Category Archives: Blog

Your blog category

ಬೆಂಗಳೂರಿನ ಬಡ ರೋಗಿಗಳಿಗೆ ಸಿಹಿಸುದ್ದಿ: ಕೆ ಸಿ ಜನರಲ್ ಆಸ್ಪತ್ರೆಯನ್ನು ಹೈಟೆಕ್ ಮಾಡಲು ಮುಂದಾದ ಆರೋಗ್ಯ ಇಲಾಖೆ – Kannada News | KCG Hospital Malleswaram Boosts Patient Care with 50 Bed Trauma Unit and DNB Block

ಬೆಂಗಳೂರು, ಜ.21: ಬೆಂಗಳೂರು ಜನರಿಗೆ ಒಂದು ಸಿಹಿಸುದ್ದಿ ಇದೆ. ವಿಕ್ಟೋರಿಯಾ ಬೌರಿಂಗ್ ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊವಿಡ್ ಬಳಿಕ ವಿಕ್ಟೋರಿಯಾದಲ್ಲಿ ನಿರಂತರವಾಗಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಒತ್ತಡ ಹೆಚ್ಚಾಗಿದೆ . ಇದೀಗ ಈ ಒತ್ತಡವನ್ನು ಕಡಿಮೆ ಮಾಡಲು, ಮಲ್ಲೇಶ್ವರಂನಲ್ಲಿ ಪ್ರತಿಷ್ಠಿತ ಕೆ ಸಿ ಜನರಲ್ ಆಸ್ಪತ್ರೆಯನ್ನು (K C General Hospital) ಹೈಟೆಕ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಕೆಸಿಜಿ ಆಸ್ಪತ್ರೆಯಲ್ಲಿ ಮುಂದಿನ ತಿಂಗಳಿನಿಂದ 50 ಬೆಡ್ ವ್ಯವಸ್ಥೆಯ ಟ್ರಾಮಾ ಎಮೆರ್ಜೆನ್ಸಿ ಕೇರ್ ಹಾಗೂ ಬ್ಲಡ್ ಬ್ಯಾಂಕ್ ಡಿಎನ್ ಬಿ ಬ್ಲಾಕ್ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ನಿರ್ಧಾರದಿಂದ ಬೆಂಗಳೂರಿನಲ್ಲಿ ಒಳ್ಳೆಯ ಚಿಕಿತ್ಸೆ ಹಾಗೂ ಬಡ ರೋಗಿಗಳಿಗೆ ಇದು ತುಂಬಾ ಪ್ರಯೋಜನ ನೀಡಿಲಿದೆ. ಟ್ರಾಮಾ ಕೇರ್ ಸೆಂಟರ್ ತುರ್ತು ಎಮೆರ್ಜೆನ್ಸಿ ಚಿಕಿತ್ಸೆ ಘಟಕದ ಕಟ್ಟಡ ಕೆಲಸ ಶೇ 80% ಪೂರ್ಣಗೊಂಡಿದ್ದು, ಮುಂದಿನ ತಿಂಗಳ ಸೇವೆಗೆ ಲಭ್ಯವಾಗಲಿದೆ. 50ಬೆಡ್ ಸೌಲಭ್ಯದ ಟ್ರಾಮಾ ಕೇರ್ ಸೆಂಟರ್ 14HDU ಬೆಡ್ 2 OT ಸೌಲಭ್ಯ 15 ಐಸಿಯು ಹಾಗೂ ಎಚ್​​​​ಡಿಯೂ ಬೆಡ್ ವ್ಯವಸ್ಥೆಗಳು ಇರಲಿದೆ ಎಂದು ಹೇಳಲಾಗಿದೆ.

ಇದರ ಜತೆಗೆ ಬ್ಲಡ್ ಬ್ಯಾಂಕ್, ಡಿಎನ್ ಬಿ ಜೊತೆ ಟ್ರಾಮಾ ಕೇರ್ ಸೆಂಟರ್ ಬಹಳಷ್ಟು ಜನರಿಗೆ ಇದು ಸಹಾಯವಾಗಲಿದೆ. ಜೊತೆಗೆ ಕೆಸಿಜಿ ಆವರಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆ ಡಿಸೆಂಬರ್​ನಲ್ಲಿ ಲೋಕಾರ್ಪಣೆ ಸಿದ್ಧವಾಗುತ್ತಿದೆ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಬ್ಬಂದಿ ಕೊರತೆ ಸರಿ ಮಾಡುತ್ತಿದ್ದೇವೆ. ಇನ್ನು ಟ್ರಾನ್ಸಫರ್ ತೊಂದರೆಯನ್ನು ಅನುಭವಿಸುತ್ತಿರುವ ವೈದ್ಯರನ್ನು ಗುತ್ತಿಗೆಯಲ್ಲಿ ತಗೆದುಕೊಳ್ಳಲು ಮುಂದಾಗಿವೆ. ಮುಂದಿನ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಇದಕ್ಕೆ ಸಿಎಂ ಚಾಲನೆ ನೀಡಲಿದ್ದು, ಜನರ ಸೇವೆಗೆ ಸಾಹಯವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​​ ಮುಖಂಡನ ಪವರ್ ಮುಂದೆ ಡಮ್ಮಿಯಾದ ಅರಣ್ಯಾಧಿಕಾರಿಗಳು: ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ

ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಹಾಗೂ ಹಾವು ಕಡಿತ ಹೆಚ್ಚಾಗಿದ್ದು ಈ ಕಾರಣದಿಂದ ಪಿಎಚ್ ಸಿ ಸೆಂಟರ್​​​ಗಳಲ್ಲಿ ಆಂಟಿ-ರೇಬೀಸ್ , ಆ್ಯಂಟಿ ಸ್ನೇಕ್ ವೆನಮ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು ಈ ಹಿನ್ನಲೆ ಬೆಂಗಳೂರಿನ ಎಲ್ಲ ಪಿಎಚ್ ಸಿ ಸೆಂಟರ್​​​​ಗಳಲ್ಲಿ ಔಷಧ ಶೇಖರಣೆಗೆಸೂಚನೆ ನೀಡಿದ್ದೇನೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಆಂಟಿ-ರೇಬೀಸ್ ಚುಚ್ಚುಮದ್ದು ಇರಲೇಬೇಕು ಎಂದು ಸೂಚನೆ ನೀಡಿದ್ದೇನೆ. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನಕೂಲಕ್ಕೆ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೈಟೇಕ್ ಟ್ರಾಮಾ ಕೇರ್ ಸೆಂಟರ್, ಬ್ಲಡ್ ಬ್ಯಾಂಕ್ ಸೇರಿದ್ದಂತೆ, ಬೇರೆ ಬೇರೆ ಚಿಕಿತ್ಸೆಗೆ ಅವಕಾಶ ನೀಡುವ ಗುರಿಯನ್ನು ಹೊಂದಿದ್ದು, ಈ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇವೆ. ಮುಂದಿನ ತಿಂಗಳ ಕೊನೆಯಲ್ಲಿ ಜನರ ಸೇವೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂಬಿಗರ ಚೌಡಯ್ಯ ಭವ್ಯ ಮೆರವಣಿಗೆಗೆ ಹೆಲಿಕಾಪ್ಟರ್​​ನಿಂದ ಪುಷ್ಪವೃಷ್ಟಿ – Kannada News | Ambigara Chowdaiya Jayantotsava: Massive Procession and Floral Tribute Held in Kalaburagi

ಕಲಬುರಗಿ, ಜ.21: ಜಿಲ್ಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವವನ್ನು ಭಕ್ತಿ, ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಇದು ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವವಾಗಿದ್ದು, ಈ ಸಂದರ್ಭದಲ್ಲಿ ಕಲಬುರಗಿ ನಗರವು ವಿಶೇಷ ಮೆರವಣಿಗೆ ಮತ್ತು ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಜಯಂತ್ಯೋತ್ಸವದ ಅಂಗವಾಗಿ, ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೂ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಕೊಂಡೊಯ್ಯಲಾಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು. ಒಂಟೆಗಳು, ಕುದುರೆಗಳು, ಹಾಗೆಯೇ ಪುರುಷ ಮತ್ತು ಮಹಿಳಾ ಕಲಾ ತಂಡಗಳು ತಮ್ಮ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ, ಜನರ ಗಮನ ಸೆಳೆದವು. ಮೆರವಣಿಗೆ ಜಗತ್ ವೃತ್ತವನ್ನು ತಲುಪಿದ ನಂತರ, ಅಂಬಿಗರ ಚೌಡಯ್ಯನವರ ಮೂರ್ತಿಗೆ ಹೆಲಿಕಾಪ್ಟರ್ ಮೂಲಕ ಭವ್ಯ ಪುಷ್ಪ ವೃಷ್ಟಿ ಮಾಡಲಾಯಿತು. ಈ ಅಪೂರ್ವ ಪುಷ್ಪ ವೃಷ್ಟಿಯು ಸಮಾರಂಭಕ್ಕೆ ಮತ್ತಷ್ಟು ಕಳೆ ತಂದಿತು. ಈ ಮೂಲಕ ನಿಜಶರಣ ಅಂಬಿಗರ ಚೌಡಯ್ಯನವರಿಗೆ ಗೌರವ ಸಲ್ಲಿಸಲಾಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಧಿವೇಶನ ಉದ್ದೇಶಿಸಿ ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ಯಾಕೆ? ಅದರಲ್ಲಿರುವ ಅಂಶವಾದರೂ ಏನು? – Kannada News | Why Karnataka Governor Thaawarchand Gehlot refuses to address joint session of legislature, here Is reason

ಬೆಂಗಳೂರು (ಜನವರಿ.21): ಕೇರಳ, ತಮಿಳುನಾಡು ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ರಾಜ್ಯಪಾಲರು
ಮತ್ತು ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ನಾಳೆಯಿಂದ (ಜ. 22) ಆರಂಭವಾಗಲಿರುವ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹೀಗಾಗಿ ಕಾನೂನು ಸಚಿವ ಎಚ್​​​ಕೆ ಪಾಟೀಲ್ ನೇತೃತ್ವದ ನಿಯೋಗ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಮನವೊಲಿಕೆಗೆ ಯತ್ನಿಸಿದ್ದಾರೆ. ಈ ವೇಳೆ ಭಾಷಣದಲ್ಲಿರುವ ಕೆಲ ಅಂಶಗಳನ್ನ ಕೈಬಿಡುವಂತೆ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಯುಪಿಎ ಕಾಲದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ (MGNREGA) ಹೆಸರನ್ನು ಬದಲಿಸಿ, ‘ವಿಬಿ-ಜಿ ರಾಮ್ ಜಿ’ (VB-G RAM G) ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ತೀವ್ರವಾಗಿ ವಿರೋಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಅಷ್ಟೇ ಅಲ್ಲದೆ, ಅಧಿವೇಶನದಲ್ಲಿ ರಾಜ್ಯಪಾಲರು ಓದಬೇಕಿರುವ ಭಾಷಣದ ಪ್ರತಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗುರ ತರುವಂತಹ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದೆ. ಕೋರ್ಟ್​ಗೆ ಹೋಗಿ ಬರ ಪರಿಹಾರ, ನೆರೆ ಪರಿಹಾರ ಪಡೆಯಲಾಗಿದೆ ಎನ್ನುವ ವಿಚಾರ ಭಾಷಣದಲ್ಲಿ ಉಲ್ಲೇಖಿಸಿದ್ದು, ಇದಕ್ಕೆ ರಾಜ್ಯಪಾಲರು ಆಕ್ಷೇಪಿಸಿದ್ದಾರೆ. 11 ಪ್ಯಾರಾಗಳನ್ನು ಕೈಬಿಡಬೇಕೆಂದು ಸಹ ರಾಜ್ಯಪಾಲರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾಷಣ ಮಾಡಲ್ಲ ಎಂದ ರಾಜ್ಯಪಾಲರು: ವಿಶೇಷ ಅಧಿವೇಶನ ರದ್ದಾಗುತ್ತಾ? ಸರ್ಕಾರದ ಮುಂದಿರುವ ಆಯ್ಕೆಗಳೇನು?

