Headlines

ಒಟಿಟಿ, ಚಿತ್ರಮಂದಿರದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ ‘ಹೌದ್ದೋ ಹುಲಿಯ’ ಸಿನಿಮಾ – Kannada News | Vaijanath Biradar new movie Howdu Huliya releasing both in OTT and theatre

ಪಕ್ಕಾ ಉತ್ತರ ಕರ್ನಾಟಕ ಭಾಷೆಯ ಸೊಗಡಿರುವ ಹೊಸ ಕಾಮಿಡಿ ಸಿನಿಮಾ ‘ಹೌದ್ದೋ ಹುಲಿಯ’ (Howdu Huliya) ಬಿಡುಗಡೆಗೆ ಸಜ್ಜಾಗಿದೆ. ‘ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಆ್ಯಂಡ್ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಜನವರಿ 30ರಂದು ಈ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಏನೆಂದರೆ, ಒಂದು ಪ್ರಯೋಗಕ್ಕೆ ಚಿತ್ರತಂಡ ಮುಂದಾಗಿದೆ. ಏಕಕಾಲದಲ್ಲಿ ಚಿತ್ರಮಂದಿರ ಹಾಗೂ ‘ಟಾಕೀಸ್’ ಒಟಿಟಿ (OTT) ಮೂಲಕ ಈ ಚಿತ್ರ ಬಿಡುಗಡೆ ಆಗಲಿದೆ. ‘ಹೌದ್ದೋ ಹುಲಿಯ’ ಸಿನಿಮಾದಲ್ಲಿ ವೈಜನಾಥ್ ಬಿರಾದರ್ (Vaijanath Biradar)…

Read More

ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ದರೋಡೆ; ಪರಮೇಶ್ವರ್ ಹೇಳಿದ್ದೇನು? – Kannada News | Belagavi Rs.400 Cr Robbery: G. Parameshwara on Police Investigation

ಬೆಂಗಳೂರು, ಜನವರಿ 25: ಬೆಳಗಾವಿಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ಅಕ್ಟೋಬರ್ 2022 ರಲ್ಲಿ ನಡೆದಿದೆ ಎನ್ನಲಾದ ರೂ. 400 ಕೋಟಿ ಮೌಲ್ಯದ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳ ದರೋಡೆ ಪ್ರಕರಣ (Belagavi Rs.400 Cr Robbery) ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣದ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಈ ಹಣವು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ್ದು…

Read More

Chanchal Bhowmik: ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂದೂ ಯುವಕನ ಹತ್ಯೆ; ಗ್ಯಾರೇಜ್‌ನೊಳಗೆ ಸಜೀವ ದಹನ – Kannada News | Bangladesh Hindu Targeted: Chanchal Bhoumik Murdered Amid Rising Violence

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಮತ್ತೆ ಆತಂಕ ಮೂಡಿಸುತ್ತಿವೆ. ಜನವರಿ 23ರ ಶುಕ್ರವಾರ ತಡರಾತ್ರಿ, ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕ ಚಂಚಲ್ ಭೌಮಿಕ್ ಅವರನ್ನು ಗ್ಯಾರೇಜ್‌ನೊಳಗೆ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ವರದಿಯಾಗಿದೆ. ಸ್ಥಳೀಯರ ಮಾಹಿತಿಯಂತೆ, ನರಸಿಂಗ್ಡಿ ಪೊಲೀಸ್ ಲೈನ್ಸ್ ಸಮೀಪದ ಮಸೀದಿ ಪ್ರದೇಶದಲ್ಲಿರುವ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂಚಲ್ ಭೌಮಿಕ್, ಎಂದಿನಂತೆ ಕೆಲಸ ಮುಗಿಸಿ ಗ್ಯಾರೇಜ್ ಒಳಗೇ ಮಲಗಿದ್ದ. ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಗ್ಯಾರೇಜ್‌ನ ಶಟರ್ ಅನ್ನು ಹೊರಗಿನಿಂದ…

Read More

ದೇಶದ ಮತದಾರರಿಗೆ ಪ್ರಧಾನಿ ಮೋದಿ ಪತ್ರ: ಮತದಾರರಾಗುವ ಕ್ಷಣವನ್ನ ಸಂಭ್ರಮಿಸುವಂತೆ ಯುವಜನತೆಗೆ ಕರೆ – Kannada News | National Voters Day: PM Modi Urges Youth to Embrace Democratic Duty in India

