Category Archives: Blog

Your blog category

ಔಷಧಿ ತೆಗೆದುಕೊಳ್ಳುವಾಗ ಮಾಡುವ ಈ 3 ತಪ್ಪುಗಳು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಚ್ಚರ!

ಅನಾರೋಗ್ಯ ಬಂದಾಗ ಔಷಧಿ (Medicine) ನಮ್ಮ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಔಷಧಿ ಸೇವಿಸುವ ವಿಧಾನದಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ಸ್ವಯಂ ಔಷಧಿ ಸೇವನೆ, ಡೋಸ್ ಮಧ್ಯದಲ್ಲಿ ನಿಲ್ಲಿಸುವುದು ಮತ್ತು ವೈದ್ಯರ ಸಲಹೆ ಇಲ್ಲದೆ ಔಷಧಿ ಬದಲಾಯಿಸುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಹೌದು, ಇದನ್ನು ನಾವು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡುತ್ತೇವೆ ಆದರೆ ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಫಾರ್ಮಾಸಿಸ್ಟ್ ನರೇಂದ್ರ ಕುಮಾರ್ ಶರ್ಮಾ ಅವರು ಈ ರೀತಿ ಮಾಡುವುದು ತುಂಬಾ ತಪ್ಪು ಇದು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಹೇಳುತ್ತಾರೆ. ಅವರ ಪ್ರಕಾರ, ಆಂಟಿಬಯೋಟಿಕ್ ಔಷಧಿಗಳನ್ನು ಸರಿಯಾಗಿ ಬಳಸದಿರುವುದರಿಂದ ಮುಂದಿನ ದಿನಗಳಲ್ಲಿ ಅವು ಪರಿಣಾಮಕಾರಿಯಾಗದೇ ಹೋಗುವ ಸಾಧ್ಯತೆ ಇದೆ. ಇದನ್ನೇ “ಸೂಪರ್‌ಬಗ್” ಪರಿಸ್ಥಿತಿ ಎಂದು ಕರೆಯಲಾಗುತ್ತದೆ. ಹಾಗಾದರೆ ಔಷಧಿ ಸೇವನೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಜನರು ಸಾಮಾನ್ಯವಾಗಿ ಮಾಡುವ ದೊಡ್ಡ ತಪ್ಪುಗಳು:

ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ

ಜ್ವರ, ಶೀತ ಅಥವಾ ಕೆಮ್ಮು ಬಂದಾಗ ಹಲವರು ತಮ್ಮ ಇಷ್ಟಕ್ಕೆ ತಾವೇ ಔಷಧಿ ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಮಕ್ಕಳಲ್ಲಿ ಈ ತಪ್ಪು ಹೆಚ್ಚಾಗಿ ಕಂಡುಬರುತ್ತದೆ. ಇದು ದೇಹದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು.

ಔಷಧಿ ಕೋರ್ಸ್ ಪೂರ್ಣಗೊಳಿಸದೇ ನಿಲ್ಲಿಸುವುದು

ಸ್ವಲ್ಪ ಆರೋಗ್ಯ ಸುಧಾರಿಸಿದ ತಕ್ಷಣ ಕೆಲವರು ಆಂಟಿಬಯೋಟಿಕ್ ಸೇವನೆ ನಿಲ್ಲಿಸುತ್ತಾರೆ. ಇದರಿಂದ ಸೋಂಕು ಸಂಪೂರ್ಣವಾಗಿ ಹೋಗದೆ ಮತ್ತೆ ತೀವ್ರವಾಗುವ ಸಾಧ್ಯತೆ ಹೆಚ್ಚುತ್ತದೆ.

ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸದಿರುವುದು

ಕೆಲವರು ಖಾಲಿ ಹೊಟ್ಟೆಯಲ್ಲಿ ಔಷಧಿ ತೆಗೆದುಕೊಳ್ಳುತ್ತಾರೆ ಅಥವಾ ಸಮಯ ತಪ್ಪಿಸುತ್ತಾರೆ. ಜೊತೆಗೆ ಎಕ್ಸ್‌ಪೈರಿ ಡೇಟ್ ಪರಿಶೀಲಿಸದೇ ಔಷಧಿ ಸೇವಿಸುವುದು ಕೂಡ ಅಪಾಯಕಾರಿಯಾಗಿದೆ.

ಇದನ್ನೂ ಓದಿ: ಔಷಧಿ ತೆಗೆದುಕೊಂಡ ನಂತರ ಈ ಕೆಲವು ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದಂತೆ

ಪೇನ್‌ಕಿಲ್ಲರ್‌ಗಳ ಅತಿಯಾದ ಬಳಕೆ ಕೂಡ ಅಪಾಯಕಾರಿ:

ತಜ್ಞರ ಪ್ರಕಾರ, ನೋವು ನಿವಾರಕ ಔಷಧಿಗಳನ್ನು ಹೆಚ್ಚು ಸೇವಿಸುವುದರಿಂದ ಕಿಡ್ನಿ ಮತ್ತು ಲಿವರ್ ಮೇಲೆ ಹಾನಿ ಉಂಟಾಗಬಹುದು. ಇದರಿಂದ ಸಣ್ಣ ವಯಸ್ಸಿನಲ್ಲೇ ಕಿಡ್ನಿ ಹಾಗೂ ಲಿವರ್ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಇದೆ.

ಜನರಿಕ್ ಮತ್ತು ಬ್ರಾಂಡೆಡ್ ಔಷಧಿಗಿರುವ ವ್ಯತ್ಯಾಸ ಏನು?