Source link

‘ತುಂಬಾ ಚೆನ್ನಾಗಿ ಮಾಡಿದಿರಾ’ ಟ್ವೀಟ್​​ನಲ್ಲಿ ಕನ್ನಡ ಬಳಸಿದ ಅಲ್ಲು ಅರ್ಜುನ್, ಕಾರಣ? – Kannada News | Allu Arjun usess Kannada words in his recent tweet why

ಅಲ್ಲು ಅರ್ಜುನ್ (Allu Arjun), ಪ್ಯಾನ್ ಇಂಡಿಯಾ ಸ್ಟಾರ್ ನಟ. ಇದೀಗ ಅವರು ಅಟ್ಲಿ ನಿರ್ದೇಶನದ ಹಾಲಿವುಡ್ ಲೆವೆಲ್​​ನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್​​ಗೂ ಕರ್ನಾಟಕಕ್ಕೂ ಬಹಳ ಆಪ್ತ ಬಂಧವೇನಿಲ್ಲ. ಪುನೀತ್ ರಾಜ್​​ಕುಮಾರ್ ಅವರೊಟ್ಟಿಗೆ ಒಳ್ಳೆಯ ಗೆಳೆತನ ಹೊಂದಿದ್ದ ಅಲ್ಲು ಅರ್ಜುನ್ ಕರ್ನಾಟಕಕ್ಕೆ ಬರುವುದು ತೀರ ಅಪರೂಪಕ್ಕೆ. ಇದೀಗ ಅಲ್ಲು ಅರ್ಜುನ್ ಅವರ ಅಚಾನಕ್ಕಾಗಿ ತಮ್ಮ ಟ್ವೀಟ್​​ನಲ್ಲಿ ಕನ್ನಡ ಭಾಷೆ ಬಳಸಿದ್ದಾರೆ. ಅಲ್ಲು ಅರ್ಜುನ್ ಟ್ವೀಟ್​​ನಲ್ಲಿ ಕನ್ನಡ ಬಳಸಲು ವಿಶೇಷ ಕಾರಣವೂ ಇದೆ.

ಅಲ್ಲು ಅರ್ಜುನ್ ಅವರು ಚಿತ್ರೀಕರಣದಿಂದ ಬಿಡುವು ಪಡೆದು ಕುಟುಂಬದೊಟ್ಟಿಗೆ ಜಪಾನ್ ಪ್ರವಾಸ ಮಾಡಿ ಬಂದಿದ್ದಾರೆ. ಜಪಾನ್ ಪ್ರವಾಸದಿಂದ ಬಂದ ಕೂಡಲೇ ತಮ್ಮ ಮಾವ, ನೆಚ್ಚಿನ ನಟರೂ ಆಗಿರುವ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ ಅಲ್ಲು ಅರ್ಜುನ್. ಸಿನಿಮಾ ಬಗ್ಗೆ ಟ್ವೀಟ್​ ಮಾಡಿರುವ ಸ್ಟೈಲಿಷ್ ಸ್ಟಾರ್ ತಮ್ಮ ಟ್ವೀಟ್​​ನಲ್ಲಿ ಕನ್ನಡ ವಾಕ್ಯವೊಂದನ್ನು ಬಳಸಿದ್ದಾರೆ.

ಇದನ್ನೂ ಓದಿ:ಜಪಾನ್​​ನಲ್ಲಿ ಅಭಿಮಾನಿಗಳ ಪ್ರೀತಿಗೆ ಮನಸೋತ ಅಲ್ಲು ಅರ್ಜುನ್

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಅನ್ನು ಹೊಗಳುತ್ತಾ ಅಲ್ಲು ಅರ್ಜುನ್ ಮಾಡಿರುವ ಟ್ವೀಟ್​​ನಲ್ಲಿ, ‘ತುಂಬಾ ಚೆನ್ನಾಗಿ ಮಾಡಿದಿರಾ’ ಎಂಬ ವಾಕ್ಯವನ್ನು ಅಲ್ಲು ಅರ್ಜುನ್ ಬಳಸಿದ್ದಾರೆ. ಅದೂ ಮೆಗಾಸ್ಟಾರ್ ವಿರಂಜೀವಿ ಅವರನ್ನು ಹೊಗಳಲು ಅಲ್ಲ, ಬದಲಿಗೆ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ವೆಂಕಟೇಶ್ ಅವರನ್ನು ಹೊಗಳಲು. ಏಕೆಂದರೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾನಲ್ಲಿ ವೆಂಕಟೇಶ್ ಅವರು ಕನ್ನಡಿಗನ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಹೆಸರು ದಾವಣಗೆರೆಯ ವೆಂಕಿ ಗೌಡ. ಸಿನಿಮಾನಲ್ಲಿ ವೆಂಕಟೇಶ್ ಅವರ ಆರಂಭದ ಕೆಲವು ಸಂಭಾಷಣೆಗಳು ಕನ್ನಡದಲ್ಲೇ ಇವೆ. ಚಿರಂಜೀವಿ ಸಹ ವೆಂಕಿ ಅವರೊಟ್ಟಿಗೆ ಕನ್ನಡದಲ್ಲಿ ಮಾತನಾಡುವ ದೃಶ್ಯಗಳು ಇವೆ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಅವರು ವೆಂಕಟೇಶ್ ಅವರ ಪಾತ್ರವನ್ನು ಹೊಗಳುತ್ತಾ ಕನ್ನಡದ ವಾಕ್ಯ ಬಳಸಿದ್ದಾರೆ.

