Category Archives: Blog

Your blog category

ಸೋತ RCB ತಂಡದ ಫೈನಲ್​ ಲೆಕ್ಕಾಚಾರ ಹೀಗಿದೆ – Kannada News | Rcbs final qualification scenarios in wpl 2026

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ ಸೀಸನ್-4 ರಲ್ಲಿ ಸತತ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಆರ್​ಸಿಬಿ ತಂಡದ ಫೈನಲ್​ ಲೆಕ್ಕಾಚಾರ ಕೂಡ ಬದಲಾಗಿದೆ.

Source link

ಅಮೆರಿಕದ ಹಲವೆಡೆ ಭಾರಿ ಹಿಮಪಾತ: 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು – Kannada News | US Winter Storm: 9000 Flights Cancelled, 15 States Declare Emergency as Extreme Cold Hits

ಡಲ್ಲಾಸ್ (ಎಪಿ), ಜನವರಿ 25: ಅಮೆರಿಕದ ಹಲವೆಡೆ ದಟ್ಟ ಮಂಜು ಮತ್ತು ಭಾರಿ ಹಿಮಪಾತ (Winter Storm) ಹಿನ್ನೆಲೆ  ನಿಗದಿಯಾಗಿದ್ದ 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ (Flights Cancelled). ಈ ಚಂಡಮಾರುತದಿಂದ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗುವ ನಿರೀಕ್ಷೆಯಿದೆ. ಅಲ್ಲದೆ, 15 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮಾತನಾಡಿ, ತಮ್ಮ ಆಡಳಿತವು ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಲು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (ಫೀಮಾ) ಸಂಪೂರ್ಣ ಸಿದ್ಧತೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮದುವೆ ಮನೆಗೆ ಸೂತಕ ತಂದ ದಾಳಿಕೋರ: ಆತ್ಮಾಹುತಿ ಬಾಂಬ್ ದಾಳಿಗೆ 7 ಜನ ಸಾವು

ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಉತ್ತರ ಟೆಕ್ಸಾಸ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಪೂರ್ತಿ ಹಿಮ ಹಾಗೂ ಮಳೆಯಾಗಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ತೀವ್ರ ಶೀತ ಅಲೆ ಅಪಾಯಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿದ್ದು, ಇದು ಸೋಮವಾರದವರೆಗೆ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಸಿದೆ. ಮುಂದಿನ ಕೆಲವು ರಾತ್ರಿಗಳಲ್ಲಿ ತಾಪಮಾನ ಮೈನಸ್ 24 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಸಿಎನ್‌ಎನ್ ವರದಿಯ ಪ್ರಕಾರ, ಅಮೆರಿಕದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭಾಗವು ಭಾರೀ ಹಿಮಪಾತದ ಚಂಡಮಾರುತ ಹಾಗೂ ತೀವ್ರ ಶೀತ ಅಲೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಈ ಚಂಡಮಾರುತದಿಂದ ಉಂಟಾಗುವ ಹಿಮವು ಟೆಕ್ಸಾಸ್‌ನಿಂದ ನ್ಯೂ ಇಂಗ್ಲೆಂಡ್‌ವರೆಗೆ 2,000 ಮೈಲುಗಳಿಗಿಂತ ಹೆಚ್ಚು ವ್ಯಾಪ್ತಿಯಲ್ಲಿ ಹರಡುವ ಸಾಧ್ಯತೆ ಇದೆ. ಈ ನಡುವೆ, ಶುಕ್ರವಾರ ಒಕ್ಲಹೋಮಾ ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಹಿಮಪಾತ ಹಾಗೂ ಮಳೆ ಸುರಿದಿದೆ.

ಇದನ್ನೂ ಓದಿ: ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ, ಇರಾನ್​ಗೆ ಹೊಸ ಎಚ್ಚರಿಕೆ ಕೊಟ್ಟ ಡೊನಾಲ್ಡ್​ ಟ್ರಂಪ್

ಚಂಡಮಾರುತ ಉತ್ತರ–ಪೂರ್ವ ದಿಕ್ಕಿನತ್ತ ಸಾಗಲಿದೆ. ಇದರ ಪರಿಣಾಮವಾಗಿ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ಹಾಗೂ ಬೋಸ್ಟನ್‌ವರೆಗೆ ವ್ಯಾಪಿಸಿರುವ ಪ್ರದೇಶಗಳಲ್ಲಿ ಸುಮಾರು ಒಂದು ಅಡಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಹಲವು ದಿನಗಳ ಕಾಲ ಮುಂದುವರಿದ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ, ಗ್ರಾಮೀಣ ಲೂಯಿಸ್ ಕೌಂಟಿ ಹಾಗೂ ಮೇಲಿನ ನ್ಯೂಯಾರ್ಕ್‌ನ ಇತರ ಭಾಗಗಳಲ್ಲಿ ಬೆಳಗಿನ ಜಾವ ತಾಪಮಾನ ಮೈನಸ್ 34 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿದಿದೆ ಎಂದು ಇಲಾಖೆ ತಿಳಿಸಿದೆ.

ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಖಚಿತ – Kannada News | India Playing XI For 3rd T20 Against New Zealand

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಇಂದು (ಜ.25) ನಡೆಯಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಏಕೆಂದರೆ ಕಳೆದ ಮ್ಯಾಚ್​ ವೇಳೆ ವಿಶ್ರಾಂತಿ ಪಡೆದಿದ್ದ ಜಸ್​ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಈ ಪಂದ್ಯವು ಸರಣಿ ನಿರ್ಣಾಯಕವಾಗಿರುವುದರಿಂದ ಬುಮ್ರಾ ಹರ್ಷಿತ್ ರಾಣಾ ಅಥವಾ ಅರ್ಷದೀಪ್ ಸಿಂಗ್ ಸ್ಥಾನದಲ್ಲಿ ಕಣಕ್ಕಿಳಿಯಬಹುದು.

ಅದರಂತೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟ್ ಬೀಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ.

ಇನ್ನು ಐದನೇ ಕ್ರಮಾಂಕದಲ್ಲಿ ಶಿವಂ ದುಬೆ ಕಣಕ್ಕಿಳಿದರೆ, ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ಏಳನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನುಳಿದಂತೆ ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಬೌಲರ್​​ಗಳಾಗಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿನಂತಿರಲಿದೆ…

  • ಅಭಿಷೇಕ್ ಶರ್ಮಾ
  • ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್
  • ಶಿವಂ ದುಬೆ
  • ಹಾರ್ದಿಕ್ ಪಾಂಡ್ಯ
  • ರಿಂಕು ಸಿಂಗ್
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ಕುಲ್ದೀಪ್ ಯಾದವ್
  • ವರುಣ್ ಚಕ್ರವರ್ತಿ.

ನಿರ್ಣಾಯಕ ಪಂದ್ಯ:

ಈ ಪಂದ್ಯವು ಸರಣಿ ನಿರ್ಣಾಯಕ. ಏಕೆಂದರೆ ಐದು ಪಂದ್ಯಗಳ ಮೊದಲೆರಡು ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ತಂಡವು ಗೆದ್ದರೆ ಸರಣಿಯನ್ನು ವಶಪಡಿಸಿಕೊಳ್ಳಬಹುದು. ಅತ್ತ ಸರಣಿ ಗೆಲುವಿನ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ನ್ಯೂಝಿಲೆಂಡ್ ತಂಡವು ಇಂದಿನ ಮ್ಯಾಚ್​ನಲ್ಲಿ ಗೆಲ್ಲಲೇಬೇಕು. ಹೀಗಾಗಿ ಈ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇದನ್ನೂ ಓದಿ: ನೇರವಾಗಿ ಫೈನಲ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಬಿಡದ ಮೈಕೊರೆಯುವ ಚಳಿ, ಒಣ ಹವೆ! – Kannada News | Bengaluru temperature: dry and cold weather all over karnataka, misty weather in Bengaluru

ರಾಜ್ಯದಲ್ಲಿ ಇಂದೂ ಬಿಡದ ಮೈಕೊರೆಯುವ ಚಳಿ!

ಬೆಂಗಳೂರು, ಜನವರಿ 25: ಇಂದೂ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ (Weather Forecast) ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದೆಲ್ಲೆಡೆ ಕಳೆದ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದ್ದು, ಇನ್ನೂ ನಾಲ್ಕು ದಿನ ಇದೇ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಮಂಜು

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏರಿಕೆ ಕಂಡ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; 2 ದಿನಕ್ಕೆ ಎಷ್ಟು ಕೋಟಿ? – Kannada News | Varun Dhawan starrer Border 2 Box Office Collection Day 2 report

ಸಿನಿಪ್ರಿಯರು ದೇಶಭಕ್ತಿ ಸಿನಿಮಾಗಳನ್ನು ಖಂಡಿತಾ ಇಷ್ಟಪಡುತ್ತಾರೆ. ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆದ ‘ಧುರಂಧರ್’ ಚಿತ್ರವೇ ಅದಕ್ಕೆ ಸಾಕ್ಷಿ. ಈಗ ‘ಬಾರ್ಡರ್ 2’ (Border 2) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿತು. ಎರಡನೇ ದಿನ ಕೂಡ ಒಳ್ಳೆಯ ಕಲೆಕ್ಷನ್ (Box Office Collection) ಆಗಿದೆ. ಮೂರೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ.

