Headlines

IND A vs SL A: 2ನೇ ಅನಧಿಕೃತ ಟೆಸ್ಟ್; ಉಭಯ ತಂಡಗಳಿಗೆ ಮೊದಲ ದಿನದ ಗೌರವ – Kannada News | India A vs SL A: Sri Lanka A Strong on Day 1, Reaches 288/5 in Galle Test

ಭಾರತ ಎ ಮತ್ತು ಶ್ರೀಲಂಕಾ ಎ ನಡುವೆ ಗಾಲೆಯಲ್ಲಿ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲ ದಿನದಂದು, ಭಾರತದ ನಾಯಕ ಧ್ರುವ್ ಜುರೆಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ನಾಯಕ ಸಹನ್ ಅರಚ್ಚಿಗೆ ಅಜೇಯ 83 ರನ್​ಗಳ ಇನ್ನಿಂಗ್ಸ್ ಆಡಿದರೆ, ಉಳಿದ ಆಟಗಾರರೂ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇತ್ತ ಭಾರತದ ಪರ ಸರಾಂಶ್ ಜೈನ್ ಹಾಗೂ ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ ಒಂದು ವಿಕೆಟ್ ಪಡೆದಿದ್ದಾರೆ.

ಅರಚ್ಛಿಗೆ ಅಜೇಯ 83 ರನ್

ಶ್ರೀಲಂಕಾ ಎ ತಂಡಕ್ಕೆ ಉತ್ತಮ ಆರಂಭವೇ ಲಭಿಸಿತು. ಮೊದಲ ವಿಕೆಟ್​ಗೆ 53 ರನ್​ಗಳ ಜೊತೆಯಾಟ ನೀಡಿದರು. ಆದಾಗ್ಯೂ ಆರಂಭಿಕ ಆಟಗಾರರಿಬ್ಬರನ್ನೂ 86 ರನ್‌ಗಳಿಗೆ ಔಟ್ ಮಾಡುವ ಮೂಲಕ ಭಾರತೀಯ ಬೌಲರ್‌ಗಳು ಪುನರಾಗಮನ ಮಾಡಿದರು. ಯಶ್ ಠಾಕೂರ್ ಮತ್ತು ಗುರ್ನೂರ್ ಬ್ರಾರ್ ಆರಂಭಿಕರಿಬ್ಬರ ವಿಕೆಟ್ ಉರುಳಿಸಿದರು. 3ನೇ ಕ್ರಮಾಂಕದಲ್ಲಿ ಬಂದ ನುವಾನಿಂದು ಫೆರ್ನಾಂಡೊ 44 ರನ್ ಗಳಿಸಿ ಸರಾಂಶ್ ಜೈನ್ ಬೌಲಿಂಗ್‌ನಲ್ಲಿ ಔಟಾದರೆ, ಅಂಜಲಾ ಬಂಡಾರ ಹಾಗೂ ನಾಯಕ ಸಹನ್ ಅರಚ್ಛಿಗೆ 99 ರನ್‌ಗಳ ಉತ್ತಮ ಪಾಲುದಾರಿಕೆಯನ್ನು ಹಂಚಿಕೊಂಡರು. ಬಂಡಾರ42 ರನ್‌ಗಳಿಗೆ ಔಟ್ ಆಗುವ ಮೂಲಕ ಈ ಪಾಲುದಾರಿಕೆ ಮುರಿದುಬಿದ್ದಿತು. ದಿನದ ಅಂತ್ಯಕ್ಕೆ ಅರಚ್ಛಿಗೆ 83 ರನ್ ಮತ್ತು ಗುಣಶೇಖರ 6 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಆಕಿಬ್ ನಬಿಗೆ ವಿಕೆಟ್ ಸಿಗಲಿಲ್ಲ

ಮೊದಲ ಟೆಸ್ಟ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಆಕಿಬ್ ನಬಿ ದಾರ್ ಮೊದಲ ದಿನದಂದು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಮೊದಲ ದಿನ ನಾಲ್ಕು ಮೇಡನ್ ಸೇರಿದಂತೆ 15 ಓವರ್ ಬೌಲಿಂಗ್ ಮಾಡಿದ ನಬಿ 50 ರನ್ ಬಿಟ್ಟುಕೊಟ್ಟರು. ಉಳಿದಂತೆ ಸರಾಂಶ್ ಜೈನ್ 24 ಓವರ್‌ಗಳಲ್ಲಿ 77 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರೆ, ಜೀಶನ್ ಅನ್ಸಾರಿ 16 ಓವರ್‌ಗಳಲ್ಲಿ 64 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲಿಲ್ಲ. ಶೇಖ್ ರಶೀದ್ ಒಂದು ಓವರ್ ಬೌಲ್ ಮಾಡಿ 10 ರನ್ ಬಿಟ್ಟುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *