Headlines

ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು: ರಾಜೀವ್ ಗೌಡಗೆ ಕೋರ್ಟ್ ತರಾಟೆ – Kannada News | Shidlaghatta City Municipality Commissioner Threat Case: High Court Rebukes Rajeev Gowda Over FIR Quash Plea

ಬೆಂಗಳೂರು, ಜನವರಿ 20: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಕಾಂಗ್ರೆಸ್​​ ಮುಖಂಡ ರಾಜೀವ್ ಗೌಡ (Rajeev Gowda) ಸದ್ಯ ತಲೆ ಮರೆಸಿಕೊಂಡಿದ್ದಾರೆ. ಕೈ ಮುಖಂಡ ಬಂಧನ ವಿಳಂಬ ಖಂಡಿಸಿ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಕ್ಷಮೆ ಕೂಡ ಕೇಳಿದ್ದರು. ಇನ್ನು ಎಫ್​​ಐಆರ್​​ FIR ರದ್ದು ಕೋರಿ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಪೀಠ ರಾಜೀವ್ ಗೌಡಗೆ ತರಾಟೆ ತೆಗೆದುಕೊಂಡಿದ್ದು, ಆದೇಶ ಕಾಯ್ದಿರಿಸಿದೆ. ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ:…

Read More

Bengaluru: ಜಿಬಿಎ ಅಧಿಕಾರಿ ಮೇಲೆ ಗುತ್ತಗೆದಾರನಿಂದ ದರ್ಪ, ಅವಾಚ್ಯ ಪದಗಳಿಂದ ನಿಂದನೆ – Kannada News | Contractor Allegedly Threatens GBA Female Officer Over Tender Dispute; Complaint Registered

ನೆಲಮಂಗಲ, ಜನವರಿ 20: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಜಿ. ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿದ ವಿಚಾರ ರಾಜ್ಯದಲ್ಲಿನ್ನೂ ಚರ್ಚೆಯಲ್ಲಿದೆ. ಆರೋಪಿ ಬಂಧನವಾಗದಿರುವ ಬಗ್ಗೆ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಮಹಿಳಾ ಅಧಿಕಾರಿಯನ್ನು ಗುತ್ತಿಗೆದಾರನೋರ್ವ ನಿಂದಿಸಿ, ಆವಾಜ್​​ ಹಾಕಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಚೇರಿಗೆ ನುಗ್ಗಿರುವ ಗುತ್ತಿಗೆದಾರ ಪುಂಡಾಟ ಮೆರೆದ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವಾಚ್ಯ ಪದಗಳಿಂದ ನಿಂದನೆ ಆರೋಪ ದಾಸರಹಳ್ಳಿ ಭಾಗದಲ್ಲಿ ಕಾಮಗಾರಿ…

Read More

Tesla India Internships: ಭಾರತೀಯ ವಿದ್ಯಾರ್ಥಿಗಳಿಗೆ ಮೊದಲಬಾರಿಗೆ ಇಂಟರ್ನ್‌ಶಿಪ್ ಅವಕಾಶ ನೀಡಿದ ಟೆಸ್ಲಾ – Kannada News | Tesla India Internships: Elon Musk’s EV Giant Offers Student Opportunities Across 8 Cities

ಇಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಇಂಟರ್ನೆಟ್ ಯೋಜನೆ ಹಾಗೂ ಎಲೆಕ್ಟ್ರಿಕ್ ವಾಹನಗಳ ದೈತ್ಯ ಸಂಸ್ಥೆಯಾದ ಟೆಸ್ಲಾ ವಿಶ್ವದಾದ್ಯಂತ ತನ್ನದೇ ಆದ ಗುರುತನ್ನು ಹೊಂದಿದೆ. ಕೆಲವೇ ತಿಂಗಳುಗಳ ಹಿಂದೆ ಟೆಸ್ಲಾ ಅಧಿಕೃತವಾಗಿ ಭಾರತಕ್ಕೆ ಪ್ರವೇಶಿಸಿದ್ದು, ಈಗ ಭಾರತೀಯ ಯುವಕರಿಗೆ ಮತ್ತೊಂದು ದೊಡ್ಡ ಅವಕಾಶವನ್ನು ತೆರೆದಿಟ್ಟಿದೆ. ಟೆಸ್ಲಾ ಸಂಸ್ಥೆ ಭಾರತೀಯ ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮೂಲಕ ತನ್ನೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿದೆ. ಈ ವಿಶೇಷ ಇಂಟರ್ನ್‌ಶಿಪ್ ನೇಮಕಾತಿ ಪ್ರಕ್ರಿಯೆ ಬೆಂಗಳೂರು ಸೇರಿದಂತೆ ದೇಶದ ಎಂಟು ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ಟೆಸ್ಲಾ…

Read More

ಮೈಸೂರು-ಕುಶಾಲನಗರ ರೈಲು ಯೋಜನೆ ರದ್ದು: ಈ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು! – Kannada News | SWR Scraps Mysore Kushalnagar Rail Line: High Costs, Low Demand Cited

ಮೈಸೂರು, ಜ.20: ಬಹು ವರ್ಷಗಳಿಂದ ಭಾರೀ ಚರ್ಚೆಯಲ್ಲಿದ್ದ ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಯ (Mysore-Kushalnagar railway project) ಬಗ್ಗೆ ಇಲಾಖೆ ಅಂತಿಮ ತಿರ್ಮಾನಕ್ಕೆ ಬಂದಿದೆ. ಇದೀಗ ಈ ಯೋಜನೆಯನ್ನು ಕೈಬಿಡಲಾಗಿದೆ. ರೈಲ್ವೆ ಅಧಿಕಾರಿಗಳು ಈ ರೈಲು ಮಾರ್ಗವು ಸುಮಾರು 87.2 ಕಿ.ಮೀ ಉದ್ದದ ಪ್ರಸ್ತಾವಿತ ರೈಲು ಕಾರಿಡಾರ್, ಆರ್ಥಿಕ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಪೂರೈಸುವುದಿಲ್ಲ ಹೇಳಿದೆ. ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಲಗೊಂಡ ಅವರು ಹೇಳಿರುವ ಪ್ರಕಾರ, ಆರ್ಥಿಕ…

Read More

Oxfam Report: ವಿಶ್ವದ 400 ಕೋಟಿ ಜನರದ್ದಕ್ಕೆ ಸಮ ಈ 12 ಮಂದಿಯ ಶ್ರೀಮಂತಿಕೆ – Kannada News | World top 12 rich people have more wealth than half of world population

ನವದೆಹಲಿ, ಜನವರಿ 20: ಕಳೆದ ವರ್ಷ (2025) ಜಗತ್ತಿನಲ್ಲಿ ಬಿಲಿಯನೇರ್​ಗಳ (Billionaires) ಸಂಖ್ಯೆ 3,000 ಗಡಿ ದಾಟಿದೆ. ಇದು ಹೊಸ ದಾಖಲೆಯಾಗಿದೆ. ಈ ಇಷ್ಟೂ ಬಿಲಿಯನೇರ್​ಗಳ ಒಟ್ಟೂ ಸಂಪತ್ತು 18.3 ಟ್ರಿಲಿಯನ್ ಡಾಲರ್​ನಷ್ಟು ಇರಬಹುದು ಎನ್ನಲಾಗಿದೆ. ಸ್ವಿಟ್ಜರ್​ಲ್ಯಾಂಡ್​ನ ಡಾವೊಸ್​ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಗೆ ಮುನ್ನ ಆಕ್ಸ್​ಫ್ಯಾಮ್ (Oxfam) ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಬಿಲಿಯನೇರ್​ಗಳ ಮಾಹಿತಿ ಕೊಡಲಾಗಿದೆ. ಈ ಮೂರು ಸಾವಿರ ಬಿಲಿಯನೇರ್​ಗಳಿರುವ ಒಟ್ಟೂ ಆಸ್ತಿಯು ಚೀನಾದಂತಹ ದೈತ್ಯ ದೇಶದ ಜಿಡಿಪಿಗೆ ಸಮವಾಗಿದೆ….

Read More

ಕರ್ನಾಟಕದ ಗ್ರಾಮೀಣ ಮಹಿಳೆಯರಿಗೆ ಬಿಗ್​​ ಶಾಕ್: ಹೆಚ್ಚುತ್ತಿದೆ ಗರ್ಭಕಂಠದ ಕ್ಯಾನ್ಸರ್ – Kannada News | Fighting Cervical Cancer: Rural Karnataka’s Challenge and Solutions for Women

ಭಾರತದಾದ್ಯಂತ ಗರ್ಭಕಂಠದ ಕ್ಯಾನ್ಸರ್ (Cervical Cancer )ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿದ್ದರೂ, ಕರ್ನಾಟಕದ ವೈದ್ಯರು ಈ ರೋಗವು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ರೋಗಕ್ಕೆ ಸರಿಯಾದ ಚಿಕಿತ್ಸೆ ಮಾಡಿದಿರುವುದೇ ಕಾರಣ ಎಂದು ಹೇಳಿದ್ದಾರೆ. ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ಆಂಕೊಲಾಜಿಸ್ಟ್ ಸಲಹೆಗಾರ ಡಾ. ಎಸ್.ಡಿ. ಶ್ಯಾಮಸುಂದರ್​​ ಅವರು ಹೇಳಿರುವ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ರೋಗಗಳು ಕಂಡು ಬಂದಿದೆ. ಒಂದು ಕಡೆ ನಗರ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್…

Read More

ಬಿಗ್ ಬಾಸ್: ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ – Kannada News | Kavya Shaiva first reaction after Gilli Nata Win in Bigg Boss Kannada Season 12

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಜೊತೆ ಕಾವ್ಯಾ ಶೈವ ಅವರು ತುಂಬ ಕ್ಲೋಸ್ ಆಗಿದ್ದರು. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಕಾವ್ಯಾ ಶೈವ (Kavya Shaiva) ಅವರು 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಗಿಲ್ಲಿ (Gilli Nata) ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಕಾವ್ಯಾಗೆ ಖುಷಿ…

Read More

Video: ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ – Kannada News | An elephant taught wisdom to a dog that barked at him

ಆನೆಗಳು (Elephants) ಮಾಡುವ ಚೇಷ್ಟೆಗಳು, ತುಂಟಾಟಗಳು ನೋಡುವುದೇ ಖುಷಿ. ಆನೆಗಳ ತುಂಟಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಈ ಆನೆಗಳಿಗೆ ಕೋಪಬಂದರೆ ಅತೀರೇಕವಾಗಿ ವರ್ತಿಸುತ್ತವೆ. ಸುಖಾ ಸುಮ್ಮನೆ ತನ್ನೊಂದಿಗೆ ಕಿರಿಕ್ ಮಾಡಲು ಬರುವ ಯಾರನ್ನು ಕೂಡ ಸುಮ್ಮನೆ ಬಿಡಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನಗೆ ಬೊಗಳಿದ ಶ್ವಾನವನ್ನು ಆನೆಯು ಒದ್ದು ಓಡಿಸಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಲೆಕ್ ಚೈರ್ಲಟ್ (lek_chailert) ಹೆಸರಿನ ಖಾತೆಯಲ್ಲಿ ಈ…

Read More

ಹಾಸನದಲ್ಲೊಂದು ಆಘಾತಕಾರಿ ಘಟನೆ: ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಬಂದ ಆಗಂತುಕ – Kannada News | Shocking Incident In Hassan: Girl Panicked After Stranger Follows Her, Police Launch Manhunt

ಹಾಸನ, (ಜನವರಿ 20): ಹಾಸನ (Hassan) ನಗರದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅಪರಿಚಿತ ವ್ಯಕ್ತಿಯೋರ್ವ ಶಾಲಾ ಬಾಲಕಿ ಹಿಂಬಾಲಿಸಿ ಆಕೆಯ ಮನೆ ಬಾಗಿಲುವರೆಗೂ ಬಂದಿದ್ದು, ಆತಂಕ ಸೃಷ್ಟಿಸಿದೆ. ತನ್ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆಂದು ತಿಳಿದು ಬಾಲಕಿ ಮನೆ ಕಡೆಗೆ ಓಡೋಡಿ ಬಂದಿದ್ದು, ಗೇಟು ಹಾಕಿಕೊಂಡು ಅಮ್ಮ ಅಮ್ಮ ಬಾಗಿಲು ತೆಗಿ ಎಂದು ಆತಂಕದಿಂದ ಕಿರಿಚಿದ್ದಾಳೆ. ಇನ್ನೊಂದೆಡೆ ಆಗಂತುಕ ಸಹ ಬಾಲಕಿಯನ್ನ ಬೆನ್ನಟ್ಟಿ ಮನೆ ಗೇಟ್ ವರೆಗೂ ಬಂದಿದ್ದಾನೆ. ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದರೆ…

Read More

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಚಳಿಯಾಗಬಾರದೆಂದರೆ ಈ ಸಿಂಪಲ್‌ ಟ್ರಿಕ್‌ ಪಾಲಿಸಿ – Kannada News | Follow this simple trick to avoid getting cold while riding a two wheeler

ಬಹುತೇಕ ಹೆಚ್ಚಿನವರು ಕಾಲೇಜು, ಕೆಲಸಕ್ಕೆ ಬೈಕ್‌, ಸ್ಕೂಟಿಯಲ್ಲಿಯೇ ಹೋಗುತ್ತಾರೆ. ಹೀಗೆ ದ್ವಿಚಕ್ರ ವಾಹನದಲ್ಲಿ (two-wheeler) ಪ್ರಯಾಣಿಸುವಾಗ ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಸಿಕ್ಕಾಪಟ್ಟೆ ಚಳಿಯಾಗುತ್ತದೆ. ಬಲವಾದ, ತಂಪಾದ ಗಾಳಿಯು ನೇರವಾಗಿ ದೇಹವನ್ನು ಬಡಿದು, ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಇದರಿಂದ ವಾಹನ ಚಲಾಯಿಸಲು ಕೂಡ ಕಷ್ಟಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಒಂದು ಸರಳ ಹ್ಯಾಕ್‌ ಅನುಸರಿಸುವ ಮೂಲಕ ಚಳಿಯಾಗದಂತೆ ನೋಡಿಕೊಳ್ಳಬಹುದು ಮತ್ತು ದೇಹವನ್ನು ಬೆಚ್ಚಗಿಡಬಹುದು. ಈ ಹ್ಯಾಕನ್ನು ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ದೀಪ್ತಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್…

Read More