‘ಬಾಸ್ ಈಸ್ ಬ್ಯಾಕ್’ ಎಂದಿರುವ ಅಲ್ಲು ಅರ್ಜುನ್, ‘ಮೆಗಾಸ್ಟಾರ್ ಚಿರಂಜೀವಿ ಅವರು ಪರದೆಯ ಮೇಲೆ ಮಿಂಚಿದ್ದನ್ನು ನೋಡಲು ಖುಷಿ ಆಗುತ್ತದೆ. ಸಿನಿಮಾನಲ್ಲಿ ಸಖತ್ ಹುಕ್ ಸ್ಟೆಪ್ಪುಗಳು, ಆಕ್ಷನ್, ಕಾಮಿಡಿ ಎಲ್ಲವೂ ಅದ್ಭುತವಾಗಿದೆ. ನಯನತಾರಾ ಹಾಗೂ ಕ್ಯಾತರಿನ್ ಅವರು ಒಳ್ಳೆಯ ಗ್ಲಾಮರ್ ತಂದಿದ್ದಾರೆ. ಅನಿಲ್ ರವಿಪುಡಿ, ಸಂಕ್ರಾಂತಿ ಬ್ಲಾಕ್ ಬಸ್ಟರ್ ಮಷೀನ್ ಎನಿಸಿಕೊಂಡಿದ್ದಾರೆ, ಒಟ್ಟಾರೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಸಂಕ್ರಾಂತಿಯ ‘ಬಾಸ್ ಬಸ್ಟರ್’ ಆಗಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಗುರು ಯುವರಾಜ್ ದಾಖಲೆ ಮುರಿದು ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ

Source link

ಸಿಹಿ ಪಾನೀಯಗಳ ಸೇವನೆ ಪುರುಷರಲ್ಲಿ ಕೂದಲು ಉದುರುವಿಕೆ ಕಾರಣವಾಗುತ್ತದೆಯೇ? – Kannada News | Sugar and Hair Loss: What’s the Connection in Men?

ಇತ್ತೀಚಿನ ದಿನಗಳಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವ ಸಮಸ್ಯೆ (Hair Loss) ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಪುರುಷರಲ್ಲಿ ಈ ಸಮಸ್ಯೆ ಹೆಚ್ಚು. ಇದಕ್ಕೆ ಕಾರಣಗಳು ಹಲವಾರಿರಬಹುದು. ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆ, ಆಹಾರ ಪದ್ಧತಿ ಮತ್ತು ದೈನಂದಿನ ಆಹಾರ ಆಯ್ಕೆಗಳು ಪ್ರಮುಖವಾಗುತ್ತದೆ. ಅದರಲ್ಲಿಯೂ ಸಿಹಿಯಾಗಿರುವ ಪಾನೀಯಗಳ ಸೇವನೆ ಮಾಡುವ ಅಭ್ಯಾಸ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ತಂಪು ಪಾನೀಯ, ಪ್ಯಾಕ್ ಮಾಡಿಟ್ಟ ಹಣ್ಣಿನ ರಸ ಅಥವಾ ಜ್ಯೂಸ್, ಶಕ್ತಿ ಹೆಚ್ಚಿಸುವ ಪಾನೀಯಗಳು ಮತ್ತು ಸುವಾಸನೆ ಭರಿತ ಶೇಕ್‌ಗಳು ದೈನಂದಿನ ಜೀವನದ ಭಾಗವಾಗಿವೆ. ಈ ಪಾನೀಯಗಳು ಸೇವನೆ ಮಾಡುವುದಕ್ಕೆ ರುಚಿಕರವಾಗಿರುತ್ತದೆ, ಆದರೆ ಇದರಿಂದ ಉಂಟಾಗುವ ಪರಿಣಾಮವನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಕೂದಲು ಉದುರುವುದು ವಯಸ್ಸಿಗೆ ಸಂಬಂಧಿಸಿದೆ ಎಂದು ಅನೇಕರು ನಂಬುತ್ತಾರೆ, ಆದರೆ ಆಹಾರಕ್ರಮವೂ ಪ್ರಮುಖ ಅಂಶ ಎಂಬುದನ್ನು ಮರೆಯಬಾರದು. ಹಾಗಾಗಿ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳು ಕೂದಲಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಸಿಹಿಯಾಗಿರುವ ಪಾನೀಯಗಳು ಪುರುಷರಲ್ಲಿ ಕೂದಲು ಉದುರುವಿಕೆಯ ಅಪಾಯವನ್ನು ಯಾವ ರೀತಿ ಹೆಚ್ಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಸಿಹಿ ಪಾನೀಯಗಳ ಸೇವನೆ ಪುರುಷರಲ್ಲಿ ಕೂದಲು ಉದುರುವಿಕೆಯನ್ನು ಹೇಗೆ ಹೆಚ್ಚಿಸುತ್ತವೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಸಿಹಿಯಾದ ಪಾನೀಯಗಳಲ್ಲಿ ಬಹಳಷ್ಟು ಪ್ರಮಾಣದ ಸಕ್ಕರೆ ಅಂಶವಿರುತ್ತದೆ, ಇದು ದೇಹದಲ್ಲಿ ವಿವಿಧ ಬದಲಾವಣೆಗಳಿಗೆ ಕಾರಣವಾಗುತ್ತದೆ. ಸಕ್ಕರೆ ಸೇವನೆಯು ಅಗತ್ಯಕ್ಕಿಂತ ಹೆಚ್ಚಾದಾಗ, ದೇಹದ ಸಮತೋಲನಕ್ಕೆ ತೊಂದರೆಯಾಗುತ್ತದೆ. ಇದು ಹಾರ್ಮೋನುಗಳ ವ್ಯವಸ್ಥೆ, ನೆತ್ತಿಯ ಆರೋಗ್ಯ ಮತ್ತು ಕೂದಲಿನ ಬೇರುಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಹೆಚ್ಚು ಸಕ್ಕರೆಯ ಸೇವನೆ ಪೋಷಕಾಂಶಗಳ ಸರಿಯಾದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ, ಅಂದರೆ ಕೂದಲು ಅಗತ್ಯ ಪೋಷಣೆಯನ್ನು ಪಡೆದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಸಿಹಿ ಪಾನೀಯಗಳು ಹಸಿವಿನ ಮೇಲೆ ಪರಿಣಾಮ ಬೀರುತ್ತವೆ.