ಜನರಿಕ್ ಮತ್ತು ಬ್ರಾಂಡೆಡ್ ಔಷಧಿಗಳಲ್ಲಿರುವ ‘ಸಾಲ್ಟ್’ ಒಂದೇ ಆಗಿರುತ್ತದೆ. ವ್ಯತ್ಯಾಸ ಕಂಪನಿ ಮತ್ತು ಬೆಲೆಯಲ್ಲಿ ಮಾತ್ರ. ವೈದ್ಯರ ಸಲಹೆಯೊಂದಿಗೆ ಸರಿಯಾದ ಔಷಧಿ ಬಳಸಿದರೆ ಜನರಿಕ್ ಮೆಡಿಸಿನ್ ಕೂಡ ಪರಿಣಾಮಕಾರಿ ಎಂದು ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ರಾಜ್ಯದ 9 ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​, ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ

ಬೆಂಗಳೂರು, ಮೇ 27: ಭಾರತೀಯ ಹವಾಮಾನ ಇಲಾಖೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಳೆ (ಮೇ 28) ಗುಡುಗು ಸಹಿತ ಭಾರೀ ಮಳೆಯಾಗಬಹುದೆಂಬ ಎಚ್ಚರಿಕೆ ನೀಡಿದೆ. ಬೆಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಕರ್ನಾಟಕ ಭಾಗಗಳಲ್ಲಿ ಮಳೆ ಅಬ್ಬರಿಸಲಿದ್ದು, ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೊಷಿಸಲಾಗಿದೆ. ಅರಬ್ಬಿ ಸಮುದ್ರದಿಂದ ತೇವಾಂಶಯುಕ್ತ ಗಾಳಿಯ ಪ್ರವಾಹ ಬಲವಾಗುತ್ತಿರುವುದು ಹಾಗೂ ನೈಋತ್ಯ ಮುಂಗಾರು ಮುನ್ನ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದ ರಾಜ್ಯದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಲಿದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ
  • ರಾಜ್ಯದ 9 ಜಿಲ್ಲೆಗಳಲ್ಲಿ ಆರೆಂಜ್​​ ಅಲರ್ಟ್​​ ಘೊಷಣೆ
  • ಮುಂದಿನ ಕೆಲ ದಿನಗಳವರೆಗೂ ವರುಣಾರ್ಭಟದ ನಿರೀಕ್ಷೆ

ಎಲ್ಲೆಲ್ಲಿ ಆರೆಂಜ್​​ ಅಲರ್ಟ್​?

ಬೀದರ್​​, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಗುಡು-ಮಿಂಚಿ ಸಹಿತ ಭಾರಿ ಮಳೆಯ ಸಾಧ್ಯತೆ ಇದ್ದು ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಲಲ್ಲಿ ನಾಳೆ ಸಾಧಾರಣ ಮಳಯಾಗುವ ಬಗ್ಗೆ ಅಂದಾಜಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಡುಗು-ಸಿಡಿಲು ಗಾಳಿಯೊಂದಿಗೆ ಭಾರೀ ಮಳೆ, ನಮ್ಮ ಮೆಟ್ರೋ ಸಂಚಾರ ಸ್ಥಗಿತ

ಬೆಂಗಳೂರು ಹವಾಮಾನ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಜೊತೆಗೆ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಮೇ 29ರವರೆಗೆ ಉತ್ತರ ಒಳನಾಡು ಕರ್ನಾಟಕದ ಕೆಲವೆಡೆ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಇದೇ ರೀತಿಯ ಹವಾಮಾನ ಪರಿಸ್ಥಿತಿ ನಾಳೆಯವರೆಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿಯೂ ಮುಂದುವರಿಯಲಿದೆ. ಮೇ 29ರಿಂದ ಮೇ 31ರವರೆಗೆ ಗಾಳಿಯ ವೇಗ ಸ್ವಲ್ಪ ಕಡಿಮೆಯಾಗಬಹುದಾದರೂ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಉತ್ತರ ಒಳನಾಡು ಕರ್ನಾಟಕದ ಕೆಲವು ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಶ್ಮಿಕಾ ಮಾತ್ರವಲ್ಲ ವಿಜಯ್ ದೇವರಕೊಂಡ ಸಹ ‘ತಾಳಿ’ ಕಟ್ಟಿಕೊಂಡಿದ್ದಾರಾ?

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಇದೇ ಫೆಬ್ರವರಿ 26 ರಂದು ಬಲು ಅದ್ಧೂರಿಯಾಗಿ ಮದುವೆಯಾದರು. ಇವರ ಮದುವೆಯ ಚಿತ್ರಗಳು ಇನ್​​ಸ್ಟಾಗ್ರಾಂನಲ್ಲಿ ದಾಖಲೆಯನ್ನೇ ಬರೆದವು. ಅವರ ಉಡುಗೆ, ಧರಿಸಿದ್ದ ಆಭರಣಗಳು ಹೊಸ ಟ್ರೆಂಡ್ ಸೃಷ್ಟಿ ಮಾಡಿದವು. ಆಧುನಿಕತೆಯ ಜೊತೆಗೆ ಸಂಪ್ರದಾಯವನ್ನು ಬೆರೆಸಿದ್ದ ಅವರ ಮದುವೆಯ ಚರ್ಚೆಗಳು ವಾರಗಳ ಗಟ್ಟಲೆ ನಡೆದವು. ಇದೀಗ ವಿಜಯ್ ತಮ್ಮ ಪತ್ನಿಯನ್ನು ಅದೆಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿಯನ್ನು ನೆಟ್ಟಿಗರು ಹುಡುಕಿದ್ದಾರೆ.

ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ವಿಮಾನ ನಿಲ್ದಾಣವೊಂದರಿಂದ ಹೊರಗೆ ಬರುವಾಗ ಅವರ ಫೋಟೊಗಳನ್ನು ಪಾಪರಾಜಿಗಳು ತೆಗೆದಿದ್ದರು. ಈ ವೇಳೆ ವಿಜಯ್ ಕೊರಳಿಗೆ ಧರಿಸಿದ್ದ ಸರವೊಂದು ಗಮನ ಸೆಳೆಯಿತು. ವಿಜಯ್, ತಮ್ಮ ಕೊರಳಿಗೆ ರಶ್ಮಿಕಾರ ಇನಿಷಿಯಲ್ ‘ಆರ್’ ಇರುವ ಲಾಕೆಟ್ ಒಂದನ್ನು ಧರಿಸಿದ್ದರು. ಮದುವೆಗೆ ಮುಂಚೆ ಈ ಲಾಕೆಟ್ ವಿಜಯ್ ಕೊರಳಲ್ಲಿ ಇರಲಿಲ್ಲ. ಆದರೆ ಇತ್ತೀಚೆಗೆ ವಿಜಯ್ ಅವರು ಆರ್ ಲಾಕೆಟ್ ಹೊಂದಿದ ಚೈನ್ ಅನ್ನು ಕೊರಳಿಗೆ ಧರಿಸುತ್ತಿದ್ದಾರೆ. ಪತ್ನಿಯ ಮೇಲಿನ ಪ್ರೀತಿಗೆ ಈ ಲಾಕೆಟ್ ಧರಿಸುತ್ತಿದ್ದಾರೆ ಎನ್ನಲಾಗಿದೆ.

ವಿಜಯ್​​ರ ಚೈನ್ ನೋಡಿದ ನೆಟ್ಟಿಗರು, ‘ಇದು ವಿಜಯ್ ಧರಿಸುತ್ತಿರುವ ತಾಳಿ’ ಎಂದಿದ್ದು, ವಿಜಯ್ ಅವರ ಪ್ರೀತಿಯನ್ನು ಕೊಂಡಾಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಪರಸ್ಪರ ಕೆಲ ವರ್ಷಗಳ ಕಾಲ ಪ್ರೀತಿಸಿ, ವಿವಾಹವಾಗಿದ್ದಾರೆ. ಮದುವೆಗೆ ಮುಂಚೆ ವಿಜಯ್ ಬಗ್ಗೆ ಭಾವುಕವಾಗಿ ಮಾತನಾಡಿದ್ದ ರಶ್ಮಿಕಾ, ‘ವಿಜಯ್ ಅಪರೂಪದ ವ್ಯಕ್ತಿ, ಅವರು ನನ್ನನ್ನು ನನ್ನಂತೆಯೇ ಇರಲು ಬಿಡುತ್ತಾರೆ. ಸಮಾನತೆಗೆ ಬೆಲೆ ಕೊಡುತ್ತಾರೆ’ ಎಂದಿದ್ದರು. ಈಗ ರಶ್ಮಿಕಾ ತಾಳಿ ಧರಿಸಿರುವಾಗ, ತಾವು ರಶ್ಮಿಕಾರ ಹೆಸರಿನ ಲಾಕೆಟ್ ತೊಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಕ್ಯೂಟ್ ವಿಡಿಯೋ ನೋಡಿ

ಮದುವೆಯ ಬಳಿಕ ಇಬ್ಬರೂ ತಮ್ಮ-ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಅವರು ‘ರಣಬಲಿ’ ಹೆಸರಿನ ಸಿನಿಮಾನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ನಟಿಸುತ್ತಿರುವ ಮೂರನೆ ಸಿನಿಮಾ ಇದಾಗಿದೆ. ಇದರ ಹೊರತಾಗಿ ರಶ್ಮಿಕಾ ನಟನೆಯ ‘ಕಾಕ್​ಟೇಲ್ 2’ ಹಿಂದಿ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ‘ಮೈಸಾ’ ಹೆಸರಿನ ಆಕ್ಷನ್ ಹಾರರ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇವುಗಳ ಬಳಿಕ ಮತ್ತೊಂದು ಹಾರರ್ ಹಿಂದಿ ಸಿನಿಮಾನಲ್ಲಿ ರಶ್ಮಿಕಾ ನಟಿಸಲಿದ್ದಾರೆ. ತಮಿಳಿನಲ್ಲಿ ಅಜಿತ್ ಕುಮಾರ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಇನ್ನು ವಿಜಯ್ ದೇವರಕೊಂಡ ಸದ್ಯಕ್ಕೆ ‘ರಣಬಲಿ’ಯಲ್ಲಿ ನಟಿಸುತ್ತಿದ್ದು, ಅದರ ಜೊತೆಗೆ ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL: ಅತಿ ಹೆಚ್ಚು ಬಾರಿ ಐಪಿಎಲ್ ಫೈನಲ್ಸ್ ಆಡಿದ ತಂಡ ಯಾವುದು? ಆರ್​ಸಿಬಿಗೆ ಎಷ್ಟನೇ ಸ್ಥಾನ?

Source link

ಬಾತ್‌ರೂಮ್‌ ಕ್ಲೀನ್‌ ಮಾಡಲು ಉಪ್ಪಿನ ಜೊತೆಗೆ ಅಡುಗೆಮನೆಯಲ್ಲಿರುವ ಈ ವಸ್ತುಗಳೇ ಸಾಕು

ತೇವಾಂಶದ ಕಾರಣದಿಂದಾಗಿ ಬಾತ್‌ರೂಮ್‌ನಲ್ಲಿ (bathroom) ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಸುಲಭವಾಗಿ ವೃದ್ಧಿಯಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಸೋಂಕು ಮತ್ತು ವಾಸನೆಯ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಸ್ನಾನಗೃಹವನ್ನು ಎಷ್ಟು ಸ್ವಚ್ಛಗೊಳಿಸಿದರೂ ಕಮ್ಮಿಯೇ. ಸಾಮಾನ್ಯವಾಗಿ ಹೆಚ್ಚಿನವರು ಬಾತ್‌ರೂಮ್‌ನ ಕಲೆ, ಕೊಳೆ, ವಾಸನೆಯನ್ನು ತೊಡೆದುಹಾಕಲು ದುಬಾರಿ ಕ್ಲೀನರ್‌ಗಳನ್ನು ಬಳಸುತ್ತಾರೆ. ಈ ದುಬಾರಿ ಉತ್ಪನ್ನಗಳ ಬದಲು ಉಪ್ಪಿನ ಜೊತೆಗೆ ಅಡುಗೆಮನೆಯಲ್ಲಿರುವ ಈ ಕೆಲವು ವಸ್ತುಗಳ ಸಹಾಯದಿಂದ ಸ್ನಾನಗೃಹವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಬಹುದು. ಉಪ್ಪಿನ ಸಹಾಯದಿಂದ ಸ್ನಾನಗೃಹವನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಉಪ್ಪಿನ ಸಹಾಯದಿಂದ ಬಾತ್‌ರೂಮ್‌ ಕ್ಲೀನ್‌ ಮಾಡುವುದು ಹೇಗೆ?

