Category Archives: Blog

Your blog category

ಬಾಲ್ಕನಿಯಲ್ಲಿರುವ ಸಣ್ಣ ಜಾಗದಲ್ಲಿಯೂ ಈ ಹಣ್ಣುಗಳನ್ನು ಸುಲಭವಾಗಿ ಬೆಳೆಯಬಹುದು

ಫ್ಲಾಟ್‌ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ತಮ್ಮ ಬಾಲ್ಕನಿಗಳಲ್ಲಿ (balcony) ಬಗೆಬಗೆಯ ಹೂವಿನ ಗಿಡಗಳು, ಟೊಮೆಟೊ ಸೇರಿದಂತೆ ಒಂದಷ್ಟು ತರಕಾರಿಗಳ ಗಿಡಗಳನ್ನು ಬೆಳೆಯುತ್ತಾರೆ. ಆದರೆ ಬಾಲ್ಕನಿಯಲ್ಲಿರುವ ಪುಟ್ಟ ಜಾಗದಲ್ಲಿ ಹಣ್ಣುಗಳನ್ನು ಬೆಳೆಯಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಏನ್‌ ಗೊತ್ತಾ ಬಾಲ್ಕನಿ ಮತ್ತು ಟೆರೇಸ್‌ನಲ್ಲಿರುವ ಸ್ವಲ್ಪ ಜಾಗದಲ್ಲಿ ಹಣ್ಣುಗಳನ್ನೂ ಬೆಳೆಯಬಹುದು. ಹೌದು ಬಾಲ್ಕನಿಯಲ್ಲಿರುವ ಸಣ್ಣ ಜಾಗ ಮತ್ತು ಉತ್ತಮ ಸೂರ್ಯನ ಬೆಳಕು ಇದ್ದರೆ ಯಾವುದೇ ರಾಸಾಯನಿಕಗಳನ್ನು ಬಳಸದೆ ಫ್ರೆಶ್‌ ಹಣ್ಣುಗಳನ್ನು ಬೆಳೆಯಬಹುದು. ಈ ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಸಹ ನಿಮ್ಮ ಮನೆಯ ಬಾಲ್ಕನಿಯಲ್ಲಿ ಈ ಕೆಲವು ಹಣ್ಣುಗಳನ್ನು ಬೆಳೆಯಿರಿ.

ಬಾಲ್ಕನಿಯ  ಚಿಕ್ಕ ಜಾಗದಲ್ಲಿಯೂ ಈ ಹಣ್ಣುಗಳನ್ನು ಬೆಳೆಯಬಹುದು:

ನಿಂಬೆ ಗಿಡ: ಬಾಲ್ಕನಿ ಮತ್ತು ಟೆರೇಸ್‌ನಲ್ಲಿ  ಬಲು ಸುಲಭವಾಗಿ ನಿಂಬೆ ಗಿಡ ಬೆಳೆಸಬಹುದು. ಬೇರುಗಳಿಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲು 12 ರಿಂದ 16 ಇಂಚಿನ ದೊಡ್ಡ ಪಾಟ್‌ಗಳಲ್ಲಿ ನೀವು ನಿಂಬೆ ಗಿಡ ನೆಡಬಹುದು. ತೋಟದ ಮಣ್ಣು, ಕೊಕೊಪೀಟ್ ಮತ್ತು ಸಾವಯವ ಗೊಬ್ಬರವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಹಾಕಿ ಜೊತೆಗೆ ತಿಂಗಳಿಗೊಮ್ಮೆ ವರ್ಮಿಕಾಂಪೋಸ್ಟ್ ಸೇರಿಸಿ.ಈ ಗಿಡಕ್ಕೆ ಪ್ರತಿದಿನ ಕನಿಷ್ಠ 4–6 ಗಂಟೆಗಳ ಸೂರ್ಯನ ಬೆಳಕು ಬೇಕಾಗುತ್ತದೆ. ಬೇಸಿಗೆಯಲ್ಲಿ ಪ್ರತಿ 1–2 ದಿನಗಳಿಗೊಮ್ಮೆ ನೀರು ಹಾಕಿ ಸರಿಯಾಗಿ ಕಾಳಜಿ ವಹಿಸಿದರೆ ಈ ಗಿಡ 6 ರಿಂದ 8 ತಿಂಗಳಲ್ಲಿ ಹಣ್ಣು ಬಿಡಲು ಪ್ರಾರಂಭಿಸುತ್ತದೆ.

ಸ್ಟ್ರಾಬೆರಿ ಗಿಡ: ನಿಮ್ಮ ಬಾಲ್ಕನಿಯನ್ನು ಸುಂದರ ಮತ್ತು ಫಲಪ್ರದವಾಗಿಸಲು ನೀವು ಬಯಸಿದರೆ, ಸ್ಟ್ರಾಬೆರಿ ಗಿಡವನ್ನು ನೆಡಿ. ಪುಟ್ಟ ಪಾಟ್‌ ಅಥವಾ ಹ್ಯಾಂಗಿಂಗ್‌ ಪ್ಲಾಂಟರ್‌ನಲ್ಲಿ ಸ್ಟ್ರಾಬೆರಿ ಗಿಡವನ್ನು ಸುಲಭವಾಗಿ ಬೆಳೆಯಬಹುದು. ಮಣ್ಣು ಹಗುರವಾಗಿರಬೇಕು ಮತ್ತು ಮೃದುವಾಗಿರಬೇಕು. ತಿಳಿ ನೆರಳು ಬೀಳುವ ಸ್ಥಳದಲ್ಲಿ ಈ ಗಿಡವನ್ನು ಇರಿಸಿ ಹಾಗೂ ಸೂರ್ಯನ ಪ್ರಕರ ಬೆಳಕು ಬೀಳುವ ಸ್ಥಳದಲ್ಲಿ ಈ ಗಿಡ ಇಡುವುದನ್ನು ತಪ್ಪಿಸಿ, ಸರಿಯಾದ ಆರೈಕೆ ವಹಿಸಿದರೆ  2 ರಿಂದ 3 ತಿಂಗಳಲ್ಲಿ ಈ ಗಿಡ ಹಣ್ಣು ಬಿಡಲು  ಪ್ರಾರಂಭಿಸುತ್ತದೆ.

ಪೇರಳೆ ಗಿಡ: ಪೇರಳೆ ಗಿಡ ಬೆಳೆಯಲು ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ ಎಂದು ನೀವು ಭಾವಿಸಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ನರ್ಸರಿಗಳಲ್ಲಿ ಕುಂಡಗಳಲ್ಲಿ ಸುಲಭವಾಗಿ ಬೆಳೆಯಬಹುದಾದ ಸಾಕಷ್ಟು ಪ್ರಕಾರದ ಪೇರಳೆ ಗಿಡಗಳಿವೆ.  ಇಂತಹ ಗಿಡಗಳನ್ನು 20 ರಿಂದ 24 ಇಂಚು ಆಳದ ದೊಡ್ಡ ಪಾಟ್‌ಗಳಲ್ಲಿ ನೆಟ್ಟು, ಬಾಲ್ಕನಿಯಲ್ಲಿ ಆರಮದಾಯಕವಾಗಿ ಬೆಳಯಬಹುದು. ಇದರ ನಿರ್ವಹಣೆಯೂ ಕಡಿಮೆ ಜೊತೆಗೆ ಈ ಸಸ್ಯ ನಿಮ್ಮ ಬಾಲ್ಕನಿಗೆ ಸುಂದರ ಲುಕ್‌ ಕೂಡ ನೀಡುತ್ತದೆ. ಇದು ಒಂದು ವರ್ಷದೊಳಗೆ ಫಲ ನೀಡಲು ಪ್ರಾರಂಭಿಸಬಹುದು.

