Headlines

‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌ – Kannada News | Dhurandhar actor Ranveer Singh responds after FWICE bans him over Don 3 exit

ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ಹಠಾತ್ ಹೊರನಡೆದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಸಿನಿಮಾ ನೌಕರರ ಒಕ್ಕೂಟ (FWICE) ಅಸಹಕಾರದ ಮೂಲಕ ಬ್ಯಾನ್ ಮಾಡಿದೆ. ಈ ವಿವಾದದ ಬೆನ್ನಲ್ಲೇ ರಣವೀರ್ ಸಿಂಗ್ ಅವರ ವಕ್ತಾರರು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಕೊನೆಗೂ ಮೌನ ಮುರಿದಿದ್ದಾರೆ. ‘ಡಾನ್ 3’ ಚಿತ್ರದ ನಿರ್ದೇಶಕ ಫರ್ಹಾನ್ ಅಖ್ತರ್ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ರಣವೀರ್ ಸಿಂಗ್ ಅವರು ಚಿತ್ರದಿಂದ ಹೊರನಡೆದಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ…

Read More

30 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ನಟಿ ಮೀನಾಕ್ಷಿ ಶೇಷಾದ್ರಿ; ಚಿತ್ರರಂಗಕ್ಕೆ ಕಮ್​ಬ್ಯಾಕ್ – Kannada News | Meenakshi Seshadri returns to Mumbai announces acting comeback after 30 years

ಬಾಲಿವುಡ್‌ನ (Bollywood) ಹಿರಿಯ ಹಾಗೂ ಜನಪ್ರಿಯ ನಟಿ ಮೀನಾಕ್ಷಿ ಶೇಷಾದ್ರಿ ಅವರು ಸುಮಾರು ಮೂರು ದಶಕಗಳ ಕಾಲ ವಿದೇಶದಲ್ಲಿ ನೆಲೆಸಿದ ನಂತರ ಕಡೆಗೂ ಭಾರತಕ್ಕೆ ಮರಳಿದ್ದಾರೆ. 1990ರ ದಶಕದ ವೇಳೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ದೂರ ಸರಿದಿದ್ದ ನಟಿ, ಇದೀಗ ಸಿನಿಮಾ ಮತ್ತು ಒಟಿಟಿ ಶೋಗಳ ಮೂಲಕ ಹೊಸ ಅವಕಾಶಗಳೊಂದಿಗೆ ತಮ್ಮ ನಟನಾ ಪ್ರಯಾಣವನ್ನು ಪುನರಾರಂಭಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಮೀನಾಕ್ಷಿ ಶೇಷಾದ್ರಿ (Meenakshi Seshadri) ಅವರು ಈ ಬಗ್ಗೆ…

Read More

ಕರ್ನಾಟಕ ಕೈ ಕಾದಾಟ ದಿಲ್ಲಿಗೆ ಶಿಫ್ಟ್: ಸಿಎಂ-ಡಿಸಿಎಂ ಲೆಕ್ಕವೇ ಬೇರೆ, ಶಾಸಕರ ಲೆಕ್ಕಾಚಾರವೇ ಇನ್ನೊಂದು – Kannada News | Karnataka power tussle And cabinet reshuffle Row: CM Siddaramaiah, DK Shivkumar And others Some MLAs fly Delhi

ಬೆಂಗಳೂರು, (ಮೇ 25): ಸಿಎಂ ಹಾಗೂ ಡಿಸಿಎಂಗೆ ಹೈಕಮಾಂಡ್ (congress high command) ಬುಲಾವ್ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರಿದೆ.ಸಿಎಂ ಸಿದ್ದರಾಮಯ್ಯ, (Siddaramaiah) ಡಿಸಿಎಂ ಡಿಕೆ ಶಿವಕುಮಾರ್​ ಗೆ (DK Shivakumar) ಇರೋ ಲೆಕ್ಕಾಚಾರ ಬೇರೆ. ಆದ್ರೆ ಶಾಸಕರಿಗೆ ಇರೋ ಲೆಕ್ಕಾಚಾರವೇ ಬೇರೆ ಆಗಿದೆ. ನಾಯಕತ್ವ ಚರ್ಚೆ ಆಗಲಿ ಬಿಡಲಿ, ಸಚಿವ ಸಂಪುಟ ಪುನಾರಚನೆಗೆ (cabinet reshuffle) ಅವಕಾಶ ಕೊಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಸದ್ಯ ಸಚಿವಾಕಾಂಕ್ಷಿಗಳು ಇದ್ದಾರೆ. ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡೋ ಲೆಕ್ಕಾಚಾರದಲ್ಲಿದ್ದಾರೆ….

