ಡಾಲರ್ ಎದುರು ರುಪಾಯಿ ಮೌಲ್ಯ 91.70ಕ್ಕೆ ಕುಸಿತ; ಇದೇ ಟ್ರೆಂಡ್ ಇದ್ದರೆ 93ಕ್ಕೆ ಇಳಿಯಬಹುದು ಎಂದ ತಜ್ಞರು – Kannada News | Rupee fell to new low of 91.70 against Dollar on Jan 21st
ನವದೆಹಲಿ, ಜನವರಿ 21: ಭಾರತದ ರುಪಾಯಿ ಕರೆನ್ಸಿಯ ದುರ್ಬಲ ಪ್ರದರ್ಶನ (Dollar vs Rupee) ಮುಂದುವರಿದಿದೆ. ಬೇರೆ ಬೇರೆ ಕಾರಣಗಳಿಗೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ನಿನ್ನೆ 90.98 ಇದ್ದ ರುಪಾಯಿ ಮೌಲ್ಯ ಇವತ್ತು 91 ದಾಟಿ ಹೋಗಿದೆ. ಬುಧವಾರ ಒಂದು ಹಂತದಲ್ಲಿ 76 ಪೈಸೆ ಕುಸಿತಗೊಂಡು 91.74ಕ್ಕೆ ಹೋಗಿದ್ದ ರುಪಾಯಿ, ಅಂತಿಮವಾಗಿ 91.70ಗೆ ನಿಂತಿದೆ. ಇದು ಡಾಲರ್ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ ಎನಿಸಿದೆ. ಡಾಲರ್ ಎದುರು ರುಪಾಯಿ ದುರ್ಬಲ ಪ್ರದರ್ಶನಕ್ಕೆ…