ದೆಹಲಿ, ಜನವರಿ 25: ರಾಷ್ಟ್ರೀಯ ಮತದಾರರ ದಿನದ (National Voters’ Day) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ನಾನಾ ಭಾಗಗಳಲ್ಲಿರುವ ಮೈ-ಭಾರತ್ ಸ್ವಯಂಸೇವಕರು ಹಾಗೂ ಯುವಜನತೆಗೆ ಪತ್ರ ಬರೆದಿದ್ದಾರೆ. ಮತದಾರರಾಗುವ ಕ್ಷಣವನ್ನು ಹಾಗೂ ತಮ್ಮ ಸುತ್ತಮುತ್ತಲಿನವರು ಮತದಾರರಾಗುವ ಸಂದರ್ಭವನ್ನು ಸಂಭ್ರಮದಿಂದ ಆಚರಿಸಬೇಕೆಂದು ಯುವಜನತೆಗೆ ಕರೆ ನೀಡಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮತದಾರರಾಗಿರುವುದು ಅತ್ಯಂತ ಮಹತ್ವದ ಹಕ್ಕು ಮತ್ತು ದೊಡ್ಡ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ಜೊತೆಗೆ, ವಿದ್ಯಾರ್ಥಿಗಳು…

Read More

ಬೆಂಗಳೂರು: ಎಂಜಿನಿಯರಿಂಗ್ ಸೀಟ್‌ಗೂ ಲಂಚ, PSI ನೇಮಕಕ್ಕೂ ಡೀಲ್: ಬರೋಬ್ಬರಿ 21 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇಡಿ – Kannada News | ED Seizes Rs.21 Cr Assets in Karnataka PSI & Engineering Seat Scams

ಎಂಜಿನಿಯರಿಂಗ್ ಸೀಟ್ ಬ್ಲಾಕ್, PSI ನೇಮಕಾತಿ ಹಗರಣದಲ್ಲಿ ಇಡಿ ಶಾಕ್! ಬೆಂಗಳೂರು, ಜನವರಿ 25: ಬೆಂಗಳೂರಿನ ಖ್ಯಾತ ಬಿಎಂಎಸ್ ಎಜುಕೇಶನ್ ಟ್ರಸ್ಟ್‌ಗೆ ಸಂಬಂಧಿಸಿದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ (Seat Blocking) ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಮಹತ್ವದ ಕ್ರಮ ಕೈಗೊಂಡಿದ್ದು, 19.46 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಲ್ಲದೆ ರಾಜ್ಯದಲ್ಲಿ 2021–22ರಲ್ಲಿ ನಡೆದ 545 ಪಿಎಸ್‌ಐಗಳ (PSI) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಇಡಿ 1.53 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು…

Read More

Optical Illusion: ಜಸ್ಟ್‌ 13 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಮನೆಯ ಬೀಗದ ಕೈಯನ್ನು ಹುಡುಕಬಲ್ಲಿರಾ – Kannada News | Optical Illusion: Can you find the key to the house in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media ಆಪ್ಟಿಕಲ್ ಇಲ್ಯೂಷನ್​ಗಳು (Optical Illusion) ಮೋಜಿನ ಸಂಗತಿ. ಕೆಲವರು ಬೋರ್ ಎನಿಸಿದಾಗ ಇಂತಹ ಮೋಜಿನ ಆಟಗಳನ್ನು ಬಿಡಿಸಲು ಇಷ್ಟ ಪಡ್ತಾರೆ. ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಪ್ರತಿನಿತ್ಯ ವೈರಲ್‌ ಆಗುವುದನ್ನು ನೀವು ನೋಡಿರುತ್ತೀರಿ. ಕೆಲವರು ಈ ಚಿತ್ರಗಳತ್ತ ಕಣ್ಣಾಯಿಸಿ ಬಿಡಿಸುವಲ್ಲಿ ವಿಫಲರಾಗುತ್ತಾರೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಮಹಿಳೆ ಬೀಗದ ಕೈ ಹುಡುಕುತ್ತಿದ್ದು, ಕೀ ಎಲ್ಲಿದೆ ಎಂದು 13…

Read More

Ratha Saptami: ರಥಸಪ್ತಮಿ ಹಬ್ಬದಂದು ಈ ಮಂತ್ರವನ್ನು ತಪ್ಪದೇ ಪಠಿಸಿ; ಪ್ರಯೋಜನ ಸಾಕಷ್ಟಿವೆ – Kannada News | Ratha Saptami: Importance of Surya Puja, Mantras, and Charity for Prosperity