ಉಪ್ಪು ಮತ್ತು ನಿಂಬೆಹಣ್ಣು: ಉಪ್ಪಿನ ಜೊತೆ ನಿಂಬೆ ರಸವನ್ನು ಬೆರೆಸಿ ಬಾತ್‌ರೂಮ್‌ನ ನಲ್ಲಿಗಳು ಮತ್ತು ಬೇಸಿನ್‌ಗಳನ್ನು ಸ್ಕ್ರಬ್ ಮಾಡಿ ಸ್ವಚ್ಛಗೊಳಿಸಿ. ಇದು ಬೇಸಿನ್‌ ಮತ್ತು ನಲ್ಲಿಗಳ ಮೇಲಿನ ತುಕ್ಕು ಮತ್ತು ನೀರಿನ ಕಲೆಗಳನ್ನು ತೆಗೆದುಹಾಕಿ ಹೊಳಪನ್ನು ನೀಡುತ್ತದೆ.

ಉಪ್ಪು ಮತ್ತು ವಿನೆಗರ್: ಬಾತ್‌ರೂಮ್‌ನಲ್ಲಿ ಅಂಟಿರುವ ಶ್ರಿಲೀಂಧ್ರಗಳು ಹಾಗೂ ವಾಸನೆಯನ್ನು ಸುಲಭವಾಗಿ ತೆಗೆದುಹಾಕಲು ಉಪ್ಪು ಹಾಗೂ ವಿನೆಗರ್‌ ಸಹಕಾರಿಯಾಗಿದೆ. ಉಪ್ಪು ಹಾಗೂ ವಿನೆಗರ್‌ ಅನ್ನು ಮಿಶ್ರಣ ಮಾಡಿ ಟೈಲ್ಸ್‌ ಹಾಗೂ ಗೋಡೆಯನ್ನು ಸ್ವಚ್ಛಗೊಳಿಸುವುದರಿಂದ ವಾಸನೆಯನ್ನು ತೊಡೆದುಹಾಕಬಹುದು. ಇದು  ಇದು ನೈಸರ್ಗಿಕ ಶಿಲೀಂಧ್ರನಾಶಕ ಮತ್ತು ವಾಸನೆ ನಿವಾರಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಉಪ್ಪು ಮತ್ತು ಅಡುಗೆ ಸೋಡಾ:  ಅರ್ಧ ಕಪ್ ಉಪ್ಪಿಗೆ ಮತ್ತು ಅರ್ಧ ಕಪ್ ಅಡುಗೆ ಸೋಡಾ ಸೇರಿಸಿ ಪೇಸ್ಟ್‌ ತಯಾರಿಸಿ ಸ್ನಾನಗೃಹವನ್ನು ಸಂಪೂರ್ಣ ಸ್ವಚ್ಛಗೊಳಿಸಿ. ಇದು ಸ್ನಾನಗೃಹದಲ್ಲಿ ಅಂಟಿರುವ  ಕಲೆಗಳು ಮತ್ತು ಬ್ಯಾಕ್ಟೀರಿಯಾ ಎರಡನ್ನೂ ಸುಲಭವಾಗಿ ತೆಗೆದುಹಾಕುತ್ತದೆ.

ಉಪ್ಪು ಮತ್ತು ಡಿಶ್‌ವಾಶ್‌ ಸೋಪ್:  ಸ್ವಲ್ಪ ಪಾತ್ರೆ ತೊಳೆಯುವ ಸೋಪನ್ನು ಉಪ್ಪಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ವಾಶ್‌ ಬೇಸಿನ್‌ ಮತ್ತು ಟೈಲ್ಸ್‌ ಕ್ಲೀನ್‌ ಮಾಡಬಹುದು.  ಇದು ಮೊಂಡುತನದ ಕಲೆ ಮತ್ತು ಗ್ರೀಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಉಪ್ಪು ಮತ್ತು ಬಿಸಿನೀರು: ಸ್ನಾನಗೃಹದ ಚರಂಡಿಯಿಂದ ವಾಸನೆ ಮತ್ತು ಅಡಚಣೆಯನ್ನು ತೆಗೆದುಹಾಕಲು, ಚರಂಡಿಗೆ ಉಪ್ಪನ್ನು ಸುರಿಯಿರಿ ಮತ್ತು ಅದರ ಮೇಲೆ ಬಿಸಿನೀರನ್ನು ಸುರಿಯಿರಿ. ಇದು ಕೊಳೆ ಮತ್ತು ಗ್ರೀಸ್ ಶೇಖರಣೆಯನ್ನು ಸಡಿಲಗೊಳಿಸುತ್ತದೆ ಮತ್ತು ಚರಂಡಿಯ ಬ್ಲಾಕ್‌ ಅನ್ನು ತೆರವುಗೊಳಿಸುತ್ತದೆ.

ಉಪ್ಪು ಮತ್ತು ಟೂತ್‌ಪೇಸ್ಟ್: ಟೈಲ್ಸ್‌ ಮೇಲೆ ಹಳದಿಗಟ್ಟಿದ ಕಲೆಯನ್ನು ತೆಗೆದುಹಾಕಲು, ಟೂತ್‌ಪೇಸ್ಟ್ ಮತ್ತು ಉಪ್ಪನ್ನು ಬಳಸಿ. ಇವೆರಡನ್ನು ಬೆರೆಸಿ ಪೇಸ್ಟ್‌ ತಯಾರಿಸಿ ಟೈಲ್ಸ್‌ಗೆ ಹಚ್ಚಿ ಸ್ಕ್ರಬ್‌ ಮಾಡುವುದರಿಂದ ಹಳದಿ ಕಲೆಗಳು ಸುಲಭವಾಗಿ ಮಾಯವಾಗುತ್ತವೆ.

ಇದನ್ನೂ ಓದಿ: ಟೊಮೆಟೊದಲ್ಲಿ ಎರಡು ವಸ್ತುಗಳನ್ನು ಬೆರೆಸಿ ಮನೆಯ ಮೂಲೆಗಳಲ್ಲಿಟ್ಟರೆ ಜಿರಳೆಗಳ ಕಾಟವೇ ಇರೋದಿಲ್ಲ

ಬಾತ್‌ರೂಮ್‌ ಸ್ವಚ್ಛಗೊಳಿಸಲು ಉಪ್ಪು ಹೇಗೆ ಪರಿಣಾಮಕಾರಿ?

