Category Archives: Blog

Your blog category

ಮಾಜಿ ಲವರ್ ಮನೆಗೆ ಹೋಗಿ ಆಕೆಯ ಪತಿಯ ಕೈಯಲ್ಲೇ ಕೊಲೆಯಾದ ಯುವಕ!

ಬೆಂಗಳೂರು, ಮೇ 28: ಹಳೇ ಪ್ರೇಮದ ನೆನಪಿನಲ್ಲಿ ಮಾಜಿ ಪ್ರೇಯಸಿಯನ್ನು (Ex Lover) ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದ ಯುವಕನೊಬ್ಬ ಭೀಕರವಾಗಿ ಕೊಲೆಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೇಯಸಿಯ ಪತಿ ಹಾಗೂ ಆಕೆಯ ಕುಟುಂಬಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಾಜಿ ಪ್ರೇಯಸಿ ಮನೆಗೆ ಹೋದ ಮೊಹಮ್ಮದ್ ಖಾಸಿಂ ಕೊಲೆಯಾಗಿದ್ದಾನೆ.
  • ಹಳೇ ಪ್ರೇಮಿಯ ಆಗಮನದಿಂದ ಕೆರಳಿದ ಪತಿ ಮತ್ತು ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ.
  • ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸರಿಂದ ತನಿಖೆ ತೀವ್ರಗೊಂಡಿದೆ.

ಪರಿಚಯ ಮತ್ತು ಹಳೇ ಪ್ರೇಮ

ಮೊಹಮ್ಮದ್ ಖಾಸಿಂ ಈ ಹಿಂದೆ ಯುವತಿಯೊಬ್ಬಳ ಜೊತೆ ಪ್ರೇಮ ಸಂಬಂಧದಲ್ಲಿದ್ದ. ಆದರೆ ಕೆಲವು ಕಾರಣಗಳಿಂದಾಗಿ ಇಬ್ಬರ ಬ್ರೇಕಪ್ ಆಗಿತ್ತು. ತದನಂತರ ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ ಪತಿಯೊಂದಿಗೆ ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಇತ್ತೀಚೆಗೆ ಖಾಸಿಂ ಆಕೆಯನ್ನು ಭೇಟಿಯಾಗಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಮನೆಗೆ ಹೋದಾಗ ನಡೆದಿದ್ದೇನು?

ಘಟನೆಯ ದಿನದಂದು ಖಾಸಿಂ ಯಾರಿಗೂ ತಿಳಿಸದೆ ನೇರವಾಗಿ ಬೆಂಗಳೂರಿನಲ್ಲಿರುವ ತನ್ನ ಮಾಜಿ ಪ್ರೇಯಸಿಯ ಮನೆಗೆ ಭೇಟಿ ನೀಡಿದ್ದ. ಈ ವೇಳೆ ಮನೆಯಲ್ಲಿದ್ದ ಆಕೆಯ ಪತಿ ಮತ್ತು ಕುಟುಂಬದ ಇತರ ಸದಸ್ಯರು ಆತನನ್ನು ನೋಡಿ ತೀವ್ರ ಆಕ್ರೋಶಗೊಂಡಿದ್ದರು. ಹಳೇ ಪ್ರೇಮಿಯ ಆಗಮನದಿಂದ ದಂಪತಿ ನಡುವೆ ಗಲಾಟೆ ಶುರುವಾಗಿದ್ದು, ಅದು ವಿಕೋಪಕ್ಕೆ ತಿರುಗಿತ್ತು.

ಯುವತಿಯ ಪತಿ ಮತ್ತು ಆಕೆಯ ಸಂಬಂಧಿಕರು ಕೋಪದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿಯ ಬಲೆಗೆ ಬಿದ್ದು ಕೋಟ್ಯಾಂತರ ರೂ. ಕಳೆದುಕೊಂಡ ಟೆಕ್ಕಿ!

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯ ಎಸಗಿದವರನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯಾಹ್ನ 3 ಗಂಟೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಘೋಷಿಸಿದ ಸಿದ್ದರಾಮಯ್ಯ!

ಬೆಂಗಳೂರು, ಮೇ 28: ರಾಜ್ಯ ರಾಜಕಾರಣದಲ್ಲಿ ದಶಕದ ದೊಡ್ಡ ಹೈಡ್ರಾಮಾ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇಂದು ನಡೆದ ಸಚಿವರ ಮಹತ್ವದ ‘ಬ್ರೇಕ್​ಫಾಸ್ಟ್​ ಮೀಟಿಂಗ್’ನಲ್ಲಿ ಸಿದ್ದರಾಮಯ್ಯ ಅವರು ತಾವಾಗಿಯೇ ಪದತ್ಯಾಗ ಮಾಡಲಿರುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಕಾರ್ಯದರ್ಶಿಗೆ ಪತ್ರ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಅತ್ಯಂತ ಸೌಹಾರ್ದಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರಸ್ಪರ ಆಲಿಂಗಿಸಿಕೊಂಡಿದ್ದಾರೆ.

ಮುಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ನಾಯಕತ್ವದ ಅಧ್ಯಾಯ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚಿತ್ರ ಕಾರಣ..! ಅನುಭವಿ ಗೂಗಲ್ ಉದ್ಯೋಗಿಯ ಅರ್ಜಿ ತಿರಸ್ಕಾರ; ಕಾಲೇಜು ಗ್ರೇಡ್ ಕಡಿಮೆ ಬಂದಿದ್ದಕ್ಕೆ ರಿಜೆಕ್ಟ್

ಬೆಂಗಳೂರು, ಮೇ 28: ಈಗಷ್ಟೇ ಕಾಲೇಜು ಮುಗಿಸಿ ಮೊದಲ ಕೆಲಸಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಶೈಕ್ಷಣಿಕ ಸಾಧನೆ ಮತ್ತು ಗ್ರೇಡ್​ಗಳನ್ನು ಪರಿಶೀಲಿಸುವುದುಂಟು. ಆದರೆ, ಅನುಭವಿ ವ್ಯಕ್ತಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಆತನ ಕಾಲೇಜು ಪರೀಕ್ಷೆಗಳ ಅಂಕಗಳಿಗೆ ಸಾಮಾನ್ಯವಾಗಿ ಯಾವ ಕಂಪನಿಗಳೂ ಆದ್ಯತೆ ಕೊಡುವುದಿಲ್ಲ. ಗೂಗಲ್​ನ 8 ವರ್ಷದ ಅನುಭವಿ ಉದ್ಯೋಗಿಯೊಬ್ಬರು ತಮಗಾದ ಅನುಭವವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರ್ಷಕ್ಕೆ 80 ಲಕ್ಷ ರೂಗೂ ಅಧಿಕ ಸಂಬಳ ಪಡೆಯುವ ಈ ಗೂಗಲ್ ಟೆಕ್ಕಿಯ (Google Employee) ಅರ್ಜಿಯನ್ನು ಭಾರತೀಯ ಸ್ಟಾರ್ಟಪ್ ತಿರಸ್ಕರಿಸಿತಂತೆ. ಈ ಅಪ್ಲಿಕೇಶನ್ ರಿಜೆಕ್ಟ್ ಮಾಡಲು ಸ್ಟಾರ್ಟಪ್ ನೀಡಿದ ಕಾರಣವನ್ನು ಈ ವ್ಯಕ್ತಿ ಬಹಿರಂಗಪಡಿಸಿದ್ದಾರೆ. ಈ ಕಾರಣ ಕೇಳಿ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಗೂಗಲ್ ಟೆಕ್ಕಿ (ಹೆಸರು ಹೇಳಲು ಇಚ್ಛಿಸಿಲ್ಲ) ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಉದಯೋನ್ಮುಖ ಸ್ಟಾರ್ಟ್‌ಅಪ್ ಕಂಪನಿಯೊಂದಕ್ಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಕಂಪನಿಯು ಅವರಿಗೆ ವಾಟ್ಸಾಪ್ (WhatsApp) ಮೂಲಕ ಸಂದೇಶ ಕಳುಹಿಸಿ, ಅವರ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದೆ. ಅದಕ್ಕೆ ಅವರು ನೀಡಿದ ಕಾರಣ: “ಅವರ ಕಾಲೇಜು ದಿನಗಳ CGPA ಅಂಕ 7 ಕ್ಕಿಂತ ಕಡಿಮೆ ಇತ್ತು!”. ಸಿಜಿಪಿಎ ಎಂಬುದು ವಿದ್ಯಾರ್ಥಿಯ ಎಲ್ಲಾ ಪರೀಕ್ಷೆಗಳನ್ನು ಸೇರಿಸಿ ನೀಡಲಾಗುವ ಗ್ರೇಡಿಂಗ್. ಸಾಮಾನ್ಯವಾಗಿ 10ಕ್ಕೆ ನಿರ್ದಿಷ್ಟ ಅಂಕಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಐಟಿ ಉದ್ಯಮದಲ್ಲಿ ಬರೋಬ್ಬರಿ 8 ವರ್ಷಗಳ ಸುದೀರ್ಘ ಅನುಭವವಿದೆ. ತಮಾಷೆಯೆಂದರೆ, ಸದರಿ ಎಂಜಿನಿಯರ್ ತಮ್ಮ ಬಯೋಡೇಟಾ (Resume) ದಲ್ಲಿ ಕಾಲೇಜು ಅಂಕಗಳನ್ನೇ ನಮೂದಿಸಿರಲಿಲ್ಲ. ಆದರೂ ಕಂಪನಿಯು ಹಳೆಯ ಅಂಕಗಳನ್ನು ಹುಡುಕಿ ತೆಗೆದು, ಅದರ ಆಧಾರದ ಮೇಲೆ ರಿಜೆಕ್ಟ್ ಮಾಡಿದೆ.

ಕಂಪನಿಯು ಕಳುಹಿಸಿದ ಸಂದೇಶದಲ್ಲಿ CGPA ಕೊರತೆಯನ್ನು ಬಿಟ್ಟರೆ ಅವರ ಕೌಶಲ್ಯ ಅಥವಾ ಅನುಭವದ ಬಗ್ಗೆ ಬೇರೆ ಯಾವುದೇ ಆಕ್ಷೇಪಣೆಗಳನ್ನು ಉಲ್ಲೇಖಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್

ಈ ವಿಲಕ್ಷಣ ಅನುಭವವನ್ನು ಆ ಉದ್ಯೋಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ತಕ್ಷಣವೇ ಇದು ವೈರಲ್ ಆಗಿದೆ. ಸ್ಟಾರ್ಟ್‌ಅಪ್‌ನ ಈ ಕ್ರಮಕ್ಕೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

ಎಂಟು ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ನೈಜ ಕೆಲಸದ ಅನುಭವ ಹೊಂದಿರುವ ಉದ್ಯೋಗಿಯ ಸಾಮರ್ಥ್ಯವನ್ನು ಅಳೆಯಲು ಹಳೆಯ ಪರೀಕ್ಷಾ ಅಂಕಗಳನ್ನು ಮಾನದಂಡವಾಗಿ ಬಳಸುವುದು ತರ್ಕಹೀನ ಎಂದು ಕೆಲವರು ಆಕ್ಷೇಪಿಸಿದ್ದಾರೆ.