ಹಿಂದೂ ಧರ್ಮದಲ್ಲಿ ರಥಸಪ್ತಮಿಯ ಹಬ್ಬವನ್ನು ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ರಥಸಪ್ತಮಿ ಆಚರಣೆ ನಡೆಯುತ್ತದೆ. ಈ ಪುಣ್ಯ ದಿನದಂದು ನವಗ್ರಹ ಹೋಮ, ಸೂರ್ಯ ಶಾಂತಿ, ಸೂರ್ಯ ಹೋಮ ಅಥವಾ ಸರಳವಾದ ಅಗ್ನಿಹೋತ್ರವನ್ನು ಮಾಡಿಕೊಳ್ಳುವುದು ಆರೋಗ್ಯದಲ್ಲಿ ಚೇತರಿಕೆ ಮತ್ತು ಆಯುಷ್ಯ ವೃದ್ಧಿಗೆ ಸಹಕಾರಿ ಎಂದು ನಂಬಲಾಗಿದೆ. ತಾಮ್ರದ ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಬೆಳಗಿನ ಸೂರ್ಯನಿಗೆ ಅರ್ಘ್ಯವನ್ನು ಸಮರ್ಪಿಸುವುದು ಮತ್ತು ಮಂತ್ರಗಳನ್ನು ಜಪಿಸುವುದು ಶುಭ ಫಲಗಳನ್ನು ತರುತ್ತದೆ. “ಓಂ ಸೂರ್ಯನಾರಾಯಣಾಯ ನಮಃ”, “ಓಂ…

Read More

ಟಿ20 ವಿಶ್ವಕಪ್​​​ಗೆ ಕೈ ಕೊಟ್ಟರೆ ಪಾಕಿಸ್ತಾನ್ ತಂಡ ಬ್ಯಾನ್..! – Kannada News | ICC could ban Pakistan if they withdrew from T20 World Cup 2026

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಗುಳಿಯುವ ಸಾಧ್ಯತೆಯಿದೆ. ಈ ಸಾಧ್ಯತೆಗಳ ಸುದ್ದಿಯ ಬೆನ್ನಲ್ಲೇ ಐಸಿಸಿ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟ ಬೆನ್ನಲ್ಲೇ ಪಾಕ್ ತಂಡ ಮುಂದಿನ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿಕೆ ನೀಡಿದ್ದರು. ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಕಣಕ್ಕಿಳಿಯುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪಾಕ್ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬ…

Read More

Ratha Saptami: ಇಂದು ರಥಸಪ್ತಮಿ; ಹಬ್ಬದ ಆಚರಣೆ ಮತ್ತು ಮಹತ್ವವನ್ನು ತಿಳಿಯಿರಿ – Kannada News | Ratha Saptami: Surya’s Birthday, Rituals and Immense Significance

ಹಿಂದೂ ಧರ್ಮದಲ್ಲಿ ರಥಸಪ್ತಮಿಯು ಅತ್ಯಂತ ಮಹತ್ವದ ಹಾಗೂ ಮಂಗಳಕರವಾದ ಪರ್ವ ಕಾಲಗಳಲ್ಲಿ ಒಂದಾಗಿದೆ. ಇದನ್ನು ಜಗದ ಚಕ್ಷು ಮತ್ತು ಬ್ರಹ್ಮಾಂಡದ ಶಕ್ತಿಯ ಮೂಲವಾದ ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನ ವಿಶೇಷ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ರಥಸಪ್ತಮಿ ಆಚರಣೆ ನಡೆಯುತ್ತದೆ. ಉದಾಹರಣೆಗೆ, 2026ರ ಜನವರಿ 25ರ ಭಾನುವಾರದಂದು ಬೆಳಗ್ಗೆ 12:39 ರಿಂದ ರಾತ್ರಿ 11:10ರ ತನಕ ಸಪ್ತಮಿ ತಿಥಿ ಇರುತ್ತದೆ….

Read More

National Voters Day 2026: ಮತದಾನದ ಮೂಲಕ ಸಮರ್ಥ ನಾಯಕನನ್ನು ಆರಿಸುವ ಜವಾಬ್ದಾರಿ ದೇಶದ ಪ್ರಜೆಗಳ ಮೇಲಿದೆ – Kannada News | National Voters Day 2026: Know the history and significance of National Voters Day

ರಾಷ್ಟ್ರೀಯ ಮತದಾರರ ದಿನImage Credit source: Pinterest ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮತಪೆಟ್ಟಿಗೆಯಲ್ಲಿದೆ. ನಾಗರಿಕನು ಹಾಕುವಂತರ ಒಂದು ಮತದಿಂದ (Vote) ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಮತದಾನ ಸಂವಿಧಾನ ನಾಗರಿಕರಿಗೆ ನೀಡಿರುವ ಅತ್ಯಮೂಲ್ಯ ಹಕ್ಕಾಗಿದ್ದು, ಈ ಹಕ್ಕನ್ನು ಚಲಾಯಿಸುವ ಮೂಲಕ ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಮತದಾನ ಪ್ರಾಮುಖ್ಯತೆ ಹಾಗೂ ಮತದಾನವೆಂಬ ಅತ್ಯಮೂಲ್ಯ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾ ದಿನದಂದು ಅಂದರೆ ಜನವರಿ…

Read More