  • ಉಪ್ಪು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಸ್ನಾನಗೃಹವನ್ನು ನೈರ್ಮಲ್ಯವಾಗಿಡುತ್ತದೆ.
  • ಟೈಲ್ಸ್, ನಲ್ಲಿಗಳು ಮತ್ತು ಬೇಸಿನ್‌ಗಳಲ್ಲಿ ಸಂಗ್ರಹವಾದ ಕೊಳೆಯನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ.
  • ಸ್ನಾನಗೃಹದಿಂದ ತೇವಾಂಶ ಮತ್ತು ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
  • ಶಿಲೀಂಧ್ರ ಮತ್ತು ಅಚ್ಚಿನ ಬೆಳವಣಿಗೆಯನ್ನು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸನ್‌ರೈಸರ್ಸ್- ರಾಜಸ್ಥಾನ್ ನಡುವೆ ಎಲಿಮಿನೇಟರ್; ಯಾರಿಗೆ ಸಿಗಲಿದೆ ಕ್ವಾಲಿಫೈಯರ್ 2 ಟಿಕೆಟ್?

ಮೇ 26 ರ ಮಂಗಳವಾರ ನಡೆದ ಐಪಿಎಲ್ 2026 (IPL 2026) ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಸೋಲಿನ ಹೊರತಾಗಿಯೂ ಫೈನಲ್ ತಲುಪಲು ಇನ್ನೊಂದು ಅವಕಾಶವನ್ನು ಪಡೆದಿದೆ. ಅದಕ್ಕಾಗಿ ಗುಜರಾತ್ ಕ್ವಾಲಿಫೈಯರ್ 2 ಪಂದ್ಯವನ್ನು ಆಡಬೇಕಾಗುತ್ತದೆ. ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್​ಗೆ ಯಾರು ಎದುರಾಗುತ್ತಾರೆ ಎಂಬುದು ಇಂದು ಅಂದರೆ ಮೇ 27 ರಂದು ನಿರ್ಧಾರವಾಗುತ್ತದೆ. ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ (SRH vs RR) ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಹೆಡ್ ಟು ಹೆಡ್ ದಾಖಲೆ

ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಹೈದರಾಬಾದ್ ಮತ್ತು ರಾಜಸ್ಥಾನ ನಡುವೆ ಒಟ್ಟು 3 ಪಂದ್ಯಗಳು ನಡೆದಿವೆ. ಈ 23 ಪಂದ್ಯಗಳಲ್ಲಿ ಹೈದರಾಬಾದ್ ಪ್ರಾಬಲ್ಯ ಸಾಧಿಸಿದೆ. ಹೈದರಾಬಾದ್ 14 ಪಂದ್ಯಗಳಲ್ಲಿ ರಾಜಸ್ಥಾನವನ್ನು ಸೋಲಿಸಿದೆ. ರಾಜಸ್ಥಾನ ಹೈದರಾಬಾದ್ ವಿರುದ್ಧ 9 ಪಂದ್ಯಗಳನ್ನು ಗೆದ್ದಿದೆ. ಇನ್ನು ಐಪಿಎಲ್ 2026 ರ ಲೀಗ್ ಹಂತದಲ್ಲಿ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಪಿಚ್ ವರದಿ

ನವಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕಾಗಿ ಪಿಚ್ ನಂ. 4 ಅನ್ನು ಬಳಸಲಾಗುವುದು. ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಲೀಗ್ ಹಂತದಲ್ಲಿ ಇದೇ ಪಿಚ್​ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 223 ರನ್‌ಗಳ ಗುರಿಯನ್ನು ರಾಜಸ್ಥಾನ್ ಬೆನ್ನಟ್ಟಿ ಗೆದ್ದಿತ್ತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 51 ರನ್ ಗಳಿಸಿದರೆ, ವೈಭವ್ 16 ಎಸೆತಗಳಲ್ಲಿ 43 ರನ್ ಗಳಿಸಿದರು.

ಅಲ್ಲದೆ ಈ ಪಿಚ್‌ನಲ್ಲಿ ಆಡಲಾದ ಎಲ್ಲಾ ಮೂರು ಪಂದ್ಯಗಳನ್ನು ಚೇಸಿಂಗ್ ತಂಡಗಳು ಗೆದ್ದಿವೆ, ಆದ್ದರಿಂದ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವ ಸಾಧ್ಯತೆಯಿದೆ. ಆದಾಗ್ಯೂ, ಹವಾಮಾನವನ್ನು ಪರಿಗಣಿಸಿ , ಮೊದಲ ಎರಡು ಗಂಟೆಗಳಲ್ಲಿ ಫೀಲ್ಡರ್‌ಗಳು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಮೊದಲು ಬ್ಯಾಟಿಂಗ್ ಮಾಡಿದ ತಂಡವು 220 ರಿಂದ 230 ರನ್ ಕಲೆಹಾಕಿದರೆ, ಅದು ಚೇಸಿಂಗ್ ತಂಡದ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ.

IPL 2026: ಸಿಕ್ಸರ್‌ಗಳ ಶತಕ; ಐಪಿಎಲ್‌ನಲ್ಲಿ ಇತಿಹಾಸ ಬರೆದ ಆರ್​ಸಿಬಿ ನಾಯಕ

ಮುಲ್ಲನ್‌ಪುರ ಹವಾಮಾನ ವರದಿ

ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯವು ಸಂಜೆ 7:30 ಕ್ಕೆ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ. ಮುಲ್ಲನ್‌ಪುರದಲ್ಲಿ ಇಂದಿನ ಪಂದ್ಯಕ್ಕೆ ಹವಾಮಾನ ಅನುಕೂಲಕರವಾಗಿದ್ದು, ಮಳೆ ಬೀಳುವ ನಿರೀಕ್ಷೆಯಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ತಾಪಮಾನ ಹೆಚ್ಚಾಗಿದೆ. ನ್ಯೂ ಚಂಡೀಗಢ ನಗರವು ಇದಕ್ಕೆ ಹೊರತಾಗಿಲ್ಲ. ಸಂಜೆ 5 ಗಂಟೆಯ ನಂತರವೂ ಇಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿರುತ್ತದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದ ಸಮಯದಲ್ಲಿ ತಾಪಮಾನವು 35 ರಿಂದ 40 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ರಸ್ತೆಯಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು!

