Headlines

IPL 2026: ಫೈನಲ್​ಗೇರಿರುವ ಆರ್​ಸಿಬಿ ಮೇಲೆ ಕೋಟಿ ಮೊತ್ತದ ಬಹುಮಾನದ ಮಳೆ

2026 ರ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿಗೆ ಫೈನಲ್ ಸ್ಥಾನ ಖಚಿತವಾಗಿದೆ. ಮೇ 26 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ, ಗುಜರಾತ್ ಟೈಟಾನ್ಸ್ ತಂಡವನ್ನು 92 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ (PC- PTI). ಫೈನಲ್ ಪಂದ್ಯವು ಈಗ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ಆರ್​ಸಿಬಿ ಕ್ವಾಲಿಫೈಯರ್ 2 ರ ವಿಜೇತರನ್ನು ಎದುರಿಸಲಿದೆ. ಆದಾಗ್ಯೂ, ಪ್ರಶಸ್ತಿ…

Read More

ರೋಗಿ ಜೊತೆ ಅನೈತಿಕ ಸಂಬಂಧ; ಭಾರತ ಮೂಲದ ಇಂಗ್ಲೆಂಡ್ ವೈದ್ಯನ ಲೈಸೆನ್ಸ್ ರದ್ದು!

ನವದೆಹಲಿ, ಮೇ 27: ಯುನೈಟೆಡ್ ಕಿಂಗ್ಡಮ್ (ಇಂಗ್ಲೆಂಡ್)ನಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ರೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೆ ಆಕೆಗೆ ಕಾನೂನುಬಾಹಿರವಾಗಿ ಅಫೀಮು ಆಧಾರಿತ ಮಾದಕ ದ್ರವ್ಯಗಳನ್ನು ನೀಡಿದ ಗಂಭೀರ ಆರೋಪದ ಮೇಲೆ ಅವರ ವೈದ್ಯಕೀಯ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ. ಆರೋಪಿ ವೈದ್ಯರ ಹೆಸರು ಡಾ. ಚಿರಾಗ್ ಪಟೇಲ್. ಇವರು ಕಾರ್ಡಿಫ್‌ನ ‘ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ವೇಲ್ಸ್’ನಲ್ಲಿ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಆಗಿ 2018ರಿಂದ ಸೇವೆ ಸಲ್ಲಿಸುತ್ತಿದ್ದರು. ಇಡೀ ವೇಲ್ಸ್ ಭಾಗದಲ್ಲಿ ಈ ನಿರ್ದಿಷ್ಟ ಬೆನ್ನುಮೂಳೆಯ ಕಾಯಿಲೆಗೆ ಚಿಕಿತ್ಸೆ ನೀಡಬಲ್ಲ…

Read More

ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಮುಂಬೈ, ಮೇ 27: ಭಾರತದ ಷೇರು ಮಾರುಕಟ್ಟೆಯಲ್ಲಿ (Stock Market) ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ‘ಅದಾನಿ ಪವರ್’ (Adani Power) ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕಂಪನಿಯ ಷೇರುಗಳು ಬರೋಬ್ಬರಿ ಶೇ. 124 ರಷ್ಟು ಭಾರಿ ಜಿಗಿತ ಕಂಡ ಹಿನ್ನೆಲೆಯಲ್ಲಿ, ಅದರ ಷೇರು ಸಂಪತ್ತು ಅಥವಾ ಮಾರುಕಟ್ಟೆ ಮೌಲ್ಯ (Market Capitalization) ಗಣನೀಯವಾಗಿ ಹೆಚ್ಚಿದೆ. ಇದರೊಂದಿಗೆ, ಮಾರುಕಟ್ಟೆ ಮೌಲ್ಯದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ (Infosys) ಅನ್ನು ಹಿಂದಿಕ್ಕಿದೆ. ಇದೀಗ ಅದಾನಿ ಪವರ್ ದೇಶದ ಅತ್ಯಂತ…