“ಇಂತಹ ಸಣ್ಣ ಮನಸ್ಥಿತಿಯ ಕಂಪನಿಗೆ ಸೇರದೆ ಇರುವುದೇ ಒಳ್ಳೆಯದಾಯಿತು, ನೀವು ದೊಡ್ಡ ಅಪಾಯದಿಂದ ಪಾರಾಗಿದ್ದೀರಿ” (Dodged a bullet) ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಚಿನ್ನದ ಬೆಲೆ ಒಂದು ಗ್ರಾಮ್​ಗೆ 205 ರೂ ಇಳಿಕೆ; ಇಲ್ಲಿದೆ ದರಪಟ್ಟಿ

ನವದೆಹಲಿ, ಮೇ 28: ಚಿನ್ನದ ಬೆಲೆ ಸತತವಾಗಿ ಇಳಿಮುಖವಾಗುತ್ತಿದೆ. ಬೆಳ್ಳಿ ಬೆಲೆಯೂ ಕಳೆದ ಏಳೆಂಟು ದಿನದಲ್ಲಿ ಮೊದಲ ಬಾರಿ ಇಳಿದಿದೆ. ಬಂಗಾರದ ದರ (Gold Rate) ಒಂದು ಗ್ರಾಮ್​ಗೆ 200 ರೂಗಿಂತ ಹೆಚ್ಚಿನ ಮೊತ್ತದಷ್ಟು ಇಳಿಕೆಯಾಗಿದೆ. ಹಿಂದಿನ ಎರಡು ದಿನದಲ್ಲಿ 100 ರೂ ಬೆಲೆ ತಗ್ಗಿತ್ತು. ಭಾರತದಲ್ಲಿಯಷ್ಟೇ ಅಲ್ಲ ಬಹುತೇಕ ದೇಶಗಳ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 10 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 28ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,606 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,305 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,704 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,606 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,305 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,305 ರೂ
  • ಚೆನ್ನೈ: 14,500 ರೂ
  • ಮುಂಬೈ: 14,305 ರೂ
  • ದೆಹಲಿ: 14,320 ರೂ
  • ಕೋಲ್ಕತಾ: 14,305 ರೂ
  • ಕೇರಳ: 14,305 ರೂ
  • ಅಹ್ಮದಾಬಾದ್: 14,310 ರೂ
  • ಜೈಪುರ್: 14,320 ರೂ
  • ಲಕ್ನೋ: 14,320 ರೂ
  • ಭುವನೇಶ್ವರ್: 14,305 ರೂ

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (14,004 ರುಪಾಯಿ)
  • ದುಬೈ: 537 ಡಿರಾಮ್ (14,075 ರುಪಾಯಿ)
  • ಅಮೆರಿಕ: 146 ಡಾಲರ್ (14,054 ರುಪಾಯಿ)
  • ಸಿಂಗಾಪುರ: 193.50 ಸಿಂಗಾಪುರ್ ಡಾಲರ್ (14,546 ರುಪಾಯಿ)
  • ಕತಾರ್: 535.50 ಕತಾರಿ ರಿಯಾಲ್ (14,143 ರೂ)
  • ಸೌದಿ ಅರೇಬಿಯಾ: 560 ಸೌದಿ ರಿಯಾಲ್ (14,365 ರುಪಾಯಿ)
  • ಓಮನ್: 56.45 ಒಮಾನಿ ರಿಯಾಲ್ (14,113 ರುಪಾಯಿ)
  • ಕುವೇತ್: 44.68 ಕುವೇತಿ ದಿನಾರ್ (14,023 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 285 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 285 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 285 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಡೆಲ್ಲಿ ಡೇರ್​​ಡೆವಿಲ್ಸ್​​ಗಿತ್ತು ವೈಭವ್ ಸೂರ್ಯವಂಶಿ ಪಡೆಯೋ ಅವಕಾಶ

ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರು ಹೈದರಾಬಾದ್ ತಂಡದ ವಿರುದ್ಧ ಅಬ್ಬರಿಸಿದ್ದಾರೆ. ಕೇವಲ 28 ಬಾಲ್​​ಗೆ 97 ರನ್ ಹೊಡೆದು ಶತಕ ವಂಚಿತರಾಗಿದ್ದರು. ಆದಾಗ್ಯೂ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆಕ್ಷನ್ ವೇಳೆ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಲು ಡೆಲ್ಲಿ ಡೇರ್​​ಡೆವಿಲ್ಸ್​​ಗೆ ಅವಕಾಶ ಇತ್ತು. ಆದರೆ ಈ ಅವಕಾಶ ಕೈ ಚೆಲ್ಲಿದ್ದರು. ಒಂದೊಮ್ಮೆ ಅವರು ಆಕ್ಷನ್​ ಅಲ್ಲಿ ಸೂರ್ಯವಂಶಿಯನ್ನು ಖರೀದಿಸಿದ್ದರೆ ಡೆಲ್ಲಿ ಅದೃಷ್ಟ ಬದಲಾಗಿರುತ್ತಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weekly Love Horoscope: ಈ ರಾಶಿಯವರಿಗೆ ಈ ವಾರ ಸಂಗಾತಿಯಿಂದ ವಿಶೇಷ ಉಡುಗೊರೆ ಸಿಗುವ ಸಾಧ್ಯತೆಯಿದೆ

