Category Archives: Blog

Your blog category

2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್ – Kannada News | Mujeeb Ur Rahman’s Hat Trick Seals Series Win For Afghanistan vs West Indies

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಅಫ್ಘಾನಿಸ್ತಾನ್ ತಂಡ ಜಯ ಸಾಧಿಸಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಮುಜೀಬ್ ಉರ್ ರೆಹಮಾನ್ ಸ್ಪಿನ್ ದಾಳಿಗೆ ತತ್ತರಿಸಿತು. ಅದು ಕೂಡ ಹ್ಯಾಟ್ರಿಕ್ ವಿಕೆಟ್​ನೊಂದಿಗೆ ಎಂಬುದು ವಿಶೇಷ.

ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನ 8ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದ ಮುಜೀಬ್, ಆ ಬಳಿಕ ಮರಳಿದ್ದು 16ನೇ ಓವರ್​ನಲ್ಲಿ. ಆದರೆ ಹದಿನಾರನೇ ಓವರ್​ನ ಮೊದಲ ಎಸೆತದಲ್ಲೇ ಕ್ವಿಂಟಿನ್ ಸ್ಯಾಪ್ಸನ್ ವಿಕೆಟ್ ಕಬಳಿಸಿದರು. ಈ ಮೂಲಕ ಎರಡು ಓವರ್​ಗಳ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ಮುಜೀಬ್ ಉರ್ ರೆಹಮಾನ್ ಕೇವಲ 21 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು 18.5 ಓವರ್​ಗಳಲ್ಲಿ 150 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ್ ತಂಡ 39 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನ್ ಪಡೆ ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

Source link

Video: ಆಂಧ್ರಪ್ರದೇಶದಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಕೂಡಲೇ ಹೊತ್ತಿಕೊಂಡ ಬೆಂಕಿ, ಮೂವರು ಸಜೀವ ದಹನ – Kannada News | Crash Turns Deadly as Bus Truck Collision Erupts into Fire in Andhra Pradesh, Three Dead

ನಂದ್ಯಾಲ್, ಜನವರಿ 22: ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಖಾಸಗಿ ಬಸ್ಸೊಂದು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿದ್ದಾರೆ. ಈ ಅಪಘಾತ ಸುಮಾರು ಬೆಳಗಿನ ಜಾವ 1.30 ರ ಸುಮಾರಿಗೆ ಸಂಭವಿಸಿದೆ. ಆಂಧ್ರಪ್ರದೇಶದ ನೆಲ್ಲೂರಿನಿಂದ ತೆಲಂಗಾಣದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಬಸ್‌ನ ಬಲಭಾಗದ ಟೈರ್ ಸ್ಫೋಟಗೊಂಡಿತ್ತು.

ಹಠಾತ್ ಸ್ಫೋಟದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ, ವಾಹನವು ರಸ್ತೆ ವಿಭಜಕವನ್ನು ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಬೈಕ್​ಗಳನ್ನು ಸಾಗಿಸುತ್ತಿತ್ತು. ಪರಿಣಾಮ ಬಸ್ ಮತ್ತು ಟ್ರಕ್ ಎರಡೂ ಬೆಂಕಿಗೆ ಆಹುತಿಯಾದವು. ಪ್ರದೇಶದ ನಿವಾಸಿಗಳು, ಬಸ್ ಕ್ಲೀನರ್ ಮತ್ತು ಬಸ್ ಕಂಡಕ್ಟರ್ ಕಿಟಕಿಗಳನ್ನು ಒಡೆದು ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಸಹಾಯ ಮಾಡಿದರು. ಬಸ್ ಚಾಲಕ, ಟ್ರಕ್ ಚಾಲಕ ಮತ್ತು ಕ್ಲೀನರ್​ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ.