ಕಾಲಾನಂತರದಲ್ಲಿ, ಇದು ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಅಷ್ಟೇಅಲ್ಲ, ತಲೆಹೊಟ್ಟು ಮತ್ತು ಕೂದಲು ತೆಳುವಾಗುವಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರೀತಿಯಾಗಿ, ಸಿಹಿ ಪಾನೀಯಗಳು ಕೂದಲಿನ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ ಆದರೆ ಕೂದಲಿನ ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಅಡುಗೆ ಮನೆಯಲ್ಲಿ ಲಭ್ಯವಿರುವ ಈ ವಸ್ತುಗಳೇ ಸಾಕು

ಕೂದಲು ಉದುರುವುದನ್ನು ತಡೆಯಲು ಸಲಹೆಗಳು?

ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ, ಮೊದಲು ಸಿಹಿ ಪಾನೀಯಗಳ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನೀವು ಪ್ರತಿದಿನ ತಂಪು ಪಾನೀಯಗಳು ಅಥವಾ ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಗಳನ್ನು ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ, ಅವುಗಳನ್ನು ಕ್ರಮೇಣ ಕಡಿಮೆ ಮಾಡುವುದು ಅಥವಾ ಒಂದು ಹಂತದಲ್ಲಿ ನಿಲ್ಲಿಸುವುದು ಉತ್ತಮ. ಬದಲಾಗಿ, ನೀರು, ಎಳನೀರು ಅಥವಾ ಸಕ್ಕರೆ ರಹಿತ ಪಾನೀಯಗಳನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲದೆ ನೀವು ಸೇವನೆ ಮಾಡುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಿ. ಪ್ರೋಟೀನ್, ಹಣ್ಣು, ತರಕಾರಿ ಮತ್ತು ಧಾನ್ಯಗಳು ನೀವು ಸೇವನೆ ಮಾಡುವ ಆಹಾರದಲ್ಲಿರಲಿ. ಇದೆಲ್ಲದರ ಜೊತೆಗೆ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ. ಜೊತೆಗೆ ಪ್ರತಿದಿನ ಸರಿಯಾಗಿ ನಿದ್ರೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BBL: ‘ನೀವು ಗೆಲ್ಬೇಕಂದ್ರೆ ಬಾಬರ್​ನ ತಂಡದಿಂದ ಹೊರಹಾಕಿ’; ಆಸೀಸ್ ದಿಗ್ಗಜನ ಹೇಳಿಕೆ – Kannada News | Babar Azam’s BBL Struggles: Mark Waugh Calls for Dropping Sydney Sixers Opener

ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ಪ್ರದರ್ಶನ ಪಂದ್ಯದಿಂದ ಪಂದ್ಯಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಈ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್‌ ಪರ ಆಡುತ್ತಿರುವ ಬಾಬರ್​ಗೆ ಆರಂಭಿಕನ ಜವಾಬ್ದಾರಿ ನೀಡಲಾಗಿದೆ. ಆದರೆ ಬಾಬರ್​ ಸ್ಥಿರ ಪ್ರದರ್ಶನ ನೀಡುವುದಿರಲಿ, ಸ್ಥಿರವಾಗಿ ರನ್ ಕಲೆಹಾಕಲು ಸಾಧ್ಯವಾಗುತ್ತಿಲ್ಲ. ಆಡಿರುವ 11 ಪಂದ್ಯಗಳಲ್ಲಿ ಏಳು ಬಾರಿ ಒಂದೇ ಅಂಕಿಯ ಸ್ಕೋರ್‌ಗೆ ಔಟಾಗಿದ್ದಾರೆ. ಹೀಗಾಗಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಬಾಬರ್ ಅವರ ಕಳಪೆ ಪ್ರದರ್ಶನದಿಂದ ಕೆರಳಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ, ‘ಸಿಡ್ನಿ ಸಿಕ್ಸರ್ಸ್ ಪಂದ್ಯಗಳನ್ನು ಗೆಲ್ಲಲು ಬಯಸಿದರೆ, ಬಾಬರ್ ಆಝಂ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಬೇಕಾಗುತ್ತದೆ ಎಂದಿದ್ದಾರೆ.

ಹೋಬಾರ್ಟ್ ಹರಿಕೇನ್ಸ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ನಡುವಿನ ಪಂದ್ಯದ ಕುರಿತು ಕಾಮೆಂಟ್ ಮಾಡುತ್ತಿದ್ದ ಮಾರ್ಕ್ ವಾ, ‘ಸಿಡ್ನಿ ಸಿಕ್ಸರ್ಸ್‌ ತಂಡವು ನಿರ್ಣಾಯಕ ಪಂದ್ಯವನ್ನು ಗೆಲ್ಲಲು ಬಯಸಿದರೆ, ಬಾಬರ್ ಆಝಂ ಅವರನ್ನು ಆಡುವ ಹನ್ನೊಂದರಿಂದ ಕೈಬಿಡಬೇಕಾಗುತ್ತದೆ. ಬಾಬರ್ ಆಝಂ ವಿಶ್ವ ದರ್ಜೆಯ ಆಟಗಾರ, ಆದರೆ ಅವರ ಫಾರ್ಮ್​ ಪ್ರಸ್ತುತ ಕಳಪೆಯಾಗಿದೆ. ಹೀಗಾಗಿ ಅವರ ಸ್ಥಾನದಲ್ಲಿ ಇನ್ನೊಬ್ಬ ಆರಂಭಿಕ ಆಟಗಾರನನ್ನು ಪ್ರಯತ್ನಿಸಬೇಕಾಗಿದೆ ಎಂದಿದ್ದಾರೆ.

