ಯುಕೆಜಿಯಲ್ಲಿ ಓದುತ್ತಿದ್ದ ಮಗನ ಮಾರ್ಕ್ಸ್ಕಾರ್ಡ್ ತರಲು ಹೋಗಿದ್ದ ತಂದೆ ಹೃದಯಾಘಾತದಿಂದ ಸಾವು – Kannada News | Heart Attack: 35 Year Old Assam Man Dies During Son’s Result Collection
ಅಸ್ಸಾಂ, ಜನವರಿ 19: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ(Heart Attack)ದ ಅಪಾಯ ಹೆಚ್ಚಾಗಿದೆ. ತಂದೆಯೊಬ್ಬರು ಯುಕೆಜಿಯಲ್ಲಿ ಓದುತ್ತಿದ್ದ ಮಗನ ಮಾರ್ಕ್ಸ್ಕಾರ್ಡ್ ತರಲು ಶಾಲೆಗೆ ಹೋದವರು ಹೃದಯಾಘಾತದಿಂದ ಪ್ರಾಣಬಿಟ್ಟಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ದೀಪಂಕರ್ ಬೋರ್ಡೊಲೊಯ್(35) ಮೃತ ವ್ಯಕ್ತಿ. ಮಗನ ಫಲಿತಾಂಶ ಬರುತ್ತೆ ಮಾರ್ಕ್ಸ್ಕಾರ್ಡ್ ತರಲು ಹೋಗಬೇಕೆಂದು, ಒಂದು ದಿನ ಕೆಲಸಕ್ಕೆ ರಜೆ ಹಾಕಿ ಅಸ್ಸಾಂನ ಜೋರ್ಹತ್‌ನ ಸ್ಯಾಮ್‌ಫೋರ್ಡ್ ಶಾಲೆಗೆ ಹೋಗಿದ್ದರು. ಮಾರ್ಕ್ಸ್ಕಾರ್ಡ್ ಪಡೆದು ಶಾಲೆಯಿಂದ ಹೊರಗೆ ಬರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಜನವರಿ 15 ರಂದು ಈ…