ಇದನ್ನೂ ಓದಿ: ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ

ಪಪ್ಪಾಯಿ:  ಕುಬ್ಜ ತಳಿಯ ಪಪ್ಪಾಯಿ ಗಿಡಗಳನ್ನು ನೀವು ಬಾಲ್ಕನಿಯನ್ನು ಸುಲಭವಾಗಿ ಬೆಳೆಯಬಹುದು.  20 ರಿಂದ 24 ಇಂಚಿನ ಪಾಟ್‌ಗಳಲ್ಲಿ ಈ ಪಪ್ಪಾಯಿ ಗಿಡಗಳನ್ನು ನೆಡಿ, ಜೊತೆಗೆ ಇದನ್ನು ಬಾಲ್ಕನಿಯಲ್ಲಿ ಉತ್ತಮ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ.  ನಿಯಮಿತವಾಗಿ ನೀರು ಹಾಕಿ ಜೊತೆಗೆ ಸಾವಯವ ಗೊಬ್ಬರವನ್ನು ಹಾಕಿ ಪೋಷಿಸಿ. ಅವು 6-8 ತಿಂಗಳೊಳಗೆ ಫಲ ನೀಡಲು ಪ್ರಾರಂಭಿಸುತ್ತವೆ.

ದಾಳಿಂಬೆ ಗಿಡ: ದಾಳಿಂಬೆ ಸಸ್ಯಗಳು ನಿಮಗೆ ಆರೋಗ್ಯಕರ ಹಣ್ಣುಗಳನ್ನು ಒದಗಿಸುವುದಲ್ಲದೆ, ಅವುಗಳ ಪ್ರಕಾಶಮಾನವಾದ ಕೆಂಪು ಹೂವುಗಳು ನಿಮ್ಮ ಬಾಲ್ಕನಿಯನ್ನು ಸುಂದರವಾದ ಉದ್ಯಾನವನ್ನಾಗಿ ಪರಿವರ್ತಿಸಬಹುದು. ಕುಬ್ಜ ತಳಿಯ ದಾಳಿಂಬೆ ಪ್ರಭೇದಗಳು ಪಾಟ್‌ನಲ್ಲಿ ನೆಡಲು ಉತ್ತಮ ಆಯ್ಕೆಯಾಗಿದೆ. ಅವುಗಳಿಗೆ ಪೂರ್ಣ ಸೂರ್ಯ ಮತ್ತು ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಬೇಕಾಗುತ್ತದೆ.

ಬಾಳೆಗಿಡ:  ಕುಬ್ಜ ತಳಿಯ ಬಾಳೆಗಿಡಗಳು ನರ್ಸರಿಗಳಲ್ಲಿ ಸುಲಭವಾಗಿ ಲಭ್ಯವಿದೆ. ದೊಡ್ಡ ಪಾಟ್‌ಗಳಲ್ಲಿಟ್ಟು ಇವುಗಳನ್ನು ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಸಬಹುದು. ಅವುಗಳಿಗೆ ಸೂರ್ಯನ ಬೆಳಕು, ತೇವಾಂಶ ಮತ್ತು ಸಾವಯವ ಗೊಬ್ಬರವನ್ನು ಒದಗಿಸಿ. ಈ ರೀತಿ ಉತ್ತಮ ಆರೈಕೆ ವಹಿಸಿದರೆ ಈ ಗಿಡ ಉತ್ತಮ ಫಲ ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಲಿವುಡ್​​ ಸಿನಿಮಾನಲ್ಲಿ ಕುಣಿದು ಕುಪ್ಪಳಿಸಿದ ಕನ್ನಡಿಗರು

ಕನ್ನಡದ ನಟ-ನಟಿಯರು ಬಾಲಿವುಡ್ (Bollywood)​ ಸಿನಿಮಾಗಳಲ್ಲಿ ಕೆಲಸ ಮಾಡಿರುವುದು ತುಸು ಕಡಿಮೆ. ಬಾಲಿವುಡ್​ನ ಹಲವು ನಟ-ನಟಿಯರು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಈ ಹಾಡು ವಿಶೇಷವಾಗಿ ರಾಜ್ ಬಿ ಶೆಟ್ಟಿಯ ಮೇಲೆ ಚಿತ್ರಿತಗೊಂಡಿರುವುದು ವಿಶೇಷ. ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಮತ್ತೊಬ್ಬ ಕನ್ನಡದ ನಿರ್ದೇಶಕರೂ ಇದ್ದಾರೆ.

‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಇನ್ನೂ ಹಲವು ಕಲ್ಟ್ ಸಿನಿಮಾಗಳ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ‘ಬಂದರ್’ ಹೆಸರಿನ ಹೊಸ ಹಿಂದಿ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಬಾಬಿ ಡಿಯೋಲ್ ನಾಯಕ. ಇದೇ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಸಹ ವಿಶೇಷವಾದ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ‘ಬಂದರ್’ ಸಿನಿಮಾದ ‘ಪಿಂಜರಾ’ ಹೆಸರಿನ ಹಾಡೊಂದು ಬಿಡುಗಡೆ ಆಗಿದ್ದು, ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಪಾತ್ರವೇ ಪ್ರಧಾನ.

ಜೈಲಿನಲ್ಲಿ ಚಿತ್ರೀಕರಣಗೊಂಡಿರುವ ಹಾಡು ಇದಾಗಿದ್ದು, ಜೈಲಿನ ಕೈದಿ ಆಗಿರುವ ರಾಜ್ ಬಿ ಶೆಟ್ಟಿ ಚಿತ್ರ ವಿಚಿತ್ರವಾಗಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ, ರಾಜ್ ಬಿ ಶೆಟ್ಟಿಯ ಜೊತೆಗೆ ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ನಟೇಶ್ ಹೆಗ್ಡೆ ಸಹ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರೂ ಸಹ ಕೈದಿಗಳ ಪಾತ್ರದಲ್ಲಿ ನಟಿಸಿದ್ದು, ಇಬ್ಬರೂ ಸೇರಿ ಇತರೆ ಕೆಲ ಕೈದಿಗಳ ಜೊತೆಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

‘ಪಿಂಜರಾ’ ಹಾಡು ಸಹ ಬಹಳ ಭಿನ್ನವಾಗಿದ್ದು, ಪಿಂಜರಾ ಎಂದರೆ ಹಿಂದಿಯಲ್ಲಿ ಪಂಜರ ಅಥವಾ ಜೈಲು. ಹಾಡಿನಲ್ಲಿ ಸಂಸಾರ ಎಂಬುದು ಪಂಜರ ಎಂಬ ಸಾಲುಗಳಿವೆ. ‘ಪತ್ನಿ ಪಂಜರ, ಗರ್ಲ್​​ಫ್ರೆಂಡ್ ಪಂಜರ, ಮೊಬೈಲ್ ಪಂಜರ, ಟ್ಯಾಕ್ಸ್ ಪಂಜರ, ಇಎಂಐ ಪಂಜರ, ಧರ್ಮ ಪಂಜರ, ಜಾತಿ ಪಂಜರ’ ಹೀಗೆ ಸಾಗುತ್ತದೆ ಹಾಡು. ಹಾಡಿಗೆ ಬಳಸಲಾಗಿರುವ ಸಂಗೀತವೂ ಭಿನ್ನವಾಗಿದೆ. ಯಾವುದೇ ಶುದ್ಧ ಸಂಗೀತ ವಾದ್ಯಗಳಲ್ಲದೆ ಜೈಲಿನಲ್ಲಿ ಸಿಗುವ ವಸ್ತುಗಳನ್ನೇ ಬಳಸಿ ಹಾಡಿಗೆ ಸಂಗೀತ ನೀಡಲಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅದಾಗಲೇ ಪಂಜರದಲ್ಲಿರುವ ಕೈದಿಗಳು ಹೊರಗಿನ ಪ್ರಪಂಚದವರು ತಮಗೆ ಗೊತ್ತಿಲ್ಲದೇ ಪಂಜರದಲ್ಲಿ ಬದುಕುತ್ತಿದ್ದಾರೆಂಬುದನ್ನು ಹಾಡು ಹೇಳುತ್ತಿದೆ.