ವಾರದ ಪ್ರೇಮ – ಪ್ರೀತಿ ಭವಿಷ್ಯImage Credit source: Pinterest

ಮೇ 31ರಿಂದ ಜೂನ್ 06ರವರೆಗೆ ಜೂನ್ ಮೊದಲವಾರವಾಗಲಿದ್ದು, ಗುರುವಿನ ಸ್ಥಾನದ ಬದಲಾವಣೆಯಿಂದ ಪ್ರೇಮ ಜೀವನಕ್ಕೆ ಹೊಸ ಆಯಾಮ ಸಿಗಲಿದೆ. ಶುಕ್ರ ಶತ್ರುವಿನ ಸಹವಾಸದಿಂದ ಸದ್ಯ ಮುಕ್ತನಾಗುವನು. ಪ್ರೇಮದ ಫಲವನ್ನು ಕೊಡುವನು.

ಮೇಷ ರಾಶಿ:

ನಿಮ್ಮ ರಾಶಿಯಲ್ಲಿಯೇ ಮಂಗಳನಿರುವುದರಿಂದ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಆದರೆ ಸಂಗಾತಿಯೊಂದಿಗೆ ಮಾತನಾಡುವಾಗ ಹಠಮಾರಿತನ ಬಿಟ್ಟು ನಡೆದುಕೊಳ್ಳುವುದು ಒಳಿತು. ಅನಗತ್ಯ ವಾದಗಳು ದೂರವಾಗಿ ಪ್ರೀತಿ ಮೂಡುವುದು.

ವೃಷಭ ರಾಶಿ :

​ನಿಮ್ಮ ರಾಶಿಯಲ್ಲಿ ಸೂರ್ಯನಿದ್ದಾನೆ. ಸಂಗಾತಿಯ ಮೇಲಿನ ಪ್ರೀತಿ ಗಾಢವಾಗಲಿದ್ದರೂ, ಅಹಂಕಾರದ ಮಾತುಗಳು ಬಾಂಧವ್ಯಕ್ಕೆ ಕದಡಬಹುದು. ತಾಳ್ಮೆಯಿಂದ ವರ್ತಿಸಿದರೆ ಈ ವಾರ ಶೃಂಗಾರದ ಕ್ಷಣಗಳನ್ನು ಕಳೆಯಬಹುದು.

​ಮಿಥುನ ರಾಶಿ:

​ಬುಧ ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿ ಜಂಟಿಯಾಗಿದ್ದಾರೆ. ಪ್ರೇಮಿಗಳಿಗೆ ಅತ್ಯಂತ ಅದ್ಭುತವಾದ ಸಮಯವಿದು. ಮನಸ್ತಾಪಗಳು ದೂರವಾಗಿ ಹೊಸ ಒಡನಾಟ ಸೃಷ್ಟಿಯಾಗಲಿದೆ. ಸಂಗಾತಿಯಿಂದ ನಿಮಗಾಗಿ ವಿಶೇಷ ಉಡುಗೊರೆ ಸಿಗುವ ಸಾಧ್ಯತೆಯಿದೆ.

​ಕರ್ಕಾಟಕ ರಾಶಿ:

​ಗುರುವು ನಿಮ್ಮ ರಾಶಿಯಲ್ಲಿ ಉಚ್ಛಸ್ಥಿತಿಯಲ್ಲಿದ್ದಾನೆ. ಪ್ರೇಮ ಜೀವನದಲ್ಲಿ ಘನತೆ ಮತ್ತು ಪರಸ್ಪರ ಗೌರವ ಹೆಚ್ಚಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಹಳೆಯ ನೆನಪುಗಳು ನಿಮ್ಮಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಲಿವೆ.

ಸಿಂಹ ರಾಶಿ:

​ಕೇತು ನಿಮ್ಮ ರಾಶಿಯಲ್ಲಿದ್ದಾನೆ. ಪ್ರೇಮ ಬಾಂಧವ್ಯದಲ್ಲಿ ಸ್ವಲ್ಪ ಗೊಂದಲ ಅಥವಾ ಅಸ್ಪಷ್ಟತೆ ಮೂಡಬಹುದು. ಸಂಗಾತಿಯನ್ನು ಶಂಕಿಸದೆ ಮುಕ್ತವಾಗಿ ಮಾತನಾಡಿ. ವಾರಾಂತ್ಯದ ವೇಳೆಗೆ ಪರಿಸ್ಥಿತಿ ತಿಳಿಯಾಗಿ ಸುಧಾರಣೆ ಕಂಡುಬರಲಿದೆ.

ಕನ್ಯಾ ರಾಶಿ:

ಪ್ರೇಮ ಜೀವನದಲ್ಲಿ ಈ ವಾರ ಮಿಶ್ರಫಲ ಸಿಗಲಿದೆ. ಸಂಗಾತಿಯ ಭಾವನೆಗಳಿಗೆ ಸೂಕ್ತ ಗೌರವ ನೀಡುವುದು ಮುಖ್ಯ. ನಿಮ್ಮ ಕಾರ್ಯನಿರತತೆಯ ಮಧ್ಯೆಯೂ ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಟ್ಟರೆ ಸಂಬಂಧವು ಮಧುರವಾಗಿರುತ್ತದೆ.

