Category Archives: Blog

Your blog category

IND vs NZ: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ – Kannada News | IND vs NZ 3rd T20: India Aims to Seal Series in Guwahati; Playing XI and Match Preview

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ಇದುವರೆಗೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಸರಣಿಯ ಮೂರನೇ ಪಂದ್ಯ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವುದರೊಂದಿಗೆ ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ. ಇತ್ತ ಸರಣಿಯಲ್ಲಿ ಉಳಿಯಲು ನ್ಯೂಜಿಲೆಂಡ್ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ಟಾಸ್ ಗೆದ್ದ ಟೀಂ ಇಂಡಿಯಾ

ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸೂರ್ಯ ಹೇಳಿದ್ದಾರೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದ್ದು, ಭಾರತ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ.ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಈ ಪಂದ್ಯದಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ರವಿ ಬಿಷ್ಣೋಯಿ ಆಡಲಿದ್ದಾರೆ.

ಗುವಾಹಟಿಯಲ್ಲಿ ಟೀಂ ಇಂಡಿಯಾ ದಾಖಲೆ

ಭಾರತವು ಇಲ್ಲಿಯವರೆಗೆ ಗುವಾಹಟಿಯಲ್ಲಿ ನಾಲ್ಕು ಟಿ20ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದು, ಎರಡರಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಭಾರತ ಕೊನೆಯದಾಗಿ 2023 ರಲ್ಲಿ ಗುವಾಹಟಿಯಲ್ಲಿ ಟಿ20ಪಂದ್ಯವನ್ನು ಆಡಿತ್ತು, ಆ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. 222 ರನ್ ಬಾರಿಸಿದ್ದರೂ, ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

ಉಭಯ ತಂಡಗಳು

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಮತ್ತು ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಇಶ್ ಸೋಧಿ ಮತ್ತು ಜಾಕೋಬ್ ಡಫ್ಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಬಿಎಫ್​​ಸಿ ಸಮಸ್ಯೆ, ಸಿಬಿಐ ವಿಚಾರಣೆ: ಅಭಿಮಾನಿಗಳಿಗೆ ವಿಜಯ್ ಹೇಳಿದ್ದೇನು? – Kannada News | Thalapahy Vijay indirectly talks about political pressure on him

ರಾಜಕೀಯಕ್ಕೆ ಧುಮುಕಿದ ಮೇಲೆ ದಳಪತಿ ವಿಜಯ್ (Thalapathy Vijay) ಅವರಿಗೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ರಾಜಕೀಯದಲ್ಲಿ ಅವೆಲ್ಲ ಸಹಜವೂ ಹೌದು. ಮೊದಲಿಗೆ ಕರೂರು ಕಾಲ್ತುಳಿತ, ಈಗ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ಹಿಂದೇಟು, ಇದರ ಜೊತೆಗೆ ಸಿಬಿಐ ವಿಚಾರಣೆಗಳು ಒಂದರ ಹಿಂದೊಂದು ವಿಜಯ್ ಅವರನ್ನು ಕಾಡುತ್ತಿವೆ. ಇತ್ತೀಚೆಗಷ್ಟೆ ವಿಜಯ್ ಅವರಿಗೆ ಕೇಂದ್ರ ಚುನಾವಣಾ ಆಯೋಗವು ‘ವಿಶಲ್’ ಅನ್ನು ಚುನಾವಣೆ ಚಿಹ್ನೆಯಾಗಿ ನೀಡಿದೆ. ಚುನಾವಣಾ ಚಿಹ್ನೆಯ ಪ್ರಚಾರಕ್ಕಾಗಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದ ವಿಜಯ್, ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಲ್ಲದೆ, ಅಭಿಮಾನಿಗಳಿಗೆ ಭರವಸೆಯನ್ನು ಸಹ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ‘ಕಳೆದ 30 ವರ್ಷಗಳಲ್ಲಿ ಈ ರಾಜಕೀಯ ಪಕ್ಷಗಳು ಜನರನ್ನು ನಿರ್ಲಕ್ಷ್ಯ ಮಾಡಿವೆ. ನನ್ನ ವೃತ್ತಿ ಜೀವನದ ಪೀಕ್​​ನಲ್ಲಿದ್ದಾಗಲೇ ಜನಗೆ ಈ ಸ್ಥಾನ ನೀಡಿದ್ದಾರೆ. ಅದನ್ನು ನಾನು ಸದುಪಯೋಗ ಪಡಿಸಿಕೊಳ್ಳುತ್ತೇನೆ’ ಎಂದ ವಿಜಯ್, ತಮ್ಮ ಮೇಲೆ ಬೀಳುತ್ತಿರುವ ರಾಜಕೀಯ ಒತ್ತಡಗಳ ಬಗ್ಗೆ ಮಾತನಾಡಿ, ‘ನಾನು ಯಾರಿಗೂ ಬಗ್ಗುವುದಿಲ್ಲ, ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ತಮ್ಮ ಅಭಿಮಾನಿಗಳನ್ನುದ್ದೇಶಿಸಿ, ‘ನನ್ನ ಮುಖ ನೋಡಿ, ಈ ಮುಖ ದಣಿದಂತೆ, ಒತ್ತಡದಲ್ಲಿ ಇರುವಂತೆ ನಿಮಗೆ ಕಾಣುತ್ತದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಕಾಲ್ತುಳಿತ ದುರಂತದ ಬಳಿಕವೂ ಮತ್ತೆ ದಾಖಲೆ ಪ್ರಮಾಣದಲ್ಲಿ ಜನ ಸೇರಿಸಲು ಸಜ್ಜಾದ ದಳಪತಿ ವಿಜಯ್

ಆ ಮೂಲಕ ತಾವು ಯಾವುದೇ ಒತ್ತಡಗಳಿಗೂ ಬಗ್ಗುವುದಿಲ್ಲ ಮತ್ತು ಈಗ ಬರುತ್ತಿರುವ ಸತತ ರಾಜಕೀಯ ಒತ್ತಡಗಳಿಂದ ತಾವು ಅಧೀರರಾಗಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಾಜಕೀಯ ಒತ್ತಡಗಳಿಂದಾಗಿ ವಿಜಯ್​​ ಅಧೀರರಾಗಿದ್ದಾರೆ, ಅವರು ರಾಜಕೀಯದಿಂದ ಹೆಜ್ಜೆ ಹಿಂದಿಡುವ ಅಥವಾ ಬೇರೊಂದು ಪಕ್ಷದೊಂದಿಗೆ ಸಂಧಾನ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಅದೇ ಕಾರಣಕ್ಕೆ ವಿಜಯ್ ಅವರು ಮೇಲ್ಕಂಡಂತೆ ಮಾತುಗಳನ್ನಾಡಿದ್ದಾರೆ.

‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿದೆ. ನಿರ್ಮಾಪಕರು ನ್ಯಾಯಾಲಯದಲ್ಲಿ ಹೋರಾಟದಲ್ಲಿ ಜಾರಿಯಲ್ಲಿಟ್ಟಿದ್ದಾರೆ. ಆದರೆ ನ್ಯಾಯಾಲಯದಲ್ಲಿಯೂ ಸಹ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಜನವರಿ 27ರಂದು ಸಿನಿಮಾದ ಸಿಬಿಎಫ್​​ಸಿ ಪ್ರಮಾಣ ಪತ್ರದ ಬಗೆಗಿನ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ. ಅಂದು ‘ಜನ ನಾಯಗನ್’ ಭವಿಷ್ಯ ಏನಾಗಲಿದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Republic Day 2026: ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮಗಳೇನು? – Kannada News | Republic Day 2026: What are the rules to be followed while hoisting the flag on Republic Day?

ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಹೇಗೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆಯೋ ಅದೇ ರೀತಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು (Republic Day) ಸಹ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ 77 ನೇ ಗಣರಾಜ್ಯೋತ್ಸವದ ಆಚರಣೆಗೂ ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಈ ದಿನದಂದು, ಶಾಲಾ ಕಾಲೇಜುಗಳಲ್ಲಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.  ಆದ್ದರಿಂದ, ತ್ರಿವರ್ಣ ಧ್ವಜಕ್ಕೆ ಅವಮಾನವಾಗದಂತೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಬೇಕಾಗುತ್ತದೆ. ಮತ್ತು ಮುಖ್ಯವಾಗಿ ದೇಶದ ಪ್ರತಿಯೊಬ್ಬರೂ ಸಹ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಮತ್ತು ಇಳಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಯಲೇಬೇಕು.

ತ್ರಿವರ್ಣ ಧ್ವಜವನ್ನು ಹಾರಿಸುವಾಗ, ಇಳಿಸುವಾಗ ಪಾಲಿಸಬೇಕಾದ ನಿಯಮಗಳೇನು?

  • ಧ್ವಜವನ್ನು ಯಾವಾಗಲೂ ಗೌರವಯುತವಾಗಿ ಹಾರಿಸಬೇಕು ಮತ್ತು ಘನತೆಯಿಂದ ನಿಧಾನವಾಗಿ ಕೆಳಗಿಳಿಸಬೇಕು. ಕೆಳಗಿಳಿಸಿದ ನಂತರ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿಡಬೇಕು.
  •  ತ್ರಿವರ್ಣ ಧ್ವಜವನ್ನು ಎಂದಿಗೂ ತಲೆ ಕೆಳಗಾಗಿ ಪ್ರದರ್ಶಿಸಬಾರದು. ಮೇಲಿನ ಫಲಕದ ಬಣ್ಣವು ಕೇಸರಿ, ಮಧ್ಯ ಬಿಳಿ ಮತ್ತು ಕೆಳಗಿನ ಫಲಕವು ಹಸಿರು ಬಣ್ಣದ್ದಾಗಿರಬೇಕು.
  • ಪ್ರದರ್ಶನದಲ್ಲಿರುವ ತ್ರಿವರ್ಣ ಧ್ವಜವು ಗೌರವದ ಸ್ಥಾನದಲ್ಲಿರುವಂತೆ ನೋಡಿಕೊಳ್ಳಿ.
  • ಹಾನಿಗೊಳಗಾದ ಅಥವಾ ಸ್ವಚ್ಛವಾಗಿರದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು. ನೀವು ಹಾರಿಸುವ ರಾಷ್ಟ್ರ ಧ್ವಜ ಪರಿಪೂರ್ಣ ಸ್ಥಿತಿಯಲ್ಲಿ ಇರಬೇಕು.
  • ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೇಯ್ದ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇಷ್ಮೆ ಖಾದಿ ಬಂಟಿಂಗ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಹಾರಿಸಬಹುದು.
  • ಧ್ವಜದ ಗಾತ್ರ ಏನೇ ಇರಲಿ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು. ಮತ್ತು ಧ್ವಜದ ಮಧ್ಯ ಭಾಗವು 24 ಸಮಾನ ಅಂತರದ ಗೆರೆಗಳೊಂದಿಗೆ ಕಡು ನೀಲಿ ಬಣ್ಣದಲ್ಲಿನ ಅಶೋಕ ಚಕ್ರವನ್ನು ಹೊಂದಿರಬೇಕು.
  • ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಿರಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರನ್ನು ಮುಟ್ಟದಂತೆ ನೋಡಿಕೊಳ್ಳಿ.
  • ಒಂದು ವೇಳೆ ತ್ರಿವರ್ಣ ಧ್ವಜ ಹಾನಿಗೊಳಗಾದರೆ ಅದನ್ನು ಕಸದ ಬುಟ್ಟಿ ಅಥವಾ ಇನ್ನಾವುದೇ ಸ್ಥಳದಲ್ಲಿ ಎಸೆಯಬಾರದು ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಆ ಬೂದಿಯನ್ನು ನದಿ ನೀರಿನಲ್ಲಿ ಬಿಡಬೇಕು.
  • ಧ್ವಜವನ್ನು ಸಾರ್ವಜನಿಕವಾಗಿ ಉದ್ದೇಶಪೂರ್ವಕವಾಗಿ ಹರಿದು ಹಾಕಬಾರದು, ಸುಡಬಾರದು ಅಥವಾ ವಿರೂಪಗೊಳಿಸಬಾರದು, ಏಕೆಂದರೆ ಇದು ಅಪರಾಧವಾಗಿದೆ.

ಇದನ್ನೂ ಓದಿ: ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುವುದು? ಕುರಿತ ಇಂಟರೆಸ್ಟಿಂಗ್‌ ಸಂಗತಿ ಇಲ್ಲಿದೆ

ಗಣರಾಜ್ಯೋತ್ಸವದ ದಿನ ಜವಾಬ್ದಾರಿಯುತ ಪ್ರಜೆಯಾಗಿ ನೀವು ಏನು ಮಾಡಬೇಕು?