ಮಾರ್ಕ್​ ವಾ ಅವರ ಹೇಳಿಕೆಯಂತೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಬಾಬರ್ ಆಡಿರುವ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 202 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 103.06 ಆಗಿದೆ. ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿಯೂ ಬಾಬರ್ ಎರಡನೇ ಎಸೆತದಲ್ಲಿ ಖಾತೆ ತೆರೆಯದೆಯೇ ಔಟಾದರು. ಪರಿಣಾಮವಾಗಿ, ಸಿಡ್ನಿ ತಂಡ ಕೇವಲ 99 ರನ್‌ಗಳಿಗೆ ಕುಸಿದು ಪರ್ತ್ ವಿರುದ್ಧ 48 ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಪ್ರದರ್ಶನ ಹೇಗಿದೆ? – Kannada News | Ishan Kishan Batting Stats at Number 3

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಟಿ20 ಸರಣಿಯು ಬುಧವಾರದಿಂದ ಶುರುವಾಗಲಿದೆ. ನಾಗ್ಪುರದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಖಚಿತವಾಗಿದೆ. ಅಂದರೆ 2 ವರ್ಷಗಳ ಬಳಿಕ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಇಶಾನ್ ಸಜ್ಜಾಗಿದ್ದಾರೆ. ಅದು ಕೂಡ ಹೊಸ ಬ್ಯಾಟಿಂಗ್ ಕ್ರಮಾಂಕದಲ್ಲಿ.

ಸಾಮಾನ್ಯವಾಗಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯುವ ಆಟಗಾರ. ಆದರೆ ಕಳೆದ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಈ ವೇಳೆ ಉತ್ತಮ ಪ್ರದರ್ಶನ ನೀಡುವಲ್ಲಿಯೂ ಯಶಸ್ವಿಯಾಗಿದ್ದರು.

ಇದೀಗ ನ್ಯೂಝಿಲೆಂಡ್ ವಿರುದ್ಧ ಕೂಡ ಇಶಾನ್ ಕಿಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಎಡಗೈ ದಾಂಡಿಗ ತಿಲಕ್ ವರ್ಮಾ ಗಾಯದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಅವರನ್ನು 3ನೇ ಸ್ಥಾನದಲ್ಲಿ ಕಣಕ್ಕಿಳಿಸಲು ಪ್ಲ್ಯಾನ್ ರೂಪಿಸಲಾಗಿದೆ.

ಅದರಂತೆ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟ್ ಬೀಸಲಿದ್ದಾರೆ.

3ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಪ್ರದರ್ಶನ ಹೇಗಿದೆ?

ಇಶಾನ್ ಕಿಶನ್ ಇದುವರೆಗೆ ನಾಲ್ಕು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 28.5 ಸರಾಸರಿಯಲ್ಲಿ 9 ಸಿಕ್ಸರ್‌ಗಳೊಂದಿಗೆ ಒಟ್ಟು 114 ರನ್ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

ಇಶಾನ್ ಕಿಶನ್ ಮೊದಲ ಬಾರಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದು 2021 ರಲ್ಲಿ. ಅಹಮದಾಬಾದ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒನ್​ ಡೌನ್​ ಸ್ಥಾನದಲ್ಲಿ ಕಣಕ್ಕಿಳಿದಿದ್ದ ಇಶಾನ್ ಕೇವಲ 4 ರನ್​ ಮಾತ್ರ ಕಲೆಹಾಕಿದ್ದರು.

ಇದಾದ ಬಳಿಕ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಇಶಾನ್ ಮೊದಲ ಪಂದ್ಯದಲ್ಲಿ 58 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಪಂದ್ಯದಲ್ಲಿ 52 ರನ್ ಕಲೆಹಾಕಿದ್ದರು. ಇನ್ನು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 0 ಸೊನ್ನೆ ಸುತ್ತಿದ್ದರು.

ಇದೀಗ ಬರೋಬ್ಬರಿ 2 ವರ್ಷಗಳ ಬಳಿಕ ಟೀಮ್ ಇಂಡಿಯಾ ಪರ ಮತ್ತೊಮ್ಮೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅತ್ತ ಮೂರನೇ ಸ್ಥಾನದಲ್ಲಿ 4 ಮ್ಯಾಚ್​ಗಳಲ್ಲಿ 2 ಅರ್ಧಶತಕ ಬಾರಿಸಿರುವ ಕಾರಣ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲೂ ಇಶಾನ್ ಕಿಶನ್ ಕಡೆಯಿಂದ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು.

Source link

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್: ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಮತ್ತೊಂದು ಶಾಕ್ – Kannada News | Sidlaghatta abuse case kpcc working president recommends to disciplinary committee for suspend rajiv gowda from congress

ಚಿಕ್ಕಬಳ್ಳಾಪುರ, (ಜನವರಿ 21): ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ (Rajiv Gowda)ತಲೆಮರೆಸಿಕೊಂಡಿದ್ದು, ಇತ್ತ ಇದನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ ಹಾಗೂ ಜೆಡಿಎಸ್, ರಾಜೀವ್ ಗೌಡ ಕಾಣೆಯಾಗಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿದೆ. ಇದು ಆಡಳಿತರೂಢ ಕಾಂಗ್ರೆಸ್​​ಗೆ ಮುಜುಗರವಾಗಿದೆ. ಇದರಿಂದ ಆರೋಪಿ ರಾಜೀವ್​ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದಾರೆ.

