ಮಾಯವಾಯ್ತು ಸಲ್ಮಾನ್ ಖಾನ್ ಇನ್‌ಸ್ಟಾಗ್ರಾಮ್ ಖಾತೆ; ಕಾರಣ ಏನು? – Kannada News | Salman Khan’s Instagram Account Vanishes and Reappears: The Mysterious 30 Minute Disappearance
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan), ಸದಾ ಸಿನಿಮಾಗಳ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ಸದ್ಯ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಹೊಸ ಸಿನಿಮಾ ‘ಮಾತೃಭೂಮಿ’ ಹಾಗೂ ಇತ್ತೀಚಿನ ಪಾಪರಾಜಿ ವಿವಾದಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಪಾಪರಾಜಿಗಳ ವರ್ತನೆಗೆ ತೀವ್ರ ಕೋಪ ವ್ಯಕ್ತಪಡಿಸಿದ್ದ ನಟ, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲವು ನಿಗೂಢ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಇದ್ದಕ್ಕಿದ್ದಂತೆ…