Headlines

RailTel Recruitment 2026: ಬೆಂಗಳೂರಿನಲ್ಲಿ ಬಂಪರ್ ಉದ್ಯೋಗವಕಾಶ; ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬೆಂಗಳೂರಿನಲ್ಲಿ ಬಂಪರ್ ಉದ್ಯೋಗವಕಾಶ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಒಳಪಡುವ ನವರತ್ನ ಸಾರ್ವಜನಿಕ ವಲಯದ ಉದ್ಯಮವಾದ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (RailTel) ಪ್ರಸಕ್ತ ಸಾಲಿನ ಬೃಹತ್ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ವಲಯದ ಅತ್ಯಂತ ಮಹತ್ವಾಕಾಂಕ್ಷಿ KSWAN ಯೋಜನೆಗಾಗಿ ಅನುಭವ ಹೊಂದಿರುವ ತಾಂತ್ರಿಕ ತಜ್ಞರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ…

Read More

ಸತೀಶ್ ಜಾರಕಿಹೊಳಿಗೆ ಕೊನೆಗೂ ಬಂತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್!

ಬೆಂಗಳೂರು, ಮೇ 29: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈ ಕಮಾಂಡ್ ನಾಯಕರು ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸತೀಶ್ ಜಾರಕಿಹೊಳಿಗೆ ಕರೆ ಮಾಡಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಒಂದು ಪ್ರಮುಖ ಷರತ್ತು ವಿಧಿಸಿದ್ದಾರೆ. ಅವರು ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಲು ಇಚ್ಛಿಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ…

Read More

AB de Villiers: ವೈಭವ್​ನ ನೋಡಿದಾಗ ನನಗೆ ಆ ಬ್ಯಾಟರ್​ ನೆನಪಾಗ್ತಾರೆ!

ವಂಡರ್ ಕಿಡ್ ಖ್ಯಾತಿಯ ವೈಭವ್ ಸೂರ್ಯವಂಶಿಯ (Vaibhav Sooryavanshi) ಆರ್ಭಟ ಮುಂದುವರೆದಿದೆ. ಯುವ ದಾಂಡಿಗನ ಈ ಆರ್ಭಟವೇ ಈಗ ಕ್ರಿಕೆಟ್ ಲೋಕದ ಹಾಟ್ ಟಾಪಿಕ್. ಈ ಟಾಪಿಕ್ ಕುರಿತಾಗಿ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಕೂಡ ಮಾತನಾಡಿದ್ದಾರೆ. ಖಾಸಗಿ ಲೈವ್ ಚರ್ಚೆಯಲ್ಲಿ ಕಾಣಿಸಿಕೊಂಡ ಎಬಿಡಿ, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್​ ಅನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. “ನನಗೆ ವೈಭವ್ ಅತ್ಯಂತ ಪ್ರಭಾವಶಾಲಿ ಎಂದು ಅನಿಸಿದ್ದು ಆತನ ಸಿದ್ಧತೆ. ಅಂದರೆ 15ನೇ ವಯಸ್ಸಿನಲ್ಲಿರುವ ಆತನಿಗೆ ಇರುವುದು ಅದ್ಭುತ ಸ್ಪಷ್ಟತೆ….

Read More

‘ಟಾಕ್ಸಿಕ್’ ಚಿತ್ರವನ್ನು ಹಾಡಿಹೊಗಳಿದ ಕಿಯಾರಾ ಅಡ್ವಾಣಿ; ಹೆಚ್ಚಿತು ನಿರೀಕ್ಷೆ

ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ (Toxic) ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಆದರೆ, ಇತ್ತೀಚೆಗೆ ಈ ಸಿನಿಮಾದ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದಕ್ಕೆ ನೆಗೆಟಿವ್ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಗೊಂದಲಗಳ ನಡುವೆ, ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಅನುಭವವನ್ನು ಹಂಚಿಕೊಳ್ಳುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ…

Read More

ಸತತ ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆಗೆ ಬಾಲಿವುಡ್​​ನಲ್ಲಿ ಮೂಡಿದೆ ಆಶಾಕಿರಣ

ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಲಕ್ಕಿ ಸುಂದರಿ ಎಂದೇ ಹೆಸರಾಗಿದ್ದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಅವರ ಸುವರ್ಣ ಯುಗಕ್ಕೆ ಸದ್ಯ ಗ್ರಹಣ ಹಿಡಿದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಟಿಯ ಸಿನಿಮಾಗಳು ದಕ್ಷಿಣ ಹಾಗೂ ಬಾಲಿವುಡ್ (Bollywood) ಎರಡೂ ಕಡೆ ಬ್ಯಾಕ್-ಟು-ಬ್ಯಾಕ್ ಸೋಲನ್ನು ಕಾಣುತ್ತಿವೆ. ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ಗಳ ಜೊತೆ ಬಣ್ಣ ಹಚ್ಚಿದರೂ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಮಾತ್ರ ಪೂಜಾ ಅವರಿಗೆ ಮರೀಚಿಕೆಯಾಗಿದೆ. ಹಿಂದಿ ಸಿನಿಮಾ ಮೂಲಕ ಅವರು ಗೆಲುವಿನ ಭರವಸೆಯಲ್ಲಿದ್ದಾರೆ. 2021ರ…

Read More

Video: ಕಳ್ಳ ಅನ್ಕೊಂಡ್ರಾ, ಮೆಡಿಕಲ್ ಶಾಪ್ ಕ್ಲೋಸ್ ಆಗುವ ವೇಳೆ ಒಳಗೆ ನುಗ್ಗಿದ ವ್ಯಕ್ತಿ

ವಿಯೆಟ್ನಾಂ, ಮೇ 29: ವಿಯೆಟ್ನಾಂನಲ್ಲಿ ತಡರಾತ್ರಿ ಮೆಡಿಕಲ್ ಶಾಪ್ ಒಂದನ್ನು ಮುಚ್ಚುವ ಸಮಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಅಂಗಡಿಯ ಅರ್ಧ ಮುಚ್ಚಿದ್ದ ಶಟರ್ ಒಳಗೆ ವ್ಯಕ್ತಿಯೊಬ್ಬ ಓಡಿ ಬಂದಿರುವ ವಿಡಿಯೋ ವೈರಲ್ ಆಗಿದೆ. ಮೆಡಿಕಲ್ ಶಾಪ್​ನಲ್ಲಿದ್ದ ಇಬ್ಬರು ಮಹಿಳೆಯರು ಮೊದಲು ಆತ ಕಳ್ಳನೆಂದು ಭಾವಿಸಿದ್ದರು. ಆದರೆ ಅವರಿಗೆ ಬೇಕಾದ ವಸ್ತುವನ್ನು ಕೊಂಡು ಹಣ ಕೊಟ್ಟಿದ್ದನ್ನು ನೋಡಿ ನಿರಾಳರಾಗಿದ್ದಾರೆ. ಮನೆಯಲ್ಲಿದ್ದ ಆತನ ಪತ್ನಿ ಕೆಲವು ವಸ್ತುಗಳನ್ನು ತರಲು ಮೆಡಿಕಲ್ ಶಾಪ್‌ಗೆ ಕಳುಹಿಸಿದ್ದರು. ಒಂದು ವೇಳೆ ಅಂಗಡಿ ಮುಚ್ಚಿ, ಆತ…

Read More

ಗುಪ್ತವಾಗಿ ಬಂದು ಧ್ಯಾನ ಮಾಡಿದ್ದ ಡಿಕೆ ಶಿವಕುಮಾರ್​ಗೆ 40 ದಿನದಲ್ಲೇ ಸಿಕ್ಕಿತು ಸಿಎಂ ಕುರ್ಚಿ; ಇದು ಗದಗದ ಪುಣ್ಯಕ್ಷೇತ್ರದ ಪವಾಡ