‘ಬಂದರ್’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಗಿದ್ದು, ನಿಜ ಘಟನೆಯೊಂದರ ಮೇಲೆ ಆಧರಿತವಾಗಿದೆ. ಸೆಲೆಬ್ರಿಟಿ ವ್ಯಕ್ತಿಯೊಬ್ಬ ಸುಳ್ಳು ಅತ್ಯಾಚಾರದ ಕೇಸಿನಲ್ಲಿ ಜೈಲಿಗೆ ಹೋಗುವುದು ಅಲ್ಲಿಂದ ಹೇಗೆ ಬಿಡಿಸಿಕೊಳ್ಳುತ್ತಾನೆ. ಜೈಲಿನಲ್ಲಿ ಆತ ಎದುರಿಸುವ ಸಮಸ್ಯೆಗಳು ಯಾವುವು ಎಂಬಿತ್ಯಾದಿ ವಿಷಯಗಳನ್ನು ಸಿನಿಮಾದ ಕತೆ ಒಳಗೊಂಡಿದೆ. ಜೂನ್ 5 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

6ನೇ ವರ್ಷವೂ ಸಂಬಳ ಬೇಡ ಎಂದ ಮುಕೇಶ್ ಅಂಬಾನಿ; ಏಷ್ಯಾದ ಅತಿ ಶ್ರೀಮಂತ ಉದ್ಯಮಿಗೆ ಆದಾಯ ಎಲ್ಲಿಂದ?

ಮುಂಬೈ, ಮೇ 28: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಅತಿಹೆಚ್ಚು ಆದಾಯ ಹೊಂದಿರುವ ಕಂಪನಿ ಎನ್ನುವ ಗರಿ ಪಡೆದಿದೆ. ಆದರೆ, ಅದರ ಮುಖ್ಯಸ್ಥರು ತಮಗೆ ಸಂಬಳ ಇಲ್ಲದೇ ಕಂಪನಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಗ್ರೂಪ್​ನ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರು ಸತತ ಆರನೇ ವರ್ಷವೂ ತಮ್ಮ ಕಂಪನಿಯಿಂದ ಯಾವುದೇ ರೀತಿಯ ಸಂಬಳ ಅಥವಾ ಸಂಭಾವನೆಯನ್ನು (Remuneration) ಪಡೆದಿಲ್ಲ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಉದ್ಯಮ ವಲಯದಲ್ಲಾದ ಆರ್ಥಿಕ ಏರಿಳಿತಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಸಂಬಳ ತ್ಯಜಿಸಲು ನಿರ್ಧರಿಸಿದ್ದ ಅವರು, ಪ್ರಸ್ತುತ ಆರ್ಥಿಕ ವರ್ಷದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ವಿಶೇಷವೆಂದರೆ, ಮುಕೇಶ್ ಅಂಬಾನಿ ಅವರು ಸಂಬಳ ಪಡೆಯದೇ ಇದ್ದರೂ, ಅವರ ನೇತೃತ್ವದ ರಿಲಯನ್ಸ್ ಸಂಸ್ಥೆಯು ಇತ್ತೀಚಿನ ಹಣಕಾಸು ವರ್ಷದಲ್ಲಿ ಅತ್ಯುನ್ನತ ಮತ್ತು ದಾಖಲೆಯ ಲಾಭವನ್ನು ಗಳಿಸಿದೆ.

ಕೋವಿಡ್ ವೇಳೆ ತೆಗೆದುಕೊಂಡಿದ್ದ ನಿರ್ಧಾರ

ಕಳೆದ 2020ರ ಜೂನ್ ತಿಂಗಳಲ್ಲಿ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕವು ಭಾರಿ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದಾಗ, ಮುಕೇಶ್ ಅಂಬಾನಿ ಅವರು ಸಮಾಜ ಹಾಗೂ ಉದ್ಯಮದ ಹಿತದೃಷ್ಟಿಯಿಂದ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದರು. ರಿಲಯನ್ಸ್ ಉದ್ಯಮ ಸಮೂಹದ ಒಟ್ಟಾರೆ ಆರ್ಥಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ಸಲುವಾಗಿ, ಪರಿಸ್ಥಿತಿ ತಿಳಿಯಾಗುವವರೆಗೂ ತಾವು ಕಂಪನಿಯಿಂದ ಯಾವುದೇ ಸಂಬಳ, ಭತ್ಯೆ ಅಥವಾ ಕಮಿಷನ್ ಪಡೆಯುವುದಿಲ್ಲ ಎಂದು ಅವರು ಘೋಷಿಸಿದ್ದರು. ಅಂದಿನಿಂದ ಇಂದಿನವರೆಗೂ (ಸತತ 6 ವರ್ಷಗಳು) ಅವರು ತಮ್ಮ ಈ ಬದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಈ ನಿರ್ಧಾರಕ್ಕೂ ಮುನ್ನ, ಅಂದರೆ 2008-09ರ ಹಣಕಾಸು ವರ್ಷದಿಂದ 2019-20ರವರೆಗೆ ಮುಕೇಶ್ ಅಂಬಾನಿ ಅವರ ವಾರ್ಷಿಕ ಸಂಬಳವು 15 ಕೋಟಿ ರೂಗೆ ಸೀಮಿತವಾಗಿತ್ತು. ಭಾರತದ ಪ್ರಮುಖ ಕಾರ್ಪೊರೇಟ್ ಮುಖ್ಯಸ್ಥರ ಸಂಬಳಕ್ಕೆ ಹೋಲಿಸಿದರೆ ಇದು ಅತ್ಯಂತ ಮಿತವಾದ ಮೊತ್ತವಾಗಿತ್ತು.

ಇದನ್ನೂ ಓದಿ: ಭಾರತದ ನೇತ್ರಸೆಮಿಯಿಂದ ದೇಶೀಯ ವಿನ್ಯಾಸದ ಎಐ ಪ್ರೋಸಸರ್ A2000 ಅನಾವರಣ

ರಿಲಯನ್ಸ್ ಸಂಸ್ಥೆಗೆ ದಾಖಲೆಯ ಪ್ರಗತಿ

ಮುಕೇಶ್ ಅಂಬಾನಿ ಅವರು ಸಂಬಳ ನಿರಾಕರಿಸಿದ ಅವಧಿಯಲ್ಲೇ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವ್ಯಾಪಾರ ಸಾಮ್ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಿದೆ. ಡಿಜಿಟಲ್ ಸೇವೆಗಳ ವಿಭಾಗವಾದ ‘ಜಿಯೋ’ (Jio), ರಿಟೇಲ್ ಉದ್ಯಮ ಮತ್ತು ಹಸಿರು ಇಂಧನ (Green Energy) ವಲಯಗಳಲ್ಲಿ ಕಂಪನಿಯು ಭಾರಿ ಹೂಡಿಕೆ ಮಾಡಿದ್ದು, ನಿರಂತರವಾಗಿ ದಾಖಲೆಯ ನಿವ್ವಳ ಲಾಭವನ್ನು (Net Profit) ದಾಖಲಿಸುತ್ತಾ ಬಂದಿದೆ.

ಇತರ ಪ್ರಮುಖ ಅಧಿಕಾರಿಗಳ ಸಂಬಳ ವಿವರ

ಮುಕೇಶ್ ಅಂಬಾನಿ ಅವರು ಯಾವುದೇ ಸಂಭಾವನೆ ಪಡೆಯದಿದ್ದರೂ, ಕಂಪನಿಯ ಇತರ ಪ್ರಮುಖ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಉನ್ನತ ಅಧಿಕಾರಿಗಳ ಸಂಬಳ ಹಾಗೂ ಭತ್ಯೆಗಳು ಮಾರುಕಟ್ಟೆಯ ನಿಯಮಾವಳಿಗಳಿಗೆ ಅನುಗುಣವಾಗಿ ಪರಿಷ್ಕರಣೆಗೊಂಡಿವೆ. ಕಂಪನಿಯ ವಾರ್ಷಿಕ ವರದಿಯ ಪ್ರಕಾರ, ಉದ್ಯಮದ ಬೆಳವಣಿಗೆಗೆ ಶ್ರಮಿಸುತ್ತಿರುವ ಇತರ ನಿರ್ದೇಶಕರಿಗೆ ನಿಯಮಬದ್ಧ ಸಂಬಳ ಮತ್ತು ಕಮಿಷನ್‌ಗಳನ್ನು ವಿತರಿಸಲಾಗಿದೆ.

