Headlines

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

ಬೆಂಗಳೂರು, ಮೇ 29: ಕೇವಲ ಅರ್ಧ ಗಂಟೆ ಸುರಿದ ಮಳೆಗೆ ನಗರದ ಹಲವೆಡೆ ರಸ್ತೆಗಳು ಕೆರೆಯಂತಾಗಿವೆ. ಶಿವಾನಂದ ವೃತ್ತದ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತಿವೆ. ಈ ವೇಳೆ ಕಾರು ಒಂದು ಅಂಡರ್​ಪಾಸ್​ನಲ್ಲಿ ಸಿಲುಕಿಕೊಂಡಿದೆ. ಕಾರು ತೆಗೆಯಲು ಚಾಲಕ ಪರದಾಡಿದ್ದಾರೆ. ಇನ್ನು ಯುಬಿ ಸಿಟಿ ಮುಂದಿನ ರಸ್ತೆಯಲ್ಲಿ 2 ಅಡಿಯಷ್ಟು ನೀರು ನಿಂತಿದೆ. ನೀರು ನುಗಿದ್ದ ಪರಿಣಾಮ ಬೈಕ್ ಕೈಕೊಟ್ಟಿದ್ದು, ಫುಡ್ ಡೆಲಿವರಿ ಬಾಯ್ ಪರದಾಡಿದ್ದಾರೆ. ಇನ್ನು ರಿಚ್ಮಂಡ್ ವೃತ್ತ, ಶಾಂತಿನಗರದಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಕೆ.ಆರ್.ಪುರಂನಲ್ಲಿ ಆಲಿಕಲ್ಲು ಸಹಿತ…

Read More

ಹೈ ಬಿಪಿಯಿಂದ ಮರೆವು ಹೆಚ್ಚಾಗುತ್ತಾ? ಮೆದುಳಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?

ಇತ್ತೀಚಿನ ದಿನಗಳಲ್ಲಿ ಹೈ ಬಿಪಿ (High BP) ಸಮಸ್ಯೆ ಯುವಕರಲ್ಲೂ ಹೆಚ್ಚಾಗಿ ಕಾಣಿಸುತ್ತಿದೆ. ಇದನ್ನು ಹಲವರು ಹೃದಯ ಸಂಬಂಧಿತ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಹೈ ಬಿಪಿ ದೇಹದ ಹಲವು ಅಂಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ, ಇದು ಮೆದುಳಿನ ಆರೋಗ್ಯ ಮತ್ತು ನೆನಪಿನ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ದೀರ್ಘಕಾಲ ಹೈ ಬಿಪಿ ಇದ್ದವರಿಗೆ ಮೆದುಳಿಗೆ ರಕ್ತವನ್ನು ಸಾಗಿಸುವ ರಕ್ತನಾಳಗಳು ಹಾನಿಗೊಳಗಾಗಬಹುದು. ಇದರಿಂದ…

Read More

GT vs RR: ಟಾಸ್ ವೇಳೆ ಗೊಂದಲ; ಟಾಸ್ ಗೆದ್ದ ಗಿಲ್, ಬ್ಯಾಟಿಂಗ್‌ ಆಯ್ದುಕೊಂಡ ಪರಾಗ್

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯ ಆರಂಭಕ್ಕೂ ಮುನ್ನವೇ ವಿವಾದವೊಂದು ಹುಟ್ಟಿಕೊಂಡಿದೆ. ವಾಸ್ತವವಾಗಿ ಈ ಪಂದ್ಯದ ಟಾಸ್ ಅನ್ನು ಎರಡು ಬಾರಿ ನಡೆಸಬೇಕಾಯಿತು. ಮ್ಯಾಚ್ ರೆಫರಿ ಪ್ರಕಾಶ್ ಭಟ್ ಅವರ ಈ ನಿರ್ಧಾರ ಶುಭ್​ಮನ್ ಗಿಲ್ ಅವರ ಅಸಮಾಧಾನಕ್ಕೆ ಕಾರಣವಾಯಿತು. ಏಕೆಂದರೆ ಮೊದಲ ಬಾರಿಗೆ ನಡೆದ ಟಾಸ್‌ನಲ್ಲಿ ಶುಭಮನ್ ಗಿಲ್ ಟಾಸ್ ಗೆದ್ದಿದ್ದರು. ಆದರೆ ಮ್ಯಾಚ್ ರೆಫರಿ ಈ ಟಾಸ್ ಪ್ರಕ್ರಿಯೆಯನ್ನು ತಿರಸ್ಕರಿಸಿದರು. ಇದರಿಂದಾಗಿ ಎರಡನೇ ಬಾರಿಗೆ ನಡೆದ ಟಾಸ್‌ನಲ್ಲಿ ರಾಜಸ್ಥಾನ್…