ಮೊದಲ ದಿನವಾದ ಜನವರಿ 23ರಂದು ‘ಬಾರ್ಡರ್ 2’ ಸಿನಿಮಾ 30 ಕೋಟಿ ರೂಪಾಯಿ ಗಳಿಸಿತು. 2ನೇ ದಿನ ಅಂದಾಜು 35 ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ಮಾಡಿದೆ. ಗಳಿಕೆಯಲ್ಲಿ ಕೊಂಚ ಏರಿಕೆ ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಭಾನುವಾರ (ಜನವರಿ 25) ಕೂಡ ಇದೇ ಪ್ರಮಾಣದಲ್ಲಿ ಕಲೆಕ್ಷನ್ ಆದರೆ 3 ದಿನದಲ್ಲಿ ಈ ಸಿನಿಮಾ ಸೆಂಚುರಿ ಬಾರಿಸಲಿದೆ.

1997ರಲ್ಲಿ ‘ಬಾರ್ಡರ್’ ಚಿತ್ರ ರಿಲೀಸ್ ಆಗಿತ್ತು. ಆ ಸಿನಿಮಾದ ಸೀಕ್ವೆಲ್ ಆಗಿ ಈಗ ‘ಬಾರ್ಡರ್ 2’ ತೆರೆಕಂಡಿದೆ. ಅನುರಾಗ್ ಸಿಂಗ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೊಸಾಂಜ್, ಅಹಾನ್ ಶೆಟ್ಟಿ, ಸೋನಂ ಭಾಜ್ವ, ಮೋನಾ ಸಿಂಗ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

1971ರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ಆಧರಿಸಿ ‘ಬಾರ್ಡರ್ 2’ ಸಿನಿಮಾ ಮಾಡಲಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಿರುವುದು ಪ್ಲಸ್ ಪಾಯಿಂಟ್. ಈ ಬಾರಿ ವೀಕೆಂಡ್ ಜೊತೆಗೆ ಗಣರಾಜ್ಯೋತ್ಸವ ಬಂದಿದೆ. ಅಂದರೆ, ಶನಿವಾರ, ಭಾನುವಾರ ಹಾಗೂ ಸೋಮವಾರ ಸತತ ರಜೆ ಸಿಕ್ಕಿದೆ. ಇದರಿಂದ ಚಿತ್ರತಂಡಕ್ಕೆ ಅನುಕೂಲ ಆಗುತ್ತದೆ.

ಇದನ್ನೂ ಓದಿ: Border 2 Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ‘ಬಾರ್ಡರ್ 2’ ಸಿನಿಮಾ

ಈ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆ ಆದಾಗ ವರುಣ್ ಧವನ್ ಅವರನ್ನು ಟ್ರೋಲ್ ಮಾಡಲಾಗಿತ್ತು. ಆದರೆ ವರುಣ್ ಧವನ್ ಅವರ ವೃತ್ತಿ ಜೀವನದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಬಾರ್ಡರ್ 2’ ಪಾತ್ರವಾಗಿದೆ. ಈ ಸಿನಿಮಾದ ಟೋಟಲ್ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 25 January: ಇಂದು ಈ ರಾಶಿಯವರ ಪ್ರೇಮಿಯಿಂದ ಮನ್ನಣೆ!

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 25 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಭಾನುವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ಸಪ್ತಮಿಯ ಜೊತೆಗೆ ರೇವತಿ ನಕ್ಷತ್ರ ಮತ್ತು ಸಿದ್ಧ ಯೋಗವನ್ನು ಹೊಂದಿದ್ದು, ರಥಸಪ್ತಮಿಯ ಮಹಾವಿಶೇಷ ದಿನವಾಗಿದೆ. ಭಾನುವಾರದಂದು ರಥಸಪ್ತಮಿ ಬಂದಿರುವುದು ಜಪ, ತಪ, ಧ್ಯಾನಗಳಿಗೆ ಅತ್ಯಂತ ಶುಭಕರವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ. ಆರೋಗ್ಯಕರ ಜೀವನಕ್ಕೆ ಭಾಸ್ಕರನು ನೀಡುವ ಶಕ್ತಿ ಮತ್ತು ಭಾನುವಾರದ ಮಹತ್ವವನ್ನು ವಿವರಿಸಿದ್ದಾರೆ. ಇಂದು ಬೆಳಗ್ಗೆ 12:39 ರಿಂದ ರಾತ್ರಿ 11:10 ರ ತನಕ ರಥಸಪ್ತಮಿ ಇರಲಿದ್ದು, ಎಕ್ಕದ ಏಳು ಎಲೆಗಳನ್ನು ಶರೀರದ ವಿವಿಧ ಭಾಗಗಳ ಮೇಲೆ ಇಟ್ಟು ಸ್ನಾನ ಮಾಡುವ ಪದ್ಧತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ಮೇಷದಿಂದ ಮೀನದವರೆಗೆ ದ್ವಾದಶ ರಾಶಿಗಳ ಆರ್ಥಿಕ, ವೈವಾಹಿಕ, ಉದ್ಯೋಗ, ಆರೋಗ್ಯ, ಹಾಗೂ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಮಂತ್ರಗಳ ಕುರಿತು ವಿವರವಾದ ಫಲಾಫಲಗಳನ್ನು ನೀಡಿದ್ದಾರೆ.