ಜಗತ್ತಿನ ಟೆಕ್ ದೈತ್ಯ ಕಂಪನಿಗಳಾದ ಆಪಲ್, ಗೂಗಲ್ ಅಥವಾ ಫೇಸ್‌ಬುಕ್ ಸಂಸ್ಥೆಗಳ ಮುಖ್ಯಸ್ಥರು ಸಾಂಕೇತಿಕವಾಗಿ 1 ಡಾಲರ್ ಸಂಬಳ ಪಡೆಯುವ ಉದಾಹರಣೆಗಳು ಜಾಗತಿಕವಾಗಿವೆ. ಅದೇ ಮಾದರಿಯಲ್ಲಿ, ಭಾರತದ ಅತಿ ದೊಡ್ಡ ಖಾಸಗಿ ಕಂಪನಿಯ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅವರು ಸತತ ಆರು ವರ್ಷಗಳಿಂದ ನಯಾಪೈಸೆ ಸಂಬಳ ಪಡೆಯದೆ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಭಾರತೀಯ ಕಾರ್ಪೊರೇಟ್ ವಲಯದಲ್ಲಿ ವಿಶಿಷ್ಟ ನಾಯಕತ್ವಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮಾರುಕಟ್ಟೆ ಕುಸಿದಾಗ ಹೆದರಿಬಿಟ್ಟರೆ ಲಕ್ಷ್ಮೀಕಟಾಕ್ಷ ತಪ್ಪಿ ಹೋದೀತು ಜೋಕೆ..! ಶೆಲ್ಬಿ ಡೇವಿಸ್ ಸಲಹೆ ಕೇಳಿ

ಮುಕೇಶ್ ಅಂಬಾನಿಗೆ ಬೇರೆ ಆದಾಯ ಎಲ್ಲಿಂದ?

ಜಾಗತಿಕವಾಗಿ ಹಲವು ವಾಣಿಜ್ಯೋದ್ಯಮಿಗಳು ಸಂಬಳ ಪಡೆಯದೇ ಹೋದರೂ ಅವರಿಗೆ ಇತರ ಮೂಲಗಳಿಂದ ಹಣ ಸಿಗುತ್ತದೆ. ಅವರ ಪ್ರಮುಖ ಆದಾಯ ಮೂಲ ಷೇರುಗಳಾಗಿರುತ್ತವೆ. ಷೇರುಗಳ ಡಿವಿಡೆಂಡ್ ಅಥವಾ ಲಾಭಾಂಶವು ಉದ್ಯಮಿಗಳ ಜೇಬು ತುಂಬಿಸುತ್ತದೆ.

ರಿಲಾಯನ್ಸ್ ಇಂಡಸ್ಟ್ರೀಸ್​ನಲ್ಲಿ ಮುಕೇಶ್ ಅಂಬಾನಿ ವೈಯಕ್ತಿಕವಾಗಿ 1.61 ಕೋಟಿ ಸಂಖ್ಯೆಯಷ್ಟು ಷೇರುಗಳನ್ನು ಹೊಂದಿದ್ದಾರೆ. 2024-25ರಲ್ಲಿ ಕಂಪನಿಯು ಒಂದು ಷೇರಿಗೆ 6 ರೂ ಡಿವಿಡೆಂಡ್ (Share dividend) ಘೋಷಿಸಿತ್ತು. ಇದರಿಂದ ಅಂಬಾನಿಗೆ ಆ ವರ್ಷ 9 ಕೋಟಿ ರೂಗೂ ಅಧಿಕ ಆದಾಯ ಬಂದಿತ್ತು. ಇನ್ನು, ಅಂಬಾನಿ ನಿಯಂತ್ರಣ ಹೊಂದಿರುವ ಪ್ರೊಮೋಟರ್ ಗ್ರೂಪ್ ಸಂಸ್ಥೆಗಳು ರಿಲಾಯನ್ಸ್ ಇಂಡಸ್ಟ್ರೀಸ್​ನಲ್ಲಿ ಶೇ. 50ಕ್ಕಿಂತಲೂ ಅಧಿಕ ಷೇರುಪಾಲು ಹೊಂದಿವೆ. ಈ ಪ್ರೊಮೋಟರ್ ಕಂಪನಿಗಳಿಗೆ 3,987 ಕೋಟಿ ರೂ ಡಿವಿಡೆಂಡ್ ಸಿಕ್ಕಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ! ಮಾತಾಡಿದ್ರೆ ಪಟ್ಟ ಕೈ ತಪ್ಪುವ ಸಾಧ್ಯತೆ, ಅಜ್ಜಯ್ಯ ಭವಿಷ್ಯ

ತುಮಕೂರು, ಮೇ.28: “ಮಾತು ಆಡಿದರೆ ಮುತ್ತು ಒಡೆದು ಹೋದಂತೆ! ಸದ್ಯಕ್ಕೆ ಯಾವುದೇ ಆತುರದ ಹೇಳಿಕೆ ನೀಡಬೇಡಿ, ಇಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗಬಹುದು!” – ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಅವರ ಪರಮ ದೈವ, ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ (Nonavinakere Kadasiddeshwara Mutt) ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಇಂತಹದೊಂದು ಅತ್ಯಂತ ಗಂಭೀರ ಹಾಗೂ ನಿಗೂಢ ಎಚ್ಚರಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದರಿಂದ ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಚರ್ಚೆಗಳು ಜೋರಾಗಿವೆ. ಆದರೆ, ಅಜ್ಜಯ್ಯನವರು “ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು (ಮುತ್ತು ಒಡೆದು ಹೋಗಲಿದೆ)” ಎಂದು ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ. ಶ್ರೀಗಳ ಈ ಆದೇಶದ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಹಾಗೂ ಅವರ ಆಪ್ತ ಬೆಂಬಲಿಗರು ಯಾವುದೇ ವಿಜಯೋತ್ಸವ ಆಚರಿಸದಂತೆ ಮತ್ತು ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಸೈಲೆಂಟ್ ಆಗಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯದಲ್ಲೇ ‘ಸಾಡೇ ಸಾತಿ’ ಶನಿ ದೆಸೆ (Sade Sati) ಆರಂಭವಾಗಲಿದೆಯಂತೆ. ಗ್ರಹಗತಿಗಳ ಈ ಏರುಪೇರಿನ ಕಾಲದಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು. ಇಲ್ಲದಿದ್ದರೆ ಸಿಎಂ ಕುರ್ಚಿ ಅತ್ಯಂತ ಹತ್ತಿರ ಬಂದರೂ ಕೊನೆಯ ಕ್ಷಣದಲ್ಲಿ ಕೈ ತಪ್ಪುವ (ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುವ) ಗಂಡಾಂತರ ಎದುರಾಗಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.

ಈ ಮಹತ್ವದ ರಾಜಕೀಯ ಮತ್ತು ಆಧ್ಯಾತ್ಮಿಕ ಸಲಹೆಯನ್ನು ನೀಡಿದ ಬಳಿಕ ನೊಣವಿನಕೆರೆ ಶ್ರೀಗಳು ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ನೇರವಾಗಿ ಮಠದಿಂದ ಹೊರಟು ಹೋಗಿದ್ದಾರೆ. ಸದ್ಯ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಆಯ್ಕೆ ಕಸರತ್ತು ನಡೆಯುತ್ತಿರುವಾಗಲೇ ಅಜ್ಜಯ್ಯನವರ ಈ ನಡೆ ಇಡೀ ಕೈ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ , ಹೇಳಿದ್ದೇನು?

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಅದ್ಧೂರಿಯಾಗಿ ಮಾಡುತ್ತಿದೆ. ಮುಂಬೈ, ಭೋಪಾಲ್, ಬೆಂಗಳೂರಿನ ಬಳಿಕ ಇಂದು ದೆಹಲಿಯಲ್ಲಿ ರಾಮ್ ಚರಣ್ ಮತ್ತು ತಂಡ ‘ಪೆದ್ದಿ’ ಸಿನಿಮಾದ ಪ್ರಚಾರ ಮಾಡಿದೆ. ಈ ವೇಳೆ ರಾಮ್ ಚರಣ್ ಕೆಲ ಆಸಕ್ತಿಕರ ವಿಚಾರಗಳನ್ನು ಸಿನಿಮಾದ ಬಗ್ಗೆ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪೆದ್ದಿ’ ಸಿನಿಮಾದ ಬಗ್ಗೆ ವಿಚಾರಿಸಿದ ವಿಷಯವನ್ನು ರಾಮ್ ಚರಣ್ ಹೇಳಿದ್ದಾರೆ.

ಈ ಸಿನಿಮಾ ನೆಲದ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರುವ ಕತೆಯನ್ನು ಹೊಂದಿದೆ. ನಮ್ಮ ಸಿನಿಮಾ ಸಹ ಹಳ್ಳಿಯ ಪ್ರತಿಭಾನ್ವಿತ ಯುವಕನ ಬಗ್ಗೆ ಆ ಮೂಲಕ ಹಳ್ಳಿಗಳಲ್ಲಿ ಅಡಗಿರುವ ಪ್ರತಿಭೆಗಳ ಬಗೆಗೆ ಆಗಿದೆ’ ಎಂದ ರಾಮ್ ಚರಣ್, ಭಾರತದ ಒಲಿಂಪಿಕ್ ಬಿಲ್ಲುಗಾರರ ತಂಡದ ಎಲ್ಲ ಸದಸ್ಯರು ಕಾಡು ಸಮುದಾಯವೊಂದಕ್ಕೆ ಸೇರಿದವರು. ಭಾರತದ ನಿಜವಾದ ಟ್ಯಾಲೆಂಟ್ ಹಳ್ಳಿಗಳಲ್ಲಿದೆ. ನಮ್ಮ ಸಿನಿಮಾ ಸಹ ಅದೇ ವಿಷಯದ ಮೇಲೆ ಆಧರಿತವಾಗಿದೆ’ ಎಂದಿದ್ದಾರೆ.

ಮೋದಿಯ ಭೇಟಿಯ ಬಗ್ಗೆಯೂ ಮಾತನಾಡಿದ ರಾಮ್ ಚರಣ್, ‘ನಾನು ಕಳೆದ ಬಾರಿ ದೆಹಲಿಗೆ ಬಂದಾಗ ಪ್ರಧಾನಿ ಮೋದಿ ಅವರನ್ನು ಭೇಟಿಯಾದೆ. ಆ ಸಂದರ್ಭದಲ್ಲಿ ಅವರು ‘ಪೆದ್ದಿ’ ಸಿನಿಮಾದ ಬಗ್ಗೆ ಕೇಳಿದರು. ಆಗ ನಾನು ಅವರ ‘ವಿಕಸಿತ ಭಾರತ’ ಹಳ್ಳಿಗಳಿಗೆ ಶಕ್ತಿ ನೀಡುವ ಕತೆಯನ್ನು ಹೊಂದಿದೆ ಎಂದೆ. ಕತೆಯ ಬಗ್ಗೆ ವಿವರಣೆಯನ್ನು ನೀಡಿದೆ’ ಎಂದರು.

ಇದನ್ನೂ ಓದಿ:ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

‘ಆಗ ಮೋದಿ ಅವರು ಪಶ್ಚಿಮ ಬಂಗಾಳದ ವಿಷಯವನ್ನು ಹೇಳಿದರು. ನಾನು (ಮೋದಿ) ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಬೇಕಾದರೆ ಒಂದು ಬಾರಿ ಕೆಲ ಯುವಕರನ್ನು ಗಮನಿಸಿದೆ. ಎಲ್ಲರೂ ಮೇಲೆ ಜರ್ಸಿ ಧರಿಸಿದ್ದರು, ಕೆಳಗೆ ಲಂಗೋಟಿ ಧರಿಸಿದ್ದರು. ಅವರೆಲ್ಲರೂ ಫುಟ್​​ಬಾಲ್ ಆಟಗಾರರಾಗಿದ್ದರು. ಆ ಎಲ್ಲರೂ ಬಹುತೇಕ ಒಂದೇ ಊರಿನವರಾಗಿದ್ದರು. ಪಶ್ಚಿಮ ಬಂಗಾಳದ ಒಂದು ಹಳ್ಳಿಯ ವ್ಯಕ್ತಿ ಮೊಹಮ್ಮದ್ ಒಂದು ಸಣ್ಣ ಹಳ್ಳಿಯಿಂದ ಬಂದು ಫುಟ್​​ಬಾಲ್​​ನಲ್ಲಿ ಸಾಧನೆ ಮಾಡಿದರು. ಈಗ ಅವರನ್ನು ಸ್ಪೂರ್ತಿಯಾಗಿರಿಸಿಕೊಂಡು ಹಳ್ಳಿಗಳಿಂದ ಸಾಕಷ್ಟು ಯುವಕರು ಫುಟ್​​ಬಾಲ್ ಆಡುತ್ತಿದ್ದಾರೆ. ಈಗ ಬಂಗಾಳದ ಫುಟ್​​ಬಾಲ್ ಸ್ಟೇಡಿಯಮ್​ಗೆ ಅವರದ್ದೇ ಹೆಸರಿಡಲಾಗಿದೆ ಎಂದರು’ ಎಂದು ರಾಮ್ ಚರಣ್ ವಿವರಿಸಿದರು.

‘ನಮ್ಮ ಸಿನಿಮಾ ‘ಪೆದ್ದಿ’ ಅಂಥಹಾ ಹಳ್ಳಿಯ ಪ್ರತಿಭಾವಂತ ಯುವಕರ ಬಗ್ಗೆ, ಹಳ್ಳಿಯಲ್ಲಿದ್ದು, ರಾಷ್ಟ್ರಮಟ್ಟದಲ್ಲಿ ಸಾಧಿಸಲು ಹೊರಡುವ ಸಾಧಕರ ಕತೆಯನ್ನು ಒಳಗೊಂಡಿದೆ’ ಎಂದ ರಾಮ್ ಚರಣ್. ಸಿನಿಮಾನಲ್ಲಿ ತಮಗೆ ಕುಸ್ತಿ ಪಟುವಿನ ಫಿಸೀಕ್ ಮಾಡುವುದು ಬಹಳ ಕಷ್ಟದ ಕೆಲಸವಾಗಿತ್ತು ಎಂದಿದ್ದಾರೆ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಾಯಕಿ. ಶಿವರಾಜ್ ಕುಮಾರ್ ಸಹ ಇದ್ದಾರೆ. ಬೊಮನ್ ಇರಾನಿ, ದಿವ್ಯೇಂದು, ಜಗಪತಿ ಬಾಬು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ಕೆಲವು ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

ಟೂತ್‌ಬ್ರಷ್‌ನಿಂದ ಹಿಡಿದು ಸ್ಕಿನ್‌ಕೇರ್‌ ಉತ್ಪನ್ನಗಳವರೆಗೆ ನಾವು ನಮ್ಮ ನಿತ್ಯ ಬಳಕೆಯ ಕೆಲವೊಂದು ವಸ್ತುಗಳನ್ನು ಬಾತ್‌ರೂಮ್‌ನಲ್ಲಿ (bathroom) ಇಟ್ಟುಬಿಡುತ್ತೇವೆ. ಆದರೆ ಈ ರೀತಿ ಎಲ್ಲಾ ವಸ್ತುಗಳನ್ನು ಸ್ನಾನಗೃಹದಲ್ಲಿ ಸ್ಟೋರ್‌ ಮಾಡಬಾರದಂತೆ, ಏಕೆಂದರೆ  ಸ್ನಾನಗೃಹದ ತೇವಯುಕ್ತ ಮತ್ತು ಮುಚ್ಚಿದ ವಾತಾವರಣದಲ್ಲಿ, ಕೆಲವು ವಸ್ತುಗಳು ಕ್ರಮೇಣ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಂತಾನೋತ್ಪತ್ತಿಯ ಸ್ಥಳಗಳಾಗುತ್ತವೆ, ಇದು ಸೋಂಕುಗಳು ಮತ್ತು ಅಲರ್ಜಿಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಬಾತ್‌ರೂಮ್‌ನ ತೇವಾಂಶವು ಕೆಲವೊಂದು ವಸ್ತುಗಳನ್ನು ಬಹುಬೇಗನೆ ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಕೆಲವೊಂದು ವಸ್ತುಗಳನ್ನು ಬಾತ್‌ರೂಮ್‌ನಲ್ಲಿ ಸ್ಟೋರ್‌ ಮಾಡುವುದನ್ನು ತಪ್ಪಿಸಿ.

