ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರು ಹೈದರಾಬಾದ್ ತಂಡದ ವಿರುದ್ಧ ಅಬ್ಬರಿಸಿದ್ದಾರೆ. ಕೇವಲ 28 ಬಾಲ್ಗೆ 97 ರನ್ ಹೊಡೆದು ಶತಕ ವಂಚಿತರಾಗಿದ್ದರು. ಆದಾಗ್ಯೂ ಎಲಿಮಿನೇಟರ್ ಪಂದ್ಯದಲ್ಲಿ ಆರ್ಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆಕ್ಷನ್ ವೇಳೆ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಲು ಡೆಲ್ಲಿ ಡೇರ್ಡೆವಿಲ್ಸ್ಗೆ ಅವಕಾಶ ಇತ್ತು. ಆದರೆ ಈ ಅವಕಾಶ ಕೈ ಚೆಲ್ಲಿದ್ದರು. ಒಂದೊಮ್ಮೆ ಅವರು ಆಕ್ಷನ್ ಅಲ್ಲಿ ಸೂರ್ಯವಂಶಿಯನ್ನು ಖರೀದಿಸಿದ್ದರೆ ಡೆಲ್ಲಿ ಅದೃಷ್ಟ ಬದಲಾಗಿರುತ್ತಿತ್ತು.
ವಾರದ ಪ್ರೇಮ – ಪ್ರೀತಿ ಭವಿಷ್ಯImage Credit source: Pinterest
ಮೇ 31ರಿಂದ ಜೂನ್ 06ರವರೆಗೆ ಜೂನ್ ಮೊದಲವಾರವಾಗಲಿದ್ದು, ಗುರುವಿನ ಸ್ಥಾನದ ಬದಲಾವಣೆಯಿಂದ ಪ್ರೇಮ ಜೀವನಕ್ಕೆ ಹೊಸ ಆಯಾಮ ಸಿಗಲಿದೆ. ಶುಕ್ರ ಶತ್ರುವಿನ ಸಹವಾಸದಿಂದ ಸದ್ಯ ಮುಕ್ತನಾಗುವನು. ಪ್ರೇಮದ ಫಲವನ್ನು ಕೊಡುವನು.
ಮೇಷ ರಾಶಿ:
ನಿಮ್ಮ ರಾಶಿಯಲ್ಲಿಯೇ ಮಂಗಳನಿರುವುದರಿಂದ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಆದರೆ ಸಂಗಾತಿಯೊಂದಿಗೆ ಮಾತನಾಡುವಾಗ ಹಠಮಾರಿತನ ಬಿಟ್ಟು ನಡೆದುಕೊಳ್ಳುವುದು ಒಳಿತು. ಅನಗತ್ಯ ವಾದಗಳು ದೂರವಾಗಿ ಪ್ರೀತಿ ಮೂಡುವುದು.
ವೃಷಭ ರಾಶಿ :
ನಿಮ್ಮ ರಾಶಿಯಲ್ಲಿ ಸೂರ್ಯನಿದ್ದಾನೆ. ಸಂಗಾತಿಯ ಮೇಲಿನ ಪ್ರೀತಿ ಗಾಢವಾಗಲಿದ್ದರೂ, ಅಹಂಕಾರದ ಮಾತುಗಳು ಬಾಂಧವ್ಯಕ್ಕೆ ಕದಡಬಹುದು. ತಾಳ್ಮೆಯಿಂದ ವರ್ತಿಸಿದರೆ ಈ ವಾರ ಶೃಂಗಾರದ ಕ್ಷಣಗಳನ್ನು ಕಳೆಯಬಹುದು.
ಮಿಥುನ ರಾಶಿ:
ಬುಧ ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿ ಜಂಟಿಯಾಗಿದ್ದಾರೆ. ಪ್ರೇಮಿಗಳಿಗೆ ಅತ್ಯಂತ ಅದ್ಭುತವಾದ ಸಮಯವಿದು. ಮನಸ್ತಾಪಗಳು ದೂರವಾಗಿ ಹೊಸ ಒಡನಾಟ ಸೃಷ್ಟಿಯಾಗಲಿದೆ. ಸಂಗಾತಿಯಿಂದ ನಿಮಗಾಗಿ ವಿಶೇಷ ಉಡುಗೊರೆ ಸಿಗುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ:
ಗುರುವು ನಿಮ್ಮ ರಾಶಿಯಲ್ಲಿ ಉಚ್ಛಸ್ಥಿತಿಯಲ್ಲಿದ್ದಾನೆ. ಪ್ರೇಮ ಜೀವನದಲ್ಲಿ ಘನತೆ ಮತ್ತು ಪರಸ್ಪರ ಗೌರವ ಹೆಚ್ಚಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಹಳೆಯ ನೆನಪುಗಳು ನಿಮ್ಮಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಲಿವೆ.
ಸಿಂಹ ರಾಶಿ:
ಕೇತು ನಿಮ್ಮ ರಾಶಿಯಲ್ಲಿದ್ದಾನೆ. ಪ್ರೇಮ ಬಾಂಧವ್ಯದಲ್ಲಿ ಸ್ವಲ್ಪ ಗೊಂದಲ ಅಥವಾ ಅಸ್ಪಷ್ಟತೆ ಮೂಡಬಹುದು. ಸಂಗಾತಿಯನ್ನು ಶಂಕಿಸದೆ ಮುಕ್ತವಾಗಿ ಮಾತನಾಡಿ. ವಾರಾಂತ್ಯದ ವೇಳೆಗೆ ಪರಿಸ್ಥಿತಿ ತಿಳಿಯಾಗಿ ಸುಧಾರಣೆ ಕಂಡುಬರಲಿದೆ.
ಕನ್ಯಾ ರಾಶಿ:
ಪ್ರೇಮ ಜೀವನದಲ್ಲಿ ಈ ವಾರ ಮಿಶ್ರಫಲ ಸಿಗಲಿದೆ. ಸಂಗಾತಿಯ ಭಾವನೆಗಳಿಗೆ ಸೂಕ್ತ ಗೌರವ ನೀಡುವುದು ಮುಖ್ಯ. ನಿಮ್ಮ ಕಾರ್ಯನಿರತತೆಯ ಮಧ್ಯೆಯೂ ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಟ್ಟರೆ ಸಂಬಂಧವು ಮಧುರವಾಗಿರುತ್ತದೆ.