ತುಲಾ ರಾಶಿ :

​ಪ್ರೇಮ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಪರಸ್ಪರ ನಂಬಿಕೆ ಹೆಚ್ಚಾಗಲಿದ್ದು, ದೂರದ ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಅವಿವಾಹಿತರಿಗೆ ಹೊಸ ಪರಿಚಯಗಳು ಪ್ರೇಮವಾಗಿ ಬದಲಾಗಬಹುದು.

ವೃಶ್ಚಿಕ ರಾಶಿ:

​ಭಾವನಾತ್ಮಕವಾಗಿ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಕನೆಕ್ಟ್ ಆಗುವಿರಿ. ಪ್ರೀತಿಯ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ಪರಸ್ಪರರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆದರೆ ಪ್ರೇಮ ಜೀವನ ಸುಖಮಯವಾಗಿರುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

​ಧನು ರಾಶಿ:

ನಿಮ್ಮ ಲಗ್ನದಲ್ಲೇ ಪೂರ್ವಷಾಢ ನಕ್ಷತ್ರದ ಪ್ರಭಾವವಿದೆ. ಸಂಗಾತಿಯ ಕಡೆಯಿಂದ ಉತ್ತಮ ಬೆಂಬಲ ದೊರೆಯಲಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಈ ವಾರ ಯೋಗ್ಯವಾಗಿದೆ. ಪರಸ್ಪರ ಆಕರ್ಷಣೆ ಹೆಚ್ಚಲಿದ್ದು, ಸಣ್ಣ ಪ್ರವಾಸದ ಯೋಗವಿದೆ.

ಮಕರ ರಾಶಿ:

​ಪ್ರೇಮ ವ್ಯವಹಾರಗಳಲ್ಲಿ ಸಮಾಧಾನದಿಂದ ಇರಬೇಕು. ಸಣ್ಣ ಪುಟ್ಟ ತಪ್ಪು ಕಲ್ಪನೆಗಳು ಮೂಡುವ ಸಂಭವವಿರುವುದರಿಂದ ಮಾತು ನಿಯಂತ್ರಣದಲ್ಲಿರಲಿ. ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ, ಬಾಂಧವ್ಯ ಗಟ್ಟಿಯಾಗಿರಲಿದೆ.

​ಕುಂಭ ರಾಶಿ:

ಚಂದ್ರ ಮತ್ತು ರಾಹು ಒಟ್ಟಿಗೆ ನಿಮ್ಮ ರಾಶಿಯಲ್ಲಿದ್ದಾರೆ. ಮನಸ್ಸಿನಲ್ಲಿ ಇಲ್ಲದ ಆತಂಕ ಅಥವಾ ಸಂಶಯಗಳು ಮೂಡಬಹುದು. ಸಂಗಾತಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಿ. ಗೊಂದಲಗಳನ್ನು ಬಗೆಹರಿಸಿಕೊಂಡರೆ ಪ್ರೀತಿ ಮತ್ತಷ್ಟು ಆಳವಾಗುತ್ತದೆ.

​ಮೀನ ರಾಶಿ:

​ನಿಮ್ಮ ರಾಶಿಯಲ್ಲಿ ಶನಿ ನೆಲೆಸಿದ್ದಾನೆ. ಪ್ರೇಮ ಸಂಬಂಧದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಂಗಾತಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಶ್ರಮಿಸುವಿರಿ. ಸಂಬಂಧದಲ್ಲಿ ತಾಳ್ಮೆ ಮತ್ತು ಪ್ರಬುದ್ಧತೆ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಣಬೀರ್, ಕರಣ್ ನನ್ನನ್ನು ತುಳಿಯುತ್ತಿದ್ದಾರೆ’; ರಣವೀರ್ ಸಿಂಗ್

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಸದ್ಯ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಅವರ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದ ಬೆನ್ನಲ್ಲೇ ಬಿ-ಟೌನ್‌ನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ರಣವೀರ್ ಅವರ ಈ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ಗೆ ಬರೋಬ್ಬರಿ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್’ ಒಕ್ಕೂಟವು ರಣವೀರ್ ಸಿಂಗ್ ವಿರುದ್ಧ ಅಸಹಕಾರ ಚಳವಳಿ ಆರಂಭಿಸಲು ಚಿಂತನೆ ನಡೆಸಿದೆ. ಒಕ್ಕೂಟದ ಯಾವುದೇ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂಬ ಎಚ್ಚರಿಕೆಯೂ ಕೇಳಿಬರುತ್ತಿದೆ. ಈ ಭಾರಿ ವಿವಾದದ ನಡುವೆಯೇ, ರಣವೀರ್ ಸಿಂಗ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಅಂತರ್ಜಾಲದಲ್ಲಿ ಮುನ್ನೆಲೆಗೆ ಬಂದಿದೆ.