Read More

ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಪಡೆದ ಕ್ರೈಂ ಥ್ರಿಲ್ಲರ್ ಸಿನಿಮಾ ‘ಚಾರ್ಜ್‌ಶೀಟ್ 03-08’

ಕನ್ನಡದ ಬಹುನಿರೀಕ್ಷಿತ ಕ್ರೈಂ ಥ್ರಿಲ್ಲರ್ ಸಿನಿಮಾ ‘ಚಾರ್ಜ್‌ಶೀಟ್ 03-08’ (Chargesheet 03-08) ಈಗ ಸೆನ್ಸಾರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸೆನ್ಸಾರ್ ಮಂಡಳಿಯಿಂದ ಯಾವುದೇ ವಿಡಿಯೋ ಕಟ್ ಇಲ್ಲದೆ U/A ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರದ ನಿರೂಪಣೆ ಹಾಗೂ ಕಥೆಯ ನಿರ್ವಹಣೆಯನ್ನು ನೋಡಿ ಸೆನ್ಸಾರ್ ಮಂಡಳಿ (CBFC) ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಚಿತ್ರತಂಡ ಹೇಳಿದೆ. ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಂತಸ ಆಗಿದೆ. ‘ಎಂ.ಎಸ್ ಅರ್ಜುನ್ ಫಿಲ್ಮ್ಸ್’ ಬ್ಯಾನರ್ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾಗೆ ದಿನೇಶ್…

Read More

ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ: BMRCL ವಿರುದ್ಧ ಪ್ರಯಾಣಿಕರ ಆಕ್ರೋಶ

ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲುImage Credit source: wikipedia ಬೆಂಗಳೂರು, ಮೇ 29: ರಾಜಧಾನಿ ಬೆಂಗಳೂರಿನ (Bengaluru) ಟ್ರಾಫಿಕ್​ ಸಮಸ್ಯೆ ನಿವಾರಸುವ ನಿಟ್ಟಿನಲ್ಲಿನ ಪ್ರಮುಖ ಯೋಜನೆಗಳ ಪೈಕಿ ನಮ್ಮ ಮೆಟ್ರೋ ಕೂಡ ಒಂದು. ಹಸಿರು, ನೇರಳೆ ಮತ್ತು ಹಳದಿ  ಸೇರಿ ಒಟ್ಟು ಮೂರು ಮಾರ್ಗಗಳಲ್ಲಿ ಈಗಾಗಲೇ ಮೆಟ್ರೋ ರೈಲುಗಳು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಹೀಗಿದ್ದರೂ ಪ್ರಯಾಣಿಕರು ಮಾತ್ರ ಬಿಎಂಆರ್​​ಸಿಎಲ್​​ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಕಾರಣವಾಗಿರೋದು ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲುಗಳ ನಡುವೆ ಇರುವ…

Read More

Bangaluru Rain: ಬೆಂಗಳೂರಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ, ಸಂಚಾರ ವ್ಯತ್ಯಯ

ಬೆಂಗಳೂರು, ಮೇ 29: ಸಿಲಿಕಾನ್​ ಸಿಟಿ ಜನರಿಗೆ ವೀಕೆಂಡ್ ಆರಂಭದಲ್ಲೇ ಮಳೆ ಶಾಕ್ ನೀಡಿದೆ. ಮೋಡ ಕವಿದ ವಾತಾವರಣವಿದ್ದ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ. ನಗರದ ಪ್ರಮುಖ ರಸ್ತೆಗಳು ಮಳೆ ನೀರಿಂದಾಗಿ ಜಲಾವೃತಗೊಂಡಿದ್ದು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಅಂಡರ್‌ಪಾಸ್‌ಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ. Source link

Read More

IPL 2026 GT vs RR Qualifier-2 Live Score: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ

ಇಂದು ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿವೆ. ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಗೆದ್ದ ತಂಡ ಫೈನಲ್‌ಗೆ ಮುನ್ನಡೆಯುತ್ತದೆ. ಗುಜರಾತ್ ತನ್ನ ಕೊನೆಯ ಫೈನಲ್ ಅನ್ನು 2023 ರಲ್ಲಿ ಆಡಿದರೆ, ರಾಜಸ್ಥಾನ ಕೊನೆಯದಾಗಿ 2022 ರಲ್ಲಿ ಪ್ರಶಸ್ತಿ ಪಂದ್ಯವನ್ನು ತಲುಪಿತು, ಅಲ್ಲಿ ಗುಜರಾತ್ ವಿರುದ್ಧ ಸೋತಿತು. ಈಗ ರಾಜಸ್ಥಾನವು ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮತ್ತು ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವತ್ತ ಮುನ್ನಡೆಯುವ…

Read More

ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ಬಿಟ್​ಕಾಯಿನ್ ಸಾಂದರ್ಭಿಕ ಚಿತ್ರImage Credit source: Getty Images ವಾಷಿಂಗ್ಟನ್, ಮೇ 29: ಒಂದಾನೊಂದು ಕಾಲದಲ್ಲಿ ಕ್ರಿಪ್ಟೋಕರೆನ್ಸಿ (crypto currency) ಪರವಾಗಿ ಅತ್ಯಂತ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ಅಮೆರಿಕದ ಬಿಲಿಯನೇರ್ ಉದ್ಯಮಿ ಮತ್ತು ‘ಶಾರ್ಕ್ ಟ್ಯಾಂಕ್’ (Shark Tank) ಕಾರ್ಯಕ್ರಮದ ಮಾಜಿ ಹೂಡಿಕೆದಾರ ಮಾರ್ಕ್ ಕ್ಯೂಬನ್ (Mark Cuban) ಈಗ ವರಸೆ ಬದಲಿಸಿದ್ದಾರೆ. ತಮಗೆ ಸೇರಿದ ಬಹುಪಾಲು ಬಿಟ್‌ಕಾಯಿನ್ (Bitcoin) ಹೂಡಿಕೆಯನ್ನು ಮಾರಾಟ ಮಾಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸುರಕ್ಷಿತ…

Read More

IPL 2026: ರಿಷಭ್ ಪಂತ್ ಜೊತೆಗೆ ಈ 4 ತಂಡಗಳ ನಾಯಕರಿಗೂ ಗೇಟ್​ಪಾಸ್ ಖಚಿತ

2026 ರ ಐಪಿಎಲ್ ಮುಗಿಯುವುದಕ್ಕೂ ಮುನ್ನವೇ ಈ ಮೊದಲೇ ನಿರೀಕ್ಷಿಸಿದಂತೆ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕತ್ವದಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಲಾಗಿದೆ. ಈ ಆವೃತ್ತಿಯಲ್ಲಿ ಲಕ್ನೋ ತಂಡ ಅಂಕಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕೊನೆಗೊಂಡಿತು. ಅದರ ಪರಿಣಾಮವಾಗಿ ರಿಷಭ್ ಪಂತ್ ತಮ್ಮ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಪಂತ್ ಜೊತೆಗೆ ಇನ್ನೂ ನಾಲ್ಕು ಆಟಗಾರರು ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ (PC- PTI). ಪಂತ್ ಜೊತೆಗೆ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ….

Read More

ಕರ್ನಾಟಕದ ಏಕೈಕ ಮಹಿಳಾ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: Phd, ಸಿಬ್ಬಂದಿ ನೇಮಕಾತಿಯಲ್ಲೂ ಭಾರಿ ಗೋಲ್ಮಾಲ್!

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯImage Credit source: tv9 kannada ವಿಜಯಪುರ, ಮೇ 29: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ವಿಜಯಪುರದ (vijayapura) ‘ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ’ದಲ್ಲಿ (Karnataka State Akkamahadevi Women University) ಭ್ರಷ್ಟಾಚಾರ ಮತ್ತು ಅಕ್ರಮಗಳ ಸರಣಿ ಆರೋಪ ಕೇಳಿಬಂದಿವೆ. ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಪಿಎಚ್‌ಡಿ ಪದವಿ ಪ್ರದಾನ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಮತ್ತು ಲಂಚಕ್ಕೆ ಬೇಡಿಕೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ. ಮುಖ್ಯಾಂಶಗಳು ಕರ್ನಾಟಕ…

Read More