ತುಲಾ ರಾಶಿ :
ಪ್ರೇಮ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಪರಸ್ಪರ ನಂಬಿಕೆ ಹೆಚ್ಚಾಗಲಿದ್ದು, ದೂರದ ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಅವಿವಾಹಿತರಿಗೆ ಹೊಸ ಪರಿಚಯಗಳು ಪ್ರೇಮವಾಗಿ ಬದಲಾಗಬಹುದು.
ವೃಶ್ಚಿಕ ರಾಶಿ:
ಭಾವನಾತ್ಮಕವಾಗಿ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಕನೆಕ್ಟ್ ಆಗುವಿರಿ. ಪ್ರೀತಿಯ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ಪರಸ್ಪರರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆದರೆ ಪ್ರೇಮ ಜೀವನ ಸುಖಮಯವಾಗಿರುತ್ತದೆ.
ನಿಮ್ಮ ಲಗ್ನದಲ್ಲೇ ಪೂರ್ವಷಾಢ ನಕ್ಷತ್ರದ ಪ್ರಭಾವವಿದೆ. ಸಂಗಾತಿಯ ಕಡೆಯಿಂದ ಉತ್ತಮ ಬೆಂಬಲ ದೊರೆಯಲಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಈ ವಾರ ಯೋಗ್ಯವಾಗಿದೆ. ಪರಸ್ಪರ ಆಕರ್ಷಣೆ ಹೆಚ್ಚಲಿದ್ದು, ಸಣ್ಣ ಪ್ರವಾಸದ ಯೋಗವಿದೆ.
ಮಕರ ರಾಶಿ:
ಪ್ರೇಮ ವ್ಯವಹಾರಗಳಲ್ಲಿ ಸಮಾಧಾನದಿಂದ ಇರಬೇಕು. ಸಣ್ಣ ಪುಟ್ಟ ತಪ್ಪು ಕಲ್ಪನೆಗಳು ಮೂಡುವ ಸಂಭವವಿರುವುದರಿಂದ ಮಾತು ನಿಯಂತ್ರಣದಲ್ಲಿರಲಿ. ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ, ಬಾಂಧವ್ಯ ಗಟ್ಟಿಯಾಗಿರಲಿದೆ.
ಕುಂಭ ರಾಶಿ:
ಚಂದ್ರ ಮತ್ತು ರಾಹು ಒಟ್ಟಿಗೆ ನಿಮ್ಮ ರಾಶಿಯಲ್ಲಿದ್ದಾರೆ. ಮನಸ್ಸಿನಲ್ಲಿ ಇಲ್ಲದ ಆತಂಕ ಅಥವಾ ಸಂಶಯಗಳು ಮೂಡಬಹುದು. ಸಂಗಾತಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಿ. ಗೊಂದಲಗಳನ್ನು ಬಗೆಹರಿಸಿಕೊಂಡರೆ ಪ್ರೀತಿ ಮತ್ತಷ್ಟು ಆಳವಾಗುತ್ತದೆ.
ಮೀನ ರಾಶಿ:
ನಿಮ್ಮ ರಾಶಿಯಲ್ಲಿ ಶನಿ ನೆಲೆಸಿದ್ದಾನೆ. ಪ್ರೇಮ ಸಂಬಂಧದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಂಗಾತಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಶ್ರಮಿಸುವಿರಿ. ಸಂಬಂಧದಲ್ಲಿ ತಾಳ್ಮೆ ಮತ್ತು ಪ್ರಬುದ್ಧತೆ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ.
ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಸದ್ಯ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಅವರ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದ ಬೆನ್ನಲ್ಲೇ ಬಿ-ಟೌನ್‌ನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ರಣವೀರ್ ಅವರ ಈ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ಗೆ ಬರೋಬ್ಬರಿ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್’ ಒಕ್ಕೂಟವು ರಣವೀರ್ ಸಿಂಗ್ ವಿರುದ್ಧ ಅಸಹಕಾರ ಚಳವಳಿ ಆರಂಭಿಸಲು ಚಿಂತನೆ ನಡೆಸಿದೆ. ಒಕ್ಕೂಟದ ಯಾವುದೇ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂಬ ಎಚ್ಚರಿಕೆಯೂ ಕೇಳಿಬರುತ್ತಿದೆ. ಈ ಭಾರಿ ವಿವಾದದ ನಡುವೆಯೇ, ರಣವೀರ್ ಸಿಂಗ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಅಂತರ್ಜಾಲದಲ್ಲಿ ಮುನ್ನೆಲೆಗೆ ಬಂದಿದೆ.
ಕರಣ್ ಜೋಹರ್, ರಣಬೀರ್ ಕಪೂರ್ ನನ್ನನ್ನು ಟಾರ್ಗೆಟ್ ಮಾಡಿದರು
ರಣವೀರ್ ಸಿಂಗ್ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ, ಅಂದರೆ 2016ರಲ್ಲಿ ನಟ ರಣಬೀರ್ ಕಪೂರ್ ಜೊತೆಯಾಗಿ ಕರಣ್ ಜೋಹರ್ ಅವರ ಪ್ರಸಿದ್ಧ ಟಾಕ್ ಶೋ ‘ಕಾಫಿ ವಿದ್ ಕರಣ್’ ಸೀಸನ್ 5 ರಲ್ಲಿ ಭಾಗವಹಿಸಿದ್ದರು. ಅಂದು ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಂಡ ಆ ಎಪಿಸೋಡ್ ಇಂದಿಗೂ ಸಖತ್ ಫೇಮಸ್. ಆ ಶೋನಲ್ಲಿ ಕರಣ್ ಜೋಹರ್ ಮತ್ತು ರಣಬೀರ್ ಕಪೂರ್ ಇಬ್ಬರೂ ಸೇರಿ ದೀಪಿಕಾ ಪಡುಕೋಣೆ ವಿಷಯ ಎತ್ತಿದಾಗ, ರಣವೀರ್ ಸಿಂಗ್ ಅವರು ತಮಾಷೆಯಾಗಿ “ಇವರಿಬ್ಬರು ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ನಾನು ಇಲ್ಲಿ ಸಂತ್ರಸ್ತನಾಗುತ್ತಿದ್ದೇನೆ” ಎಂದು ಕಾಲೆಳೆದಿದ್ದರು.