ಕೊಲ್ಕತ್ತಾ, ಮೇ 27: ಪಶ್ಚಿಮ ಬಂಗಾಳದಲ್ಲಿ (West Bengal) ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಅಲ್ಲಿನ ಪೊಲೀಸರು ಬಂಧಿತ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರ ತಲೆ ಬೋಳಿಸಿ, ಕೈಗಳಿಗೆ ಕೋಳ ತೊಡಿಸಿ, ಕೇವಲ ಒಳ ಉಡುಪುಗಳಲ್ಲಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ನಿರ್ದಿಷ್ಟ ಪ್ರದೇಶವೊಂದರಲ್ಲಿ ಟಿಎಂಸಿ ಪಕ್ಷಕ್ಕೆ ಸೇರಿದ ಕೆಲವು ಸ್ಥಳೀಯ ಗೂಂಡಾಗಳು ಮತ್ತು ಕಾರ್ಯಕರ್ತರು ಸಾರ್ವಜನಿಕ ಶಾಂತಿ ಕದಡಿದ, ಹಿಂಸಾಚಾರ ನಡೆಸಿದ ಹಾಗೂ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು.

ಈ ಬಂಧನದ ಬಳಿಕ ಸ್ಥಳೀಯ ಪೊಲೀಸರು ಆರೋಪಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳ ತಲೆಯನ್ನು ಸಂಪೂರ್ಣವಾಗಿ ಬೋಳಿಸಿ, ಕೇವಲ ಒಳ ಉಡುಪುಗಳನ್ನು ಹಾಕಿಸಿ, ಕೈಗಳಿಗೆ ಬೇಡಿ ಹಾಕಿ ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ನಡೆಸಿಕೊಂಡು ಹೋಗಿದ್ದಾರೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ಒಬ್ಬ ಅಪರಾಧಿಯನ್ನಾಗಲಿ ಅಥವಾ ಆರೋಪಿಯನ್ನಾಗಲಿ ಈ ರೀತಿಯಾಗಿ ಸಾರ್ವಜನಿಕವಾಗಿ ಲಜ್ಜೆಗೆಡಿಸುವುದು ಮತ್ತು ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದು ಕಾನೂನುಬಾಹಿರ ಎಂದು ಹಕ್ಕುಗಳ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಯಮಾವಳಿಗಳ ಪ್ರಕಾರ ಬಂಧಿತ ಕೈದಿಗಳಿಗೂ ತಮ್ಮದೇ ಆದ ಘನತೆಯಿಂದ ಬದುಕುವ ಹಕ್ಕಿರುತ್ತದೆ ಎಂದು ಅವರು ವಾದಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಅಲ್ಲಗಳೆದ ಸುರ್ಜೇವಾಲ: ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ

ರಣದೀಪ್​​ ಸುರ್ಜೇವಾಲImage Credit source: Tv9 Kannada

ಬೆಂಗಳೂರು, ಮೇ 27: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ನಾಳೆಯೇ (ಮೇ 28) ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಹೈಕಮಾಂಡ್​​ ನಾಯಕರ ಸೂಚನೆಗೆ ಗೌರವ ನೀಡಿ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಆಪ್ತ ಶಾಸಕರು ಮತ್ತು ಸಚಿವರುಗಳ ಬಳಿಯೂ ಈ ವಿಷಯವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ರಾಜಕೀಯ ಚಟುವಟಿಕೆಗಳೂ ಕರ್ನಾಟಕದಲ್ಲಿ ಬಿರುಸುಗೊಂಡಿವೆ. ಆದರೆ ಈ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾತ್ರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಸಿಎಂ ಸ್ಥಾನಕ್ಕೆ ನಾಳೆಯೇ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಚರ್ಚೆ
  • ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ಗರಿಗೆದರಿರುವ ರಾಜಕೀಯ ಚಟುವಟಿಕೆ
  • ಈ ನಡುವೆ ಅಚ್ಚರಿಯ ಹೇಳಿಕೆ ಕೊಟ್ಟ ರಾಜ್ಯ ಕಾಂಗ್ರೆಸ್​​ ಉಸ್ತುವಾರಿ!

ಸುರ್ಜೇವಾಲ ಹೇಳಿದ್ದೇನು?

ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಅಲ್ಲದೆ ನಾಯಕತ್ವ ಬದಲಾವಣೆ ಮಾಡಲು ಶಾಸಕಾಂಗ ಪಕ್ಷದ ಸಭೆಯನ್ನೇ ಕರೆದಿಲ್ಲವೆಂದು ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ. ವಿಪಕ್ಷ ನಾಯಕರಾಗಿ ಕೆಲಸ ನಿರ್ವಹಿಸಿದ್ದ ಸಿದ್ದರಾಮಯ್ಯನವರು, 2ನೇ ಬಾರಿಗೆ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಹಲವು ಸಿಎಂಗಳ ಜೊತೆ ಸಚಿವರಾಗಿ ಕೆಲಸ ಮಾಡಿದ್ದು,
ಅವರು ಸಂಘಟನಾ ಚತುರರೂ ಹೌದು ಎಂದು ಸುರ್ಜೇವಾಲ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​; ಜಾತಿ ಸಮೀಕರಣದ ಆಧಾರದಲ್ಲಿ ತಂತ್ರ

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ

ಮತ್ತೊಂದೆಡೆ ಕರ್ನಾಟಕದಲ್ಲಿನ ಸದ್ಯದ ಬೆಳವಣಿಗೆಗಳ ಬಗ್ಗೆ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆದಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ಸಿ. ಜೋಸೆಫ್ ವಿಜಯ್ (CM Vijay) ಅವರು ಇತ್ತೀಚೆಗೆ ಸಿನಿಮಾ ರಂಗದ ಪ್ರಮುಖರೊಂದಿಗೆ ಸಭೆ ನಡೆಸಿ, ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡುವ ಮೂಲಕ ಕಾಲಿವುಡ್‌ಗೆ ದೊಡ್ಡ ರಿಲೀಫ್ ನೀಡಿದ್ದಾರೆ. ಇದರ ಬೆನ್ನಲ್ಲೇ ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದು, ಈ ಕ್ಷಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಕೂಡಲೇ ಅಭಿಮಾನಿಗಳಿಗೆ ‘ಲಿಯೋ 2’ (Leo 2) ಸಿನಿಮಾದ ನಿರೀಕ್ಷೆ ಮೂಡಿದೆ.

ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಲೋಕೇಶ್ ಅವರು, ಮುಗುಳ್ನಗುತ್ತಾ ಪೋಸ್ ನೀಡಿದ್ದಾರೆ. ‘ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಅಣ್ಣಾ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ತರಹೇವಾರಿ ಕಮೆಂಟ್‌ಗಳು ಹರಿದುಬರುತ್ತಿವೆ.

ಲೋಕೇಶ್ ಕನಗರಾಜ್ ಪೋಸ್ಟ್:

ಈ ಇಬ್ಬರ ಕಾಂಬಿನೇಷನ್‌ನ ಫೋಟೋ ನೋಡಿದ ಅಭಿಮಾನಿಯೊಬ್ಬರು, ‘ಇದೇನಾದರೂ 2024ರಲ್ಲಿ ಆಗಿದ್ದರೆ, ನಾನು ಇದನ್ನು ‘ಲಿಯೋ 2’ ಚಿತ್ರದ ಅನೌನ್ಸ್‌ಮೆಂಟ್ ಫೋಟೋ ಎಂದು ಭಾವಿಸುತ್ತಿದ್ದೆ. ಆದರೆ ದೇವರ ಲೆಕ್ಕಾಚಾರವೇ ಬೇರೆ ಇತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ‘ನೀವಿಬ್ಬರು ಸೇರಿ ಮತ್ತೊಂದು ಸಿನಿಮಾ ಮಾಡಬೇಕಿತ್ತು. ಲಿಯೋ ಮತ್ತು ಮಾಸ್ಟರ್ ಸಿನಿಮಾಗಳಿಗೆ ಧನ್ಯವಾದಗಳು’ ಎಂದು ಕಮೆಂಟ್ ಮಾಡಿದ್ದಾರೆ. ‘ನೀವು ವಿಜಯ್ ಅವರ ಬಳಿ ಲಿಯೋ ಸೀಕ್ವೆಲ್ ಬಗ್ಗೆ ಕೇಳಿದಿರಾ? ರಾಜಕೀಯಕ್ಕೆ ಹೋಗುವ ಮುನ್ನ ಅವರ ಕೊನೆಯ ಸಿನಿಮಾ ಇದಾಗಬೇಕಿತ್ತು’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ವಿಜಯ್ ಅವರು ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ‘ಮಾಸ್ಟರ್’ (2021) ಮತ್ತು ‘ಲಿಯೋ’ (2023) ಸಿನಿಮಾಗಳನ್ನು ನೀಡಿದ್ದಾರೆ. ‘ಲಿಯೋ’ ಚಿತ್ರವು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ (LCU) ಭಾಗವಾಗಿತ್ತು. ಈ ಹಿಂದೆ ಲೋಕೇಶ್ ಅವರು ‘ಲಿಯೋ 2’ ಮಾಡಲು ಆಸಕ್ತಿ ಹೊಂದಿದ್ದರಾದರೂ, ನಂತರದ ದಿನಗಳಲ್ಲಿ ವಿಜಯ್ ಜೊತೆ ‘ಮಾಸ್ಟರ್ 2’ ಮಾಡಲು ಹೆಚ್ಚು ಒಲವು ತೋರಿದ್ದರು. ಆದರೆ ವಿಜಯ್ ಅವರು ಸಿನಿಮಾ ರಂಗದಿಂದ ಸಂಪೂರ್ಣ ನಿವೃತ್ತಿ ಘೋಷಿಸಿದ ಕಾರಣ, ಲೋಕೇಶ್ ಕನಗರಾಜ್ ಅವರು ವಿಜಯ್ ಜೊತೆಗಿನ ಮುಂದಿನ ಸೀಕ್ವೆಲ್ ಯೋಜನೆಗಳನ್ನು ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟ ನಟ ಕಮಲ್ ಹಾಸನ್; ಏನದು?

ರಾಜಕೀಯದತ್ತ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿರುವ ವಿಜಯ್ ಅವರು, ‘ಜನ ನಾಯಗನ್’ ಆಡಿಯೋ ಲಾಂಚ್ ವೇಳೆ ಚಿತ್ರರಂಗದ ನಿವೃತ್ತಿ ಘೋಷಿಸಿದ್ದರು. ‘ಜನ ನಾಯಗನ್’ ಸಿನಿಮಾ ಜನವರಿ 9ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಸಮಯಕ್ಕೆ ಸರಿಯಾಗಿ ಪ್ರಮಾಣಪತ್ರ ಸಿಗದ ಕಾರಣ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿತ್ತು. ಪೂಜಾ ಹೆಗ್ಡೆ, ಮಮಿತಾ ಬೈಜು ಮತ್ತು ಬಾಬಿ ಡಿಯೋಲ್ ನಟಿಸಿರುವ ಈ ಬಹುನಿರೀಕ್ಷಿತ ಸಿನಿಮಾ ಜೂನ್ 19ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ 4ನೇ ವಯಸ್ಸಿಗೆ ಕಮಲ್ ಹಾಸನ್ ದಾಖಲೆ ಮುರಿದಿದ್ದ ಬಾಲನಟಿ ತ್ರೀಶಾ ಥೋಸರ್‌

ಖ್ಯಾತ ನಟ ಕಮಲ್ ಹಾಸನ್ (Kamal Haasan) ಅವರು 6ನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನ್ಯಾಷನಲ್ ಅವಾರ್ಡ್ ಪಡೆದ ಅತಿ ಕಿರಿಯ ಬಾಲನಟ ಎಂಬ ಖ್ಯಾತಿ ಅವರ ಹೆಸರಿನಲ್ಲಿತ್ತು. ಆದರೆ 2025ರಲ್ಲಿ ಮರಾಠಿ ನಟಿ ತ್ರೀಶಾ ವಿವೇಕ್ ಥೋಸರ್ ಆ ದಾಖಲೆಯನ್ನು ಮುರಿದಳು. ಕೇವಲ 4ನೇ ವಯಸ್ಸಿಗೆ ಅವಳು ‘ಅತ್ಯುತ್ತಮ ಬಾಲ ನಟಿ’ ರಾಷ್ಟ್ರ ಪ್ರಶಸ್ತಿ (National Film Award) ಪಡೆದಳು. ಮರಾಠಿಯ ‘ನಾಳ್ 2’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಆಕೆಗೆ ಈ ಪ್ರಶಸ್ತಿ ಸಿಕ್ಕಿತು. ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ತ್ರೀಶಾ ಥೋಸರ್ (Treesha Thosar) ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.

‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತ್ರೀಶಾ ಥೋಸರ್‌ ಅವರ ವಿಡಿಯೋವನ್ನು ಹಂಚಿಕೊಳ್ಳುತ್ತಾ ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ, ‘ಅವಳು ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿಕೊಳ್ಳುವ ಮುನ್ನವೇ ಸೀರೆ ಉಟ್ಟಿದ್ದಳು. ನಾಲ್ಕು ವರ್ಷ ದಾಟದ ಪುಟ್ಟ ಬಾಲಕಿ ಗರಿಗರಿ ಸೀರೆಯನ್ನು ಉಟ್ಟು ಭಾರತದ ಅತ್ಯಂತ ಭವ್ಯವಾದ ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದಾಳೆ. ಯಾವುದೇ ಆತಂಕವಿಲ್ಲ, ಹಿಂಜರಿಕೆಯೂ ಇಲ್ಲ. ಕೇವಲ ಶಾಂತ ಹಾಗೂ ಅಚಲವಾದ ಗಾಂಭೀರ್ಯವಷ್ಟೇ ಅಲ್ಲಿತ್ತು. ಅವಳು ಭಾರತದ ರಾಷ್ಟ್ರಪತಿಗಳಿಂದ ಅತ್ಯುತ್ತಮ ಬಾಲನಟಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾಳೆ ಮತ್ತು ಆ ಒಂದು ಕ್ಷಣದಲ್ಲಿ ಇತಿಹಾಸವನ್ನೇ ಮರುಸೃಷ್ಟಿಸುತ್ತಿದ್ದಾಳೆ’

ತ್ರೀಶಾ ಥೋಸರ್‌ ವೈರಲ್ ವಿಡಿಯೋ:

‘ಅವಳ ಹೆಸರು ತ್ರೀಶಾ ವಿವೇಕ್ ಥೋಸರ್. ಮತ್ತು ಆಕೆ ಆರು ದಶಕಗಳಿಗೂ ಹೆಚ್ಚು ಕಾಲ ಉಳಿದಿದ್ದ ದಾಖಲೆಯೊಂದನ್ನು ಇದೀಗ ಮುರಿದಿದ್ದಾಳೆ. ಅವಳು ಮೂರನೇ ವಯಸ್ಸಿನಲ್ಲಿ ನಟಿಸಿದಳು, ನಾಲ್ಕನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದಳು. ತ್ರೀಶಾ ಮರಾಠಿ ಚಿತ್ರ ‘ನಾಳ್ 2’ ಸಿನಿಮಾದಲ್ಲಿ ಮುಗ್ಧ ಗ್ರಾಮೀಣ ಬಾಲಕಿ ‘ಚಿಮಿ’ ಎಂಬ ಪಾತ್ರವನ್ನು ನಿರ್ವಹಿಸಿದ್ದಾಳೆ. ಅವಳು ಅಲ್ಲಿ ಕೇವಲ ನಟಿಸುತ್ತಿರಲಿಲ್ಲ, ಬದಲಿಗೆ ಆ ಪಾತ್ರದಲ್ಲೇ ಜೀವಿಸುತ್ತಿದ್ದಳು. ಹೆಚ್ಚಿನ ಮಕ್ಕಳು ಅಕ್ಷರಗಳನ್ನು ಕಲಿಯುವ ವಯಸ್ಸಿನಲ್ಲಿ, ಈಕೆ ತನ್ನ ಸಹಜ ಭಾವನೆಗಳಿಂದ ರಾಷ್ಟ್ರೀಯ ತೀರ್ಪುಗಾರರ ಮನಗೆದ್ದಿದ್ದಾಳೆ. ಈ ಮೂಲಕ ಅವಳು ಕಮಲ್ ಹಾಸನ್ ಅವರ 60 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾಳೆ’ ಎಂದು ಪೋಸ್ಟ್ ಮಾಡಿದ್ದಾರೆ.

2025ರಲ್ಲಿ ಬಾಲನಟಿಯನ್ನು ಅಭಿನಂದಿಸಿದವರಲ್ಲಿ ಹಿರಿಯ ನಟ ಕಮಲ್ ಹಾಸನ್ ಕೂಡ ಪ್ರಮುಖರಾಗಿದ್ದರು. ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದರು. ‘ಆತ್ಮೀಯ ಕುಮಾರಿ ತ್ರೀಶಾ ಥೋಸರ್, ನನ್ನ ಅತ್ಯಂತ ಜೋರಾದ ಚಪ್ಪಾಳೆಗಳು ನಿನಗೆ ಸಲ್ಲುತ್ತವೆ. ನೀನು ನನ್ನ ದಾಖಲೆಯನ್ನು ಮುರಿದಿದ್ದೀಯ. ಏಕೆಂದರೆ ನನಗೆ ಮೊದಲ ಪ್ರಶಸ್ತಿ ಬಂದಾಗ ನನಗೆ ಈಗಾಗಲೇ ಆರು ವರ್ಷ ವಯಸ್ಸಾಗಿತ್ತು. ನಿನ್ನ ಈ ಅದ್ಭುತ ಪ್ರತಿಭೆಯೊಂದಿಗೆ ಸದಾ ಕೆಲಸ ಮಾಡುತ್ತಿರು. ನಿನ್ನ ಮನೆಯ ಹಿರಿಯರಿಗೂ ನನ್ನ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಭಾರತದ ಶ್ರೀಮಂತ ಬಾಲನಟಿ ಇವರೇ ನೋಡಿ; ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?  

ರಾಷ್ಟ್ರ ಪ್ರಶಸ್ತಿ ಗೆದ್ದ ನಂತರ ತ್ರೀಶಾ ಕೂಡ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಳು. ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಆಕೆ, ‘ರಾಷ್ಟ್ರಪತಿಗಳು ನನಗೆ ಅಭಿನಂದನೆ ಸಲ್ಲಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ’ ಎಂದು ಹೇಳುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಳು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link