ನಂತರ ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಎಲ್ಲಾ ಪ್ರಯಾಣಿಕರು ಬದುಕುಳಿದಿದ್ದಾರೆ. 36 ಪ್ರಯಾಣಿಕರಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಓಲಾ ಸ್ಕೂಟರ್​ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ, ಸ್ವಲ್ಪದರಲ್ಲೇ ಪಾರಾದ ತಂದೆ-ಮಗ

ಸೋಲಾಪುರ, ಜನವರಿ 22: ಓಲಾ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸೋಲಾಪುರದಲ್ಲಿ ನಡೆದಿದೆ. ತಂದೆ ಮಗನನ್ನು ಶಾಲೆಗೆ ಬಿಡಲು ಬೈಕ್ ಮೇಲೆ ಕುಳಿತು ಕಾಯುತ್ತಿರುತ್ತಾರೆ. ಮಗ ಬಂದು ಕುಳಿತ ತಕ್ಷಣ, ಅಲ್ಲೇ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕ್​ನಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಎಚ್ಚರಿಕೆ ಕೊಡುತ್ತಾರೆ, ಆಗ ಇಬ್ಬರೂ ಬೈಕ್​ನಿಂದ ಇಳಿದು ದೂರ ಓಡುತ್ತಾರೆ. ಬೈಕ್​ನಿಂದ ಬರುತ್ತಿದ್ದ ಹೊಗೆ ಮತ್ತಷ್ಟು ಹೆಚ್ಚಾಗುತ್ತದೆ. ಆಗ ಅಲ್ಲಿದ್ದವರು ಬೈಕ್ ಮೇಲೆ ನೀರು ಸುರಿಯುತ್ತಾರೆ. ಇದಿಷ್ಟು ಆ ವಿಡಿಯೋದಲ್ಲಿದೆ. ತಂದೆ ಮಗ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಂಬಿಕೆ ಉಳಿಸಿಕೊಂಡ ಪೊಲೀಸರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ರಕ್ಷಣೆ – Kannada News | Bengaluru Police Defy Stereotypes: Swift Action Prevents Suicide, Saves Woman

ಬೆಂಗಳೂರು, ಜ.22: ಸಾಮಾನ್ಯವಾಗಿ ಪೊಲೀಸರು ಎಲ್ಲ ಮುಗಿದ ಮೇಲೆ ಘಟನಾ ಸ್ಥಳಕ್ಕೆ ಬರುತ್ತಾರೆ ಎಂಬ ಮಾತಿದೆ. ಆದರೆ ಈ ಮಾತು ತಪ್ಪು, ಏಕೆಂದರೆ ಪೊಲೀಸರು ಕೂಡ ಜನರನ್ನು ರಕ್ಷಣೆ ಮಾಡಿರುವ ಹಲವು ಘಟನೆಗಳು ಇದೆ . ಇದೀಗ ಇಲ್ಲೊಂದು ಪೊಲೀಸರ ತಕ್ಷಣದ ಸ್ಪಂದನೆಯಿಂದ ಜೀವವೊಂದು ಉಳಿದಿದೆ. ಈ ಘಟನೆಯಿಂದ ಪೊಲೀಸರ ಮೇಲೆ ಮತ್ತಷ್ಟು ನಂಬಿಕೆಯನ್ನು ಹುಟ್ಟಿಸಿದೆ. ಪೊಲೀಸರು ಸರಿಯಾದ ಸಮಯಕ್ಕೆ ಬಂದು ಒಂದು ಜೀವವನ್ನು ಉಳಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಬೆಂಗಳೂರಿನ ಪೊಲೀಸರು ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹುಳಿಮಾವು ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ಜ.20ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ರಕ್ಷಣೆ ಮಾಡಲಾಗಿದೆ.

ಕೋಣನಕುಂಟೆ ಠಾಣೆ ಹೊಯ್ಸಳ ಪೊಲೀಸರು ಸರಿಯಾದ ಸಮಯಕ್ಕೆ ಬಂದು ಯುವತಿಯ ಜೀವ ಉಳಿಸಿದ್ದಾರೆ. ಯುವತಿ ವಿಷ ಸೇವನೆ ಮಾಡಿದ ಬಳಿಕ ತಂದೆಗೆ ಕರೆ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡು ಏನು ಮಾಡಬೇಕು ಎಂದು ತೋಚದೆ, ತಂದೆ 112‌ ಗೆ ಕರೆ ಮಾಡಿದ್ದಾರೆ. ತಕ್ಷಣ ಕೋಣನಕುಂಟೆ ಠಾಣೆ ಹೊಯ್ಸಳ ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೋಣನಕುಂಟೆ ಠಾಣೆ ಎಎಸ್ಐ ಶ್ರೀನಿವಾಸ ಮೂರ್ತಿ, ಕಾನ್ಸಟೇಬಲ್ ಮಂಜುನಾಥ್ ಈ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಯುವತಿ ಸುರಕ್ಷಿತವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗಿದೆ. ಆದರೆ ಆಕೆ ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದಿಲ್ಲ.