ದೀಪಿಕಾ ವಿಷಯಕ್ಕೆ ಮುಜುಗರಕ್ಕೊಳಗಾಗಿದ್ದ ರಣವೀರ್
ಅಂದು ರಣವೀರ್ ಮತ್ತು ದೀಪಿಕಾ ಪಡುಕೋಣೆ ಡೇಟಿಂಗ್ ಮಾಡುತ್ತಿದ್ದರು (2018ರಲ್ಲಿ ಇವರ ಮದುವೆಯಾಯಿತು). ಅದಕ್ಕೂ ಮುನ್ನ ಚಿತ್ರರಂಗದ ಆರಂಭದ ದಿನಗಳಲ್ಲಿ ದೀಪಿಕಾ ಮತ್ತು ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಶೋನಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ರಣಬೀರ್ ಕಪೂರ್, ‘ನಮ್ಮ ನಡುವೆ ಯಾವುದೇ ಮುಜುಗರವಿಲ್ಲ, ನಾವೆಲ್ಲರೂ ಒಟ್ಟಿಗೆ ಪಾರ್ಟಿ ಮಾಡುತ್ತೇವೆ. ಮುಂದೊಂದು ದಿನ ರಣವೀರ್-ದೀಪಿಕಾ ಜೋಡಿಗೆ ಹುಟ್ಟುವ ಮಕ್ಕಳು ನನ್ನನ್ನು ಒಬ್ಬ ನಟನಾಗಿ ಇಷ್ಟಪಡುವಂತಾಗಲಿ’ ಎಂದು ತಮಾಷೆ ಮಾಡಿದ್ದರು. ರಣಬೀರ್ ಅವರ ಈ ಹಠಾತ್ ಮಾತಿನಿಂದ ಮುಜುಗರಕ್ಕೊಳಗಾದ ರಣವೀರ್ ನಗುತ್ತಾ, ’ಇಂದು ರಣಬೀರ್ ಎಲ್ಲೆ ಮೀರಿ ಮಾತನಾಡುತ್ತಿದ್ದಾನೆ’ ಎಂದಿದ್ದರು.
ಅದೇ ಶೋನಲ್ಲಿ ರಣಬೀರ್ ಕಪೂರ್ ಅವರು ರಣವೀರ್ ಸಿಂಗ್ ಅವರ ನಟನಾ ಸಾಮರ್ಥ್ಯವನ್ನು ಮುಕ್ತವಾಗಿ ಹೊಗಳಿದ್ದರು. ಆ ಸಮಯದಲ್ಲಿ ರಣಬೀರ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸತತ ಸೋಲು ಕಾಣುತ್ತಿದ್ದವು. ತಮ್ಮ ಸೋಲಿನ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದ ರಣಬೀರ್, “ನನ್ನ ಸಿನಿಮಾಗಳು ಓಡದೇ ಇದ್ದಾಗ ಗೊಂದಲವಾಗುವುದು ಸಹಜ. ಆದರೆ ರಣವೀರ್ ತೆರೆಮೇಲೆ ಮಿಂಚುವುದನ್ನು ನೋಡಿದಾಗ ನನಗೆ ಬೇಸರವಾಗುವುದಿಲ್ಲ, ಬದಲಿಗೆ ಮತ್ತಷ್ಟು ಪ್ರೇರಣೆ ಸಿಗುತ್ತದೆ. ‘ರಾಮ್-ಲೀಲಾ’, ‘ದಿಲ್ ಧಡಕನೆ ದೋ’ ಮತ್ತು ‘ಬಾಜೀರಾವ್ ಮಸ್ತಾನಿ’ ಚಿತ್ರಗಳಲ್ಲಿ ಆತನ ನಟನೆ ನೋಡಿ ನಾನು ಇನ್ನೂ ಉತ್ತಮವಾಗಿ ಕೆಲಸ ಮಾಡಬೇಕು ಎನಿಸಿತು. ಈ ಹುಡುಗನ ಪ್ರತಿಭೆಗೆ ಎಲ್ಲೆಯೇ ಇಲ್ಲ, ನನಗೆ ಆತನ ಸ್ಪರ್ಧೆಯ ಬಗ್ಗೆ ಕೊಂಚ ಹೆದರಿಕೆಯೂ ಇದೆ’ ಎಂದು ಹೇಳಿದ್ದರು.
ಒಂದೆಡೆ ಅಂದು ಬಾಲಿವುಡ್‌ನ ಭವಿಷ್ಯದ ಸೂಪರ್‌ಸ್ಟಾರ್ ಎಂದು ಕೊಂಡಾಡಲ್ಪಟ್ಟ ರಣವೀರ್ ಸಿಂಗ್ ಅವರ ಹಳೆಯ ಸ್ನೇಹದ ವಿಡಿಯೋ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ ‘ಡಾನ್ 3’ ವಿವಾದದಿಂದಾಗಿ ಅವರ ಸಿನಿ ಜರ್ನಿಗೆ ಭಾರಿ ಹಿನ್ನಡೆಯಾಗುವ ಆತಂಕ ಎದುರಾಗಿದೆ.