  • ತ್ರಿವರ್ಣ ಧ್ವಜಕ್ಕೆ ಅಗೌರವ ತೋರಬೇಡಿ.
  • ದೇಶಭಕ್ತಿಯನ್ನು ಅಣಕಿಸಬೇಡಿ. ನಕಲಿ ಸುದ್ದಿ, ಪ್ರಚೋದನಕಾರಿ ಪೋಸ್ಟ್‌ಗಳು ಅಥವಾ ರಾಜಕೀಯ ವಿಡಂಬನೆಯನ್ನು ತಪ್ಪಿಸಿ.
  • ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ. ಏಕೆಂದರೆ ರ್ಯಾಲಿ ಅಥವಾ ಆಚರಣೆಯ ಹೆಸರಿನಲ್ಲಿ ಧ್ವಂಸ ಮಾಡುವುದು ದೇಶಭಕ್ತಿಯಲ್ಲ.
  • ಇದು ಕೇವಲ ರಜಾದಿನ ಎಂದು ಭಾವಿಸಿ ದಿನವನ್ನು ವ್ಯರ್ಥ ಮಾಡಬೇಡಿ. ಇದು ರಾಷ್ಟ್ರೀಯ ಪ್ರಜ್ಞೆಯ ದಿನ. ಆದ್ದರಿಂದ ಮಕ್ಕಳಿಗೆ ದೇಶಭಕ್ತಿಯ ವಿಚಾರಗಳ ಬಗ್ಗೆ ತಿಳಿಸಿಕೊಡಿ.
  • ಮದ್ಯಪಾನ ಅಥವಾ ಅವ್ಯವಸ್ಥೆಯ ನಡವಳಿಕೆಯನ್ನು ತಪ್ಪಿಸಿ. ಏಕೆಂದರೆ ಈ ದಿನವು ಸಂಯಮ, ಘನತೆ ಮತ್ತು ಶಿಸ್ತನ್ನು ಸಂಕೇತಿಸುತ್ತದೆ.
  • ಸಾಮಾಜಿಕ ಮಾಧ್ಯಮದಲ್ಲಿ ದೇಶಭಕ್ತಿಯ ವಿಷಯವನ್ನು ಚಿಂತನಶೀಲವಾಗಿ ಹಂಚಿಕೊಳ್ಳಿ. ಸ್ಪೂರ್ತಿದಾಯಕ ಆಲೋಚನೆಗಳು, ಸಾಂವಿಧಾನಿಕ ಸಂಗತಿಗಳು ಅಥವಾ ಐತಿಹಾಸಿಕ ಮಾಹಿತಿಯನ್ನು ಹಂಚಿಕೊಳ್ಳಿ.
  • ಕನಿಷ್ಠ ಪಕ್ಷ ಭಾರತೀಯ ಸಂವಿಧಾನದ ಪೀಠಿಕೆಯನ್ನು ಓದಿ. ಮಕ್ಕಳು ಮತ್ತು ಯುವಕರಿಗೆ ಅದರ ಅರ್ಥ ಮತ್ತು ಮಹತ್ವವನ್ನು ಸರಳ ಭಾಷೆಯಲ್ಲಿ ವಿವರಿಸಿ, ಇದರಿಂದ ಅವರಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು ತಿಳಿಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದ್ಮ ಪ್ರಶಸ್ತಿ ಪ್ರಕಟ: ರಾಜ್ಯದ ಶತಾವಧಾನಿ ಆರ್​​. ಗಣೇಶ್​​ಗೆ​​ ಪದ್ಮ ಭೂಷಣ, 7 ಮಂದಿಗೆ ಪದ್ಮಶ್ರೀ ಅವಾರ್ಡ್​​ – Kannada News | Padma Awards 2026: Shatavadhani R Ganesh Gets Padma Bhushan, Seven from Karnataka Honoured with Padma Shri

ನವದೆಹಲಿ, ಜನವರಿ 25: ಪ್ರತಿ ವರ್ಷ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ, ಇಂಜಿನಿಯರಿಂಗ್, ವ್ಯಾಪಾರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರದಿಂದ ನೀಡಲ್ಪಡುವ ಪದ್ಮ ಪ್ರಶಸ್ತಿಗಳ 2026ನೇ ಸಾಲಿನ ಪಟ್ಟಿ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 5 ಜನರು ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ ಮತ್ತು 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪೈಕಿ ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಕರ್ನಾಟಕದ ಶತಾವಧಾನಿ ಆರ್​​. ಗಣೇಶ್​​ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

(ಮಾಹಿತಿ ಅಪ್​​ಡೇಟ್​​ ಆಗುತ್ತಿದೆ.)

Source link

Vastu Tips: ಸ್ನಾನಗೃಹದಲ್ಲಿ ಕನ್ನಡಿ ಇಡಬಾರದೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Vastu Tips for Bathroom Mirrors: Proper Placement for Positive Energy

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದು ಭಾಗವೂ ನಮ್ಮ ಜೀವನದ ಮೇಲೆ ಯಾವುದೋ ರೀತಿಯ ಪ್ರಭಾವ ಬೀರುತ್ತದೆ. ಅದರಲ್ಲಿ ಸ್ನಾನಗೃಹವೂ ಪ್ರಮುಖವಾದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಸ್ನಾನಗೃಹದ ಸ್ವಚ್ಛತೆಯ ಜೊತೆಗೆ, ಅಲ್ಲಿ ಇರಿಸಲಾಗುವ ವಸ್ತುಗಳ ವ್ಯವಸ್ಥೆಯೂ ಅಷ್ಟೇ ಮಹತ್ವದ್ದಾಗಿದೆ. ವಿಶೇಷವಾಗಿ, ಸ್ನಾನಗೃಹದಲ್ಲಿ ಇಡುವ ಕನ್ನಡಿಯ ಬಗ್ಗೆ ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಕೆಲವು ಪ್ರಮುಖ ನಿಯಮಗಳನ್ನು ಹೇಳಲಾಗಿದೆ. ಸರಿಯಾದ ರೀತಿಯಲ್ಲಿ ಇಡಲಾದ ಕನ್ನಡಿ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.

ಕನ್ನಡಿಯನ್ನು ಇಡುವ ಸರಿಯಾದ ದಿಕ್ಕು:

ಸ್ನಾನಗೃಹದಲ್ಲಿ ಕನ್ನಡಿ ಇಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದರ ದಿಕ್ಕು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದ ಬಾಗಿಲಿನ ಎದುರು ನೇರವಾಗಿ ಕನ್ನಡಿಯನ್ನು ಇಡುವುದನ್ನು ತಪ್ಪಿಸುವುದು ಉತ್ತಮ. ಒಳಗೆ ಪ್ರವೇಶಿಸಿದಾಗ ಕಣ್ಣುಗಳು ನೇರವಾಗಿ ಕನ್ನಡಿಯ ಮೇಲೆ ಬೀಳುವಂತೆ ಇದ್ದರೆ, ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಸ್ನಾನಗೃಹದ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿ ಇಡುವುದು ಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಉಳಿಯುತ್ತದೆ.