ಕರಣ್ ಜೋಹರ್, ರಣಬೀರ್ ಕಪೂರ್ ನನ್ನನ್ನು ಟಾರ್ಗೆಟ್ ಮಾಡಿದರು

ರಣವೀರ್ ಸಿಂಗ್ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ, ಅಂದರೆ 2016ರಲ್ಲಿ ನಟ ರಣಬೀರ್ ಕಪೂರ್ ಜೊತೆಯಾಗಿ ಕರಣ್ ಜೋಹರ್ ಅವರ ಪ್ರಸಿದ್ಧ ಟಾಕ್ ಶೋ ‘ಕಾಫಿ ವಿದ್ ಕರಣ್’ ಸೀಸನ್ 5 ರಲ್ಲಿ ಭಾಗವಹಿಸಿದ್ದರು. ಅಂದು ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಂಡ ಆ ಎಪಿಸೋಡ್ ಇಂದಿಗೂ ಸಖತ್ ಫೇಮಸ್. ಆ ಶೋನಲ್ಲಿ ಕರಣ್ ಜೋಹರ್ ಮತ್ತು ರಣಬೀರ್ ಕಪೂರ್ ಇಬ್ಬರೂ ಸೇರಿ ದೀಪಿಕಾ ಪಡುಕೋಣೆ ವಿಷಯ ಎತ್ತಿದಾಗ, ರಣವೀರ್ ಸಿಂಗ್ ಅವರು ತಮಾಷೆಯಾಗಿ “ಇವರಿಬ್ಬರು ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ನಾನು ಇಲ್ಲಿ ಸಂತ್ರಸ್ತನಾಗುತ್ತಿದ್ದೇನೆ” ಎಂದು ಕಾಲೆಳೆದಿದ್ದರು.

ದೀಪಿಕಾ ವಿಷಯಕ್ಕೆ ಮುಜುಗರಕ್ಕೊಳಗಾಗಿದ್ದ ರಣವೀರ್

ಅಂದು ರಣವೀರ್ ಮತ್ತು ದೀಪಿಕಾ ಪಡುಕೋಣೆ ಡೇಟಿಂಗ್ ಮಾಡುತ್ತಿದ್ದರು (2018ರಲ್ಲಿ ಇವರ ಮದುವೆಯಾಯಿತು). ಅದಕ್ಕೂ ಮುನ್ನ ಚಿತ್ರರಂಗದ ಆರಂಭದ ದಿನಗಳಲ್ಲಿ ದೀಪಿಕಾ ಮತ್ತು ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಶೋನಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ರಣಬೀರ್ ಕಪೂರ್, ‘ನಮ್ಮ ನಡುವೆ ಯಾವುದೇ ಮುಜುಗರವಿಲ್ಲ, ನಾವೆಲ್ಲರೂ ಒಟ್ಟಿಗೆ ಪಾರ್ಟಿ ಮಾಡುತ್ತೇವೆ. ಮುಂದೊಂದು ದಿನ ರಣವೀರ್-ದೀಪಿಕಾ ಜೋಡಿಗೆ ಹುಟ್ಟುವ ಮಕ್ಕಳು ನನ್ನನ್ನು ಒಬ್ಬ ನಟನಾಗಿ ಇಷ್ಟಪಡುವಂತಾಗಲಿ’ ಎಂದು ತಮಾಷೆ ಮಾಡಿದ್ದರು. ರಣಬೀರ್ ಅವರ ಈ ಹಠಾತ್ ಮಾತಿನಿಂದ ಮುಜುಗರಕ್ಕೊಳಗಾದ ರಣವೀರ್ ನಗುತ್ತಾ, ’ಇಂದು ರಣಬೀರ್ ಎಲ್ಲೆ ಮೀರಿ ಮಾತನಾಡುತ್ತಿದ್ದಾನೆ’ ಎಂದಿದ್ದರು.

ಅದೇ ಶೋನಲ್ಲಿ ರಣಬೀರ್ ಕಪೂರ್ ಅವರು ರಣವೀರ್ ಸಿಂಗ್ ಅವರ ನಟನಾ ಸಾಮರ್ಥ್ಯವನ್ನು ಮುಕ್ತವಾಗಿ ಹೊಗಳಿದ್ದರು. ಆ ಸಮಯದಲ್ಲಿ ರಣಬೀರ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸತತ ಸೋಲು ಕಾಣುತ್ತಿದ್ದವು. ತಮ್ಮ ಸೋಲಿನ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದ ರಣಬೀರ್, “ನನ್ನ ಸಿನಿಮಾಗಳು ಓಡದೇ ಇದ್ದಾಗ ಗೊಂದಲವಾಗುವುದು ಸಹಜ. ಆದರೆ ರಣವೀರ್ ತೆರೆಮೇಲೆ ಮಿಂಚುವುದನ್ನು ನೋಡಿದಾಗ ನನಗೆ ಬೇಸರವಾಗುವುದಿಲ್ಲ, ಬದಲಿಗೆ ಮತ್ತಷ್ಟು ಪ್ರೇರಣೆ ಸಿಗುತ್ತದೆ. ‘ರಾಮ್-ಲೀಲಾ’, ‘ದಿಲ್ ಧಡಕನೆ ದೋ’ ಮತ್ತು ‘ಬಾಜೀರಾವ್ ಮಸ್ತಾನಿ’ ಚಿತ್ರಗಳಲ್ಲಿ ಆತನ ನಟನೆ ನೋಡಿ ನಾನು ಇನ್ನೂ ಉತ್ತಮವಾಗಿ ಕೆಲಸ ಮಾಡಬೇಕು ಎನಿಸಿತು. ಈ ಹುಡುಗನ ಪ್ರತಿಭೆಗೆ ಎಲ್ಲೆಯೇ ಇಲ್ಲ, ನನಗೆ ಆತನ ಸ್ಪರ್ಧೆಯ ಬಗ್ಗೆ ಕೊಂಚ ಹೆದರಿಕೆಯೂ ಇದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ನಷ್ಟ ಮಾಡಿ ಡಿಸ್ಕೌಂಟ್ ಕೇಳಿದ ರಣವೀರ್ ಸಿಂಗ್; ಸಂಧಾನ ಸಭೆಯಲ್ಲಿ ನಡೆದಿದ್ದೇನು?