Read More

ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ

ಗಾಜಿಯಾಬಾದ್, ಮೇ 25: ಉತ್ತರ ಪ್ರದೇಶದ ಬುಲಂದ್‌ಶಹರ್ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳ ವರದಿಯಾಗಿಲ್ಲ. ಕಾರ್ಖಾನೆಯ ಆವರಣದ ಒಳಗಿನಿಂದ ಅಗ್ನಿಶಾಮಕ ದಳದ ಪ್ರಯತ್ನಗಳು ನಡೆಯುತ್ತಿವೆ. ಈ ಆವರಣದಲ್ಲಿ ಯಾರೂ ಸಿಲುಕಿಕೊಂಡಿಲ್ಲ. ಎಲ್ಲರೂ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಭಾರೀ ದುರಂತವೊಂದು ತಪ್ಪಿದಂತಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source…

Read More

ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ನಡೆದಿದ್ದೇಗೆ? ಮಾಡಿದ್ಯಾರು? ಇಲ್ಲಿದೆ ಪ್ರಕರಣದ ಆಳ-ಅಗಲ – Kannada News | Karnataka’s Biggest Digital Arrest Case Explained: Who Was Behind the Massive Cyber Scam

ಡಿಜಿಟಲ್ ಅರೆಸ್ಟ್ (ಎಐ ಚಿತ್ರ)Image Credit source: tv9 kannada ಬೆಂಗಳೂರು, ಮೇ 25: ಕರ್ನಾಟಕದಲ್ಲಿ ನಡೆದಿದ್ದ ಅತಿದೊಡ್ಡ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣವನ್ನು ಸದ್ಯ ಬೆಂಗಳೂರು ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ. ರಾಜ್ಯದಲ್ಲೂ ಆ್ಯಕ್ಟಿವ್ ಆಗಿದ್ದ ಉತ್ತರ ಭಾರತದ ಸೈಬರ್ ವಂಚಕರ ಜಾಲವನ್ನು ಪತ್ತೆ ಹಚ್ಚುವ ಮೂಲಕ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಎ.ಮಲ್ಲಿಕ್, ತಮಿಳುನಾಡು ಮೂಲದ ಶಿವಗ್ಯಾನಂ, ಗುಜರಾತ್ ಮೂಲದ ಪಾಲಕ್ ಬೈ ಪಟೇಲ್, ಮೊಹಮ್ಮದ್ ಹಮೀದ್ ಮತ್ತು ದೆಹಲಿ ಮೂಲದ…

Read More

ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ – Kannada News | Tamil Nadu group hurled bombs at woman house in Coimbatore know why

ಕೊಯಮತ್ತೂರು, ಮೇ 25: ತಮಿಳುನಾಡಿನ ಕೊಯಮತ್ತೂರಿನಲ್ಲಿ (Coimbatore) ಯುವತಿಯೊಬ್ಬರು ಪುರುಷನ ಪ್ರಪೋಸಲ್ ನಿರಾಕರಿಸಿದ ಕಾರಣದಿಂದ ಆತ ತನ್ನ ಗ್ಯಾಂಗ್ ಜೊತೆ ಸೇರಿ ಆಕೆಯ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಆ ಯುವತಿ ಸ್ವಲ್ಪ ಸಮಯದಿಂದ ಅವನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅವನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರಿಂದ ಆಕೆ ಅವನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದರು. ಇದು ಆ ವ್ಯಕ್ತಿಯನ್ನು ಕೆರಳಿಸಿತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆ ಯುವತಿ ಕಾಳಿಕ್ಕನೈಕ್ಕನ್‌ಪಾಳ್ಯಂನಲ್ಲಿರುವ…

Read More

ಸ್ನಾನದ ನೀರಿಗೆ ಚಿಟಿಕೆ ಅರಶಿನ ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | Know the benefits of bathing in water mixed with a pinch of turmeric

ಅರಶಿನವನ್ನು (turmeric) ಬಹಳ ಹಿಂದಿನ ಕಾಲದಿಂದಲೂ ಅಡುಗೆಯಲ್ಲಿ ಬಳಸಲಾಗುತ್ತದೆ. ಇದಲ್ಲದೆ ತ್ವಚೆಯ ಆರೈಕೆಯಲ್ಲೂ ಅರಶಿನವನ್ನು ಬಳಸಲಾಗುತ್ತದೆ. ಇದರ ಅಂತರ್ಗತ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಚರ್ಮವನ್ನು ಸ್ವಚ್ಛವಾಗಿಡಲು ಮತ್ತು ತುರಿಕೆ, ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.  ಇದಲ್ಲದೆ ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದಲೂ ಹಲವು ಪ್ರಯೋಜನಗಳಿವೆ. ಆಯುರ್ವೇದದಲ್ಲಿ, ಅರಶಿನ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ದೇಹ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉತ್ಕರ್ಷಣ…

Read More

ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ – Kannada News | Ragini Dwivedi new film Ragini IPS 2 announced Jaggesh sons will direct and K Manju Produce

ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಅವರ ಹೊಸ ಸಿನಿಮಾದ ಘೋಷಣೆ ಮಾಡಲಾಯಿತು. 12 ವರ್ಷಗಳ ಹಿಂದೆ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದ ‘ರಾಗಿಣಿ ಐಪಿಎಸ್’ ಸಿನಿಮಾ ತೆರೆಕಂಡಿತ್ತು. ಈಗ ಆ ಸಿನಿಮಾಗೆ ಸೀಕ್ವೆಲ್ ಮಾಡಲು ತಯಾರಿ ನಡೆದಿದೆ. ಹೌದು, ‘ರಾಗಿಣಿ ಐಪಿಎಸ್ 2’ ಸಿನಿಮಾ ಅನೌನ್ಸ್ ಆಗಿದೆ. ಜಗ್ಗೇಶ್ (Jaggesh) ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಕೆ….

Read More

ದಲೈ ಲಾಮಾ ಉತ್ತರಾಧಿಕಾರಿ ನೇಮಕದಿಂದ ದೂರವಿರಿ; ಭಾರತಕ್ಕೆ ಚೀನಾ ಎಚ್ಚರಿಕೆ – Kannada News | China warns India to stay away from Dalai Lama succession issue ahead of Dharamshala ceremony

ನವದೆಹಲಿ, ಮೇ 25: ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲೈ ಲಾಮಾ (Dalai Lama) ಅವರ ಉತ್ತರಾಧಿಕಾರಿ ನೇಮಕದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚೀನಾ ಸರ್ಕಾರವು ಭಾರತಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಮಹತ್ವದ ಧಾರ್ಮಿಕ ಸಮಾರಂಭಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ, “ಭಾರತವು ದಲೈ ಲಾಮಾ ಅವರ ಉತ್ತರಾಧಿಕಾರಿ ನೇಮಕದ ವಿಷಯದಿಂದ ಸಂಪೂರ್ಣವಾಗಿ ದೂರವಿರಬೇಕು” ಎಂದು ಆಗ್ರಹಿಸಿದೆ. ಚೀನಾದ ವಿದೇಶಾಂಗ ಸಚಿವಾಲಯವು ಜಾಗತಿಕ ಮಾಧ್ಯಮಗಳ ಮುಂದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತಕ್ಕೆ ಈ ಬಗ್ಗೆ ನೇರ…

Read More

ಚಿನ್ನದ ನೆಲದಲ್ಲಿ ಮತ್ತೆ ಮರುಕಳಿಸಲಿದೆ ಕ್ರೀಡಾ ಗತವೈಭವ: 100 ವರ್ಷ ಇತಿಹಾಸವಿರುವ ಕ್ರೀಡಾಂಗಣಕ್ಕೆ ಪುನಶ್ಚೇತನ ಭಾಗ್ಯ – Kannada News | Kolar Gold Fields Sports Revival: 100 Year Old Gymkhana Stadium Set for a Comeback

ಕೋಲಾರ, ಮೇ 25: ಚಿನ್ನದ ನೆಲದಲ್ಲಿ ನೂರಾರು ಯುವಕರಿಗೆ ಕ್ರೀಡೆಯ (Sports) ಮೂಲಕ ಜೀವನ ರೂಪಿಸಿಕೊಟ್ಟಿದ್ದ ಐತಿಹಾಸಿಕ ಕ್ರೀಡಾಂಗಣ. ಆದರೆ, ಚಿನ್ನದ ಗಣಿಗೆ ಬೀಗ ಬಿದ್ದ ಬೆನ್ನಲ್ಲೇ ಆ ಬೃಹತ್ ಮೈದಾನಕ್ಕೂ ಗ್ರಹಣ ಹಿಡಿದಿತ್ತು. ಆದರೆ ಇದೀಗ ಹತ್ತಾರು ವರ್ಷಗಳಿಂದ ಮೂಲೆಗುಂಪಾಗಿದ್ದ ಆ ಕ್ರೀಡಾಂಗಣಕ್ಕೆ ಕೊನೆಗೂ ಪುನರ್ಜನ್ಮ ಸಿಕ್ಕಿದೆ. ಕೋಲಾರ (kolar) ಜಿಲ್ಲೆಯ ಕೆಜಿಎಫ್‌ನಲ್ಲಿ ಕ್ರೀಡಾಂಗಣಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗುತ್ತಿದ್ದು, ಚಿನ್ನದ ನೆಲದ ಕ್ರೀಡಾಭಿಮಾನಿಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಮುಖ್ಯಾಂಶಗಳು ಕೆಜಿಎಫ್​ನಲ್ಲಿ ಮತ್ತೆ ಕ್ರೀಡಾ ಸುಗ್ಗಿ…

Read More