Video: ಆಂಧ್ರಪ್ರದೇಶದಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದ ಬಸ್, ಕೂಡಲೇ ಹೊತ್ತಿಕೊಂಡ ಬೆಂಕಿ, ಮೂವರು ಸಜೀವ ದಹನ – Kannada News | Crash Turns Deadly as Bus Truck Collision Erupts into Fire in Andhra Pradesh, Three Dead
ನಂದ್ಯಾಲ್, ಜನವರಿ 22: ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಖಾಸಗಿ ಬಸ್ಸೊಂದು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿದ್ದಾರೆ. ಈ ಅಪಘಾತ ಸುಮಾರು ಬೆಳಗಿನ ಜಾವ 1.30 ರ ಸುಮಾರಿಗೆ ಸಂಭವಿಸಿದೆ. ಆಂಧ್ರಪ್ರದೇಶದ ನೆಲ್ಲೂರಿನಿಂದ ತೆಲಂಗಾಣದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಬಸ್‌ನ ಬಲಭಾಗದ ಟೈರ್ ಸ್ಫೋಟಗೊಂಡಿತ್ತು. ಹಠಾತ್ ಸ್ಫೋಟದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ, ವಾಹನವು ರಸ್ತೆ ವಿಭಜಕವನ್ನು ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಬೈಕ್ಗಳನ್ನು…