 

 

 

Source link

Daily Devotional: ಇಂದೇ ರಥಸಪ್ತಮಿ ಆಚರಣೆಯ ವಿಧಾನ ಹಾಗೂ ಮಹತ್ವ ಗೊತ್ತಾ? – Kannada News | Daily Devotional: Ratha Saptami: Significance, Rituals, and Benefits of Worshipping the Sun God

ಬೆಂಗಳೂರು, ಜನವರಿ 25: ರಥಸಪ್ತಮಿಯು ಹಿಂದೂ ಧರ್ಮದ ಮಹಾ ಪರ್ವ ಕಾಲಗಳಲ್ಲಿ ಒಂದಾಗಿದ್ದು, ಜಗದ ಚಕ್ಷು ಹಾಗೂ ಬ್ರಹ್ಮಾಂಡದ ಶಕ್ತಿ ಸೂರ್ಯ ಭಗವಾನರ ಜನ್ಮದಿನವಾಗಿ ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಏಳನೇ ದಿನವಾದ ಸಪ್ತಮಿಯಂದು ಈ ವಿಶೇಷ ಆಚರಣೆ ನಡೆಯುತ್ತದೆ. ಈ ದಿನ ಸೂರ್ಯನ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ರಥಸಪ್ತಮಿ ದಿನದಂದು ಆಚರಿಸಬೇಕಾದ ಪ್ರಮುಖ ವಿಧಾನಗಳಲ್ಲಿ ಏಳು ಎಕ್ಕದ ಎಲೆಗಳನ್ನು ತಲೆ, ಭುಜ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸೂರ್ಯನ ಸ್ಮರಣೆಯೊಂದಿಗೆ ಸ್ನಾನ ಮಾಡುವುದು ಮುಖ್ಯವಾಗಿದೆ. ಈ ಸ್ನಾನವು ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞೆ ಮತ್ತು ಧನಾತ್ಮಕ ಶಕ್ತಿಯನ್ನು ನೀಡಿ, ಮಾಟಮಂತ್ರ, ಕೆಟ್ಟ ಶಕ್ತಿಗಳನ್ನು ದೂರ ಮಾಡುತ್ತದೆ. ಜನ್ಮದ ಪಾಪಗಳನ್ನು ಕಳೆದು ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

 

Source link

ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು: ಬಿಗಿ ಪೊಲೀಸ್ ಬಂದೋಬಸ್ತ್, ಇ–ಪಾಸ್​ ವ್ಯವಸ್ಥೆ – Kannada News | Bengaluru: 77th Republic Day; Manekshaw Parade Ground Readies for Grand Celebrations

ಬೆಂಗಳೂರು, ಜನವರಿ 26: 77ನೇ ಗಣರಾಜ್ಯೋತ್ಸವಕ್ಕೆ (Republic Day) ಕ್ಷಣಗಣನೆ ಶುರುವಾಗಿದೆ. ಐತಿಹಾಸಿಕ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ (Manekshaw Parade ground) ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂಬಂಧ ತಾಲೀಮು ಕೂಡ ನಡೆದಿದೆ.

ಜನವರಿ 26ರಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವನ್ನಾಗಿ ಸ್ಮರಿಸುತ್ತೇವೆ. ಇದರ ಅಂಗವಾಗಿ ಇಡೀ ದೇಶಾದ್ಯಂತ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶವು ಗಣರಾಜ್ಯವಾಗಿರುವುದನ್ನು ಆಚರಿಸುವುದು, ಅಂದರೆ ಜನರಿಂದಲೇ ಆಡಳಿತ ನಡೆಯುವ ವ್ಯವಸ್ಥೆ ದೇಶದಲ್ಲಿ ಜಾರಿಯಾಗಿ 77 ವರ್ಷ ಪೂರೈಸಿದೆ. ಹೀಗಾಗಿ ಜನವರಿ 26 ರಂದು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದು, ಇದಕ್ಕಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವ ಪೆರೇಡ್‌ಗೆ ಭಾರೀ ಭದ್ರತೆ; ಕಮಿಷನರ್ ಸಿಮಂತ್ ಕುಮಾರ್ ಸಿಂಗ್ ಹೇಳಿದ್ದೇನು?