ಬೆಂಗಳೂರು, ಮೇ 28: ರಾಜ್ಯ ರಾಜಕಾರಣದಲ್ಲಿ ಬಹು ನಿರೀಕ್ಷಿತ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿಎಂ ಸಿದ್ದರಾಮಯ್ಯ ಕರೆದಿರುವ ಬ್ರೇಕ್ಫಾಸ್ಟ್ ಮೀಟಿಂಗ್ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯನವರ ಪಾದಸ್ಪರ್ಶ ಮಾಡಿ ನಂತರ ಆತ್ಮೀಯವಾಗಿ ಆಲಿಂಗಿಸಿಕೊಂಡರು. ಸಿದ್ದರಾಮಯ್ಯನವರು ನಗುಮುಖದಿಂದ ಕಾಣಿಸಿಕೊಂಡರೆ, ಡಿ.ಕೆ. ಶಿವಕುಮಾರ್ ತುಸು ಭಾವುಕರಾಗಿದ್ದಂತೆ ಕಂಡುಬಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರೂ ನಾಯಕರು ಯಾವುದೇ ಸಿಬ್ಬಂದಿಯಿಲ್ಲದೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ಮಾತುಕತೆ ರಾಜ್ಯದ ರಾಜಕೀಯ ಬೆಳವಣಿಗೆಗಳು, ಅಧಿಕಾರ ಹಂಚಿಕೆ ಮತ್ತು ಮುಂದಿನ ಯೋಜನೆಗಳ ಕುರಿತು ಕೇಂದ್ರೀಕೃತವಾಗಿತ್ತು ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲ್ಕತ್ತಾ, ಮೇ 28: ಪಶ್ಚಿಮ ಬಂಗಾಳ(West Bengal) ರಾಜಕೀಯದಲ್ಲಿ ಮಹಿಳಾ ಕಲ್ಯಾಣ ಯೋಜನೆಗಳ ಕುರಿತು ಮತ್ತೊಮ್ಮೆ ಭಾರಿ ವಿವಾದ ಸೃಷ್ಟಿಯಾಗಿದೆ. ರಾಜ್ಯದ ಜನಪ್ರಿಯ ‘ಲಕ್ಷ್ಮಿ ಭಂಡಾರ್’ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸುಮಾರು 3 ಮಿಲಿಯನ್ (30 ಲಕ್ಷ) ಫಲಾನುಭವಿಗಳು ಈ ಯೋಜನೆಗೆ ಸಂಪೂರ್ಣ ಅನರ್ಹರಾಗಿದ್ದಾರೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ಅನರ್ಹರಾಗಲು ಕಾರಣವೇನು?
ನಬನ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಈ 30 ಲಕ್ಷ ಫಲಾನುಭವಿಗಳು ಭಾರತೀಯ ನಾಗರಿಕರಲ್ಲ ಅಥವಾ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ನಿಯಮಗಳ ಪ್ರಕಾರ ಇವರು ಯೋಜನೆಗೆ ಅರ್ಹರಲ್ಲದಿದ್ದರೂ, ಸೌಲಭ್ಯ ಪಡೆಯುತ್ತಿದ್ದಾರೆ. ಕೆಲವರು ಅಗತ್ಯ ಪೌರತ್ವ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹೊಸ ‘ಅನ್ನಪೂರ್ಣ ಭಂಡಾರ್’ ಯೋಜನೆ ಘೋಷಣೆ
ಮಮತಾ ಬ್ಯಾನರ್ಜಿ ಸರ್ಕಾರ ಆರಂಭಿಸಿದ್ದ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪರ್ಯಾಯವಾಗಿ, ಬಿಜೆಪಿಯ ಪ್ರಸ್ತಾವಿತ ಹೊಸ ಯೋಜನೆ ‘ಅನ್ನಪೂರ್ಣ ಭಂಡಾರ್’ ನಮೂನೆಯನ್ನು (ಫಾರ್ಮ್) ಮುಖ್ಯಮಂತ್ರಿ ಪ್ರಸ್ತುತಪಡಿಸಿದರು. ಚುನಾವಣಾ ಭರವಸೆಯಂತೆ ಈ ಹೊಸ ಯೋಜನೆಯಡಿ ಅರ್ಹ ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂ. ರೂಪಾಯಿ ಆರ್ಥಿಕ ಸಹಾಯ ನೀಡಲಾಗುತ್ತದೆ.
ಪ್ರಸ್ತುತ ಇರುವ ಲಕ್ಷ್ಮಿ ಭಂಡಾರ್ ಯೋಜನೆಯಡಿ ಸಾಮಾನ್ಯ ವರ್ಗದ ಮಹಿಳೆಯರಿಗೆ ತಿಂಗಳಿಗೆ 1,500 ರೂ.. ಹಾಗೂ ಎಸ್‌ಸಿ/ಎಸ್‌ಟಿ ವರ್ಗದ ಮಹಿಳೆಯರಿಗೆ 1700 ರೂ. ನೀಡಲಾಗುತ್ತಿದೆ. ಹೊಸ ಯೋಜನೆಗೆ ಸರಿಯಾದ ದಾಖಲೆಗಳಿದ್ದವರು ಮಾತ್ರ ಅರ್ಹರಾಗಿರುತ್ತಾರೆ. ಪೌರತ್ವ ಕಾಯ್ದೆಗೆ (CAA) ಸಂಬಂಧಿಸಿದ ಅರ್ಜಿ ಸಲ್ಲಿಸಿದವರು ಅಥವಾ ವಿಶೇಷ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದವರನ್ನು ಮಾತ್ರ ಅರ್ಹರೆಂದು ಪರಿಗಣಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಅರ್ಜಿ ನಮೂನೆಯ ಮೂಲಕ ಇನ್ನು ಮುಂದೆ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮಹಿಳಾ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಈ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪರಿಶೀಲನಾ ಪ್ರಕ್ರಿಯೆ ಮುಗಿಯಲು ಸಮಯ ತೆಗೆದುಕೊಳ್ಳುವುದರಿಂದ, ಅಲ್ಲಿಯವರೆಗೆ ಸದ್ಯದ ಫಲಾನುಭವಿಗಳಿಗೆ ಹಳೆಯ ಯೋಜನೆಯಡಿ ಹಣಕಾಸಿನ ನೆರವು ಸಿಗುತ್ತಲೇ ಇರಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಆಪ್ಟಿಕಲ್ ಇಲ್ಯೂಷನ್ (optical Illusion) ಚಿತ್ರಗಳನ್ನು ಬಿಡಿಸುವುದೆಂದರೆ ಎಲ್ಲರಿಗೂ ಇಷ್ಟನೇ. ಕೆಲವು ಒಗಟಿನ ಚಿತ್ರಗಳನ್ನು ಬಿಡಿಸುವಾಗ ಟ್ರಿಕ್ಕಿ ಅನಿಸುತ್ತದೆ. ಆದರೆ ಕೆಲವರು ತಮ್ಮ ಬುದ್ಧಿವಂತಿಕೆ ಬಳಸಿ ಸುಲಭವಾಗಿ ಒಗಟು ಬಿಡಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಗಟಿನ ಚಿತ್ರ ವೈರಲ್ ಆಗಿದೆ. ಇದರಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಮೂರು ಗೂಬೆಗಳನ್ನು ಗುರುತಿಸಬೇಕು. ಈ ಒಗಟು ಬಿಡಿಸಲು ನಿಮಗಿರುವ ಸಮಯ ಹತ್ತು ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.
ಈ ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?
ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಜನರ ಗುಂಪನ್ನು ಕಾಣಬಹುದು. ಈ ಚಿತ್ರದಲ್ಲಿ ಜನರ ನಡುವೆ ಪ್ರಾಣಿ ಪಕ್ಷಿಗಳಿವೆ. ಆದರೆ ನೀವು ಈ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಮೂರು ಗೂಬೆಗಳನ್ನು ಕಂಡು ಹಿಡಿಯಬೇಕು. ಮೊದಲಿಗೆ ನಿಮಗೆ ಕಷ್ಟವೆನಿಸಬಹುದು.. ನೀವು ಎರಡು ಅಥವಾ ಮೂರು ಬಾರಿ ಪ್ರಯತ್ನಿಸಿದರೆ ಹತ್ತು ಸೆಕೆಂಡುಗಳಲ್ಲಿ ಗೂಬೆ ಕಂಡು ಹಿಡಿಯಲು ಸಾಧ್ಯ.
ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವ ಈ ಇಲ್ಯೂಷನ್ ಚಿತ್ರದಲ್ಲಿ ಗೂಬೆಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಜನರ ಗುಂಪಿನ ನಡುವೆ ಈ ಪಕ್ಷಿಯಿದ್ದರೂ ಅಷ್ಟು ಸುಲಭವಾಗಿ ಈ ಗೂಬೆಗಳು ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ನಾವು ಈ ಕೆಳಗಿನ ಚಿತ್ರದಲ್ಲಿ ಗೂಬೆ ಎಲ್ಲಿದೆ ಎಂದು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಆರ್ಆರ್ಆರ್’ ಬಳಿಕ ರಾಮ್ ಚರಣ್ ಭಾರಿ ನಿರೀಕ್ಷೆ ಇರಿಸಿರುವ ಸಿನಿಮಾ ಇದಾಗಿದೆ. ಸಿನಿಮಾಕ್ಕಾಗಿ ಸಾಕಷ್ಟು ಶ್ರಮವನ್ನು ರಾಮ್ ಚರಣ್ ಹಾಕಿದ್ದಾರೆ. ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹೂಡಲಾಗಿದ್ದು, ಸಿನಿಮಾದ ಪ್ರಚಾರಕ್ಕೂ ಕೋಟ್ಯಂತರ ಖರ್ಚು ಮಾಡಲಾಗಿದೆ. ಆದರೆ ಸಿನಿಮಾದ ಬಿಡುಗಡೆ ಸಮಯದಲ್ಲಿ ಕೆಲವು ಪ್ರದರ್ಶಕರು ಮತ್ತು ವಿತರಕರು ಕಿರಿಕ್ ಪ್ರಾರಂಭಿಸಿದ್ದಾರೆ. ತೆಲಂಗಾಣದ ಕೆಲ ಸಿನಿಮಾ ಪ್ರದರ್ಶಕರಂತೂ ತಾವು ಸಿನಿಮಾ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದೀಗ ಸಮಸ್ಯೆ ಪರಿಹಾರಕ್ಕಾಗಿ ಖುದ್ದು ಚಿರಂಜೀವಿ ಅವರೇ ಮುಂದೆ ಬಂದಿದ್ದಾರೆ.
‘ಪೆದ್ದಿ’ ಸಿನಿಮಾದ ಲಾಭದಲ್ಲಿ ಪಾಲು ನೀಡಬೇಕು ಎಂದು ಪ್ರದರ್ಶಕರು ಒತ್ತಾಯಿಸಿದ್ದರು. ಅಲ್ಲದೆ, ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಲು ಸರ್ಕಾರ ಅನುಮತಿ ಕೊಡಬಾರದು, ವಿಶೇಷ ಶೋಗಳಿಗೂ ಅನುಮತಿ ಕೊಡಬಾರದು ಎಂದು ಆಗ್ರಹಿಸಿದ್ದರು. ಒಂದೊಮ್ಮೆ ‘ಪೆದ್ದಿ’ ಸಿನಿಮಾ ನಿರ್ಮಾಪಕರು ಲಾಭ ಹಂಚಿಕೆಗೆ ಒಪ್ಪಲಿಲ್ಲವಾದರೆ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಪ್ರದರ್ಶಕರು ಸುದ್ದಿಗೋಷ್ಠಿ ಕರೆಸಿ ಹೇಳಿಕೆ ನೀಡಿದ್ದರು.