ಈ ವಸ್ತುಗಳನ್ನು ಬಾತ್‌ರೂಮ್‌ನಲ್ಲಿ ಇಡಬೇಡಿ:

ಟವೆಲ್‌ಗಳು ಮತ್ತು ಕೊಳಕು ಬಟ್ಟೆಗಳು: ಬಾತ್‌ರೂಮ್‌ನಲ್ಲಿ ಟವೆಲ್‌ ಮತ್ತು ಕೊಳಕು ಬಟ್ಟೆಗಳನ್ನು ಇಡಬಾರದು. ಇಲ್ಲಿನ ತೇವಯುಕ್ತ ವಾತಾವರಣವು ಟವೆಲ್‌ ಮತ್ತು ಕೊಳಕು ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿ ಮಾಡಲು ಸೂಕ್ತ ಸ್ಥಳವನ್ನು ಒದಗಿಸುತ್ತದೆ. ಅದರಲ್ಲೂ ಬಳಕೆ ಮಾಡಿದ ಟವೆಲ್‌ಗಳನ್ನು ಒಣಗಿಸುವ ಸಲುವಾಗಿ ಬಾತ್‌ರೂಮ್‌ನಲ್ಲಿಯೇ ನೇತು ಹಾಕಿದರೆ ಕೋಲಿಯಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಟವೆಲ್‌ಗಳಲ್ಲಿ ಸಂಗ್ರಹವಾಗಬಹುದು. ಇದು ಚರ್ಮದ ಅಲರ್ಜಿಗಳು, ಶಿಲೀಂಧ್ರಗಳ ಸೋಂಕುಗಳು ಮತ್ತು ಮೊಡವೆಗಳಿಗೆ ಕಾರಣವಾಗಬಹುದು.

ಮೇಕಪ್ ಮತ್ತು ಸ್ಕಿನ್‌ಕೇರ್‌  ಉತ್ಪನ್ನಗಳು: ಹೆಚ್ಚಿನ ಮಹಿಳೆಯರು ಸ್ನಾನಗೃಹದ ಕನ್ನಡಿಯ ಮುಂದೆ ಮೇಕಪ್‌ ಮತ್ತು ಸ್ಕಿನ್‌ಕೇರ್‌ ಉತ್ಪನ್ನಗಳನ್ನು ಇಟ್ಟುಬಿಡುತ್ತಾರೆ. ಬಾತ್‌ರೂಮ್‌ನ ಶಾಖ ಮತ್ತು ತೇವಾಂಶ ಈ ಉತ್ಪನ್ನಗಳ ವಿನ್ಯಾಸವನ್ನು ಹಾಳು ಮಾಡುತ್ತದೆ.  ಅಲ್ಲದೆ ಲಿಕ್ವಿಡ್ ಫೌಂಡೇಶನ್ ಮತ್ತು ಲಿಪ್ಸ್ಟಿಕ್‌ಗಳಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗಬಹುದು. ಇದು ಚರ್ಮದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮೇಕಪ್‌ ಉತ್ಪನ್ನಗಳನ್ನು ಬಾತ್‌ರೂಮ್‌ನಲ್ಲಿ ಇಡಬೇಡಿ.

ಟೂತ್ ಬ್ರಷ್: ಬಹುತೇಕ ಎಲ್ಲರೂ ಟೂತ್‌ಬ್ರಷ್‌ಗಳನ್ನು ಸ್ನಾನಗೃಹದಲ್ಲೇ ಸಂಗ್ರಹಿಸಿಡುತ್ತಾರೆ. ಟೂತ್‌ಬ್ರಷ್‌ಗಳನ್ನು ಯಾವಾಗಲೂ ಒಣ ಸ್ಥಳಗಳಲ್ಲಿ ಸಂಗ್ರಹಿಸಿಡುವುದು ಸೂಕ್ತ ಏಕೆಂದರೆ ಸ್ನಾನಗೃಹದ  ತೇವಾಂಶ ಹಲ್ಲುಜ್ಜುವ ಬ್ರಷ್‌ಗಳಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಇದು ಬಾಯಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಔಷಧಿಗಳು: ಸ್ನಾನಗೃಹದಲ್ಲಿ ಔಷಧಿಗಳನ್ನು ಸಂಗ್ರಹಿಸಿಡಬಾರದು. ಬಾತ್‌ರೂಮ್‌ನ  ತಾಪಮಾನವು ನಿರಂತರವಾಗಿ ಏರಿಳಿತಗೊಳ್ಳುತ್ತದೆ. ಇಲ್ಲಿನ ಆರ್ದ್ರತೆ ಮತ್ತು ಶಾಖವು ಔಷಧಿಗಳು ತಮ್ಮ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳಲು, ಹಾಳಾಗಲು ಕಾರಣವಾಗಬಹುದು. ಮಲಗುವ ಕೋಣೆಯಲ್ಲಿ ಸುರಕ್ಷಿತ ಕ್ಯಾಬಿನೆಟ್‌ನಲ್ಲಿ ಔಷಧಿಗಳನ್ನು ಸಂಗ್ರಹಿಸುವುದು ಯಾವಾಗಲೂ ಉತ್ತಮ.

ಇದನ್ನೂ ಓದಿ: ಬಾತ್‌ರೂಮ್‌ ಕ್ಲೀನ್‌ ಮಾಡಲು ಉಪ್ಪಿನ ಜೊತೆಗೆ ಅಡುಗೆಮನೆಯಲ್ಲಿರುವ ವಸ್ತುಗಳೇ ಸಾಕು

ಜಲನಿರೋಧಕವಲ್ಲದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು: ಅನೇಕ ಜನರು ಸಂಗೀತ ಕೇಳಲು ತಮ್ಮ ಫೋನ್‌ಗಳು ಅಥವಾ ಸ್ಪೀಕರ್‌ಗಳನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗುತ್ತಾರೆ. ವಾಟರ್‌ಪ್ರೂಫ್‌ ರೇಟಿಂಗ್‌ಗಳಿಲ್ಲದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ನೀರು ಬಿದ್ದರೆ ಅವುಗಳ ಆಂತರಿಕ ಸರ್ಕ್ಯೂಟ್‌ಗಳನ್ನು ಹಾನಿಗೊಳಗಾಗುತ್ತದೆ. ಇದರಿಂದ ಗ್ಯಾಜೆಟ್‌ಗಳು ಬೇಗನೇ ಹಾಳಾಗುತ್ತವೆ ಅಲ್ಲದೆ ಇದು ಶಾರ್ಟ್ ಸರ್ಕ್ಯೂಟ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

ರೇಜರ್‌ಗಳು ಮತ್ತು ಬ್ಲೇಡ್‌ಗಳು: ಸ್ನಾನಗೃಹದ ತೇವಾಂಶದ ಕಾರಣದಿಂದಾಗಿ ಇಲ್ಲಿ ರೇಜರ್‌ಗಳು ಮತ್ತು ಬ್ಲೇಡ್‌ಗಳನ್ನು ಸಂಗ್ರಹಿಸಿಟ್ಟರೆ ಅವು ಬೇಗನೆ ತುಕ್ಕು ಹಿಡಿಯುತ್ತವೆ. ಅಂತಹ ರೇಜರ್‌ನಿಂದ ಶೇವಿಂಗ್ ಮಾಡುವುದರಿಂದ ಚರ್ಮದ ಕಡಿತ ಮತ್ತು ಸೋಂಕಿನ ಅಪಾಯ ಉಂಟಾಗುತ್ತದೆ.