ಗಣರಾಜ್ಯೋತ್ಸವ ದಿನ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದು, ಈ ಕುರಿತ ಪೂರ್ವಭಾವಿ ಪ್ರದರ್ಶನ ನಿನ್ನೆ ಆಯೋಜಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಬೆಂಗಳೂರು ನಗರ ಪೊಲೀಸ್  ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಂತಿಮ ಹಂತದ ಸಿದ್ಧತೆಗಳನ್ನ ಪರಿಶೀಲಿಸಿದ್ದಾರೆ.

ಇನ್ನು ಗಣರಾಜ್ಯೋತ್ಸವದ ದಿನದಂದು ಆಫ್ ಲೈನ್ ಹಾಗೂ ಆನ್ ಲೈನ್​ನಲ್ಲಿ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಪರೇಡ್ ಮೈದಾನದೊಳಗೆ ಪ್ರವೇಶ ನೀಡಲಾಗುವುದು. ಹಾಗೆಯೇ ಬೆಳಗ್ಗೆ 8.30 ರಿಂದ 10.30ರವರೆಗೂ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ.

ಬಿಗಿ ಪೊಲೀಸ್ ಬಂದೋಬಸ್ತ್

ಗಣರಾಜ್ಯೋತ್ಸವ ದಿನದಂದು ಬಂದೋಬಸ್ತ್​​ಗಾಗಿ 2000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಅಧಿಕಾರಿಗಳಿಗೆ 2000, ವಿವಿಐಪಿಗೆ 3000 ಪಾಸ್ ನೀಡಲಾಗಿದೆ. ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ಮಾಡಲಿದ್ದಾರೆ. 2000 ಇ–ಪಾಸ್ ವಿತರಣೆ ಮಾಡಲಾಗಿದೆ. ಹಾಗೆಯೇ ಭದ್ರತೆಗಾಗಿ 100 ಸಿಸಿಟಿವಿ, ಬ್ಯಾಗೇಜ್ ಸ್ಕ್ಯಾನರ್ 4 ಅಳವಡಿಕೆ ಮಾಡಲಾಗಿದೆ. ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್‌ ನಿಲ್ದಾಣದವರೆಗೂ ನೋ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ

ಒಟ್ಟಾರೆ 77ನೇ ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದ್ದು, ಬೆಳಗ್ಗೆ 8 ಗಂಟೆಯೊಳಗೆ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವವರು ಹಾಜರಿರಬೇಕೆಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. ಇನ್ನು ಧ್ವಜಾರೋಹಣದ ಬಳಿಕ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ.

ವರದಿ: ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Horoscope Today 25 January : ಇಂದು ಈ ರಾಶಿಯವರ ನಂಬಿಕೆ ಸುಳ್ಳಾಗಲಿದೆ

ಮೇಷ ರಾಶಿ:

ನಿಮಗೆ ಸೂಚಿತ ದಿಕ್ಕಿನಲ್ಲಿ ತೆರಳಿ ಕಾರ್ಯವನ್ನು ಸಾಧಿಸಿಕೊಳ್ಳಿ. ಹೊಸ ಅನ್ವೇಷಣೆಯ ಬಗ್ಗೆ ನಿಮಗೆ ಕುತೂಹಲ ಹೆಚ್ಚುವುದು. ಸುಮ್ಮನೇ ಒತ್ತಡವಿದ್ದಂತೆ ತೋರಿಸುವಿರಿ. ಅಪನಂಬಿಕೆಯಿಂದ ಮನಸ್ಸು ಕುಗ್ಗುವುದು. ಯಾರ ಮೇಲೂ ನಂಬಿಕೆ ಇಡುವುದು ಕಷ್ಟವಾದೀತು. ಆಪತ್ತಿನಿಂದ ಜಾರಿಕೊಳ್ಳುವ ಮಾರ್ಗ ನಿಮಗೆ ತಿಳಿಯುವುದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಅನ್ಯರ ಮೂಲಕ ನಿಮ್ಮ ಕಾರ್ಯವು ಆಗಲಿದೆ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವುದು ಬೇಡ.