ಕನ್ನಡಿಯ ಆಕಾರವೂ ಮುಖ್ಯ:

ವಾಸ್ತು ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆಯತಾಕಾರದ ಅಥವಾ ಚೌಕಾಕಾರದ ಕನ್ನಡಿಗಳು ಶುಭಕರ. ಇವು ಸಕಾರಾತ್ಮಕ ಚಿಂತನೆ ಮತ್ತು ಸಮತೋಲನವನ್ನು ಉತ್ತೇಜಿಸುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಹೊಸ ಕನ್ನಡಿ ಖರೀದಿಸುವಾಗ ಅದರ ಆಕಾರಕ್ಕೆ ವಿಶೇಷ ಗಮನ ಕೊಡುವುದು ಒಳಿತು.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಮುರಿದ ಅಥವಾ ಕೊಳಕಾದ ಕನ್ನಡಿಯಿಂದ ದೂರವಿರಿ:

ಮುರಿದ, ಬಿರುಕು ಬಿಟ್ಟ ಅಥವಾ ತುಂಬಾ ಕೊಳಕಾದ ಕನ್ನಡಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ಕನ್ನಡಿಗಳು ಮನೆಯಲ್ಲಿ ಒತ್ತಡ, ನಕಾರಾತ್ಮಕತೆ ಮತ್ತು ಮಾನಸಿಕ ಅಶಾಂತಿಯನ್ನು ಹೆಚ್ಚಿಸಬಹುದು ಎಂಬ ನಂಬಿಕೆ ಇದೆ. ಆದ್ದರಿಂದ, ಸ್ನಾನಗೃಹದ ಕನ್ನಡಿ ಸದಾ ಸ್ವಚ್ಛವಾಗಿರಬೇಕು ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು. ಕನ್ನಡಿ ಹಾನಿಗೊಂಡಿದ್ದರೆ, ಅದನ್ನು ತಕ್ಷಣ ಬದಲಾಯಿಸುವುದು ಉತ್ತಮ.

ಸರಿಯಾದ ಆಯ್ಕೆಯಿಂದ ಯಾವುದೇ ತೊಂದರೆ ಇಲ್ಲ:

ಜ್ಯೋತಿಷ್ಯ ತಜ್ಞರ ಪ್ರಕಾರ, ಸ್ನಾನಗೃಹದಲ್ಲಿ ಕನ್ನಡಿ ಇಡುವುದರಿಂದಲೇ ಕೆಟ್ಟ ಪರಿಣಾಮ ಬರುತ್ತದೆ ಎನ್ನುವುದು ತಪ್ಪು. ಸರಿಯಾದ ದಿಕ್ಕು, ಸೂಕ್ತ ಗಾತ್ರ ಮತ್ತು ಸ್ವಚ್ಛವಾದ ಕನ್ನಡಿಯನ್ನು ಆಯ್ಕೆ ಮಾಡಿದರೆ, ಅದು ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಮೃತಿ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ – Kannada News | Smriti Mandhana Palash Muchhal Wedding Row: Fraud, Cheating Allegations and ₹10 Cr Defamation

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Muchhal) ಅವರ ವಿವಾಹ ರದ್ದಾಗಿದ್ದು ಹಳೆಯ ವಿಚಾರ. ಮಾಜಿ ಪ್ರೇಮಿಗಳಿಬ್ಬರು ಕಳೆದ ಡಿಸೆಂಬರ್​ನಲ್ಲೇ ಮದುವೆ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಯಾವ ಕಾರಣಕ್ಕೆ ರದ್ದಾಯಿತು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ಇವರಿಬ್ಬರ ಮದುವೆ ರದ್ದತಿಯ ಬಗ್ಗೆ ಆಘಾತಕ್ಕಾರಿ ಹೇಳಿಕೆ ನೀಡಿದ್ದ ಮರಾಠಿ ನಟ ಮತ್ತು ನಿರ್ಮಾಪಕ ವಿದ್ಯಾನ್ ಮಾನೆ (Vidnyan Mane) ಪಲಾಶ್ ಅವರ ನಡವಳಿಕೆಯೇ ಮದುವೆ ರದ್ದತಿಗೆ ಕಾರಣ ಎಂದಿದ್ದರು. ಇದು ಮಾತ್ರವಲ್ಲದೆ ಪಲಾಶ್ ಚಿತ್ರದ ನಿರ್ಮಾಣದ ಹೆಸರಿನಲ್ಲಿ ತಮ್ಮಿಂದ 40 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಅವರು ಸಾಂಗ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪಲಾಶ್, ಇದೆಲ್ಲವೂ ತಮ್ಮ ಖ್ಯಾತಿಗೆ ಕಳಂಕ ತರುವ ಪಿತೂರಿ ಎಂದಿದ್ದು, ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

ಅಷ್ಟಕ್ಕೂ ಇವರಿಬ್ಬರ ಮದುವೆ ರದ್ದತಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದ ವಿದ್ಯಾನ್ ಮಾನೆ, ‘ಸ್ಮೃತಿ ಹಾಗೂ ಪಲಾಶ್ ಅವರ ಮದುವೆ ಸಮಾರಂಭದಲ್ಲಿ ನಾನು ಕೂಡ ಹಾಜರಿದ್ದೆ. ಅಂದು ಪಲಾಶ್ ಒಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಅದು ಭಯಾನಕ ದೃಶ್ಯವಾಗಿತ್ತು. ಇದಾದ ಬಳಿಕ ಪರಿಸ್ಥಿತಿ ತುಂಬಾ ಉದ್ವಿಗ್ನವಾಯಿತು, ಭಾರತೀಯ ಮಹಿಳಾ ಕ್ರಿಕೆಟಿಗರು ಪಲಾಶ್ ಅವರನ್ನು ಥಳಿಸಿದರು. ಇದಾದ ಬಳಿಕ ಮದುವೆ ಮುರಿದುಬಿದ್ದಿತು’ ಎಂದಿದ್ದರು.

40 ಲಕ್ಷ ರೂಪಾಯಿಗಳ ಹೂಡಿಕೆ

ಇನ್ನು ಪಲಾಶ್ ವಿರುದ್ಧ ವಂಚನೆ ಮತ್ತು ಆರ್ಥಿಕ ದುರುಪಯೋಗದ ಗಂಭೀರ ಆರೋಪಗಳನ್ನು ಹೊರಿಸಿದ್ದ ವಿದ್ಯಾನ್ ಮಾನೆ, ‘ಪಲಾಶ್ ಸಿನಿಮಾದ ಹೆಸರಿನಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದರು, ಆದರೆ ಆ ಚಿತ್ರವನ್ನು ನಿರ್ಮಿಸಲಾಗಿಲ್ಲ ಅಥವಾ ಹಣವನ್ನು ಹಿಂತಿರುಗಿಸಲಾಗಿಲ್ಲ. ನಾನು ಸ್ಮೃತಿಯ ಕುಟುಂಬದ ಮೂಲಕ ಪಲಾಶ್ ಅವರನ್ನು ಭೇಟಿಯಾಗಿದ್ದೆ. ಈ ಸಮಯದಲ್ಲಿ ಪಲಾಶ್ ನನ್ನ ಬಳಿ ಸಿನಿಮಾ ನಿರ್ದೇಶನದ ಬಗ್ಗೆ ಮಾತನಾಡಿದರು. ಅಲ್ಲದೆ ಆರು ತಿಂಗಳೊಳಗೆ ಸಿನಿಮಾವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಹೀಗಾಗಿ ನಾನು ಪಾಲಾಶ್ ಸಿನಿಮಾದ ಮೇಲೆ ಸುಮಾರು 40 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಆದಾಗ್ಯೂ, ಮದುವೆ ರದ್ದಾದ ನಂತರ ಪಲಾಶ್ ನನ್ನ ಫೋನ್​ ರಿಸೀವ್ ಮಾಡುತ್ತಿಲ್ಲ ಎಂದಿದ್ದರು.