Read More

ಐಶ್ವರ್ಯಾ ರೈ ಕಾಲಿಗೆ ಬಿದ್ದ ಊರ್ವಶಿ ರೌಟೇಲಾ? ವೈರಲ್ ಆದ ಎಐ ಫೋಟೋ ಕಂಡು ಕಿಡಿಕಾರಿದ ನಟಿ

ಬಾಲಿವುಡ್‌ನ ಗ್ಲಾಮರಸ್ ನಟಿ ಊರ್ವಶಿ ರೌಟೇಲಾ (Urvashi Rautela) ಇತ್ತೀಚೆಗೆ ನಡೆದ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ (Cannes Film Festival 2026) ತಮ್ಮ ವಿಭಿನ್ನ ಹಾಗೂ ಭವ್ಯವಾದ ಗೌನ್‌ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಪ್ರಸ್ತುತ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ಎಐ ತಂತ್ರಜ್ಞಾನದ (AI-generated) ಚಿತ್ರವೊಂದರ ವಿರುದ್ಧ ಊರ್ವಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಊರ್ವಶಿ ಅವರನ್ನು ಬಾಲಿವುಡ್‌ನ ಇತರೆ ನಟಿಯರಾದ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ, ಮಾಧುರಿ ದೀಕ್ಷಿತ್ ಮತ್ತು ದೀಪಿಕಾ…

Read More

‘ಡಾನ್ 3’ ಮಾತ್ರವಲ್ಲ, ನಿಂತು ಹೋದ ರಣ್ವೀರ್ ಸಿಂಗ್ ಸಿನಿಮಾಗಳಿವು

‘ಧುರಂಧರ್’ (Dhurandar) ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಇಂಡಸ್ಟ್ರಿ ಹಿಟ್ ನೀಡಿರುವ ರಣ್ವೀರ್ ಸಿಂಗ್ ಈಗ ಅದೇ ಇಂಡಸ್ಟ್ರಿಯಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ರಣ್ವೀರ್ ಸಿಂಗ್ ಒಪ್ಪಿಕೊಂಡಿದ್ದ ‘ಡಾನ್ 3’ ಸಿನಿಮಾದಿಂದ ಹೊರಬಂದಿದ್ದಕ್ಕಾಗಿ ಇದೀಗ ಫೆಡರೇಷನ್ ಆಫ್ ಇಂಡಿಯನ್ ಸಿನಿ ಎಂಪ್ಲಾಯಿಸ್ (ಎಫ್​ಡಬ್ಲುಐಸಿಇ) ರಣ್ವೀರ್ ಸಿಂಗ್ ವಿರುದ್ಧ ಅಸಹಕಾರಕ್ಕೆ ಕರೆ ನೀಡಿದ್ದು, ರಣ್ವೀರ್ ಸಿಂಗ್ ನಟಿಸುವ ಯಾವುದೇ ಸಿನಿಮಾನಲ್ಲಿ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದೆ. ‘ಡಾನ್ 3’ ಸಿನಿಮಾದಿಂದ ರಣ್ವೀರ್ ಸಿಂಗ್ ಅವರು ಹೊರಬಂದಿದ್ದೇ ಇದಕ್ಕೆ ಕಾರಣವಾಗಿದೆ….

Read More

ಮಾಜಿ ಪ್ರೇಯಸಿ ಕರೆದಳೆಂದು ಹೋದ ಪ್ರಿಯಕರ ದುರಂತ ಸಾವು: ಆಗಿದ್ದೇನು?

ಪ್ರಾತಿನಿಧಿಕ ಚಿತ್ರImage Credit source: Getty images ಬೆಂಗಳೂರು, ಮೇ 27: ಮಾಜಿ ಪ್ರೇಯಸಿಯ (Ex-girlfriend) ಕರೆ ಹಿನ್ನೆಲೆ ಆಕೆಯನ್ನು ಭೇಟಿ ಮಾಡಲು ಮನೆಗೆ ಹೋಗಿದ್ದ ಯುವಕನೋರ್ವ ತೀವ್ರ ಹಲ್ಲೆಗೊಳಗಾಗಿ ಸಾವನ್ನಪ್ಪಿರುವಂತಹ (death) ಘಟನೆ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರದ ಬಿಡಿ ಕಾಲೋನಿ ನಿವಾಸಿ ಮೊಹಮ್ಮದ್ ಖಾಸಿಂ(27) ಕೊಲೆಯಾದ ಯುವಕ. ಕೊಲೆ ಆರೋಪ ಹಿನ್ನೆಲೆ ಮಾಜಿ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬ್ಯಾಟರಯನಪುರ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ…

Read More

ಸಿದ್ದರಾಮಯ್ಯ ರಾಜೀನಾಮೆ ಹೊತ್ತಲ್ಲೇ ನಿಕೇತ್‌ ಮೌರ್ಯ, ನಟಿ ಭಾವನಾ ರಾಮಣ್ಣ ಸೇರಿದಂತೆ 31 ಕೆಪಿಸಿಸಿ ಪದಾಧಿಕಾರಿಗಳಿಗೆ ಗೇಟ್‌ಪಾಸ್‌

