Headlines

ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು – Kannada News | Kavya Shaiva talks about her remuneration for Bigg Boss Kannada

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದಿದ್ದು ಗಿಲ್ಲಿ ವಿನ್ನರ್ ಎನಿಸಿಕೊಂಡಿದ್ದಾರೆ. ಗಿಲ್ಲಿ ಜೊತೆಗೆ ಆಪ್ತ ಗೆಳೆತನ ಹೊಂದಿದ್ದ ಕಾವ್ಯಾ ಫಿನಾಲೆವರೆಗೆ ಬಂದಿದ್ದು, 10 ಲಕ್ಷ ಬಹುಮಾನದ ಮೊತ್ತವನ್ನು ಸಹ ಗೆದ್ದು ಹೊರಬಂದಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಕಾವ್ಯಾ, ಬಿಗ್​​ಬಾಸ್​​ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ಜೊತೆಗಿನ ಗೆಳೆತನ, ಅಚ್ಚರಿ ರೀತಿ ರಕ್ಷಿತಾ ರನ್ನರ್ ಅಪ್ ಆಗಿದ್ದು, ಇವುಗಳ ಜೊತೆಗೆ ಬಿಗ್​​ಬಾಸ್​​ಗಾಗಿ ತಾವು ಪಡೆದ ಸಂಭಾವನೆ, ಬಿಗ್​​ಬಾಸ್ ಮನೆಯಲ್ಲಿ ತಮಗೆ ಆದ ಖರ್ಚು ಮತ್ತು…

Read More

EXIM Bank Recruitment 2026: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ – Kannada News | EXIM Bank MT Recruitment 2026: Apply Online for 40 Management Trainee Posts by Feb 1

ಬ್ಯಾಂಕ್ ಉದ್ಯೋಗಗಳಿಗಾಗಿ ಕಾಯುತ್ತಿರುವವರಿಗೆ ಗುಡ್​ ನ್ಯೂಸ್​ ಇಲ್ಲಿದೆ. ಇಂಡಿಯಾ ಎಕ್ಸಿಮ್ ಬ್ಯಾಂಕ್.. ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನಿ (MT) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಫೆಬ್ರವರಿ 1 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅಧಿಕೃತ ವೆಬ್‌ಸೈಟ್ eximbankindia.in ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಅಧಿಸೂಚನೆಯ ಮೂಲಕ, ಇಂಡಿಯಾ ಎಕ್ಸಿಮ್ ಬ್ಯಾಂಕಿನಲ್ಲಿ ಒಟ್ಟು 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು…

Read More

ಹೀಗೆ ಕಲುಷಿತಗೊಂಡರೆ ಸೌಪರ್ಣಿಕಾ ನದಿ ಉಳಿಯುತ್ತಾ? ಸಮಗ್ರ ವರದಿ ಸಲ್ಲಿಸುವಂತೆ ಹಸಿರು ನ್ಯಾಯಮಂಡಳಿ ಆದೇಶ – Kannada News | NGT Orders Action: Kollur Souparnika River Pollution from Temple Area Commercial Waste

ಕೊಳಚೆ ನೀರಿನಿಂದ ಅಶುದ್ಧವಾಗಿರುವ ಸೌಪರ್ಣಿಕಾ ಉಡುಪಿ, ಜನವರಿ 20: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ (Kolluru Mukambika Temple) ಸುತ್ತಮುತ್ತಲ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳಿಂದ ಹರಿಯುತ್ತಿರುವ ಮಲಿನ ನೀರಿನಿಂದ ಸೌಪರ್ಣಿಕಾ ನದಿ ತೀವ್ರವಾಗಿ ಮಾಲಿನ್ಯಗೊಳ್ಳುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮಹತ್ವದ ಆದೇಶ ನೀಡಿದೆ. ಫೆಬ್ರವರಿ 9, 2026ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿರುವ ನ್ಯಾಯಮಂಡಳಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWSDB) ಅಧ್ಯಕ್ಷರಿಗೆ…

Read More

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ – Kannada News | Minister Eshwar Khandre elected unopposed as all india veerashaiva lingayat Mahasabha President

ಬೆಂಗಳೂರು, (ಜನವರಿ 20): ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ (all india veerashaiva lingayat Mahasabha) ನೂತನ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಆಯ್ಕೆಯಾಗಿದ್ದಾರೆ. ಶಾಮನೂರು ಶಿವಶಂಕಪ್ಪ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಲವು ಘಟಾನುಘಟಿ ನಾಯಕರ ಹೆಸರು ಕೇಳಿಬಂದಿದ್ದವು. ಆದ್ರೆ, ಅಂತಿಮವಾಗಇಂದು (ಜನವರಿ 20) ಬೆಂಗಳೂರಿನ ಮಹಾಸಭಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಈಶ್ವರ್ ಖಂಡ್ರೆ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಈಶ್ವರ್ ಖಂಡ್ರೆ ಅವರು ಅಖಿಲ ಭಾರತ…