ಅಮಾನತಿಗ ಶಿಸ್ತು ಸಮಿತಿಗೆ ಶಿಫಾರಸ್ಸು

ರಾಜೀವ್ ಗೌಡ ಅವರ ನಡೆ ಮಾಧ್ಯಮಗಳಲ್ಲಿ ಪ್ರಚಾರಗೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಜ್ಯ ಮಟ್ಟದ ನಾಯಕರಿಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಅವರು ಶಿಸ್ತು ಸಮಿತಿಗೆ ಪತ್ರ ಬರೆದಿದ್ದಾರೆ. ‘ಪಕ್ಷದ ಘನತೆಗೆ ಧಕ್ಕೆ ತಂದಿರುವ ರಾಜೀವ್ ಗೌಡ ಅವರನ್ನು ತಕ್ಷಣವೇ ಪಕ್ಷದಿಂದ ಅಮಾನತುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು: ರಾಜೀವ್ ಗೌಡಗೆ ಕೋರ್ಟ್ ತರಾಟೆ

ನೋಟಿಸ್​​ಗೂ ರಾಜೀವ್ ಗೌಡ ಡೋಂಟ್ ಕೇರ್!

ಬ್ಯಾನರ್ ತೆರವು ಮಾಡಿರುವ ಸಂಬಂಧ ರಾಜೀವ್ ಗೌಡ, ಶಿಡ್ಲಘಟ್ಟ ಮಹಿಳಾ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಇದೀಗ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಕಳೆದ ಜನವರಿ 15, 2026 ರಂದು ರಾಜೀವ್ ಗೌಡ ಅವರಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ತಲುಪಿದರೂ ಸಹ ಅವರು ಇದುವರೆಗೂ ಯಾವುದೇ ಲಿಖಿತ ಉತ್ತರ ಅಥವಾ ಸ್ಪಷ್ಟನೆ ನೀಡಿಲ್ಲ. ಇದರಿಂದ ರಾಜೀವ್ ಗೌಡ ಅಮಾನತಿಗೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್​ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ ರಾಜೀವ್ ಗೌಡ ಸಸ್ಪೆಂಡ್ ಆಗುವುದು ಬಹುತೇಕ ಖಚಿತವಾಗಿದ್ದು, ಯಾವುದೇ ಸಂದರ್ಭದಲ್ಲೂ ಸಹ ಆದೇಶ ಹೊರಬೀಳಬಹುದು.

ಇದುವರೆಗೂ ರಾಜೀವ್ ಗೌಡನ ಬಂಧನವಾಗಿಲ್ಲ

ಬ್ಯಾನರ್ ತೆರವು ಮಾಡಿರುವ ಸಂಬಂಧ ರಾಜೀವ್ ಗೌಡ, ಶಿಡ್ಲಘಟ್ಟ ಮಹಿಳಾ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಅಮೃತಾ ಅವರು ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಪೊಲೀಸರು ಸಹ ಎಫ್​​ಐಆರ್ ದಾಖಲಿಸಿದ್ದಾರೆ. ಆದ್ರೆ, ಇದುವರೆಗೂ ರಾಜೀವ್ ಗೌಡನನ್ನು ಬಂಧಿಸಲು ಆಗಿಲ್ಲ. ಇನ್ನು ರಾಜೀವ್ ಗೌಡ ಎಲ್ಲಿದ್ದಾನೆ ಎನ್ನುವ ಸುಳಿವು ಸಹ ಸಿಕ್ಕಿಲ್ಲ. ಇನ್ನೊಂದೆಡೆ ಸಚಿವ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಬೇಕಂತಲೇ ರಾಜೀವ್ ಗೌಡನನ್ನು ಬಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಪ್ರಕರಣದ ಹಿನ್ನೆಲೆ

ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರನ ಸಿನಿಮಾ ಕಾರ್ಯಕ್ರಮದ ನಿಮಿತ್ತ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದ್ರೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರು ಕೇಳಿಬಂದಿದ್ದರಿಂದ ರಾಜೀವ್ ಗೌಡ ಇದ್ದ ಬ್ಯಾನರ್​​ ತೆರವುಗೊಳಿಸಿದ್ದರು. ಅಲ್ಲದೇ ಮಾಹಿತಿ ನೀಡಿ ಬೇರೆ ಸ್ಥಳದಲ್ಲಿ ಹಾಕಿಕೊಳ್ಳಿ ಎಂದು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ರಾಜೀವ್ ಗೌಡ ಅವರು ನಗರಸಭೆಯ ಪೌರಾಯುಕ್ತರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದಿದ್ದಾರೆ. ಅಶ್ಲೀಲವಾಗಿ ವೈಯಕ್ತಿಕವಾಗಿ ನಿಂದಿಸಿರುವ ಆಡಿಯೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗೆ ಸಾರ್ವಜನಿಕ ಪ್ರತಿನಿಧಿಯಾಗಬಯಸುವ ವ್ಯಕ್ತಿಯೊಬ್ಬರು ಈ ರೀತಿ ನಡೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಪೌರಾಯುಕ್ತೆ ಅಮೃತಾ ಅವರು ದೂರು ನೀಡಿದ್ದು, ಈ ದೂರಿನ ಮೇರೆಗೆ ಶಿಡ್ಗಘಟ್ಟ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು? – Kannada News | Getting Your Period After Childbirth: Timeline and Tips