ಇದೀಗ ರಾಮ್ ಚರಣ್ ತಂದೆ, ಮೆಗಾಸ್ಟಾರ್ ಚಿರಂಜೀವಿ ಅವರು ಖುದ್ದು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಜೊತೆಗೆ ಮಾತುಕತೆ ನಡೆಸಿದ್ದು, ಪ್ರದರ್ಶಕರನ್ನು ಒಪ್ಪಿಸಿದ್ದು, ‘ಪೆದ್ದಿ’ ಸಿನಿಮಾವನ್ನು ಈ ಹಿಂದಿನ ಮಾದರಿಯಲ್ಲಿಯೇ ಬಿಡುಗಡೆ ಮಾಡುವಂತೆ ಒಪ್ಪಿಸಿದ್ದಾರೆ. ಏಷಿಯನ್ ಸುನಿಲ್, ಅಲ್ಲು ಅರವಿಂದ್, ಚೇಂಬರ್ ಅಧ್ಯಕ್ಷ ಸುರೇಶ್ ಇನ್ನೂ ಹಲವರನ್ನು ಸೇರಿಸಿಕೊಂಡು ಸಂಧಾನ ನಡೆಸಿದ ಮೆಗಾಸ್ಟಾರ್ ಚಿರಂಜೀವಿ, ಮುನಿಸಿಕೊಂಡಿದ್ದ ಪ್ರದರ್ಶಕರನ್ನು ವಿತರಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ರಂಗ ಸಮಸ್ಯೆಗೆ ಸಿಲುಕಿದಾಗ ಪ್ರತಿಬಾರಿ ಖುದ್ದು ಮುಂದೆ ಬಂದು ಸಮಸ್ಯೆ ಬಗೆಹರಿಸಲು ಯತ್ನಿಸಿದ್ದಾರೆ. ಆಂಧ್ರದಲ್ಲಿ ಈ ಹಿಂದೆ ಜಗನ್ ಸಿಎಂ ಆಗಿದ್ದಾಗ, ಸಿನಿಮಾ ಟಿಕೆಟ್ ದರಗಳನ್ನು ಧಾರುಣವಾಗಿ ತಗ್ಗಿಸಿದ್ದರು, ಚಿತ್ರಮಂದಿರಗಳನ್ನು ಮುಚ್ಚಿಸಿದ್ದರು, ವಿಶೇಷ ಶೋಗಳನ್ನು ರದ್ದು ಮಾಡಿದ್ದರು. ಆಗಲೂ ಸಹ ಚಿರಂಜೀವಿ, ಖುದ್ದು ಜಗನ್ ಅವರನ್ನು ಭೇಟಿಯಾಗಿ ಹಲವು ಸುತ್ತುಗಳ ಮಾತುಕತೆ ನಡೆಸಿದ್ದರು. ಈಗ ಮತ್ತೆ ತಮ್ಮ ಹಿರಿತನವನ್ನು ಚಿರಂಜೀವಿ ಪ್ರದರ್ಶಿಸಿದ್ದಾರೆ.
ಉಪಾಹಾರ ಕೂಟದಲ್ಲಿ ಭಾಗವಹಿಸಲು ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಮೂಲಕ ಇಬ್ಬರು ನಾಯಕರು ಒಟ್ಟಿಗೆ ಇರುವ ಅಪರೂಪದ ಮತ್ತು ಆತ್ಮೀಯ ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.
ಖಾಸಗಿ ಕೊಠಡಿಯಲ್ಲಿ ಉಭಯ ನಾಯಕರ ರಹಸ್ಯ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆಯೋಜಿಸಲಾಗಿದ್ದ ಈ ಉಪಾಹಾರ ಕೂಟಕ್ಕೆ ರಾಜ್ಯ ಸಚಿವ ಸಂಪುಟದ ಬಹುತೇಕ ಎಲ್ಲಾ ಸಚಿವರು ಹಾಗೂ ಸಿಎಂ ಆಪ್ತ ಶಾಸಕರು ಹಾಜರಾಗಿದ್ದಾರೆ. ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎನ್.ಎಸ್. ಬೋಸರಾಜು, ಡಾ. ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್, ಭೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಎನ್. ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಶಿವಾನಂದ ಪಾಟೀಲ್, ಕೆ.ಹೆಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ. ಪಾಟೀಲ್, ಡಾ. ಹೆಚ್.ಸಿ. ಮಹದೇವಪ್ಪ, ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್ ಸೇರಿದಂತೆ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಬಸವರಾಜ ರಾಯರೆಡ್ಡಿ, ಅಶೋಕ್ ಪಟ್ಟಣ್ ಮತ್ತು ಪುಟ್ಟರಂಗಶೆಟ್ಟಿ ಉಪಸ್ಥಿತರಿದ್ದಾರೆ.
ಉಪಾಹಾರ ಕೂಟ ಆರಂಭವಾಗುವ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಉಳಿದೆಲ್ಲಾ ಸಚಿವರನ್ನು ಕಾನ್ಫರೆನ್ಸ್ ರೂಮ್ನಲ್ಲಿ ಕಾಯುವಂತೆ ಸೂಚಿಸಿ, ಮನೆಯೊಳಗಿನ ಪ್ರತ್ಯೇಕ ಕೊಠಡಿಯೊಂದರಲ್ಲಿ ಕೇವಲ ಇಬ್ಬರೇ ಸುದೀರ್ಘ ಮಾತುಕತೆ ನಡೆಸಿದರು. ಇಬ್ಬರು ನಾಯಕರು ಎಲ್ಲರನ್ನೂ ಹೊರಗೆ ಕಳುಹಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆಸಿದ ಈ ಒನ್-ಟು-ಒನ್ ಚರ್ಚೆ ತೀವ್ರ ರಾಜಕೀಯ ಕುತೂಹಲ ಮೂಡಿಸಿದೆ.
‘ರಾಜೀನಾಮೆ ನೀಡುವ ತನಕ ಆಟ ಮುಗಿದಿಲ್ಲ’: ಡಿಕೆಶಿ ಖಡಕ್ ಸಂದೇಶ:
ಇನ್ನೊಂದೆಡೆ, ಸಿದ್ದರಾಮಯ್ಯ ಅವರು ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸುವವರೆಗೂ ರಾಜಕೀಯ ಆಟ ಮುಗಿದಿಲ್ಲ ಎಂಬುದನ್ನು ಅರಿತಿರುವ ಡಿ.ಕೆ. ಶಿವಕುಮಾರ್, ಬೆಂಬಲಿಗರು ಹಾಗೂ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ತಕ್ಷಣಕ್ಕೆ ಯಾವುದೇ ರೀತಿಯ ದುಡುಕಿನ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ತಮ್ಮನ್ನು ಭೇಟಿಯಾದ ಸಚಿವರು ಹಾಗೂ ಶಾಸಕರಿಗೆ ಸಂದೇಶ ರವಾನಿಸಿರುವ ಡಿಕೆಶಿ, ‘ಹೈಕಮಾಂಡ್ ನಾಯಕರು ಸದ್ಯ ನನ್ನ ಜೊತೆಗೆ ನೇರವಾಗಿ ಏನನ್ನೂ ಮಾತನಾಡಿಲ್ಲ. ಅಧಿಕಾರ ಹಂಚಿಕೆ ಕುರಿತು ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲೇ ಚರ್ಚಿಸಿದ್ದಾರೆ. ಹೀಗಾಗಿ ಸಿಎಂ ರಾಜೀನಾಮೆ ನೀಡುವ ವಿಷಯದ ಬಗ್ಗೆ ನನಗೆ ಅಧಿಕೃತವಾಗಿ ಇನ್ನೂ ಏನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ತಾವೂ ಕೂಡ ಸಿಎಂ ಹೇಳಿಕೆಗಾಗಿ ಕಾಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ 2026ರ ಸೀಸನ್‌ನಲ್ಲಿ (IPL 2026) ಒಂದೂ ಪಂದ್ಯ ಆಡದಿದ್ದರೂ ಎಂ.ಎಸ್. ಧೋನಿ ಅವರ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಇಡೀ ಸೀಸನ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಧೋನಿ, ಮುಂದಿನ ಐಪಿಎಲ್ 2027ರಲ್ಲಿ ಮರಳಿ ಮೈದಾನಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಧೋನಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಧೋನಿ ಮುಂದಿನ ಸೀಸನ್‌ನಲ್ಲಿ ಆಡಲಿದ್ದಾರೆ ಮತ್ತು ಸಿಎಸ್‌ಕೆ ಅಭಿಮಾನಿಗಳಿಗೆ ಚೆನ್ನೈನಲ್ಲಿ ವಿದಾಯದ ಪಂದ್ಯ ಆಡುವುದಾಗಿ ಕೊಟ್ಟಿರುವ ಮಾತನ್ನು ಅವರು ಖಂಡಿತ ಉಳಿಸಿಕೊಳ್ಳಲಿದ್ದಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ.