ಒಂದೆಡೆ ಅಂದು ಬಾಲಿವುಡ್‌ನ ಭವಿಷ್ಯದ ಸೂಪರ್‌ಸ್ಟಾರ್ ಎಂದು ಕೊಂಡಾಡಲ್ಪಟ್ಟ ರಣವೀರ್ ಸಿಂಗ್ ಅವರ ಹಳೆಯ ಸ್ನೇಹದ ವಿಡಿಯೋ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ ‘ಡಾನ್ 3’ ವಿವಾದದಿಂದಾಗಿ ಅವರ ಸಿನಿ ಜರ್ನಿಗೆ ಭಾರಿ ಹಿನ್ನಡೆಯಾಗುವ ಆತಂಕ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಪರೂಪದ ಅಪ್ಪುಗೆ, ಬ್ರೇಕ್​ಫಾಸ್ಟ್ ಮೀಟಿಂಗ್ ಎಕ್ಸ್​ಕ್ಲೂಸಿವ್ ದೃಶ್ಯ ಇಲ್ಲಿದೆ

ಬೆಂಗಳೂರು, ಮೇ 28: ರಾಜ್ಯ ರಾಜಕಾರಣದಲ್ಲಿ ಬಹು ನಿರೀಕ್ಷಿತ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿಎಂ ಸಿದ್​ದರಾಮಯ್ಯ ಕರೆದಿರುವ ಬ್ರೇಕ್ಫಾಸ್ಟ್ ಮೀಟಿಂಗ್ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯನವರ ಪಾದಸ್ಪರ್ಶ ಮಾಡಿ ನಂತರ ಆತ್ಮೀಯವಾಗಿ ಆಲಿಂಗಿಸಿಕೊಂಡರು. ಸಿದ್ದರಾಮಯ್ಯನವರು ನಗುಮುಖದಿಂದ ಕಾಣಿಸಿಕೊಂಡರೆ, ಡಿ.ಕೆ. ಶಿವಕುಮಾರ್ ತುಸು ಭಾವುಕರಾಗಿದ್ದಂತೆ ಕಂಡುಬಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರೂ ನಾಯಕರು ಯಾವುದೇ ಸಿಬ್ಬಂದಿಯಿಲ್ಲದೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ಮಾತುಕತೆ ರಾಜ್ಯದ ರಾಜಕೀಯ ಬೆಳವಣಿಗೆಗಳು, ಅಧಿಕಾರ ಹಂಚಿಕೆ ಮತ್ತು ಮುಂದಿನ ಯೋಜನೆಗಳ ಕುರಿತು ಕೇಂದ್ರೀಕೃತವಾಗಿತ್ತು ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

West Bengal:ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಬೃಹತ್ ವಂಚನೆ: 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ ಸಿಎಂ ಸುವೇಂದು ಘೋಷಣೆ

ಕೋಲ್ಕತ್ತಾ, ಮೇ 28: ಪಶ್ಚಿಮ ಬಂಗಾಳ(West Bengal) ರಾಜಕೀಯದಲ್ಲಿ ಮಹಿಳಾ ಕಲ್ಯಾಣ ಯೋಜನೆಗಳ ಕುರಿತು ಮತ್ತೊಮ್ಮೆ ಭಾರಿ ವಿವಾದ ಸೃಷ್ಟಿಯಾಗಿದೆ. ರಾಜ್ಯದ ಜನಪ್ರಿಯ ‘ಲಕ್ಷ್ಮಿ ಭಂಡಾರ್’ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸುಮಾರು 3 ಮಿಲಿಯನ್ (30 ಲಕ್ಷ) ಫಲಾನುಭವಿಗಳು ಈ ಯೋಜನೆಗೆ ಸಂಪೂರ್ಣ ಅನರ್ಹರಾಗಿದ್ದಾರೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ  ಹೇಳಿದ್ದಾರೆ.

ಅನರ್ಹರಾಗಲು ಕಾರಣವೇನು?

ನಬನ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಈ 30 ಲಕ್ಷ ಫಲಾನುಭವಿಗಳು ಭಾರತೀಯ ನಾಗರಿಕರಲ್ಲ ಅಥವಾ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ನಿಯಮಗಳ ಪ್ರಕಾರ ಇವರು ಯೋಜನೆಗೆ ಅರ್ಹರಲ್ಲದಿದ್ದರೂ, ಸೌಲಭ್ಯ ಪಡೆಯುತ್ತಿದ್ದಾರೆ. ಕೆಲವರು ಅಗತ್ಯ ಪೌರತ್ವ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹೊಸ ‘ಅನ್ನಪೂರ್ಣ ಭಂಡಾರ್’ ಯೋಜನೆ ಘೋಷಣೆ

ಮಮತಾ ಬ್ಯಾನರ್ಜಿ ಸರ್ಕಾರ ಆರಂಭಿಸಿದ್ದ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪರ್ಯಾಯವಾಗಿ, ಬಿಜೆಪಿಯ ಪ್ರಸ್ತಾವಿತ ಹೊಸ ಯೋಜನೆ ‘ಅನ್ನಪೂರ್ಣ ಭಂಡಾರ್’ ನಮೂನೆಯನ್ನು (ಫಾರ್ಮ್) ಮುಖ್ಯಮಂತ್ರಿ ಪ್ರಸ್ತುತಪಡಿಸಿದರು. ಚುನಾವಣಾ ಭರವಸೆಯಂತೆ ಈ ಹೊಸ ಯೋಜನೆಯಡಿ ಅರ್ಹ ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂ. ರೂಪಾಯಿ ಆರ್ಥಿಕ ಸಹಾಯ ನೀಡಲಾಗುತ್ತದೆ.