ಮದುವೆ ಮನೆಯಲ್ಲೇ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್

10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ

ಇದೀಗ ವಿದ್ಯಾನ್ ಮಾನೆ ಅವರ ಆರೋಪಗಳನ್ನು ಸುಳ್ಳು ಎಂದಿರುವ ಪಲಾಶ್ ಮುಚ್ಚಲ್, ‘ನಾನು ತಮ್ಮ ವಕೀಲ ಶ್ರೇಯಂಶ್ ಮಿಥಾರೆ ಮೂಲಕ ವಿದ್ಯಾನ್ ಮಾನೆ ಅವರ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇನೆ. ವಿದ್ಯಾನ್ ಮಾನೆ ತಮ್ಮ ಹೆಸರು ಮತ್ತು ಪಾತ್ರಕ್ಕೆ ಹಾನಿ ಮಾಡುವ ಉದ್ದೇಶದಿಂದ ಮಾತ್ರ ಇಂತಹ ಸುಳ್ಳುಗಳನ್ನು ಹರಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ವೃತ್ತಿಜೀವನವನ್ನು ನಾಶಮಾಡಲು ಪ್ರಯತ್ನಿಸುವವರನ್ನು ತಾವು ಬಿಡುವುದಿಲ್ಲ ಎಂದು ಪಲಾಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:59 pm, Sun, 25 January 26

Source link

Republic Day 2026: ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುವುದು? ಈ ಕುರಿತ ಇಂಟರೆಸ್ಟಿಂಗ್‌ ಸಂಗತಿ ಇಲ್ಲಿದೆ – Kannada News | Republic Day 2026: Know about the history and significance of Republic Day

ಜನವರಿ 26 ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನ (Republic Day) ಪ್ರತಿಯೊಬ್ಬ ಭಾರತೀಯನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮ ಮತ್ತು ದೇಶಭಕ್ತಿಯಿಂದ ಆಚರಿಸುತ್ತೇವೆಯೋ ಅಷ್ಟೇ ಸಂಭ್ರಮದಿಂದ ಗಣರಾಜ್ಯೋತ್ಸವ ದಿನವನ್ನೂ ಆಚರಿಸಲಾಗುತ್ತದೆ. ಗಣರಾಜ್ಯೋತ್ಸವವು ಅಧಿಕಾರವು ಯಾವುದೇ ವ್ಯಕ್ತಿ, ರಾಜ ಅಥವಾ ಸರ್ಕಾರಕ್ಕೆ ಸೇರಿಲ್ಲ, ಬದಲಾಗಿ ಸಂವಿಧಾನ ಮತ್ತು ಜನರಿಗೆ ಸೇರಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಈ ದಿನವು ಹಕ್ಕುಗಳನ್ನು ಆಚರಿಸುತ್ತದೆ, ಜೊತೆಗೆ ನಮ್ಮ ಕರ್ತವ್ಯಗಳನ್ನು ಸಹ ನೆನಪಿಸುತ್ತದೆ. ಜನವರಿ 26 ರಂದು ಗಣರಾಜ್ಯೋತ್ಸವವನ್ನು ಏಕೆ ಆಚರಿಸಲಾಗುತ್ತದೆ? ಗಣರಾಜ್ಯೋತ್ಸವದ ಇತಿಹಾಸ ಮತ್ತು ಮಹತ್ವವವೇನು ಎಂಬುದನ್ನು ತಿಳಿಯೋಣ ಬನ್ನಿ.

ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ?

ಜನವರಿ 26 ಭಾರತವು ತನ್ನನ್ನು ತಾನು ಸಂಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವೆಂದು ಘೋಷಿಸಿಕೊಂಡ ದಿನವಾಗಿದೆ. ಆಗಸ್ಟ್ 15, 1947 ರಂದು ದೇಶವು ಸ್ವಾತಂತ್ರ್ಯ ಪಡೆದರೂ, ಅದಕ್ಕೆ ಸಂವಿಧಾನದ ಕೊರತೆಯಿತ್ತು. ದೇಶವು ತನ್ನದೇ ಆದ ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ನಿಜವಾದ ಸ್ವಾತಂತ್ರ್ಯವನ್ನು ಸಾಧಿಸಲಾಯಿತು. ಅದಕ್ಕಾಗಿಯೇ, ಜನವರಿ 26, 1950 ರಂದು, ಭಾರತವು ಸಂವಿಧಾನವನ್ನು ಅಂಗೀಕರಿಸಿತು ಮತ್ತು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಿತು.ಭಾರತವು ಜನವರಿ 26, 1950 ರಂದು ಗಣರಾಜ್ಯವಾಯಿತು. ಈ ದಿನ ಭಾರತೀಯ ಸಂವಿಧಾನ ಜಾರಿಗೆ ಬಂದಿತು. ಡಾ. ರಾಜೇಂದ್ರ ಪ್ರಸಾದ್ ಭಾರತದ ಮೊದಲ ರಾಷ್ಟ್ರಪತಿಯಾದರು. 1937 ರ ಭಾರತ ಸರ್ಕಾರ ಕಾಯ್ದೆ ಕೊನೆಗೊಂಡಿತು. ಇಲ್ಲಿಂದ ಭಾರತವು ತನ್ನನ್ನು ಕಾನೂನಿನಿಂದ ನಿಯಂತ್ರಿಸಲ್ಪಡುವ ರಾಷ್ಟ್ರವೆಂದು ಘೋಷಿಸಿಕೊಂಡಿತು ಮತ್ತು ಜನರೇ ದೇಶದ ಸರ್ವೋಚ್ಚ ಶಕ್ತಿಯಾದರು.

ಗಣರಾಜ್ಯೋತ್ಸವ ದಿನದ ಇತಿಹಾಸವೇನು?

ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಗಳಿಸಿತು, ಆದರೆ ಸಂವಿಧಾನ ಜಾರಿಗೆ ಬಂದ ನಂತರವೇ ಅದು ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಭಾರತದ ಸಂವಿಧಾನವನ್ನು ನವೆಂಬರ್ 26, 1949 ರಂದು ರಚಿಸಲಾಯಿತು, ಆದರೆ ಅದು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ದಿನದಂದು, ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿಕೊಂಡಿತು. ಈ ದಿನವನ್ನು ಭಾರತದ ಗಣರಾಜ್ಯ ದಿನವೆಂದು ಗುರುತಿಸಲಾಯಿತು ಮತ್ತು ಈ ಕಾರಣಕ್ಕಾಗಿಯೇ ಭಾರತವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತದೆ.

ಗಣರಾಜ್ಯೋತ್ಸವದ ಮಹತ್ವವೇನು?

  • ಪ್ರಜಾಪ್ರಭುತ್ವವನ್ನು ಆಚರಿಸುವುದು: ಗಣರಾಜ್ಯೋತ್ಸವವು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಆಚರಿಸುತ್ತದೆ. ಈ ದಿನವು ನಾವೆಲ್ಲರೂ ಸಮಾನರು ಮತ್ತು ನಮ್ಮ ದೇಶದ ಆಡಳಿತದಲ್ಲಿ ನಮಗೆ ಪಾಲು ಇದೆ ಎಂಬುದನ್ನು ನೆನಪಿಸುತ್ತದೆ.
  • ರಾಷ್ಟ್ರೀಯ ಏಕತೆ: ಈ ದಿನವು ದೇಶದ ವಿವಿಧ ಜಾತಿಗಳು, ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಒಂದುಗೂಡಿಸಲು ಅವಕಾಶವನ್ನು ಒದಗಿಸುತ್ತದೆ.
  • ಸಂವಿಧಾನದ ಮಹತ್ವ: ಗಣರಾಜ್ಯೋತ್ಸವವು ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸುವ ನಮ್ಮ ಸಂವಿಧಾನದ ಮಹತ್ವವನ್ನು ನೆನಪಿಸುತ್ತದೆ.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ಮನೆಯಲ್ಲಿ ಮಾಡಿ ತ್ರಿವರ್ಣ ಬಣ್ಣದ ರುಚಿಕರ ಭಕ್ಷ್ಯ

ಗಣರಾಜ್ಯೋತ್ಸವವನ್ನು ಹೇಗೆ ಆಚರಿಸಲಾಗುತ್ತದೆ?

ಪ್ರತಿ ವರ್ಷ, ದೇಶಾದ್ಯಂತ ಗಣರಾಜ್ಯೋತ್ಸವವನ್ನು ಪ್ರಜಾಪ್ರಭುತ್ವದ ಆಚರಣೆಯಾಗಿ ಆಚರಿಸಲಾಗುತ್ತದೆ. ಈ ದಿನದಂದು, ದೆಹಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭವ್ಯ ಮೆರವಣಿಗೆ, ಟ್ಯಾಬ್ಲೋಗಳು, ಮಿಲಿಟರಿ ಶಕ್ತಿಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 21-ಗನ್ ಸೆಲ್ಯೂಟ್ ಕಾರ್ಯಕ್ರಮ ನಡೆಯುತ್ತದೆ. ಇದು ಕೇವಲ ಮಿಲಿಟರಿ ಶಕ್ತಿಯ ಪ್ರದರ್ಶನವಲ್ಲ, ಇದು ರಾಷ್ಟ್ರದ ಆತ್ಮ ವಿಶ್ವಾಸದ ಸಂಕೇತವಾಗಿದೆ. ಅಲ್ಲದೆ ಈ ದಿನ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ.  ಈ ವಿಶೇಷ ದಿನದಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ಈ ವಿಶೇಷ ದಿನವನ್ನು ಭಾರತದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Padma Awards 2026: ಕರ್ನಾಟಕದ ಮೂವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ; ಮಾಹಿತಿ ಇಲ್ಲಿದೆ – Kannada News | Three from Karnataka Honoured with Padma Shri Awards 2026: Here’s the Details

ಬೆಂಗಳೂರು, ಜನವರಿ 25: 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ ಮೂವರು ಸೇರಿ ಒಟ್ಟು 54 ಮಂದಿ ಕೇಂದ್ರ ಸರ್ಕಾರದಿಂದ ನೀಡಲ್ಪಡುವ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿದ್ದಾರೆ. ರಾಜ್ಯದ ಅಂಕೇಗೌಡ, ಡಾ.ಸುರೇಶ್ ಹನಗವಾಡಿಮತ್ತು ಸುಶೀಲಮ್ಮ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಬಾರಿಯೂ ಕೇಂದ್ರ ಸರ್ಕಾರ ತೆರೆ ಮರೆಯ ಸಾಧಕರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.

ಹಿಮೊಫಿಲಿಯಾ ಪೀಡಿತ ಮಕ್ಕಳ ಸೇವಕ ಡಾ.ಸುರೇಶ್ ಹನಗವಾಡಿ

JJM ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಸುರೇಶ್ ಹನಗವಾಡಿ ಅವರು, ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಂಸ್ಥಾಪಕರು ಕೂಡ ಆಗಿದ್ದಾರೆ. ಸ್ವತಃ ಹಿಮೋಫಿಲಿಯಾ ಪೀಡಿತರಾಗಿರುವ ಇವರು ಕಳೆದ ನಾಲ್ಕು ದಶಕಗಳಿಂದ ಈ ಕಾಯಿಲೆ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರಾಜ್ಯದ ಬಹುತೇಕ ಭಾಗದ ಹಿಮೋಫಿಲಿಯಾ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಸುರೇಶ್,  ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಎಸ್ಪಿ ಬಾಲಸುಬ್ರಹ್ಮಣ್ಯಂ ಸಹಕಾರದಿಂದ‌ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಕಟ್ಟಿ ಬೆಳೆಸಿದ್ದಾರೆ.