ಡಿ.ಕೆ. ಶಿವಕುಮಾರ್, ಮುಕ್ತಿಮಂದಿರ ಲಕ್ಷ್ಮೇಶ್ವರImage Credit source: Tv9 kannada ಲಕ್ಷ್ಮೇಶ್ವರ, ಮೇ.29: ಗದಗದ “ಈ ಜಾಗಕ್ಕೆ ಇರುವ ಶಕ್ತಿ ಮತ್ತು ಮಹಿಮೆಯ ಬಗ್ಗೆ ನಾನು ನಿಮಗೆ ಬಿಡಿಸಿ ಹೇಳಲ್ಲ…” ಎಂದು ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದ ಮಾತುಗಳು ಈಗ ಅಕ್ಷರಶಃ ನಿಜವಾಗಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ‘ಮುಕ್ತಿಮಂದಿರ’ಕ್ಕೆ ಭೇಟಿ ನೀಡಿ ವಿಶೇಷ ಸಂಕಲ್ಪ ಮಾಡಿದ ಕೇವಲ 40 ದಿನಗಳ ಒಳಗಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ…

Read More

ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು, ಮೇ 29: ಕರ್ನಾಟಕದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಎಂ ಸ್ಥಾನದ ಬದಲಾವಣೆಯ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ನಿನ್ನೆ (ಮೇ 28) ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದೀಗ ಸಿದ್ದರಾಮಯ್ಯ ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ನಿನ್ನೆ ಬೆಳಗ್ಗೆ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಕೂಟ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ತದನಂತರ ಲೋಕಭವನಕ್ಕೆ…

Read More

DK Shivakumar Oath Taking Date: ಡಿಕೆ ಶಿವಕುಮಾರ್ ಪ್ರಮಾಣವಚನ ಯಾವಾಗ, ಎಲ್ಲಿ? ಇಂದೇ ಫೈನಲ್ ಆಗಲಿದೆ ದಿನಾಂಕ

ಬೆಂಗಳೂರು, ಮೇ 29: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಬೆಳಗ್ಗೆ ಅಂಗೀಕರಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಹುತೇಕ ಕೊನೆಯ ಹಂತಕ್ಕೆ ಬಂದಂತಾಗಿದೆ. ನೂತನ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷವು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಗುರುವಾರದ ಉಪಹಾರ ಸಭೆಯಲ್ಲಿ, ಡಿಕೆ ಶಿವಕುಮಾರ್ (DK Shivakumar) ಮುಂದಿನ ಸಿಎಂ ಆಗಲಿದ್ದಾರೆ ಎಂಬುದಾಗಿ ಸಿದ್ದರಾಮಯ್ಯ ಸಚಿವರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ…

Read More

‘ಚಾರ್ಲಿ ಸಿನಿಮಾ ನನಗೆ ತುಂಬಾ ಇಷ್ಟ’; ಮನಬಿಚ್ಚಿ ಮಾತನಾಡಿದ ಪಾರ್ವತಿ

ನಟಿ ಪಾರ್ವತಿ ಅವರು ಇಂಟರ್ವ್ಯೂ ಒಂದರಲ್ಲಿ ಮಾತನಾಡುತ್ತಾ, ತಮ್ಮ ಸಿನಿಮಾಗಳಲ್ಲೇ ತಮಗೆ ಅತ್ಯಂತ ಹತ್ತಿರವಾದ ಕ್ಯಾರೆಕ್ಟರ್ ಎಂದರೆ ಅದು ‘ಚಾರ್ಲಿ’ ಚಿತ್ರದ ಟೆಸ್ಸಾ ಎಂದು ಹೇಳಿದ್ದಾರೆ. ‘ಒಂದು ವಾರದ ಮಟ್ಟಿಗೆ ನಿಮ್ಮ ಸಿನಿಮಾದ ಯಾವ ಪಾತ್ರದ ಬಟ್ಟೆಗಳ ಜೊತೆ ನೀವು ಅದಲು-ಬದಲು ಮಾಡಿಕೊಳ್ಳಲು ಇಷ್ಟಪಡುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಕ್ಷಣವೇ ಟೆಸ್ಸಾ ಹೆಸರನ್ನು ತೆಗೆದುಕೊಂಡಿದ್ದಾರೆ. ಈ ಪಾತ್ರವು ತಮ್ಮದೇ ಆದ ಸ್ವಂತ ಸ್ಟೈಲ್ ಅನ್ನು ಕದ್ದಂತಿದೆ ಎಂದು ಅವರು ತಮಾಷೆಯಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಪಾತ್ರದ ಮೇಲಿನ…

Read More