ವೃಷಭ ರಾಶಿ:

ಮೌನದಿಂದ ಇದ್ದರೆ ಯಾವ ಸಂಗತಿಯೂ ನಿಮ್ಮ ಬಳಿ ಬಾರದು. ಸಂಗಾತಿಯನ್ನು ನೀವು ಸರಿಯಾಗಿ ತಿಳಿದುಕೊಳ್ಳಲಾಗದು. ನಿಮ್ಮ ಕೆಲವು ನಿರೀಕ್ಷೆಯು ಹುಸಿಯಾಗಬಹುದು. ಧನಸಂಪಾದನೆಯ ಚಿಂತೆ ನಿಮಗೆ ಕಾಡಲು ಆರಂಭವಾಗಲಿದೆ. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಬಂಧುಗಳಿಂದ ಅವಶ್ಯಕವಾದ ಸಂಪತ್ತನ್ನು ನಿರೀಕ್ಷಿಸುವಿರಿ. ಸಣ್ಣ ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿ. ಓದುವಿಕೆಯಲ್ಲಿ ಆಸಕ್ತಿಯು ಹೆಚ್ಚಾಗಬಹುದು.

ಮಿಥುನ ರಾಶಿ:

ನಕಾರಾತ್ಮಕ ಅಂಶಗಳನ್ನು ಬಿಟ್ಟು ಒಳ್ಳೆಯದರ ಕಡೆ ಯೋಚಿಸಿ. ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ಇರುವ ಸಾಲವನ್ನು ತೀರಿಸಿಕೊಳ್ಳಲು ಬೇಕಾದ ಯೋಜನೆ ಮಾಡಿ. ವಿವಾಹ ಸಂಬಂಧದಲ್ಲಿ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ ನಡೆಸಲು ಇಷ್ಟಪಡುವಿರಿ. ಯಾರ ಜೊತೆಗೂ ಪಕ್ಷಪಾತವನ್ನು ಇಟ್ಟುಕೊಳ್ಳುವುದು ಬೇಡ.

ಕರ್ಕಾಟಕ ರಾಶಿ:

ಸಹೋದರರ ಹಣಕಾಸಿಗೆ ಕಲಹವಾಗಬಹುದು. ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುವರು. ಕೂಡಿಬರುವ ವಿವಾಹಕಾಲವನ್ನು ಅಲ್ಲಗಳೆಯುವುದು ಬೇಡ. ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಸಮಯಕ್ಕಾಗಿ ಕಾದು ನೋಡಿ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ.

ಸಿಂಹ ರಾಶಿ:

ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಸಿಗಲಿದೆ. ಹೊಸ ಗೃಹವನ್ನು ಖರೀದಿಸುವ ವಿಚಾರವನ್ನು ದಂಪತಿಗಳು ಚರ್ಚಿಸುವರು. ಮಾತಿನಿಂದ ನಿಮಗೆ ಆದಾಯ ಬರಬಹುದು. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ ನಿಮಗೆ ಅಸಮಾಧಾನ ಇರಲಿದೆ. ಅವಿವಾಹಿತರು ವಿವಾಹದ ಬಯಕೆಯನ್ನು ತಾಯಿಯ ಜೊತೆ ಹಂಚಿಕೊಳ್ಳುವರು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆಯನ್ನು ನೀಡಿ. ಎಲ್ಲರೆದುರು ಸಭ್ಯರಂತೆ ತೋರುವಿರಿ.

ಕನ್ಯಾ ರಾಶಿ:

ಅತಿಯಾದ ಕೋಪವನ್ನು ನೀವು ಯಾವ ಮಾರ್ಗದಿಂದಲಾದರೂ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹತಾಶೆಯಿಂದ ಅಧ್ಯಾತ್ಮದ ಕಡೆ ಒಲವು ಹೆಚ್ಚಬಹುದು. ಎಲ್ಲ ಕೆಲಸದಲ್ಲಿಯೂ ನಿಮ್ಮ ನಿರೀಕ್ಷೆಯ ಸುಳ್ಳಾಗಿ ಎಲ್ಲರಿಂದ ಹೇಳಿಸಿಕೊಳ್ಳಬೇಕಾಗುವುದು. ಆರೋಗ್ಯದ ಬಗ್ಗೆ ಅತಿಯಾದ ಚಿಂತೆಯಿಂದ ಮತ್ತಷ್ಟು ಹಾಳುಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು. ಹಿರಿಯರ ಉಪದೇಶದಲ್ಲಿ ಆಸಕ್ತಿ ಕಡಿಮೆ ಆಗುವುದು. ಸ್ಥಿರಾಸ್ತಿಯ ವಿಚಾರವಾಗಿ ನೆರೆಯವರ ಜೊತೆ ಕಲಹವಾಗಬಹುದು. ಮಾಡಿಕೊಂಡ ಸಾಲವನ್ನು ತೀರಿಸಲು ಸ್ನೇಹಿರಿಂದ ಸಹಾಯ.

