ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ: ಜಾಗಿಂಗ್ ಹೋಗುತ್ತಿದ್ದ ಮಹಿಳೆಯ ಖಾಸಗಿ ಭಾಗದ ಬಗ್ಗೆ ಅಸಭ್ಯವಾಗಿ ಮಾತನಾಡಿದ ಬಾಲಕರು – Kannada News | Rising Harassment in Bengaluru: Aavalahalli Incident and Women’s Safety Concerns
ಬೆಂಗಳೂರು, ಜ.20: ಬೆಂಗಳೂರಿನಲ್ಲಿ ಲೈಂಗಿಕ ಕಿರುಕುಳ (Bangalore women safety) ಪ್ರಕರಣಗಳು ಹೆಚ್ಚಾಗಿದೆ. ಈ ಕಾರಣದಿಂದಲ್ಲೇ ಬೆಂಗಳೂರು ಸೇಫ್ ಅಲ್ಲ ಎಂಬ ಅಭಿಪ್ರಾಯಕ್ಕೆ ಹೆಚ್ಚಿನ ಮಹಿಳೆಯರು ಬಂದಿದ್ದಾರೆ. ಇದೀಗ ಮಹಿಳೆಯೊಬ್ಬರು ಬೆಂಗಳೂರಿನ ಬಳಿಯ ಆವಲಹಳ್ಳಿ ಅರಣ್ಯದಲ್ಲಿ ಓಡುತ್ತಿದ್ದಾಗ ಮಕ್ಕಳ ಗುಂಪೊಂದು ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಖಾಸಗಿ ಭಾಗದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ. ಅವರ ಮಾತುಗಳನ್ನು ಕೇಳಲು ಸಾಧ್ಯವಾಗದಷ್ಟು ಕೆಟ್ಟಾಗಿತ್ತು. ಹುಡುಗರಿಗೆ ಏನ್ ಕಲಿಸಬೇಕು ಎನ್ನುವುದಕ್ಕಿಂತ, ಹುಡುಗಿಯರು ತಮ್ಮನ್ನು ಮುಚ್ಚಿಕೊಳ್ಳುವುದನ್ನು ಕಲಿಸಬೇಕಾಗಿದೆ…