಲ.
  • ಹೆಚ್ಚಿನ ಶಾಖವು ಹಾಲು ವೇಗವಾಗಿ ಕುದಿಯಲು ಕಾರಣವಾಗುತ್ತದೆ, ಇದು ನೊರೆ ರಚನೆಯನ್ನು ವೇಗಗೊಳಿಸುತ್ತದೆ. ಇದನ್ನು ತಡೆಗಟ್ಟಲು, ಯಾವಾಗಲೂ ಹಾಲು ಕಡಿಮೆ ಶಾಖದ ಮೇಲೆ ಕುದಿಸಿ. ಮಧ್ಯಮ ಅಥವಾ ಕಡಿಮೆ ಉರಿಯಲ್ಲಿ ಕುದಿಸುವುದರಿಂದ ಹಾಲು ನಿಧಾನವಾಗಿ ಬಿಸಿಯಾಗುತ್ತದೆ ಮತ್ತು ನೊರೆ ರಚನೆಯನ್ನು ನಿಯಂತ್ರಿಸುತ್ತದೆ.
  • ಹಾಲು ಕುದಿಸುವಾಗ, ಪಾತ್ರೆಗೆ ಸ್ವಲ್ಪ ನೀರು ಸೇರಿಸಿ. ಹಾಲು ಸುರಿಯುವ ಮೊದಲು ಒಂದು ಅಥವಾ ಎರಡು ಚಮಚ ನೀರನ್ನು ಮಾತ್ರ ಸೇರಿಸಿ. ಇದರಿಂದ ಹಾಲು ಪಾತ್ರೆಯೊಂದಿಗೆ ನೇರ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ಇದು ಹಾಲು ಉಕ್ಕಿ ಹೋಗುವುದನ್ನು ತಡೆಯುತ್ತದೆ
  • ಇದಲ್ಲದೆ ಹಾಲು ಕುದಿಯಲು ಪ್ರಾರಂಭಿಸಿದರೆ, ತಕ್ಷಣ ಹಾಲಿನ ಮೇಲೆ ಸ್ವಲ್ಪ ನೀರು ಸಿಂಪಡಿಸಿ. ಇದು ಹಾಲಿನ ನೊರೆಯನ್ನು ಸ್ಥಿರಗೊಳಿಸುತ್ತದೆ ಮತ್ತು ಅದು ಕುದಿಯುವುದನ್ನು ಮತ್ತು ಪಾತ್ರೆಯಿಂದ ಹೊರಗೆ ಚೆಲ್ಲಿ ಹೋಗುವುದನ್ನು ತಡೆಯುತ್ತದೆ.
  • ನೀವು ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುದಿಸಬೇಕಾದರೆ, ಯಾವಾಗಲೂ ದೊಡ್ಡ ಪಾತ್ರೆಯನ್ನು ಬಳಸಿ. ಸಣ್ಣ ಪಾತ್ರೆಗಳು ಬೇಗನೆ ನೊರೆಯಿಂದ ಮುಚ್ಚಿಹೋಗಬಹುದು, ಇದರಿಂದಾಗಿ ಹಾಲು ಚೆಲ್ಲುತ್ತದೆ. ದೊಡ್ಡ ಪಾತ್ರೆಯು ಹೆಚ್ಚಿನ ಸ್ಥಳವನ್ನು ಹೊಂದಿದ್ದು, ಇದು ಹಾಲು ಕುದಿಯುವ ಸಮಯದಲ್ಲಿ ನೊರೆ ಹೆಚ್ಚು ಸುಲಭವಾಗಿ ಹರಡಲು ಅನುವು ಮಾಡಿಕೊಡುತ್ತದೆ ಮತ್ತು ಹಾಲು ಚೆಲ್ಲಿ ಹೋಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಅನೇಕ ಜನರು ಹಾಲು ಕುದಿಸುವಾಗ ಪಾತ್ರೆಯನ್ನು ಮುಚ್ಚುತ್ತಾರೆ, ಇದು ಒಳಗೆ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ತ್ವರಿತವಾಗಿ ನೊರೆ ರೂಪುಗೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಹಾಲು ಚೆಲ್ಲಿ ಹೋಗಲು ಚೆಲ್ಲಲು ಕಾರಣವಾಗಬಹುದು. ಆದ್ದರಿಂದ, ಹಾಲು ಕುದಿಸುವಾಗ ಪಾತ್ರೆಯನ್ನು ಮುಚ್ಚಬೇಡಿ, ಬದಲಿಗೆ ಅಡ್ಡಲಾಗಿ ಚಮಚವನ್ನು ಇರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link