ಇದನ್ನೂ ಓದಿ: Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ

ಸಮಾಜ ಸೇವೆಗೆ ಜೀವನವನ್ನೇ ಮುಡಿಪಿಟ್ಟ ಸುಶೀಲಮ್ಮ

1975ರಿಂದ ಮಹಿಳೆಯರು ಮತ್ತು ಮಕ್ಕಳ ಸೇವೆ ಮಾಡುತ್ತಿರುವ ಡಾ. ಎಸ್.ಜಿ. ಸುಶೀಲಮ್ಮ, ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದಾರೆ. ಸುಮಂಗಲಿ ಸೇವಾಶ್ರಮ ಸ್ಥಾಪಿಸಿರುವ ಇವರು ಮಕ್ಕಳಿಗೆ ಲೈಬ್ರರಿ, ಮಹಿಳಾ ಮತ್ತು ಮಕ್ಕಳ ಆಧ್ಯಾತ್ಮಿಕ ತರಬೇತಿ, ನಿರ್ಗತಿಕ ಮಹಿಳೆಯರ ಸಬಲೀಕರಣ, ಸ್ವಯಂ ಉದ್ಯೋಗ, ಸಮುದಾಯದ ಅಭಿವೃದ್ಧಿ, ಮದ್ಯಸೇವನೆ ವಿರುದ್ಧ ಹೋರಾಟ, ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ಹೋರಾಟ ಸೇರಿ ಮುಂತಾದವುಗಳಲ್ಲಿ ಗುರುತಿಸಿಕೊಂಡವರು. 1987ರಲ್ಲಿ ಮಕ್ಕಳ ಒಕ್ಕೂಟವನ್ನು ಆರಂಭಿಸಿರುವ ಇವರಿಗೆ ಅದಾಗಲೇ ಎರಡು ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಸಂದಿವೆ. ಪರಿಸರ ಸಂರಕ್ಷಣೆಗಾಗಿ ಇವರ ಕೊಡುಗೆ ಗಮನಿಸಿ ಜಪಾನ್ ದೇಶದ ಪುರಸ್ಕಾರವೂ ಲಭಿಸಿದೆ.

‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಾತೃ ಅಂಕೇಗೌಡರು

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಗಮನ ಸೇಳೆದ ವ್ಯಕ್ತಿ. 20ನೇ ವಯಸ್ಸಿನಲ್ಲೇ ಪುಸ್ತಕ ಸಂಗ್ರಹ ಆರಂಭಿಸಿದ್ದ ಅಂಕೇಗೌಡರು, ಸ್ವಂತ ಮನೆ ಮಾರಿ ‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಿಸಿದ್ದಾರೆ. ಪಾಂಡವಪುರದ ಹರಳಹಳ್ಳಿಯಲ್ಲಿನ 22 ಗುಂಟೆ ಜಾಗದಲ್ಲಿ ಪುಸ್ತಕ ಮನೆ ನಿರ್ಮಾಣವಾಗಿದ್ದು, ವಿವಿಧ ಭಾಷೆಯ 20 ಲಕ್ಷಕ್ಕೂ ಅಧಿಕ ಪುಸ್ತಗಳ ಸಂಗ್ರಹ ಇಲ್ಲಿವೆ. ಇಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಕಧಕರಿಗೆ ಮತ್ತು ಸಾರ್ವಜನಿಕರಿಗೆ ಇಲ್ಲಿ ಉಚಿತ ಪ್ರವೇಶ ಇದ್ದು, ಇವರ ಈ ಅಸಾಧಾರಣ ಸಾಧನೆ ಲಿಮ್ಕಾ ಬುಕ್ ಆಫ್​​ ರೆಕಾರ್ಡ್ಸ್ ಕೂಡ ಸೇರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

BBL: ಸಿಡ್ನಿ ಸಿಕ್ಸರ್ಸ್ ಮಣಿಸಿ ಚಾಂಪಿಯನ್​ ಪಟ್ಟಕ್ಕೇರಿದ ಪರ್ತ್​; ಸಿಎಸ್​ಕೆ, ಮುಂಬೈ ದಾಖಲೆ ಧ್ವಂಸ – Kannada News | Perth Scorchers Dominate BBL 2025 26 Final, Clinch Record 6th Title and Most T20 Wins

2025-26 ರ ಬಿಗ್ ಬ್ಯಾಷ್ ಲೀಗ್‌ನ ಅಂತಿಮ ಪಂದ್ಯವು ಪರ್ತ್ ಸ್ಕಾರ್ಚರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ಪರ್ತ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಪರ್ತ್ ಸ್ಕಾರ್ಚರ್ಸ್ ದಾಖಲೆಯ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಎನಿಸಿಕೊಂಡಿದೆ. ಈ ವಿಚಾರದಲ್ಲಿ ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಸಿಪಿಎಲ್​ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವನ್ನು ಹಿಂದಿಕ್ಕಿದೆ. ಈ ತಂಡಗಳು ತಲಾ 5 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿವೆ.

ಈ ಪಂದ್ಯದಲ್ಲಿ, ಪರ್ತ್ ಸ್ಕಾರ್ಚರ್ಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ಸ್ ತಂಡವು 20 ಓವರ್‌ಗಳಲ್ಲಿ ಕೇವಲ 132 ರನ್ ಗಳಿಸಿ ಆಲ್ ಔಟ್ ಆಯಿತು. ಸಿಡ್ನಿ ಸಿಕ್ಸರ್ಸ್ ತಂಡದ ಯಾವುದೇ ಬ್ಯಾಟ್ಸ್‌ಮನ್ 25 ರನ್‌ಗಳ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಕೇವಲ 24 ರನ್‌ಗಳಷ್ಟೇ ಗಳಿಸಿದರು. ಜೋಶ್ ಫಿಲಿಪ್ ಮತ್ತು ಮೊಯಿಸಸ್ ಹೆನ್ರಿಕ್ಸ್ ಕೂಡ ತಲಾ 24 ರನ್‌ಗಳಿಗೆ ಸುಸ್ತಾದರು. ಸ್ಕಾರ್ಚರ್ಸ್ ತಂಡದ ಪರ ಯುವ ವೇಗಿ ಮಹ್ಲಿ ಬಿಯರ್ಡ್‌ಮನ್ 29 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದು ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಜೇ ರಿಚರ್ಡ್‌ಸನ್ ಮತ್ತು ಡೇವಿಡ್ ಪೇನ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

ಇದಕ್ಕೆ ಉತ್ತರವಾಗಿ, ಪರ್ತ್ ಸ್ಕಾರ್ಚರ್ಸ್ ತಂಡವು 133 ರನ್‌ಗಳ ಗುರಿಯನ್ನು ಬೆನ್ನಟ್ಟಿ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ತಂಡದ ಪರ ಮಿಚೆಲ್ ಮಾರ್ಷ್ 44 ರನ್‌ಗಳ ಇನ್ನಿಂಗ್ಸ್ ಆಡಿದರೆ, ಫಿನ್ ಅಲೆನ್ ಕೂಡ 36 ರನ್‌ಗಳ ಕೊಡುಗೆ ನೀಡಿದರು, ಮತ್ತು ಇಬ್ಬರೂ ಮೊದಲ ವಿಕೆಟ್‌ಗೆ 80 ರನ್‌ಗಳನ್ನು ಸೇರಿಸಿದರು. ನಂತರ ಜೋಶ್ ಇಂಗ್ಲಿಸ್ ಅಜೇಯ 29 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್ ಸಿಎಂ ಆಗುವ ಮುನ್ನ ನರೇಂದ್ರ ಮೋದಿ ಹೇಗಿದ್ದರು? ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪತ್ರಕರ್ತರೊಬ್ಬರು ಕಣ್ಣಾರೆ ಕಂಡಿದ್ದು ಇದು – Kannada News | How was narendra modi before becoming gujarat cm congress leader rajeev shukla recollects memory