ಇದನ್ನೂ ಓದಿ: ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ, ಇಷ್ಟಪಟ್ಟವನೊಂದಿಗೆ ಬಾಳುವ ಮೊದಲೇ ದುರಂತ ಅಂತ್ಯ

ಕಿರುಕುಳ ನೀಡುತ್ತಿದ್ದ ಪತಿಯನ್ನು ಕೊಲೆ ಮಾಡಿದ ಪತ್ನಿ (ಪ್ರತ್ಯೇಕ ಘಟನೆ)

ಬೆಂಗಳೂರಿನ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಕಿರುಕುಳ ನೀಡುತ್ತಿದ್ದ ಪತಿಯನ್ನೇ ಪತ್ನಿ ಕೊಲೆ ಮಾಡಿದ್ದಾಳೆ. ಮೊದಲನೇ ಮಗಳು ಮನೆಬಿಟ್ಟು ಹೋಗಿದ್ದಕ್ಕೆ ಪತ್ನಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಮುರುಗೇಶ್ (50), ಇದರಿಂದ ಬೆಸತ್ತು ಪತ್ನಿ ಲಕ್ಷ್ಮೀ ಕೊಲೆ ಮಾಡಿದ್ದಾಳೆ. ಈ ಘಟನೆ ಜ.20ರಂದು ನಡೆದಿದೆ. ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ರೂ ಮೊದಲನೇ ಮಗಳಿಗೆ ಮದುವೆಯಾಗಿತ್ತು. ಆದರೆ ಎರಡನೇ ಮಗಳು ಮನೆ ಬಿಟ್ಟು ಹೋಗಿದ್ದಳು. ಈ ಕಾರಣಕ್ಕೆ ಅದೇ ದಿನ ರಾತ್ರಿ ಲಕ್ಷ್ಮೀ ಜೊತೆಗೆ ಮುರುಗೇಶ್ ಜಗಳ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡು ಲಕ್ಷ್ಮೀ ಮುರುಗೇಶ್ ಅನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಇದೀಗ ಈ ಬಗ್ಗೆ ಬೊಮ್ಮನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ – Kannada News | Amid Jana Nayagan Release delay Amazon prime video to Take Legal Action Against Thalapathy Vijay Movie

ಜನ ನಾಯಗನ್ (Jana Nayagan) ಸಿನಿಮಾ ಸಂಕಷ್ಟದಲ್ಲಿದೆ. ಈ ಚಿತ್ರ ಜನವರಿ 9ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯಿಂದ ಆದ ಸಮಸ್ಯೆಯಿಂದ ತೊಂದರೆ ಎದುರಾಗುತ್ತಿದೆ.ಸಿನಿಮಾ ರಿಲೀಸ್ ಆದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ಫ್ಯಾನ್ಸ್ ಇದ್ದಾರೆ. ಈಗ ಚಿತ್ರ ಒಟಿಟಿ ಪ್ಲಾಟ್​​ಫಾರ್ಮ್ ಕಡೆಯಿಂದ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ. ‘ಜನ ನಾಯಗನ್’ ಸಿನಿಮಾ ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ. ಇದಾದ ಬಳಿಕ ಅವರು ರಾಜಕೀಯದ ಕಡೆ ಹೊರಳಲಿದ್ದಾರೆ. ಈಗಾಗಲೇ ಅವರು ಪಕ್ಷ ಕೂಡ ಆರಂಭಿಸಿದ್ದು, ಚುನಾವಣಾ ರ್ಯಾಲಿ ನಡೆಸುತ್ತಿದ್ದಾರೆ.

ಏಷ್ಯಾನೆಟ್ ನ್ಯೂಸ್ ವರದಿ ಪ್ರಕಾರ ಅಮೇಜಾನ್ ಪ್ರೈಮ್ ವಿಡಿಯೋ ‘ಜನ ನಾಯಗನ್’ ಚಿತ್ರದ ಹಕ್ಕನ್ನು 120 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಸಿನಿಮಾದ ಮೂಲ ರಿಲೀಸ್ ದಿನಾಂಕ ಜನವರಿ 9. ಇದಕ್ಕೆ ಅನುಗುಣವಾಗಿ ಅಮೇಜಾನ್ ಅವರು ಒಟಿಟಿ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿರುತ್ತಾರೆ. ಆದರೆ, ಸಿನಿಮಾ ಇನ್ನೂ ಥಿಯೇಟರ್​​​ನಲ್ಲಿ ರಿಲೀಸ್ ಆಗಿಲ್ಲ. ಇದರಿಂದ ಒಟಿಟಿ ಸಂಸ್ಥೆ ಕಡೆಯಿಂದ ನಿರ್ಮಾಪಕರಿಗೆ ಒತ್ತಡ ಬರುತ್ತಿದೆ ಎಂದು ವರದಿ ಆಗಿದೆ.

ಅಮೇಜಾನ್ ಪ್ರೈಮ್ ವಿಡಿಯೋದವರು ಕಾನೂನಾತ್ಮಕವಾಗಿ ಹೋರಾಡಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ. ಇಲ್ಲವಾದಲ್ಲಿ ಒಪ್ಪಂದದ ಮೊತ್ತದಲ್ಲಿ ಒಂದಷ್ಟು ಹಣವನ್ನು ಕಡಿತಗೊಳಿಸುವ ಸಾಧ್ಯತೆಯೂ ಇದೆ. ಈ ವಿಷಯದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.

ಇದನ್ನೂ ಓದಿ: ವಿಳಂಬವಾಗುತ್ತಿದೆ ‘ಜನ ನಾಯಗನ್’ ರಿಲೀಸ್; ಚುನಾವಣೆ ಘೋಷಣೆ ಆದರೆ ಸದ್ಯಕ್ಕಿಲ್ಲ ಬಿಡುಗಡೆ

ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದೇ ಇರುವ ವಿಷಯದಲ್ಲಿ ತಂಡದವರು ಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿಯೂ ತಂಡಕ್ಕೆ ಹಿನ್ನಡೆ ಆಗುತ್ತಿದೆ. ಒಂದೊಮ್ಮೆ ತಮಿಳುನಾಡು ಚುನಾವಣಾ ವಿಧಾನಸಭೆ ದಿನಾಂಕ ಘೋಷಣೆ ಆದರೆ, ಸಿನಿಮಾಗೆ ಹಿನ್ನಡೆ ಆಗಲಿದೆ. ಚಿತ್ರ ಪ್ರದರ್ಶನ ಅಸಾಧ್ಯವಾಗಬಹುದು. ಈ ಚಿಂತೆ ಕೂಡ ನಿರ್ಮಾಪಕರನ್ನು ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:03 am, Thu, 22 January 26

Source link

ತನ್ನ ಒಪ್ಪಿಗೆ ಇಲ್ಲದೆ ಪತ್ನಿ ಡಿಶ್​ವಾಶರ್ ತಂದಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ? ನೀವು ವಿಚ್ಛೇದನ ಕೊಟ್ಟೇಬಿಡಿ ಎಂದ ನೆಟ್ಟಿಗರು – Kannada News | China: Husband Destroys Home Over Wife’s Dishwasher, Netizens Advise Divorce

ಚೀನಾ, ಜನವರಿ 22: ಪತ್ನಿ ತನ್ನ ಒಪ್ಪಿಗೆ ಇಲ್ಲದೆ ಪಾತ್ರೆ ತೊಳೆಯುವ ಸಾಧನ ಡಿಶ್​ವಾಶರ್ ತಂದಿದ್ದಕ್ಕೆ ಕೋಪಗೊಂಡ ಪತಿ(Husband) ಇಡೀ ಮನೆಯಲ್ಲಿರುವ ಪೀಠೋಪಕರಣ, ವಸ್ತುಗಳನ್ನು ಒಡೆದುಹಾಕಿರುವ ಘಟನೆ ಚೀನಾದಲ್ಲಿ ನಡೆದಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ತನಗೆ ಗೊತ್ತಿಲ್ಲದೆ 25 ಸಾವಿರ ರೂ. ಮೌಲ್ಯದ ಡಿಶ್​ವಾಶರ್ ಖರೀದಿಸಿದ್ದಕ್ಕೆ ಕೋಪಗೊಂಡು ಆತ ಕೆಟ್ಟದಾಗಿ ನಡೆದುಕೊಂಡಿದ್ದಾನೆ.

ಮನೆಯಲ್ಲಿ ಯಾವ ಕೆಲಸಕ್ಕೂ ಪತಿ ಸಹಾಯ ಮಾಡುತ್ತಿರಲಿಲ್ಲ, ಹೀಗಾಗಿ ತನಗೇನು ಮಾಡಬೇಕೆಂದು ತೋಚದೆ, ಸ್ವಲ್ಪ ಕೆಲಸ ಕಡಿಮೆಯಾಗಲಿ ಎಂದು ಈ ಯಂತ್ರವನ್ನು ಖರೀದಿಸಿದ್ದಾಗಿ ಪತ್ನಿ ಹೇಳಿದ್ದಾರೆ.
ಪತಿ ತನ್ನ ಹೆಂಡತಿಗೆ ಆರ್ಡರ್ ರದ್ದುಗೊಳಿಸಿ ಯಂತ್ರವನ್ನು ಹಿಂತಿರುಗಿಸುವಂತೆ ಆದೇಶಿಸಿದಾಗ, ಆಕೆ ನಿರಾಕರಿಸಿದ್ದಾರೆ ಅದಕ್ಕೆ ಕೋಪಗೊಂಡ ಪತಿ ಲಿವಿಂಗ್ ರೂಮಿನಲ್ಲಿದ್ದ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಒಡೆದುಹಾಕಿದ್ದಾನೆ.

ಧ್ವಂಸಗೊಂಡ ಕೋಣೆಯ ವಿಡಿಯೋವನ್ನು ಕೂಡ ಮಾಡಲಾಗಿತ್ತು. ಅವರು ನನಗೆ ಡಿಶ್‌ವಾಶರ್ ಖರೀದಿಸಲು ಏಕೆ ಅನುಮತಿಸುವುದಿಲ್ಲ ಎಂದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ನಾನು ತಪ್ಪು ಮಾಡಿದ್ದೇನೆಂದು ನನಗೆ ಅನಿಸುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಮತ್ತಷ್ಟು ಓದಿ: ಪ್ರೀತಿಸಿ ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು, ಮೂವರು ಪುರುಷರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆಗೈದ ಪತಿ

ಘಟನೆಯ ನಂತರ, ಪತ್ನ ಅಳುತ್ತಾ ಮನೆಯಿಂದ ಓಡಿಹೋಗಿದ್ದಾರೆ.ಬೀದಿಯಲ್ಲಿ ಗಂಟೆಗಟ್ಟಲೆ ಅಲೆದಾಡಿ ಬಳಿಕ ಹೋಟೆಲ್​ಗೆ ಹೋಗಿ ಉಳಿದುಕೊಂಡಿದ್ದರು. ಪತಿ ಮನೆಯಿಂದ ದೂರ ಕೆಲಸ ಮಾಡುತ್ತಾರೆ, ತಿಂಗಳಿಗೆ 11,000 ಯುವಾನ್ ( 144,844ರೂ.) ಸಂಪಾದಿಸುತ್ತಾರೆ, ಆದರೆ ಹೆಂಡತಿ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಾಳೆ.

ಕಳೆದ ವರ್ಷ ತನ್ನ ಅನಾರೋಗ್ಯ ಮತ್ತು ಕೆಲಸ ಮಾಡಲು ಸಾಧ್ಯವಾಗದ ಕಾರಣ ಆಕೆಯ ಮೇಲೆ ಕೋಪ ಹುಟ್ಟಿಕೊಂಡಿದೆ ಎಂಬುದು ಆಕೆಯ ಮಾತು. ಅವರು ಸಾಲದಲ್ಲಿ ಸಿಲುಕಿರುವ ಕಾರಣ ಡಿಶ್‌ವಾಶರ್ ಹಿಂದಿರುಗಿಸಿದ್ದಾರೆ ಎಂದು ಆಕೆ ಹೇಳಿದ್ದಾರೆ.

ಮರುದಿನವೇ ಆಕೆಯ ಪತಿ ಪತ್ನಿಗೆ ಕರೆ ಮಾಡಿ ಕ್ಷಮಿಸು, ಅಂದು ನನ್ನ ಮನಸ್ಥಿತಿ ಕೆಟ್ಟದಾಗಿತ್ತು ಆ ರೀತಿ ನಾನು ನಡೆದುಕೊಳ್ಳಬಾರದಿತ್ತು, ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ , ನಾವು ಚಿಕ್ಕ ಡಿಶ್​ವಾಶರ್ ಖರೀದಿಸೋಣ ಮನೆಗೆ ಬಾ ಎಂದು ಕೇಳಿದ್ದಾನೆ. ಆಗ ಈ ಕತೆ ಸುಖಾಂತ್ಯಗೊಂಡಿದೆ.

ಆದರೆ ನೆಟ್ಟಿಗರು ಆಕೆಗೆ ವಿಚ್ಛೇದನ ಪಡೆಯುವಂತೆ ಸಲಹೆ ನೀಡಿದ್ದಾರೆ. ಇಂಥಾ ವ್ಯಕ್ತಿ ಜತೆ ಬಾಳುವುದಕ್ಕಿಂತ ವಿಚ್ಛೇದನ ಪಡೆಯುವುದೇ ಬೆಟರ್ ಎಂದಿದ್ದಾರೆ. ಇನ್ನೂ ಕೆಲವರು ಪತಿಯ ಆಕ್ರೋಶಕ್ಕೆ ಚೀನಾದ ಆರ್ಥಿಕ ಸಂಕಷ್ಟಗಳೇ ಕಾರಣ ಎಂದು ದೂಷಿಸಿದರು. ಮಹಿಳೆ ತನ್ನ ಪತಿಯೊಂದಿಗೆ ಚರ್ಚಿಸದೆ ತಮ್ಮ ಕುಟುಂಬದ ಆರ್ಥಿಕ ಸಾಮರ್ಥ್ಯಗಳನ್ನು ಮೀರಿ ವಸ್ತುಗಳನ್ನು ಖರೀದಿಸುವುದು ತಪ್ಪು ಎಂದು ಮತ್ತೊಬ್ಬರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಆರ್ ಪುರಂ ಬಳಿ ಬೈಕ್ ಶೋರೂಮ್‌ನಲ್ಲಿ ಅಗ್ನಿ ಅವಘಡ: 13 ಎಲೆಕ್ಟ್ರಿಕ್ ಬೈಕ್‌ಗಳು ಭಸ್ಮ – Kannada News | Electric Bike Showroom Fire at KR Puram TC Palya Signal, 13 E Bikes Gutted in Bengaluru

ಬೆಂಗಳೂರು, ಜನವರಿ 22: ಬೆಂಗಳೂರು ನಗರದ ಕೆ.ಆರ್.ಪುರಂನ ಟಿ.ಸಿ.ಪಾಳ್ಯ ಸಿಗ್ನಲ್ ಸಮೀಪದ ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಜನವರಿ 20ರ ರಾತ್ರಿ ಸುಮಾರು 10.30ರ ವೇಳೆಗೆ ಶೋರೂಮ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಅಲ್ಲಿ ನಿಲ್ಲಿಸಿದ್ದ 13 ಎಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್, ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್-ವಿಜಯಲಕ್ಷ್ಮೀ ಮದುವೆ ಆದ ಜಾಗದಲ್ಲೇ ಉಗ್ರಂ ಮಂಜು ವಿವಾಹ – Kannada News | Ugram Manju To Marry Sandhya At Dharmasthala in Simple Marriage

ರಾಜೇಶ್ ದುಗ್ಗುಮನೆ |

Updated on:Jan 22, 2026 | 8:35 AM

Share

ಬಿಗ್ ಬಾಸ್​​ಗೆ ತೆರಳುವ ಮೂಲಕ ಒಂದಷ್ಟು ಜನರಿಗೆ ಉಗ್ರಂ ಮಂಜು ಇಷ್ಟ ಆಗಿದ್ದರು. ಈಗ ಅವರು ವಿವಾಹ ಆಗುತ್ತಿದ್ದಾರೆ. ಸಂಧ್ಯಾ ಜೊತೆ ಅವರು ಹಸಮಣೆ ಏರುತ್ತಿದ್ದಾರೆ. ಈ ಮಧ್ಯೆ ಅವರು ಮದುವೆ ವಿಷಯದಲ್ಲಿ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಶುಕ್ರವಾರ ಅವರು ಧರ್ಮಸ್ಥಳದಲ್ಲಿ ಮದುವೆ ಆಗುತ್ತಿದ್ದಾರೆ.

Published on: Jan 22, 2026 08:34 AM

Source link

IPL 2026: ಇದೇ ಕಾರಣಕ್ಕೆ RCB ಬೆಂಗಳೂರಿನಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದೆ!

Source link

ಅಭಿಷೇಕ್ ಶರ್ಮಾ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್

Source link