ಮತ್ತಷ್ಟು ಓದಿ: ಬಂಗಾಳದ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ

ಪ್ರಸ್ತುತ ಇರುವ ಲಕ್ಷ್ಮಿ ಭಂಡಾರ್ ಯೋಜನೆಯಡಿ ಸಾಮಾನ್ಯ ವರ್ಗದ ಮಹಿಳೆಯರಿಗೆ ತಿಂಗಳಿಗೆ 1,500 ರೂ.. ಹಾಗೂ ಎಸ್‌ಸಿ/ಎಸ್‌ಟಿ ವರ್ಗದ ಮಹಿಳೆಯರಿಗೆ 1700 ರೂ. ನೀಡಲಾಗುತ್ತಿದೆ. ಹೊಸ ಯೋಜನೆಗೆ ಸರಿಯಾದ ದಾಖಲೆಗಳಿದ್ದವರು ಮಾತ್ರ ಅರ್ಹರಾಗಿರುತ್ತಾರೆ. ಪೌರತ್ವ ಕಾಯ್ದೆಗೆ (CAA) ಸಂಬಂಧಿಸಿದ ಅರ್ಜಿ ಸಲ್ಲಿಸಿದವರು ಅಥವಾ ವಿಶೇಷ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದವರನ್ನು ಮಾತ್ರ ಅರ್ಹರೆಂದು ಪರಿಗಣಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಅರ್ಜಿ ನಮೂನೆಯ ಮೂಲಕ ಇನ್ನು ಮುಂದೆ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮಹಿಳಾ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಈ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪರಿಶೀಲನಾ ಪ್ರಕ್ರಿಯೆ ಮುಗಿಯಲು ಸಮಯ ತೆಗೆದುಕೊಳ್ಳುವುದರಿಂದ, ಅಲ್ಲಿಯವರೆಗೆ ಸದ್ಯದ ಫಲಾನುಭವಿಗಳಿಗೆ ಹಳೆಯ ಯೋಜನೆಯಡಿ ಹಣಕಾಸಿನ ನೆರವು ಸಿಗುತ್ತಲೇ ಇರಲಿದೆ ಎಂದು ಸರ್ಕಾರ ಭರವಸೆ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Optical Illusion: ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಗೂಬೆಗಳನ್ನು ಗುರುತಿಸಿ

ಆಪ್ಟಿಕಲ್‌ ಇಲ್ಯೂಷನ್‌ (optical Illusion) ಚಿತ್ರಗಳನ್ನು ಬಿಡಿಸುವುದೆಂದರೆ ಎಲ್ಲರಿಗೂ ಇಷ್ಟನೇ. ಕೆಲವು ಒಗಟಿನ ಚಿತ್ರಗಳನ್ನು ಬಿಡಿಸುವಾಗ ಟ್ರಿಕ್ಕಿ ಅನಿಸುತ್ತದೆ. ಆದರೆ ಕೆಲವರು ತಮ್ಮ ಬುದ್ಧಿವಂತಿಕೆ ಬಳಸಿ ಸುಲಭವಾಗಿ ಒಗಟು ಬಿಡಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಗಟಿನ ಚಿತ್ರ ವೈರಲ್ ಆಗಿದೆ. ಇದರಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಮೂರು ಗೂಬೆಗಳನ್ನು ಗುರುತಿಸಬೇಕು. ಈ ಒಗಟು ಬಿಡಿಸಲು ನಿಮಗಿರುವ ಸಮಯ ಹತ್ತು ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.

ಈ ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?

ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಜನರ ಗುಂಪನ್ನು ಕಾಣಬಹುದು. ಈ ಚಿತ್ರದಲ್ಲಿ ಜನರ ನಡುವೆ ಪ್ರಾಣಿ ಪಕ್ಷಿಗಳಿವೆ. ಆದರೆ ನೀವು ಈ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಮೂರು ಗೂಬೆಗಳನ್ನು ಕಂಡು ಹಿಡಿಯಬೇಕು. ಮೊದಲಿಗೆ ನಿಮಗೆ ಕಷ್ಟವೆನಿಸಬಹುದು.. ನೀವು ಎರಡು ಅಥವಾ ಮೂರು ಬಾರಿ ಪ್ರಯತ್ನಿಸಿದರೆ ಹತ್ತು ಸೆಕೆಂಡುಗಳಲ್ಲಿ ಗೂಬೆ ಕಂಡು ಹಿಡಿಯಲು ಸಾಧ್ಯ.

ಇದನ್ನೂ ಓದಿ: ಈ ಚಿತ್ರದಲ್ಲಿ o ಅಕ್ಷರಗಳ ನಡುವೆ ಇರುವ ಸೊನ್ನೆಯನ್ನು ಗುರುತಿಸಬಲ್ಲಿರಾ

ಗೂಬೆಗಳು ನಿಮ್ಮ ಕಣ್ಣಿಗೆ ಬಿದ್ದಿತೇ?

ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವ ಈ ಇಲ್ಯೂಷನ್ ಚಿತ್ರದಲ್ಲಿ ಗೂಬೆಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಜನರ ಗುಂಪಿನ ನಡುವೆ ಈ ಪಕ್ಷಿಯಿದ್ದರೂ ಅಷ್ಟು ಸುಲಭವಾಗಿ ಈ ಗೂಬೆಗಳು ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ನಾವು ಈ ಕೆಳಗಿನ ಚಿತ್ರದಲ್ಲಿ ಗೂಬೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:01 am, Thu, 28 May 26

Source link