ಕೆಪಿಎಸ್ ಶಾಲೆಯಿಂದ ಸರ್ಕಾರಿ ಶಾಲೆಗಳು ಕ್ಲೋಸ್ ಆಗುತ್ತಿವೆಯಾ? ಕಳವಳ ವ್ಯಕ್ತಪಡಿಸಿದ ಹೊರಟ್ಟಿ – Kannada News | Are KPS Schools Causing Closure of Government Schools; Basavaraj Horatti Raises Concern
ಸ್ಪೀಕರ್ ಬಸವರಾಜ್ ಹೊರಟ್ಟಿImage Credit source: tv9 kannada ಹುಬ್ಬಳ್ಳಿ, ಮೇ 26: ಪ್ರಾಥಮಿಕ ಶಾಲೆಯಿಂದ ಪಿಯುಸಿವರಗೆ ಒಂದೇ ಸೂರಿನಡಿ, ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅನೇಕ ವರ್ಷಗಳ ಹಿಂದೆ ಆರಂಭಿಸಿದೆ. ಈ ಶೈಕ್ಷಣಿಕ ವರ್ಷದಿಂದ ಮತ್ತಷ್ಟು ಕೆಪಿಎಸ್ ಶಾಲೆಗಳನ್ನು (KPS schools) ಆರಂಭಿಸಲು ಮುಂದಾಗಿದೆ. ಆದರೆ ಈ ಶಾಲೆಗಳ ಆರಂಭಕ್ಕೆ ಸುತ್ತಲಿನ ಕನ್ನಡ ಶಾಲೆಗಳನ್ನು ವಿಲೀನ ಮಾಡುವುದು ಮತ್ತು ಅವುಗಳನ್ನು ಬಂದ್ ಮಾಡುವ ಆರೋಪ ಕೇಳಿಬಂದಿವೆ. ಹೀಗಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ್…