ಭಾವನಾ ರಾಮಣ್ಣ, ನಿಕೇತ್ ರಾಜ್ ಮೌರ್ಯ ಬೆಂಗಳೂರು, (ಮೇ 27):‌ ಕರ್ನಾಟಕ ಕಾಂಗ್ರೆಸ್ (Karnataka Congress) ನಾಯಕತ್ವ ಬದಲಾವಣೆ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾಳೆ (ಮೇ 28) ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಲೋಕಭವನದ ಸಮಯ‌‌ ಕೇಳಿದ್ದಾರೆ. ಈ ಎಲ್ಲಾ ಮಹತ್ವದ ಬೆಳವಣಿಗೆಗಳ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) , ಕೆಪಿಸಿಸಿ ವಕ್ತಾರ ನಿಕೇತ್‌ ಮೌರ್ಯ, ನಟಿ ಭಾವನಾ ರಾಮಣ್ಣ ಸೇರಿದಂತೆ 31 ಕೆಪಿಸಿಸಿ…

Read More

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಇಂತಹ ಜನಗಳಿಂದ ಆದಷ್ಟು ದೂರವಿರಿ

ನಮ್ಮ ಸುತ್ತಮುತ್ತಲಿನ ಜನರು ನಮ್ಮ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಾರೆ. ಹೌದು ಕೆಟ್ಟ ಸಹವಾಸವು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಅದೇ ಒಳ್ಳೆಯ ಜನರ ಸಹವಾಸವು ಉತ್ತಮ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಅದೇ ರೀತಿ ಈ ಕೆಲವೊಂದಿಷ್ಟು ಜನರಿಂದ ಜೀವನದ ಸಂತೋಷವೆಲ್ಲಾ (happiness) ಹಾಳಾಗಿಬಿಡುತ್ತದೆ. ಈ ಜನರು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತಾರೆ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾರೆ. ಅಲ್ಲದೆ ಇಂತಹ ಜನರು ಗೆದ್ದಲುಗಳಂತೆ, ನಮ್ಮ ಜೀವನದ ಶಾಂತಿ ಮತ್ತು ಸಂತೋಷವನ್ನು ಮೌನವಾಗಿ…

Read More

ಔಷಧಿ ತೆಗೆದುಕೊಳ್ಳುವಾಗ ಮಾಡುವ ಈ 3 ತಪ್ಪುಗಳು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಚ್ಚರ!

ಅನಾರೋಗ್ಯ ಬಂದಾಗ ಔಷಧಿ (Medicine) ನಮ್ಮ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಔಷಧಿ ಸೇವಿಸುವ ವಿಧಾನದಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ಸ್ವಯಂ ಔಷಧಿ ಸೇವನೆ, ಡೋಸ್ ಮಧ್ಯದಲ್ಲಿ ನಿಲ್ಲಿಸುವುದು ಮತ್ತು ವೈದ್ಯರ ಸಲಹೆ ಇಲ್ಲದೆ ಔಷಧಿ ಬದಲಾಯಿಸುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಹೌದು, ಇದನ್ನು ನಾವು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡುತ್ತೇವೆ ಆದರೆ ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಫಾರ್ಮಾಸಿಸ್ಟ್…

Read More

Karnataka Weather Forecast: ರಾಜ್ಯದ 9 ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​, ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ

ಬೆಂಗಳೂರು, ಮೇ 27: ಭಾರತೀಯ ಹವಾಮಾನ ಇಲಾಖೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಳೆ (ಮೇ 28) ಗುಡುಗು ಸಹಿತ ಭಾರೀ ಮಳೆಯಾಗಬಹುದೆಂಬ ಎಚ್ಚರಿಕೆ ನೀಡಿದೆ. ಬೆಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಕರ್ನಾಟಕ ಭಾಗಗಳಲ್ಲಿ ಮಳೆ ಅಬ್ಬರಿಸಲಿದ್ದು, ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೊಷಿಸಲಾಗಿದೆ. ಅರಬ್ಬಿ ಸಮುದ್ರದಿಂದ ತೇವಾಂಶಯುಕ್ತ ಗಾಳಿಯ ಪ್ರವಾಹ ಬಲವಾಗುತ್ತಿರುವುದು ಹಾಗೂ ನೈಋತ್ಯ ಮುಂಗಾರು ಮುನ್ನ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದ ರಾಜ್ಯದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಲಿದೆ…

Read More