ಏಕಾಂಗಿಯಾಗಿ ಅರ್ಧದಷ್ಟು ತಂಡವನ್ನು ಪೆವಿಲಿಯನ್ಗಟ್ಟಿದ ಮೊಹಮ್ಮದ್ ಶಮಿ
2025-26ರ ರಣಜಿ ಟ್ರೋಫಿಯ ಎಲೈಟ್ ಗ್ರೂಪ್‌ನಲ್ಲಿ ಬಂಗಾಳ ಹಾಗೂ ಸರ್ವಿಸಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ತಮ್ಮ ಅತ್ಯುತ್ತಮ ಬೌಲಿಂಗ್ ದಾಳಿಯ ಮೂಲಕ ಬಂಗಾಳ ತಂಡಕ್ಕೆ ನೆರವಾಗಿದ್ದಾರೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರಕ ದಾಳಿ ನಡೆಸಿದ ಶಮಿ ಏಕಾಂಗಿಯಾಗಿ ಎದುರಾಳಿ ತಂಡದ ಐವರು ಆಟಗಾರರನ್ನು ಔಟ್ ಮಾಡಿದರು. ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬಂಗಾಳ ತಂಡ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ…