ಬಾಲ್ಕನಿಯಲ್ಲಿರುವ ಸಣ್ಣ ಜಾಗದಲ್ಲಿಯೂ ಈ ಹಣ್ಣುಗಳನ್ನು ಸುಲಭವಾಗಿ ಬೆಳೆಯಬಹುದು
ಫ್ಲಾಟ್ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವವರು ತಮ್ಮ ಬಾಲ್ಕನಿಗಳಲ್ಲಿ (balcony) ಬಗೆಬಗೆಯ ಹೂವಿನ ಗಿಡಗಳು, ಟೊಮೆಟೊ ಸೇರಿದಂತೆ ಒಂದಷ್ಟು ತರಕಾರಿಗಳ ಗಿಡಗಳನ್ನು ಬೆಳೆಯುತ್ತಾರೆ. ಆದರೆ ಬಾಲ್ಕನಿಯಲ್ಲಿರುವ ಪುಟ್ಟ ಜಾಗದಲ್ಲಿ ಹಣ್ಣುಗಳನ್ನು ಬೆಳೆಯಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಏನ್ ಗೊತ್ತಾ ಬಾಲ್ಕನಿ ಮತ್ತು ಟೆರೇಸ್ನಲ್ಲಿರುವ ಸ್ವಲ್ಪ ಜಾಗದಲ್ಲಿ ಹಣ್ಣುಗಳನ್ನೂ ಬೆಳೆಯಬಹುದು. ಹೌದು ಬಾಲ್ಕನಿಯಲ್ಲಿರುವ ಸಣ್ಣ ಜಾಗ ಮತ್ತು ಉತ್ತಮ ಸೂರ್ಯನ ಬೆಳಕು ಇದ್ದರೆ ಯಾವುದೇ ರಾಸಾಯನಿಕಗಳನ್ನು ಬಳಸದೆ ಫ್ರೆಶ್ ಹಣ್ಣುಗಳನ್ನು ಬೆಳೆಯಬಹುದು. ಈ ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ…