ವಾಷಿಂಗ್ಟನ್, ಜನವರಿ 23: ಇರಾನ್ ಕಡೆಗೆ ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್‌ಗೆ ಹೊಸ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಈ ಪ್ರದೇಶಕ್ಕೆ ಬೃಹತ್ ನೌಕಾಪಡೆಯನ್ನು ನಿಯೋಜಿಸಿದೆ, ಆದರೆ ಅದನ್ನು ಬಳಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇತ್ತೀಚಿನ ಅಶಾಂತಿಯ ಸಂದರ್ಭದಲ್ಲಿ ಪ್ರತಿಭಟನಾಕಾರರ ಹತ್ಯೆಗೆ ಸಂಬಂಧಿಸಿದಂತೆ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಪದೇ ಪದೇ ಬೆದರಿಕೆ ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳು ಕಡಿಮೆಯಾಗುತ್ತಿದ್ದಂತೆ ಅವರ ಸ್ವರ ಮೃದುವಾಗಿದೆ.
ನೂರಾರು ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ಯೋಜನೆಯನ್ನು ಇರಾನ್ ಅಧಿಕಾರಿಗಳು ರದ್ದುಗೊಳಿಸಲು ವಾಷಿಂಗ್ಟನ್ ಒತ್ತಡ ಕಾರಣ ಎಂಬ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷರು ಪುನರಾವರ್ತಿಸಿದ್ದಾರೆ.
ಆರ್ಥಿಕ ಸಂಕಷ್ಟದ ಕುರಿತು ಡಿಸೆಂಬರ್ ಅಂತ್ಯದಲ್ಲಿ ಇರಾನ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು, ನಂತರ ಅದು ರಾಷ್ಟ್ರವ್ಯಾಪಿ ಹರಡಿತ್ತು. ಎರಡು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಬಲವಾದ ಎಚ್ಚರಿಕೆ ನೀಡಿದ್ದರು. ಇರಾನ್ ತನ್ನನ್ನು ಕೊಲ್ಲಲು ಪ್ರಯತ್ನಿಸಿದರೆ, ಅಮೆರಿಕ ಇರಾನ್ ಅನ್ನು ವಿಶ್ವ ಭೂಪಟದಿಂದ ಅಳಿಸಿಹಾಕುತ್ತದೆ ಎಂದು ಡ್ರಂಪ್ ಹೇಳಿದ್ದಾರೆ.
ನ್ಯೂಸ್ ನೇಷನ್ ನ ‘ಕೇಟೀ ಪಾವ್ಲಿಚ್ ಟುನೈಟ್’ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಟ್ರಂಪ್ ಅವರ ಈ ಹೇಳಿಕೆ ಬಂದಿದೆ.
ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಇರಾನ್ ಮಿಲಿಟರಿ ವಕ್ತಾರ ಜನರಲ್ ಅಬುಲ್ ಫಜಲ್ ಶೇಕರ್ಚಿ, ನಮ್ಮ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಕಡೆಗೆ ಯಾರಾದರೂ ಕೆಟ್ಟ ಉದ್ದೇಶದಿಂದ ಕೈ ಚಾಚಿದರೆ, ನಾವು ಆ ಕೈಯನ್ನು ಕತ್ತರಿಸುವುದಲ್ಲದೆ, ಅವರ ಇಡೀ ದೇಶವನ್ನೇ ಸುಟ್ಟು ಹಾಕುತ್ತೇವೆ ಎಂದು ಟ್ರಂಪ್‌ಗೆ ತಿಳಿದಿದೆ ಎಂದು ಹೇಳಿದ್ದಾರೆ.
ಖಮೇನಿಯವರ ಸುಮಾರು 40 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ ಟ್ರಂಪ್ ಅವರ ಹೇಳಿಕೆಯ ನಂತರ ಈ ಎಚ್ಚರಿಕೆ ಬಂದಿದೆ.ಟ್ರಂಪ್ ಈ ಹಿಂದೆ ಇರಾನ್‌ಗೆ ಎಚ್ಚರಿಕೆ ನೀಡಿದ್ದರು ಮತ್ತು ಇರಾನ್ ತನ್ನ ವಿರುದ್ಧ ಯಾವುದೇ ಹತ್ಯೆಗೆ ಸಂಚು ರೂಪಿಸಿದರೆ ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡುವಂತೆ ತಮ್ಮ ಸಲಹೆಗಾರರಿಗೆ ಸೂಚಿಸಿದ್ದರು.
ಖಮೇನಿ ಅವರನ್ನು ಅಸ್ವಸ್ಥ ವ್ಯಕ್ತಿ ಎಂದು ಬಣ್ಣಿಸಿರುವ ಅವರು, ಅವರು ತನ್ನ ದೇಶವನ್ನು ಸರಿಯಾಗಿ ನಡೆಸಬೇಕು ಮತ್ತು ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು, ಇರಾನ್‌ಗೆ ಹೊಸ ನಾಯಕತ್ವ ಬೇಕು ಎಂದು ಹೇಳಿದ್ದಾರೆ. ಡಿಸೆಂಬರ್ 28 ರಂದು ಪ್ರಾರಂಭವಾದ ಪ್ರತಿಭಟನೆಗಳ ನಂತರ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್‌ನ ಕಳಪೆ ಆರ್ಥಿಕತೆಯ ವಿರುದ್ಧ ಈ ಪ್ರತಿಭಟನೆಗಳನ್ನು ಪ್ರಾರಂಭಿಸಲಾಯಿತು. ತಿಭಟನೆಗಳ ನಡುವೆ ಅಮೆರಿಕದ ಮಿಲಿಟರಿಯೂ ಸಕ್ರಿಯವಾಗಿದ್ದು, ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯ ನಿರಂತರ ಏರಿಕೆಗೆ ಕಾರಣವಾಗಿದೆ.
ಬೆಂಗಳೂರು, ಜನವರಿ 23: ನಗರದಲ್ಲಿ ಚಳಿಯ ಪ್ರಮಾಣದಲ್ಲಿ ಏರಿಳಿಕೆಯಾಗುತ್ತಿದ್ದು, ಒಣ ಹವೆಯ ವಾತಾವರಣವಿದೆ (Weather Forecast) . ಇಂದು ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದೆಲ್ಲೆಡೆ ಕಳೆದ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದ್ದು, ಇನ್ನೂ ನಾಲ್ಕು ದಿನ ಇದೇ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಎಲ್ಲೆಲ್ಲಿ ಒಣಹವೆ?
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮಂಜು
ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.
ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಇದರ ಹಿಂದೆ ಕಿಚ್ಚ ಸುದೀಪ್ ಶ್ರಮ ಕೂಡ ಇದೆ ಎಂದರೂ ತಪ್ಪಾಗಲಾರದು. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಯಾವ ರೀತಿಯಲ್ಲಿ ಆಡುತ್ತಿದ್ದೇವೆ ಎಂಬುದು ಗೊತ್ತೇ ಆಗೋದಿಲ್ಲ. ಮಾತು, ಆಟ, ವ್ಯಕ್ತಿತ್ವ ಹೀಗೆಯೇ ಎಲ್ಲವೂ ತಪ್ಪುತ್ತದೆ. ಆಗ ಸುದೀಪ್ ಅದನ್ನು ತಿದ್ದೋ ಕೆಲಸ ಸುದೀಪ್ ಮಾಡುತ್ತಾರೆ. ಗಿಲ್ಲಿ ವಿಷಯದಲ್ಲೂ ಸುದೀಪ್ ಅನೇಕ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಖಾಸಗಿಯಾಗಿ ಇಬ್ಬರ ಭೇಟಿ ನಡೆದಿದೆ. ಈ ವೇಳೆ ಸುದೀಪ್ ಕೊಟ್ಟ ಸಲಹೆ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಅಲ್ಲಿ ಗಿಲ್ಲಿ ಅನೇಕ ಬಾರಿ ತಪ್ಪು ಮಾಡಿದ್ದರು. ಆಗ ಗಿಲ್ಲಿಗೆ ಸುದೀಪ್ ಕಿವಿಮಾತುಗಳನ್ನು ಹೇಳಿದರು. ತಪ್ಪು ಮಾಡಿದಾಗ ಅವರನ್ನು ತಿದ್ದೋ ಕೆಲಸ ಮಾಡಿದ್ದಾರೆ. ಫಿನಾಲೆ ದಿನ ಸುದೀಪ್ ಎದುರು ಧನ್ಯವಾದ ಅರ್ಪಿಸಿದ್ದರು ಗಿಲ್ಲಿ. ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದಿದ್ದರು. ಬಿಗ್ ಬಾಸ್ ಗೆದ್ದ ಬಳಿಕ ಗಿಲ್ಲಿ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.
ಸುದೀಪ್ ಅವರು ಗಿಲ್ಲಿಗೆ ಸಲಹೆ ನೀಡಿದ್ದಾರೆ. ‘ಯೋಚಿಸಿ ಹೆಜ್ಜೆ ಇಡಬೇಕು’ ಎಂದು ಗಿಲ್ಲಿಗೆ ಕಿವಿಮಾತು ಹೇಳಿದ್ದಾರೆ ಸುದೀಪ್. ಇದನ್ನು ಗಿಲ್ಲಿ ಅಳವಡಿಸಿಕೊಳ್ಳುವ ಭರವಸೆ ನೀಡಿದ್ದಾರೆ. ದೊಡ್ಡ ಗೆಲುವು ಸಿಕ್ಕಾಗ ಮನಸ್ಸು ನಮ್ಮ ಹಿಡಿತದಲ್ಲಿ ಇರೋದಿಲ್ಲ. ಗೆದ್ದಿದ್ದೇವೆ ಎಂಬ ಖುಷಿಯಲ್ಲಿ ಕೆಲವೊಮ್ಮೆ ತಪ್ಪು ಹೆಜ್ಜೆಗಳನ್ನು ಇಡೋ ಸಾಧ್ಯತೆ ಇರುತ್ತದೆ. ಆ ರೀತಿ ಆಗದಿರಲಿ ಎಂಬುದು ಸುದೀಪ್ ಬಯಕೆ.
ಗಿಲ್ಲಿ ಅವರು ‘ಬಿಗ್ ಬಾಸ್’ ಗೆದ್ದ ಬಳಿಕ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಗಿಲ್ಲಿ ಗೆದ್ದೇ ಗೆಲ್ಲುತ್ತಾನೆ ಎಂದು ಶಿವಣ್ಣ ಹೇಳಿದ್ದರು. ಅದೇ ದಿನ ಸಂಜೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಶಿವಣ್ಣನ ಬಗ್ಗೆ ಮಾತನಾಡಿದ್ದರಂತೆ. ಈ ವಿಷಯಗಳನ್ನು ಇವರು ಚರ್ಚೆ ಮಾಡಿದ್ದಾರೆ. ಶಿವಣ್ಣನ ಭೇಟಿ ವೇಳೆ ಸುದೀಪ್ಗೆ ವಿಡಿಯೋ ಕರೆ ಮಾಡಿ ಮಾತನಾಡಲಾಗಿತ್ತು.
ಕಾರವಾರ, ಜನವರಿ 23: ಮಹಾಮಾರಿ ಎಂಡೋಸಲ್ಫಾನ್ (Endosulfan) ಕರಾವಳಿ (Coastal Karnataka) ಭಾಗದ ಸಾವಿರಾರು ಮನೆಗಳ ನೆಮ್ಮದಿಯನ್ನೇ ಕದಡಿತ್ತು. ಗೇರುಬೀಜ ಇಳುವರಿಗೆ ಅಡ್ಡಿಯಾಗಿದ್ದ ಸೊಳ್ಳೆಗಳ ನಾಶಕ್ಕಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್, ಜನರ ಮೇಲೆ ಪರಿಣಾಮ ಬೀರಿತ್ತು. ಹುಟ್ಟುತ್ತಲೇ ಬುದ್ಧಿ ಭ್ರಮಣೆ ,ಬಹು ಅಂಗಾಂಗ ವೈಫಲ್ಯದಿಂದಾಗಿ ಅದೆಷ್ಟೋ ಮಕ್ಕಳು ನರಕಯಾತನೆ ಅನುಭವಿಸಿದ್ದರು. ಇದೀಗ ಮತ್ತೆ ಕರಾವಳಿ ಜನತೆಯಲ್ಲಿ ಎಂಡೋಸಲ್ಫಾನ್ ಭಯ ಆವರಿಸಿದೆ.
ಅಂದಹಾಗೆ 1986ರಿಂದ 2011 ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸುಮಾರು 11,794 ಹೆಕ್ಟೇರ್ ಗೇರು ಬೆಳೆದ ಭೂಮಿಗೆ ಎಂಡೋಸಲ್ಫಾನ್ ವಿಷದ್ರಾವಣವನ್ನು ಸಿಂಪಡಿಸಲಾಗಿತ್ತು. ಇದು ಗರ್ಭಿಣಿಯರ ಮೇಲೆ ನೇರ ಪರಿಣಾಮ ಬೀರಿತ್ತು. ಮಕ್ಕಳು ಹುಟ್ಟುತ್ತಲೇ ಬುದ್ಧಿಮಾಂದ್ಯ, ಅಂಗವೈಕಲ್ಯ, ನರ ದೌರ್ಬಲ್ಯಕ್ಕೆ ತುತ್ತಾಗಿದ್ದರು. ಇನ್ನು ಪುರುಷರೂ ಕೂಡಾ ಉಸಿರಾಟ ಸಮಸ್ಯೆ, ಪಾರ್ಶ್ವವಾಯು, ನರದೌರ್ಬಲ್ಯದಂತಹ ಸಮಸ್ಯೆ ಎದುರಿಸಿದ್ದರು. 2023-24 ರಲ್ಲಿ ಒಟ್ಟು 1554 ಜನರನ್ನು ಎಂಡೋಸಲ್ಫಾನ್ ಪೀಡಿತರನ್ನಾಗಿ ಗುರುತಿಸಲಾಗಿತ್ತು. ಇದೀಗ ಹೊಸ ಸರ್ವೆಯಲ್ಲಿ ಮಕ್ಕಳು ಸೇರಿ 543 ಜನರನ್ನು ಎಂಡೋ ಪೀಡಿತರನ್ನಾಗಿ ಗುರುತಿಸಲಾಗಿದೆ.
ವಂಶವಾಹಿ ಮೂಲಕ ಹರಡುತ್ತಿರುವ ಕಾಯಿಲೆಗಳು
ವಿಜ್ಞಾನಿಗಳ ಪ್ರಕಾರ, ಎಂಡೋಸಲ್ಫಾನ್ ಅಡ್ಡಪರಿಣಾಮದಿಂದ ಬರುವ ನ್ಯೂನತೆಗಳು ವಂಶವಾಹಿ ಮೂಲಕ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿವೆ. ಎಂಡೋ ಬಾಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಈ ಹಿಂದೆಯೇ ಸರ್ಕಾರ ಪೀಡಿತರಿಗೆ ನೀಡುವ ಸೌಲಭ್ಯವನ್ನು ನಿಲ್ಲಿಸಿತ್ತು. ಇದರಿಂದಾಗಿ ಎಂಡೋ ಪೀಡಿತರಿಗೆ ಯಾವ ಸೌಲತ್ತು ಇಲ್ಲದೇ ತೊಂದರೆ ಪಡುವಂತಾಗಿತ್ತು. ಆದರೆ ಈಗ ಮತ್ತೆ ಎಂಡೋ ಪೀಡಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕ ತಂದಿದೆ. ಸರ್ಕಾರ ಈ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಯುಎಇ, ಜನವರಿ 23: ರಷ್ಯಾ-ಉಕ್ರೇನ್ ನಡುವಿನ ಉದ್ವಿಗ್ನತೆ ಬಗೆಹರಿಯುವಂತೆ ಕಾಣುತ್ತಿಲ್ಲ, ಡೊನಾಲ್ಡ್ ಟ್ರಂಪ್(Donald Trump) ಎರಡು ದೇಶಗಳ ನಡುವೆ ಮಧ್ಯಸ್ಥಿಕೆವಹಿಸುವುದನ್ನು ಬಿಡುತ್ತಿಲ್ಲ. ಟ್ರಂಪ್ ಒಮ್ಮೆ ಉಕ್ರೇನ್ ಅಧ್ಯಕ್ಷರ ಬಳಿ ಒಮ್ಮೆ ರಷ್ಯಾ ಅಧ್ಯಕ್ಷರ ಬಳಿ ಮಾತನಾಡುತ್ತಿದ್ದರೂ ಸಮಸ್ಯೆ ಅಂತ್ಯ ಕಂಡಿಲ್ಲ. ಹೀಗಾಗಿ ಮೊದಲ ಬಾರಿಗೆ ರಷ್ಯಾ, ಅಮೆರಿಕ, ಉಕ್ರೇನ್ ಒಟ್ಟಾಗಿ ತ್ರಿಪಕ್ಷೀಯ ಸಭೆ ನಡೆಸಲು ನಿರ್ಧರಿಸಿದ್ದು, ಅದು ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್)ನಲ್ಲಿ ಇಂದು(ಜನವರಿ 23) ನಡೆಯಲಿದೆ. ಈ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.