Read More

ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ; ಕಾರಣ ಇಲ್ಲಿದೆ – Kannada News | Second Post Mortem in Rishal D’Souza Suicide Case Over Assault Allegations

ಉತ್ತರ ಕನ್ನಡ, ಜನವರಿ 20: JDS ನಾಯಕಿಯ ಪುತ್ರನ ಕಿರುಕುಳದಿಂದ ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಮಗಳಿಗೆ ಕಿರುಕುಳ ಮಾತ್ರ ನೀಡಿಲ್ಲ, ಆಕೆಯ ಮೇಲೆ ಅತ್ಯಾಚಾರ ಕೂಡ ನಡೆಸಲಾಗಿದೆ. ವಿಷಯವನ್ನು ಮನೆಯಲ್ಲಿ ಹೇಳಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಜೊತೆಗೆ ಮತ್ತೊಮ್ಮೆ ಪೋಸ್ಟ್​ಮಾರ್ಟಮ್​ ಮಾಡಲು ಆಗ್ರಹಿಸಿದ್ದರು. ಹೀಗಾಗಿ ಯುವತಿ ಶವ ಹೊರತೆಗೆದು ಮಗದೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಾರವಾರ ತಾಲೂಕಿನ ಕದ್ರಾ ಗ್ರಾಮದ ಸೇಂಟ್…

Read More

ವಿದ್ಯಾರ್ಥಿನಿಯನ್ನ ಬೆನ್ನಟ್ಟಿ ಬಂದ ಆಸಾಮಿ: ಆಗಂತುಕನಿಂದ ಬಾಲಕಿ ಗ್ರೇಟ್ ಎಸ್ಕೇಪ್ – Kannada News | Hassan Shocker: Unknown Man Follows Student, Harassment Sparks Outrage

ಬಾಲಕಿಯನ್ನ ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಹಾಸನ, ಜನವರಿ 20: ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಗಾಂಜಾ ನಶೆ, ಎಣ್ಣೆ ಮತ್ತಲ್ಲಿ ದುರ್ವರ್ತನೆ ತೋರುತ್ತಿರುವ ಕಿಡಿಗೇಡಿಗಳ ಅಟ್ಟಹಾಸ ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿವೆ. ಸೋಮವಾರದಂದು ಎರಡು ಮನೆ ಹಾಗೂ ಬೈಕ್​ಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದವರನ್ನು ಬಂಧಿಸಲು ಪೊಲೀಸರು ಮುಂದಾದ ಬೆನ್ನಲ್ಲೇ ಮತ್ತೊಂದು ಭಯಾನಕ ಘಟನೆ ಹಾಸನದ (Hassan) ಜನತೆಯನ್ನ ಬೆಚ್ಚಿ ಬೀಳೀಸಿದೆ. ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿಯನ್ನ (Girl) ಓರ್ವ ಕಿಡಿಗೇಡಿ ಹಿಂಬಾಲಿಸಿ ಕೊಂಡು ಬಂದು…

Read More

ಕೋರ್ಟ್​​ ಆವರಣದಲ್ಲಿ ಗಣಪತಿ ದೇಗುಲಕ್ಕೆ ವಿರೋಧ: ಚಿಕ್ಕಮಗಳೂರಿನಲ್ಲೊಂದು ಹೊಸ ವಿವಾದ – Kannada News | Dalit organizations Opposes To Build Ganapathi temple In Chikkamagaluru Court Ground

ಚಿಕ್ಕಮಗಳೂರು, (ಜನವರಿ 20): ನಗರದ ಹೊರವಲಯದ ಹೌಸಿಂಗ್ ಬೋರ್ಡ್ ಬಳಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಜಿಲ್ಲಾ ನ್ಯಾಯಾಲಯದ (Chikkamagaluru District Court) ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸಂಪೂರ್ಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದ್ರೆ,ಈ ನೂತನ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಆವರಣದೊಳಗೆ ಗಣಪತಿ ದೇವಾಲಯ (Ganapathi temple) ನಿರ್ಮಾಣಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ. ದಲಿತ ಸಂಘಟನೆಗಳ ಒಕ್ಕೂಟ ( Dalit organizations) ಕೋರ್ಟ್​​ನ ಆವರಣದಲ್ಲಿ ಗಣಪತಿ ದೇಗುಲ ನಿರ್ಮಾಣಕ್ಕೆ ವಿರೋಧ ಮಾಡಿದ್ದು, ಈ ಸಂಬಂಧ ಸಂಘಟನೆಗಳು…

