ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ರಸ್ತೆಯಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು!
ಕೊಲ್ಕತ್ತಾ, ಮೇ 27: ಪಶ್ಚಿಮ ಬಂಗಾಳದಲ್ಲಿ (West Bengal) ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಅಲ್ಲಿನ ಪೊಲೀಸರು ಬಂಧಿತ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರ ತಲೆ ಬೋಳಿಸಿ, ಕೈಗಳಿಗೆ ಕೋಳ ತೊಡಿಸಿ, ಕೇವಲ ಒಳ ಉಡುಪುಗಳಲ್ಲಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ನಿರ್ದಿಷ್ಟ ಪ್ರದೇಶವೊಂದರಲ್ಲಿ ಟಿಎಂಸಿ ಪಕ್ಷಕ್ಕೆ ಸೇರಿದ ಕೆಲವು ಸ್ಥಳೀಯ ಗೂಂಡಾಗಳು ಮತ್ತು ಕಾರ್ಯಕರ್ತರು ಸಾರ್ವಜನಿಕ ಶಾಂತಿ ಕದಡಿದ, ಹಿಂಸಾಚಾರ ನಡೆಸಿದ ಹಾಗೂ ಪೊಲೀಸರ ಮೇಲೆಯೇ…