ಧಾರಾಕಾರ ಮಳೆ: ಅಂಡರ್ಪಾಸ್ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಬೆಂಗಳೂರು, ಮೇ 29: ಕೇವಲ ಅರ್ಧ ಗಂಟೆ ಸುರಿದ ಮಳೆಗೆ ನಗರದ ಹಲವೆಡೆ ರಸ್ತೆಗಳು ಕೆರೆಯಂತಾಗಿವೆ. ಶಿವಾನಂದ ವೃತ್ತದ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ನಿಂತಿವೆ. ಈ ವೇಳೆ ಕಾರು ಒಂದು ಅಂಡರ್ಪಾಸ್ನಲ್ಲಿ ಸಿಲುಕಿಕೊಂಡಿದೆ. ಕಾರು ತೆಗೆಯಲು ಚಾಲಕ ಪರದಾಡಿದ್ದಾರೆ. ಇನ್ನು ಯುಬಿ ಸಿಟಿ ಮುಂದಿನ ರಸ್ತೆಯಲ್ಲಿ 2 ಅಡಿಯಷ್ಟು ನೀರು ನಿಂತಿದೆ. ನೀರು ನುಗಿದ್ದ ಪರಿಣಾಮ ಬೈಕ್ ಕೈಕೊಟ್ಟಿದ್ದು, ಫುಡ್ ಡೆಲಿವರಿ ಬಾಯ್ ಪರದಾಡಿದ್ದಾರೆ. ಇನ್ನು ರಿಚ್ಮಂಡ್ ವೃತ್ತ, ಶಾಂತಿನಗರದಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಕೆ.ಆರ್.ಪುರಂನಲ್ಲಿ ಆಲಿಕಲ್ಲು ಸಹಿತ…