Read More

ಕೋಮಲ್‌ ಹೊಸ ಸಿನಿಮಾ ‘ತೆನಾಲಿ DA LLB’; ಮೊದಲ ಬಾರಿ ಲಾಯರ್ ಪಾತ್ರ – Kannada News | Komal Kumar starrer Tenali DA LLB movie poster released

ಕಾಮಿಡಿ ಸಿನಿಮಾಗಳಿಂದ ಹೆಸರಾದ ನಟ ಕೋಮಲ್ ಕುಮಾರ್ (Komal Kumar) ಅವರು ಹೊಸ ಕಥೆ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಕಳೆದ ವರ್ಷ ಅವರು ನಟಿಸಿದ ‘ಕೋಣ’ ಸಿನಿಮಾ ಬಿಡುಗಡೆ ಆಗಿತ್ತು. ಈಗ ‘ತೆನಾಲಿ DA LLB’ ಸಿನಿಮಾದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಕೋಮಲ್‌ ಅವರು ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ಳಲ್ಲ. ಸಾಕಷ್ಟು ಕಥೆಗಳನ್ನು ಕೇಳಿ ವಿಭಿನ್ನ ಎನಿಸುವ ಕಥೆಗೆ ಮಾತ್ರ ಸಹಿ ಮಾಡುತ್ತಿದ್ದಾರೆ. ಈಗ ಅವರಿಗೆ ‘ತೆನಾಲಿ ಡಿಎ ಎಲ್​ಎಲ್​ಬಿ’ (Tenali…

Read More

ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ – Kannada News | Kavya talks about why she participated in Bigg Boss show

ಬಿಗ್​​ಬಾಸ್ (Bigg Boss) ಬಗ್ಗೆ ಚಿತ್ರರಂಗ ಹಾಗೂ ಟಿವಿ ಪ್ರಪಂಚದಲ್ಲಿ ಸಕ್ರಿಯರಾಗಿರುವವರಿಗೆ ಎರಡು ರೀತಿಯ ಅಭಿಪ್ರಾಯಗಳಿವೆ. ಕೆಲವರು ಅವಕಾಶಕ್ಕಾಗಿ ಹಾತೊರೆಯುವವರು ಇದ್ದರೆ, ಇನ್ನು ಕೆಲವರು ಅವಕಾಶ ಸಿಕ್ಕರೂ ಅಯ್ಯೋ ಬೇಡಪ್ಪ ಎನ್ನುವವರೂ ಇದ್ದಾರೆ. ಮನೊರಂಜನಾ ಕ್ಷೇತ್ರದಿಂದ ಬಿಗ್​​ಬಾಸ್​​ಗೆ ಬರುವ ಅನೇಕರಿಗೆ ಏನಾದರೂ ಒಂದು ನಿರ್ದಿಷ್ಟ ಕಾರಣ ಇದ್ದೇ ಇರುತ್ತದೆ. ಕಾವ್ಯಾ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಸಕ್ರಿಯರಾಗಿದ್ದವರು. ಬಿಗ್​​ಬಾಸ್​​ಗೆ ಬಂದು ಫಿನಾಲೆ ಸ್ಪರ್ಧಿ ಎನಿಸಿಕೊಂಡರು. ಅಷ್ಟಕ್ಕೂ ಕಾವ್ಯಾ ಬಿಗ್​​ಬಾಸ್​ಗೆ ಬರಲು ಕಾರಣ ಏನಿತ್ತು? ಇಲ್ಲಿದೆ ಮಾಹಿತಿ… ಸಿನಿಮಾ…

Read More

ಬಿಗ್ ಬಾಸ್: ಯೂಟ್ಯೂಬ್ ಹಣದಿಂದಲೇ ಮುಂಬೈನಲ್ಲಿ ಮನೆ ಖರೀದಿಸಿದ ರಕ್ಷಿತಾ ಶೆಟ್ಟಿ – Kannada News | BBK 12 Rakshita Shetty purchased home in Mumbai by her YouTube earnings

ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋ ಮೂಲಕ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಯಿತು. ಈ ಶೋನಲ್ಲಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ರಕ್ಷಿತಾ ಶೆಟ್ಟಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಶೋಗೆ ಬರುವುದಕ್ಕೂ ಮುನ್ನವೇ ಮುಂಬೈನಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಅವರು ಮನೆ ಖರೀದಿ ಮಾಡಿದ್ದರು. ಅದು…

Read More