ನರೇಂದ್ರ ಮೋದಿ ಅವರ ಹಳೆಯ ದಿನಗಳ ಒಂದು ಫೋಟೋ (ಸಾಂದರ್ಭಿಕ)

ನವದೆಹಲಿ, ಜನವರಿ 25: ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸ ತಂತ್ರಜ್ಞಾನಗಳ ಬಳಕೆಗೆ ಆಸಕ್ತಿ ಹೊಂದಿರುವಂತಹ ವ್ಯಕ್ತಿ. ಮೋದಿ ಅವರು ಪ್ರಧಾನಿಯಾಗುವುದಕ್ಕೆ ಮುಂದೆ ದಶಕಕ್ಕೂ ಹೆಚ್ಚು ಕಾಲ ಗುಜರಾತ್​ನ ಮುಖ್ಯಮಂತ್ರಿ ಆಗಿದ್ದವರು. ಸಿಎಂ ಆಗಿದ್ದಾಗಲೂ ಅವರು ಟೆಕ್ ಸವ್ವಿ ಎಂದೆನಿಸಿದ್ದರು. ಆದರೆ, ಮುಖ್ಯಮಂತ್ರಿ ಆಗುವ ಮುನ್ನ ನರೇಂದ್ರ ಮೋದಿ ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳೊಳಗೆ ಬಿಟ್ಟರೆ ಬೇರೆಲ್ಲೂ ಪರಿಚಿತರಿದ್ದವರಲ್ಲ. ಹೆಚ್ಚೂಕಡಿಮೆ ಸಾಮಾನ್ಯ ಕಾರ್ಯಕರ್ತನಂತೆಯೇ ಲೋ ಪ್ರೊಫೈಲ್​ನಲ್ಲಿ ಇದ್ದವರು. ಆದರೂ ಕೂಡ ಮೋದಿ ಅವರ ವೈಯಕ್ತಿಕ ಟೆಕ್ ಅಭಿರುಚಿ ಈಗಿನಂತೆ ಹಿಂದೆಯೂ ಇತ್ತು. ಹಿರಿಯ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲ 2001ಕ್ಕೆ ಮುಂಚಿನ ಮೋದಿಯನ್ನು ಸ್ಮರಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿನಗಳಲ್ಲಿ ಕಂಪ್ಯೂಟರ್ ಇಟ್ಟುಕೊಳ್ಳುತ್ತಿದ್ದುದನ್ನು ತಾನು ಕಂಡಿದ್ದೇನೆ ಎಂದು ಆಗ ಪತ್ರಕರ್ತರಾಗಿದ್ದ ರಾಜೀವ್ ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಆ್ಯಪಲ್​ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್​ನಲ್ಲಿ ಸುಳಿವು ಕೊಟ್ಟ ಸಚಿವರು

ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ತಾನು ಮೊದಲ ಬಾರಿಗೆ ಮೋದಿ ಅವರನ್ನು ನೋಡಿದೆ. ಪತ್ರಕರ್ತನಾಗಿದ್ದ ತಾನು ‘ರುಬ್ರು’ ಎನ್ನುವ ಕಾರ್ಯಕ್ರಮದ ಸಲುವಾಗಿ ಮೋದಿ ಅವರನ್ನು ಸಂದರ್ಶಿಸಿದ್ದಾಗಿ ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.

‘ರುಬ್ರು ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಮೋದಿ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಅದೇ ಮೊದಲಿರಬೇಕು. ನಾವು ಜೇಟ್ಲಿ ನಿವಾಸದಲ್ಲಿ ಸಂಧಿಸುತ್ತಿದ್ದೆವು. ಸಂದರ್ಶನದ ವೇಳೆ ಅವರು ತಮ್ಮೊಂದಿಗೆ ಒಂದು ಸಣ್ಣ ಕಂಪ್ಯೂಟರ್ ಕೂಡ ತಂದಿದ್ದನ್ನು ಕಂಡಿದ್ದೆ. ಮೋದಿ ಆ ಸಂದರ್ಭದಲ್ಲೂ ದೊಡ್ಡ ವ್ಯಕ್ತಿತ್ವದವರಂತೆ ಭಾಸವಾಗುತ್ತಿತ್ತು’ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಅವರು ಎಎನ್​ಐಗೆ ಮಾಹಿತಿ ನೀಡಿದ್ದಾರೆ.

ಮೋದಿ ಸಿಎಂ ಆಗ್ತಾರೆ ಅಂತ ಅನಿಸಿತ್ತಾ?

ಅಂದು ಮೋದಿ ಕಂಡಿದ್ದಾಗ, ಈ ವ್ಯಕ್ತಿ ಮುಂದೆ ಸಿಎಂ ಮತ್ತು ಪಿಎಂ ಆಗಬಹುದು ಎನ್ನುವ ಕಲ್ಪನೆ ಮನಸ್ಸಿಗೆ ಬಂದಿತ್ತಾ ಎನ್ನುವ ಪ್ರಶ್ನೆಗೆ ರಾಜೀವ್ ಶುಕ್ಲ ಅವರು ಇಲ್ಲ ಎಂದಿದ್ದಾರೆ. ‘ಅವರಿಗೆ ಚುನಾವಣಾ ರಾಜಕೀಯ ಪ್ರವೇಶಿಸುವ ಭಾವನೆ ಇರಲಿಲ್ಲ. ಸಂಘಟನಾತ್ಮಕ ಕೆಲಸ ಬಯಸುತ್ತಿದ್ದರು. ಅವರು ಸಂಘಟನಾತ್ಮಕ ವ್ಯಕ್ತಿ. ಪಕ್ಷದ ಸಂಘಟನೆ ಬೆಳೆಸುವುದು, ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ಆಸಕ್ತರಾಗಿದ್ದರು’ ಎಂದು ಬಿಸಿಸಿಐನ ಉಪಾಧ್ಯಕ್ಷರೂ ಆದ ಶುಕ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ನರೇಂದ್ರ ಮೋದಿ ಅವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗುವುದಕ್ಕೂಮುನ್ನ 1995ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಹರ್ಯಾಣ ಮತ್ತು ಹಿಮಾಚಲಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2001ರಲ್ಲಿ ನರೇಂದ್ರ ಮೋದಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಜವಾಬ್ದಾರಿ ಕೊಟ್ಟರು. ಅದಾಗಿನಿಂದ ಮೋದಿ ಹಿಂದಿರುಗಿ ನೋಡಿದ್ದೇ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link