ಆಭರಣಗಳು: ಚಿನ್ನ, ಬೆಳ್ಳಿ ಅಥವಾ ಕೃತಕ ಆಭರಣಗಳನ್ನು ಸ್ನಾನಗೃಹದಲ್ಲಿ ಇಡುವುದರಿಂದ ಅವು ಮಸುಕಾಗಬಹುದು. ತೇವಾಂಶವು ಲೋಹಗಳ ಆಕ್ಸಿಡೀಕರಣ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಇದರಿಂದಾಗಿ ಅವು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ನಿಮ್ಮ ಅಮೂಲ್ಯವಾದ ಆಭರಣಗಳನ್ನು ಯಾವಾಗಲೂ ಡ್ರೆಸ್ಸಿಂಗ್ ಟೇಬಲ್ ಅಥವಾ ಲಾಕರ್‌ನಲ್ಲಿ ಸಂಗ್ರಹಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ವಿಶಾ ಶರ್ಮಾ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಬಿಐನಿಂದ ಗಿರಿಬಾಲಾ ಸಿಂಗ್ ಬಂಧನ

ಭೋಪಾಲ್, ಮೇ 28: ಮಾಜಿ ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ (Twisha Sharma) ಅವರ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಮಹತ್ತರ ಕಾರ್ಯಾಚರಣೆ ನಡೆಸಿದ್ದು, ಅವರ ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಮಧ್ಯಪ್ರದೇಶ ಹೈಕೋರ್ಟ್ ಗಿರಿಬಾಲಾ ಸಿಂಗ್ (Giribala Singh) ಅವರಿಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಸಿಬಿಐ ಈ ಕ್ರಮ ಕೈಗೊಂಡಿದೆ. ಬಂಧಿತ ಗಿರಿಬಾಲಾ ಸಿಂಗ್ ಅವರು ನಿವೃತ್ತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಸಿಬಿಐ ಅಧಿಕಾರಿಗಳು ಗುರುವಾರ ಬೆಳಗ್ಗೆ ನಿ. ನ್ಯಾ| ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೆ ಹೋಗಿ ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿ ಆ ನಂತರ ಬಂಧಿಸಿದರೆಂದು ಹೇಳಲಾಗಿದೆ.

ತ್ವಿಶಾ ಅತ್ತೆಗೆ ಹೈಕೋರ್ಟ್ ಜಾಮೀನು ರದ್ದುಗೊಳಿಸಲು ಕಾರಣಗಳೇನು?

ಮೇ 15 ರಂದು ಭೋಪಾಲ್‌ನ ಸೆಷನ್ಸ್ ನ್ಯಾಯಾಲಯವು ಗಿರಿಬಾಲಾ ಸಿಂಗ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ದೇವನಾರಾಯಣ್ ಮಿಶ್ರಾ ಅವರ ಪೀಠವು ಜಾಮೀನನ್ನು ರದ್ದುಪಡಿಸಿತು.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ತ್ವಿಶಾ ಸಾವು ನೇಣು ಬಿಗಿದುಕೊಂಡಿದ್ದರಿಂದ ಸಂಭವಿಸಿದೆ. ಆದರೆ, ಅವರ ದೇಹದ ಮೇಲೆ (ಎಡಗೈ, ಉಂಗುರದ ಬೆರಳು ಹಾಗೂ ತಲೆಯಲ್ಲಿ) ಸಾವು ಸಂಭವಿಸುವ ಮುನ್ನವೇ ಆದ 6 ಗಾಯಗಳಿರುವುದು ಪತ್ತೆಯಾಗಿದೆ. ಶವವನ್ನು ಕೆಳಗೆ ಇಳಿಸುವಾಗ ಅಥವಾ ಆಸ್ಪತ್ರೆಗೆ ಸಾಗಿಸುವಾಗ ಈ ಗಾಯಗಳಾಗಿವೆ ಎಂಬ ಪ್ರತಿವಾದಿಗಳ ವಾದವನ್ನು ವೈದ್ಯಕೀಯ ವರದಿ ತಳ್ಳಿಹಾಕಿದೆ.

ಇದನ್ನೂ ಓದಿ: ಮಾಡೆಲ್ ತ್ವಿಶಾ ಶರ್ಮಾ ಸಾವು: ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲ ಸಿಂಗ್ ನಿರೀಕ್ಷಣಾ ಜಾಮೀನು ರದ್ದು

ತ್ವಿಶಾ ಪ್ರಕರಣ: ಗರ್ಭಪಾತದ ಒತ್ತಡ ಮತ್ತು ವಾಟ್ಸಾಪ್ ಚಾಟ್‌ಗಳು

ಮದುವೆಯಾದ ಕೇವಲ 5 ತಿಂಗಳಲ್ಲೇ ತ್ವಿಶಾ ಗರ್ಭಿಣಿಯಾಗಿದ್ದರು ಮತ್ತು ಎರಡು ತಿಂಗಳ ಒಳಗಾಗಿ ಗರ್ಭಪಾತವಾಗಿತ್ತು. ಮಗುವಿನ ಬಗ್ಗೆ ಪತಿ ಅನುಮಾನ ವ್ಯಕ್ತಪಡಿಸುತ್ತಿದ್ದ ಉಲ್ಲೇಖಗಳು ಹಾಗೂ ಗರ್ಭಪಾತ ಮಾಡಿಸಿಕೊಳ್ಳುವಂತೆ ಪತಿ ಮತ್ತು ಅತ್ತೆ ಇಬ್ಬರೂ ಮಾನಸಿಕ ಕಿರುಕುಳ ನೀಡುತ್ತಿದ್ದರೆಂಬ ಆಪಾದನೆಗಳಿಗೆ ಪೂರಕವಾದ ವಾಟ್ಸಾಪ್ ಚಾಟ್‌ಗಳನ್ನು ಕೆಳ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಆಕ್ಷೇಪಿಸಿತ್ತು.

ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಯು ಮಾಧ್ಯಮಗಳಲ್ಲಿ ಸಂದರ್ಶನಗಳನ್ನು ನೀಡುವ ಮೂಲಕ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಮತ್ತು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದ್ದರು.

ತ್ವಿಶಾ ಶರ್ಮಾ ಸಾವು ಪ್ರಕರಣದ ಹಿನ್ನೆಲೆ

33 ವರ್ಷದ ಮಾಜಿ ‘ಮಿಸ್ ಪುಣೆ’ ಮತ್ತು ಎಂಬಿಎ ಪದವೀಧರೆಯಾಗಿದ್ದ ತ್ವಿಶಾ ಶರ್ಮಾ (ಮೂಲತಃ ನೋಯ್ಡಾ ಉದ್ಯಮಿಗಳ ಮಗಳು), ಡಿಸೆಂಬರ್ 2025 ರಲ್ಲಿ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೇವಲ ಐದೇ ತಿಂಗಳಲ್ಲಿ, ಅಂದರೆ 2026ರ ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ಮನೆಯಲ್ಲಿ ತ್ವಿಶಾ ಶವವಾಗಿ ಪತ್ತೆಯಾಗಿದ್ದರು.

ಇದನ್ನೂ ಓದಿ: ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು

ವರದಕ್ಷಿಣೆ ಕಿರುಕುಳದ ಆರೋಪ: ಮದುವೆಯ ಸಮಯದಲ್ಲಿ ತಮ್ಮ ಶಕ್ತಿಗೆ ಮೀರಿ ವರದಕ್ಷಿಣೆ ಮತ್ತು ಉಡುಗೊರೆಗಳನ್ನು ನೀಡಿದ್ದರೂ, ಅತ್ತೆ ಗಿರಿಬಾಲಾ ಸಿಂಗ್ ಹೆಚ್ಚುವರಿಯಾಗಿ 2 ಲಕ್ಷ ರೂ ನಗದು ಬೇಡಿಕೆ ಇಟ್ಟು ಪಡೆದಿದ್ದರು ಎಂದು ತ್ವಿಶಾ ಕುಟುಂಬಸ್ಥರು ದೂರು ನೀಡಿದ್ದಾರೆ. ಮದುವೆಯಾದ ನಂತರವೂ ಪತಿ ಮತ್ತು ಅತ್ತೆ ನಿರಂತರವಾಗಿ ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಮತ್ತು ವೈಯಕ್ತಿಕ ಖರ್ಚಿಗೂ ಹಣ ನೀಡದೆ ಸತಾಯಿಸುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳೀಯ ಪೊಲೀಸರ ತನಿಖೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದಂತೆ ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಸಿಬಿಐ ಇತ್ತೀಚೆಗಷ್ಟೇ ವಹಿಸಿಕೊಂಡಿದೆ.

