ಮಂತ್ರಾಲಯದಲ್ಲಿ ಭಾರಿ ಮಳೆಯಿಂದ ಭಕ್ತರಿಗೆ ತೊಂದರೆ: ಭೋಜನಶಾಲೆ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ – Kannada News | Mantralaya Mutt Arranges Shelter for Devotees After Heavy Downpour
ರಾಯಚೂರು, ಮೇ 22: ಮಂತ್ರಾಲಯದಲ್ಲಿ ಭಾರಿ ಮಳೆಯ ಅಬ್ಬರದಿಂದ ಭಕ್ತರು ತೀವ್ರ ತೊಂದರೆಗೊಳಗಾದ ಘಟನೆ ನಡೆದಿದೆ. ರಾತ್ರಿ ಮಠದ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ತಡರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದ ನೆನೆದು ಪರದಾಡಿದರು. ಈ ಪರಿಸ್ಥಿತಿಯಲ್ಲಿ, ರಾಯರ ಭಕ್ತರ ನೆರವಿಗೆ ಮಂತ್ರಾಲಯ ಮಠ ಧಾವಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶ್ರೀಗಳು ತಕ್ಷಣವೇ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾದರು. ಮಳೆಯಿಂದ ತೊಂದರೆಗೊಳಗಾದ ಭಕ್ತರನ್ನು ಅನ್ನಪೂರ್ಣೇಶ್ವರಿ ಭೋಜನಶಾಲೆ ಮತ್ತು ಕಲ್ಯಾಣ ಮಂಟಪಗಳಿಗೆ ತೆರಳುವಂತೆ ಸೂಚಿಸಲಾಯಿತು. ಖುದ್ದು ಸುಭುದೇಂದ್ರ ತೀರ್ಥ ಸ್ವಾಮೀಜಿಯೇ…