ಹೆರಿಗೆಯ ನಂತರ, ಮಹಿಳೆಯರ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗುತ್ತದೆ ಜೊತೆಗೆ ಹಾರ್ಮೋನುಗಳಲ್ಲಿ ವ್ಯತಾಸ ಉಂಟಾಗುತ್ತದೆ. ಈ ಸಮಯದಲ್ಲಿ, ಮುಟ್ಟಿನ ಚಕ್ರವು ನಿಲ್ಲುವುದು ಅಥವಾ ತಡವಾಗಿ ಪ್ರಾರಂಭವಾಗುವುದು ಸಾಮಾನ್ಯ. ಆದರೆ ಮಹಿಳೆಯರಿಗೆ ಇದರ ಬಗ್ಗೆ ಅನೇಕ ಗೊಂದಲ ಮತ್ತು ಬಗೆಹರಿಯದಂತಹ ಪ್ರಶ್ನೆಗಳಿರುತ್ತವೆ. ಕೆಲವರಿಗೆ, ಹೆರಿಗೆಯ (Delivery) ನಂತರ ಕೆಲವು ತಿಂಗಳುಗಳ ನಂತರ ಮುಟ್ಟು (Period) ಬರುತ್ತದೆ, ಇನ್ನುಕೆಲವರಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಈ ಪರಿಸ್ಥಿತಿ ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಆದರೆ ಹೆರಿಗೆಯ ನಂತರ ಮುಟ್ಟು ಯಾವಾಗ ಪ್ರಾರಂಭವಾಗಬೇಕು ಜೊತೆಗೆ ಅದು ವಿಳಂಬವಾದರೆ ಏನಾಗಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಹೆರಿಗೆಯ ನಂತರ ಯಾವಾಗ ಋತುಚಕ್ರ (Menstrual Cycle) ಆರಂಭವಾಗುತ್ತದೆ, ಸಮಯಕ್ಕೆ ಸರಿಯಾಗಿ ಮುಟ್ಟಾಗದಿರುವುದು ಅಪಾಯಕಾರಿಯೇ, ಇಂತಹ ಸಮಯದಲ್ಲಿ ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆರಿಗೆ ನಂತರ ಮುಟ್ಟು ಯಾವಾಗ ಪ್ರಾರಂಭವಾಗಬೇಕು?

ಹೆರಿಗೆಯ ನಂತರ ಮುಟ್ಟು ಮಹಿಳೆಯ ದೈಹಿಕ ಸ್ಥಿತಿ ಮತ್ತು ದಿನಚರಿಯನ್ನು ಅವಲಂಬಿಸಿರುತ್ತದೆ ಎಂದು ಆರ್‌ಎಂಎಲ್ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಸಲೋನಿ ಚಾಧಾ ಹೇಳುತ್ತಾರೆ. ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಎದೆಹಾಲುಣಿಸದ ಮಹಿಳೆಯರಿಗೆ 6 ರಿಂದ 8 ವಾರಗಳಲ್ಲಿ ಮುಟ್ಟು ಮರಳಬಹುದು. ಮತ್ತೊಂದೆಡೆ, ನಿಯಮಿತವಾಗಿ ಹಾಲುಣಿಸುವ ಮಹಿಳೆಯರಿಗೆ ಮುಟ್ಟು ಮರಳಲು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಒಂದು ವರ್ಷದವರೆಗೆ ಮಹಿಳೆ ಮುಟ್ಟಾಗದಿರಬಹುದು. ಈ ರೀತಿಯಾಗುವುದು ಬಹಳ ಸಾಮಾನ್ಯ. ಜೊತೆಗೆ ಆರಂಭದಲ್ಲಿ, ಮುಟ್ಟು ಅನಿಯಮಿತವಾಗಿರಬಹುದು, ಕ್ರಮೇಣ, ದೇಹವು ಅದರ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಬಳಿಕ ಋತುಚಕ್ರ ಅಥವಾ ಮುಟ್ಟು ನಿಯಮಿತವಾಗುತ್ತದೆ.

ಸಮಯಕ್ಕೆ ಸರಿಯಾಗಿ ಋತುಚಕ್ರವಾಗದಿರುವುದು ಅಪಾಯಕಾರಿಯೇ?

ಹೆರಿಗೆಯ ನಂತರ ತಡವಾಗಿ ಋತುಚಕ್ರವಾಗುವುದು ಅಪಾಯಕಾರಿಯಲ್ಲ. ಆದರೆ ಇದು ದೇಹದ ಸಾಮಾನ್ಯ ಚೇತರಿಕೆ ಪ್ರಕ್ರಿಯೆಯ ಭಾಗವಾಗಿದೆ. ಋತುಚಕ್ರ ದೀರ್ಘಕಾಲದವರೆಗೆ ಬರದಿದ್ದರೆ ಜೊತೆಗೆ ದೌರ್ಬಲ್ಯ, ತೀವ್ರ ಆಯಾಸ, ಹೊಟ್ಟೆ ನೋವು ಅಥವಾ ಅಸಹಜ ಸ್ರಾವದಂತಹ ಲಕ್ಷಣ ಕಂಡುಬಂದರೆ, ಅದು ಸಮಸ್ಯೆಯನ್ನು ಸೂಚಿಸುತ್ತದೆ. ಅಲ್ಲದೆ ಹಾರ್ಮೋನುಗಳ ಅಸಮತೋಲನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಋತುಚಕ್ರದ ಮೇಲೆ ನಿಗಾ ಇಡುವುದು ಮತ್ತು ಅಗತ್ಯವಿದ್ದಾಗ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಇದನ್ನೂ ಓದಿ: ಪಿರಿಯಡ್ಸ್ ಸಮಯದಲ್ಲಿ ಈ ರೀತಿಯ ಆಹಾರಕ್ರಮ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತೆ!

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

  • ಹೆರಿಗೆಯ ನಂತರ ಒಂದು ವರ್ಷದ ನಂತರವೂ ಮುಟ್ಟಾಗದಿದ್ದರೆ.
  • ಮುಟ್ಟಿನ ಸಮಯದಲ್ಲಿ ತೀವ್ರ ನೋವು ಅಥವಾ ತಲೆತಿರುಗುವಿಕೆ ಕಂಡುಬರುತ್ತಿದ್ದರೆ.
  • ಒಮ್ಮೆಲೇ ತೂಕ ಹೆಚ್ಚಾಗುವುದು ಅಥವಾ ಸುಸ್ತಾಗುತ್ತಿದ್ದರೆ.
  • ಅಸಹಜ ಅಥವಾ ಮೂತ್ರ ವಿಸರ್ಜನೆ ಮಾಡುವಾಗ ದುರ್ವಾಸನೆ ಕಂಡುಬಂದರೆ.

ಇಂತಹ ಸಂದರ್ಭಗಳಲ್ಲಿ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮಹಿಳೆಯರ ಆರೋಗ್ಯಕ್ಕೆ ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link