ಅಜ್ಮೀರ್ ಹತ್ಯಾಕಾಂಡದಲ್ಲಿ ಟ್ವಿಸ್ಟ್: ವೆಬ್ ಸೀರೀಸ್ ನೋಡಿ ನಾಲ್ವರನ್ನು ಕೊಂದ 17ರ ಬಾಲಕ, ಸಿಕ್ಕಿಬಿದ್ದಿದ್ದು ಹೀಗೆ
ಅಜ್ಮೀರ್, ಮೇ 30: ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಮಾಜಿ ಸರಪಂಚ್ ರಾಮ್ ಸಿಂಗ್ ಚೌಧರಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಸಜೀವದಹನ ಪ್ರಕರಣಕ್ಕೆ ಇದೀಗ ದೊಡ್ಡ ತಿರುವುದು ಸಿಕ್ಕಿದೆ. ಆರಂಭದಲ್ಲಿ ಇದೊಂದು ಕಾರು ಅಪಘಾತ(Accident) ಎನ್ನಲಾಗಿತ್ತು. ಆದರೆ, ಪೊಲೀಸರ ಹದ್ದಿನ ಕಣ್ಣಿನ ತನಿಖೆಯಿಂದಾಗಿ ಇದು ಅಪರಾಧ ಜಗತ್ತಿನ ವೆಬ್ ಸೀರೀಸ್ ನೋಡಿ, ಆಸ್ತಿಗಾಗಿ 17 ವರ್ಷದ ಮಗನೇ ರೂಪಿಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಚಹಾ ಕುಡಿಯುವಾಗ ಸಿಕ್ಕಿಬಿದ್ದ ಹಂತಕ ಘಟನೆಯ ನಂತರ ಇಡೀ…