ಈ ಸಭೆ ತಾಂತ್ರಿಕ ಮಟ್ಟದಲ್ಲಿ ನಡೆಯುತ್ತಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ತಮ್ಮ ಭಾಷಣದ ನಂತರ ಝೆಲೆನ್ಸ್ಕಿ ಈ ಘೋಷಣೆ ಮಾಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಮೂರು ದೇಶಗಳು ಒಟ್ಟಾಗಿ ಮಾತುಕತೆ ನಡೆಸುತ್ತಿರುವುದು ಇದೇ ಮೊದಲು ಎಂದು ಝೆಲೆನ್ಸ್ಕಿ ಹೇಳಿದರು. ಈ ಮಾತುಕತೆ ಯುದ್ಧವನ್ನು ಕೊನೆಗೊಳಿಸಲು ಸಹಾಯಕವಾಗಬಹುದು ಎಂದು ಅವರು ಆಶಿಸಿದ್ದಾರೆ. ಪಕ್ಷೀಯ ಸಭೆ ಎರಡು ದಿನಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಯಾವುದೇ ಸಂವಾದವಿಲ್ಲದಿರುವುದಕ್ಕಿಂತ ಕನಿಷ್ಠ ಕೆಲವು ಮಾತುಕತೆ ಉತ್ತಮ ಎಂದು ಅವರು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯ ನಂತರ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ . ಈ ಸಭೆಯನ್ನು ಟ್ರಂಪ್ ಚೆನ್ನಾಗಿ ನಡೆಸಿದ್ದರು ಎಂದು ಬಣ್ಣಿಸಿದ್ದಾರೆ.
ಉಕ್ರೇನಿಯನ್ ತಂಡವು ಮೊದಲು ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡಿ, ನಂತರ ಅಮೆರಿಕದ ನಿಯೋಗ ರಷ್ಯಾಕ್ಕೆ ಪ್ರಯಾಣಿಸಲಿದೆ ಎಂದು ಝೆಲೆನ್ಸ್ಕಿ ಹೇಳಿದರು. ಯುದ್ಧವನ್ನು ಕೊನೆಗೊಳಿಸಲು ಎಲ್ಲಾ ಪಕ್ಷಗಳು ರಾಜಿ ಮಾಡಿಕೊಳ್ಳಲು ಸಿದ್ಧರಿರಬೇಕು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್‌ನಿಂದ ಮಾತ್ರ ರಾಜಿ ನಿರೀಕ್ಷಿಸುವುದು ನ್ಯಾಯವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ; ರಷ್ಯಾ ಕೂಡ ಮುಂದೆ ಬರಬೇಕು. ಆದಾಗ್ಯೂ, ಮಾತುಕತೆಯ ಸ್ವರೂಪ ಅಥವಾ ಅಧಿಕಾರಿಗಳು ಮುಖಾಮುಖಿಯಾಗಿ ಭೇಟಿಯಾಗುತ್ತಾರೆಯೇ ಎಂಬುದನ್ನು ಝೆಲೆನ್ಸ್ಕಿ ನಿರ್ದಿಷ್ಟಪಡಿಸಿಲ್ಲ.
ದಾವೋಸ್‌ಗೆ ಆಗಮಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್‌ನಿಂದ ಹಿಡಿದು ಯುರೋಪಿಯನ್ ಒಕ್ಕೂಟದ ಅಸಮಾಧಾನದವರೆಗೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವತ್ತ ಸಾಗಿದರು.
ಈ ಸಭೆಯ ನಂತರ, ರಷ್ಯಾ-ಉಕ್ರೇನ್ ಯುದ್ಧದ ಅಂತ್ಯವು ಕೆಲವೇ ಗಂಟೆಗಳಲ್ಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ಅವರು ಪುಟಿನ್ ಅವರೊಂದಿಗಿನ ಸಭೆಯನ್ನು ಸಹ ಘೋಷಿಸಿದರು, ಅದರ ನಂತರ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಸ್ಪಷ್ಟವಾಗುತ್ತದೆ. ಇದರರ್ಥ ಇಂದು ಎರಡೂ ದೇಶಗಳಿಗೆ ನಿರ್ಣಾಯಕ ದಿನವಾಗಿರುತ್ತದೆ.
ಬೆಂಗಳೂರು, ಜನವರಿ 23: ವಸಂತ ಪಂಚಮಿ ಅಥವಾ ಶ್ರೀ ಪಂಚಮಿ ಎಂದು ಕರೆಯಲ್ಪಡುವ ಈ ದಿನವು ವಿದ್ಯಾರ್ಥಿಗಳಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲು ಅತ್ಯಂತ ವಿಶೇಷವಾದ ಪರ್ವದಿನವಾಗಿದೆ. ಶಿಕ್ಷಣದ ತಾಯಿಯಾದ ಸರಸ್ವತಿ ದೇವಿಯನ್ನು ಆರಾಧಿಸಲು ಇದು ಒಂದು ಪ್ರಮುಖ ದಿನ. ಬ್ರಹ್ಮನ ಪತ್ನಿ ಸರಸ್ವತಿಯ ಆರಾಧನೆಯಿಂದ ಬುದ್ಧಿಶಕ್ತಿ ಚುರುಕಾಗುತ್ತದೆ.
ಈ ದಿನ ಅಕ್ಷರಾಭ್ಯಾಸ ಮಾಡಿಸುವುದು, ಸರಸ್ವತಿ ಪೂಜೆ ಮಾಡಿಕೊಳ್ಳುವುದು ಮತ್ತು ಓಂ ಐಂ ಸರಸ್ವತ್ಯೈ ನಮಃ ಮಂತ್ರವನ್ನು ಪಠಿಸುವುದು ಶುಭಕರ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೆನ್, ಪೇಪರ್, ಪೆನ್ಸಿಲ್‌ನಂತಹ ವಸ್ತುಗಳನ್ನು ದಾನ ಮಾಡುವುದರಿಂದ ಪಾಪಗಳಿಂದ ಮುಕ್ತರಾಗಬಹುದು. ವಿದ್ಯಾರ್ಥಿಗಳಿಗೆ ಅನ್ನದಾನ ಮಾಡುವುದು ಕೂಡ ಶ್ರೇಷ್ಠ. ಹಳದಿ ಬಟ್ಟೆ ಧರಿಸಿ, ಸಿಹಿ ತಿಂಡಿಗಳನ್ನು ಮಾಡಿ ಸರಸ್ವತಿ ಶ್ಲೋಕ ಅಥವಾ ಅಷ್ಟೋತ್ತರಗಳನ್ನು ಪಠಿಸಿ ಪೂಜಿಸುವುದರಿಂದ ಮನೆಯಲ್ಲಿ ಜ್ಞಾನ ಮತ್ತು ಶುಭ ಪ್ರಾಪ್ತವಾಗುತ್ತದೆ. ಇದು ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಹಬ್ಬವಾಗಿದೆ. ವಸಂತ ಋತು ಪ್ರಾರಂಭದ ದಿನವೂ ಇದಾಗಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 23 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಶುಕ್ರವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಪಂಚಮಿ, ಶುಕ್ಲ ಪಕ್ಷ, ಪೂರ್ವಭಾದ್ರ ನಕ್ಷತ್ರ, ಪರಿಘಯೋಗ, ಬವಕರಣ ಇರುವ ಶುಕ್ರವಾರದ ವಿಶೇಷ ದಿನವಾಗಿದೆ. ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಈ ದಿನ ವಸಂತ ಪಂಚಮಿ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವೂ ಆಗಿದೆ.
ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದು, ಹಲವು ರಾಶಿಗಳಿಗೆ ಆರ್ಥಿಕ ಅಭಿವೃದ್ಧಿ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಶುಭ ಸುದ್ದಿ ಮತ್ತು ವಾಹನ ಯೋಗದಂತಹ ಸಕಾರಾತ್ಮಕ ಫಲಿತಾಂಶಗಳನ್ನು ಸೂಚಿಸಿದ್ದಾರೆ. ಆದಾಗ್ಯೂ, ಕೆಲವು ರಾಶಿಗಳಿಗೆ ಖರ್ಚುಗಳಲ್ಲಿ ನಿಯಂತ್ರಣ, ಸಂಬಂಧಗಳಲ್ಲಿ ಜಾಗ್ರತೆ, ಮತ್ತು ಹಿತಶತ್ರುಗಳ ಬಾಧೆಯಂತಹ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ನೆಲಮಂಗಲ, ಜನವರಿ 23: ಅಕ್ರಮ ಬಾಂಗ್ಲಾದೇಶ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾದ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು (Puneeth Kerehalli) ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂಬ ಆರೋಪದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಅಲ್ಲಿಗೆ ತೆರಳಿದ್ದರು. ಹಸನ್ ಎಂಬಾತ ಅಕ್ರಮ ಬಾಂಗ್ಲಾ ವಲಸಿಗ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಲ್ಲದೆ, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ ಠಾಣೆಯಿಂದ ಹೋಗುತ್ತಿದ್ದ ವೇಳೆ, ಬಾಗಲಗುಂಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪುನೀತ್ ಕೆರೆಹಳ್ಳಿಯ ವಿರುದ್ಧ ಈ ಹಿಂದೆ ಅಕ್ರಮ ಗೋ ಸಾಗಾಟ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಹಲವು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಬಾಗಲಗುಂಟೆ ಠಾಣೆಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿದ್ದಾರೆ.
ಇದಕ್ಕೂ ಮುನ್ನ, ಡಿಸೆಂಬರ್ 18ರಂದು ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿಯೂ ಪುನೀತ್ ಕೆರೆಹಳ್ಳಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಾಂಗ್ಲಾದೇಶದ ಅಕ್ರಮ ವಲಸಿಗರೆಂದು ಆರೋಪಿಸಿ ಶೆಡ್‌ಗಳಿಗೆ ತೆರಳಿ ದಾಖಲೆ ತೋರಿಸುವಂತೆ ದಾಂಧಲೆ ನಡೆಸಿದ ಆರೋಪ ಅವರ ಮೇಲೆ ದಾಖಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂದು ಹೇಳಿ, ಪುನೀತ್ ಕೆರೆಹಳ್ಳಿ ನೇತೃತ್ವದ ತಂಡವು ಕೆಲ ಶೆಡ್‌ಗಳಿಗೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿತ್ತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಶೆಡ್‌ಗಳಿಗೆ ಅನಧಿಕೃತವಾಗಿ ಪ್ರವೇಶಿಸಿ ಗಲಾಟೆ ನಡೆಸಿದ್ದಾರೆ ಎಂದು ಸಿದ್ದೇಶ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಒಟ್ಟಿನಲ್ಲಿ, ಅಕ್ರಮ ವಲಸಿಗರ ವಿಚಾರದಲ್ಲಿ ಸ್ವಯಂ ಪ್ರೇರಿತ ಕಾರ್ಯಾಚರಣೆ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ ಮೇಲೆ ಒಂದರ ಮೇಲೊಂದು ಪ್ರಕರಣಗಳು ದಾಖಲಾಗುತ್ತಿವೆ. ಅವರ ಚಟುವಟಿಕೆಗಳು ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ.
ವರದಿ: ಮಂಜನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಜನವರಿ 23: ಕರ್ನಾಟಕ ಸಚಿವ ಸಂಪುಟವು ರಾಜ್ಯದ ಸಿವಿಲ್ ಸೇವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಕೊಡುಗೆ ನೀಡಿದೆ. ವಯೋಮಿತಿ ಸಡಿಲಿಕೆಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ಮೂಲಕ, ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷಗಳ ಹೆಚ್ಚುವರಿ ವಯೋಮಿತಿ ಸೌಲಭ್ಯವನ್ನು ನೀಡಲಾಗಿದೆ. ಇದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ.
ಈ ಹಿಂದೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳ ವಯೋಮಿತಿ ಇದ್ದು, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳ ಗರಿಷ್ಠ ವಯೋಮಿತಿ ಇತ್ತು. ಹೊಸ ಆದೇಶದ ಪ್ರಕಾರ, ಈ ಎಲ್ಲಾ ವರ್ಗದ ವಯೋಮಿತಿಗಳಿಗೆ ಐದು ವರ್ಷಗಳನ್ನು ಸೇರ್ಪಡೆ ಮಾಡಲಾಗಿದೆ. ಅಂದರೆ, ಸಾಮಾನ್ಯ ವರ್ಗಕ್ಕೆ ಈಗ 40 ವರ್ಷ ಮತ್ತು ಎಸ್‌ಸಿ, ಎಸ್‌ಟಿ ವರ್ಗಕ್ಕೆ 43 ವರ್ಷ ಗರಿಷ್ಠ ವಯೋಮಿತಿ ಆಗಲಿದೆ.
ಈ ವಯೋಮಿತಿ ಸಡಿಲಿಕೆಯು 2027ರ ಡಿಸೆಂಬರ್ 31 ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಅವಧಿಯೊಳಗೆ ಎಷ್ಟು ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದು ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮುಂದಿನ ದಾರಿ ಕಾಣದೇ ಬಿಟ್ಟಿದ್ದ ಯೋಜನೆಗೆ ಪುನಃ ಚಾಲನೆ ಸಿಗಲಿದೆ. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಸಣ್ಣ ಕಾರಣಕ್ಕೆ ನೆರೆಯವರ ಜೊತೆ ಕಲಹವಾಗಬಹುದು. ಮಕ್ಕಳಿಂದ ಹಣವನ್ನು ಪಡೆಯುವಿರಿ. ಯಾರೊಂದಿಗೂ ಅಧಿಕವಾಗಿ ಮಾತನಾಡುವ ಅಪೇಕ್ಷೆ ಇರದು. ಸಂಪತ್ತಿನ ನಿರ್ವಹಣೆಯಲ್ಲಿ ಸೋಲಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾಗಬಹುಸು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ.
ವೃಷಭ ರಾಶಿ:
ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಮನಸ್ಸಿನಲ್ಲಿ ಯಾವುದೋ ಆತಂಕವು ಇರಲಿದ್ದು ಹೊರಹಾಕಲು ಪ್ರಯತ್ನಿಸುವಿರಿ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಬಂಗಾರದ ಖರೀದಿಗೆ ಉತ್ಸಾಹವನ್ನು ತೋರುವಿರಿ. ರಕ್ಷಣಾತ್ಮಕ ಉದ್ಯೋಗದಲ್ಲಿ ಸಾಧನೆ. ಮನೆಗೆ ಆಗಮಿಸಿದ ನಿಮಗೆ ಕುಟುಂಬದ ಪ್ರೀತಿಯು ಸಿಗಲಿದೆ. ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳುವಿರಿ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಆಸೆ ಪಡುವುದು ಬೇಡ.
ಮಿಥುನ ರಾಶಿ:
ಹೊಸ ಕಲಿಕೆಯ ಬಗ್ಗೆ ಆಸಕ್ತಿ ಉಂಟಾಗಬಹುದು. ಒಂದೇ ರೀತಿಯ ಕೆಲಸವನ್ನು ಮಾಡಿ ಬೇಸರವಾದೀತು. ಹೊಸ ವಸ್ತುಗಳನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ. ತಾಯಿಗೆ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು. ಸಂಗಾತಿಗೆ ನೀವು ಸಹಾಯವನ್ನು ಮಾಡುವಿರಿ. ಕಾರ್ಯ ಮಾಡುವ ಸುಲಭದ ಉಪಾಯಗಳು ನಿಮ್ಮ ಬುದ್ಧಿಗೆ ಹೊಳೆಯದು.
ಕರ್ಕಾಟಕ ರಾಶಿ:
ಅತಿವೇಗದ ಮಾತು ಇತರರಿಗೆ ಸ್ಪಷ್ಟವಾಗದೇ ಹೋಗಬಹುದು. ನೀವು ಗಟ್ಟಿಯಾಗಿದೇ ನಿಮ್ಮವರನ್ನು ಗಟ್ಟಿಮಾಡಲಾಗದು. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಹಳ ದಿನಗಳ ಅನಂತರದ ಆಪ್ತರ ಒಡನಾಟ ಖುಷಿಯನ್ನು ಕೊಡಬಹುದು. ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ ಇರುವುದು. ಸಂಗಾತಿಗೆ ಆಭರಣವನ್ನು ಉಡುಗೊರೆಯಾಗಿ ಕೊಡುವಿರಿ. ಸಿಟ್ಟಿನಿಂದ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಬೇಡ.
ಸಿಂಹ ರಾಶಿ:
ಮಲಿನ ವಸ್ತ್ರವನ್ನು ಅಜ್ಞಾನದಿಂದ ಧರಿಸಿದರೂ ಎಲ್ಲರೂ ಅಪಹಾಸ್ಯ ಮಾಡಬಹುದು. ನಿಮ್ಮ ಕೆಲಸಗಳಿಗೆ ಯಾರ ಸಹಕಾರವೂ ಇಲ್ಲ ಎಂದು ಬೇಸರ ಮಾಡಿಕೊಳ್ಳುವುದು ಬೇಡ. ನ್ಯಾಯಾಲಯದಿಂದ ಶುಭ ವಾರ್ತೆ ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ತೊಡಗುವಿಕೆ ಹೆಚ್ಚಿರುವುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸ್ಥಿರಾಸ್ತಿ ಖರೀದಿಯ ಯೋಜನೆ ಮಾಡವಿರಿ. ವೃತ್ತಿಯ ಸ್ಥಳದಲ್ಲಿ ರೋಚಕ ಅನುಭವವು ಇರಲಿದೆ.
ಕನ್ಯಾ ರಾಶಿ:
ಮನೆಯ ಖರ್ಚನ್ನು ಕಡಿಮೆ ಮಾಡುವ ಚಿಂತನೆಯಲ್ಲಿ ಇರುವಿರಿ. ಅತಿಥಿ ಸತ್ಕಾರವೂ ಪೂಜಯಷ್ಟೇ ಯೋಗ್ಯತೆಯನ್ನು ಹೊಂದಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ಹೊಸ ವಸ್ತುಗಳ ಖರೀದಿಗೆ ಉತ್ಸಾಹವು ಅಧಿಕವಾಗಿರಲಿದೆ. ಯಾರ ಮಾತನ್ನೂ ಕೇಳುವ ವ್ಯವಧಾನವೂ ನಿಮ್ಮಲ್ಲಿ ಇರದು. ಎಲ್ಲರ ಮಾತಿಗೂ ನಿಮ್ಮ ಕೋಪ ಮಾಡಿಕೊಳ್ಳುವಿರಿ. ನಿಮ್ಮ ಎಲ್ಲ ನಿರ್ಧಾರಗಳೂ ನಿಮಗೇ ನಕಾರಾತ್ಮಕವಾಗಿ ಇರುವಂತೆ ತೋರುವುದು.
ತುಲಾ ರಾಶಿ:
ಸಮಯಪ್ರಜ್ಞೆಯಿಂದ ಕೆಲಸ ಮಾಡುವಿರಿ. ಹಣದ ಉಳಿತಾಯವು ಸಾಕೆಂದು ಅನ್ನಿಸದು. ನೀವು ಮಾಡುವ ಕೆಲಸದಲ್ಲಿ ಜಾಣ್ಮೆಯು ಅವಶ್ಯಕವಾಗಿರುವುದು. ಹಿತಮಿತವಾದ ಮಾತುಗಾರಿಕೆಯಿಂದ ಎಲ್ಲರಿಗೂ ಹಿತವಾಗುವುದು. ಮಂದಗತಿಯಲ್ಲಿ ಸಾಗುವ ನಿಮ್ಮ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು. ಬಂಧುಗಳ ಆಶ್ರಯದಲ್ಲಿ ಇಂದು ನೀವು ಇರಬೇಕಾದೀತು. ಅಸಮಾಧಾನವೆನಿಸುವ ಸಂಗತಿ ಸಿಕ್ಕರೆ ಸ್ವಲ್ಪ ತಾಳ್ಮೆ ಇರಲಿ. ಸಂಗಾತಿಗೆ ನೀವು ಉತ್ತಮ ಕೆಲಸವು ಕೊಡಿಸುವಿರಿ. ಸರಳತೆಯೇ ನಿಮ್ಮ ಪ್ರಶಂಸೆಗೆ ಕಾರಣವಾಗುವುದು.