ಈ ಬಾರಿಯ ಸೀಸನ್‌ನ ಆರಂಭದಲ್ಲಿ ಕಾಲಿನ ಸ್ನಾಯು ಸೆಳೆತ ಮತ್ತು ನಂತರದ ದಿನಗಳಲ್ಲಿ ಹೆಬ್ಬೆರಳಿನ ಗಾಯಕ್ಕೆ ಒಳಗಾದ ಧೋನಿ, 19 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಡೀ ಸೀಸನ್‌ನಲ್ಲಿ ಒಂದೂ ಪಂದ್ಯ ಆಡದೆ ಹೊರಗುಳಿದರು. ಜುಲೈ ತಿಂಗಳಲ್ಲಿ ಧೋನಿಗೆ 45 ವರ್ಷ ತುಂಬಲಿದ್ದು, ಅವರ ವಯಸ್ಸು ಮತ್ತು ಫಿಟ್‌ನೆಸ್ ನೋಡಿದರೆ ಅವರು ಈಗಾಗಲೇ ತಮ್ಮ ಕೊನೆಯ ಪಂದ್ಯ ಆಡಿದ್ದಾರಾ ಎಂಬ ಆತಂಕ ಫ್ಯಾನ್ಸ್‌ನಲ್ಲಿ ಮನೆಮಾಡಿತ್ತು.
ಮೇ 18 ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಸಿಎಸ್‌ಕೆ ತಂಡದ ಕೊನೆಯ ತವರು ಪಂದ್ಯ ಧೋನಿಯ ವಿದಾಯದ ಪಂದ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಗಾಯದ ಕಾರಣ ಧೋನಿ ಅಂಗಳಕ್ಕಿಳಿಯಲಿಲ್ಲ.
ಕೊಟ್ಟ ಮಾತು ಉಳಿಸಿಕೊಳ್ಳಲಿದ್ದಾರೆ ಧೋನಿ: ಸಿಎಸ್‌ಕೆ ಸಿಇಒ
ಧೋನಿ ನಿವೃತ್ತಿ ವದಂತಿಗಳ ಬೆನ್ನಲ್ಲೇ ‘ಕ್ರಿಕ್‌ಬಜ್’ ಜೊತೆ ಮಾತನಾಡಿರುವ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ‘ನನ್ನ ಪ್ರಕಾರ ಧೋನಿ ಮುಂದಿನ ಸೀಸನ್‌ನಲ್ಲಿ ಆಡಲಿದ್ದಾರೆ. ಈ ಬಗ್ಗೆ ನಾವು ಇನ್ನೂ ಅವರ ಜೊತೆ ಅಧಿಕೃತವಾಗಿ ಮಾತನಾಡಿಲ್ಲವಾದರೂ, ಅವರು ಮರಳಿ ಬರುತ್ತಾರೆಂಬ ಭರವಸೆ ನಮಗಿದೆ. ತಾವು ಆಡುವ ಕೊನೆಯ ಐಪಿಎಲ್ ಪಂದ್ಯವನ್ನು ಚೆನ್ನೈನಲ್ಲೇ ಆಡುವುದಾಗಿ ಧೋನಿ ಸಿಎಸ್‌ಕೆ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ. ಅವರು ಆ ಮಾತನ್ನು ಖಂಡಿತ ಉಳಿಸಿಕೊಳ್ಳಲಿದ್ದಾರೆ ಎನ್ನುವ ನಂಬಿಕೆ ನಮಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಸಿಎಸ್‌ಕೆ ಕೋಚ್ ಆಗ್ತಾರಾ?
ಮತ್ತೊಂದೆಡೆ, ಕಳೆದ ಮೂರು ಸೀಸನ್‌ಗಳಿಂದ ಸಿಎಸ್‌ಕೆ ಪ್ಲೇಆಫ್ ತಲುಪಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರನ್ನು ಬದಲಾಯಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಫ್ಲೆಮಿಂಗ್ ಜಾಗಕ್ಕೆ ಭಾರತದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಬರಲಿದ್ದಾರೆ ಎಂಬ ವದಂತಿಗಳೂ ಹಬ್ಬಿವೆ.