ತುಲಾ ರಾಶಿ:

ಹಣವನ್ನು ಅಲ್ಪ ಹೂಡಿಕೆ ಮಾಡಿ ಪರೀಕ್ಷಿಸಿಕೊಳ್ಳಿ. ಸಂತೋಷದ ಸುದ್ದಿಯನ್ನು ಆನಂದಿಸುವ ಮನಃಸ್ಥಿತಿ ಇಂದು ನಿಮ್ಮಲ್ಲಿ ಇರದು. ಸದಾ ಅವಕಾಶಗಳನ್ನು ಹುಡುಕುತ್ತಲೇ ಇರುವಿರಿ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ಉನ್ನತ ಸ್ಥಾನದ ನಿರೀಕ್ಷೆಯುಳ್ಳವರು ವಿರುದ್ಧ ದಿಕ್ಕಿನಲ್ಲಿ ಹೋದರೆ ಆಗದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ.

ವೃಶ್ಚಿಕ ರಾಶಿ:

ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವು ಬರಬಹುದು. ಕುಟುಂಬದ ಜೊತೆ ಸುಳ್ಳು ಹೇಳಿ, ನಿಮ್ಮ ನಿಜವಾದ ಕಾರ್ಯವನ್ನು ಮುಚ್ಚಿಡುವಿರಿ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವಿರಿ. ಯಾರಿಗೂ ನೋವಾಗದಂತೆ ಎಚ್ಚರಿಕೆಯಿಂದ ಮುನ್ನಡೆಯುವುದು ಶ್ರೇಯಸ್ಕರ. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ವಾಹನ ಸವಾರಿಯನ್ನು ಬಹಳ ಉತ್ಸಾಹದಿಂದ ಮಾಡುವಿರಿ.

ಧನು ರಾಶಿ:

ವ್ಯಾವಹಾರಿಕ ಜಾಣ್ಮೆಯನ್ನು ನೀವು ಇಟ್ಟುಕೊಂಡು ಲಾಭವನ್ನು ಪಡೆಯುವಿರಿ. ನಿಮಗೆ ವಿದ್ಯೆಯನ್ನು ನೀಡಿದವರು ಅನೇಕ ವರ್ಷಗಳ ಅನಂತರ ಸಿಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ನಿಮ್ಮ ಶ್ರಮ ಬೇಕಾಗುವುದು. ನಿಮ್ಮ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗಬಹುದು. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು. ಇಂದು ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಪಡೆಯುವಿರಿ.

ಮಕರ ರಾಶಿ:

ನಿಮ್ಮ ಕೆಲಸದಿಂದ ಉತ್ತಮ ಹೆಸರು ಕುಟುಂಬಕ್ಕೆ ಸಿಗುವುದು. ನೀವೇ ಕೊಟ್ಟ ಹಣವನ್ನು ಪುನಃ ಕೇಳಲು ಮುಜುಗರವಾದೀತು. ಸಾಲದ ಬಗ್ಗೆ ನಿಮ್ಮನ್ನು ಮತ್ತೆ ಮತ್ತೆ ಎಚ್ಚರಿಸಬೇಕಾಗುವುದು. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಕೇಳಿಬರಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಭಯವಾಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮ ಸಿಗದು.

ಕುಂಭ ರಾಶಿ:

ನಿಮ್ಮೆದುರೇ ನಿಮ್ಮ ಸಹೋದರರನ್ನು ಹೊಗಳುವುದು ನಿಮಗೆ ಆಗದು. ಯಾರ ಜೊತೆಗಾದರೂ ವೈಮನಸ್ಯವಿದ್ದರೆ ಕುಳಿತು ಮಾತನಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ನಿಮಗೆ ನಿಮ್ಮವರ ಭಾವವನ್ನು ಸರಿಯಾಗಿ ಅಂದಾಜು ಮಾಡಲಾಗದು. ಹೊಸ ಕಾರ್ಯವನ್ನು ಆರಂಭಿಸಲು ವಿಘ್ನ ಬಾರದೇ ಇದ್ದರೆ, ಮುಂದೆ ಅದು ಬರುವ ಸೂಚನೆಯಾಗಲಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಕರೆ ಬರಬಹುದು. ನಿರಾಕರಿಸುವುದು ಉತ್ತಮ. ಸ್ನೇಹವು ಸಡಿಲವಾಗುವ ಸಾಧ್ಯತೆ ಇದೆ.

ಮೀನ ರಾಶಿ:

ವ್ಯಾಪಾರವು ಕೆಲವು ಆಕಸ್ಮಿಕ ತಿರುವನ್ನು ಪಡೆಯಬಹುದು. ಆತ್ಮೀಯರ ಬಗ್ಗೆ ಕಾಳಜಿ ಹೆಚ್ಚಿರುವುದು. ಚರಾಸ್ತಿಯ ನಷ್ಟಕ್ಕೆ ನೀವೇ ಕಾರಣವಾಗುವಿರಿ. ಆಸ್ತಿಯ ಕಡತಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ. ವೃತ್ತಿಯ ಸ್ಥಳದಲ್ಲಿ ಬದಲಾವಣೆಯನ್ನು ಬಯಸುವಿರಿ. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ.

