ಇದ್ದ ನಿರೀಕ್ಷೆಯೇ ಒಂದು, ಹೈಕಮಾಂಡ್ ಹೇಳಿದ್ದೇ ಮತ್ತೊಂದು: ಸಿದ್ದರಾಮಯ್ಯಗೆ ಭರ್ಜರಿ ಶಾಕ್ ಕೊಟ್ಟ ರಾಹುಲ್ ಗಾಂಧಿ
ಬೆಂಗಳೂರು, ಮೇ 27: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡವಂತೆ ಹೈಕಮಾಂಡ್ ಸೂಚನೆ ನೀಡಿರುವ ಬಗ್ಗೆ ಸಿದ್ದರಾಮಯ್ಯ (Siddaramaiah) ಆಪ್ತರ ಬಳಿ ಹೇಳಿಕೊಂಡಿರುವ ನಡುವೆಯೇ ರಾಹುಲ್ ಗಾಂಧಿ ಜೊತೆಗಿನ ಒನ್ ಟು ಒನ್ ಮೀಟಿಂಗ್ ವೇಳೆ ಚರ್ಚೆಯಾಗಿದ್ದೇನು ಎಂಬ ವಿಚಾರ ಬಹಿರಂಗಗೊಂಡಿದೆ. ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತುಕತೆಯ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯಗೆ ರಾಹುಲ್ ಶಾಕ್ ಕೊಟ್ಟಿದ್ದು, ವರಿಷ್ಠ ನಾಯಕನ ಮಾತು ಕೇಳಿ ಸಿಎಂ ಅಕ್ಷರಶಃ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಮುಖ್ಯಾಂಶಗಳು ಸಚಿವ ಸಂಪುಟ ವಿಚಾರವಾಗಿ ಚರ್ಚೆ ನಿರೀಕ್ಷೆಯಲ್ಲಿದ್ದ ಸಿಎಂ…