ಢಾಕಾ, ಮೇ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಪ್ರಸಿದ್ಧ ಕೇಶವಿನ್ಯಾಸವನ್ನು ಹೋಲುವ ಕೂದಲನ್ನು ಹೊಂದಿದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ‘ಡೊನಾಲ್ಡ್ ಟ್ರಂಪ್’ ಎಂದೇ ಜಾಗತಿಕವಾಗಿ ವೈರಲ್ ಆಗಿದ್ದ ಬಾಂಗ್ಲಾದೇಶದ ಅಪರೂಪದ ಆಲ್ಬಿನೋ ಎಮ್ಮೆಯೊಂದಕ್ಕೆ ಕೊನೆಗೂ ಜೀವದಾನ ಸಿಕ್ಕಿದೆ. ಈದ್ ಹಬ್ಬದ ಸಂದರ್ಭದಲ್ಲಿ ಬಲಿ ನೀಡಲು ಈ ಎಮ್ಮೆಯನ್ನು ಮಾರಾಟ ಮಾಡಲಾಗಿತ್ತಾದರೂ, ಕೊನೆಯ ಕ್ಷಣದಲ್ಲಿ ಪ್ರಧಾನಿ ತಾರಿಕ್ ರೆಹಮಾನ್ ಅವರ ಸರ್ಕಾರವು ಮಧ್ಯಪ್ರವೇಶಿಸಿ ಬಲಿಯನ್ನು ತಡೆದಿದೆ.
ಗೃಹ ಸಚಿವರ ಮಹತ್ವದ ಆದೇಶ
ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರ ವಿಶೇಷ ಆದೇಶದ ಮೇರೆಗೆ, ಎಮ್ಮೆಯನ್ನು ಖರೀದಿಸಿದ್ದ ವ್ಯಕ್ತಿಗೆ ಹಣವನ್ನು ಮರುಪಾವತಿಸಲು ಮತ್ತು ಎಮ್ಮೆಯನ್ನು ಸುರಕ್ಷಿತವಾಗಿ ಢಾಕಾದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಈ ವಿಶಿಷ್ಟ ಪ್ರಾಣಿಯನ್ನು ನೋಡಲು ವಿಪರೀತ ಜನಸಮೂಹ ಜಮಾಯಿಸುತ್ತಿದ್ದರಿಂದ, ಅಸಾಮಾನ್ಯ ಸಾರ್ವಜನಿಕ ಹಿತಾಸಕ್ತಿ ಮತ್ತು ಸುರಕ್ಷತೆಯ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ‘ಡೊನಾಲ್ಡ್ ಟ್ರಂಪ್’ ಹೆಸರಿನಲ್ಲಿ ಪ್ರಾಣಿ ಬಲಿ ನೀಡುವುದರಿಂದ ಯಾವುದೇ ಅನಗತ್ಯ ಜಾಗತಿಕ ಅಥವಾ ರಾಜಕೀಯ ಉದ್ವಿಗ್ನತೆ ಸೃಷ್ಟಿಯಾಗಬಾರದು ಎಂಬುದು ಸರ್ಕಾರದ ಉದ್ದೇಶ ಎನ್ನಲಾಗಿದೆ.
‘ಡೊನಾಲ್ಡ್ ಟ್ರಂಪ್’ ಎಂದು ಹೆಸರಿಟ್ಟಿದ್ದು ಏಕೆ?
ಚಿನ್ನದ ಕೇಶವಿನ್ಯಾಸ: ಸುಮಾರು700ಕೆಜಿ ತೂಕದ ಈ ಆಲ್ಬಿನೋ ಎಮ್ಮೆಯ ತಲೆಯ ಮೇಲೆ ಚಿನ್ನದ ಬಣ್ಣದ ಕೂದಲು ತೂಗಾಡುತ್ತಿತ್ತು. ಈ ಕೇಶವಿನ್ಯಾಸವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆಯೇ ಇದ್ದಿದ್ದರಿಂದ ಮಾಲೀಕ ಜಿಯಾವುದ್ದೀನ್ ಮೃಧಾ ಅವರ ಕಿರಿಯ ಸಹೋದರ ಇದಕ್ಕೆ ಮೊದಲು ಆ ಹೆಸರಿಟ್ಟಿದ್ದನು.
ಢಾಕಾ ಬಳಿಯ ನಾರಾಯಣಗಂಜ್‌ನ ಜಮೀನಿನಲ್ಲಿದ್ದ ಈ 4 ವರ್ಷದ ಎಮ್ಮೆಯನ್ನು 10 ತಿಂಗಳ ಹಿಂದೆ ಖರೀದಿಸಲಾಗಿತ್ತು. ಇದಕ್ಕೆ ವಿಶೇಷ ಆಹಾರ ಮತ್ತು ನಿಯಮಿತ ಸ್ನಾನದ ವ್ಯವಸ್ಥೆ ಮಾಡಲಾಗಿತ್ತು. ಇದು ಸಾಮಾನ್ಯ ಎಮ್ಮೆಗಳಿಗಿಂತ ಅತ್ಯಂತ ಶಾಂತ ಸ್ವಭಾವದ್ದಾಗಿದೆ.
ಆಲ್ಬಿನೋ ಎಮ್ಮೆಗಳು ಏಕೆ ಅಪರೂಪ?
ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿ ಕಪ್ಪು ಅಥವಾ ಗಾಢ ಬೂದು ಬಣ್ಣದ ಎಮ್ಮೆಗಳು ಮಾತ್ರ ಕಂಡುಬರುತ್ತವೆ. ಆದರೆ ‘ಆಲ್ಬಿನಿಸಂ’ ಎಂಬುದು ದೇಹದಲ್ಲಿ ಮೆಲನಿನ್ ಉತ್ಪತ್ತಿಯಾಗದ ಒಂದು ಅಪರೂಪದ ಆನುವಂಶಿಕ ಸ್ಥಿತಿಯಾಗಿದೆ. ಇದರಿಂದಾಗಿ ಪ್ರಾಣಿಗಳ ಚರ್ಮ ತಿಳಿಯಾಗಿದ್ದು, ಹೊಂಬಣ್ಣ ಅಥವಾ ಬಿಳಿ ಕೂದಲು ಮತ್ತು ಗುಲಾಬಿ ಬಣ್ಣದ ಮೂಗು ಮೂಡುತ್ತದೆ.
ಈ ಅಪರೂಪದ ವೈಶಿಷ್ಟ್ಯದಿಂದಾಗಿಯೇ ಇಡೀ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಎಮ್ಮೆ ಈಗ ಬಲಿಯಾಗುವುದರಿಂದ ಪಾರಾಗಿದ್ದು, ಇನ್ನು ಮುಂದೆ ಢಾಕಾದ ರಾಷ್ಟ್ರೀಯ ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ವಿಶೇಷ ಆಕರ್ಷಣೆಯಾಗಿ ಉಳಿಯಲಿದೆ.