ಜನವರಿ 25,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಭಾನು ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸಿದ್ಧ, ಕರಣ : ವಣಿಜ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 19 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:54 – 18-19 ಯಮಗಂಡ ಕಾಲ 12:37 – 14:02, ಗುಳಿಕ ಕಾಲ 15:28 – 16:54

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 24ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ದಿನವಿಡೀ ಪ್ರೊಡಕ್ಟಿವ್ ಆದಂಥ ಕೆಲಸ- ಕಾರ್ಯ, ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತೀರಿ. ಸಂಬಂಧ- ಸ್ನೇಹದಲ್ಲಿ ಈ ಹಿಂದೆ ಯಾರಿಗೆ ಸಮಯ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ನಿಮಗೆ ಅನಿಸಿರುತ್ತದೋ ಅಂಥವರ ಜತೆಗೆ ಕಾಲ ಕಳೆಯಲಿದ್ದೀರಿ. ಕೃಷಿ ಉತ್ಪನ್ನಗಳ ಮಾರ್ಕೆಟಿಂಗ್ ನಲ್ಲಿ ತೊಡಗಿಕೊಂಡಿದ್ದೀರಿ ಅಂತಾದಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಕೃಷಿಕರು ಕೆಲವು ಯಂತ್ರ- ಉಪಕರಣಗಳ ಖರೀದಿಗಾಗಿ ವಿಚಾರಣೆ ನಡೆಸಲಿದ್ದೀರಿ, ಅದಕ್ಕಾಗಿ ಕೊಟೇಷನ್ ಪಡೆದುಕೊಳ್ಳುವ ಸಾಧ್ಯತೆ ಸಹ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಕಾರ್ಯ ವೈಖರಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಕೆಲಸ ಪೂರ್ತಿ ಆಗುವ ಮುನ್ನ ಅದರ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಬಾರದು ಎಂಬ ತೀರ್ಮಾನ ಕೈಗೊಳ್ಳಲಿದ್ದೀರಿ. ಯಾವುದಕ್ಕೂ ಇರಲಿ ಎಂದುಕೊಂಡು, ಕಳೆದ ಕೆಲ ಸಮಯದಿಂದ ಕೂಡಿಡುತ್ತಾ ಬಂದಿದ್ದ ಆಪತ್ ಕಾಲದ ಮೊತ್ತವೊಂದು ಈ ದಿನ ಸಹಾಯಕ್ಕೆ ಬರಲಿದೆ. ತಕ್ಷಣಕ್ಕೆ ಹೊಂದಾಣಿಕೆ ಮಾಡಬೇಕು ಎಂಬಂಥ ವಸ್ತು, ಹಣ ಅಥವಾ ವ್ಯಕ್ತಿಗಳನ್ನು ಶ್ರದ್ಧೆಯಿಂದ ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ತಲೆಮಾರಿನ ಅಂತರ, ಅಂದರೆ ಜನರೇಷನ್ ಗ್ಯಾಪ್ ಅಂತಾರಲ್ಲ ಈ ದಿನ ನಿಮ್ಮ ಅನುಭವಕ್ಕೆ ಬರಲಿದೆ. ಹಣಕಾಸಿನ ನಿರ್ಧಾರದ ವಿಷಯಕ್ಕೆ ಯಾರಿಗೂ ಸಲಹೆ ನೀಡುವುದಕ್ಕೋ ಅಥವಾ ಹೀಗೇ ನಡೆದುಕೊಳ್ಳಿ ಎನ್ನುವುದಕ್ಕೋ ಹೋಗಬೇಡಿ. ನಿಮ್ಮ ಸಲಹೆಗಳು ಉಪಯುಕ್ತ ಅಲ್ಲ ಎಂಬುದನ್ನು ನೇರವಾಗಿಯೇ ಹೇಳಿ, ಅದನ್ನು ಸಾಬೀತು ಸಹ ಮಾಡಿಬಿಡುವ ಅಪಾಯ ಇದೆ. ಹೀಗಾದಲ್ಲಿ ನಿಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಸೀಸನಲ್ ವ್ಯವಹಾರದ ಅವಕಾಶವೊಂದು ದೊರೆಯಲಿದೆ. ಒಂದೆರಡು ತಿಂಗಳ ಮಟ್ಟಿಗೆ ಮಾತ್ರ ಆದಾಯ ತಂದುಕೊಡುವಂಥವು.

ಲೇಖನ- ಸ್ವಾತಿ ಎನ್.ಕೆ.

Source link