ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ – Kannada News | Beyond Fuel: Crude Oil Demand to Soar Despite EVs & Green Shift – Petrochemicals Drive It
ಜಗತ್ತಿನಲ್ಲಿ ಯುದ್ಧ ಆಗೋದು ಒಂದು ಹೆಣ್ಣಿಗಾಗಿ, ಮತ್ತೊಂದು ಮಣ್ಣಿಗಾಗಿ. ಇಲ್ಲಿ ಮಣ್ಣು ಎಂದರೆ ಸಂಪನ್ಮೂಲ. ಕಳೆದ ಕೆಲ ಶತಮಾನಗಳಿಂದ ಜಗತ್ತಿನ ಹೆಚ್ಚಿನ ಯುದ್ಧಗಳು ಸಂಪನ್ಮೂಲಗಳಿಗಾಗಿ ನಡೆದಿವೆ. ಎಂಜಿನ್ಗಳ ಕಾಲ ಬಂದ ಬಳಿಕ ಕಚ್ಚಾ ತೈಲ ಬಹಳ ಪ್ರಮುಖ ಸಂಪನ್ಮೂಲವೆನಿಸಿದೆ. ತೈಲಕ್ಕಾಗಿ (Oil) ಸಾಲು ಸಾಲು ಯುದ್ಧಗಳೇ ಸಂಭವಿಸಿವೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಆಕ್ರಮಣಕಾರಿ ವರ್ತನೆ, 40ರ ದಶಕದಲ್ಲಿ ಬೊಲಿವಿಯಾ, ಪರಗ್ವೆ ನಡುವಿನ ಯುದ್ಧ, 90ರ ದಶಕದ ಇರಾಕ್ ಕುವೇತ್ ಯುದ್ಧ; ನಂತರ ಇರಾಕ್ ಮೇಲೆ ಅಮೆರಿಕದ…