ವೃಶ್ಚಿಕ ರಾಶಿ:
ಇಂದಿನ ಕಾರ್ಯವನ್ನು ಮಾಡಲು ಹಣವು ಅಧಿಕ ಬೇಕಾದೀತು. ನೀವು ಮಾಡುವ ಧಾರ್ಮಿಕ ಕಾರ್ಯದಲ್ಲಿ ಸಂಪೂರ್ಣ ಶ್ರದ್ಧೆಯಿರಲಿ. ಅನೇಕ ರೀತಿಯ ಫಲಗಳನ್ನು ನೀವು ಪಡೆಯಲಿದ್ದು ಕೋಪ ನಿಯಂತ್ರಿಸಬೇಖಾಗುವುದು. ನಿಮ್ಮನ್ನು ಅನುಕರಣೆ ಮಾಡಬಹುದು. ಮಕ್ಕಳ ಪ್ರಗತಿಯಿಂದ ನಿಮಗೆ ಶ್ರೇಯಸ್ಸು. ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಮಾಡಿಕೊಳ್ಳಿ. ಸಮಯಪ್ರಜ್ಞೆಯಿಂದ ಆಗುವ ತಪ್ಪನ್ನು ಸರಿ ಮಾಡಿಕೊಳ್ಳುವಿರಿ. ವೃತ್ತಿಯ ಕೆಲಸಗಳ ನಡುವೆ ಮನೆಯ ಕೆಲಸವೂ ನಿಮಗೆ ಕಷ್ಟವಾದೀತು.
ಧನು ರಾಶಿ:
ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗಿರುವುದು. ವ್ಯವಹಾರದಲ್ಲಿ ಅಸಾಧ್ಯವನ್ನು ಸಾಧಿಸುವ ಛಲ ಬೇಡ. ಮನೆಗೆ ಬೇಕಾದ ಉಪಕರಣವನ್ನು ಹೆಚ್ಚು ಹಣವನ್ನು ಕೊಟ್ಟು ಖರೀದಿಸುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನಿಸುವುದು. ನಿಮ್ಮ ಪ್ರಭಾವ ಹೆಚ್ಚಾಗಿ ಇರುವುದರಿಂದ ಶತ್ರುಗಳು ದೂರ ಹೋಗುತ್ತಾರೆ ಮತ್ತು ದೀರ್ಘ ಕಾಲದಿಂದ ಬಾಕಿ ಉಳಿದಂತಹ ಯೋಜನೆ ಪೂರ್ಣಗೊಳ್ಳುವುವು. ಆರ್ಥಿಕ ಸಮಸ್ಯೆಯನ್ನು ಹಂಚಿಕೊಳ್ಳಿ. ಸೂಕ್ತ ದಾರಿ ಸಿಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವಿರಿ.
ಮಕರ ರಾಶಿ:
ನಿಮ್ಮ ಪ್ರೀತಿ ಮತ್ತು ವಿಶ್ವಾಸ ಭದ್ರವಾಗಿರುವುದು. ಇಂದು ನಿಮಗೆ ಉಂಟಾದ ಅನಾರೋಗ್ಯದಿಂದ ಆತಂಕಗೊಳ್ಳಬೇಕಾದೀತು. ಕಚೇರಿಯಲ್ಲಿ ಉತ್ತಮವಾದ ವಾತಾವರಣದ ಉತ್ಸಾಹದಿಂದ ಇರುವಿರಿ. ಜಾಣ್ಮೆಯಿಂದ ಮಾಡಿದ ವ್ಯವಹಾರಕ್ಕೆ ಪ್ರಶಂಸೆ ಸಿಗಲಿದೆ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಉನ್ನತ ಪದವಿಯನ್ನು ಮಾಡುವವರಿಗೆ ಮುಂದಿನ ದಾರಿ ಸ್ಪಷ್ಟವಾಗುವುದು. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ. ನಿರೀಕ್ಷಿತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.
ಕುಂಭ ರಾಶಿ:
ಪರಿಚಿತರು ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು. ಭ್ರಾತೃಕಲಹದಿಂದ ಬೇಸರವಾಗಲಿದೆ. ಸಮಯದ ಹೊಂದಾಣಿಕೆಯಿಂದ ಕಾರ್ಯವನ್ನು ಸಾಧಿಸಬಹುದು. ಹೂಡಿಕೆಯನ್ನು ಅನೇಕ ಜನರು ಸೇರಿ ಮಾಡುವವರಿದ್ದೀರಿ. ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ. ಹೊಸ ಉದ್ಯೋಗಕ್ಕೆ ಅವಕಾಶವು ಪ್ರಾಪ್ತವಾಗಲಿದೆ. ಹೊಸ ಉದ್ಯೋಗವನ್ನು ಉತ್ಸಾಹದಿಂದ ಮಾಡುವಿರಿ. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗುವುದು.
ಮೀನ ರಾಶಿ:
ಆತ್ಮೀಯರ ವಿಯೋಗವು ಅನಿವಾರ್ಯವಾಗಿದ್ದು, ಅರ್ಥ ಮಾಡಿಕೊಂಡರೆ ಒಳ್ಳೆಯದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು. ಆಸ್ತಿ ವ್ಯವಹಾರದಲ್ಲಿ ಹಿನ್ನಡೆಯಾದಂತೆ ಅನ್ನಿಸಬಹುದು. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು. ಭೂಮಿಯ ಉತ್ಪನ್ನಗಳಿಂದ ನಿಮಗೆ ಲಾಭ. ಅಪಘಾತ ಭೀತಿಯು ಕಾಡುವುದು.
ಜನವರಿ 23, 2026ರ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಪರಿಘ, ಕರಣ : ಬಾಲವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 18 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11-11 – 12:36, ಯಮಗಂಡ ಕಾಲ 15:27 – 16:53, ಗುಳಿಕ ಕಾಲ 08:20 – 09:45