ಪ್ರಕರಣದ ಮೊದಲ ಆರೋಪಿಯಾದ ಪತಿ ಸಮರ್ಥ್ ಸಿಂಗ್ 10 ದಿನಗಳ ಕಾಲ ತಲೆಮರೆಸಿಕೊಂಡಿದ್ದು, ನಂತರ ಮೇ 22 ರಂದು ಜಬಲ್ಪುರದಲ್ಲಿ ಬಂಧನಕ್ಕೊಳಗಾಗಿದ್ದರು. ಪ್ರಸ್ತುತ ಪತಿ ಸಮರ್ಥ್ ಸಿಂಗ್ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಈಗ ಎರಡನೇ ಆರೋಪಿಯಾದ ಅತ್ತೆ ಗಿರಿಬಾಲಾ ಸಿಂಗ್ ಅವರನ್ನೂ ಸಿಬಿಐ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್

ಮೈಸೂರು, (ಮೇ 28): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Poliitcs) ನಾಯಕತ್ವ ಬದಲಾವಣೆ ಗುದ್ದಾಟ ಕೊನೆಗೂ ಅಂತ್ಯಗೊಂಡಿದೆ. ಸಿದ್ದರಾಮಯ್ಯನವರು (Siddaramaiah) ಇಂದು (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರ ಮೂರು ವರ್ಷಗಳ ರಾಜ್ಯಭಾರ ಅಂತ್ಯವಾಗಿದ್ದು, ಮುಂದಿನ ಸಿಎಂ ಡಿಕೆ ಶಿವಕುಮಾರ್ (DK Shivakumar) ಎನ್ನಲಾಗಿದೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನಕ್ಕೆ ಸಕಲ ಸಿದ್ಧತೆ ನಡೆಸಿದ್ದು, ಪ್ರಮಾಣವಚನಕ್ಕೆ ಮುಹೂರ್ತ ನೀಡುವಂತೆ ಜ್ಯೋತಿಷಿ ಮೊರೆ ಹೋಗಿದ್ದಾರೆ.

ಹೌದು….ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಅಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಸಿಎಲ್​​ಪಿ ಸಭೆ, ಹೊಸ ಸಚಿವ ಸಂಪುಟ ಹಾಗೂ ಡಿಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅದಕ್ಕೂ ಮೊದಲ ಡಿಕೆ ಶಿವಕುಮಾರ್ ಅವರು ಜ್ಯೋತಿಷಿ ದ್ವಾರಕನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಪ್ರಮಾಣವಚನಕ್ಕೆ ಒಳ್ಳೆ ಮುಹೂರ್ತ ನೋಡಿ ಎಂದು ಮನವಿ ಮಾಡಿದ್ದಾರೆ. ಮೂರು ಬೇರೆ ಬೇರೆ ದಿನಾಂಕಗಳನ್ನು ನೀಡುವಂತೆ ಮನವಿ ಮಾಡಿದ್ದು, ಪ್ರಮಾಣವಚನಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬರುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ, ಪ್ರಮಾಣವಚನ ಯಾವಾಗ ಏನು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ: ರಾಷ್ಟ್ರ ರಾಜಧಾನಿಯತ್ತ ಹಾರಿದ ನಾಯಕರ ದಂಡು

ಬೆಂಗಳೂರು, ಮೇ 28: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ ನಂತರ, ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಂಡಿದೆ. ಈ ಕುರಿತು ಚರ್ಚಿಸಲು ರಾಜ್ಯ ನಾಯಕರು ದೆಹಲಿಗೆ ಎರಡನೇ ಸುತ್ತಿನ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದು, ಅವರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಇಂದು ಸಂಜೆ 7:40ಕ್ಕೆ ದೆಹಲಿಗೆ ಪಯಣ ಬೆಳೆಸಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಚರ್ಚಿಸಿ ಸಿಎಲ್ಪಿ ಸಭೆ, ಹೊಸ ಸಿಎಂ ಆಯ್ಕೆ, ಡಿಸಿಎಂ ಸ್ಥಾನಗಳ ಹಂಚಿಕೆ ಮತ್ತು ಸಚಿವ ಸಂಪುಟ ರಚನೆ ಕುರಿತು ನಾಯಕರು ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಎಲ್ಲ ಬೆಳವಣಿಗೆಗಳು ನಡೆಯುತ್ತಿದ್ದು, ನೂತನ ಮುಖ್ಯಮಂತ್ರಿಗಳೊಂದಿಗೆ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಬಗ್ಗೆಯೂ ಚರ್ಚೆಗಳು ನಡೆಯಲಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ದೇವರ ಪ್ರಸಾದವೆಂದು ನಿಂಬೆ ರಸ ಕೊಟ್ಟು ಸಹೋದ್ಯೋಗಿ ಮಿತ್ರರನ್ನು ಪ್ರಾಂಕ್ ಮಾಡಿದ ವ್ಯಕ್ತಿ

ಆಫೀಸಿನಲ್ಲಿ (Office) ಕೆಲಸ ಮಾಡುವ ಸ್ಥಳದಲ್ಲಿ ತಮಾಷೆ ಮಾಡುವ ಸಹೋದ್ಯೋಗಿಗಳಿದ್ದರೆ (colleague) ಸಮಯ ಕಳೆದದ್ದೇ ತಿಳಿಯಲ್ಲ. ಸಹೋದ್ಯೋಗಿಗಳ ನಡುವಿನ ಹರಟೆ ಕೆಲಸದ ವಾತಾವರಣವನ್ನು ಹಗುರವಾಗಿಸುತ್ತದೆ. ತರ್ಲೆ ತಮಾಷೆ ಮಾಡುವವರು ಇದ್ದು ಬಿಟ್ಟರೆ ನಗುವಿಗೇನು ಕೊರತೆ ಇರಲ್ಲ. ವ್ಯಕ್ತಿಯೊಬ್ಬ ಆಫೀಸಿನಲ್ಲಿ ಸಹೋದ್ಯೋಗಿಗಳಿಗೆ ಪ್ರಾಂಕ್ ಮಾಡಿದ್ದಾನೆ. ಹೌದು, ಸಹೋದ್ಯೋಗಿಗಳಿಗೆ ದೇವರ ಪ್ರಸಾದ ಎಂದು ನಿಂಬೆ ರಸ ನೀಡಿರುವ ವಿಡಿಯೋ ವೈರಲ್ ಆಗಿದೆ.

@teambabyorgano ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಫೀಸಿನ ಸುಂದರ ಕ್ಷಣದ ವಿಡಿಯೋ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಆಫೀಸಿನಲ್ಲಿ ಸಹೋದ್ಯೋಗಿಗಳಿಗೆ ದೇವರ ಪ್ರಸಾದ ಎಂದು ನಿಂಬೆ ರಸ ನೀಡಿ ಪ್ರಾಂಕ್ ಮಾಡಲು ಮುಂದಾಗಿದ್ದಾನೆ. ಒಬ್ಬೊಬ್ಬರಾಗಿ ಪ್ರಸಾದವೆಂದು ಸ್ವೀಕರಿಸಿ ಕುಡಿಯುತ್ತಿದ್ದಂತೆ ನಿಂಬೆ ರಸ ಎಂದು ತಿಳಿದಿದೆ. ಆಫೀಸಿನ ಸಹೋದ್ಯೋಗಿಗಳು ನೀಡಿದ ರಿಯಾಕ್ಷನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕನಸು ನನಸಾದ ಕ್ಷಣ; ತನ್ನ ಅಜ್ಜಿಯನ್ನು ಮೈಕ್ರೋ ಸಾಫ್ಟ್ ಆಫೀಸ್ ತೋರಿಸಲು ಕರೆದೊಯ್ದ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ದೇವರ ಮೇಲಿನ ಭಕ್ತಿ ಅಂತಹದ್ದು ಎಂದರೆ, ಮತ್ತೊಬ್ಬರು ಭಾರತೀಯರುವಿಷ ಕೊಟ್ರು ಬೇಡ ಎನ್ನಲ್ಲ ಎಂದಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ಫೇಸ್ ರಿಯಾಕ್ಷನ್ ನೋಡಲು ಖುಷಿಯೆನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link